Category Archives: Blog

Your blog category

May Festival List 2026: ಮೇ ತಿಂಗಳಲ್ಲಿ ಆಚರಿಸುವ ಹಬ್ಬಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ – Kannada News | May Festival List 2026: Important festivals celebrated in may month

ಹಿಂದೂಗಳಿಗೆ ಪ್ರತಿ ತಿಂಗಳು ಬಹಳ ವಿಶೇಷ. ನಾವೀಗ ಏಪ್ರಿಲ್ ಮಾಸ ಕಳೆದು ವರ್ಷದ ಐದನೇ ತಿಂಗಳಿಗೆ ಕಾಲಿಡುತ್ತಿದ್ದೇವೆ. ಪ್ರತಿ  ತಿಂಗಳಲ್ಲೂ ವಿಶೇಷ ಹಬ್ಬಗಳು (festivals) , ವ್ರತಾಚರಣೆಗಳು ಇದ್ದೇ ಇರುತ್ತದೆ. ಹಾಗಾದ್ರೆ  ಮೇ ತಿಂಗಳಲ್ಲಿ ಯಾವೆಲ್ಲಾ ಹಬ್ಬ ಹರಿದಿನಗಳು, ಆಚರಣೆಗಳಿವೆ ಎಂಬ ಮಾಹಿತಿ ಈ ಕೆಳಗಿದೆ.

ಮೇ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ:

  • ಮೇ 01: ಕಾರ್ಮಿಕರ ದಿನಾಚರಣೆ
  • ಮೇ 01: ಕೂರ್ಮ ಜಯಂತಿ
  • ಮೇ 01: ಬುದ್ಧ ಪೂರ್ಣಿಮಾ
  • ಮೇ 02: ವೈಶಾಖ ಮಾಸ ಕೃಷ್ಣ ಪಕ್ಷ ಆರಂಭ
  • ಮೇ 05: ಸಂಕಷ್ಟಹರ ಚತುರ್ಥಿ
  • ಮೇ 11: ಮಹಾ ನಕ್ಷತ್ರ ಕೃತ್ತಿಕಾ
  • ಮೇ 13: ಸರ್ವಕಾದಶಿ ಅಪರಾ
  • ಮೇ 14: ಪ್ರದೋಷ
  • ಮೇ 15: ವೃಷಭ ಸಂಕ್ರಮಣ
  • ಮೇ 15: ಮಾಸ ಶಿವರಾತ್ರಿ
  • ಮೇ 16: ಶನಿ ಜಯಂತಿ
  • ಮೇ 16: ವೈಶಾಖ ಸ್ನಾನಸಮಾಪ್ತಿ
  • ಮೇ 16: ಅಮಾವಾಸ್ಯಾ
  • ಮೇ 17: ಅಧಿಕ ಜ್ಯೇಷ್ಠ ಶುಕ್ಲ ಪಕ್ಷ ಆರಂಭ
  • ಮೇ 18: ಆರಂಭ
  • ಮೇ 25: ಭಾಗೀರಥ ಜಯಂತಿ
  • ಮೇ 25: ಮಹಾನಕ್ಷತ್ರ ರೋಹಿಣಿ
  • ಮೇ 27: ಏಕಾದಶಿ ಪದ್ಮಿನಿ
  • ಮೇ 28: ಬಕ್ರೀದ್
  • ಮೇ 28: ಪ್ರದೋಷ
  • ಮೇ 31: ಹುಣ್ಣಿಮೆ

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಾ. ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್ – Kannada News | Ashwini Puneeth Rajkumar offers pooja at Dr Rajkumar Samadhi on his Birthday

ಏಪ್ರಿಲ್ 24 ಎಂದರೆ ಡಾ. ರಾಜ್​ಕುಮಾರ್ (Dr. Rajkumar) ಅಭಿಮಾನಿಗಳಿಗೆ ಹಬ್ಬ. ಈ ದಿನ ಅಣ್ಣಾವ್ರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಇಂದು ಇಡೀ ಕುಟುಂಬದವರು ಡಾ. ರಾಜ್ ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ರಾಘವೇಂದ್ರ ರಾಜ್​ಕುಮಾರ್, ಯುವ ರಾಜ್​ಕುಮಾರ್, ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneeth Rajkumar) ಮುಂತಾದವರು ಬಂದು ಪೂಜೆ ಮಾಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಕೂಡ ಆಗಮಿಸಿ ಅಣ್ಣಾವ್ರ ಸಮಾಧಿಗೆ ನಮಿಸಿದ್ದಾರೆ. ಈ ವೇಳೆ ರಾಘವೇಂದ್ರ ರಾಜ್​ಕುಮಾರ್ ಅವರು ಮಾತನಾಡಿದರು. ‘ಪ್ರತಿ ವರ್ಷದಂತೆ ಈ ವರ್ಷ ಕೂಡ ಸಾಕಷ್ಟು ಜನರು ಬಂದಿದ್ದಾರೆ. ಇವರಿಗೆ ಅಭಿಮಾನಿ ದೇವರುಗಳು ಅಂತ ಹೇಳದೇ ಇನ್ನೇನು ಹೇಳೋದು. ಅಭಿಮಾನಿಗಳಿಗೆ ಒಳ್ಳೆಯದಾಗಲಿ’ ಎಂದು ರಾಘವೇಂದ್ರ ರಾಜ್​ಕುಮಾರ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಭಾಸ್ ವಿರುದ್ಧ ಸಲ್ಮಾನ್ ಖಾನ್​​ನ ಎತ್ತಿಕಟ್ಟಿದ ಟಾಲಿವುಡ್ ಮಂದಿ – Kannada News | Eid 2027 Showdown: Prabhas’ Spirit and Salman Khan’s SVC 63 Clash – Is Tollywood Behind It?

ಸಲ್ಮಾನ್ ಖಾನ್ ನಟನೆಯ ಹೊಸ ಸಿನಿಮಾ ರಿಲೀಸ್ ದಿನಾಂಕ ಘೋಷಣೆ ಆಗಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಎಸ್​​ವಿಸಿ 63’ ಎಂದು ಹೆಸರು ಇಡಲಾಗಿದೆ. 2027ರ ಈದ್ ಪ್ರಯುಕ್ತ ಅವರ ಈ ಚಿತ್ರ ರಿಲೀಸ್ ಆಗಲಿದೆ. ಈ ವಿಷಯ ಪ್ರಭಾಸ್ ಅಭಿಮಾನಿಗಳಲ್ಲಿ ಆತಂಕ ತಂದಿದೆ. ಏಕೆಂದರೆ ಈಗಾಗಲೇ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದ ರಿಲೀಸ್ ದಿನಾಂಕ ಘೋಷಣೆ ಆಗಿದ್ದು, ಎರಡೂ ಚಿತ್ರಗಳ ನಡುವೆ ಕ್ಲ್ಯಾಶ್ ಆಗಲಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಪ್ರಭಾಸ್ ಅವರು ‘ಸ್ಪಿರಿಟ್’ ಸಿನಿಮಾ ರಿಲೀಸ್ ದಿನಾಂಕವನ್ನು ಈ ಮೊದಲೇ ಘೋಷಣೆ ಮಾಡಿದ್ದಾರೆ. ಈದ್ ಪ್ರಯುಕ್ತ ಮಾರ್ಚ್ 5ರಂದು ಸಿನಿಮಾ ತೆರೆಗೆ ಬರಲಿದೆ. ಇದಕ್ಕೆ ‘ಅನಿಮಲ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ, ತೆಲುಗು ಜೊತೆಗೆ ಚಿತ್ರವನ್ನು ಹಿಂದಿಯಲ್ಲೂ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಆದರೆ, ಈ ಚಿತ್ರಕ್ಕೆ ಸಲ್ಮಾನ್ ಖಾನ್ ಅವರ ಹೊಸ ಸಿನಿಮಾ ಸ್ಪರ್ಧೆ ನೀಡುತ್ತಿದೆ. ಸಲ್ಲು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರು ತೆಲುಗಿನವರು ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ. ಪ್ರಭಾಸ್ ಚಿತ್ರದ ವಿರುದ್ಧ ಸಲ್ಮಾನ್ ಖಾನ್ ಅವರನ್ನು ಎತ್ತಿಕಟ್ಟುವ ಕೆಲಸ ಆಗಿದೆ ಎಂಬ ಮಾತು ಕೇಳಿ ಬಂದಿದೆ.

ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿದ ಮೊದಲ ಸಿನಿಮಾ ಮುನ್ನ. ಈ ಚಿತ್ರದಲ್ಲಿ ಪ್ರಭಾಸ್ ಜೊತೆ ಕೆಲಸ ಮಾಡಿದ್ದರು. ವಂಶಿ ಈಗ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ತೆಲುಗು ನಿರ್ಮಾಪಕ ದಿಲ್ ರಾಜು ಪ್ರೆಸೆಂಟ್ ಮಾಡುತ್ತಿದ್ದಾರೆ. ಅವರು ಕೂಡ ಟಾಲಿವುಡ್​​ನವರೇ. ಈ ಹೊಸ ಸಿನಿಮಾ 2027ರ ಮಾರ್ಚ್ 9-1ರಂದು ಈದ್ ಪ್ರಯುಕ್ತ ರಿಲೀಸ್ ಆಗಲಿದೆ. ಈದ್ ಬಾಲಿವುಡ್ ಪಾಲಿಗೆ ವಿಶೇಷ ಎನಿಸಿಕೊಂಡಿದೆ. ಸಲ್ಮಾನ್ ಖಾನ್ ಈ ದಿನಾಂಕ ಮಿಸ್ ಮಾಡುವುದೇ ಇಲ್ಲ. ಇನ್ನು, ಉಳಿದ ಕೆಲ ಸಿನಿಮಾಗಳು ಇದೇ ಸಂದರ್ಭದಲ್ಲಿ ತೆರೆಗೆ ಬರಹುದು.

ಇದನ್ನೂ ಓದಿ: ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾ ಸೆಟ್​​ನಲ್ಲಿ ಬೆಂಕಿ: ಹಲವರಿಗೆ ಗಾಯ

ಇನ್ನು, ‘ಸ್ಪಿರಿಟ್’ ಚಿತ್ರಕ್ಕೆ ದಕ್ಷಿಣದ ಹೆಚ್ಚು ಬೇಡಿಕೆ, ಸಲ್ಮಾನ್ ಸಿನಿಮಾಗೆ ಉತ್ತರ ಭಾರತದಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಈ ಕ್ಲ್ಯಾಶ್ ಅನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂಬ ಮಾತು ಕೇಳಿ ಬಂದಿದೆ. ಇಷ್ಟೇ ಅಲ್ಲದೆ, ಸಲ್ಮಾನ್ ಅಥವಾ ಪ್ರಭಾಸ್ ಸಿನಿಮಾ ಪೈಕಿ ಯಾವುದಾದರೂ ಒಂದು ಸಿನಿಮಾ ಶೂಟಿಂಗ್ ವಿಳಂಬ ಕಾರಣಕ್ಕೆ ಮುಂದಕ್ಕೆ ಹೋದರೆ ದೊಡ್ಡ ಕ್ಲ್ಯಾಶ್ ಮಿಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ ಎನಿಸಿಕೊಂಡಿದ್ದ ರಾಘವ್ ಚಡ್ಡಾ ರೆಬೆಲ್ ಆಗಿದ್ದು ಹೇಗೆ? – Kannada News | From Arvind Kejriwals blue eyed boy to a rebel Leader Timeline Of Raghav Chadha Political Career in AAP

ನವದೆಹಲಿ, ಏಪ್ರಿಲ್ 24: ಆಮ್ ಆದ್ಮಿ ಪಕ್ಷದಲ್ಲಿ ಆರಂಭದ ದಿನಗಳಿಂದಲೂ ಪಕ್ಷ ಕಟ್ಟಲು ಮುಖ್ಯ ಪಾತ್ರ ವಹಿಸಿದ್ದ ರಾಘವ್ ಚಡ್ಡಾ (Raghav Chadha) ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಲಂಡನ್​​ನಲ್ಲಿ ಸಿಎ ಪದವಿ ಪಡೆದ ರಾಘವ್ ಚಡ್ಡಾ ತಮ್ಮ 23ನೇ ವಯಸ್ಸಿನಲ್ಲಿಯೇ ಅರವಿಂದ್ ಕೇಜ್ರಿವಾಲ್ ಅವರ ಪಕ್ಷ ಸೇರಿಕೊಂಡು ರಾಜಕೀಯಕ್ಕೆ ಎಂಟ್ರಿಯಾದರು. ಅಂದಿನಿಂದ 15 ವರ್ಷ ಆಪ್​​ನಲ್ಲಿಯೇ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ ರಾಘವ್ ಚಡ್ಡಾ ದೆಹಲಿಯ ಬಳಿಕ ಪಂಜಾಬ್​​ನಲ್ಲಿ ಆಮ್ ಆದ್ಮಿ ಪಕ್ಷ ನೆಲೆಯೂರಲು ಮುಖ್ಯ ಪಾತ್ರ ವಹಿಸಿದ್ದರು.

ಅರವಿಂದ್ ಕೇಜ್ರಿವಾಲ್ ಅವರ ಅತ್ಯಾಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ರಾಘವ್ ಚಡ್ಡಾ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆ ಹಲವರಿಗಿತ್ತು. ಆದರೆ, ರಾಘವ್ ಚಡ್ಡಾ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಯಿತು. ರಾಜ್ಯಸಭಾ ಉಪನಾಯಕನ ಸ್ಥಾನದಿಂದಲೂ ಅವರನ್ನು ವಜಾಗೊಳಿಸಲಾಯಿತು. ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋದ ನಂತರ ಪಕ್ಷದೊಳಗೆ ನಾನಾ ಬದಲಾವಣೆಗಳಾದವು. ಇದರಿಂದ ಬೇಸರಗೊಂಡಿದ್ದ ರಾಘವ್ ಚಡ್ಡಾ ಪಕ್ಷದೊಳಗೇ ಇದ್ದರೂ ಪಕ್ಷದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಕೇವಲ 23 ವಯಸ್ಸಿನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿ ಗುರುತರ ಜವಾಬ್ದಾರಿಗಳನ್ನು ವಹಿಸಿಕೊಂಡ ರಾಘವ್ ಚಡ್ಡಾ ರಾಜ್ಯಸಭೆಯ ಅಧಿವೇಶನದಲ್ಲಿ ತಮ್ಮ ಭಾಷಣದ ವೇಳೆ ಹೇಳುತ್ತಿದ್ದ ವಿಷಯಗಳಿಗೆ, ಅದಕ್ಕಾಗಿ ಅವರು ಸಂಶೋಧನೆ ಮಾಡುತ್ತಿದ್ದ ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಅದೇ ಕಾರಣಕ್ಕೆ ರಾಘವ್ ಚಡ್ಡಾ ಅವರನ್ನು ತಪ್ಪಾದ ಪಕ್ಷದಲ್ಲಿರುವ ಸರಿಯಾದ ನಾಯಕ ಎಂದು ಕರೆಯುತ್ತಿದ್ದುದೂ ಉಂಟು. ಇದೀಗ ರಾಘವ್ ಚಡ್ಡಾ ತನಗೆ ಗೌರವ ಸಿಗದ ಪಕ್ಷದಿಂದ ದೂರವಾಗಿದ್ದಾರೆ.

ಕೇಜ್ರಿವಾಲ್ ಅವರೊಂದಿಗಿನ ಆಪ್ತ ಸಂಬಂಧದ ಕಾರಣಕ್ಕೆ ರಾಘವ್ ಚಡ್ಡಾ ಅವರನ್ನು ಕೇಜ್ರಿವಾಲ್​ರ “ನೀಲಿ ಕಣ್ಣಿನ ಹುಡುಗ” ಎಂದು ಕರೆಯಲಾಗುತ್ತಿತ್ತು. 2022ರಲ್ಲಿ ರಾಘವ್ ಪಂಜಾಬ್‌ನಿಂದ ರಾಜ್ಯಸಭಾ ಸಂಸದರಾದರು. 33ನೇ ವಯಸ್ಸಿನಲ್ಲಿ ಅವರು ರಾಜ್ಯಸಭೆಯ ಕಿರಿಯ ಸದಸ್ಯರಾಗಿ ಸಂಸತ್ ಪ್ರವೇಶಿಸಿದರು. 2023ರಲ್ಲಿ ಅವರನ್ನು ಸಂಜಯ್ ಸಿಂಗ್ ಬದಲಿಗೆ ರಾಜ್ಯಸಭೆಯಲ್ಲಿ ಎಎಪಿಯ ನಾಯಕರನ್ನಾಗಿ ನೇಮಿಸಲಾಯಿತು.

ಇದನ್ನೂ ಓದಿ: ಬಿಜೆಪಿಯಿಂದ ಮತ್ತೊಮ್ಮೆ ಪಂಜಾಬಿಗಳಿಗೆ ದ್ರೋಹ; ರಾಘವ್ ಚಡ್ಡಾ ಸೇರಿ 7 ಸಂಸದರ ರಾಜೀನಾಮೆಗೆ ಕೇಜ್ರಿವಾಲ್ ಪ್ರತಿಕ್ರಿಯೆ

ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ರಾಘವ್ ಚಡ್ಡಾ, ಭ್ರಷ್ಟಾಚಾರದ ವಿರುದ್ಧ ಮಾತನಾಡಿದರು ಮತ್ತು ದೆಹಲಿ ಮತ್ತು ಪಂಜಾಬ್ ಸೇರಿದಂತೆ ಎಲ್ಲಾ ಎಎಪಿ ಪ್ರಚಾರಗಳಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಅವರು ಆರಂಭದಿಂದಲೂ ಪಕ್ಷದಲ್ಲಿದ್ದರು. 2012ರಲ್ಲಿ ದೆಹಲಿ ಲೋಕಪಾಲ್ ಮಸೂದೆಯಲ್ಲಿ ಕೇಜ್ರಿವಾಲ್ ಅವರೊಂದಿಗೆ ಕೆಲಸ ಮಾಡುವ ಮೂಲಕ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಅರವಿಂದ್ ಕೇಜ್ರಿವಾಲ್ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರವೂ ಆಮ್ ಆದ್ಮಿ ಪಕ್ಷದಲ್ಲಿ ರಾಘವ್ ಚಡ್ಡಾ ಅವರನ್ನು ನಿರ್ಲಕ್ಷ್ಯ ಮಾಡಲಾಯಿತು. ರಾಜ್ಯಸಭಾ ಉಪನಾಯಕನ ಹುದ್ದೆಯಿಂದ ಅವರನ್ನು ವಜಾಗೊಳಿಸಿದ ನಂತರ ಪಕ್ಷದೊಳಗಿನ ಆಂತರಿಕ ಸಮರ ಎಲ್ಲರ ಎದುರು ಬಯಲಾಗಿತ್ತು. ಅದಕ್ಕೂ ಮೊದಲಿನಿಂದಲೂ ರಾಘವ್ ಚಡ್ಡಾ ಪಕ್ಷದ ಪ್ರಮುಖ ಕಾರ್ಯಕ್ರಮಗಳು ಮತ್ತು ಪ್ರಚಾರದಿಂದ ಗೈರುಹಾಜರಾಗಿದ್ದರು. ಪಂಜಾಬ್‌ನ ಉಸ್ತುವಾರಿ ಸ್ಥಾನದಿಂದಲೂ ಅವರನ್ನು ತೆಗೆದುಹಾಕಲಾಯಿತು. ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಬಂಧನದಂತಹ ನಿರ್ಣಾಯಕ ಸಮಯದಲ್ಲಿ ರಾಘವ್ ಪಕ್ಷವನ್ನು ಬೆಂಬಲಿಸಲಿಲ್ಲ ಎಂದು ಎಎಪಿ ನಾಯಕರು ಆರೋಪಿಸಿದರು. ಪಂಜಾಬ್ ಸರ್ಕಾರದ ವ್ಯವಹಾರಗಳಲ್ಲಿ ಅವರು ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪವೂ ಇತ್ತು.

ಇದನ್ನೂ ಓದಿ: ಕೇಜ್ರಿವಾಲ್​ಗೆ ಭಾರೀ ಹೊಡೆತ; 6 ಸಂಸದರೊಂದಿಗೆ ಆಮ್ ಆದ್ಮಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ರಾಘವ್ ಚಡ್ಡಾ

ರಾಘವ್ ಚಡ್ಡಾ ರಾಜಕೀಯ ಜೀವನದ ಟೈಮ್​ಲೈನ್ ಇಲ್ಲಿದೆ:

2012: ರಾಘವ್ ಚಡ್ಡಾ ಅವರ ರಾಜಕೀಯ ಪ್ರಯಾಣವು ಆಮ್ ಆದ್ಮಿ ಪಕ್ಷ (ಎಎಪಿ) ಸ್ಥಾಪನೆಯಾದಾಗಿನಿಂದ ಪ್ರಾರಂಭವಾಯಿತು. 23ನೇ ವಯಸ್ಸಿನಲ್ಲಿ ಅವರು 2012ರಲ್ಲಿ ದೆಹಲಿ ಲೋಕಪಾಲ್ ಮಸೂದೆಯನ್ನು ಕರಡು ಮಾಡಲು ಅರವಿಂದ್ ಕೇಜ್ರಿವಾಲ್ ಅವರ ಅಡಿಯಲ್ಲಿ ಕೆಲಸ ಮಾಡಿದರು. ಇದು ಶಾಸಕಾಂಗ ಕೆಲಸಕ್ಕೆ ಅವರ ಮೊದಲ ಪ್ರವೇಶವನ್ನು ಗುರುತಿಸಿತು. ನಂತರ ಅವರು ಅತ್ಯಂತ ಕಿರಿಯ ರಾಷ್ಟ್ರೀಯ ವಕ್ತಾರರಾದರು.

2015-2018: 2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಭರ್ಜರಿ ಜಯ ಸಾಧಿಸಿದಾಗ ರಾಘವ್ ಚಡ್ಡಾ ಅವರನ್ನು ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿ ನೇಮಿಸಲಾಯಿತು. ಅವರು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. 2018ರಲ್ಲಿ ಕೇಂದ್ರ ಗೃಹ ಸಚಿವಾಲಯವು ಅವರ ಅಧಿಕಾರಾವಧಿಯನ್ನು ಕೊನೆಗೊಳಿಸಿತು.

2019-2020: ಅವರು ದಕ್ಷಿಣ ದೆಹಲಿ ಲೋಕಸಭಾ ಸ್ಥಾನದಿಂದ ಸ್ಪರ್ಧಿಸಿದರು. ಆದರೆ, ಅವರು ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿರುದ್ಧ ಸೋತರು. 2020ರಲ್ಲಿ ಅವರು ರಾಜೇಂದ್ರ ನಗರದಿಂದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, 20,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರು. ಅವರ ಗೆಲುವಿನ ನಂತರ ಅವರನ್ನು ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು.

2022: ಪಂಜಾಬ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದರು. ಅವರನ್ನು ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಗೆ ನೇಮಿಸಲಾಯಿತು. ಇದು ಹಲವಾರು ಕೇಂದ್ರ ಸಚಿವಾಲಯಗಳು ಮತ್ತು ನೀತಿ ಆಯೋಗ ರಚಿಸಿದ ನೀತಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ. 2022ರ ಪಂಜಾಬ್ ವಿಧಾನಸಭಾ ಚುನಾವಣೆಗಳು ಸೇರಿದಂತೆ ದೆಹಲಿಯನ್ನು ಮೀರಿದ ಎಎಪಿಯ ಚುನಾವಣಾ ಯಶಸ್ಸಿಗೆ ಅವರು ಕೊಡುಗೆ ನೀಡಿದ್ದಾರೆ. ಅಲ್ಲಿ ಪಕ್ಷವು ಅಗಾಧ ಬಹುಮತವನ್ನು ಗಳಿಸಿತು. ನಂತರ ಅವರನ್ನು 2022ರ ಗುಜರಾತ್ ವಿಧಾನಸಭಾ ಚುನಾವಣೆಗಳಿಗೆ ಸಹ-ಉಸ್ತುವಾರಿಯಾಗಿ ನೇಮಿಸಲಾಯಿತು. ನಂತರ ರಾಜ್ಯಸಭೆಯಲ್ಲಿ ಎಎಪಿಯ ನಾಯಕರಾಗಿ ಸೇವೆ ಸಲ್ಲಿಸಿದರು.

2023: ಪಕ್ಷದ ಸದನದ ನಾಯಕ ಸಂಜಯ್ ಸಿಂಗ್ ನ್ಯಾಯಾಂಗ ಬಂಧನದಿಂದಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗದಿದ್ದಾಗ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಘವ್ ಚಡ್ಡಾ ಅವರನ್ನು ಸದನದ ಮಧ್ಯಂತರ ನಾಯಕರನ್ನಾಗಿ ನೇಮಿಸುವಂತೆ ವಿನಂತಿಸಿದರು. ಆದರೆ ಕಾರ್ಯವಿಧಾನದ ನಿಯಮಗಳಿಂದಾಗಿ ಆ ವಿನಂತಿಯನ್ನು ತಿರಸ್ಕರಿಸಲಾಯಿತು. ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದರು. ಈ ಕ್ರಮವನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಎತ್ತಿಹಿಡಿದಿದೆ.

2024- 2026: ರಾಜ್ಯಸಭೆಯಲ್ಲಿದ್ದ ಸಮಯದಲ್ಲಿ ರಾಘವ್ ಚಡ್ಡಾ ವಿದ್ಯಾರ್ಥಿಗಳು ಮತ್ತು ಗಿಗ್ ಕೆಲಸಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ಹಿಡಿದರು. ವಿದ್ಯಾರ್ಥಿಗಳ ಸಾಲದ ಕುರಿತು ಅವರ ಸಂಸದೀಯ ಭಾಷಣಗಳು ವೈರಲ್ ಆದವು. ಸಾಮಾಜಿಕ ಮಾಧ್ಯಮದಲ್ಲಿ ಜೆನ್-ಝಡ್‌ನಿಂದ ಪ್ರಶಂಸಿಸಲ್ಪಟ್ಟವು. ಮಧ್ಯಮ ವರ್ಗದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿದ್ದಕ್ಕಾಗಿ ಕೆಲವರು ಅವರನ್ನು ದೇಶದ ಅತ್ಯುತ್ತಮ ಸಂಸದ ಎಂದು ಕರೆದರು.

2026: ಏಪ್ರಿಲ್ 2026ರಲ್ಲಿ ಎಎಪಿ ಮತ್ತು ಅದರ ಉನ್ನತ ನಾಯಕತ್ವವನ್ನು ಒಳಗೊಂಡ ಪ್ರಮುಖ ಬೆಳವಣಿಗೆಗಳ ಬಗ್ಗೆ ರಾಘವ್ ಚಡ್ಡಾ ಅವರ ನಿರಂತರ ಮೌನದ ನಡುವೆ ಪಕ್ಷವು ಅವರನ್ನು ಮೇಲ್ಮನೆಯ ಪ್ರಮುಖ ಹುದ್ದೆಯಿಂದ ತೆಗೆದುಹಾಕಲು ಶಿಫಾರಸು ಮಾಡಿತು. ಇಂದು ಅವರು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರುವುದಾಗಿ ಘೋಷಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸ್​ ಠಾಣೆ ಮೆಟ್ಟಿಲೇರಿದ ಜನಿವಾರ ದಂಗಲ್: ವಿವಾದ ಬೆನ್ನಲ್ಲೇ ಮೂವರು ವಶಕ್ಕೆ – Kannada News | Bangaluru; Janivara CET Controversy: Three Taken into Custody by Madiwala Police

ಬೆಂಗಳೂರು, ಏಪ್ರಿಲ್​ 24: ಕರ್ನಾಟಕದಲ್ಲಿ ಮತ್ತೆ ಜನಿವಾರ ದಂಗಲ್ (Janivara Row) ಮುನ್ನೆಲೆಗೆ ಬಂದಿದೆ. ಸಿಇಟಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಲು ನಿಯಮ ಇಲ್ಲದಿದ್ದರೂ ತೆಗೆಸಿರೋದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಇದೀಗ ಮಡಿವಾಳ ಠಾಣೆಯ ಪೊಲೀಸರಿಂದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ವಿದ್ಯಾರ್ಥಿ ನೀಡಿದ ದೂರಿನ ಅನ್ವಯ ಕೇಸ್ ದಾಖಲಿಸಿಕೊಂಡು ಪರೀಕ್ಷಾ ಪರಿವೀಕ್ಷಕರಾದ ಸರಿತಾ, ಗಿರಿಜಾ ಹಾಗೂ ಪರೀಕ್ಷೆ ಕೇಂದ್ರದ ಉಸ್ತುವಾರಿ ಸುಧಾಕರ್​​ರನ್ನು ವಶಕ್ಕೆ ಪಡೆಯಲಾಗಿದೆ. ಬಿಎನ್‌ಎಸ್‌ ಸೆಕ್ಷನ್ 299, 302ರಡಿ ಕೇಸ್​​ ದಾಖಲಾಗಿದೆ.

ಇನ್ನು ವಿವಾದ ಕುರಿತಾಗಿ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್​​ರನ್ನು ಭೇಟಿ ಮಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ ಕೂಡ ಪೋಷಕರ ಪರವಾಗಿ ದೂರು ನೀಡಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದಕ್ಕೆ ಸರ್ಕಾರದ ಕುಮ್ಮಕ್ಕು ಇದೆ: ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ 

ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆರ್​​. ಅಶೋಕ್, ಜನಿವಾರ ತೆಗಿಸದಂತೆ ಹೈಕೋರ್ಟ್​ ಆದೇಶ ನೀಡಿದ್ರೂ ಹೀಗೆ ಮಾಡಿದ್ರೆ ಏನು? ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ. ಇದಕ್ಕೆ ಸರ್ಕಾರದ ಕುಮ್ಮಕ್ಕು ಇದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಸಿಇಟಿ ಕೇಂದ್ರದಲ್ಲಿ ವಿದ್ಯಾರ್ಥಿ ಜನಿವಾರ ತೆಗೆಸಿದ ಆರೋಪ: ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿ ಅಮಾನತು

ಸಿಎಂಗೆ ನಾಮ, ತಾಳಿ, ಜನಿವಾರ ಕಂಡರೆ ಆಗುವುದಿಲ್ಲ. ನಾನು ಜಿಲ್ಲಾಧಿಕಾರಿ ಜತೆಗೂ ಮಾತಾಡಿದೆ. ಬೇಕಂತಲೇ ಮಾಡಿದ್ದಾರೆ ಎಂಬುವುದು ಸ್ಪಷ್ಟವಾಗಿದೆ. ಹದಿನೈದು ಇಪ್ಪತ್ತು ಜನರಿಗೆ ಹೀಗೆ ಮಾಡಿದ್ದಾರೆ. ಇದು ಇಲ್ಲಿಗೆ ಕೊನೆಯಾಗಬೇಕು. ಕರ್ನಾಟಕ ಸಂಸ್ಕಾರ ಇರುವ ನಾಡು. ಪುಲ್ವಾಮದಲ್ಲಿ ಘಟನೆ ನಡೆದು ನಿನ್ನೆಗೆ ಒಂದು ವರ್ಷ, ನೀವು ಜನಿವಾರ ತೆಗೆಸುತ್ತಿದ್ದೀರಾ, ಅದಕ್ಕೂ ಇದಕ್ಕೂ ವ್ಯತ್ಯಾಸವೇನು. ನಿಮಗೂ ಪಾಕಿಸ್ತಾನದವರಿಗೂ ಏನು ವ್ಯತ್ಯಾಸ ಎಂದು ಪ್ರಶ್ನಿಸಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದು, ರಾಜ್ಯದಲ್ಲಿ ಈ ಸರ್ಕಾರ ಬಂದಾಗಿನಿಂದ ಹಿಂದೂಗಳ ಧಾರ್ಮಿಕ ಭಾವನೆಗಳು ಮತ್ತು ಸಂಕೇತಗಳ ವಿರುದ್ಧ ಇದೇ ತರ ಮಾಡುತ್ತಿದ್ದಾರೆ. ಕೆಪಿಎಸ್​​ಸಿ ನಡೆದಾಗ ಕಳೆದ ವರ್ಷ ತಾಳಿ ತೆಗೆಸಿದ್ದರು. ಇದು ಮೂರನೇ ಸಲ.  ಇದು ರಾಜ್ಯ ಸರ್ಕಾರದ ಡೈರೆಕ್ಷನ್​ನಲ್ಲಿ ಹೀಗೆ ಆಗಿದೆ. ಮಕ್ಕಳು ಈ ಒಂದು ಪರೀಕ್ಷೆಗೆ ಎರಡು ವರ್ಷ ಕಷ್ಟಪಟ್ಟಿರುತ್ತಾರೆ. ಸಂವಿಧಾನ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರಿನ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಸಿಬ್ಬಂದಿ: ಸಿಇಟಿ ಪರೀಕ್ಷೆಯೊಂದಿಗೇ ಮತ್ತೆ ಶುರುವಾಯ್ತು ವಿವಾದ

ಬೆಳಗ್ಗೆ ದೂರು ನೀಡಲಾಗಿತ್ತು. ಆದರೆ ನಾವು ಕಮಿಷನರ್ ಕಚೇರಿಗೆ ಬರುತ್ತೇವೆ ಎಂದು ಹೇಳುವ ತನಕ ಎಫ್​​ಐಆರ್​ ಆಗಿರಲಿಲ್ಲ. ಈಗ ಯಾರೋ ಮೂವರ ಅರೆಸ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಯಾರು ಈ ಸೆಂಟರ್ ಹೆಡ್ ಇರುವವರಿಗೆ ಪಾಠ ಕಲಿಸಬೇಕು. ರಾಜ್ಯದಲ್ಲಿ ಯಾವದೇ ಕಡೆ ಈ ರೀತಿ ಆಗಬಾರದು, ಅಂತಹ ಮೆಸೇಜ್ ಪಾಸ್ ಮಾಡುವಂತೆ ಕ್ರಮತೆಗೆದುಕೊಳ್ಳುವ ಬಗ್ಗೆ ಹೇಳಿದ್ದೇವೆ. ಅವರು ಕ್ರಮತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

RCB vs GT Playing XI: ಫಿಲ್ ಸಾಲ್ಟ್​ಗೆ ಇಂಜುರಿ; ಬೆಥೆಲ್​ಗೆ ಮೊದಲ ಅವಕಾಶ – Kannada News | RCB vs GT Playing XI Royal Challengers Bengaluru vs Gujarat Titans Today IPL 2026 match Confirmed playing 11 details with name in Kannada

ಐಪಿಎಲ್ 2026 (IPL 2026) ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ, ಗುಜರಾತ್ ಟೈಟಾನ್ಸ್ (RCB vs GT) ತಂಡವನ್ನು ಎದುರಿಸಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿ ಇದಾಗಿದೆ. ಹಾಗೆಯೇ ಆರ್​ಸಿಬಿ ತನ್ನ ಮೊದಲ ತವರು ನೆಲವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಕೊನೆಯ ಲೀಗ್ ಪಂದ್ಯವನ್ನು ಆಡುತ್ತಿದೆ. ಹೀಗಾಗಿ ಈ ಪಂದ್ಯ ಆರ್​​ಸಿಬಿ ಅಭಿಮಾನಿಗಳಿಗೆ ಬಹಳಷ್ಟು ವಿಶೇಷವಾಗಿದೆ. ವಾಸ್ತವವಾಗಿ ಆರ್​ಸಿಬಿ ಈ ಆವೃತ್ತಿಯಲ್ಲಿ ಎರಡು ತವರು ಮೈದಾನಗಳನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಮೊದಲ ತವರು ಮೈದಾನವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 5 ಪಂದ್ಯಗಳನ್ನು ಆಡಲಿದ್ದು, ಎರಡನೇ ತವರು ಮೈದಾನದ ರಾಯ್​ಪುರದಲ್ಲಿ ಉಳಿದ ಎರಡು ಪಂದ್ಯಗಳನ್ನು ಆಡಲಿದೆ. ಹಾಗಾಗಿ ಬೆಂಗಳೂರಿನಲ್ಲಿ ಆರ್​ಸಿಬಿಗೆ ಇಂದಿನ ಪಂದ್ಯ ಕೊನೆಯ ಲೀಗ್ ಪಂದ್ಯವಾಗಿದೆ.

ಟಾಸ್ ಗೆದ್ದ ಆರ್​​ಸಿಬಿ

ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಗುಜರಾತ್ ಮೊದಲು ಬ್ಯಾಟಿಂಗ್ ಮಾಡಲಿದೆ. ಇದರ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಆರ್​​ಸಿಬಿ ತಂಡದಲ್ಲಿ ಒಂದು ಬದಲಾವಣೆ ಮಾಡಿದೆ. ಅದರಂತೆ ಇಂಜುರಿಗೊಂಡಿರುವ ಫಿಲ್ ಸಾಲ್ಟ್ ಬದಲಿಗೆ ಜೆಕೋಬ್ ಬೆಥಲ್ ಆಡಲಿದ್ದಾರೆ. ಇತ್ತ ಗುಜರಾತ್ ಟೈಟಾನ್ಸ್ ತಂಡದಲ್ಲೂ ಬದಲಾವಣೆಯಾಗಿದೆ.

ಮುಖಾಮುಖಿ ದಾಖಲೆ

ಆರ್​​ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಇಲ್ಲಿಯವರೆಗೆ ಆರು ಪಂದ್ಯಗಳನ್ನು ಆಡಿವೆ. ಈ ಆರು ಪಂದ್ಯಗಳಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನೀಡಿವೆ. ಏಕೆಂದರೆ ಆರು ಪಂದ್ಯಗಳಲ್ಲಿ ಎರಡೂ ತಂಡಗಳು ತಲಾ ಮೂರು ಪಂದ್ಯಗಳನ್ನು ಗೆದ್ದಿವೆ. ಆದ್ದರಿಂದ, ಈ ಎರಡೂ ತಂಡಗಳ ನಡುವೆ ಸಮಾನ ಪೈಪೋಟಿ ಇದೆ. ಐಪಿಎಲ್ 2025 ಟೂರ್ನಮೆಂಟ್‌ನಲ್ಲಿ ಎರಡೂ ತಂಡಗಳು ಒಮ್ಮೆ ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಗುಜರಾತ್ ಟೈಟಾನ್ಸ್ 8 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.

ಪಾಯಿಂಟ್ ಪಟ್ಟಿಯಲ್ಲಿ ಪ್ರಸ್ತುತ ಸ್ಥಾನ

ಉಭಯ ತಂಡಗಳು ಈ ಆವೃತ್ತಿಯಲ್ಲಿ ತಮ್ಮ ಏಳನೇ ಪಂದ್ಯವನ್ನು ಆಡುತ್ತಿವೆ. ಎರಡೂ ತಂಡಗಳು ಇಲ್ಲಿಯವರೆಗೆ ಆರು ಪಂದ್ಯಗಳನ್ನು ಆಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು 4 ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ 8 ಅಂಕ ಮತ್ತು +1.171 ನೆಟ್ ರನ್​ರೇಟ್​​ನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇತ್ತ ಗುಜರಾತ್ ಟೈಟಾನ್ಸ್ 6 ಪಂದ್ಯಗಳಲ್ಲಿ 3 ರಲ್ಲಿ ಗೆದ್ದಿದ್ದು, 6 ಅಂಕಗಳನ್ನು ಮತ್ತು -0.821 ನೆಟ್ ರನ್​ರೇಟ್​​ನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಈಗ ಎರಡೂ ತಂಡಗಳು ಮುಖಾಮುಖಿಯಾಗಲಿದ್ದು, ಪಾಯಿಂಟ್ ಟೇಬಲ್ ಅನ್ನು ಬದಲಾಯಿಸುವ ಅವಕಾಶವಿದೆ.

ಉಭಯ ತಂಡಗಳ ಪ್ಲೇಯಿಂಗ್ 11

ಆರ್​​ಸಿಬಿ: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ, ರಸಿಖ್ ಸಲಾಂ.

ಇಂಪ್ಯಾಕ್ಟ್ ಪ್ಲೇಯರ್: ಜಾಕೋಬ್ ಬೆಥೆಲ್, ಜೋರ್ಡಾನ್ ಕಾಕ್ಸ್, ಮಂಗೇಶ್ ಯಾದವ್, ವಿಕಿ ಓಸ್ಟ್ವಾಲ್ ಮತ್ತು ವೆಂಕಟೇಶ್ ಅಯ್ಯರ್.

ಗುಜರಾತ್: ಶುಭಮನ್ ಗಿಲ್(ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ಮಾನವ್ ಸುತಾರ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್.

ಇಂಪ್ಯಾಕ್ಟ್ ಪ್ಲೇಯರ್:  ಪ್ರಸಿದ್ಧ್ ಕೃಷ್ಣ, ಅನುಜ್ ರಾವತ್, ಗ್ಲೆನ್ ಫಿಲಿಪ್ಸ್, ನಿಶಾಂತ್ ಸಿಂಧು ಮತ್ತು ಅರ್ಷದ್ ಖಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:08 pm, Fri, 24 April 26

Source link

FMGE 2026: ನೀವು ವಿದೇಶದಲ್ಲಿ MBBS ಮುಗಿಸಿದ್ದೀರಾ? ಭಾರತದಲ್ಲಿ ವೈದ್ಯರಾಗಲು ಈ ಪರೀಕ್ಷೆ ಕಡ್ಡಾಯ! – Kannada News | FMGE 2026: Foreign Doctors Guide to Medical Practice in India Apply Now!

ವಿದೇಶಿ ಸಂಸ್ಥೆಗಳಲ್ಲಿ ವೈದ್ಯಕೀಯ ಪದವಿ ಪಡೆದ ಭಾರತೀಯ ನಾಗರಿಕರು ಅಥವಾ ಸಾಗರೋತ್ತರ ಭಾರತೀಯರು (OCI) ನೇರವಾಗಿ ಭಾರತದಲ್ಲಿ ವೈದ್ಯಕೀಯ ವೃತ್ತಿಯನ್ನು ಆರಂಭಿಸಲು ಸಾಧ್ಯವಿಲ್ಲ. ಅವರು ಮೊದಲು ‘ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆ’ ಅಥವಾ FMGE ಎಂಬ ಕಡ್ಡಾಯ ಸ್ಕ್ರೀನಿಂಗ್ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರವೇ ಅವರಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಅಥವಾ ರಾಜ್ಯ ವೈದ್ಯಕೀಯ ಮಂಡಳಿಗಳಲ್ಲಿ ನೋಂದಣಿ ಮಾಡಿಕೊಳ್ಳಲು ಮತ್ತು ಭಾರತದಲ್ಲಿ ಅಭ್ಯಾಸ ಮಾಡಲು ಪರವಾನಗಿ ಸಿಗುತ್ತದೆ.

ಪರೀಕ್ಷಾ ವೇಳಾಪಟ್ಟಿ ಮತ್ತು ಅರ್ಜಿ ಪ್ರಕ್ರಿಯೆ:

ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು (NBEMS) 2026ರ ಜೂನ್ ಅವಧಿಯ FMGE ಪರೀಕ್ಷಾ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ. ಈ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಏಪ್ರಿಲ್ 21 ರಂದು ಪ್ರಾರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಮೇ 11 ರಂದು ರಾತ್ರಿ 11:55 ರೊಳಗೆ ಅರ್ಜಿ ಸಲ್ಲಿಸಬಹುದು. ಈ ಪರೀಕ್ಷೆಯನ್ನು ಜೂನ್ 28 ರಂದು ದೇಶದಾದ್ಯಂತ ವಿವಿಧ ಕೇಂದ್ರಗಳಲ್ಲಿ ಕಂಪ್ಯೂಟರ್ ಆಧಾರಿತ ಸ್ವರೂಪದಲ್ಲಿ ನಡೆಸಲಾಗುವುದು.

ಪ್ರಮುಖ ದಿನಾಂಕಗಳು ಮತ್ತು ಫಲಿತಾಂಶದ ನಿರೀಕ್ಷೆ:

ಅಭ್ಯರ್ಥಿಗಳ ಅನುಕೂಲಕ್ಕಾಗಿ NBEMS ವಿವರವಾದ ವೇಳಾಪಟ್ಟಿಯನ್ನು ನೀಡಿದೆ. ಜೂನ್ 17 ರಂದು ಪರೀಕ್ಷಾ ನಗರದ ಸ್ಲಿಪ್‌ಗಳು ಬಿಡುಗಡೆಯಾಗಲಿದ್ದು, ಪರೀಕ್ಷೆಗೆ ಕೆಲವು ದಿನಗಳ ಮುನ್ನ ಅಂದರೆ ಜೂನ್ 24 ರಂದು ಪ್ರವೇಶ ಪತ್ರಗಳನ್ನು (Admit Cards) ಡೌನ್‌ಲೋಡ್ ಮಾಡಿಕೊಳ್ಳಬಹುದು. ಜೂನ್ 28 ರಂದು ನಡೆಯುವ ಪರೀಕ್ಷೆಯ ಫಲಿತಾಂಶಗಳು ಜುಲೈ 28 ರೊಳಗೆ ಪ್ರಕಟವಾಗುವ ನಿರೀಕ್ಷೆಯಿದೆ ಎಂದು ಮಂಡಳಿಯು ತಿಳಿಸಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಅಭ್ಯರ್ಥಿಗಳಿಗೆ ಎಚ್ಚರಿಕೆ ಮತ್ತು ಜವಾಬ್ದಾರಿ:

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ತಮ್ಮ ಶೈಕ್ಷಣಿಕ ಅರ್ಹತಾ ಮಾನದಂಡಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಅತ್ಯಗತ್ಯ. ಅವರ ವೈದ್ಯಕೀಯ ಪದವಿಯು ಸಂಬಂಧಿತ ದೇಶದ ಭಾರತೀಯ ರಾಯಭಾರ ಕಚೇರಿಯಿಂದ ದೃಢೀಕರಿಸಲ್ಪಟ್ಟಿರಬೇಕು. ಅರ್ಹತೆಯ ವಿಷಯದಲ್ಲಿ ಯಾವುದೇ ತಪ್ಪು ಮಾಹಿತಿ ಅಥವಾ ದಾಖಲೆಗಳ ಕೊರತೆ ಕಂಡುಬಂದಲ್ಲಿ, ಪರೀಕ್ಷಾ ಮಂಡಳಿಯು ಯಾವುದೇ ಮುನ್ಸೂಚನೆಯಿಲ್ಲದೆ ಅಭ್ಯರ್ಥಿಯ ಉಮೇದುವಾರಿಕೆಯನ್ನು ರದ್ದುಗೊಳಿಸುವ ಅಧಿಕಾರ ಹೊಂದಿದೆ.

ಸಹಾಯವಾಣಿ ಮತ್ತು ತಾಂತ್ರಿಕ ಬೆಂಬಲ:

ಅರ್ಜಿ ಸಲ್ಲಿಕೆ, ಪರೀಕ್ಷಾ ಶುಲ್ಕ ಪಾವತಿ ಅಥವಾ ಮರುಪಾವತಿಯಲ್ಲಿ ತಾಂತ್ರಿಕ ತೊಂದರೆ ಎದುರಾದಲ್ಲಿ ಅಭ್ಯರ್ಥಿಗಳು ಸಹಾಯಕ್ಕಾಗಿ NBEMS ಸಹಾಯ ಕೇಂದ್ರವನ್ನು ಸಂಪರ್ಕಿಸಬಹುದು. ಅಧಿಕೃತ ವೆಬ್ ಪೋರ್ಟಲ್ ಮೂಲಕವೂ ತಮ್ಮ ದೂರುಗಳನ್ನು ದಾಖಲಿಸಲು ಅವಕಾಶವಿದೆ. ಒಟ್ಟಾರೆಯಾಗಿ, ಅರ್ಹ ಅಭ್ಯರ್ಥಿಗಳು ಮಾತ್ರ ಈ ಅವಕಾಶವನ್ನು ಬಳಸಿಕೊಳ್ಳುವಂತೆ ಮತ್ತು ಜವಾಬ್ದಾರಿಯುತವಾಗಿ ಅರ್ಜಿ ಸಲ್ಲಿಸುವಂತೆ ಮಂಡಳಿಯು ಒತ್ತಿಹೇಳಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Weekly Love Horoscope: ನಿಮ್ಮ ರಾಶಿಗನುಗುಣವಾಗಿ ಏಪ್ರಿಲ್ 26 ರಿಂದ ಮೇ 02 ರವರೆಗಿನ ವಾರದ ಪ್ರೇಮ ಭವಿಷ್ಯ ತಿಳಿಯಿರಿ – Kannada News | Weekly Love Horoscope: April 26 May 2, 2024 Your Relationship and Prema Guide

ಏಪ್ರಿಲ್ 26ರಿಂದ ಮೇ 02ರವರೆಗಿನ ಕೊನೆಯ ವಾರವಾಗಿದ್ದು ಪ್ರೇಮ ಬಹಳ ಸೂಕ್ಷ್ಮವಾಗಬಹುದು. ಎಂದಿನಂತೆ ಎಲ್ಲ ಕಾಲದಲ್ಲಿ ಅದನ್ನು ನೋಡಲಾಗದು. ಅದಕ್ಕೆ ಕಾರಣ ಪ್ರಬುದ್ಧತೆ ಅದರಲ್ಲಿ ಇರಲಿದೆ. ಯಾಮಾರಿದರೆ ದುಃಖಿಸಬೇಕಾಗುವುದು.

​ಮೇಷ:

​ನಿಮ್ಮ ರಾಶ್ಯಾಧಿಪತಿ ಮಂಗಳನ ಪ್ರಭಾವದಿಂದ ಪ್ರೇಮ ಜೀವನದಲ್ಲಿ ತೀವ್ರತೆ ಇರಲಿದೆ. ಸಂಗಾತಿಯೊಂದಿಗೆ ಸಣ್ಣ ವಿಷಯಕ್ಕೂ ವಾಗ್ವಾದ ಉಂಟಾಗಬಹುದು, ಆದ್ದರಿಂದ ಮಾತಿನ ಮೇಲೆ ನಿಯಂತ್ರಣವಿರಲಿ. ಅವಿವಾಹಿತರಿಗೆ ಕಚೇರಿ ಅಥವಾ ಕೆಲಸದ ಸ್ಥಳದಲ್ಲಿ ಹೊಸ ಆಕರ್ಷಣೆ ಉಂಟಾಗುವ ಸಾಧ್ಯತೆಯಿದೆ. ವಾರಾಂತ್ಯದಲ್ಲಿ ಮನಸ್ತಾಪಗಳು ತಿಳಿಯಾಗಿ ಪ್ರೀತಿ ಹೆಚ್ಚಾಗುತ್ತದೆ.

ವೃಷಭ:

​ಶುಕ್ರನ ಅನುಗ್ರಹದಿಂದ ಈ ವಾರ ಅತ್ಯಂತ ರೋಮ್ಯಾಂಟಿಕ್ ಆಗಿರಲಿದೆ. ದಂಪತಿಗಳ ನಡುವೆ ಇದ್ದ ಹಳೆಯ ಕಹಿ ಘಟನೆಗಳು ಮರೆಯಾಗಿ ಹೊಸ ಆತ್ಮೀಯತೆ ಚಿಗುರಲಿದೆ. ಪ್ರೇಮಿಗಳು ಪ್ರವಾಸಕ್ಕೆ ಯೋಜಿಸಬಹುದು. ನಿಮ್ಮ ಸಂಗಾತಿಯು ನಿಮ್ಮ ಶ್ರಮವನ್ನು ಗುರುತಿಸಿ ಪ್ರಶಂಸಿಸಲಿದ್ದಾರೆ. ಒಂಟಿಯಾಗಿರುವವರಿಗೆ ಅವರ ಮನಸ್ಸಿಗೆ ಒಪ್ಪುವ ವ್ಯಕ್ತಿ ಭೇಟಿಯಾಗುವ ಯೋಗವಿದೆ.

​ಮಿಥುನ:

​ಬುಧನ ಚಲನೆಯಿಂದಾಗಿ ಸಂವಹನವೇ ನಿಮ್ಮ ಪ್ರೀತಿಯ ಬಲವಾಗಲಿದೆ. ಸಂಗಾತಿಯೊಂದಿಗೆ ಆಳವಾದ ವಿಚಾರಗಳನ್ನು ಹಂಚಿಕೊಳ್ಳಲು ಇದು ಸೂಕ್ತ ಸಮಯ. ಆದರೆ, ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಪ್ರೇಮ ಸಂಬಂಧದಲ್ಲಿ ಗೊಂದಲ ಉಂಟಾಗದಂತೆ ಎಚ್ಚರವಹಿಸಿ. ವಾರದ ಮಧ್ಯಭಾಗದಲ್ಲಿ ಪ್ರೇಮಿಗಳ ನಡುವೆ ಸಣ್ಣಪುಟ್ಟ ಮುನಿಸು ಉಂಟಾದರೂ, ಮಾತುಕತೆಯ ಮೂಲಕ ಅದನ್ನು ಬಗೆಹರಿಸಿಕೊಳ್ಳಿ.

​ಕರ್ಕಾಟಕ:

​ಚಂದ್ರನ ಪ್ರಭಾವದಿಂದಾಗಿ ನೀವು ಹೆಚ್ಚು ಭಾವನಾತ್ಮಕವಾಗಿರುತ್ತೀರಿ. ಸಂಗಾತಿಯ ಪ್ರತಿಯೊಂದು ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಅತಿಯಾದ ನಿರೀಕ್ಷೆಗಳು ನಿರಾಸೆಗೆ ಕಾರಣವಾಗಬಹುದು. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದ್ದು, ಅವರಿಗೆ ನಿಮ್ಮ ಬೆಂಬಲದ ಅಗತ್ಯವಿರುತ್ತದೆ. ಸಂಬಂಧದಲ್ಲಿ ಸ್ವಲ್ಪ ತಾಳ್ಮೆಯಿಂದ ವರ್ತಿಸುವುದು ಒಳಿತು.

ಸಿಂಹ:

​ನಿಮ್ಮ ಆತ್ಮವಿಶ್ವಾಸವು ಸಂಗಾತಿಯನ್ನು ಆಕರ್ಷಿಸಲಿದೆ. ಆದರೆ, ‘ನಾನೇ ಶ್ರೇಷ್ಠ’ ಎಂಬ ಹಠ ಪ್ರೀತಿಯಲ್ಲಿ ಅಂತರ ತರಬಹುದು. ಸಂಗಾತಿಯ ಸಲಹೆಗಳಿಗೂ ಬೆಲೆ ನೀಡಿ. ವಿವಾಹದ ಮಾತುಕತೆ ನಡೆಸಲು ಬಯಸುವವರಿಗೆ ಈ ವಾರ ಶುಭ ಫಲ ನೀಡಲಿದೆ. ಸಾಮಾಜಿಕ ಸಮಾರಂಭವೊಂದರಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಭಾಗವಹಿಸಿ ಸಂತೋಷಪಡುವಿರಿ.

​ಕನ್ಯಾ:

ಈ ವಾರ ಪ್ರೇಮ ಜೀವನವು ಹಸನಾಗಿರಲಿದೆ. ನಿಮ್ಮ ಸಂಗಾತಿಯು ನಿಮ್ಮ ಜವಾಬ್ದಾರಿಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದ್ದಾರೆ. ಅವಿವಾಹಿತರಿಗೆ ಮನೆಯವರಿಂದ ಪ್ರೇಮ ಸಂಬಂಧಕ್ಕೆ ಹಸಿರು ನಿಶಾನೆ ಸಿಗುವ ಸಾಧ್ಯತೆಯಿದೆ. ನಿಮ್ಮ ಸಂಬಂಧದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ, ಗುಪ್ತ ವಿಚಾರಗಳು ಸಂಕಷ್ಟ ತಂದೊಡ್ಡಬಹುದು.

ತುಲಾ:

​ಸಂಗಾತಿಯ ಕಡೆಯಿಂದ ಕೆಲವು ಅನಿರೀಕ್ಷಿತ ಒತ್ತಡಗಳು ಎದುರಾಗಬಹುದು. ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಈ ವಾರ ನಿಮಗೆ ಸವಾಲಾಗಲಿದೆ. ಸಂಗಾತಿಯನ್ನು ಸಮಾಧಾನಪಡಿಸಲು ಅವರ ಇಷ್ಟದ ಸ್ಥಳಕ್ಕೆ ಕರೆದುಕೊಂಡು ಹೋಗಿ. ವಾರಾಂತ್ಯದಲ್ಲಿ ಸಂಬಂಧದಲ್ಲಿ ಇದ್ದ ಬಿಗುವಿನ ವಾತಾವರಣ ತಿಳಿಯಾಗಲಿದೆ.

ವೃಶ್ಚಿಕ:

​ನಿಮ್ಮ ತೀವ್ರ ಭಾವನೆಗಳು ಪ್ರೇಮ ಜೀವನದಲ್ಲಿ ಹೊಸ ಆಯಾಮ ನೀಡಲಿವೆ. ಸಂಗಾತಿಯ ಮೇಲೆ ಅಧಿಕಾರ ಚಲಾಯಿಸುವುದನ್ನು ಬಿಟ್ಟು ಪ್ರೀತಿಯಿಂದ ಗೆಲ್ಲಿ. ಹಳೆಯ ಪ್ರೇಮಿಗಳು ಮತ್ತೆ ಸಂಧಿಸುವ ಸಾಧ್ಯತೆ ದಟ್ಟವಾಗಿದೆ. ಪ್ರೇಮ ಜೀವನದಲ್ಲಿ ಪವಿತ್ರತೆ ಕಾಪಾಡಿಕೊಳ್ಳಿ. ವಾರದ ಕೊನೆಯಲ್ಲಿ ಸಂಗಾತಿಯಿಂದ ಸಕಾರಾತ್ಮಕ ಸುದ್ದಿ ಕೇಳುವಿರಿ.

​ಧನು:

​ಈ ವಾರ ನಿಮಗೆ ಶುಭವಾಗಿದೆ. ಸಂಗಾತಿಯೊಂದಿಗೆ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಯೋಗವಿದೆ. ದೂರದ ಊರಿನಲ್ಲಿರುವ ಪ್ರೇಮಿಗಳು ಭೇಟಿಯಾಗುವ ಅಥವಾ ವಿಡಿಯೋ ಕರೆಗಳ ಮೂಲಕ ಹೆಚ್ಚು ಸಮಯ ಕಳೆಯುವ ಅವಕಾಶ ಸಿಗಲಿದೆ. ಪ್ರೇಮ ಜೀವನದಲ್ಲಿ ಇದ್ದ ತಡೆಗಳು ನಿವಾರಣೆಯಾಗಿ ಸಂಬಂಧವು ವಿವಾಹದ ಹಂತಕ್ಕೆ ತಲುಪಬಹುದು.

ಮಕರ:

​ಪ್ರೇಮ ಜೀವನದಲ್ಲಿ ವಾಸ್ತವಿಕವಾಗಿ ಯೋಚಿಸಿ. ಸಂಗಾತಿಯ ಆರ್ಥಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಿ. ಅನಗತ್ಯ ಬೇಡಿಕೆಗಳು ಸಂಬಂಧವನ್ನು ಹದಗೆಡಿಸಬಹುದು. ದಂಪತಿಗಳ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಹಿರಿಯರ ಮಧ್ಯಸ್ಥಿಕೆಯಿಂದ ಬಗೆಹರಿಯಲಿವೆ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ವಿಶೇಷ ದಿನವೊಂದನ್ನು ಮೀಸಲಿಡಿ.

ಕುಂಭ:

ಸಂಗಾತಿಯೊಂದಿಗೆ ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಇದು ಒಳ್ಳೆಯ ಸಮಯ. ಪ್ರೇಮ ಸಂಬಂಧದಲ್ಲಿ ಹೊಸತನವನ್ನು ಬಯಸುವಿರಿ. ಒಂಟಿಯಾಗಿರುವವರಿಗೆ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿಯ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಬಹುದು. ಆದರೆ, ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಂಬಿಕೆಯೇ ನಿಮ್ಮ ಸಂಬಂಧದ ಅಡಿಪಾಯವಾಗಲಿ.

ಮೀನ:

ಭಾವನಾತ್ಮಕ ಜಗತ್ತಿನಲ್ಲಿ ತೇಲುವ ನೀವು ಸಂಗಾತಿಯ ಅವಶ್ಯಕತೆಗಳನ್ನು ನಿರ್ಲಕ್ಷಿಸಬೇಡಿ. ಸಂಬಂಧದಲ್ಲಿ ಸಮರ್ಪಣಾ ಭಾವ ಹೆಚ್ಚಾಗಲಿದೆ. ದಂಪತಿಗಳ ನಡುವೆ ಆತ್ಮೀಯತೆ ವೃದ್ಧಿಯಾಗಿ ಕುಟುಂಬದಲ್ಲಿ ಸಂತೋಷ ನೆಲೆಸಲಿದೆ. ನಿಮ್ಮ ಸಂಗಾತಿಯು ನಿಮ್ಮಿಂದ ಹೆಚ್ಚಿನ ಸಮಯ ಮತ್ತು ಬೆಂಬಲವನ್ನು ನಿರೀಕ್ಷಿಸುತ್ತಾರೆ. ವಾರಾಂತ್ಯವು ಸುಖಮಯವಾಗಿರಲಿದೆ.

– ಲೋಹಿತ ಹೆಬ್ಬಾರ್

Source link

RCB vs GT IPL 2026 Live Score: ತವರಿನಲ್ಲಿ ಆರ್​ಸಿಬಿಗೆ ಕೊನೆಯ ಪಂದ್ಯ – Kannada News | Royal Challengers Bengaluru vs Gujarat Titans IPL 2026 Live Cricket Score RCB vs GT Match on 24th April latest news in Kannada

ಐಪಿಎಲ್ 2026 ರ 34 ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದೆ. ಬೆಂಗಳೂರು ತನ್ನ ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತಿದೆ. ಈ ಪಂದ್ಯದಲ್ಲಿ ಗೆದ್ದರೆ ಆರ್​​ಸಿಬಿ ಟಾಪ್ -2 ಸ್ಥಾನ ಪಡೆಯಲಿದೆ. ಇತ್ತ ಗುಜರಾತ್ ಟೈಟಾನ್ಸ್ ತಂಡ ಗೆದ್ದರೆ ಟಾಪ್ -5 ರಲ್ಲಿ ಸ್ಥಾನ ಪಡೆಯಲಿದೆ.

Source link

ಗರ್ಭಿಣಿ ಆದ ನಂತರವೂ ಸಾಹಸ ದೃಶ್ಯಗಳ ಚಿತ್ರೀಕರಣ ಮಾಡಿದ ದೀಪಿಕಾ ಪಡುಕೋಣೆ – Kannada News | Deepika Padukone shoots for King Movie with Shah Rukh Khan during her 2nd pregnancy

ಬಾಲಿವುಡ್‌ನ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ ದಂಪತಿ ಇತ್ತೀಚೆಗಷ್ಟೇ ತಾವು ಎರಡನೇ ಬಾರಿಗೆ ಪೋಷಕರಾಗುತ್ತಿರುವ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದರು. ತಮ್ಮ ಮೊದಲ ಮಗಳು ದುವಾ ಅವಳೊಂದಿಗೆ ಇರುವ ಮುದ್ದಾದ ಪೋಸ್ಟ್ ಮೂಲಕ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದರು. ಈ ಸಂಭ್ರಮದ ನಡುವೆಯೂ ದೀಪಿಕಾ ವಿಶ್ರಾಂತಿ ಪಡೆಯದೇ, ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ಖಾನ್ ಜೊತೆ ‘ಕಿಂಗ್’ ಸಿನಿಮಾದ (King Movie) ಚಿತ್ರೀಕರಣದಲ್ಲಿ ದೀಪಿಕಾ ಪಡುಕೋಣೆ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ವರದಿಗಳ ಪ್ರಕಾರ, ಏಪ್ರಿಲ್ 19ರಂದು ಎರಡನೇ ಪ್ರೆಗ್ನೆನ್ಸಿಯ ಸುದ್ದಿಯನ್ನು ಘೋಷಿಸಿದ ಬೆನ್ನಲ್ಲೇ, ದೀಪಿಕಾ ಪಡುಕೋಣೆ ಏಪ್ರಿಲ್ 21ರಂದು ‘ಕಿಂಗ್’ ಸಿನಿಮಾದ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಮುಂಬೈನ ವಿಲೆ ಪಾರ್ಲೆಯ ಗೋಲ್ಡನ್ ಟೊಬ್ಯಾಕೋ ಸ್ಟುಡಿಯೋದಲ್ಲಿ ನಿರ್ಮಿಸಲಾದ ವಿಶೇಷ ಸೆಟ್‌ನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ನಡುವಿನ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

ವಿಶೇಷವೆಂದರೆ, ಈ ಹಂತದಲ್ಲಿ ದೀಪಿಕಾ ಪಡುಕೋಣೆ ಅವರು ಭರ್ಜರಿ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಭಾಗಿಯಾಗಿದ್ದಾರೆ. ಬಿಳಿ ಬಣ್ಣದ ಉಡುಪಿನಲ್ಲಿ ಕಂಗೊಳಿಸಿದ ಅವರು, ಸುಮಾರು ಎಂಟು ಮಂದಿ ಫೈಟರ್‌ಗಳ ಜೊತೆ ಫೈಟ್ ಮಾಡುವ ದೃಶ್ಯದಲ್ಲಿ ನಟಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸುದ್ದಿ ತಿಳಿದ ಬಳಿಕ ಅವರ ಅಭಿಮಾನಿಗಳಿಗೆ ‘ಕಿಂಗ್’ ಸಿನಿಮಾ ಮೇಲೆ ನಿರೀಕ್ಷೆ ಜಾಸ್ತಿ ಆಗಿದೆ.

‘ಪಠಾಣ್’ ಖ್ಯಾತಿಯ ಸಿದ್ಧಾರ್ಥ್ ಆನಂದ್ ಅವರು ‘ಕಿಂಗ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಡಂಕಿ’ ಬಳಿಕ ಇದು ಶಾರುಖ್ ಖಾನ್ ಅವರ ಕಮ್​ಬ್ಯಾಕ್ ಸಿನಿಮಾ ಆಗಿದ್ದು, ಬಹಳ ಅದ್ಧೂರಿಯಾಗಿ ಮೂಡಿಬರುತ್ತಿದೆ. ಮುಂಬರುವ ದಿನಗಳಲ್ಲಿ ಮೀರಾ ರೋಡ್ ಸ್ಟುಡಿಯೋದಲ್ಲಿ ಮರಳುಗಾಡಿನ ಹಿನ್ನೆಲೆಯ ಮತ್ತೊಂದು ಸಾಹಸ ದೃಶ್ಯವನ್ನು ಚಿತ್ರೀಕರಿಸಲು ತಂಡ ಯೋಜಿಸಿದೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಮತ್ತೆ ಪ್ರೆಗ್ನೆಂಟ್; 2ನೇ ಮಗುವಿನ ನಿರೀಕ್ಷೆಯಲ್ಲಿ ರಣವೀರ್ ಸಿಂಗ್

‘ಕಿಂಗ್’ ಸಿನಿಮಾದ ತಾರಾಗಣವೇ ವಿಶೇಷವಾಗಿದೆ. ಮೊದಲ ಬಾರಿಗೆ ಶಾರುಖ್ ಖಾನ್ ಮತ್ತು ಅವರ ಮಗಳು ಸುಹಾನಾ ಖಾನ್ ಈ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಇದೆ. ಅನಿಲ್ ಕಪೂರ್ ಮತ್ತು ಜಾಕಿ ಶ್ರಾಫ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link