Category Archives: Blog

Your blog category

ದೇವರಿಗೆ ಕಣ್ಣಿಲ್ಲ ಎಂದು ದೂರುವ ಮುನ್ನ ಈ ಸ್ಟೋರಿ ನೋಡಿ ! ಭಗವಂತನ ಅನುಗ್ರಹ ಪಡೆಯಲು ಬೇಕಿಲ್ಲ ವಿಶೇಷ ಯೋಗ್ಯತೆ – Kannada News | Divine Intervention: Understanding the Power of Heartfelt Pleas

ಬೆಂಗಳೂರು. ಏ.23: ನಮ್ಮ ದೈನಂದಿನ ಜೀವನದಲ್ಲಿ ಕೇಳುವ ನುಡಿಗಳ ಹಿಂದಿರುವ ಆಳವಾದ ತತ್ವಗಳನ್ನು ಅನಾವರಣಗೊಳಿಸುತ್ತದೆ. “ದೇವರಿಗೆ ಕಣ್ಣಿಲ್ಲವಾ” ಎಂಬ ಲೋಕರೂಢಿ ಮಾತು ಇಂತಹ ಒಂದು ವಿಶೇಷ ಮಹತ್ವವನ್ನು ಹೊಂದಿದೆ. ಈ ಮಾತನ್ನು ನಾವು ಯಾವಾಗಲು ನೋವು, ಅಸಹಾಯಕತೆ, ಅಥವಾ ಅನ್ಯಾಯಕ್ಕೆ ಒಳಗಾದಾಗ, ಮನದಾಳದಿಂದ ಹೊರಡುವ ಭಾವನಾತ್ಮಕ ಅಭಿವ್ಯಕ್ತಿಯಾಗಿ ಬಳಸುತ್ತೇವೆ. ಇದು ಕೇವಲ ಒಂದು ವಾಕ್ಯವಲ್ಲ, ಬದಲಿಗೆ ಯಾವ ಜಪ, ತಪ, ಪೂಜೆ ಇಲ್ಲದೆ, ಹೃದಯದಿಂದ ಹೊರಹೊಮ್ಮುವ ತೀವ್ರವಾದ ಭಾವನೆಯನ್ನು ಪ್ರತಿನಿಧಿಸುತ್ತದೆ. ಸಂಕಷ್ಟದ ಸಮಯದಲ್ಲಿ, ನಾವು ಎಲ್ಲ ರೀತಿಯಿಂದಲೂ ಕುಗ್ಗಿ ಹೋದಾಗ, ನ್ಯಾಯಯುತವಾಗಿ ನಡೆದುಕೊಂಡಿದ್ದರೂ ಕಷ್ಟಗಳು ಬಂದಾಗ ಈ ಮಾತು ಬರುತ್ತದೆ. ಈ ವಾಕ್ಯಶಕ್ತಿಗೆ ಯಾವುದೇ ವಿಶೇಷ ಯೋಗ್ಯತೆ, ಮಹನೀಯತೆ ಅಥವಾ ತಪಸ್ವಿಯ ಸ್ಥಾನ ಅಗತ್ಯವಿಲ್ಲ. ಸಾಮಾನ್ಯ ಮನುಷ್ಯರ ನೈಜ ಅಳಲು ಇದು. ಈ ಮಾತನ್ನು ಉಚ್ಚರಿಸಿದಾಗ ಭಗವಂತನ ಅನುಗ್ರಹವು ತಕ್ಷಣವೇ ಲಭಿಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಸಿಲ ಬೇಗೆಗೆ ಮನೆಗಳಿಗೆ ಲಗ್ಗೆ ಇಡುತ್ತಿವೆ ವಿಷಸರ್ಪಗಳು! ಇರಲಿ ಎಚ್ಚರ – Kannada News | Bengaluru Heatwave: Poisonous Snakes Entering Houses to Escape Heat; Safety Tips for Parents and Residents

ಬೆಂಗಳೂರು, ಏಪ್ರಿಲ್ 23: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಈ ಬಾರಿ ಸೂರ್ಯನ ತಾಪ ದಾಖಲೆ ಮಟ್ಟಕ್ಕೆ ಏರಿದೆ. ಈಗಾಗಲೇ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, 38 ಡಿಗ್ರಿ ಸೆಲ್ಸಿಯಸ್ ವರೆಗೂ ಏರಿಕೆಯಾಗಬಹುದು ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಈ ರಣಬಿಸಿಲಿನ ಬೇಗೆಗೆ ಮನುಷ್ಯರು ಮಾತ್ರವಲ್ಲದೆ, ಮೂಕಪ್ರಾಣಿಗಳೂ ತತ್ತರಿಸುತ್ತಿವೆ. ಮುಖ್ಯವಾಗಿ ಹುತ್ತದೊಳಗಿನ ಶಾಖ ತಾಳಲಾರದೆ ವಿಷಕಾರಿ ಹಾವುಗಳು (Snakes) ತಂಪಾದ ಜಾಗ ಹುಡುಕುತ್ತಾ ಮನೆಗಳಿಗೆ ನುಗ್ಗುತ್ತಿವೆ. ಶೂಗಳ ಒಳಗೆ, ಅಡುಗೆ ಮನೆ, ಬಾತ್‌ರೂಮ್‌ ಹಾಗೂ ವಾಹನಗಳ ಎಂಜಿನ್ ಭಾಗದಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ನಗರವಾಸಿಗಳಲ್ಲಿ ಭೀತಿ ಸೃಷ್ಟಿಸಿದೆ.

ಹಾವುಗಳು ಮರಿ ಮಾಡುವ ಸಮಯ: ಎಚ್ಚರ ಅಗತ್ಯ

ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಹಾವುಗಳು ಮೊಟ್ಟೆಯಿಟ್ಟು ಮರಿ ಮಾಡುವ ಸಮಯ. ಹೀಗಾಗಿ ಈ ಅವಧಿಯಲ್ಲಿ ಹಾವುಗಳ ಸಂಚಾರ ಹೆಚ್ಚಾಗಿರುತ್ತದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಅಥವಾ ಯೂಟ್ಯೂಬ್ ನೋಡಿ ತಾವೇ ಹಾವು ಹಿಡಿಯಲು ಮುಂದಾಗುವವರ ಸಂಖ್ಯೆ ಹೆಚ್ಚಿದೆ. ಇದು ಅತ್ಯಂತ ಅಪಾಯಕಾರಿ. ಇದರಿಂದ ಹಾವುಗಳಿಗೆ ಹಾನಿಯಾಗುವುದಲ್ಲದೆ, ಅನಾಹುತಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಉರಗ ತಜ್ಞ ಮೋಹನ್ ಎಚ್ಚರಿಕೆ ನೀಡಿದ್ದಾರೆ.

ಮಕ್ಕಳ ಬಗ್ಗೆ ಇರಲಿ ವಿಶೇಷ ನಿಗಾ

ಶಾಲೆಗಳಿಗೆ ಬೇಸಿಗೆ ರಜೆ ನೀಡಿರುವುದರಿಂದ ಮಕ್ಕಳು ಮನೆಯಲ್ಲಿ ಅಥವಾ ಕಾಂಪೌಂಡ್ ಆವರಣದಲ್ಲಿ ಆಟವಾಡುತ್ತಿರುತ್ತಾರೆ. ಸಣ್ಣ ಮಕ್ಕಳಿಗೆ ಹಾವುಗಳ ಅಪಾಯದ ಬಗ್ಗೆ ಅರಿವಿರುವುದಿಲ್ಲ. ಪೋಷಕರು ಕೆಲಸಕ್ಕೆ ಹೋದಾಗ ಮಕ್ಕಳು ಒಂಟಿಯಾಗಿ ಆಟವಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಬಿಸಿಲು ಆರಂಭವಾದ ಮೇಲೆ ಮಕ್ಕಳನ್ನು ಹೊರಗೆ ಕಳಿಸಲು ಭಯವಾಗುತ್ತಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಏನೇನು ಮುನ್ನೆಚ್ಚರಿಕೆ ವಹಿಸಬೇಕು?

  • ಮನೆಯ ಸುತ್ತಮುತ್ತ ಇರುವ ಹಳೆಯ ವಸ್ತುಗಳು, ಪ್ಲಾಸ್ಟಿಕ್ ಹಾಗೂ ಕಸದ ರಾಶಿಯನ್ನು ತಕ್ಷಣ ವಿಲೇವಾರಿ ಮಾಡಿ.
  • ಹೂದಾನಿಗಳನ್ನು (Flower Pots),  ಗಿಡಗಳ ಪಾಟ್​​ಗಳನ್ನು ಸ್ವಚ್ಛವಾಗಿಡಿ, ಅಲ್ಲಿ ತೇವಾಂಶ ಇರುವುದರಿಂದ ಹಾವುಗಳು ಆಶ್ರಯ ಪಡೆಯಬಹುದು.
  • ಶೂಗಳನ್ನು ಧರಿಸುವ ಮುನ್ನ ಅವುಗಳನ್ನು ಚೆನ್ನಾಗಿ ಕೊಡವಿ ಪರೀಕ್ಷಿಸಿ.
  • ಮನೆಯ ಬಾಗಿಲುಗಳ ಕೆಳಭಾಗದಲ್ಲಿ ಸಣ್ಣ ಸಂದಿ ಇಲ್ಲದಂತೆ ನೋಡಿಕೊಳ್ಳಿ.
  • ಹಾವು ಕಾಣಿಸಿಕೊಂಡರೆ ಕೂಡಲೇ ಬಿಬಿಎಂಪಿ ವನ್ಯಜೀವಿ ವಿಭಾಗ ಅಥವಾ ನುರಿತ ಉರಗ ತಜ್ಞರಿಗೆ ಕರೆ ಮಾಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇವಲ 227 ಎಸೆತಗಳು… ವೈಭವ್ ಆರ್ಭಟಕ್ಕೆ ಐಪಿಎಲ್ ದಾಖಲೆ ಉಡೀಸ್ – Kannada News | Vaibhav Sooryavanshi Creates New Record In IPL With Just 227 Balls

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವೈಭವ್ ಸೂರ್ಯವಂಶಿ (Vaibhav Sooryavanshi) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಕೇವಲ 227 ಎಸೆತಗಳಲ್ಲಿ ಎಂಬುದು ವಿಶೇಷ. ಈ 227 ಎಸೆತಗಳ ಮೂಲಕ ವೈಭವ್ ಮುರಿದಿರುವುದು ಗ್ಲೆನ್ ಮ್ಯಾಕ್ಸ್​​ವೆಲ್ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯನ್ನು..!

Source link

‘ಮಗು ಜನಿಸಿ ಏಳು ತಿಂಗಳಾಗಿದೆ’; ಇಷ್ಟು ದಿನ ವಿಷಯ ಮುಚ್ಚಿಟ್ಟಿದ್ದೇಕೆ ಮಂಜು ಪಾವಗಡ? – Kannada News | Bigg Boss Winner Manju Pavagada Welcomes Son 7 Months Ago, Kept Quiet

ಮಂಜು ಪಾವಗಡ ಅವರು (Manju Pavagada) 2024ರಲ್ಲಿ ನಂದಿನ ಎಂಬುವವರ ಜೊತೆ ವಿವಾಹ ಆದರು. ಸರಳವಾಗಿ ಅವರ ಮದುವೆ ನೆರವೇರಿತು. ಏಳು ತಿಂಗಳ ಹಿಂದೆ ಅವರು ತಂದೆಯಾಗಿದ್ದಾರೆ. ಆದರೆ, ಈ ವಿಷಯವನ್ನು ಅವರು ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಈ ವಿಷಯವನ್ನು ಅವರು ಈಗ ಹೇಳಿಕೊಂಡಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇಷ್ಟು ದಿನ ಖುಷಿ ಸುದ್ದಿಯನ್ನು ಯಾಕೆ ರಿವೀಲ್ ಮಾಡಿರಲಿಲ್ಲ ಎಂಬ ವಿಷಯವನ್ನು ಕೂಡ ಅವರು ಹೇಳಿಕೊಂಡಿದ್ದಾರೆ.

ಸಾಮಾನ್ಯವಾಗಿ ಚಿತ್ರರಂಗದವರು ಚಿತ್ರರಂಗದವರನ್ನೇ ಮದುವೆ ಆಗುತ್ತಾರೆ. ಆದರೆ, ಮಂಜು ಪಾವಗಡ ಆ ರೀತಿ ಅಲ್ಲ. ಅವರು, ಚಿತ್ರರಂಗದ ಜೊತೆ ನಂಟು ಇಲ್ಲದ ಹುಡುಗಿಯನ್ನು ಮದುವೆ ಆಗಿದ್ದಾರೆ. ಮಂಜು ಪತ್ನಿ ನಂದಿನಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 2024ರಲ್ಲಿ ಈ ಮದುವೆ ಸರಳವಾಗಿ ನಡೆಯಿತು. ಈಗ ಇವರ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ.

‘ಗಂಡು ಮಗು ಆಗಿ ಏಳು ತಿಂಗಳಾಗಿದೆ. ಹೇಳೋಕೆ ಸಮಯ ಸಿಕ್ಕಿರಲಿಲ್ಲ, ಹಾಗಾಗಿ ಹೇಳಿಲ್ಲ. ಆತ ತುಂಬಾ ತರ್ಲೆ ಮಾಡ್ತಾನೆ’ ಎಂದು ಮಂಜು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಈಗ ಎಲ್ಲರೂ ಅವರಿಗೆ ಅಭಿನಂದನೆ ತಿಳಿಸುತ್ತಾ ಇದ್ದಾರೆ.

ಇದನ್ನೂ ಓದಿ: ಮಂಜು ಪಾವಗಡ ಮದುವೆಯಲ್ಲಿ ಶುಭ ಪೂಂಜಾ, ವರನ ಕೆನ್ನೆ ಹಿಂಡಿದ ನಟಿ

ಮಂಜು ಪಾವಗಡ ಅವರು ಹಾಸ್ಯ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಗಮನ ಸೆಳೆದರು. ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ವಿನ್ನರ್ ಕೂಡ ಹೌದು. ಮಂಜು ಪಾವಗಡ ಅವರು ಕಲರ್ಸ್ ಕನ್ನಡದ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಅಂತರಪಟ’ ಧಾರಾವಾಹಿಯಲ್ಲಿ ಅವರು ನೆಗೆಟಿವ್ ರೋಲ್ ಮಾಡಿದ್ದರು.ಈಗ ಅವರು ‘ಜೆರಾಕ್ಸ್’ ಹೆಸರಿನ ಸರಣಿಯಲ್ಲಿ ನಟಿಸಿದ್ದಾರೆ. ‘ಬ್ಲಿಂಕ್‌’ ಖ್ಯಾತಿಯ ಶ್ರೀನಿಧಿ ಬೆಂಗಳೂರು ಈ ಸರಣಿಗೆ ನಿರ್ದೇಶನ ಮಾಡಿದ್ದಾರೆ. ನಾಗಭೂಷಣ, ಪಾಯಲ್‌ ಚೆಂಗಪ್ಪ, ಮಂಜು ಪಾವಗಡ, ಓಂ ಪ್ರಕಾಶ್‌ ರಾವ್‌, ಯಶವಂತ್‌ ಶೆಟ್ಟಿ, ಮೊದಲಾದವರು ಇದರಲ್ಲಿ ನಟಿಸಿದ್ದಾರೆ. ಏಪ್ರಿಲ್‌ 24ರಿಂದ ಈ ವೆಬ್‌ ಸರಣಿಯನ್ನು ಜೀ5 ಒಟಿಟಿಯಲ್ಲಿ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿಮ್ಮ ನಗರದ ಗಾಳಿ ಎಷ್ಟು ಶುದ್ಧವಾಗಿದೆ? ಬೆಂಗಳೂರು, ಮೈಸೂರು, ಹುಬ್ಬಳ್ಳಿಯ ಇಂದಿನ ವಾಯು ಗುಣಮಟ್ಟ ಹೇಗಿದೆ? – Kannada News | Bengaluru AQI Improves Post Rain; Madikeri Cleanest, Kalaburagi Moderate Air

ಬೆಂಗಳೂರು, ಏ.23: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಇಂದು ವಾಯು ಗುಣಮಟ್ಟವು ಮಿಶ್ರಫಲ ನೀಡಿದೆ. ಕಳೆದ ರಾತ್ರಿ ನಗರದ ಕೆಲವು ಭಾಗಗಳಲ್ಲಿ ಬಿದ್ದ ಹಗುರ ಮಳೆಯಿಂದಾಗಿ ಬೆಂಗಳೂರಿನ ಗಾಳಿಯ ಗುಣಮಟ್ಟವು ‘ತೃಪ್ತಿದಾಯಕ’ (Satisfactory) ಮಟ್ಟಕ್ಕೆ ತಲುಪಿದೆ. ಆದರೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಧೂಳಿನ ಪ್ರಮಾಣ ಹೆಚ್ಚಾಗಿದೆ. ನಗರದ ಸರಾಸರಿ AQI 78 ದಾಖಲಾಗಿದೆ. ಸಿಲ್ಕ್ ಬೋರ್ಡ್ ಮತ್ತು ಜಯನಗರದಲ್ಲಿ ಮಾಲಿನ್ಯ ಸ್ವಲ್ಪ ಹೆಚ್ಚಿದ್ದರೆ, ಸಿಟಿ ರೈಲ್ವೆ ನಿಲ್ದಾಣ ಮತ್ತು ಪೀಣ್ಯ ಭಾಗದಲ್ಲಿ ಗಾಳಿ ಶುದ್ಧವಾಗಿದೆ.

ಕರಾವಳಿ ನಗರಿ ಮಂಗಳೂರಿನಲ್ಲಿ AQI 54 ದಾಖಲಾಗಿದ್ದು, ಅತ್ಯಂತ ಶುದ್ಧವಾದ ಗಾಳಿ ಲಭ್ಯವಿದೆ. ಸಮುದ್ರ ತೀರದ ಗಾಳಿಯಿಂದಾಗಿ ಇಲ್ಲಿನ ವಾತಾವರಣ ಹಿತಕರವಾಗಿದೆ. ಇಲ್ಲಿನ ವಾಯು ಗುಣಮಟ್ಟ 115 ಕ್ಕೆ ಏರಿಕೆಯಾಗಿದ್ದು, ‘ಸಾಧಾರಣ’ (Moderate) ಮಟ್ಟದಲ್ಲಿದೆ. ರಸ್ತೆ ಕಾಮಗಾರಿ ಮತ್ತು ಒಣ ಹವಾಮಾನದಿಂದಾಗಿ ಧೂಳಿನ ಕಣಗಳು ಹೆಚ್ಚಾಗಿವೆ.

ಉತ್ತರ ಕರ್ನಾಟಕದ ಈ ಭಾಗದಲ್ಲಿ AQI 132 ದಾಖಲಾಗಿದೆ. ಬಿಸಿಲಿನ ತಾಪ ಮತ್ತು ವಾಹನಗಳ ಹೊಗೆಯಿಂದಾಗಿ ಉಸಿರಾಟದ ಸಮಸ್ಯೆ ಇರುವವರು ಜಾಗರೂಕರಾಗಿರಲು ಸೂಚಿಸಲಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ AQI 62 ಇದ್ದು, ಗಾಳಿಯು ಶುದ್ಧವಾಗಿದೆ. ಇನ್ನು ಮಡಿಕೇರಿಯಲ್ಲಿ ವಾಯು ಗುಣಮಟ್ಟ ಅತ್ಯಂತ ಸುಸ್ಥಿತಿಯಲ್ಲಿದೆ. AQI 42 (ಉತ್ತಮ) ದಾಖಲಾಗಿದೆ. ಕಾಫಿ ತೋಟಗಳು ಮತ್ತು ಅರಣ್ಯ ಪ್ರದೇಶ ಹೆಚ್ಚಿರುವುದರಿಂದ ರಾಜ್ಯದಲ್ಲೇ ಅತ್ಯಂತ ಶುದ್ಧವಾದ ಗಾಳಿ ಇಲ್ಲಿ ಲಭ್ಯವಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಜೆ ಮಳೆ ಫಿಕ್ಸ್: ಕರಾವಳಿ ಜನರಿಗೆ ಸೆಖೆಯ ಕಾಟ; ಉಷ್ಣಾಂಶದ ಮಟ್ಟ ಏರಿಕೆಯಾಗುವ ಸಾಧ್ಯತೆ

ಚಿಕ್ಕಮಗಳೂರಿನಲ್ಲಿ ಗಾಳಿಯ ಮಟ್ಟ ತೃಪ್ತಿದಾಯಕವಾಗಿದೆ. AQI 55 (ತೃಪ್ತಿದಾಯಕ) ದಾಖಲಾಗಿದೆ. ಪ್ರವಾಸಿ ತಾಣಗಳಲ್ಲಿ ವಾತಾವರಣ ಹಿತಕರವಾಗಿದೆ. ಹಾಸನದಲ್ಲೂ ಸರಾಸರಿ AQI 68 ಇದ್ದು, ಗಾಳಿಯು ಶುದ್ಧವಾಗಿದೆ. ನಗರ ಪ್ರದೇಶಗಳಲ್ಲಿ ವಾಹನ ಸಂಚಾರದಿಂದಾಗಿ ಅಲ್ಪ ಪ್ರಮಾಣದ ಧೂಳು ಕಂಡುಬಂದರೂ ಆರೋಗ್ಯಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ಗುಲ್ಬರ್ಗದಲ್ಲಿ ವಾಯು ಗುಣಮಟ್ಟ 135 (ಸಾಧಾರಣ) ದಾಖಲಾಗಿದೆ. ತೀವ್ರ ಬಿಸಿಲು ಮತ್ತು ಒಣ ಹವೆಯಿಂದಾಗಿ ಗಾಳಿಯಲ್ಲಿ ಧೂಳಿನ ಕಣಗಳ ಪ್ರಮಾಣ ಹೆಚ್ಚಿದೆ. ಉಸಿರಾಟದ ಸಮಸ್ಯೆ ಇರುವವರು ಜಾಗರೂಕರಾಗಿರುವುದು ಒಳಿತು. ಇಲ್ಲಿ AQI 128 ದಾಖಲಾಗಿದ್ದು, ‘ಸಾಧಾರಣ’ ಮಟ್ಟದಲ್ಲಿದೆ. ಇಲ್ಲಿನ ಉಷ್ಣ ವಿದ್ಯುತ್ ಸ್ಥಾವರ ಹಾಗೂ ಗಣಿಗಾರಿಕೆ ಚಟುವಟಿಕೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಲಿನ್ಯದ ಮಟ್ಟ ತುಸು ಏರಿಕೆಯಾಗಿದೆ.

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka SSLC 10th Result 2026: ಇಂದು ಮಧ್ಯಾಹ್ನ 12ಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶ – Kannada News | KSEAB Karnataka SSLC 10th Result 2026 to Release today; check direct link at karresults.nic.in kseab.karnataka.gov.in for ranking and score

ಎಸ್‌ಎಸ್‌ಎಲ್‌ಸಿ ಫಲಿತಾಂಶ 2026 (ಸಾಂದರ್ಭಿಕ ಚಿತ್ರ)Image Credit source: MediaForge AI

ಬೆಂಗಳೂರು, ಏಪ್ರಿಲ್ 23: ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತರದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ. ಇಂದು (ಏಪ್ರಿಲ್ 23, 2026) ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ.

8.65 ಲಕ್ಷ ವಿದ್ಯಾರ್ಥಿಗಳ ಭವಿಷ್ಯ

ಈ ಬಾರಿ ರಾಜ್ಯದ ಒಟ್ಟು 2,870 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಒಟ್ಟು 8,65,988 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರ ಶೈಕ್ಷಣಿಕ ಬದುಕಿನ ಮೊದಲ ಮಹತ್ವದ ತಿರುವು ಇಂದು ನಿರ್ಧಾರವಾಗಲಿದೆ. ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಲ್ಲಿ ತಮ್ಮ ಅಂಕಪಟ್ಟಿಗಳನ್ನು ವೀಕ್ಷಿಸಬಹುದಾಗಿದೆ.

ತೃತೀಯ ಭಾಷೆ ಹಿಂದಿಗೆ ಅಂಕ

ತೃತೀಯ ಭಾಷೆ ಹಿಂದಿಗೆ ಅಂಕಗಳ ಬದಲಾಗಿ ಗ್ರೇಡ್ ನೀಡಲು ಸರ್ಕಾರ ಈ ಹಿಂದೆ ಚಿಂತಿಸಿತ್ತು. ಆದರೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅಂಕಗಳನ್ನೇ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಕುರಿತು ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಇಂದಿನಿಂದ ಸಿಇಟಿ ಪರೀಕ್ಷೆ

ಎಸ್‌ಎಸ್‌ಎಲ್‌ಸಿ ಫಲಿತಾಂಶದ ಜೊತೆಜೊತೆಗೆ ಇಂದಿನಿಂದ ರಾಜ್ಯಾದ್ಯಂತ ಸಿಇಟಿ (CET) ಪರೀಕ್ಷೆಗಳೂ ಆರಂಭವಾಗುತ್ತಿವೆ. ಈ ಬಾರಿ ದಾಖಲೆ ಮಟ್ಟದ ಅಂದರೆ 3,30,000 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಬೆಂಗಳೂರಿನ 163 ಕೇಂದ್ರಗಳಲ್ಲಿ ಅತಿ ಹೆಚ್ಚು ಅಂದರೆ 77,604 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಇದನ್ನೂ ಓದಿ: ಇಂದು SSLC ಫಲಿತಾಂಶ: ಕುಳಿತಲ್ಲೇ ರಿಸಲ್ಟ್ ಚೆಕ್​ ಮಾಡುವುದ್ಹೇಗೆ? ಇಲ್ಲಿದೆ ವಿಧಾನ

ಕಟ್ಟುನಿಟ್ಟಿನ ಭದ್ರತೆ

ಪರೀಕ್ಷಾ ಅಕ್ರಮಗಳನ್ನು ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್‌ಗಳನ್ನು ಅಳವಡಿಸಲಾಗಿದೆ. ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ. ಕೆಇಎ (KEA) ಕಚೇರಿಯಲ್ಲಿ ವಿಶೇಷ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಿ ಪರೀಕ್ಷೆಯ ಮೇಲೆ ನಿಗಾ ಇಡಲಾಗುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ

Published On – 6:42 am, Thu, 23 April 26

Source link

ಯಾವ ರಾಶಿಗೆ ಇಂದು ರಾಯರ ಅನುಗ್ರಹ: ತಪ್ಪದೇ ಈ ಸೇವೆಯನ್ನು ಮಾಡಿ

ಬೆಂಗಳೂರು, ಏ.23: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 23 ಏಪ್ರಿಲ್ 2026, ಗುರುವಾರದ ದ್ವಾದಶ ರಾಶಿಗಳ ದೈನಂದಿನ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವನಾಂ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ಸಪ್ತಮಿ, ಪುನರ್ವಸು ನಕ್ಷತ್ರ, ಸುಕರ್ಮ ಯೋಗ ಮತ್ತು ಗರಜಕರಣಗಳಿಂದ ಕೂಡಿರುವ ಈ ದಿನದ ಮಹತ್ವವನ್ನು ಅವರು ವಿವರಿಸಿದ್ದಾರೆ. ಇಂದು ರವಿ ಮೇಷ ರಾಶಿಯಲ್ಲಿ ಮತ್ತು ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ. ಈ ದಿನ ಗಂಗಾ ಸಪ್ತಮಿ, ಭಾಗೀರಥಿ ಜಯಂತಿ, ಭಾಗಮಂಡಲದಲ್ಲಿ ಜಾತ್ರಾ ಮಹೋತ್ಸವ, ಶ್ರೀರಂಗಪಟ್ಟಣದಲ್ಲಿ ರಂಗಸ್ವಾಮಿ ಜಯಂತ್ಯೋತ್ಸವ ಮತ್ತು ಕಾರಡಕದಲ್ಲಿ ಮುಂಡೋಣ ದುರ್ಗಾ ರಥೋತ್ಸವಗಳು ನಡೆಯಲಿವೆ. ಪ್ರತಿಯೊಂದು ರಾಶಿಯವರಿಗೆ ಗ್ರಹಗಳ ಶುಭಫಲಗಳು, ಆರ್ಥಿಕ ಸ್ಥಿತಿ, ವೃತ್ತಿ ಜೀವನ, ಕುಟುಂಬ, ಆರೋಗ್ಯ ಮತ್ತು ಪ್ರಯಾಣದ ಕುರಿತು ವಿವರವಾದ ಮಾಹಿತಿಯನ್ನು ನೀಡಲಾಗಿದೆ. ಜೊತೆಗೆ, ಅದೃಷ್ಟದ ಬಣ್ಣ, ದಿಕ್ಕು, ಸಂಖ್ಯೆ ಮತ್ತು ಜಪಿಸಬೇಕಾದ ಮಂತ್ರಗಳ ಬಗ್ಗೆಯೂ ತಿಳಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಸಂಜೆ ಮಳೆ ಫಿಕ್ಸ್: ಕರಾವಳಿ ಜನರಿಗೆ ಸೆಖೆಯ ಕಾಟ; ಉಷ್ಣಾಂಶದ ಮಟ್ಟ ಏರಿಕೆಯಾಗುವ ಸಾಧ್ಯತೆ – Kannada News | Bengaluru Rain Alert: IMD Predicts Moderate Showers, North Karnataka Heatwave

ಬೆಂಗಳೂರು, ಏ.23: ರಾಜ್ಯದ ಹವಾಮಾನದಲ್ಲಿ ಏರುಪೇರು ಮುಂದುವರಿದಿದ್ದು, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ ಮತ್ತು ಚಾಮರಾಜನಗರದಲ್ಲಿ ತಂಪಾದ ವಾತಾವರಣ ಮನೆಮಾಡಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಹಾಸನ, ಕೊಡಗು ಮತ್ತು ಕೋಲಾರ ಜಿಲ್ಲೆಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಕಡೆಗಳಲ್ಲಿ ಗುಡುಗು ಮತ್ತು ಬಿರುಗಾಳಿಯ ಮುನ್ಸೂಚನೆ ನೀಡಲಾಗಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣವಿದ್ದರೂ, ಉಷ್ಣಾಂಶವು ಹೆಚ್ಚಿರಲಿದೆ. ಸಮುದ್ರ ತೀರದಲ್ಲಿ ಆರ್ದ್ರತೆ (Humidity) ಹೆಚ್ಚಿರುವ ಕಾರಣ ಸೆಖೆಯ ಅನುಭವ ಜಾಸ್ತಿ ಇರಲಿದೆ.ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಆದರೆ, ಕಲಬುರಗಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಿಸಿಲ ತಾಪಮಾನವು 40°C ದಾಟುವ ಸಾಧ್ಯತೆಯಿದೆ.

ನಗರದಲ್ಲಿ ಗರಿಷ್ಠ ತಾಪಮಾನ 34°C ಮತ್ತು ಕನಿಷ್ಠ ತಾಪಮಾನ 22°C ದಾಖಲಾಗಬಹುದು. ಸಂಜೆ ವೇಳೆಗೆ ಮೋಡಕವಿದ ವಾತಾವರಣವಿದ್ದು, ಲಘು ಮಳೆಯ ನಿರೀಕ್ಷೆಯಿದೆ. ಇನ್ನು ಮೈಸೂರು ಹಾಗೂ ಕೋಲಾರದಲ್ಲಿ ಈ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 33°C – 35°C ಆಸುಪಾಸಿನಲ್ಲಿರಲಿದೆ. ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಸ್ವಲ್ಪ ಹೆಚ್ಚಿರಲಿದ್ದು, ಚದುರಿದಂತೆ ಮಳೆಯಾಗಲಿದೆ. ಕಾಫಿ ತೋಟಗಳಿಗೆ ಈ ಮಳೆ ಪೂರಕವಾಗಲಿದೆ. ತಂಪಾದ ಗಾಳಿ ಬೀಸಲಿದ್ದು, ಹವಾಮಾನವು ಆಹ್ಲಾದಕರವಾಗಿರಲಿದೆ.

ಇದನ್ನೂ ಓದಿ: ದಿನ ಭವಿಷ್ಯ: ಇಂದು ಈ ರಾಶಿಯವರ ಪ್ರಭಾವಕ್ಕೆ ಆಗದೇ ಇರುವುದೂ ಆಗಲಿದೆ

ಹುಬ್ಬಳ್ಳಿ – ಧಾರವಾಡ ಈ ಅವಳಿ ನಗರಗಳಲ್ಲಿ ಬಿಸಿಲಿನ ತಾಪಮಾನವು ಹೆಚ್ಚಿರಲಿದೆ (ಸುಮಾರು 37°C – 39°C). ಆದರೆ, ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಸಂಜೆ ವೇಳೆಗೆ ತುಂತುರು ಮಳೆಯಾಗುವ ಅಥವಾ ಮೋಡಕವಿದ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ. ಧೂಳಿನ ಮಿಶ್ರಿತ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:17 am, Thu, 23 April 26

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಪ್ರಭಾವಕ್ಕೆ ಆಗದೇ ಇರುವುದೂ ಆಗಲಿದೆ – Kannada News | Horoscope April 23 Sunday 2026; Dina Rashi Bhavishya Today, Checkout the details here

ಮೇಷ ರಾಶಿ :

ಬೋಧಕರಾಗಿದ್ದರೆ ನಿಮ್ಮ ವಿದ್ಯಾರ್ಥಿಗಳಿಂದ ಉಡುಗೊರೆ ಸಿಗಬಹುದು. ತಂದೆಯು ನಿಮ್ಮ ಪ್ರಗತಿಯನ್ನು ನಿರೀಕ್ಷಿಸುವಿರಿ. ಬಂಧುಗಳ ಮನೆಯಲ್ಲಿ ಆತಿಥ್ಯ, ನೆಮ್ಮದಿಯಿಂದ ದಿನ ಮುಗಿಯಲಿದೆ. ಯೋಜನೆಯು ಮಸುಕಾಗಿದ್ದು ಮುಂದಿನ ದಾರಿ ಸರಿಯಾಗಿ ಗೊತ್ತಾಗದೇ ಇರಬಹುದು. ಪ್ರೇಮಿಯನ್ನು ಭೇಟಿಯಾಗಲು ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು. ನಿಮ್ಮ ಯೋಜನೆಯನ್ನು ನಿರ್ನಾಮ ಮಾಡಬಹುದು.

ವೃಷಭ ರಾಶಿ:

ದೀರ್ಘ ಪ್ರಯಾಣವನ್ನು ಇಚ್ಛಿಸುವ ನೀವು ಆರೋಗ್ಯದ ಮೇಲೂ ಗಮನವಿರಿಕೊಳ್ಳಿ. ಪುನಶ್ಚೇತನಕ್ಕೆ ಅನ್ಯರ ಸಹಕಾರ ಅಗತ್ಯ. ಯಾರದ್ದೋ ಮಾತನ್ನು ಕೇಳಿ ಕೆಲಸಗಳನ್ನು ಮಾಡಬೇಡಿ. ನಿಮ್ಮ ಮನಸ್ಸಿಗೆ ಅದು ಒಪ್ಪಿಗೆಯಾಗಲಿ. ಹಿರಿಯರಿಂದ ಸಂಪತ್ತು ಸಿಗಬಹುದು ಅಥವಾ ಉತ್ತಮಮಾರ್ಗದಿಂದ ಬರುವ ಸಂಪತ್ತು ನಿಮ್ಮನ್ನು ಖುಷಿಯಾಗಿಡಲಿದೆ. ಕುಟುಂಬವು ನಿಮಗೆ ಕೊಡುವ ಕಿಮ್ಮತ್ತು ಕಡಿಮೆ ಆಗಿದೆ ಎಂದು ಅನ್ನಿಸುವುದು. ಸಂಗಾತಿಯಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ.

ಮಿಥುನ ರಾಶಿ:

ನಿಮಗೆ ಸಾಲ ಕೊಟ್ಟವರು ಕಟುವಾಗಿ ಮಾತನಾಡಬಹುದು. ಸಮಾಧಾನದಿಂದ ಅವರಿಗೆ ಉತ್ತರಕೊಟ್ಟು ಕೆಲವು ದಿನಗಳ ಅನಂತರ ಪಾವತಿಸುವೆನು ಎಂದು ಹೇಳಿ. ಆಮೆಯ ಗತಿ ಸಾಗುವ ಬದುಕನ್ನು ಕಂಡು ನಿರಾಶರಾಗುವುದು ಬೇಡ. ಮಂದಗತಿ, ಶೀಘ್ರಗತಿ ಬದುಕಿನಲ್ಲಿ ಸಾಮಾನ್ಯವೆಂದು ತಿಳಿಯಿರಿ. ಭೂಮಿಯ ವ್ಯವಹಾರದಲ್ಲಿ ಅನುಭವಿಗಳನ್ನು ಜೊತೆಯಲ್ಲಿ ಇರಿಸಿಕೊಳ್ಳಿ. ನಿಮ್ಮ ಬಗ್ಗೆ ನೀವು ಹೇಳಿಕೊಳ್ಳದೇ ಇರುವ ಹಲವು ವಿಚಾರಗಳು ಸ್ನೇಹಿತರು ಹೇಳುವರು.

ಕರ್ಕಾಟಕ ರಾಶಿ:

ಎಲ್ಲ ಕಾರ್ಯಕ್ಕೆ ಸಂಗಾತಿಯೇ ನಿಮಗೆ ದೊಡ್ಡ ಅಡ್ಡಿ ಎನಿಸಬಹುದು. ಅದಕ್ಕೋಸ್ಕರ ನಿಮ್ಮ ಶ್ರಮವನ್ನು ವ್ಯರ್ಥಮಾಡಿಕೊಳ್ಳಬೇಡಿ. ಮಾಡುತ್ತಿರುವ ವ್ಯಾಪಾರದಲ್ಲಿ ಅಭಿವೃದ್ಧಿಯಾಗಲಿದೆ. ಓದಿನೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇರಿ. ನಿಮ್ಮ ಅದೃಷ್ಟದ ನಿರೀಕ್ಷೆಯಲ್ಲಿ ನೀವು ಇರುವಿರಿ. ಬಂಧುಗಳ ಆಗಮನವು ನಿಮಗೆ ಸಂತೋಷವನ್ನು ಕೊಡುವುದು. ತಾಯಿಯ ಮೇಲೆ ನಿಮ್ಮ ಕೋಪವನ್ನು ತೋರಿಸುವಿರಿ. ಇಕ್ಕಟ್ಟಿನಿಂದ ಹೊರಬರಲು ಮನಸ್ಸು ಮಾಡುವಿರಿ.

ಸಿಂಹ ರಾಶಿ:

ಹೇಳಬೇಕಾದುದನ್ನು ಹೇಳುವಲ್ಲಿ, ಹೇಳುವ ರೀತಿಯಲ್ಲಿ‌ ಹೇಳಿ. ಸಾಲವನ್ನು ಕೊಟ್ಟವರು ಇಂದು ಪೀಡಿಸಲಿದ್ದಾರೆ. ವ್ಯವಸ್ಥಾಪಕರಾಗಿದ್ದರೆ ನಿಮ್ಮ ಕೆಲಸವು ಮೇಲಧಿಕಾರಿಗಳಿಗೆ ಸಂತಸ ನೀಡುವುದು. ಹೊಸ ವಾಹನ ಖರೀದಿಗೆ ಮನಸ್ಸು ಮಾಡಿದರೆ ಸ್ವಲ್ಪ ಮುಂದೂಡಿ. ಶಿಕ್ಷಣಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಸಕಾಲಕ್ಕೆ ಆರ್ಥಿಕ ನೆರವು ಸಿಗಲಿದ್ದು ಸ್ವಲ್ಪ ನೆಮ್ಮದಿ ಸಿಗುವುದು. ನಿಮ್ಮ ಸುರಕ್ಷಿತ ತಾಣವನ್ನು ನೀವೇ ಆರಿಸಿಕೊಳ್ಳಿ. ಸಾಲದ ಕಾರಣಕ್ಕೆ ತಲೆ ಮರೆಸಿಕೊಳ್ಳಬಹುದು.

ಕನ್ಯಾ ರಾಶಿ:

ನಿಮ್ಮ ಬಾಯಿಯ ಚಪಲಕ್ಕೆ ಬೇರೆಯವರು ನೋವುಣ್ಣುವರು. ಸದಾ ನಗುಮುಖದಿಂದ ಇರಿ. ವ್ಯಾಪರ ಸುಗಮವಾಗಿ ಸಾಗುವುದು. ವ್ಯಾವಹಾರಿಕ ಭಾರವನ್ನು ಪಕ್ಕದಲ್ಲಿಟ್ಟು ನಿಶ್ಚಿಂತೆಯಿಂದ ನಿದ್ರಿಸಬಹುದು. ನಾಳೆಯದನ್ನು ಹಂಬಲಿಸಿ ಇಂದು ಹಾಗೂ ನಾಳೆಯನ್ನು ಹಾಳು ಮಾಡಿಕೊಳ್ಳಬೇಡಿ. ಶ್ರಮದಷ್ಟು ಫಲ ಸಿಗುತ್ತದೆ. ವಕೀಲವೃತ್ತಿಯವರಿಗೆ ಹೆಚ್ಚಿನ ಕಾರ್ಯವು ಬರಲಿದ್ದು ನಿಭಾಯಿಸುವ ಕಲೆಯನ್ನು ಕಲಿತಿರುವಿರಿ.

ತುಲಾ ರಾಶಿ:

ವಾಹನದಿಂದ ಗಾಯ ಅಥವಾ ಆರ್ಥಿಕ ಸಂಕಟ ಇರಲಿದೆ. ಸ್ನೇಹಿತರು ಮಾಡಿದ ಕೆಟ್ಟ ಕೆಲಸದಿಂದ ನಿಮಗೆ ಕಂಟಕವು ಬರಬಹುದು. ಭೂಮಿಯ ವ್ಯವಹಾರದಲ್ಲಿ ಹೊಂದಾಣಿಕೆ ಕಷ್ಟ. ಲೇವಾದೇವಿಯ ವ್ಯವಹಾರದಿಂದ ತೊಂದರೆ ಹಾಗೂ ನಷ್ಟ. ತಂದೆಯ ಆಸೆಯನ್ನು ಪೂರ್ಣ ಮಾಡಿ, ಅವರಿಗೆ ಖುಷಿಯನ್ನು ಕೊಡುವಿರಿ. ಮಂದಗತಿಯಲ್ಲಿ ಸಾಗುವ ನಿಮ್ಮ ಕೆಲಸದಿಂದ ಸಹೋದ್ಯೋಗಿಗಳು ಆಡಿಕೊಳ್ಳುವರು.

ವೃಶ್ಚಿಕ ರಾಶಿ:

ಹಿತಶತ್ರುಗಳು ನಿಮ್ಮ ವಿರುದ್ಧ ಕಾಣದಂತೆ ಕತ್ತಿಯನ್ನು ಮಸೆಯುತ್ತಲೇ ಇದ್ದಾರು. ಕುಟುಂಬದಲ್ಲಿ ಮಾತಿನ ಚಕಮಕಿ ನಡೆಯಬಹುದು. ದಾಂಪತ್ಯದ ನಡುವೆ ವಿರಸಭಾವವು ಕೆಲವು ಸಮಯವಿದ್ದು ಶಾಂತವಾಗುವುದು. ಮನಸ್ಸು ಹೇಳಿದಂತೆ ಕೇಳದೇ ಸಮಾಧಾನದಿಂದ ಇರಿ. ಪ್ರವಾಸದಲ್ಲಿ ಇರುವವರಿಗೆ ಆಹಾರದ ವ್ಯತ್ಯಾಸದಿಂದ ಕಷ್ಟವಾಗುವುದು. ಸಂಶೋಧನೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯದಲ್ಲಿ ಪ್ರವೃತ್ತರಾಗುವರು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಯಶಸ್ಸು ಸಿಗುವುದು.

ಧನು ರಾಶಿ:

ಭೂಮಿಯ ಕ್ರಯ ಮತ್ತು ವಿಕ್ರಯಗಳ ವಿಷಯದಲ್ಲಿ ಲಾಭವನ್ನು ಕಾಣಬಹುದಾಗಿದೆ. ಸಹೋದರರ ನಡುವೆ ಭಿನ್ನಾಭಿಪ್ರಾಯಗಳು ನಡೆಯಬಹುದು. ಸಾಲದ ಭಾರವನ್ನು ಕಡಿಮೆ ಮಾಡಿಕೊಳ್ಳಲಾಗದು. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭವನ್ನು ಪಡೆಯುವಿರಿ. ಸಹೋದರಿಯ ಜವಾಬ್ದಾರಿಯೂ ನಿಮಗೆ ಬರಲಿದ್ದು ನಿಮ್ಮ ಜವಾಬ್ದಾರಿ ಹೆಚ್ಚಾಗುವುದು. ಭೂಮಿಯ ವ್ಯವಹಾರವು ಪಾಲುದಾರರ ಸಹಕಾರದಿಂದ ಸುಗಮವಾಗಿ ಸಾಗಲಿದೆ.

ಮಕರ ರಾಶಿ:

ಇಷ್ಟವಿಲ್ಲದೇ ಇದ್ದರೂ ಕಾರ್ಯದ ನಿಮಿತ್ತ ಅನ್ಯಸ್ಥಳಕ್ಕೆ ಹೋಗಬೇಕಾಗಿ ಬರಬಹುದು. ಅಲ್ಲಿಯೇ ಇಂದಿನ ನಿಮ್ಮ ವಾಸವಾಗಲಿದೆ. ನಿಮ್ಮ ಸಾಧನೆಯೇ ಮಾತನಾಡುವಂತೆ ಆದರೆ ಒಳ್ಳೆಯದು. ಅಪರಿತರು ನಿಮಗೆ ಸಹಾಯವನ್ನು ಮಾಡಲಿದ್ದಾರೆ. ಬಯಸಿದ್ದನ್ನು ಪಡೆದುಕೊಳ್ಳುವ ಅರ್ಹತೆ ನಿಮಗೆ ಬರಲಿದೆ. ಶಿಸ್ತನ್ನು ಬಿಡದೇ ಪಾಲಿಸುವುದು ನಿಮಗೆ ಗೌರವವನ್ನು ತಂದು ಕೊಡುವುದು. ವ್ಯವಹಾರದಿಂದ ನಿಮಗೆ ಪ್ರಶಂಸೆಯೂ ಸಿಗುವುದು.

ಕುಂಭ ರಾಶಿ:

ಕೃಷಿಯನ್ನು ಅವಲಂಬಿಸಿ ಬದುಕುವವರಿಗೆ ಅಲ್ಪ ಲಾಭವೂ ಸಿಗಲಿದೆ‌. ವಿದ್ಯಾರ್ಥಿಗಳು ಹತ್ತಾರು ಗೊಂದಲಗಳನ್ನು ಇಟ್ಟುಕೊಳ್ಳಲಿದ್ದಾರೆ. ಹೂಡಿಕೆಯಿಂದ ಬರುವ ಆದಾಯದಿಂದ ಅಚ್ಚರಿಯಾಗಲಿದೆ. ಧಾರ್ಮಿಕವಾಗಿ ಹಣವನ್ನು ವ್ಯಯಿಸಲಿದ್ದೀರಿ. ಕುಟುಂಬದಲ್ಲಿ ನಿಮ್ಮ ವಿವಾಹದ ಕುರಿತು ಚರ್ಚೆಯಾಗುವುದು. ನಿಮಗಾಗಿ ಅನುಕೂಲಕರ ವಾತಾವರಣವನ್ನು ಸಿದ್ಧ ಮಾಡುವರು. ಪ್ರೀತಿಯಲ್ಲಿ ಇಂದು ಸಮಯ ಸರಿಯುವುದೇ ಗೊತ್ತಾಗದು.

ಮೀನ ರಾಶಿ:

ಇಂದು ಯಾರಿಗಾದರೂ ಮಾತುಕೊಡುವಾಗ ಹಲವು ಬಾರಿ ಯೋಚಿಸುವಿರಿ. ಅನೇಕ ದಿನಗಳಿಂದ ಅನಾರೋಗ್ಯದ ಕಾರಣ ಕಿರಿಕಿರಿಯನ್ನು ಅನುಭವಿಸುತ್ತಿರುವ ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಇರುವುದು. ವಿದ್ಯಾಭ್ಯಾಸಕ್ಕೆ ವಿದೇಶ ಗಮನ ನಿಶ್ಚಯ ಆಗಬಹುದು. ಹೊಸ ಉದ್ಯೋಗದಿಂದ ನೀವು ಸಾಕಷ್ಟು ಯಶಸ್ಸನ್ನು ಪಡೆಯುತ್ತೀರಿ. ಹಿರಿಯರ ಆರೋಗ್ಯವೂ ಚೇತರಿಕೆ ಕಾಣುವುದು. ಇಂದು ನಿಮ್ಮ ಆದಾಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಪುಷ್ಯ, ಯೋಗ : ಶೋಭನ, ಕರಣ : ಬಾಲವ, ಸೂರ್ಯೋದಯ – 06 – 07 am, ಸೂರ್ಯಾಸ್ತ – 06 – 38 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:57 – 15:39, ಯಮಗಂಡ ಕಾಲ 06:08 – 07:41, ಗುಳಿಕ ಕಾಲ 09:15 – 10:49

-ಲೋಹಿತ ಹೆಬ್ಬಾರ್ – 8762924271 (what’s app only)

Source link

LSG vs RR: ರಾಯಲ್ಸ್ ಮುಂದೆ ಪಂತ್ ಪಡೆ ಪಲ್ಟಿ! – Kannada News | IPL 2026 LSG vs RR Highlights

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಎಲ್​ಎಸ್​ಜಿ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ.

ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ (22) ಆರಂಭದಲ್ಲಿ ಅಬ್ಬರಿಸಿದರೂ ಬೇಗನೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಧ್ರುವ್ ಜುರೆಲ್ (0) ಸಹ ಔಟಾದರು. ಎರಡು ವಿಕೆಟ್ ಪತನ ಬಳಿಕ ವೈಭವ್ ಸೂರ್ಯವಂಶಿ (8) ಕೂಡ ವಿಕೆಟ್ ಕೈಚೆಲ್ಲಿದರು.

ಹೀಗೆ ಪವರ್​ಪ್ಲೇನಲ್ಲೇ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಸರೆಯಾಗಿದ್ದು ಅನುಭವಿ ಆಟಗಾರ ರವೀಂದ್ರ ಜಡೇಜಾ. 29 ಎಸೆತಗಳನ್ನು ಎದುರಿಸಿದ ಜಡೇಜಾ ಅಜೇಯ 43 ರನ್​ ಬಾರಿಸಿದರು.  ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಸ್ಕೋರ್ ಅನ್ನು 20 ಓವರ್​ಗಳಲ್ಲಿ 159 ಕ್ಕೆ ತಂದು ನಿಲ್ಲಿಸಿದರು.

160 ರನ್​ಗಳ ಗುರಿ:

ಈ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಆಯುಷ್ ಬದೋನಿ (0) ಮೊದಲ ಓವರ್​ನಲ್ಲೇ ರನೌಟ್​ಗೆ ಬಲಿಯಾದರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ (0) ಸೊನ್ನೆ ಸುತ್ತಿ ನಿರ್ಗಮಿಸಿದರು.

ಆ ಬಳಿಕ ಬಂದ ಐಡೆನ್ ಮಾರ್ಕ್ರಾಮ್ (0) ಜೋಫ್ರಾ ಆರ್ಚರ್ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಮಿಚೆಲ್ ಮಾರ್ಷ್ ಹಾಗೂ ನಿಕೋಲಸ್ ಪೂರನ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇದಾಗ್ಯೂ 22 ರನ್​ಗಳಿಸಿದ ಬಳಿಕ ಜಡೇಜಾ ಎಸೆತದಲ್ಲಿ ಪೂರನ್ ಕ್ಯಾಚಿತ್ತು ನಿರ್ಗಮಿಸಿದರು.

ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ಆಡಿದ ಮಿಚೆಲ್ ಮಾರ್ಷ್ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರ ನಡುವೆ 15 ರನ್​ ಬಾರಿಸಿ ಹಿಮ್ಮತ್ ಸಿಂಗ್ ವಿಕೆಟ್ ಒಪ್ಪಿಸಿದ್ದರು.

ಅದರಂತೆ ಕೊನೆಯ 5 ಓವರ್​ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 61 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಮಿಚೆಲ್ ಮಾರ್ಷ್ (55) ನಾಂಡ್ರೆ ಬರ್ಗರ್ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಇದರ ಬೆನ್ನಲ್ಲೇ ರಿಯಾನ್ ಪರಾಗ್ ಹಿಡಿದ ಅತ್ಯುತ್ತಮ ಕ್ಯಾಚ್​ಗೆ ಮುಕುಲ್ ಚೌಧರಿ (7) ಬಲಿಯಾದರು.

ಅಂತಿಮವಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡವು 18 ಓವರ್​ಗಳಲ್ಲಿ 119 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವು 40 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಮಿಚೆಲ್ ಮಾರ್ಷ್, ಆಯುಷ್ ಬಡೋನಿ, ರಿಷಭ್ ಪಂತ್ (ನಾಯಕ), ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ಮೊಹ್ಸಿನ್ ಖಾನ್, ಪ್ರಿನ್ಸ್ ಯಾದವ್, ದಿಗ್ವೇಶ್ ಸಿಂಗ್ ರಾಠಿ, ಮಯಾಂಕ್ ಯಾದವ್.

ಇದನ್ನೂ ಓದಿ: ದಾಖಲೆ… ವಿಶ್ವ ದಾಖಲೆ… ಅಭಿಷೇಕ್ ಶರ್ಮಾ ಹೆಸರಿಗೆ ಭರ್ಜರಿ ದಾಖಲೆ

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್, ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ರವಿ ಬಿಷ್ಣೋಯ್, ಬ್ರಿಜೇಶ್ ಶರ್ಮಾ, ನಾಂಡ್ರೆ ಬರ್ಗರ್.

Published On – 11:15 pm, Wed, 22 April 26

Source link