ರಾಜಸ್ಥಾನ ವಿಧಾನಸಭೆಗೆ ಆತ್ಮಾಹುತಿ ಬಾಂಬ್ ಬೆದರಿಕೆ; 3 ಗಂಟೆ ಶೋಧ ಕಾರ್ಯಾಚರಣೆ – Kannada News | Suicide Bomb attack threat in Rajasthan Assembly House triggers 3 hour search
ಜೈಪುರ, ಏಪ್ರಿಲ್ 24: ರಾಜಸ್ಥಾನ ವಿಧಾನಸಭೆಯ (Rajasthan Assembly) ಅಧಿಕೃತ ಇಮೇಲ್ ಖಾತೆಗೆ ಬಾಂಬ್ ಬೆದರಿಕೆ ಬಂದಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ರಾಜಸ್ಥಾನದ ವಿಧಾನಸಭೆಯ ಆವರಣದಲ್ಲಿ ಸಮಗ್ರ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಬೆದರಿಕೆ ಇಮೇಲ್ ಅನ್ನು ಸ್ವೀಕರಿಸಲಾಗಿತ್ತು. ಬೆಳಿಗ್ಗೆ 9.15ರ ಸುಮಾರಿಗೆ ಬಂದ ಇಮೇಲ್‌ನಲ್ಲಿ ವಿಧಾನಸಭೆ ಕಟ್ಟಡದೊಳಗೆ ಮಧ್ಯಾಹ್ನ 1 ಗಂಟೆಗೆ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ, ಭದ್ರತಾ ಸಂಸ್ಥೆಗಳು ವಿಧಾನಸಭೆ ಕಟ್ಟಡದಿಂದ ಎಲ್ಲಾ ಅಧಿಕಾರಿಗಳು…