ಕಾರು ಹಾಗೂ ಡಂಪರ್ ಟ್ರಕ್ ನಡುವೆ ಡಿಕ್ಕಿ, ಹೊತ್ತಿಕೊಂಡ ಬೆಂಕಿ, ಮೂವರು ಸಜೀವದಹನ , ಐವರ ಸ್ಥಿತಿ ಗಂಭೀರ – Kannada News | Rajasthan Tragedy: Fire Breaks Out After Collision, Casualties Reported
ಚುರು, ಏಪ್ರಿಲ್ 24: ಕಾರು ಹಾಗೂ ಡಂಪರ್ ಟ್ರಕ್ ನಡುವೆ ಡಿಕ್ಕಿ ಸಂಭವಿಸಿ, ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಸಜೀವದಹನವಾಗಿದ್ದು, ಐವರ ಸ್ಥಿತಿ ಗಂಭೀರವಾಗಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ. ಹಮೀರ್ವಾಸ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಪಿಲಾನಿ-ಸಾದುಲ್‌ಪುರ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮದುವೆಯಲ್ಲಿ ಭಾಗವಹಿಸಿ ಪಿಲಾನಿಯಿಂದ ಹಿಂದಿರುಗುತ್ತಿದ್ದ ಮಹೀಂದ್ರಾ ಬೊಲೆರೊ ತ್ರಿಪಾಲಿ ಟೋಲ್ ಪ್ಲಾಜಾ ಬಳಿ ಡಂಪರ್ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಎರಡೂ ವಾಹನಗಳಿಗೂ ಕ್ಷಣದಲ್ಲಿ ಬೆಂಕಿ ತಗುಲಿತ್ತು….