Headlines

ಗುರುತೇ ಸಿಗದಷ್ಟು ಬದಲಾದ ‘ಮಿಲನ’ ಸಿನಿಮಾ ನಟಿ ಪಾರ್ವತಿ

ಪಾರ್ವತಿ ಮೆನನ್ ಅವರು ಇತ್ತೀಚೆಗೆ ಹೊಸ ಹೊಸ ಫೋಟೋಶೂಟ್ ಮಾಡಿಸುತ್ತಿದ್ದಾರೆ. ಅವರು ಪರ್ಸನಾಲಿಟಿ ವಿಷಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ. ಈಗ ಪಾರ್ವತಿ ಮೆನನ್ ಹೊಸ ಫೋಟೋಸ್ ಗಮನ ಸೆಳೆಯೋ ರೀತಿಯಲ್ಲಿ ಇದೆ. ಅವರ ಲುಕ್ ಸಂಪೂರ್ಣವಾಗಿ ಬದಲಾಗಿದೆ. ಅವರ ಡ್ರೆಸ್​ ಕೂಡ ಗಮನ ಸೆಳೆಯೋ ರೀತಿಯಲ್ಲಿ ಇದೆ. ಪಾರ್ವತಿ ಮೆನನ್ ಅವರಿಗೆ ಕನ್ನಡದಲ್ಲೂ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಕನ್ನಡದ ಮಂದಿ ಸಾಕಷ್ಟು ಇಷ್ಟಪಡುತ್ತಾರೆ. ಸದ್ಯ ಅವರ ಹೊಸ ಲುಕ್ ಬಗ್ಗೆ ಕರ್ನಾಟಕದಲ್ಲೂ ಚರ್ಚೆ…

Read More

ಹೆಣದ ಮೇಲೂ ಹಣ: ಪೆದ್ದರಂತೆ ಫೋನ್​ಪೇನಲ್ಲೇ ಲಂಚ ಪಡೆದು ಸಿಕ್ಕಿಬಿದ್ದ ಮೂವರು ಸಿಬ್ಬಂದಿ ವಜಾ – Kannada News | KIMS Hubballi Staff Sacked for Taking Money from Patients’ Families After TV Report

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆImage Credit source: tv9 ಹುಬ್ಬಳ್ಳಿ, ಫೆಬ್ರವರಿ 12: ಉತ್ತರ ಕರ್ನಾಟಕದ ಬಡವರ ಸಂಜೀವನಿ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿ ಕಿಮ್ಸ್ (KIMS Hospital) ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಅವರ ಕುಟುಂಬದವರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪದಲ್ಲಿ ಮೂವರು ಸಿಬ್ಬಂದಿಯ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗಿದೆ. ‘ಟಿವಿ9’ ವರದಿ ಮಾಡಿದ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಹಣ ಪಡೆದ ಮೂವರು ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಾಗಿದ್ದರೂ, ಕೆಲ ಸ್ವಚ್ಛತಾ ಹಾಗೂ…

Read More

ಅಫ್ಘಾನ್ ಪಡೆಯ ‘ಸೂಪರ್’ ವಿಶ್ವ ದಾಖಲೆ

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಕೇವಲ 4 ತಂಡಗಳು ಮಾತ್ರ ಡಬಲ್ ಸೂಪರ್ ಓವರ್‌ಗಳ ಪಂದ್ಯಗಳನ್ನಾಡಿದೆ. ಈ ಪಂದ್ಯಗಳಲ್ಲಿ ಎರಡು ಬಾರಿ ಕಾಣಿಸಿಕೊಂಡ ತಂಡ ಅಫ್ಘಾನಿಸ್ತಾನ್. ಅಂದರೆ ಅಫ್ಘಾನ್ ಪಡೆ ಟಿ20 ಕ್ರಿಕೆಟ್‌ನಲ್ಲಿ 2 ಬಾರಿ ಡಬಲ್ ಸೂಪರ್ ಓವರ್ ಪಂದ್ಯಗಳನ್ನಾಡಿದೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಡಬಲ್ ಸೂಪರ್ ಓವರ್ ಪಂದ್ಯ ನಡೆದಿದ್ದು 2024 ರಲ್ಲಿ. ಅದು ಸಹ ಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್…

Read More

‘ನಿಮ್ಮ ಕೆಟ್ಟತನ ನಿಮ್ಮ ಅವನತಿಗೆ ಕಾರಣ’; ಕೆಟ್ಟ ಕಮೆಂಟ್ ಹಾಕುವವರಿಗೆ ಜಗ್ಗೇಶ್ ತಿರುಗೇಟು – Kannada News | Jaggesh Slams Abusive Online Comments: A Strong Message to Trolls and Youth

ನಟ ಜಗ್ಗೇಶ್ (Jaggesh) ಅವರು ಅಭಿಮಾನಿಗಳನ್ನು ತುಂಬಾನೇ ಪ್ರೀತಿಸುತ್ತಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಅದೇ ರೀತಿ ಕೆಟ್ಟದನ್ನು ಬಯಸುವವರನ್ನು ಅವರು ದೂರ ಇಡಲು ಪ್ರಯತ್ನಿಸುತ್ತಾರೆ. ಈಗ ಅಶ್ಲೀಲ ಕಮೆಂಟ್ ಹಾಕುವ ವ್ಯಕ್ತಿಗಳಿಗೆ ಜಗ್ಗೇಶ್ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಅವರು ಈಗ ಫೇಸ್​​ಬುಕ್ ಅಲ್ಲಿ ಉದ್ದನೆಯ ಪೋಸ್ಟ್ ಹಂಚಿಕೊಂಡು, ಕೆಟ್ಟ ಕಮೆಂಟ್ ಹಾಕುವವರನ್ನು ಹಲವು ಹಂತಗಳಲ್ಲಿ ತಿದ್ದುವ ಕೆಲಸ ಮಾಡಿದ್ದಾರೆ. ಅವರು ಬರೆದ ಪೋಸ್ಟ್​​ನ ಯಥಾವತ್ತು ವಿವರ ಕೆಳಗಿದೆ. ‘ನನ್ನ ಬದುಕಿನ ಕಷ್ಟ ಕಾಲದಲ್ಲಿ ನನ್ನ ಜೊತೆ ನಿಂತವರು…

Read More

IPL​ನಲ್ಲಿ ಇಲ್ಲ ಚಾನ್ಸ್​: ಪಾಕಿಸ್ತಾನ್​ ಸೂಪರ್​ ಲೀಗ್​ಗೆ 47 ವಿದೇಶಿ ಆಟಗಾರರು ಆಯ್ಕೆ

PSL 2026: ಪಾಕಿಸ್ತಾನ್ ಸೂಪರ್ ಲೀಗ್​ನ 11ನೇ ಸೀಸನ್​ಗಾಗಿ ಸಿದ್ಧತೆಗಳು ಶುರುವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಇದೀಗ ಹರಾಜು ಪ್ರಕ್ರಿಯೆ ನಡೆದಿದೆ. ಈ ಹರಾಜಿನ ಮೂಲಕ ಹಲವು ವಿದೇಶಿ ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್​ಗೆ ಎಂಟ್ರಿ ಕೊಟ್ಟಿದ್ದಾರೆ. ಅದರಂತೆ ಮುಂಬರುವ ಪಿಎಸ್​ಎಲ್​ನಲ್ಲಿ ಕಾಣಿಸಿಕೊಳ್ಳಲಿರುವ ವಿದೇಶಿ ಆಟಗಾರರ ಪಟ್ಟಿ ಈ ಕೆಳಗಿನಂತಿದೆ… ಇಸ್ಲಾಮಾಬಾದ್ ಯುನೈಟೆಡ್ ತಂಡ: ಡೆವೊನ್ ಕಾನ್ವೇ (ನ್ಯೂಝಿಲೆಂಡ್), ಆಂಡ್ರೀಸ್ ಗೌಸ್ (ಅಮೆರಿಕ) ಮಾರ್ಕ್ ಚಾಪ್ಮನ್ (ನ್ಯೂಝಿಲೆಂಡ್), ಮ್ಯಾಕ್ಸ್ ಬ್ರ್ಯಾಂಟ್ (ಆಸ್ಟ್ರೇಲಿಯಾ), ಶಮರ್ ಜೋಸೆಫ್ (ವೆಸ್ಟ್ ಇಂಡೀಸ್),…

Read More

ಚಿನ್ನಸ್ವಾಮಿಯಲ್ಲಿ IPL ಪಂದ್ಯಗಳಿಗೆ ಷರತ್ತುಬದ್ಧ ಅನುಮತಿ? RCB ಅಭಿಮಾನಿಗಳಿಗೆ ಸರ್ಕಾರದಿಂದ ಸಿಗುತ್ತಾ ಸಿಹಿ ಸುದ್ದಿ? – Kannada News | Chinnaswamy Stadium IPL Matches: RCB Matches Almost Confirmed, Cabinet Decision Pending

ಬೆಂಗಳೂರು, ಫೆಬ್ರವರಿ 12: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಬಹುತೇಕ ಅನುಮತಿ ದೊರೆತಿದೆ ಎಂದು ಮೂಲಗಳು ತಿಳಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಭಿಮಾನಿಗಳಿಗೆ ಸಿಹಿಸುದ್ದಿ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ವಿಧಾನಸೌಧದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಅಧಿಕಾರಿಗಳು ಮೈದಾನ ಪರಿಶೀಲನಾ ವರದಿಯನ್ನು ಸಲ್ಲಿಸಿದ್ದು, ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಗಳಿಗೆ ಷರತ್ತುಗಳೊಂದಿಗೆ ಸಹಮತ ನೀಡುವ ಸಾಧ್ಯತೆ ದಟ್ಟವಾಗಿದೆ. ಹಿಂದಿನ ದುರಂತದ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ಇರಲಿಲ್ಲ. ಆದರೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಅಧಿಕಾರಿಗಳು…

Read More

‘ಗೂಗಲ್​​ನಲ್ಲಿ ತಪ್ಪಿದೆ’; ನಿಜವಾದ ವಯಸ್ಸು ರಿವೀಲ್ ಮಾಡಿದ ಮಯೂರಿ – Kannada News | Kannada Actress Mayuri Reveals her real age says Google Shows Incorrect data

ವಿಚ್ಛೇದನದ ಬಗ್ಗೆ ಮಯೂರಿಗೆ ಕೇಳಲಾಯಿತು. ಆದರೆ, ಅವರು ಇದಕ್ಕೆ ಉತ್ತರಿಸೋದಿಲ್ಲ ಎಂದು ಹೇಳಿದರು. ‘ಈ ಮೊದಲು ಆ ಬಗ್ಗೆ ಮಾತನಾಡಲಿಲ್ಲ, ಮುಂದೂ ಮಾತನಾಡಲ್ಲ’ ಎನ್ನುತ್ತಾರೆ ಅವರು. Source link

Read More

ಅಲ್ಲು ಅರ್ಜುನ್ ಹವಾ ತಗ್ಗಿಸಲು ನಡೆಯುತ್ತಿದೆಯೇ ಕುತಂತ್ರ? – Kannada News | Did Industry people trying to defame Allu Arjun

ಅಲ್ಲು ಅರ್ಜುನ್ (Allu Arjun) ಈಗ ಸ್ಟಾಪ್ ಪ್ಯಾನ್ ಇಂಡಿಯಾ ನಟ. ಅವರ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳು ಗ್ಲೋಬಲ್ ಮಟ್ಟದಲ್ಲಿ ಸೂಪರ್ ಹಿಟ್ ಆಗಿವೆ. ‘ಪುಷ್ಪ 2’ ಸಿನಿಮಾ ಅಂತೂ ಹಳೆಯ ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲ ಪುಡಿಗಟ್ಟಿವೆ. ಅಲ್ಲು ಅರ್ಜುನ್ ಜನಪ್ರಿಯತೆ ಭಾರತವನ್ನು ದಾಟಿ ವಿಶ್ವಮಟ್ಟದಲ್ಲಿ ಹಬ್ಬಿದೆ. ಆದರೆ ಇದೀಗ ಅಲ್ಲು ಅರ್ಜುನ್ ಅವರ ಜನಪ್ರಿಯತೆಯನ್ನು ಕುಗ್ಗಿಸುವ, ಅಲ್ಲು ಅರ್ಜುನ್ ಅನ್ನು ಕೆಟ್ಟದಾಗಿ ಬಿಂಬಿಸುವ ಕುತಂತ್ರ ನಡೆಯುತ್ತಿದೆ ಎಂಬ ಅನುಮಾನ ಮೂಡಿದೆ. ಇತ್ತೀಚೆಗಷ್ಟೆ…

Read More

Video: ತರಕಾರಿ ಕೊಳ್ಳುವ ನೆಪದಲ್ಲಿ ಬಂದು ಬಾಲಕಿಯ ಚಿನ್ನದ ಸರ ಕದ್ದು ಪರಾರಿಯಾದ ಯುವತಿ – Kannada News | Daylight Chain Snatching: Girl Caught on Camera Targeting Young Girl

ಚಿನ್ನ, ಬೆಳ್ಳಿಯ ದರ ಹೆಚ್ಚಾದ ಬಳಿಕವಂತೂ ಕಳ್ಳತನವೂ ವಿಪರೀತವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಎಷ್ಟು ಸಲೀಸಾಗಿ ಬಾಲಕಿಯ ಕುತ್ತಿಗೆಯಲ್ಲಿದ್ದ ಸರವನ್ನು ಕದ್ದು ಪರಾರಿಯಾಗಿರುವುದನ್ನು ಕಾಣಬಹುದು. ತಳ್ಳುವ ತರಕಾರಿ ಗಾಡಿ ಬಳಿ ಬಾಲಕಿ ತನ್ನ ಅಜ್ಜಿಯೊಂದಿಗೆ ತರಕಾರಿ ಖರೀದಿಸಲು ಬಂದಿದ್ದಾಳೆ. ಅಲ್ಲೇ ಪಕ್ಕಕ್ಕೆ ತರಕಾರಿ ಖರೀದಿಸುವ ನೆಪದಲ್ಲಿ ಯುವತಿಯೊಬ್ಬಳು ಕೂಡ ಬಂದಿದ್ದಾಳೆ. ಯಾರಿಗೂ ತಿಳಿಯದಂತೆ ಬಾಲಕಿಯ ಕುತ್ತಿಗೆಯಲ್ಲಿದ್ದ ಸರವನ್ನು ಕತ್ತರಿಸಿಕೊಂಡು ಓಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆಕೆ ಓಡಿ ಹೋದ ಬಳಿಕ ಎಲ್ಲರಿಗೂ ನಡೆದಿದ್ದೇನೆ ಎಂಬುದು ಅರಿವಿಗೆ ಬಂದಿದೆ….

Read More

ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶಕ ರಾಜಮೌಳಿಗೆ ಇಷ್ಟವಾದ ಸಿನಿಮಾ ಯಾವುದು? – Kannada News | Which one is Rajamouli’s favorite movie

ಎಲ್ಲ ಸಿನಿಮಾ ಕರ್ಮಿಗಳು ಅವರಿಗೆ ಇಷ್ಟವಾದ ಸಿನಿಮಾಗಳು, ಅವರು ಸ್ಪೂರ್ತಿ ಪಡೆದ ಸಿನಿಮಾಗಳು, ಅವರು ಸಿನಿಮಾ ರಂಗಕ್ಕೆ ಕಾಲಿಡಲು ಸ್ಪೂರ್ತಿ ನೀಡಿದ ಸಿನಿಮಾಗಳು ಇದ್ದೇ ಇರುತ್ತವೆ. ರಾಜಮೌಳಿಯ (Rajamouli) ಸಿನಿಮಾಗಳನ್ನು ನೋಡಿ ಇಂದು ಹಲವಾರು ಮಂದಿ ಚಿತ್ರರಂಗಕ್ಕೆ ಬಂದಿದ್ದಾರೆ. ಆದರೆ ರಾಜಮೌಳಿಗೆ ಇಷ್ಟವಾದ ಸಿನಿಮಾಗಳು ಯಾವುವು? ಯಾವ ಸಿನಿಮಾಗಳನ್ನು ನೋಡಿ ಅವರು ಸಿನಿಮಾ ರಂಗಕ್ಕೆ ಬಂದರು? ಯಾವ ಶೋಗಳು ಅವರಿಗೆ ಬಹಳ ಇಷ್ಟ? ಮಾಹಿತಿ ಇಲ್ಲಿದೆ… ರಾಜಮೌಳಿ ಅವರೇ ಹೇಳಿಕೊಂಡಿರುವಂತೆ ಅವರು ಬಹಳ ಸಿನಿಮಾಗಳನ್ನು ನೋಡುತ್ತಾರಂತೆ. ಒಳ್ಳೆಯ…

Read More