Category Archives: Blog

Your blog category

ಗಿಲ್ಲಿ ನಟನ ಹುಟ್ಟೂರಲ್ಲಿ ಬ್ಯಾನರ್, ಕಟೌಟ್: ಹಳ್ಳಿ ಮಂದಿ ಖುಷಿ ನೋಡಿ.. – Kannada News | Gilli Nata native Dadadapura Celebrates ahead of Bigg Boss Kannada Season 12 Finale

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ (Bigg Boss Kannada Season 12 Finale) ತಲುಪಿರುವ ಗಿಲ್ಲಿ ಪರವಾಗಿ ರಾಜ್ಯಾದ್ಯಂತ ಅಭಿಮಾನಿಗಳು ಪ್ರಚಾರ ಮಾಡುತ್ತಿದ್ದಾರೆ. ಗಿಲ್ಲಿ ಅವರ ಹುಟ್ಟೂರಿನಲ್ಲಿ ಜನರು ದೊಡ್ಡ ದೊಡ್ಡ ಬ್ಯಾನರ್, ಕಟೌಟ್ ಹಾಕಿ ಸಂಭ್ರಮಿಸುತ್ತಿದ್ದಾರೆ. ಹೌದು, ಗಿಲ್ಲಿ ಅವರ ಊರು ದಡದಪುರದಲ್ಲಿ (Dadadapura) ಗ್ರಾಮಸ್ಥರ ಸಂಭ್ರಮ ಜೋರಾಗಿದೆ. ‘ವೋಟ್ ಫಾರ್ ಗಿಲ್ಲಿ’ ಎಂದು ಘೋಷಣೆ ಕೂಗಲಾಗುತ್ತಿದೆ. ಕಾಮಿಡಿ ಮೂಲಕ ಗಿಲ್ಲಿ ನಟ (Gilli Nata) ಅವರು ಎಲ್ಲರನ್ನು ಮನರಂಜಿಸಿದ್ದಾರೆ. ಅವರೇ ಈ ಬಾರಿ ಬಿಗ್ ಬಾಸ್ ಟ್ರೋಫಿ ಗೆಲ್ಲುತ್ತಾರೆ ಎಂಬ ಅಭಿಪ್ರಾಯ ಜನರಿಗೆ ಇದೆ. ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ಅಶ್ವಿನಿ ಗೌಡ, ಧ್ರುವಂತ್, ಮ್ಯೂಟೆಂಟ್ ರಘು ಕೂಡ ಬಿಗ್ ಬಾಸ್ ಫಿನಾಲೆ ಕಣದಲ್ಲಿ ಇದ್ದಾರೆ. ಜನವರಿ 18ರಂದು ಬಿಗ್ ಬಾಸ್ ಬಾಸ್ ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶುಂಠಿ, ಈರುಳ್ಳಿ, ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಸೂಕ್ತವೇ? – Kannada News | Is it right or wrong to store ginger, onions, and garlic in the refrigerator

ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿ ದೈನಂದಿನ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರತಿಯೊಬ್ಬರೂ ಸಹ ಈ ಮೂರು ವಸ್ತುಗಳನ್ನು ಅಡುಗೆಯಲ್ಲಿ ಬಳಸುತ್ತಾರೆ. ಹಾಗಾಗಿ ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ಇವುಗಳನ್ನು ಮಾರುಕಟ್ಟೆಯಿಂದ ತಂದು ಅನೇಕರು ಫ್ರಿಡ್ಜ್‌ನಲ್ಲಿ (refrigerator) ಸ್ಟೋರ್‌ ಮಾಡಿ ಇಡುತ್ತಾರೆ. ಇತರೆ ತರಕಾರಿಯಂತೆ ಶುಂಠಿ, ಬೆಳ್ಳುಳ್ಳಿ ಮತ್ತು  ಈರುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಇಡಬಾರದಂತೆ ಜೊತೆಗೆ ಇವುಗಳನ್ನು ಫ್ರಿಡ್ಜ್‌ನಲ್ಲಿ ಇಡುವ ಯಾವುದೇ ಅವಶ್ಯಕತೆಯೂ ಇಲ್ಲ ಏಕೆಂದರೆ ಇವು ಮೂರು ಒಣ ಪದಾರ್ಥಗಳಾಗಿದ್ದು, ಅವು ಬಹಳ ಕಡಿಮೆ ನೀರನ್ನು ಹೊಂದಿರುತ್ತವೆ ಹಾಗಾಗಿ ಅವು ಬಹು ಬೇಗನೆ ಹಾಳಾಗುವುದಿಲ್ಲ.  ಹಾಗಾದ್ರೆ ಇವುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಏನಾಗುತ್ತದೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಿ.

ಈರುಳ್ಳಿ, ಬೆಳ್ಳುಳ್ಳಿ, ಶುಂಠಿಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಸೂಕ್ತವೇ?

ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿಗಳನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿದಾಗ, ಫ್ರಿಡ್ಜ್‌ನ ತಂಪಾದ ಮತ್ತು ಆರ್ದ್ರ ಗಾಳಿಯು ಈ ಪದಾರ್ಥದೊಳಗೆ ತೇವಾಂಶವನ್ನು ಸೆಳೆಯುತ್ತದೆ. ಈ ವಸ್ತುಗಳು ತೇವಾಂಶಕ್ಕೆ ಒಡ್ಡಿಕೊಂಡಾಗ ಹೈಡ್ರೇಟ್ ಆಗಲು ಪ್ರಾರಂಭಿಸುತ್ತವೆ, ಇದು ಅವುಗಳ ಕೊಳೆಯುವಿಕೆಯನ್ನು ವೇಗಗೊಳಿಸುತ್ತದೆ. ಇದರ ಜೊತೆಗೆ, ರೆಫ್ರಿಜರೇಟರ್‌ನಲ್ಲಿರುವ ಆರ್ದ್ರ ಗಾಳಿಯು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಗೆ ಸಂತಾನೋತ್ಪತ್ತಿ ಮಾಡಲು ಉತ್ತಮ ಜಗವಾಗಿದೆ. ಅದಕ್ಕಾಗಿಯೇ ಕೆಲವೊಮ್ಮೆ ರೆಫ್ರಿಜರೇಟರ್‌ನಲ್ಲಿ ಇರಿಸಲಾದ ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿ ಬೇಗನೇ  ಹಾಳಾಗುತ್ತವೆ. ಬ್ಯಾಕ್ಟೀರಿಯಾ ಅಂಟಿಕೊಂಡ ಪದಾರ್ಥಗಳನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದಲೂ ಸೂಕ್ತವಲ್ಲ.

ಇದನ್ನೂ ಓದಿ: ಮನೆಯಲ್ಲಿ ಹಲ್ಲಿಗಳಿದ್ದರೆ ತುಂಬಾ ಒಳ್ಳೆಯದಂತೆ; ಯಾಕೆ ಗೊತ್ತಾ ?

ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿಯನ್ನು ಎಲ್ಲಿ ಮತ್ತು ಹೇಗೆ ಸಂಗ್ರಹಿಸಬೇಕು?

ಈ ವಸ್ತುಗಳನ್ನು ತೆರೆದ, ಒಣ ಮತ್ತು ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಸಂಗ್ರಹಿಸುವುದು ಉತ್ತಮ. ಅವುಗಳನ್ನು ಬುಟ್ಟಿ ಅಥವಾ ಜಾಲರಿಯ ಪೆಟ್ಟಿಗೆಯಲ್ಲಿ ಇಡುವುದರಿಂದ, ಅವುಗಳಲ್ಲಿ ತೇವಾಂಶ ಸಂಗ್ರಹವಾಗುವುದಿಲ್ಲ ಮತ್ತು ಅವು ದೀರ್ಘಕಾಲ ಸುರಕ್ಷಿತವಾಗಿ ಉಳಿಯುತ್ತವೆ. ಹಾಗೆ ಮಾಡುವುದರಿಂದ, ಅವುಗಳ ಹಾಳಾಗುವ ಸಾಧ್ಯತೆ ಕಡಿಮೆಯಾಗುತ್ತದೆ ಜೊತೆಗೆ ರುಚಿ ಮತ್ತು ಗುಣಮಟ್ಟ ಕೂಡ ಹಾಳಾಗುವುದಿಲ್ಲ.

ಈ ಪದಾರ್ಥಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಯಾವುದೇ ವಿಷಕಾರಿ ರಾಸಾಯನಿಕಗಳು ಉತ್ಪತ್ತಿಯಾಗುವುದಿಲ್ಲ, ಆದರೆ ತಪ್ಪಾಗಿ ಸಂಗ್ರಹಿಸುವುದರಿಂದ ಅವು ಬೇಗನೆ ಹಾಳಾಗುವ ಅಪಾಯ ಹೆಚ್ಚು. ಆದ್ದರಿಂದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸಿಡುವುದು ಸೂಕ್ತ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಈ ಅಭ್ಯಾಸಗಳು ನಿಮ್ಮ ಸಂಪೂರ್ಣ ಜೀವನವನ್ನೇ ನಾಶ ಮಾಡಬಹುದು ಎಚ್ಚರ! – Kannada News | Chanakya Niti: These habits can ruin your entire life, be careful

ನಮ್ಮ ಅಭ್ಯಾಸಗಳಿಂದಲೂ (habits) ನಮ್ಮ ಒಳಿತು ಕೆಡುಕು ನಿರ್ಧಾರವಾಗುತ್ತದೆ. ಅದಕ್ಕಾಗಿಯೇ ಒಳ್ಳೆಯ ಅಭ್ಯಾಸಗಳನ್ನು, ಸದ್ಗುಣಗಳನ್ನು ಬೆಳೆಸಬೇಕು ಎಂದು ಹಿರಿಯರು ಆಗಾಗ್ಗೆ ಹೇಳುವುದು. ಅದರಲ್ಲೂ ಈ ಕೆಲವೊಂದು ಅಭ್ಯಾಸಗಳಿದ್ದರೆ ಜೀವನವೇ ಸರ್ವನಾಶವಾಗುವ ಸಾಧ್ಯತೆ ಇದೆ, ಅಂತಹ ಅಭ್ಯಾಸಗಳನ್ನು ಕೂಡಲೇ ತ್ಯಜಿಸಬೇಕು. ಯುವ ಜನರಂತೂ ಆ ಅಭ್ಯಾಸಗಳನ್ನು ತ್ಯಜಿಸದಿದ್ದರೆ ಖಂಡಿತವಾಗಿಯೂ ಜೀವನದಲ್ಲಿ  ಮುಂದೆ ಬರಲು ಸಾಧ್ಯವಿಲ್ಲ  ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ಹಾಗಿದ್ರೆ ಜೀವನವನ್ನು ಹಾಳು ಮಾಡುವ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಈ ಅಭ್ಯಾಸಗಳು ನಿಮ್ಮ ಜೀವನವನ್ನೇ ಹಾಳು ಮಾಡುತ್ತದೆ

ಮಾದಕ ವಸ್ತುಗಳು: ಮಾದಕ ವಸ್ತುಗಳ ಸೇವನೆಯಿಂದ ಜೀವನವೇ ನಾಶವಾಗಬಹುದು. ಅದರಲ್ಲೂ ಈ ಅಭ್ಯಾಸ
ಯುವಜನರಿಗೆ ಶಾಪವಾಗಿದೆ. ಇದು ಅವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ದುರ್ಬಲಗೊಳಿಸುವುದಲ್ಲದೆ, ಅವರ ಸಮಯವನ್ನು ವ್ಯರ್ಥ ಮಾಡುತ್ತದೆ. ಮಾದಕ ವಸ್ತುಗಳ ವ್ಯಸನವು ಯುವ ಜನರನ್ನು ಕೆಟ್ಟ ಸಹವಾಸಕ್ಕೆ ಮತ್ತಷ್ಟು ಕರೆದೊಯ್ಯುತ್ತದೆ ಮತ್ತು ಅವರು ಎಂದಿಗೂ ಜೀವನದಲ್ಲಿ ಮುಂದೆ ಬರಲು ಸಾಧ್ಯವೇ ಇಲ್ಲ ಎಂದಿದ್ದಾರೆ ಚಾಣಕ್ಯ. ಆದ್ದರಿಂದ ಈ ಅಭ್ಯಾಸವನ್ನು ತ್ಯಜಿಸಿದರೆ ಉತ್ತಮ.

ಸೋಮಾರಿತನ:  ಸೋಮಾರಿತನ ಯುವ ಜನರ ಅತೀ ದೊಡ್ಡ ಶತ್ರು ಎಂದಿದ್ದಾರೆ ಚಾಣಕ್ಯ. ಒಬ್ಬ ಯುವಕ ಯಶಸ್ವಿಯಾಗಲು ಬಯಸಿದರೆ, ಆತ ಸೋಮಾರಿತನ ಎಂಬ ಈ ಶತ್ರುವನ್ನು ತೊಡೆದುಹಾಕಬೇಕು. ಇಲ್ಲದಿದ್ದರೆ, ಆತ ಎಂದಿಗೂ ಯಶಸ್ಸನ್ನು ಪಡೆಯಲು ಸಾಧ್ಯವೇ ಇಲ್ಲ.

ಇದನ್ನೂ ಓದಿ: ಪುರುಷರು ವಿಷಯಗಳನ್ನು ಯಾರ ಬಳಿಯೂ ಶೇರ್‌ ಮಾಡಲೇಬಾರದು

ಕೆಟ್ಟವರ ಸಹವಾಸ: ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಯಾವಾಗಲೂ ಕೆಟ್ಟ ಸಹವಾಸದಿಂದ ದೂರವಿರಬೇಕು. ಏಕೆಂದರೆ ಆತನೂ ದಾರಿ ತಪ್ಪುವ ಸಾಧ್ಯತೆ ಇರುತ್ತದೆ, ಕೆಟ್ಟವರ ಸಹವಾಸದಿಂದ ಹಣ ಮಾತ್ರವಲ್ಲ ಗೌರವವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ.

ಹಣ ಖರ್ಚು ಮಾಡುವುದು: ಅತಿಯಾದ ಹಣ ಖರ್ಚು ಮಾಡುವುದು ಕೂಡ ಒಳ್ಳೆಯ ಅಭ್ಯಾಸವಲ್ಲ, ಇದು ಒಬ್ಬ ವ್ಯಕ್ತಿಯನ್ನು ಬಡತನಕ್ಕೆ ನೂಕುತ್ತದೆ. ಶ್ರೀಮಂತಿಕೆಯನ್ನು ಗಳಿಸಬೇಕು ಎಂಬ ಆಸೆಯಿರುವವರು ಯೋಚಿಸಿ ಖರ್ಚು ಮಾಡಬೇಕು, ಅದರಲ್ಲೂ ಯುವಕರು ಈ ವಿಚಾರದಲ್ಲಿ ತುಂಬಾನೇ ಜಾಗರೂಕರಾಗಿರಬೇಕು ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

4 ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನೇ ಕೊಂದ ಅಣ್ಣ, ಕಾರಣವೇನು? – Kannada News | Groom Murder: Man Kills His Brother For property Dispute at mandya

ಮಂಡ್ಯ, (ಜನವರಿ 16):  ಇದೇ ಜನವರಿ 21ರಂದು ಮದುವೆ (marriage) ಫಿಕ್ಸ್ ಆಗಿತ್ತು. ಹೀಗಾಗಿ ಮದುವೆ ಎಲ್ಲಾ ರೀತಿಯ  ಸಿದ್ಧತೆಗಳು ನಡೆದಿದ್ದವು. ಲಗ್ನ ಪತ್ರಿಕೆ ಸಹ ಸಂಬಂಧಿಕರಿಗೆ ಹಂಚಿ ಮದುವೆಗೆ ಬರಬೇಕೆಂದು ಆಹ್ವಾನ ನೀಡಲಾಗಿತ್ತು. ಆದ್ರೆ, ಮದುವೆಗೆ ಇನ್ನೇನು ನಾಲ್ಕು ದಿನ ಇರುವಾಗಲೇ ಯುವಕ ಮಸಣ ಸೇರಿದ್ದಾನೆ. ಹೌದು.. ಅಣ್ಣನೇ (Brother) ತನ್ನ ಮಕ್ಕಳೊಂದಿಗೆ ಸೇರಿ ತಮ್ಮನನ್ನು 28 ಬಾರಿ ಇರಿದು ಕೊಂದಿರುವ ಘಟನೆ ಘಟನೆ ಮಂಡ್ಯದ (Mandya) ಮಾಯಪ್ಪನಹಳ್ಳಿಯಲ್ಲಿ ನಡೆದಿದೆ. ಯೋಗೇಶ್ (30) ಕೊಲೆಯಾದ ಯುವಕ. ಸಹೋದರ ಲಿಂಗರಾಜು ಹಾಗೂ ಈತನ ಮಕ್ಕಳಾದ ಭರತ್, ದರ್ಶನ್‍ ಈ ಕೊಲೆ ಮಾಡಿದ್ದು, ಇದೀಗ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿದ್ದ ತಮ್ಮನಿಗೆ ಚಟ್ಟ ಕಟ್ಟಿದ ಅಣ್ಣ: ಹಸೆಮಣೆ ಏರಬೇಕಿದ್ದವ ಸೇರಿದ್ದು ಸ್ಮಶಾನಕ್ಕೆ

ಹಲವು ವರ್ಷಗಳಿಂದ ಲಿಂಗರಾಜು ಹಾಗೂ ಕೊಲೆಯಾದ‌ ಯೋಗೇಶ್ ನಡುವೆ ಆಸ್ತಿ ಕಲಹವಿತ್ತು. ಆಸ್ತಿ ವಿಷಯಕ್ಕೆ ಆಗಾಗ ಕುಟುಂಬದಲ್ಲಿ ಜಗಳ ನಡೆಯುತ್ತಿತ್ತು. ಅದೇ ಕಾರಣಕ್ಕೆ ಯೋಗೇಶ್ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಇದೇ ಜನವರಿ 21 ರಂದು ಯೋಗೇಶ್ ಮದುವೆ ನಿಗದಿಯಾಗಿತ್ತು. ಮದುವೆ ಆಹ್ವಾನ ಪತ್ರದಲ್ಲಿ ಅಣ್ಣನ ಹೆಸರನ್ನೂ ಹಾಕಿ ಊರಿಗೆಲ್ಲ ಹಂಚಿದ್ದ. ದುರಾದೃಷ್ಟವಶಾತ್‌ ಅದೇ ಅಣ್ಣನಿಂದ ಯೋಗೇಶ್ ಬರ್ಬರವಾಗಿ ಹತ್ಯೆಯಾಗಿದ್ದು, ನಗು ನಗುತ್ತ ಹೊಸ ಜೀವನ ಆರಂಭಿಸಬೇಕಿದ್ದ ಯೋಗೇಶ್ ಮಸಣ ಸೇರುವಂತಾಗಿದೆ. ಇದರಿಂದ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲ್ಲೆಲ್ಲೂ ಗಿಲ್ಲಿ, ಎಲ್ಲೆಲ್ಲೂ ಗಿಲ್ಲಿ: ಅಭಿಮಾನಿಗಳ ಪ್ರೀತಿಯ ಅಭಿಯಾನ ನೋಡಿ – Kannada News | Bigg Boss Kannada 12: Gilli fans vote campaign in Davangere

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಫಿನಾಲೆಗೆ ಇನ್ನು ಎರಡು ದಿನಗಳಷ್ಟೆ ಬಾಕಿ ಇದೆ. ಗಿಲ್ಲಿ ಗೆಲ್ಲುವ ಫೆವರೇಟ್ ಆಗಿದ್ದಾರೆ. ಅಶ್ವಿನಿ, ಧನುಶ್ ಅವರಿಂದ ಪ್ರತಿಸ್ಪರ್ಧೆಯೂ ಇದೆ. ವೋಟಿಂಗ್ ಲೈನ್ ಈಗಾಗಲೇ ಆರಂಭ ಆಗಿದ್ದು ಭಾನುವಾರ 10 ಗಂಟೆ ವರೆಗೂ ಇಷ್ಟದ ಸ್ಪರ್ಧಿಗಳ ಪರವಾಗಿ ಮತಗಳನ್ನು ಚಲಾಯಿಸಬಹುದಾಗಿದೆ. ಗಿಲ್ಲಿಯ ಅಭಿಮಾನಿಗಳು ಪ್ರೀತಿಯಿಂದ ಗಿಲ್ಲಿ ಪರವಾಗಿ ಮತ ಅಭಿಯಾನ ಆರಂಭಿಸಿದ್ದಾರೆ. ದಾವಣಗೆರೆಯಲ್ಲಿ ಗಿಲ್ಲಿ ಅಭಿಮಾನಿಗಳು ಪೆಂಡಾಲ್-ಮೈಕ್ ಹಾಕಿಸಿ ಗಿಲ್ಲಿ ಪರವಾಗಿ ಮತ ಯಾಚನೆ ಮಾಡಿದ್ದಾರೆ. ರಸ್ತೆಯಲ್ಲಿ ಹೋಗುವವರ ಬಳಿಯೆಲ್ಲ ಮೊಬೈಲ್ ಪಡೆದುಕೊಂಡು ಅವರಿಂದ ಮತ ಚಲಾವಣೆ ಮಾಡಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಫೋಟೋ ಕೇಳಿದ್ದಕ್ಕೆ ‘ಬಂಗಾರ’ದ ಬಳೆಯನ್ನೇ ಕೊಟ್ಟ ಹುಡುಗಿ: ಮೆಟ್ರೋದಲ್ಲೊಂದು ಹೃದಯಸ್ಪರ್ಶಿ ಘಟನೆ – Kannada News | Girl Gifts Bangle to Co Passenger on Bengaluru Metro; Heartwarming Story Trends Online

ಬೆಂಗಳೂರು, ಜನವರಿ 16: ನೂಕು ನುಗ್ಗಲು, ಕೆಲ ಪ್ರಯಾಣಿಕರ ಅಸಂಮಜಸ ವರ್ತನೆಯಂತಯ ವಿಷಯಗಳಿಂದಲೇ ಸದಾ ಸುದ್ದಿಯಲ್ಲಿರುತ್ತಿದ್ದ ಬೆಂಗಳೂರಿನ ನಮ್ಮ ಮೆಟ್ರೋವೀಗ ಹೃದಯ ಸ್ಪರ್ಶಿ ಘಟನೆಯೊಂದರ ಕಾರಣಕ್ಕೆ ಸೋಶಿಯಲ್​​ ಮೀಡಿಯಾಗಳಲ್ಲಿ ಟ್ರೆಂಡಿಂಗ್​​ನಲ್ಲಿದೆ. ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಬ್ಯಾಂಗಲ್​​ ಫೋಟೋ ಕೇಳಿದ್ದಕ್ಕೆ ಹುಡುಗಿಯೊಬ್ಬಳು ಬಳೆಯನ್ನೇ ನೀಡಿರುವ ಘಟನೆ ನಡೆದಿದ್ದು, ಈ ಕುರಿತು ಮಹಿಳೆ ಮಾಡಿರುವ ಪೋಸ್ಟ್​​ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಬಾಲಕಿಯ ನಡೆಯನ್ನು ಹಲವರು ಕೊಂಡಾಂಡಿದ್ದಾರೆ.

ಮಹಿಳೆಯ ಪೋಸ್ಟ್​​ನಲ್ಲಿ ಏನಿದೆ?

ಮೆಟ್ರೋ ಪ್ರಯಾಣದ ವೇಳೆ ನನ್ನ ಪಕ್ಕವೇ ಕುಳಿತಿದ್ಧ ಹುಡುಗಿಯ ಕೈನಲ್ಲಿ ಚಿನ್ನದ ಬಳೆಗಳನ್ನು ಗಮನಿಸಿದೆ. ಅದು ನನಗೆ ಬಹಳ ಇಷ್ಟವಾದ ಕಾರಣ, ಅಂತಹುದ್ದೇ ಬಳೆಯನ್ನು ಮಾಡಿಸಿಕೊಳ್ಳಲು ಅದರ ಫೋಟೋ ತೆಗೆದುಕೊಳ್ಳಬಹುದೇ ಎಂದು ಆಕೆಯನ್ನು ಕೇಳಿದ್ದಷ್ಟೇ. ಆಕೆ ತನ್ನ ಕೈಗಳಲ್ಲಿದ್ದ ಬಳೆಯನ್ನೇ ತೆಗೆದು ನನಗೆ ನೀಡಿದಳು. ಇದರ ವಿನ್ಯಾಸವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅಕ್ಕಸಾಲಿಗನಿಗೆ ಇದು ನೆರವಾಗಬಹುದು ಎಂದಳು. ಅವಳ ನಡೆಯಿಂದ ನಾನು ಆಶ್ಚರ್ಯಕ್ಕೆ ಒಳಗಾದೆ. ಈ ವೇಳೆಗೆ, ಇದು ಬಂಗಾರದ ಬಳೆಯಲ್ಲ ಎಂದು ನಕ್ಕು ಆಕೆ ತಿಳಿಸಿದಳು. ಆಕೆಗಿರುವ ದಯಾ ಗುಣದ ನೆನಪಿಗಾಗಿ ಆ ಬಳೆಯನ್ನು ನಾನು ಸ್ವೀಕರಿಸಿದೆ. ಮೆಟ್ರೋದಲ್ಲಿನ ಎಲ್ಲ ಸನ್ನಿವೇಶಗಳೂ ಕೆಟ್ಟದಾಗಿರಲ್ಲ. ಕೆಲವು ಬಹಳ ಸುಂದರವಾಗಿರುತ್ತವೆ ಎಂದು ಮಹಿಳೆ ಬರೆದುಕೊಂಡಿದ್ದಾರೆ. ಪೋಸ್ಟ್​​ ಜೊತೆಗೆ ಬಳೆಯ ಫೋಟೋವನ್ನೂ ಲಗತ್ತಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಕಂಪನಿಯಲ್ಲಿ 1 ವರ್ಷ ಅನುಭವ ಇರುವವರಿಗೆ 35 ಲಕ್ಷದ ಪ್ಯಾಕೇಜ್? 5 ವರ್ಷ ದುಡಿದವರಿಗೆ ಮರ್ಯಾದೆಯೇ ಇಲ್ಲ

ಇನ್ನು ಮಹಿಳೆ ಮಾಡಿರುವ ಈ ಪೋಸ್ಟ್​​ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಅಭಿಪ್ರಾಯಗಳು, ಮೆಚ್ಚುಗೆಗಳು ವ್ಯಕ್ತವಾಗಿವೆ. ಈ ಪೋಸ್ಟ್ ನನ್ನ ಮುಖದಲ್ಲಿ ನಗು ತರಿಸಿದೆ. ಆ ಹುಡುಗಿ ತುಂಬಾ ಒಳ್ಳೆಯ ಮನಸ್ಸಿನವಳು ಎಂದು ಒಬ್ಬರು ಪ್ರತಿಕ್ರಿಯಿಸಿದ್ದರೆ, ಇಂದು ಇಂಟರ್ನೆಟ್‌ನಲ್ಲಿ ನೋಡಿದ ಅತ್ಯುತ್ತಮ ವಿಷಯ ಇದು ಎಂದು ಮತ್ತೊಬ್ಬರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:58 pm, Fri, 16 January 26

Source link

KSRTC ಬಸ್​​ಗೆ ಹಿಂದಿನಿಂದ ಬೊಲೆರೋ ಪಿಕ್-ಅಪ್ ಡಿಕ್ಕಿ: ಚಾಲಕ ಬದುಕಿದ್ದೇ ಪವಾಡ – Kannada News | Bolero Pick Up Rear Ends KSRTC Bus Near Nelamangala; CCTV Video Goes Viral

ನೆಲಮಂಗಲ, ಜನವರಿ 16: ಚಾಲಕನ ನಿಯಂತ್ರಣ ತಪ್ಪಿ KSRTC ಬಸ್​​ಗೆ ಹಿಂದಿನಿಂದ ಬೊಲೆರೋ ಪಿಕ್-ಅಪ್ ಡಿಕ್ಕಿಯಾಗಿರುವ ಘಟನೆ ನೆಲಮಂಗಲ ತಾಲೂಕಿನ ಕೆರೆಕತ್ತಗಿನೂರು ಗೇಟ್ ಬಳಿ ನಡೆದಿದೆ. ಅಪಘಾತದಲ್ಲಿ ಪವಾಡ ಎಂಬಂತೆ ಬೊಲೆರೋ ಪಿಕ್-ಅಪ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಘಟನೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಕಾಮಗಾರಿ ಹಿನ್ನೆಲೆ ಒಂದೇ ಟ್ರ್ಯಾಕ್​​ನಲ್ಲಿ ವಾಹನಗಳು ಸಂಚಾರ ನಡೆಸುತ್ತಿದ್ದು, ಎರಡು ದಿನದ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಾಲು ಆರೋಗ್ಯಕ್ಕೆ ಒಳ್ಳೆಯದು ಆದ್ರೆ ಎಲ್ಲರಿಗೂ ಅಲ್ಲ! ಹಾಗಿದ್ರೆ ಯಾರು ಕುಡಿಯಬಾರದು?

ಹಾಲು (Milk) ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬುದು ತಿಳಿದ ವಿಚಾರ. ಬಾಲ್ಯದಿಂದಲೂ, ಹಾಲು ಕುಡಿಯುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ, ಮೂಳೆಗಳು ಗಟ್ಟಿಯಾಗುತ್ತದೆ ಮತ್ತು ದೌರ್ಬಲ್ಯವನ್ನು ನಿವಾರಿಸುತ್ತದೆ ಎಂದು ಕೇಳಿರುತ್ತೇವೆ, ಓದಿರುತ್ತೇವೆ. ಹಾಲಿನಲ್ಲಿ ದೇಹದ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುವ ಅನೇಕ ಅಗತ್ಯ ಪೋಷಕಾಂಶಗಳಿವೆ. ಅದಕ್ಕಾಗಿಯೇ ಇದನ್ನು ದೈನಂದಿನ ಆಹಾರದ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಆದರೆ ಬದಲಾಗುತ್ತಿರುವ ಜೀವನಶೈಲಿ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ವಿಚಾರಗಳ ಬಗ್ಗೆ ತಿಳಿಯುವುದು ಅನಿವಾರ್ಯವಾಗಿದೆ. ಹೌದು, ನಾವು ತಿಳಿದಿರುವಂತೆ ಹಾಲು ಎಲ್ಲರಿಗೂ ಒಳ್ಳೆಯದಲ್ಲ, ಅದು ನಿಜವಾಗಿಯೂ ಪ್ರಯೋಜನಕಾರಿಯೇ ಎಂಬ ಪ್ರಶ್ನೆ ಕೂಡ ಉದ್ಭವಿಸುತ್ತದೆ. ಇಂತಹ ಗೊಂದಲಗಳಿಗೆ ಉತ್ತರ ಈ ಸ್ಟೋರಿಯಲ್ಲಿದೆ.

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹಾಲು ಕುಡಿದ ನಂತರ ಜೀರ್ಣಕಾರಿ ಸಮಸ್ಯೆಗಳು ಕಂಡು ಬಂದಿರುವುದನ್ನು ಕೇಳಿರಬಹುದು ಅಥವಾ ನಿಮಗೂ ಈ ಅನುಭವವಾಗಿರಬಹುದು. ಇನ್ನು ಕೆಲವರಲ್ಲಿ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬಂದಿರಬಹುದು. ಹಾಗಾಗಿ ಹಾಲು ಎಲ್ಲರ ಮೇಲೆ ಒಂದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

ಇದನ್ನೂ ಓದಿ: ಈ ಆರೋಗ್ಯ ಸಮಸ್ಯೆ ನಿಮಗಿದ್ದು ರಾತ್ರಿ ಹಾಲು ಕುಡಿಯುತ್ತಿದ್ದರೆ ನೀವು ತುಂಬಾ ಅಪಾಯದಲ್ಲಿದ್ದೀರಿ ಎಂದರ್ಥ!

ಹಾಲು ಎಲ್ಲರಿಗೂ ಒಳ್ಳೆಯದಲ್ಲ ಎಂಬುದಕ್ಕೆ ಕಾರಣವೇನು?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಹಾಲು ಎಲ್ಲರ ದೇಹಕ್ಕೂ ಸರಿಹೊಂದುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಲ್ಯಾಕ್ಟೋಸ್ ಅಸಹಿಷ್ಣುತೆ. ಈ ಸ್ಥಿತಿಯಿರುವ ಜನರಲ್ಲಿ ಲ್ಯಾಕ್ಟೇಸ್ ಕಿಣ್ವ ಕಡಿಮೆ ಮಟ್ಟದಲ್ಲಿರುವುದರಿಂದ ಹಾಲನ್ನು ಜೀರ್ಣಿಸಿಕೊಳ್ಳಲು ತೊಂದರೆಯಾಗುತ್ತದೆ. ಇದು ಗ್ಯಾಸ್, ಹೊಟ್ಟೆ ನೋವು ಮತ್ತು ಅತಿಸಾರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಕೆಲವರಿಗೆ ಹಾಲಿನ ಅಲರ್ಜಿ ಅಥವಾ ಲೋಳೆ ಅಥವಾ ಕಫದ ಸಮಸ್ಯೆ ಕೂಡ ಕಂಡುಬರುತ್ತದೆ. ಇದು ಶೀತ ಸಂಬಂಧಿತ ಅಥವಾ ಉಸಿರಾಟದ ಸಮಸ್ಯೆಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ಜೊತೆಗೆ ಜೀರ್ಣಕ್ರಿಯೆ ಸಮಸ್ಯೆ ಇರುವವರಿಗೂ ಇದು ಒಳ್ಳೆಯದಲ್ಲ. ಕೆಲವರಲ್ಲಿ, ಹಾಲು ಸೇವನೆಯಿಂದ ಚರ್ಮ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ಅದರಲ್ಲಿಯೂ ಎಣ್ಣೆಯುಕ್ತ ಚರ್ಮ ಇರುವವರಿಗೆ, ಮೊಡವೆಗಳಿಂದ ಬಳಲುತ್ತಿರುವವರಿಗೆ ಒಳ್ಳೆಯದಲ್ಲ.

ಹಾಲು ಕುಡಿಯುವುದರಿಂದಾಗುವ ಸಮಸ್ಯೆಗಳನ್ನು ತಡೆಯಲು ಮೊಸರು, ಮಜ್ಜಿಗೆ ಅಥವಾ ಲ್ಯಾಕ್ಟೋಸ್ ಮುಕ್ತ ಹಾಲನ್ನು ಸೇವಿಸಬಹುದು, ಇವು ಜೀರ್ಣಿಸಿಕೊಳ್ಳಲು ಸುಲಭ. ಚರ್ಮ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ, ವೈದ್ಯರು ಅಥವಾ ಪೌಷ್ಟಿಕತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಕ್ಕುಂಡಿಯಲ್ಲಿ ಮೊದಲ ದಿನದ ಉತ್ಖನನ ಅಂತ್ಯ: ಏನು ಸಿಕ್ತು? ಮುಂದೇನು? ಅಧಿಕಾರಿ ಹೇಳಿದ್ದಿಷ್ಟು – Kannada News | Treasure Found: First day Lakkundi Gold Excavation End, here Is officer Explained What Next

ಗದಗ, (ಜನವರಿ 16): ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಚಿನ್ನದನಿಧಿ (Lakkundi Gold Treasure )‌ಪತ್ತೆ ಆಗಿದ್ದು, ಇದರ ಬೆನ್ನಲ್ಲೇ ಇದೀಗ ಲಕ್ಕುಂಡಿಯಲ್ಲಿ ಇಂದಿನಿಂದ ಉತ್ಖನನ (Lakkundi Gold Excavation) ಕಾರ್ಯ ಶುರುವಾಗಿದೆ. ಇಂದು (ಜನವರಿ 16) ಕೋಟೆ ವೀರಭದ್ರೇಶ್ವರ ದೇಗುಲದ ಮುಂದೆ ನಡೆದ ಮೊದಲ ದಿನದ ಉತ್ಖನನ ಅಂತ್ಯವಾಗಿದೆ. ಸುಮಾರು 20 ಕಾರ್ಮಿಕರಿಂದ ದೇಗುಲ ಬಳಿ ಉತ್ಖನನ ನಡೆದಿದ್ದು, 10 ರಿಂದ 12 ಇಂಚಿನಷ್ಟು ಮಣ್ಣು ಅಗೆದು ಜಾಗವನ್ನು ಸ್ವಚಗೊಳಿಸಲಾಗಿದೆ. ಇನ್ನು ಮೊದಲ ದಿನ ಉತ್ಖನನ ಹೇಗಿತ್ತು? ಮುಂದೇನು ಎನ್ನುವುದನ್ನು ಅಧಿಕಾರಿಯೊಬ್ಬರು ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬ್ಯಾನರ್​​ ಗಲಭೆ: ನಾಳೆ ಬಳ್ಳಾರಿಗೆ ಬಿಜೆಪಿ ನಾಯಕರ ದಂಡು; ಮದ್ಯ ಮಾರಾಟ ಬ್ಯಾನ್ – Kannada News | BJP rally condemns banner riots: Sale of liquor banned in Bellari tomorrow

ಬಳ್ಳಾರಿ, ಜನವರಿ 16: ಬಳ್ಳಾರಿ ಬ್ಯಾನರ್ ಗಲಾಟೆ (Bellari Riots) ಬಿಜೆಪಿಗೆ ದೊಡ್ಡ ಅಸ್ತ್ರವಾಗಿದೆ. ಗುಂಡೇಟಿಗೆ ಓರ್ವ ಕಾರ್ಯಕರ್ತ ಸಾವನ್ನಪ್ಪಿರುವ ವಿಚಾರವನ್ನೇ ಮುಂದಿಟ್ಕೊಂಡು ಸರ್ಕಾರದ ವಿರುದ್ಧ ಸಮರಕ್ಕೆ ರೆಡ್ಡಿ ಮತ್ತು ಶ್ರೀರಾಮುಲು ಸಜ್ಜಾಗಿದ್ದಾರೆ. ಹೀಗಾಗಿ ನಗರದಲ್ಲಿ ನಾಳೆ ಬಿಜೆಪಿಯಿಂದ ಬೃಹತ್​ ಪ್ರತಿಭಟನಾ ರ‍್ಯಾಲಿ ನಡೆಯಲಿದೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಈ ಬೆನ್ನಲ್ಲೇ ಇದೀಗ ಮದ್ಯ ಮಾರಾಟ ನಿಷೇಧ (liquor ban) ಮಾಡಿ ಬಳ್ಳಾರಿ ಡಿಸಿ ನಾಗೇಂದ್ರ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

ಬಳ್ಳಾರಿ ಗಲಭೆ ಖಂಡಿಸಿ ನಾಳೆ ಬಳ್ಳಾರಿಯಲ್ಲಿ ಬಿಜೆಪಿಯಿಂದ ಪ್ರತಿಭಟನಾ ಸಮಾವೇಶ ಹಿನ್ನೆಲೆ ನಗರದಲ್ಲಿ ಇಂದು ರಾತ್ರಿ 10 ಗಂಟೆಯಿಂದ ನಾಡಿದ್ದು ಅಂದರೆ ಜನವರಿ 18ರ ಬೆಳಗ್ಗೆ 6 ಗಂಟೆವರೆಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿರ್ಬಂಧಿಸಿ ಬಳ್ಳಾರಿ ಡಿಸಿ ನಾಗೇಂದ್ರ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

ಆದೇಶದಲ್ಲೇನಿದೆ?

ಜನವರಿ 1ರಂದು ಶ್ರೀ ವಾಲ್ಮೀಕಿ ಮಹರ್ಷಿರವರ ಪುತ್ಥಳಿ ಅನಾವರಣ ಕಾರ್ಯಕ್ರಮದ ನಿಮಿತ್ತ ಹಾಕಿದ್ದ ಬ್ಯಾನರ್ ವಿಷಯವಾಗಿ ಗುಂಪು ಘರ್ಷಣೆ ನಡೆದಿದ್ದು, ಈ ಸಂಬಂಧ ಜನವರಿ 17ರಂದು ಬೆಳಿಗ್ಗೆ 10:30 ಗಂಟೆಗೆ ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಇತರೇ ಪ್ರಮುಖ ರಾಜ್ಯ ನಾಯಕರು ಹಾಗೂ ಜಿಲ್ಲಾ ನಾಯಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಬಳ್ಳಾರಿ ನಗರದ ಎಪಿಎಂಸಿ ಕೃಷಿ ಮಾರುಕಟ್ಟೆಯ ಆವರಣದಲ್ಲಿರುವ ಕವರ್ಡ್ ಯಾಕ್ಷನ್ ಪ್ಲಾಟ್ ಫಾರಂನಲ್ಲಿ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: ಬಳ್ಳಾರಿ ಗಲಭೆ: ನಾಳೆ ನಡೆಯಲಿರುವ ಬಿಜೆಪಿ ಬೃಹತ್​ ಪ್ರತಿಭಟನೆ ರ‍್ಯಾಲಿ ಬಗ್ಗೆ ಎಸ್​​ಪಿ ಹೇಳಿದ್ದಿಷ್ಟು

ಈ ಹಿನ್ನೆಲೆ ಬಳ್ಳಾರಿ ನಗರದಾದ್ಯಂತ ಪ್ರತಿಭಟನಾ ಸಭೆಯು ಶಾಂತ ರೀತಿಯಿಂದ ನಡೆಯುವ ಸಲುವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದ್ದು, ಈ ಬಂದೋಬಸ್ತ್ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜನವರಿ 17ರಂದು ಬೆಳಿಗ್ಗೆ 06 ಗಂಟೆಯಿಂದ ಜನವರಿ 18 ರ ಬೆಳಿಗ್ಗೆ 06 ಗಂಟೆಯವರೆಗೆ ಮದ್ಯದಂಗಡಿ, ಬಾರ್, ರೆಸ್ಟೋರೆಂಟ್ ಮತ್ತು ಇತರೆ ಸ್ಥಳಗಳಗಳಲ್ಲಿ ಮದ್ಯ ಮಾರಾಟ ಹಾಗೂ ಸಾಗಾಣಿಕೆ ಮಾಡದಂತೆ ಮತ್ತು ಮದ್ಯದಂಗಡಿಗಳನ್ನು ಬಳ್ಳಾರಿ ನಗರದಾದ್ಯಂತ ಮುಚ್ಚುವಂತೆ ನಿಷೇಧಾಜ್ಞೆ ಹೊರಡಿಸುವಂತೆ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link