ಮಾರಿ ಹಬ್ಬಕ್ಕೆಂದು ಹೋದಾತ ಸಿಕ್ಕಿದ್ದು ಹೆಣವಾಗಿ: ಬರ್ಬರವಾಗಿ ಕೊಂದು ಶವ ಸುಟ್ಟರಾ ದುಷ್ಟರು? – Kannada News | Burned Body of Man Found in Davanagere; Family Suspect Murder
ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ ದಾವಣಗೆರೆ, ಜನವರಿ 16: ಹೋರಿ ಹಬ್ಬಕ್ಕೆಂದು ತೆರಳಿದ್ದ ವ್ಯಕ್ತಿಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ದಾವಣಗೆರೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಯ ಸಮೀಪ ನಡೆದಿದೆ. ಹೋಟೆಲ್ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಬೈರನಹಳ್ಳಿ ಗ್ರಾಮದ ಚೇತನ್ (31) ಮೃತ ವ್ಯಕ್ತಿಯಾಗಿದ್ದು, ಮೇಲ್ನೋಟಕ್ಕೆ ಇದೊಂದು ಕೊಲೆ ಎಂಬ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಹೆಚ್ಚಿನ ತನಿಖೆಗೆ ಪೊಲೀಸರು ಮುಂದಾಗಿದ್ದು, ಯುವಕನ ಸಾವಿಗೆ ನಿಖರ ಕಾರಣ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. 10 ವರ್ಷಗಳಿಂದ ಬೆಂಗಳೂರಿನ ಹೋಟೇಲ್ನಲ್ಲಿ ಅಡುಗೆ…