Category Archives: Blog

Your blog category

ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ, ಸಂಪುಟ ತೀರ್ಮಾನದ ಬಗ್ಗೆ ಸಿಎಂ ಹೇಳಿದ್ದಿಷ್ಟು – Kannada News | Siddaramaiah Governmnet takes Final destinations about SC internal reservation, here CM press conference

ಬೆಂಗಳೂರು, (ಏಪ್ರಿಲ್ 24): ಒಳ ಮೀಸಲಾತಿ (Internal Reservation) ಗೊಂದಲಕ್ಕೆ ಕೊನೆಗೂ ರಾಜ್ಯ ಸರ್ಕಾರ ತೆರೆ ಎಳೆದಿದೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಮಹತ್ವದ ತೀರ್ಮಾನ ಕೈಗೊಂಡಿದೆ. ಶೇ.15 ಮೀಸಲಾತಿಯಲ್ಲೇ ವರ್ಗೀಕರಣಕ್ಕೆ ಸರ್ಕಾರ ತೀರ್ಮಾನ ಮಾಡಿದ್ದು, ಅದರಂತೆ ಎಡಗೈ ಸಮುದಾಯ ಶೇ. 5.25, ಬಲಗೈ ಸಮುದಾಯ ಶೇ. 5.25 ಹಾಗೂ ಇತರ ಪರಿಶಿಷ್ಟ ಜಾತಿಗಳಿಗೆ ಶೇ. 4.5 ಒಳ ಮೀಸಲಾತಿ ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಇನ್ನು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ವಿವರವಾಗಿ ಹೇಳಿದ್ದಾರೆ ನೋಡಿ.

ಇದನ್ನೂ ಓದಿ: ವಿಶೇಷ ಸಂಪುಟ ಸಭೆ ಅಂತ್ಯ: ಒಳ ಮೀಸಲಾತಿ ಹಂಚಿಕೆಗೆ ಕ್ರಾಂತಿಕಾರಿ ನಿರ್ಣಯ, ಯಾರಿಗೆ ಎಷ್ಟು?

Source link

ಬಾಗಲಕೋಟೆ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ: ಗೋಲ್ಡ್​​ ಮೆಡಲ್​​ ಪಡೆದ ರೈತ ಕುಟುಂಬದ ವಿದ್ಯಾರ್ಥಿನಿ – Kannada News | Bagalkot Universitys First Convocation Celebrates Gold Medalists: Farmers Daughters Shine

ಬಾಗಲಕೋಟೆ, ಏಪ್ರಿಲ್​​ 24: ಇಲ್ಲಿನ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರು ಚಿನ್ನದ ಪದಕಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ. ಈ ಐತಿಹಾಸಿಕ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಗಿದ್ದು, ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್ ಅವರು ಭಾಗವಹಿಸಿದ್ದರು. ಎಂಎಸ್ಸಿ ಭೌತಶಾಸ್ತ್ರದಲ್ಲಿ 8.9 ಸಿಜಿಪಿಎ ಗಳಿಸಿರುವ ಸನ್ಮತಿ ಜಿನಪ್ಪ ಕುಪ್ಪಿ ಅವರು ಬಸವೇಶ್ವರ ಬಾಗಲಕೋಟ್ ಕಾಲೇಜಿನಿಂದ ವಿಶ್ವವಿದ್ಯಾಲಯದ ಮೊದಲ ಭೌತಶಾಸ್ತ್ರ ಗೋಲ್ಡ್​​ ಮೆಡಲ್​ ವಿಜೇತರಾಗಿದ್ದಾರೆ. ರೈತ ಕುಟುಂಬದಿಂದ ಬಂದಿರುವ ಸನ್ಮತಿ, ತಮ್ಮ ಈ ಸಾಧನೆಯು ತಮ್ಮ ಹಲವು ವರ್ಷಗಳ ಕಷ್ಟದ ಫಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಸನ್ಮತಿ ಪ್ರಸ್ತುತ ಬಿಎಲ್ಡಿ ಕಾಲೇಜಿನಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪಿಎಚ್‌ಡಿ ಮತ್ತು ಸಂಶೋಧನಾ ಕ್ಷೇತ್ರವನ್ನು ಪ್ರವೇಶಿಸುವ ಆಕಾಂಕ್ಷೆ ಹೊಂದಿದ್ದಾರೆ. ಕಳೆದ ವರ್ಷ ಕೆಸೆಟ್ ಪರೀಕ್ಷೆಯನ್ನು ಕೂಡ ಅವರು ಉತ್ತೀರ್ಣರಾಗಿದ್ದಾರೆ. ಇದೇ ರೀತಿ, ಇತಿಹಾಸ ವಿಷಯದಲ್ಲಿ ಚಿನ್ನದ ಪದಕ ಗಳಿಸಿದ ಪ್ರಿಯಾಂಕ ಅಟ್ಪತ್ ಕೂಡ ತಮ್ಮ ಸಾಧನೆಯ ಬಗ್ಗೆ ಅಪಾರ ಸಂತಸಗೊಂಡಿದ್ದಾರೆ. ಇತ್ತೀಚೆಗೆ ಕೆಸೆಟ್ ಪರೀಕ್ಷೆಯನ್ನು ಉತ್ತೀರ್ಣರಾಗಿರುವ ಪ್ರಿಯಾಂಕ, ಸಹಾಯಕ ಪ್ರಾಧ್ಯಾಪಕರಾಗುವ ಗುರಿ ಹೊಂದಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರೂ ತಮ್ಮ ಪೋಷಕರ ಸಂಪೂರ್ಣ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದು, ಅವರ ಪ್ರೋತ್ಸಾಹವೇ ಈ ಯಶಸ್ಸಿಗೆ ಕಾರಣ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ರಾಜ್​ಕುಮಾರ್ ಸಮಾಧಿ ಜಾಗ: ಚೇತನ್ ಪ್ರಶ್ನೆಗೆ ಅಭಿಮಾನಿಗಳ ಆಕ್ರೋಶ – Kannada News | Chetan Ahimsa questions government for giving land to Dr Rajkumar’s memorial

ಇಂದು (ಏಪ್ರಿಲ್ 24) ಡಾ ರಾಜ್​ಕುಮಾರ್ (Dr Rajkumar) ಅವರ ಜಯಂತಿ. ಸಾವಿರಾರು ಮಂದಿ ಅಭಿಮಾನಿಗಳು ಡಾ ರಾಜ್​ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಅಭಿಮಾನಿಗಳು, ಅಣ್ಣಾವ್ರ ನೆನಪಿನಲ್ಲಿ ಅನ್ನದಾನ, ರಕ್ತದಾನ, ನೇತ್ರದಾನ ಶಿಬಿರಗಳನ್ನು ಆಯೋಜನೆ ಮಾಡಿದ್ದಾರೆ. ಅಣ್ಣಾವ್ರ ನೆನಪಿನಲ್ಲಿ ಗೀತ-ಗಾಯನ ಕಾರ್ಯಕ್ರಮವೂ ಇಂದು ನಡೆದಿದೆ. ರಾಜ್ಯದ ಹಲವು ಮೂಲೆಗಳಲ್ಲಿ ಅಣ್ಣಾವ್ರ ಜಯಂತಿಯನ್ನು ಆಚರಿಸಲಾಗುತ್ತಿದೆ. ಕರ್ನಾಟಕಕ್ಕಾಗಿ, ಕನ್ನಡಕ್ಕಾಗಿ ಮಹತ್ವದ ಯೋಗದಾನ ನೀಡಿದ ಅಪ್ರತಿಮ ಕಲಾವಿದರನ್ನು ಸ್ಮರಿಸಲಾಗುತ್ತಿದೆ. ಆದರೆ ಇದರ ಮಧ್ಯೆ, ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ ಅವರು ಅಣ್ಣಾವ್ರ ಸಮಾಧಿ ಸ್ಥಳದ ಬಗ್ಗೆ ಕೊಂಕು ತೆಗೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಚೇತನ್ ಅಹಿಂಸ, ಅಣ್ಣಾವ್ರ ಸಮಾಧಿ ಸ್ಥಳಕ್ಕೆ ಜಾಗ ಕೊಟ್ಟಿರುವ ಸರ್ಕಾರದ ಕ್ರಮವನ್ನು ಟೀಕೆ ಮಾಡಿದ್ದಾರೆ. ‘ನಾವು ರಾಜಕುಮಾರ್ ಅವರನ್ನು ಒಬ್ಬ ಮಹಾನ್ ಕಲಾವಿದರಾಗಿ ಗೌರವಿಸುತ್ತೇವೆ. ಆದರೆ, ಬೆಂಗಳೂರು ನಗರ ಮಧ್ಯದಲ್ಲಿ 2006ರಲ್ಲಿ ಒಬ್ಬ ನಟನ “ಸಮಾಧಿ ಕಾಂಪ್ಲೆಕ್ಸ್”ಗಾಗಿ 2.5 ಎಕರೆ ಭೂಮಿಯನ್ನು ನೀಡುವುದು ತಿಳುವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ. 21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಅದನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಹಂಚಬೇಕು. ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಅಲ್ಲ’ ಎಂದಿದ್ದಾರೆ.

ಆದರೆ ಚೇತನ್ ಅಹಿಂಸ ಅವರ ಈ ಕೊಂಕು ಮಾತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ‘ಯಾವುದೋ ಅಮಲಿನಲ್ಲಿ ಈ ವ್ಯಕ್ತಿ ಪೋಸ್ಟ್​​ ಹಂಚಿಕೊಂಡಿದ್ದಾರೆ’ ಎಂದು ಒಬ್ಬರು ಟೀಕೆ ಮಾಡಿದರೆ. ಇನ್ನು ಕೆಲವರು ರಾಜ್​ಕುಮಾರ್ ಅವರು ಕನ್ನಡ ಭಾಷೆಗೆ, ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಚೇತನ್ ಅಹಿಂಸಗೆ ನೆನಪು ಮಾಡುವ ಪ್ರಯತ್ನ ಮಾಡಿದ್ದಾರೆ. ಇನ್ನು ಕೆಲವರು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಇನ್ನಿತರರ ಸಮಾಧಿ ಸ್ಥಳಗಳ ಉಲ್ಲೇಖವನ್ನು ಮಾಡಿದ್ದಾರೆ.

ರಾಜ್​ಕುಮಾರ್ ಅವರ ಸಮಾಧಿ ಕಂಠೀರವ ಸ್ಟುಡಿಯೋನಲ್ಲಿದೆ. ಇದೇ ಸ್ಥಳದಲ್ಲಿ ಅಂಬರೀಶ್, ಪುನೀತ್ ರಾಜ್​ಕುಮಾರ್ ಅವರ ಸಮಾಧಿಗಳೂ ಇವೆ. ಕಂಠೀರವ ಸ್ಟುಡಿಯೋ ಸಹ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ರಾಜ್​ಕುಮಾರ್ ಸಮಾಧಿ ಸ್ಥಳ ಅಥವಾ ಇನ್ನಿತರೆ ಸಮಾಧಿ ಸ್ಥಳಗಳನ್ನು ಯಾವುದೇ ವಾಣಿಜ್ಯ ಲಾಭಕ್ಕೆ ಯಾರೂ ಸಹ ಬಳಸಿಕೊಂಡಿಲ್ಲ. ಈ ಬಗ್ಗೆ ಈ ವರೆಗೆ ಯಾರೂ ಪ್ರಶ್ನೆಯನ್ನೂ ಸಹ ಮಾಡಿರಲಿಲ್ಲ. ಆದರೆ ಇದೀಗ ಚೇತನ್ ಅಹಿಂಸ ಅವರು ವಿನಾಕಾರಣ ಕೊಂಕು ತೆಗೆದಿದ್ದಾರೆ. ಇದಕ್ಕೆ ಅಣ್ಣಾವ್ರ ಅಭಿಮಾನಿಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದು, ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾ ಟೀಸರ್ ನೋಡಿ ಮೆಚ್ಚಿಕೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ – Kannada News | Lakshmi Hebbalkar talks about Daali Dhananjay starrer Anna from Mexico movie teaser

ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕುಟುಂಬ ಈ ಚಿತ್ರರಂಗಕ್ಕೂ ಕಾಲಿಟ್ಟಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಬಿ. ಹಟ್ಟಿಹೊಳಿ ಅವರು ‘ಐರಾ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆಯ ಮೂಲಕ ‘ಅಣ್ಣ ಫ್ರಮ್ ಮೆಕ್ಸಿಕೋ’ (Anna From Mexico) ಸಿನಿಮಾ ನಿರ್ಮಾಣ ಆಗಿದೆ. ‘ದಿ ರಾಯಲ ಸ್ಟುಡಿಯೋಸ್’ ಕೈ ಜೋಡಿಸಿದೆ. ಈಗ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ನಟ ಡಾಲಿ ಧನಂಜಯ್ (Daali Dhananjay) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಭಾಗವಹಿಸಿ ಮಾತನಾಡಿದರು.

‘ಟೀಸರ್ ಚೆನ್ನಾಗಿದೆ, ಹೊಸತನದಿಂದ ಕೂಡಿದೆ. ಧನಂಜಯ್ ಅವರ ನಟನೆ ಸೂಪರ್. ಧನಂಜಯ್ ಧರಿಸಿದ ಕರ್ನಾಟಕ ಭೂಪಟದ ಲಾಕೆಟ್ ಬಹಳಷ್ಟು ಇಷ್ಟವಾಯ್ತು. ನಾವು ಚಿತ್ರರಂಗಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಸಿನಿಮಾ ನಿರ್ಮಾಣಕ್ಕೆ ಬಂದಿದ್ದೇವೆ. ಕನ್ನಡ ಚಲನಚಿತ್ರಗಳನ್ನು ನೋಡಿಕೊಂಡು ಬೆಳೆದಿದ್ದೇವೆ. ಕನ್ನಡ ಚಿತ್ರರಂಗ ಸಾಕಷ್ಟು ಶ್ರೀಮಂತವಾಗಿದೆ. ಇದು ನಮ್ಮ ಪರಂಪರೆ. ಈ ಕ್ಷೇತ್ರಕ್ಕೆ ನಾನು ಹೊಸಬಳು’ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದರು.

ಸಿನಿಮಾ ಶುರುವಾದ ಬಗೆಯ ಬಗ್ಗೆ ಡಾಲಿ ಧನಂಜಯ್ ಮಾತನಾಡಿದರು. ‘ಹೊಯ್ಸಳ ಸಿನಿಮಾ ಶೂಟಿಂಗ್ ಬೆಳಗಾವಿಯಲ್ಲಿ ನಡೆಯುವಾಗ ಲಕ್ಷ್ಮಿ ಮೇಡಂ ಮನೆಗೆ ಹೋಗಿ ಊಟ ಮಾಡ್ಕೊಂಡು ಬರುವಾಗ ನಮ್ಮ ತಮ್ಮನಿಗೆ ಸಿನಿಮಾ ಮಾಡುವ ಆಸಕ್ತಿ ಇದೆ ಎಂದಿದ್ದರು. ಆ ಬಳಿಕ ಈ ಜರ್ನಿ ಶುರುವಾಯ್ತು. ಚನ್ನರಾಜು ಅವರು ಪ್ರೊಡಕ್ಷನ್ ‌ಮಾಡಿದ್ದಾರೆ ಎಂಬುವುದು ಗೊತ್ತಾಯ್ತು. ಸಖತ್ ಸ್ಟೈಲಿಶ್ ಆಗಿ, ಆ್ಯಕ್ಷನ್ ರೀತಿ ನನ್ನನ್ನು ತೋರಿಸಬೇಕು ಅಂತ ಅವರು ಎಂದುಕೊಂಡಿದ್ದರು. ಆದರೆ ಫ್ಯಾಮಿಲಿ ನೋಡುವಂತಹ ಸಿನಿಮಾ ಕೂಡ ಆಗಬೇಕು. ಹಾಗಾಗಿ ನಿರ್ದೇಶಕ ಶಂಕರ್ ಬಂದರು. ಒಳ್ಳೆಯ ಟೀಮ್ ಸಿದ್ಧವಾಯಿತು’ ಎಂದು ಡಾಲಿ ಹೇಳಿದರು.

‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾ ಟೀಸರ್:

‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ಅವರು ನಾಯಕಿ ಆಗಿದ್ದಾರೆ. ರಂಗಾಯಣ ರಘು, ನಾಗಭೂಷಣ, ಪೂರ್ಣಚಂದ್ರ ಮೈಸೂರು, ಉಮಾಶ್ರೀ, ಸಾಧು ಕೋಕಿಲ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ವಾಸುಕಿ ವೈಭವ್‌ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಜಯ್ ಅವರು ಸಂಕಲನ ಮಾಡಿದ್ದಾರೆ. ಗುಣ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ.

ಇದನ್ನೂ ಓದಿ: ನಾನ್-ವೆಜ್ ತಿಂದಿದ್ದಕ್ಕೆ ಡಾಲಿ ಧನಂಜಯ ಟ್ರೋಲ್: ಮನೆಯವರ ಪ್ರತಿಕ್ರಿಯೆ ಏನು?

ವಾಸುಕಿ ವೈಭವ್, ನಿರ್ದೇಶಕ ಶಂಕರ್‌ ಗುರು, ಚನ್ನರಾಜ್ ಹಟ್ಟಿಹೊಳಿ, ನಯನಾ ಮೋಟಮ್ಮ, ಸಹ-ನಿರ್ಮಾಪಕರಾದ ಸತ್ಯ ರಾಯಲ, ಜೀ ಸ್ಟುಡಿಯೋಸ್​ನ ದಿವ್ಯಾ, ಆನಂದ್ ಆಡಿಯೋದ ಶ್ಯಾಮ್ ಮುಂತಾದವರು ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದರು. ಅಭಿಮಾನಿಗಳಿಂದ ‘ಅಣ್ಣ ಫ್ರಮ್ ಮೆಕ್ಸಿಕೋ’ ಟೀಸರ್​ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ! – Kannada News | Kolar Heatwave: Soaring Demand for Traditional Clay Pots Amidst Extreme Temperatures

ಕೋಲಾರ, ಏಪ್ರಿಲ್ 24: ಕೋಲಾರ ಜಿಲ್ಲೆಯಲ್ಲಿ ತಾಪಮಾನ ಏರಿಕೆಯಾದ ಹಿನ್ನೆಲೆಯಲ್ಲಿ ಮಣ್ಣಿನ ಮಡಿಕೆಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಜಿಲ್ಲೆಯ ಕುಂಬಾರ ಬೀದಿಯು ಮಣ್ಣಿನ ಮಡಿಕೆಗಳ ಮಾರಾಟಕ್ಕೆ ಹೆಸರುವಾಸಿಯಾಗಿದ್ದು, ಬೇಸಿಗೆ ಆರಂಭವಾದಾಗಿನಿಂದ ಇಲ್ಲಿ ಉತ್ತಮ ವ್ಯಾಪಾರ ನಡೆಯುತ್ತಿದೆ.

ಮಣ್ಣಿನ ಮಡಿಕೆಯಲ್ಲಿ ಇಟ್ಟ ನೀರು ಆರೋಗ್ಯಕ್ಕೆ ಉತ್ತಮ ಎಂಬ ನಂಬಿಕೆ ಮತ್ತು ಫ್ರಿಡ್ಜ್ ನೀರಿಗಿಂತ ತಂಪಾಗಿರುತ್ತದೆ ಎಂಬ ಕಾರಣಕ್ಕೆ ಜನ ಇವುಗಳನ್ನು ಹೆಚ್ಚು ಖರೀದಿಸುತ್ತಿದ್ದಾರೆ. ಮಡಿಕೆ ತಯಾರಕರು ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗಿದ್ದು, ಸಾಂಪ್ರದಾಯಿಕ ಮಡಿಕೆಗಳ ಜೊತೆಗೆ ಮಣ್ಣಿನ ಬಾಟಲಿಗಳು, ಫ್ಲಾಸ್ಕ್‌ಗಳು ಮತ್ತು ವಿವಿಧ ವಿನ್ಯಾಸದ ಕಪ್‌ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಸದ್ಯಕ್ಕೆ 250 ರೂ.ಗಳಿಂದ 950 ರೂ.ವರೆಗಿನ ಬೆಲೆಯಲ್ಲಿ ಮಡಿಕೆಗಳು ಲಭ್ಯವಿದ್ದು, 10 ರಿಂದ 25 ಲೀಟರ್ ಸಾಮರ್ಥ್ಯದ ಮಡಿಕೆಗಳಿಗೆ ಬೇಡಿಕೆ ಹೆಚ್ಚಿದೆ. ಇದು ಬೇಸಿಗೆ ಕಾಲದಲ್ಲಿ ಮಡಿಕೆ ವ್ಯಾಪಾರಿಗಳಿಗೆ ಉತ್ತಮ ಆದಾಯ ತಂದುಕೊಟ್ಟಿದೆ ಎಂದು ಮಡಿಕೆ ತಯಾರಕರು ಹೇಳುತ್ತಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಈ ಐದು ತಂಡಗಳಿಗೆ ನಾಯಕರೇ ಹೊರೆ

Source link

ಶೌಚಾಲಯದಲ್ಲಿ ಸಿರಿಂಜ್‌ಗಳು ಪತ್ತೆ: ತುಮಕೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉದ್ದೀಪನ ಶಂಕೆ! – Kannada News | National Games Kick Off; but Syringes Found on Opening Day

ಕ್ರೀಡಾಕೂಟದ ಮೊದಲ ದಿನ ಸಿರಿಂಜ್​ಗಳು ಪತ್ತೆ Image Credit source: tv9 kannada

ತುಮಕೂರು, ಏಪ್ರಿಲ್​ 24: ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ (National level Sports) ಕಲ್ಪತರು ನಾಡು ತುಮಕೂರು (Tumkur) ಸಾಕ್ಷಿಯಾಗಿದೆ. 20 ವರ್ಷದೊಳಗಿನವರ (U-20) 24ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಇಂದು ಅದ್ದೂರಿ ಚಾಲನೆ ಸಿಕ್ಕಿದ್ದು, ದೇಶದ ವಿವಿಧ ಭಾಗಗಳಿಂದ ಬಂದ ನೂರಾರು ಯುವ ಪ್ರತಿಭೆಗಳು ತಮ್ಮ ಸಾಧನೆ ಪ್ರದರ್ಶಿಸಲು ಸಜ್ಜಾಗಿದ್ದಾರೆ. ಆದರೆ, ಆರಂಭದ ದಿನವೇ ಕ್ರೀಡಾಂಗಣದ ಶೌಚಾಲಯದಲ್ಲಿ ಸಿರಿಂಜ್‌ಗಳು (Syringe) ಪತ್ತೆಯಾಗಿದ್ದು, ಗೊಂದಲ ಸೃಷ್ಟಿಸಿದೆ. ಅಷ್ಟೇ ಅಲ್ಲದೆ ಕ್ರೀಡಾಕೂಟದ ಪಾರದರ್ಶಕತೆಯ ಬಗ್ಗೆ ಅನುಮಾನಗಳು ಮೂಡಿವೆ.

ದೇಶದ 28 ರಾಜ್ಯಗಳಿಂದ ಸುಮಾರು 1,500ಕ್ಕೂ ಹೆಚ್ಚು ಯುವ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗಿಯಾಗಲಿದ್ದು, ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. ಇನ್ನು 40 ವಿವಿಧ ಕ್ರೀಡಾ ಚಟುವಟಿಕೆ ನಡೆಯಲಿದ್ದು, ಬಿಸಿಲಿನ ತಾಪಮಾನಕ್ಕೆ ಅನುಗುಣವಾಗಿ ಕ್ರೀಡಾಚಟುವಟಿಕೆಗಳು ಬೆಳಿಗ್ಗೆ ಹಾಗೂ ಸಂಜೆ ನಂತರ ಫೆಡ್ ಲೈಟ್​ನಲ್ಲಿ ನಡೆಯಲಿವೆ. ಈ ಕ್ರೀಡಾಕೂಟದಲ್ಲಿ ವಿಜೇತರು ಆಗಸ್ಟ್ ತಿಂಗಳಲ್ಲಿ ಅಮೆರಿಕಾದ ಓರೆಗಾನ್​​ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಭಾರತ ಪ್ರತಿನಿಧಿಸಲು ಆಯ್ಕೆ‌ ಆಗಲಿದ್ದಾರೆ.

ಶೌಚಾಲಯದಲ್ಲಿ ಸಿರಿಂಜ್​​ಗಳು ಪತ್ತೆ

ಇನ್ನು ಇಂದು ಬೆಳಿಗ್ಗೆ ಮಹಾತ್ಮಗಾಂಧಿ ಕ್ರೀಡಾಂಗಣದ ಬಳಿಯ ಜಿ. ಪರಮೇಶ್ವರ್ ಒಳಾಂಗಣ ಕ್ರೀಡಾಂಗಣ ಸಂಕೀರ್ಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದ ಮುಖಾಂತರ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಆದರೆ ಚಾಲನೆ ಸಿಕ್ಕ ಮೊದಲ ದಿನವೇ ಕ್ರೀಡಾಂಗಣದ ಶೌಚಾಲಯದಲ್ಲಿ ಸಿರಿಂಜ್​​ಗಳು ಪತ್ತೆಯಾಗಿದ್ದು, ಉದ್ದೀಪನ ಮದ್ದು ಬಳಕೆಯ ಅನುಮಾನ ಮೂಡಿದೆ.

ಸಿರಿಂಜುಗಳು ಪತ್ತೆಯಾಗಿದ್ದು ನಿಜ: ಸತ್ಯನಾರಾಯಣ

ಇನ್ನು ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಕ್ರೀಡಾಕೂಟದ ಸ್ಪರ್ಧಾ ನಿರ್ದೇಶಕ ಸತ್ಯನಾರಾಯಣ, ಸಿರಿಂಜುಗಳು ಪತ್ತೆಯಾದ ಬಗ್ಗೆ NADA (national anti doping agency)ಗೆ ಮಾಹಿತಿ ನೀಡಲಾಗುವುದು. ಅವರು ಪರಿಶೀಲಿಸಿ, ತನಿಖೆ ನಡೆಸಲಿದ್ದಾರೆ ಎಂದರು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ NADAದಿಂದ ಟೆಸ್ಟ್ ಮಾಡಲಾಗುತ್ತದೆ. ಒಂದು ಟೆಸ್ಟ್ 30 ರಿಂದ 40 ಸಾವಿರ ರೂ ವೆಚ್ಚದಾಗಿರುತ್ತದೆ, ಆದರೂ ಸಹ ನಾವು ಮಾಡುತ್ತೇವೆ. ನೋ‌ ನೀಡಲ್ ಪಾಲಿಸಿ ಇದೆ. ಅವರು ಬಾತ್ ರೂಂನಲ್ಲಿ ತೆಗೆದುಕೊಂಡಾಗ ಗೊತ್ತಾಗುವುದಲ್ಲ. ಖಂಡಿತ ಇದನ್ನು ಕೂಲಂಕುಷವಾಗಿ ನೋಡಲಾಗುವುದು. ಬಾಹಿರವಾರವಾಗಿ ಚುಚ್ಚು ಮದ್ದು ಪಡೆದಿದ್ದರೇ NADA ಕ್ರಮಗೈಕೊಳ್ಳಿದೆ. ಯಾರೇ ಸಿರಿಂಜ್ ತೆಗೆದುಕೊಂಡಿರುವುದು ಪತ್ತೆಯಾದರೆ ಅವರಿಗೆ ನಾಲ್ಕು ವರ್ಷ ಕ್ರೀಡೆಯಿಂದ ಬ್ಯಾನ್ ಮಾಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ತುಮಕೂರಿನಲ್ಲಿ 35 ನವಿಲುಗಳು ಸಾವು! ಸುಡುವ ಬಿಸಿಲಿನ ಪರಿಣಾಮವೋ? ಹಕ್ಕಿ ಜ್ವರವೋ?

ದೇಶದ ವಿವಿಧ ರಾಜ್ಯಗಳಿಂದ ಸಣ್ಣಪುಟ್ಟ ಹಳ್ಳಿಗಳಿಂದ ತಮ್ಮದೇ ಕನಸು ಹೊತ್ತು ಬಂದ 20 ವರ್ಷದೊಳಗಿನ ಪ್ರತಿಭೆಗಳ ಭವಿಷ್ಯ ರೂಪಿಸುವ ಕ್ರೀಡ್ರಾಕೂಟದ ನಡುವೆ ಶೌಚಾಲಯದಲ್ಲಿ ಕಂಡ ಸಿರಿಂಜ್​​ಗಳು, ಉದ್ದೀಪನ ಅನುಮಾನ ಮೂಡಿಸಿದ್ದು, ಕೆಲ ಸ್ಪರ್ಧಿಗಳು ಕಳ್ಳಾಟ ನಡೆಸಿರುವ ಶಂಕೆ ಮೂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮೆಟಾ, ಮೈಕ್ರೋಸಾಫ್ಟ್​ನಲ್ಲಿ ಎಐ ಸಂಚಲನ; 23,000 ಉದ್ಯೋಗಗಳಿಗೆ ಕುತ್ತು – Kannada News | AI effect, Meta and Microsoft take steps that can affect 23,000 jobs

ನವದೆಹಲಿ, ಏಪ್ರಿಲ್ 24: ಟೆಕ್ ದೈತ್ಯ ಸಂಸ್ಥೆಗಳಾದ ಮೆಟಾ (ಫೇಸ್‌ಬುಕ್‌ನ ಮಾತೃಸಂಸ್ಥೆ) ಮತ್ತು ಮೈಕ್ರೋಸಾಫ್ಟ್ ಜಾಗತಿಕವಾಗಿ ಸುಮಾರು 23,000 ಉದ್ಯೋಗಗಳ ಮೇಲೆ ಪರಿಣಾಮ ಬೀರಬಲ್ಲ ಬೃಹತ್ ಉದ್ಯೋಗ ಕಡಿತ ಮತ್ತು ಬೈಔಟ್ (Buyout) ಯೋಜನೆಗಳನ್ನು ಪ್ರಕಟಿಸಿವೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲು ಮತ್ತು ವೆಚ್ಚ ಕಡಿತಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಮೆಟಾ ತನ್ನ ಒಟ್ಟು ಉದ್ಯೋಗಿಬಳಗದ ಶೇಕಡಾ 10 ರಷ್ಟು, ಅಂದರೆ ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಮೇ 20 ರಿಂದ ಈ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಉದ್ಯೋಗಿಗಳೆಲ್ಲರಿಗೂ ಮೆಮೋ ಮೂಲಕ ಈ ಅಲರ್ಟ್ ಮೆಸೇಜ್ ರವಾನಿಸಲಾಗಿದೆ.

ಎಂಟು ಸಾವಿರ ಉದ್ಯೋಗಗಳಿಗೆ ಕತ್ತರಿ ಹಾಕುವುದರ ಜೊತೆಗೆ ಈಗಾಗಲೇ ಖಾಲಿ ಇರುವ ಸುಮಾರು 6,000 ಹುದ್ದೆಗಳನ್ನು ಭರ್ತಿ ಮಾಡದಿರಲು ಕಂಪನಿ ನಿರ್ಧರಿಸಿದೆ.

ಮೆಟಾದ ಈ ನಡೆಗೆ ಕಾರಣವೇನು?

ಫೇಸ್​ಬುಕ್, ವಾಟ್ಸಾಪ್, ಇನ್ಸ್​ಟಾಗ್ರಾಮ್ ಆ್ಯಪ್​ಗಳ ಮಾಲೀಕಸಂಸ್ಥೆ ಮೆಟಾ ತನ್ನ ಎಐ (AI) ಇನ್​ಫ್ರಾಸ್ಟ್ರಕ್ಚರ್​ಗಾಗಿ ಸುಮಾರು 135 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದ್ದು, ಈ ಭಾರಿ ವೆಚ್ಚವನ್ನು ಸರಿದೂಗಿಸಲು ಮತ್ತು ಕಂಪನಿಯನ್ನು ಹೆಚ್ಚು ದಕ್ಷತೆಯಿಂದ ನಡೆಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಇನ್ಫೋಸಿಸ್ ಉದ್ಯೋಗಿಗಳ ಸ್ಯಾಲರಿ ಹೈಕ್​ಗೆ ತಡೆ; ಸಿಇಒಗೆ 52 ಕೋಟಿ ರೂ ಮೌಲ್ಯದ ಸ್ಟಾಕ್ ಭತ್ಯೆ

ಮೈಕ್ರೋಸಾಫ್ಟ್ ಸ್ವಯಂ ನಿವೃತ್ತಿ ಸ್ಕೀಮ್

ಮತ್ತೊಂದು ಟೆಕ್ನಾಲಜಿ ದೈತ್ಯ ಕಂಪನಿಯಾದ ಮೈಕ್ರೋಸಾಫ್ಟ್ ತನ್ನ ಅಮೆರಿಕದ ಉದ್ಯೋಗಿಗಳಿಗೆ ‘ಸ್ವಯಂಪ್ರೇರಿತ ನಿರ್ಗಮನ’ (Voluntary Buyouts) ಆಫರ್ ನೀಡಿದೆ. ಅಂದರೆ, ಉದ್ಯೋಗಿಗಳು ತಾವಾಗಿಯೇ ಕೆಲಸ ಬಿಟ್ಟರೆ ಅವರಿಗೆ ಕಂಪನಿಯಿಂದ ಆಕರ್ಷಕ ಪರಿಹಾರ ಧನ ಸಿಗಲಿದೆ.

ಸುಮಾರು 8,750 ಉದ್ಯೋಗಿಗಳು (ಅಮೆರಿಕದ ಕಾರ್ಯಪಡೆಯ ಶೇ. 7 ರಷ್ಟು) ಈ ಯೋಜನೆಗೆ ಅರ್ಹರಾಗಿದ್ದಾರೆ. ವಯಸ್ಸು ಮತ್ತು ಸೇವಾವಧಿಯ ಮೊತ್ತ 70 ಅಥವಾ ಅದಕ್ಕಿಂತ ಹೆಚ್ಚಿರುವ ಉದ್ಯೋಗಿಗಳಿಗೆ ಈ ಆಫರ್ ನೀಡಲಾಗಿದೆ. ಉದಾಹರಣೆಗೆ, ವಯಸ್ಸು 50 ವರ್ಷ, ಸೇವಾವಧಿ 20 ವರ್ಷ ಸೇರಿ ಒಟ್ಟು 70 ಇದ್ದವರು ಈ ವಾಲಂಟರಿ ಬಯೌಟ್​ನ ಆಫರ್ ಪಡೆಯುತ್ತಾರೆ.

AI ಹೂಡಿಕೆಯ ಪ್ರಭಾವ

ಎರಡೂ ಕಂಪನಿಗಳು ಎಐ ತಂತ್ರಜ್ಞಾನದ ಓಟದಲ್ಲಿ ಮುಂಚೂಣಿಯಲ್ಲಿರಲು ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡುತ್ತಿವೆ. ಮನುಷ್ಯರು ಮಾಡುವ ಕೆಲಸಗಳನ್ನು ಎಐ ಮೂಲಕ ಮಾಡಿಸುವ ಅಥವಾ ಕೆಲಸದ ಪ್ರಕ್ರಿಯೆಯನ್ನು ಆಟೋಮೇಷನ್ ಮಾಡುವ ಗುರಿಯನ್ನು ಈ ಕಂಪನಿಗಳು ಹೊಂದಿವೆ.

ವಿಶೇಷವಾಗಿ ಮ್ಯಾನೇಜ್‌ಮೆಂಟ್, ಸೇಲ್ಸ್ ಮತ್ತು ನೇಮಕಾತಿ ವಿಭಾಗದ ಉದ್ಯೋಗಿಗಳ ಮೇಲೆ ಈ ಜಾಬ್ ಕಟ್ ಪರಿಣಾಮ ಹೆಚ್ಚಾಗಿರಲಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಭಾರತದ ಆರ್ಥಿಕ ಪ್ರಗತಿಗೆ ತೊಡಕಾಗಿರುವ ಅಂಶಗಳೇನು? ಬರ್ನ್​ಸ್ಟೈನ್ ಸಲಹೆ ನೀಡಿರುವ ಪರಿಹಾರಗಳೇನು?

ಒಟ್ಟಾರೆಯಾಗಿ, ಎಐ ತಂತ್ರಜ್ಞಾನದ ಅಬ್ಬರದಿಂದಾಗಿ ಐಟಿ ಕ್ಷೇತ್ರದಲ್ಲಿ ಹಳೆಯ ಮಾದರಿಯ ಉದ್ಯೋಗಗಳು ಕಣ್ಮರೆಯಾಗುತ್ತಿದ್ದು, ಕಂಪನಿಗಳು ಹೆಚ್ಚು ‘ಲೀನ್’ (Lean) ಆಗಲು ಪ್ರಯತ್ನಿಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿಶೇಷ ಸಂಪುಟ ಸಭೆ ಅಂತ್ಯ: ಒಳ ಮೀಸಲಾತಿ ಹಂಚಿಕೆಗೆ ಕ್ರಾಂತಿಕಾರಿ ನಿರ್ಣಯ, ಯಾರಿಗೆ ಎಷ್ಟು? – Kannada News | Karnataka Cabinet Finalized SC Internal Reservation, here Is Details

ಬೆಂಗಳೂರು, (ಏಪ್ರಿಲ್ 24): ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ (SC Internal Reservation)  ಕುರಿತು ಸಿದ್ದರಾಮಯ್ಯ ಸರ್ಕಾರ ನಿರ್ಣಾಯಕ ತೀರ್ಮಾನ ಕೈಗೊಂಡಿದೆ. ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಶೇ.15 ರಷ್ಟು ಮೀಸಲಾತಿಯಲ್ಲಿ ಸಮಾನವಾಗಿ ಹಂಚಿಕೆಗೆ ತೀರ್ಮಾನಿಸಿದೆ. ಅಂದರೆ ದಲಿತ ಎಡಗೈ 5, ಬಲಗೈ 5, ಇತರರಿಗೆ 5ರಷ್ಟು ಹಂಚಿಕೆಗೆ ನಿರ್ಧರಿಸಲಾಗಿದೆ. ಇದರೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ಕ್ರಾಂತಿಕಾರಿ ನಿರ್ಣಯ ಕೈಗೊಂಡಿದೆ.

Source link

ಡೆಲಿವರಿ ನಂತರ ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದಾದ 5 ಆರೋಗ್ಯ ಸಮಸ್ಯೆಗಳು ಯಾವುದು ಗೊತ್ತಾ? – Kannada News | After Delivery Care: 5 Common Health Issues in New Mothers

ಗರ್ಭಧಾರಣೆ ಎನ್ನುವಂತದ್ದು ಒಂದು ಹೆಣ್ಣಿನ ಜೀವನದಲ್ಲಿ ಮುಖ್ಯವಾದ ಘಟ್ಟ. ಈ ಅವಧಿಯಲ್ಲಿ ಮಹಿಳೆಯರು ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸುವುದು ಅತ್ಯಂತ ಮುಖ್ಯ. ಜೊತೆಗೆ ಅದಕ್ಕೂ ಹೆಚ್ಚಿನ ಕಾಳಜಿ ಡೆಲಿವರಿ (Delivery) ನಂತರ ಮಾಡಬೇಕಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ಡೆಲಿವರಿ ನಂತರ ಮಹಿಳೆಯ ದೇಹದಲ್ಲಿ ಹಾರ್ಮೋನ್ ಬದಲಾವಣೆಗಳು ಮುಂದುವರಿಯುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಆದಷ್ಟು ಎಚ್ಚರಿಕೆ ವಹಿಸುವುದು ಬಹಳ ಅನಿವಾರ್ಯ. ಅದರ ಜೊತೆಗೆ ಯಾವ ರೀತಿಯ ಸಮಸ್ಯೆಗಳು ಕಂಡುಬರುತ್ತದೆ ಅದನ್ನು ತಡೆಯಲು ಏನು ಮಾಡಬಹುದು ಎಂಬುದರ ಬಗ್ಗೆಯೂ ತಿಳಿದುಕೊಂಡಿರಬೇಕಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

1. ಪೋಸ್ಟ್‌ಪಾರ್ಟಮ್ ಥೈರಾಯ್ಡ್ ಸಮಸ್ಯೆ

ಡೆಲಿವರಿ ನಂತರ ಕೆಲವು ಮಹಿಳೆಯರಲ್ಲಿ ಥೈರಾಯ್ಡ್ ಅಸಮತೋಲನ ಕಾಣಬಹುದು. ಇದನ್ನು “ಪೋಸ್ಟ್‌ಪಾರ್ಟಮ್ ಥೈರಾಯಿಡಿಟಿಸ್” ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ದಣಿವು, ಮೂಡ್ ಸ್ವಿಂಗ್, ತೂಕ ಏರಿಕೆ ಅಥವಾ ಕಡಿಮೆಯಾಗುವಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಡೆಲಿವರಿ ಬಳಿಕ ನಿಯಮಿತವಾಗಿ ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.

2. ಬೆನ್ನು ಮತ್ತು ಸಂಧಿ ನೋವು

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಮತ್ತು ದೇಹದ ಸ್ಥಿತಿ ಬದಲಾಗುವುದರಿಂದ ಡೆಲಿವರಿಯ ನಂತರವೂ ಬೆನ್ನು ಮತ್ತು ಸಂಧಿಗಳ ನೋವು ಕಂಡುಬರಬಹುದು. ಜೊತೆಗೆ ಮಗುವನ್ನು ರಾತ್ರಿ ಪೂರ್ತಿ ಎತ್ತಿಕೊಳ್ಳುವುದು, ಸರಿಯಾದ ನಿದ್ರೆ ಇಲ್ಲದಿರುವುದು ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇದನ್ನೂ ಓದಿ: 35 ವರ್ಷದ ನಂತರ ಪ್ರೆಗ್ನನ್ಸಿಗೆ ಪ್ಲಾನ್ ಮಾಡುವವರು ಕಡ್ಡಾಯವಾಗಿ ಈ 3 ಪರೀಕ್ಷೆಗಳನ್ನು ಮಾಡಿಸಬೇಕು!

3. ಪೋಸ್ಟ್‌ಪಾರ್ಟಮ್ ಡಿಪ್ರೆಷನ್

ಇತ್ತೀಚಿನ ದಿನಗಳಲ್ಲಿ ಡಿಲಿವರಿ ನಂತರ ಮಹಿಳೆಯರಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಆತಂಕ, ಚಡಪಡಿಕೆ, ದುಃಖಭಾವ ಇವು ಇದರ ಲಕ್ಷಣಗಳಾಗಿವೆ. ಸಮರ್ಪಕ ಆರೈಕೆ ಮತ್ತು ಕುಟುಂಬದ ಬೆಂಬಲ ಇಲ್ಲದಿದ್ದರೆ ಈ ಸಮಸ್ಯೆ ಮತ್ತಷ್ಟು ಗಂಭೀರವಾಗಬಹುದು.

4. ಮಧುಮೇಹದ ಅಪಾಯ

ಗರ್ಭಾವಸ್ಥೆಯಲ್ಲಿದ್ದ ಗರ್ಭಧಾರಣಾ ಮಧುಮೇಹ (Gestational Diabetes) ನಂತರವೂ ಮುಂದುವರೆಯಬಹುದು. ಕೆಲವು ಮಹಿಳೆಯರಲ್ಲಿ ಟೈಪ್- 2 ಮಧುಮೇಹದ ಅಪಾಯ ಹೆಚ್ಚಾಗಿರುತ್ತದೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಮತ್ತು ತೂಕ ಹೆಚ್ಚಾಗುವುದರಿಂದ ಈ ರೀತಿಯ ಸಮಸ್ಯೆ ಉಂಟಾಗಬಹುದು.

5. ಮೂತ್ರ ನಿಯಂತ್ರಣ ಸಮಸ್ಯೆ

ಪೆಲ್ವಿಕ್ ಸ್ನಾಯುಗಳು ದುರ್ಬಲವಾಗುವುದರಿಂದ ಕೆಲವು ಮಹಿಳೆಯರಲ್ಲಿ ಮೂತ್ರ ನಿಯಂತ್ರಣ ಸಮಸ್ಯೆ ಕಾಣಬಹುದು. ಇದು ಸಾಮಾನ್ಯವಾಗಿದ್ದರೂ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಹಾಗಾಗಿ ಈ ಬಗ್ಗೆ ಹೆಚ್ಚಿನ ಗಮನ ನೀಡುವುದು ಅಗತ್ಯ.

ಡಿಲಿವರಿ ನಂತರ ಸರಿಯಾದ ಆಹಾರ, ವಿಶ್ರಾಂತಿ, ವ್ಯಾಯಾಮ ಮತ್ತು ವೈದ್ಯಕೀಯ ತಪಾಸಣೆ ಮೂಲಕ ಈ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಮಹಿಳೆಯರ ಆರೋಗ್ಯವೇ ಕುಟುಂಬದ ಆರೋಗ್ಯಕ್ಕೆ ಆಧಾರವಾಗಿರುವುದರಿಂದ ಇದನ್ನು ನಿರ್ಲಕ್ಷ್ಯ ಮಾಡಬಾರದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link