ಪೊಲೀಸ್ ಭದ್ರತೆಯಲ್ಲಿ ಗಿಲ್ಲಿ ನಟ ಮೆರವಣಿಗೆ: ಮಳವಳ್ಳಿಯಲ್ಲಿ ಜನರ ನಿಯಂತ್ರಿಸಲು ಖಾಕಿ ಹರಸಾಹಸ – Kannada News | Gilli Nata parades In Malavalli after Bigg Boss Kannada 12 Win Police scrambles to control crowd
ಗಿಲ್ಲಿ ನಟ ಅವರು ಬಿಗ್ ಬಾಸ್ (Bigg Boss Kannada 12) ಮನೆಯಿಂದ ಹೊರಗೆ ಬಂದರೆ ಹೊತ್ತು ಮೆರೆಸುವುದಾಗಿ ಜನರು ಹೇಳಿದ್ದರು. ಈಗ ಅದರಂತೆಯೇ ಆಗುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಟ್ರೋಫಿ ಹಿಡಿದುಕೊಂಡು ಗಿಲ್ಲಿ ನಟ ಅವರು ಮಳವಳ್ಳಿಗೆ ಬಂದಿದ್ದಾರೆ. ಅವರನ್ನು ನೋಡಲು ಮಳವಳ್ಳಿ (Malavalli) ಜನರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಗಿಲ್ಲಿಯ ಮೆರವಣಿಗೆ ಸಾಗಿದೆ. ಗಿಲ್ಲಿ ಅವರನ್ನು ಹತ್ತಿರದಿಂದ ನೋಡಿ ಮಾತನಾಡಿಸಬೇಕು ಎಂಬುದು ಅಭಿಮಾನಿಗಳ ಆಸೆ. ಗಿಲ್ಲಿ (Gilli…