Category Archives: Blog

Your blog category

ಮಾಜಿ ಸೈನಿಕನ ಮರ್ಡರ್ ಮಿಸ್ಟ್ರಿ: FSL​​ ವರದಿಯನ್ನೇ ತಿರುಚಿದ್ರು, ಸುಪನಾತಿ ಸುಮಾಳ ಅಸಲಿಯತ್ತು ಬಯಲು – Kannada News | Belagavi: Wife, Lover Kill Ex Serviceman for 2 Cr Insurance; FSL Bribed

ಬೆಳಗಾವಿ, ಜೂನ್​​ 15: ನಗರದಲ್ಲಿ ಕ್ರೈಂ, ತ್ರಿಲ್ಲರ್ ವೆಬ್ ಸೀರಿಸ್ ಮೀರಿಸುವಂತಹ ಭೀಕರ ಕೊಲೆಯೊಂದು (kill) ನಡೆದಿದೆ. ಇಲ್ಲಿ ಅಧಿಕಾರಿಗಳೇ ಎಫ್ಎಸ್ಎಲ್ ವರದಿಯನ್ನ ತಿರುಚಿ ಕೇಸ್ ಮುಚ್ಚಿ ಹಾಕುವ ಯತ್ನ ನಡೆಸಿದ್ದು, ತನಿಖೆಯಲ್ಲಿ ಬಯಲಾಗಿದೆ. ಅಷ್ಟಕ್ಕೂ 2 ಕೋಟಿ ರೂ ವಿಮೆ ಹಣಕ್ಕಾಗಿ ಪತಿಗೆ ಚಟ್ಟ ಕಟ್ಟಿದ ಪತ್ನಿ (Wife) ಹಾಗೂ ಆಕೆಯ ಪ್ರಿಯಕರ ಮಾಡಿದ ಕತರ್ನಾಕ್ ಐಡಿಯಾಗಳು ಎಂತಹದ್ದು? ಇರದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ, ಹಣಕ್ಕಾಗಿ ಹೇಗೆಲ್ಲಾ ಬಳಕೆ ಮಾಡಿಕೊಂಡರು ಎಂಬುವುದನ್ನು ತಿಳಿದರೆ ನಿಜಕ್ಕೂ ಶಾಕ್​ ಆಗುತ್ತೀರಾ.

ಮುಖ್ಯಾಂಶಗಳು

  • ವಿಮೆ ಹಣಕ್ಕಾಗಿ ಪತ್ನಿ-ಪ್ರಿಯಕರನ ಕರಾಳ ಸಂಚು
  • ಆಸ್ಪತ್ರೆಯಲ್ಲೇ ಪತಿಗೆ ವಿಷಹಾಕಿದ ಪತ್ನಿ
  • ಒಟ್ಟು 80 ಜನರ ಬಂಧನ

2 ಕೋಟಿ ರೂ ವಿಮೆ ಹಣಕ್ಕಾಗಿ ಪ್ರಿಯಕರನೊಂದಿಗೆ ಪತಿಗೆ ಪತ್ನಿ ಚಟ್ಟ ಕಟ್ಟಿದ ಪ್ರಕರಣ ಸದ್ಯ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ. 35 ವರ್ಷದ ಸುಮಾ ಪತಿ ಕೊಲೆ ಪ್ರಕರಣದಲ್ಲಿ ಜೈಲು ಪಾಲು ಆಗಿದ್ದಾಳೆ. ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ನಿವಾಸಿಯಾಗಿರುವ ಈಕೆ 20 ವರ್ಷಗಳ ಹಿಂದೆ ಸಂದೀಪ ಮಂಜರಗಿ ಜೊತೆಗೆ ಮದುವೆಯಾಗಿತ್ತು. ಪತಿ 17 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮೂರು ವರ್ಷದ ಹಿಂದೆ ನಿವೃತ್ತಿಯಾಗಿ ಊರಿಗೆ ವಾಪಸ್ ಬಂದಿದ್ದರು. ಹೀಗೆ ಬಂದ ವ್ಯಕ್ತಿ ಅಲ್ಲಿ ಇಲ್ಲಿ ಓಡಾಡಿಕೊಂಡು ಇದ್ದ, ಚೆನ್ನಾಗಿ ಕುಡಿಯೋದು, ಹೋಟೆಲ್ ಸೇರಿದಂತೆ ಅಲ್ಲಿ ಇಲ್ಲಿ ತಿಂದು ಜಾಲಿಯಾಗಿದ್ದ.

ಪತಿ ಸ್ನೇಹಿತನೊಂದಿಗೆ ಪತ್ನಿ ಅನೈತಿಕ ಸಂಬಂಧ: ಕೊಲೆಗೆ ಪ್ಲ್ಯಾನ್​​

ಇದೇ ಹೊತ್ತಲ್ಲಿ ಘೋಡಗೇರಿಯಲ್ಲಿ ಎಗ್ ರೈಸ್ ಅಂಗಡಿ ನಡೆಸುತ್ತಿದ್ದ ಪುಂಡಲೀಕ ಡೊಂಗರ್ ಪರಿಚಯ ಆಗಿದ್ದ. ಈತನ ಅಂಗಡಿಗೆ ಹೋಗುತ್ತಿದ್ದ ಸಂದೀಪ್ ಅಲ್ಲಿ ಖಾಲಿ ಕುಡುವ ಬದಲು ಇಬ್ಬರು ಸೇರಿಕೊಂಡು ಹಿಡಕಲ್ ಡ್ಯಾಂ ಬಳಿಯಲ್ಲಿ ಹೋಟೆಲವೊಂದನ್ನು ಇಟ್ಟುಕೊಳ್ಳುವ ತೀರ್ಮಾನ ಮಾಡಿದ್ದರು. ಹೀಗೆ ಹೋಟೆಲ್ ಆರಂಭವಾದ ಕೆಲ ದಿನಗಳಲ್ಲಿಯೇ ನಿವೃತ್ತ ಸೈನಿಕ ಸಂದೀಪ ಪತ್ನಿ ಸುಮಾ ಹಾಗೂ ಪುಂಡಲೀಕ ನಡುವೆ ಸ್ನೇಹ ಬೆಳೆದಿತ್ತು. ಈ ಸ್ನೇಹ ಕೆಲದಿನಗಳಲ್ಲಿಯೇ ಅನೈತಿಕ ಸಂಬಂಧವಾಗಿ ಮಾರ್ಪಾಡಾಗಿತ್ತು. ಇದಕ್ಕೆ ಅಡ್ಡಿಯಾಗಿದ್ದ ಪತಿ ಸಂದೀಪ್ ಮುಗಿಸಲು ಸುಮಾ ಹಾಗೂ ಪ್ರಿಯಕರ ಪುಂಡಲೀಕ ಇಬ್ಬರು ಸೇರಿ ತೀರ್ಮಾನಿಸಿದ್ದಾರೆ. ಅದಕ್ಕಾಗಿ ಅವಕಾಶಕ್ಕಾಗಿ ಕಾಯುತ್ತಿದ್ದರು. ಆತ ಸತ್ತರೆ ಎರಡು ಕೋಟಿ ರೂ ವಿಮೆ ಹಣ ಬರುತ್ತೆ, ಅದನ್ನ ತೆಗೆದುಕೊಂಡು ಆರಾಮವಾಗಿ ಇರಬಹುದು ಎಂದು ಪ್ಲ್ಯಾನ್​​ ಮಾಡಿದ್ದರು.

ಇದನ್ನೂ ಓದಿ: ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​: 2 ಕೋಟಿ ಹಣಕ್ಕಾಗಿ ಚಟ್ಟ, FSL ವರದಿಯನ್ನೇ ಬದಲಿಸಿದ್ದ ಖತರ್ನಾಕ್ ಗ್ಯಾಂಗ್

ಮಾರ್ಚ್ 13ರಂದು ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂದೀಪ್​​ ಮಂಜರಗಿಗೆ ರಸ್ತೆ ಅಪಘಾತವಾಗಿತ್ತು. ಅಪಘಾತವಾದ ಬಳಿಕ ಸ್ಥಳೀಯರು ಹುಕ್ಕೇರಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಸ್ಥಳಕ್ಕೆ ಹೋದ ಪತ್ನಿ ಸುಮಾ ತನ್ನ ಗಂಡನಿಗೆ ಹೆಚ್ಚಿನ ಚಿಕಿತ್ಸೆ ಬೇಕು ಅಂತಾ ಹುಕ್ಕೇರಿ ಅಲ್ಲಿಂದ ಘಟಪ್ರಭಾ ಜೆಜೆ ಕೋ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿಸುತ್ತಾಳೆ. ಅಲ್ಲಿಯೇ ಪತಿಗೆ ಚಟ್ಟ ಕಟ್ಟಲು ಮಾಸ್ಟರ್ ಪ್ಲ್ಯಾನ್ ಮಾಡುತ್ತಾಳೆ. ಸಣ್ಣಪುಟ್ಟ ಗಾಯಗೊಂಡಿದ್ದ ವ್ಯಕ್ತಿಯನ್ನ ಸ್ಪೇಷಲ್ ವಾರ್ಡ್​ಗೆ ಶಿಫ್ಟ್ ಮಾಡಲಾಗುತ್ತದೆ. ಬಳಿಕ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ಪುಂಡಲೀಕನ ಸಂಬಂಧಿ ರಾಹುಲ್ ಜೋಗಿ ಎಂಬಾತನ ಜೊತೆಗೆ ಚರ್ಚೆ ನಡೆಸುತ್ತಾರೆ. ಈ ವೇಳೆ ರಾಹುಲ್ ಸಲೈನ್‌ ಬಾಟಲ್​​ನಲ್ಲಿ ವಿಷ ಹಾಕಿ ಅಂತಾ ಹೇಳುತ್ತಾನೆ. ಅದರಂತೆ ಮಾರ್ಚ್ 14ರಂದು ಒಂದು ಬಾರಿ ತಿಗಣೆ ಎಣ್ಣೆ ಹಾಗೂ ಇಲಿ ಪಾಷಾಣ ಹಾಕುತ್ತಾರೆ ಆದರೆ ಅದು ವರ್ಕೌಟ್ ಆಗಲ್ಲ.

ತಿಗಣೆ ಔಷಧ ಹಾಕಿ ಕೊಲೆ

ಮಾರನೇ ದಿನ ಹೊರಗಿಂದ ಸಲೈನ್‌ ಬಾಟಲ್ ತಂದು ಅದರಲ್ಲಿ ಈ ಬಾರಿ ಬರೀ ತಿಗಣೆ ಔಷಧ ಹಾಕಿ ಕೊಲೆ ಮಾಡುತ್ತಾರೆ. ಆತ ಸಾವನ್ನಪ್ಪಿದ ಬಳಿಕ ಹಾರ್ಟ್ ಅಟ್ಯಾಕ್​​ ಆಗಿ ಸಾವನ್ನಪ್ಪಿರುವಂತೆ ಬಿಂಬಿಸುತ್ತಾರೆ. ಇದೇ ವೇಳೆ ಠಾಣೆಗೆ ಬಂದಿದ್ದ ಯಮಕನಮರಡಿ ಪೊಲೀಸರಿಗೂ ಸುಳ್ಳು ಹೇಳುತ್ತಾರೆ. ಆದರೆ ಅಂದು ಪೊಲೀಸರು ಬಿಮ್ಸ್ ಆಸ್ಪತ್ರೆಗೆ ಈತನ ಶವವನ್ನ ಮರಣೋತ್ತರ ಪರೀಕ್ಷೆ ಮಾಡುತ್ತಾರೆ. ಇನ್ನೇನು ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್​ಎಸ್​ಎಲ್​ ವರದಿ ಕೈ ಸೇರಬೇಕುನ್ನುಷ್ಟರಲ್ಲಿ ಆರೋಪಿ ಸುಮಾಗೆ ಭಯ ಶುರುವಾಗುತ್ತದೆ.

ತಾನು ಹಾಗೂ ಪುಂಡಲೀಕ ಸೇರಿ ಪತಿಯನ್ನು ಕೊಲೆ ಮಾಡಿರುವ ಬಗ್ಗೆ ತಾಯಿ ಬಳಿ ಎಲ್ಲಾ ವಿಚಾರವನ್ನು ಹೇಳಿದ್ದಾಳೆ. ತಾಯಿಗೆ ಪರಿಚಯವಿದ್ದ ಆರ್​ಎಂಪಿ ವೈದ್ಯ ಬಸವರಾಜ್ ಭಸ್ಮೆ ಎಂಬ ವ್ಯಕ್ತಿಯ ಮೂಲಕ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಫ್​ಡಿಎ ಅಶೋಕ್​​ ಗುಜನಾಳ್ ಸಂಪರ್ಕ ಮಾಡುತ್ತಾರೆ. ಅಲ್ಲಿಂದ ಎಫ್​ಎಸ್​ಎಲ್​ ಕಚೇರಿಯ ಸಿಫಾಯಿ ಅಪ್ಪಸಾಬ್ ನಾಯಿಕೋಡಿ ಪರಿಚಯ ಮಾಡಿಕೊಂಡು ಬಳಿಕ ಲ್ಯಾಬ್ ಸಹಾಯಕ ಚನಯ್ಯ, ಬಳಿಕ ಸೀನಿಯರ್ ಆಫೀಸರ್ ನಾಗರಾಜ್​ಗೆ ಹಣದ ಆಮಿಷವೊಡ್ಡಿ ಕೊಲೆಯನ್ನ ಹೃದಯಾಘಾತ ಎಂದು ತಿದ್ದುಪಡಿ ಮಾಡಲು ಹೇಳಿದ್ದಾರೆ. ಇದಕ್ಕಾಗಿ ಮೂರು ಲಕ್ಷಕ್ಕಿಂತ ಅಧಿಕ ಹಣ ಕೊಡುವುದಾಗಿ ಹೇಳಿದ್ದಾರೆ. ಹಣದ ಆಸೆಗೆ ಬಿದ್ದ ಎಫ್ಎಸ್ಎಲ್ ಅಧಿಕಾರಿಗಳು ಕೊಲೆಯನ್ನ ಹಾರ್ಟ್ ಅಟ್ಯಾಕ್ ಎಂದು ವರದಿ ನೀಡುತ್ತಾರೆ. ಆಗ ಪೊಲೀಸರು ಕೂಡ ಸರಿ ಇದೆ ಎಂದುಕೊಂಡು ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದು, ಬಳಿಕ ಅಂತ್ಯಸಂಸ್ಕಾರ ಮಾಡುತ್ತಾರೆ.

ಸ್ಟೇಟಸ್​ನಿಂದ ಕೊಲೆ ರಹಸ್ಯ ಬಯಲು

ಕೊಲೆ ಕೇಸ್ ಮುಚ್ಚಿ ಹೋದ ಬಳಿಕ 2 ಕೋಟಿ ರೂ ವಿಮೆ ಹಣ ಹಂಚಿಕೆ ಸಂಬಂಧ ಸುಮಾ ಹಾಗೂ ಪುಂಡಲೀಕ ನಡುವೆ ಗಲಾಟೆ ಶುರುವಾಗಿದೆ. ಇಬ್ಬರ ನಡುವೆ ಪರಸ್ಪರ ವೈಮನಸ್ಸು ಉಂಟಾಗಿದೆ. ಈ ವೇಳೆ ಸಂದೀಪ್​ ಸಾವನ್ನಪ್ಪಿದ್ದು, ಹಾರ್ಟ್​ ಅಟ್ಯಾಕ್​ನಿಂದ ಅಲ್ಲಾ, ಕೊಲೆ ಅಂತಾ ಹೇಳಿ ಸ್ಟೇಟಸ್ ಹಾಕುತ್ತಾನೆ. ಇದನ್ನ ನೋಡಿದ ಪೊಲೀಸರು ಕೂಡಲೇ ಆತನನ್ನ ಕರೆದು ವಿಚಾರಣೆ ಮಾಡುತ್ತಾರೆ. ಈ ವೇಳೆ ಕೊಲೆ ರಹಸ್ಯ ಬಾಯಿ ಬಿಟ್ಟಿದ್ದಾನೆ.

80 ಜನರ ಬಂಧನ

ಆಗ ಎಫ್ಎಸ್ಎಲ್​ ವರದಿ ಪಡೆದು ಬೆಂಗಳೂರಿನ ಲ್ಯಾಬ್​​ಗೆ ಪೊಲೀಸರು ಕಳುಹಿಸಿದ್ದಾರೆ. ಅಲ್ಲಿ ವಿಷದಿಂದ ಆತ ಸಾವನ್ನಪ್ಪಿರುವುದಾಗಿ ವರದಿ ಬರುತ್ತೆ. ಇದರ ಆಧಾರದ ಮೇಲೆ ತನಿಖೆ ಶುರು ಮಾಡಿದ ಪೊಲೀಸರು ಪತ್ನಿ ಸುಮಾ, ಪ್ರಿಯಕರ ಪುಂಡಲೀಕ, ವರದಿ ತಿರುಚಿದ ಎಫ್ಎಸ್ಎಲ್ ಸೈಂಟಿಫಿಕ್ ಆಫೀಸರ್ ನಾಗರಾಜ್ ಸೇರಿ 80 ಜನರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಒಟ್ಟಿನಲ್ಲಿ ಕೇಸ್​ನಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು ತನಿಖೆ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೀದಿ ಕೋಟೆಯನ್ನು ಬಿಜೆಪಿ ಛಿದ್ರಗೊಳಿಸಿದ್ದು ಹೇಗೆ? ಪಶ್ಚಿಮ ಬಂಗಾಳದ ಚುನಾವಣೆ ತಯಾರಿ ಬಗ್ಗೆ ಪ್ರಲ್ಹಾದ್ ಜೋಶಿ ಮಾತು – Kannada News | Union Minister Pralhad Joshi on West Bengal Election Victory in TV9 Podcast 

ಬೆಂಗಳೂರು, ಜೂನ್ 15: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಟಿವಿ9 ಜೊತೆಗಿನ ಮಾತುಕತೆಯಲ್ಲಿ ಪಶ್ಚಿಮ ಬಂಗಾಳ ಚುನಾವಣೆ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷದ ಅಭೂತಪೂರ್ವ ಗೆಲುವಿನ ಕುರಿತು ಮಾತನಾಡಿದ ಪ್ರಲ್ಹಾದ್ ಜೋಶಿ, ಚುನಾವಣಾ ಆಯೋಗವು ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸಿದ್ದೇ ಪ್ರಮುಖ ಕಾರಣ ಎಂದರು. ಟಿಎಂಸಿ ಸರ್ಕಾರದ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ, ಕಟ್-ಮನಿ, ಗೂಂಡಾಗಿರಿ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದಿಂದ ಜನರು ಬೇಸತ್ತಿದ್ದರು. ಅಮಿತ್ ಶಾ ಕೇಂದ್ರ ಅರೆಸೇನಾ ಪಡೆಗಳನ್ನು ಅಲ್ಲಿಯೇ ಉಳಿಸುವುದಾಗಿ ಭರವಸೆ ನೀಡಿದ ನಂತರ ಜನರು ನಿರ್ಭಯವಾಗಿ ಮತ ಚಲಾಯಿಸಿದರು. ಇದೀಗ ಟಿಎಂಸಿ ತೊರೆಯುತ್ತಿರುವವರು ಲೂಟಿ ಮಾಡಲು ಅವಕಾಶವಿಲ್ಲದ ಕಾರಣ ಪಕ್ಷ ಬಿಟ್ಟು ಹೋಗುತ್ತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ವಿಶ್ಲೇಷಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಧಿಸಿದ ಭರ್ಜರಿ ಗೆಲುವಿನ ಕುರಿತು ಮಾತನಾಡಿದ ಪ್ರಲ್ಹಾದ್ ಜೋಶಿ, ಈ ಬಾರಿಯ ಚುನಾವಣೆಯಲ್ಲಿ ಹಿಂಸಾಚಾರಕ್ಕೆ ಅವಕಾಶ ನೀಡದ ಚುನಾವಣಾ ಆಯೋಗಕ್ಕೆ ಧನ್ಯವಾದ ಸಲ್ಲಿಸಿದರು. “ಜನರು ಟಿಎಂಸಿ ಸರ್ಕಾರದ ಕಟ್-ಮನಿ, ಭ್ರಷ್ಟಾಚಾರ ಮತ್ತು ಗೂಂಡಾಗಿರಿಯಿಂದ ಸಂಪೂರ್ಣವಾಗಿ ಬೇಸತ್ತಿದ್ದರು. ಟಿಎಂಸಿ ಆಡಳಿತದಲ್ಲಿ ಯಾವುದೇ ನಿರ್ಮಾಣಕ್ಕೆ, ಪ್ಲಾಟ್ ಖರೀದಿಗೆ ಅಥವಾ ವಾಹನ ಖರೀದಿಗೂ ಕೂಡ ಟಿಎಂಸಿ ಕಚೇರಿ ಅಥವಾ ಗೂಂಡಾಗಳ ಅನುಮತಿ ಪಡೆಯಬೇಕಿತ್ತು. ಅಮಿತ್ ಶಾ ಕೇಂದ್ರ ಅರೆಸೇನಾ ಪಡೆಗಳನ್ನು 3 ತಿಂಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಉಳಿಸುವುದಾಗಿ ಭರವಸೆ ನೀಡಿದ ನಂತರ, ಜನರು ನಿರ್ಭಯವಾಗಿ ಮತ ಚಲಾಯಿಸಲು ಸಾಧ್ಯವಾಯಿತು. ಇದರಿಂದ ಟಿಎಂಸಿ ಸರ್ಕಾರದ ವಿರುದ್ಧ ಜನ ತಮ್ಮ ಕೋಪವನ್ನು ಮತದಾನದ ಮೂಲಕ ವ್ಯಕ್ತಪಡಿಸಿದರು” ಎಂದು ಹೇಳಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Source link

ರೇಣುಕಾಸ್ವಾಮಿ ಕೇಸ್: ಪ್ರತಿ ದಿನ ವಿಚಾರಣೆಗೆ ಕೋರ್ಟ್ ಸೂಚನೆ; ದರ್ಶನ್ ಪರ ವಕೀಲರ ಮನವಿ ತಿರಸ್ಕಾರ – Kannada News | Renukaswamy Case Darshan Court Hearing Daily Witness Examination updates

ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಮತ್ತು ಗ್ಯಾಂಗ್ ಒಳಗೊಂಡಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯು ವೇಗ ಪಡೆದುಕೊಂಡಿದೆ. ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಇಂದು (ಜೂನ್ 15) ಸಾಕ್ಷ್ಯ ವಿಚಾರಣೆ ಮುಂದುವರಿದಿದ್ದು, ಹಲವು ಪ್ರಮುಖ ಬೆಳವಣಿಗೆಗಳು ಸಂಭವಿಸಿವೆ. ಇಂದು ನ್ಯಾಯಾಲಯದಲ್ಲಿ ಪ್ರಕರಣದ 13ನೇ ಸಾಕ್ಷಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಯಿತು. ಇದೇ ವೇಳೆ, ಸಾಕ್ಷಿಗಳ ಪಾಟೀಸವಾಲು ನಡೆಸುವುದನ್ನು ಮುಂದೂಡಬೇಕೆಂದು ಆರೋಪಿಗಳ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ತಿರಸ್ಕರಿಸಿದರು.

ಸುಪ್ರೀಂಕೋರ್ಟ್ ಈಗಾಗಲೇ ಈ ಪ್ರಕರಣದ ತ್ವರಿತ ವಿಚಾರಣೆಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಯಾವುದೇ ವಿಳಂಬಕ್ಕೆ ಆಸ್ಪದ ನೀಡದಂತೆ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನಕುಮಾರ್ ಅವರು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪ್ರತಿದಿನ ಸಾಕ್ಷ್ಯ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು.

ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಇನ್ಮುಂದೆ ಪ್ರತಿ ವಾರದಲ್ಲಿ 4ರಿಂದ 5 ದಿನಗಳ ಕಾಲ ಸಾಕ್ಷ್ಯ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಅಲ್ಲದೇ, ತ್ವರಿತ ವಿಚಾರಣೆಗೆ ಪೂರಕವಾಗಿ ಸಹಕರಿಸುವಂತೆ ಎರಡೂ ಕಡೆಯ ವಕೀಲರಿಗೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಆದಷ್ಟು ಬೇಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ತೀರ್ಪು ಬರಬಹುದು ಎಂಬ ನಿರೀಕ್ಷೆ ಮೂಡಿದೆ.

ಇದೇ ಸಂದರ್ಭದಲ್ಲಿ, ನಟ ದರ್ಶನ್ ಸೇರಿದಂತೆ ಉಳಿದ ಆರೋಪಿಗಳನ್ನು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರುಪಡಿಸಬೇಕು ಎಂದು ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಗೆ ಪ್ರಾಸಿಕ್ಯೂಷನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸದ್ಯಕ್ಕೆ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದ್ದು, ನಾಳೆ (ಜೂನ್ 16) ಇನ್ನಿಬ್ಬರು ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಿ ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿದೆ.

ಇದನ್ನೂ ಓದಿ: ಜೈಲಿನಲ್ಲಿ ನಟ ದರ್ಶನ್ ಮೌನ; ಆತ್ಮಚರಿತ್ರೆ ಬರೆಯಲು ಆರಂಭಿಸಿದ ಪವಿತ್ರಾ ಗೌಡ

ದರ್ಶನ್ ಅವರು ಜಾಮೀನು ಪಡೆಯಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲ ಆಗಿವೆ. ವಿಚಾರಣೆ ವಿಳಂಬ ಆಗುತ್ತಿರುವುದರಿಂದ ವೃತ್ತಿಜೀವನಕ್ಕೆ ತೊಂದರೆ ಆಗಿದೆ ಎಂದು ಅವರು ಸುಪ್ರೀಂ ಕೋರ್ಟ್​​ನ ಮೊರೆ ಹೋಗಿದ್ದರು. ಆದರೆ ಅಲ್ಲಿ ಅವರ ಜಾಮೀನು ಅರ್ಜಿ ವಜಾಗೊಂಡಿತು. ಹಾಗಾಗಿ ಇನ್ನಷ್ಟು ತಿಂಗಳ ಕಾಲ ಅವರು ಜೈಲುವಾಸ ಅನುಭವಿಸುವುದು ಅನಿವಾರ್ಯ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ – Kannada News | Egg thrown at TMC leader Kunal Ghosh outside the Mamata Banerjee House in Kolkata

ಕೊಲ್ಕತ್ತಾ, ಜೂನ್ 15: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ನಾಯಕರಿಗೆ ಸಾರ್ವಜನಿಕ ವಲಯದಲ್ಲಿ ‘ಮೊಟ್ಟೆ ದಾಳಿ’ಯ ಭೀತಿ ಎದುರಾಗಿದೆ. ಇಂದು ಸಂಜೆ ಟಿಎಂಸಿ ಪ್ರಮುಖ ವಕ್ತಾರ ಮತ್ತು ಶಾಸಕ ಕುನಾಲ್ ಘೋಷ್ ಅವರು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರ ಕಾಳೀಘಾಟ್ ನಿವಾಸದಿಂದ ಹೊರಬರುತ್ತಿದ್ದಂತೆ ಅವರ ಮೇಲೆ ವ್ಯಕ್ತಿಯೊಬ್ಬ ಮೊಟ್ಟೆ ಎಸೆದಿದ್ದಾನೆ. ಮಾಧ್ಯಮಗಳೊಂದಿಗೆ ಮಾತನಾಡಲು ಕುನಾಲ್ ಘೋಷ್ ಅವರು ಮಮತಾ ಬ್ಯಾನರ್ಜಿ ಅವರ ನಿವಾಸದ ಹೊರಗೆ ನಿಂತಿದ್ದಾಗ ಈ ಘಟನೆ ಸಂಭವಿಸಿದೆ. ಇಂದು ಸಂಜೆ ಸುಮಾರು 6.30ರ ಸುಮಾರಿಗೆ ಕುನಾಲ್ ಘೋಷ್ ಮಮತಾ ಬ್ಯಾನರ್ಜಿ ಅವರ ಮನೆಯಿಂದ ಹೊರಬಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಕಪ್ಪು ಶರ್ಟ್ ಧರಿಸಿದ್ದ ಯುವಕನೊಬ್ಬ ಅತ್ಯಂತ ಹತ್ತಿರದಿಂದ ಕುನಾಲ್ ಘೋಷ್ ಅವರ ತಲೆಗೆ ಗುರಿಯಾಗಿಸಿ ಮೊಟ್ಟೆಯೊಂದನ್ನು ಎಸೆದಿದ್ದಾನೆ.

ಈ ಘಟನೆಯಿಂದ ತೀವ್ರ ಆಕ್ರೋಶಗೊಂಡ ಶಾಸಕ ಕುನಾಲ್ ಘೋಷ್, ಇದು ಸಾರ್ವಜನಿಕರ ಸ್ವಾಭಾವಿಕ ಆಕ್ರೋಶವಲ್ಲ, ಬದಲಿಗೆ ವ್ಯವಸ್ಥಿತವಾಗಿ ಯೋಜಿಸಲಾದ ‘ಗೂಂಡಾಗಿರಿ’ ಎಂದು ಕರೆದಿದ್ದಾರೆ. ಇತ್ತೀಚೆಗಷ್ಟೇ ಸೋನಾರ್‌ಪುರದಲ್ಲಿ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆಯೂ ಸ್ಥಳೀಯರು ಮೊಟ್ಟೆ ಮತ್ತು ಕಲ್ಲುಗಳನ್ನು ಎಸೆದಿದ್ದರು. ಇದಲ್ಲದೆ ಬಿಧಾ‌ನನಗರದ ಮಾಜಿ ಮೇಯರ್ ಸಬ್ಯಸಾಚಿ ದತ್ತಾ, ಟಿಎಂಸಿ ನಾಯಕರಾದ ಜಯಪ್ರಕಾಶ್ ಮುಜುಂದಾರ್ ಮತ್ತು ಬಾಪ್ಪಾದಿತ್ಯ ದಾಸ್‌ಗುಪ್ತಾ ಸೇರಿದಂತೆ ಹಲವು ನಾಯಕರು ಇತ್ತೀಚೆಗೆ ಸಾರ್ವಜನಿಕವಾಗಿ ಅಥವಾ ಪೊಲೀಸ್ ವಶದಲ್ಲಿದ್ದಾಗ ಇಂತಹದೇ ಮೊಟ್ಟೆ ದಾಳಿಯನ್ನು ಎದುರಿಸಿದ್ದಾರೆ.

(Video Source: ANI)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಲೆನೋವಿನ ಜೊತೆಗೆ ಈ ಲಕ್ಷಣ ಕಂಡುಬಂದ್ರೆ ನಿರ್ಲಕ್ಷ್ಯ ಮಾಡಬೇಡಿ! ಇದು ಜೀವಕ್ಕೆ ಅಪಾಯಕಾರಿಯಾಗಬಹುದು – Kannada News | Dangerous Headache Symptoms Explained By Experts

ಇತ್ತೀಚಿನ ದಿನಗಳಲ್ಲಿ ತಲೆನೋವು (Headache) ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡ, ನಿದ್ರಾಹೀನತೆ, ದಣಿವು ಅಥವಾ ಹೆಚ್ಚು ಸಮಯ ಮೊಬೈಲ್ ಬಳಸುವುದರಿಂದ ಹಲವರಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಬಹುತೇಕರು ಪೇನ್‌ಕಿಲ್ಲರ್ ತೆಗೆದುಕೊಂಡು ಸಮಸ್ಯೆಯನ್ನು ತಾತ್ಕಾಲಿಕವಾಗಿ ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಆದರೆ ಪ್ರತಿಯೊಂದು ತಲೆನೋವೂ ಸಾಮಾನ್ಯವಲ್ಲ. ಕೆಲವೊಮ್ಮೆ ಇದು ಗಂಭೀರ ಮೆದುಳಿನ ಸಮಸ್ಯೆಗಳ ಮುನ್ನೆಚ್ಚರಿಕೆಯೂ ಆಗಿರಬಹುದು. ಹೌದು ಆರೋಗ್ಯ ತಜ್ಞರು ಹೇಳುವ ಪ್ರಕಾರ, ಕೆಲವು ಲಕ್ಷಣಗಳು ಉಪಾಯದ ಎಚ್ಚರಿಕೆಯ ಸೂಚನೆಯಾಗಿರಬಹುದು. ಹಾಗಾದರೆ ತಲೆನೋವಿನ ಜೊತೆಗೆ ಯಾವ ರೀತಿ ಲಕ್ಷಣ ಕಂಡುಬಂದರೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತೀವ್ರ ತಲೆನೋವು ಬಂದರೆ ಹೆಚ್ಚಿನ ಎಚ್ಚರ ವಹಿಸಿ

ಹಠಾತ್‌ ಆಗಿ ಜೀವನದಲ್ಲಿ ಎಂದಿಗೂ ಅನುಭವಿಸದಷ್ಟು ತೀವ್ರವಾದ ತಲೆನೋವು ಕೆಲವೇ ಕ್ಷಣಗಳಲ್ಲಿ ಹೆಚ್ಚಾದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ಇದು ಮೆದುಳಿನ ರಕ್ತನಾಳ ಸಿಡಿತ ಅಥವಾ ಒಳ ರಕ್ತಸ್ರಾವದ ಸೂಚನೆಯಾಗಿರಬಹುದು.

ಜ್ವರ ಮತ್ತು ಕುತ್ತಿಗೆ ಬಿಗಿತ

ತಲೆನೋವಿನ ಜೊತೆಗೆ ಜ್ವರ, ಕುತ್ತಿಗೆಯ ಆಸುಪಾಸಿನಲ್ಲಿ ಗಟ್ಟಿಯಾದಂತೆ ಅನಿಸುವುದು ಅಥವಾ ಗಡ್ಡವನ್ನು ಎದೆಗೆ ತಾಗಿಸಲು ಕಷ್ಟವಾಗುವುದು ಕಂಡುಬಂದರೆ ಅದು ಮೆನಿಂಜೈಟಿಸ್‌ ಎಂಬ ಮೆದುಳಿನ ಸೋಂಕಿನ ಲಕ್ಷಣವಾಗಿರಬಹುದು. ಇಂತಹ ಸಂದರ್ಭಗಳಲ್ಲಿ ತಕ್ಷಣ ಚಿಕಿತ್ಸೆ ಅಗತ್ಯ.

ಇದನ್ನೂ ಓದಿ: ತಕ್ಷಣ ಬರುವ ತೀವ್ರ ತಲೆನೋವು ಮತ್ತು ಆತಂಕ ಮೆದುಳಿನ ಅಸ್ವಸ್ಥತೆಯ ಲಕ್ಷಣವೇ?

ದೃಷ್ಟಿ ಮಂಕಾಗುವುದು ಮತ್ತು ವಾಂತಿ

ತಲೆನೋವಿನೊಂದಿಗೆ ಬೇರೆ ವಸ್ತುಗಳು ಎರಡೆರಡು ಬಾರಿ ಕಾಣುವುದು, ದೃಷ್ಟಿ ಮಂಕಾಗುವುದು ಅಥವಾ ಹಠಾತ್‌ ವಾಂತಿ ಆಗುವುದು ಮೆದುಳಿನ ಒಳ ಒತ್ತಡ ಹೆಚ್ಚಿದ ಸೂಚನೆಯಾಗಿರಬಹುದು. ಇದನ್ನು ಲಘುವಾಗಿ ತೆಗೆದುಕೊಳ್ಳಬಾರದು.

ದೇಹದ ಒಂದು ಭಾಗ ದುರ್ಬಲವಾಗುವುದು

ಮಾತನಾಡಲು ತೊಂದರೆ, ತಲೆ ಸುತ್ತುವುದು, ಸಮತೋಲನ ಕಳೆದುಕೊಳ್ಳುವುದು ಅಥವಾ ಕೈ, ಕಾಲು, ಮುಖದ ಒಂದು ಭಾಗ ಮಂಕಾಗುವುದು ಬ್ರೇನ್‌ ಸ್ಟ್ರೋಕ್‌ನ ಪ್ರಮುಖ ಲಕ್ಷಣಗಳು. ಇಂತಹ ಸಮಸ್ಯೆಗಳು ಕಂಡರೆ ತಕ್ಷಣ ಆಸ್ಪತ್ರೆಗೆ ಹೋಗಬೇಕು.

50 ವರ್ಷ ಮೇಲ್ಪಟ್ಟವರು ಹೆಚ್ಚು ಎಚ್ಚರವಹಿಸಬೇಕು

ಸಾಮಾನ್ಯವಾಗಿ 50 ವರ್ಷಗಳ ನಂತರ ಹೊಸ ರೀತಿಯ ತಲೆನೋವು ಆರಂಭವಾದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ವಿಶೇಷವಾಗಿ ಕ್ಯಾನ್ಸರ್ ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ತಲೆನೋವನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತದೆ.

ಹಾಗಾಗಿ ಸಾಮಾನ್ಯ ಮೈಗ್ರೇನ್ ಮತ್ತು ಅಪಾಯಕಾರಿ ತಲೆನೋವಿನ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಬಹಳ ಮುಖ್ಯ. ತಲೆನೋವಿನ ಜೊತೆಗೆ ಮೇಲಿನ ಯಾವುದೇ ಲಕ್ಷಣಗಳು ಕಂಡುಬಂದರೆ ಸ್ವಯಂ ಔಷಧಿ ಸೇವಿಸದೇ ತಕ್ಷಣ ನ್ಯೂರಾಲಜಿಸ್ಟ್‌ರನ್ನು ಸಂಪರ್ಕಿಸುವುದು ಸುರಕ್ಷಿತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಪಾನೀಯರ ಈ ಅಭ್ಯಾಸಗಳನ್ನು ಪಾಲಿಸುವ ಮೂಲಕ ಆರೋಗ್ಯವಂತರಾಗಿ ನೂರ್ಕಾಲ ಬಾಳಿ – Kannada News | Follow these Japanese habits to stay healthy

ಜಪಾನ್‌ (Japan) ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಸುಖ, ಶಾಂತಿ, ನೆಮ್ಮದಿಯ ಜೀವನಕ್ಕೆ ಹೆಸರುವಾಸಿಯಾಗಿರುವ ದೇಶ. ಇಲ್ಲಿನ ಜನರು ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವ ಮೂಲಕ ಆರೋಗ್ಯಕರ ಜೀವನವನ್ನು ಸಾಗಿಸುತ್ತಿದ್ದಾರೆ. ಇವರ ಈ ಸಣ್ಣ ಮತ್ತು ಪರಿಣಾಮಕಾರಿ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ಸಹ ನಿಮ್ಮ ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸಬಹುದು. ಆರೋಗ್ಯವಂತರಾಗಿ ಬಾಳಲು ಜಪಾನೀಯರ ಯಾವೆಲ್ಲಾ ಅಭ್ಯಾಸಗಳನ್ನು ಪಾಲಿಸಬೇಕು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಉತ್ತಮ ಆರೋಗ್ಯ ನಿಮ್ಮದಾಗಲು ಜಪಾನೀಯರ ಈ ಅಭ್ಯಾಸಗಳನ್ನು ಪಾಲಿಸಿ:

ಪೌಷ್ಟಿದಾಯ ಆಹಾರ ಸೇವನೆ: ಜಪಾನಿನ ಜನರು ಯಾವಾಗಲೂ ಹೆಚ್ಚಿನ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುತ್ತಾರೆ. ಅವರ ಊಟದಲ್ಲಿ ಹೆಚ್ಚಾಗಿ ಅನ್ನ ಮತ್ತು ಹಸಿರು ತರಕಾರಿಗಳು, ಸುಟ್ಟ, ಆವಿಯಲ್ಲಿ ಬೇಯಿಸಿದ ಆಹಾರಗಳು ಇರುತ್ತವೆ. ಇಂತಹ ಆಹಾರಗಳು ಜೀರ್ಣವಾಗುತ್ತವೆ ಮತ್ತು ಕರುಳಿನ ಆರೋಗ್ಯವನ್ನು ಉತ್ತಮಗೊಳಿಸುತ್ತವೆ. ಇದಲ್ಲದೆ ಇಲ್ಲಿನ ಜನ ಸ್ಥಳೀಯ, ಮನೆಯಲ್ಲಿ ತಯಾರಿಸಿದ, ರಾಸಾಯನಿಕ ಮುಕ್ತ ಮತ್ತು ನೈಸರ್ಗಿಕ ಆಹಾರವನ್ನು ಹೆಚ್ಚು ಸೇವನೆ ಮಾಡುತ್ತಾರೆ.

ವಜ್ರಾಸನದಲ್ಲಿ ಕುಳಿತು ಆಹಾರ ಸೇವಿಸುವುದು: ಜಪಾನಿಯರ ವಿಶಿಷ್ಟ ಅಭ್ಯಾಸವೆಂದರೆ ವಜ್ರಾಸನದಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವುದು. ಇದು ಅವರ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಗ್ಯಾಸ್, ಆಮ್ಲೀಯತೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯುತ್ತದೆ. ಅಲ್ಲದೆ ವಜ್ರಾಸನವು ಬೆನ್ನುಮೂಳೆಯನ್ನು ನೇರವಾಗಿ ಇಡುತ್ತದೆ.

ರಾತ್ರಿಯ ಊಟವನ್ನು ಬೇಗ ಮಾಡುವುದು: ತಜ್ಞರು ಯಾವಾಗಲೂ ಬೇಗ ಊಟ ಮಾಡುವಂತೆ ಶಿಫಾರಸು ಮಾಡುತ್ತಾರೆ. ಇದು ಒಳ್ಳೆಯ ಅಭ್ಯಾಸ. ಜಪಾನ್‌ನಲ್ಲಿ ಹೆಚ್ಚಿನ ಜನರು ಈ ಅಭ್ಯಾಸವನ್ನು ಅನುಸರಿಸುತ್ತಾರೆ. ಅವರು ಸಂಜೆ 7 ಗಂಟೆಯೊಳಗೆ ತಮ್ಮ ಭೋಜನವನ್ನು ಮುಗಿಸುತ್ತಾರೆ, ಇದು ತುಂಬಾ ಆರೋಗ್ಯಕರ ವಿಧಾನವಾಗಿದೆ. ದೇಹವು ರಾತ್ರಿಯಲ್ಲಿ ವಿಷವನ್ನು ನಿರ್ವಿಷಗೊಳಿಸಲು ಮತ್ತು ದುರಸ್ತಿ ಮಾಡಿಕೊಳ್ಳಲು ಸಾಕಷ್ಟು ಅವಕಾಶವನ್ನು ನೀಡುತ್ತದೆ. ಈ ಅಭ್ಯಾಸವನ್ನು ಅಳವಡಿಸಿಕೊಳ್ಳುವುದರಿಂದ ನೀವು ಆರೋಗ್ಯವಾಗಿರಲು ಸಹ ಸಹಾಯ ಮಾಡುತ್ತದೆ.

 ಗ್ರೀನ್ ಟೀ ಸೇವನೆ: ಜಪಾನ್‌ನಲ್ಲಿ ಗ್ರೀನ್ ಟೀ ವ್ಯಾಪಕವಾಗಿ ಸೇವಿಸಲಾಗುತ್ತದೆ. ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಗ್ರೀನ್ ಟೀ ಕುಡಿಯುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ, ತೂಕ ನಿಯಂತ್ರಣದಲ್ಲಿಡುತ್ತದೆ ಮತ್ತು ದೇಹವನ್ನು ನಿರ್ವಿಷಗೊಳಿಸುತ್ತದೆ. ಆದ್ದರಿಂದ, ಗ್ರೀನ್ ಟೀಯನ್ನು ನಿಮ್ಮ ದೈನಂದಿನ ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು.

ಇದನ್ನೂ ಓದಿ: ಪ್ರತಿದಿನ ಊಟದ ಬಳಿಕ ಒಂದು ಸ್ಪೂನ್‌ ಸೋಂಪು ತಿನ್ನಿ, ಅದ್ಭುತ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ

ವಾಕಿಂಗ್‌ ಮತ್ತು ಸೈಕ್ಲಿಂಗ್: ಜಪಾನಿನ ಜನರು ತಮ್ಮ ಆಹಾರವನ್ನು ಜೀರ್ಣಿಸಿಕೊಳ್ಳಲು ವಾಕಿಂಗ್‌ ಮತ್ತು ಸೈಕ್ಲಿಂಗ್ ಮಾಡುತ್ತಾರೆ. ಇದು ಅವರ ಆಹಾರವನ್ನು ವೇಗವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ರೋಗಗಳನ್ನು ದೂರವಿಡುತ್ತದೆ. ಇದಲ್ಲದೆ, ಇದು ಫಿಟ್ನೆಸ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಯೋಗ, ಧ್ಯಾನ ಮತ್ತು ಉತ್ತಮ ನಿದ್ರೆ: ಪ್ರತಿದಿನ ಸ್ವಲ್ಪ ಯೋಗ, ಕೆಲವು ನಿಮಿಷಗಳ ಧ್ಯಾನ ಮಾಡಿ ಮತ್ತು ಸಾಕಷ್ಟು ನಿದ್ರೆ ಪಡೆಯಿರಿ ಈ ಅಭ್ಯಾಸಗಳು ನಿಮ್ಮನ್ನು ಒತ್ತಡ, ಖಿನ್ನತೆ ಮತ್ತು ಅನಾರೋಗ್ಯದಿಂದ ಅವರನ್ನು ದೂರವಿಡುತ್ತದೆ.

ಬಲವಾದ ಸಾಮಾಜಿಕ ಸಂಬಂಧಗಳು: ಭಾವನಾತ್ಮಕ ಆರೋಗ್ಯಕ್ಕೆ ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಮುಖ್ಯವಾಗಿದೆ. ಇದು ಒಬ್ಬರಿಗೊಬ್ಬರು ಸೇರಿರುವ ಭಾವನೆಯನ್ನು ಬೆಳೆಸುತ್ತದೆ ಮತ್ತು ಸಾಮಾಜಿಕ ಬಂಧಗಳನ್ನು ಬಲಪಡಿಸುತ್ತದೆ, ಇದು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​: 2 ಕೋಟಿ ಹಣಕ್ಕಾಗಿ ಚಟ್ಟ, FSL ವರದಿಯನ್ನೇ ಬದಲಿಸಿದ್ದ ಖತರ್ನಾಕ್ ಗ್ಯಾಂಗ್ – Kannada News | Wife, Lover Among Nine Held For Killing Ex Serviceman To Claim Rs 2 Crore Insurance at Belagavi

ಬೆಳಗಾವಿ, ಜೂನ್ 15): ಕ್ರೈಂ, ತ್ರಿಲ್ಲರ್ ವೆಬ್ ಸೀರಿಸ್ ಮೀರಿಸುವಂತ ಕೊಲೆ ನಡೆದಿದೆ. ಇಲ್ಲಿ ಎಫ್ಎಸ್ಎಲ್ ಅಧಿಕಾರಿಗಳೇ ವರದಿಯನ್ನ ತಿರುಚಿ ಕೇಸ್ ಮುಚ್ಚಿ ಹಾಕುವ ಯತ್ನ ನಡೆಸಿದ್ದು ತನಿಖೆಯಲ್ಲಿ ಬಯಲಾಗಿದೆ. ಹೌದು…ಬೆಳಗಾವಿ (Belagavi) ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೇರಿಯ ಮಾಜಿ ಸೈನಿಕ ( Ex Serviceman) ಸಂದೀಪ್ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತ್ನಿ ಸುಮಾ, ತನ್ನ ಪತಿ ಮಾಜಿ ಸೈನಿಕನಾಗಿದ್ದ ಸಂದೀಪ್​​​​ ಮಂಜರಗಿಯನ್ನ ಹತ್ಯೆಗೈದು ಬಳಿಕ ಆಡಿದ್ದ ನೌಟಂಕಿ ಆಟ ಬಟಾಬಯಲಾಗಿದೆ. ಪ್ರಿಯಕರನ ತೆಕ್ಕೆಗಾಗಿ, 2 ಕೋಟಿ ರೂಪಾಯಿ ಇನ್ಶುರೆನ್ಸ್​​ ಹಣಕ್ಕಾಗಿ ಗಂಡನನ್ನೇ ಕೊಂದಿದ್ದ ಹಂತಕಿ ಇವಳು. ಪತಿ ಹತ್ಯೆಗಾಗಿ ಈಕೆ ಮಾಡಿದ್ದ ಮಸಲತ್ತು, ಕೊಲೆ ಸಾಕ್ಷ್ಯಗಳನ್ನ ಮುಚ್ಚಾಕಲು ಈಕೆ ಬಳಸಿದ್ದ ತಂತ್ರ ಕಂಡು ಪೊಲೀಸರು ಶಾಕ್ ಆಗಿದ್ದಾರೆ.. ಯಾಕಂದ್ರೆ, ಸಿನಿಮಾಗಳನ್ನೂ ಮೀರಿಸವಂತೆ ಸಂಚು ರೂಪಿಸಿದ್ದಾಳೆ.

2 ಕೋಟಿ ರೂಪಾಯಿ ವಿಮಾ ಹಣಕ್ಕಾಗಿ ಪತಿಯನ್ನು ಪತ್ನಿಯೇ ಹತ್ಯೆ ಮಾಡಿದ ಮತ್ತು ಸಾಕ್ಷ್ಯ ನಾಶಪಡಿಸಿದ ಪ್ರಕರಣವನ್ನು ಜಿಲ್ಲೆಯ ಯಮಕನಮರಡಿ ಠಾಣೆ ಪೊಲೀಸರು ಭೇದಿಸಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿ ಸೇರಿದಂತೆ ಒಟ್ಟು 9 ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಹಣ ಪಡೆದು, ಎಫ್ಎಸ್ಎಲ್ ಪ್ರಯೋಗಾಲಯದ ಸಿಬ್ಬಂದಿ ಸಹಾಯದಿಂದ ಆರೋಪಿಗಳು ವರದಿಯನ್ನೇ ಬದಲಿಸಿರುವುದು ರಾಜ್ಯದಲ್ಲೇ ಮೊದಲ ಪ್ರಕರಣ .

Source link

ಇರಾನ್-ಅಮೆರಿಕ ಶಾಂತಿ ಒಪ್ಪಂದವು ಭಾರತಕ್ಕೆ ಖುಷಿ ವಿಚಾರವಲ್ಲ: ಮಾಜಿ ಇಸ್ರೇಲ್ ವಕ್ತಾರರ ಎಚ್ಚರಿಕೆ – Kannada News | US Iran Peace Deal: Why It’s Bad News for India, Says Ex Israeli Spokesperson Eylon Levy

ನವದೆಹಲಿ, ಜೂನ್ 15: ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದ ಏರ್ಪಟ್ಟಿರುವುದು ಭಾರತಕ್ಕೆ ಖುಷಿ ಸುದ್ದಿಯಲ್ಲ. ಭಾರತ ಕಳವಳಪಡಬೇಕಾದ ಸಂಗತಿ ಎಂದು ಇಸ್ರೇಲ್​ನ ಮಾಜಿ ವಕ್ತಾರರಾದ ಐಲಾನ್ ಲೆವಿ (Eylon Levy) ಎಚ್ಚರಿಸಿದ್ದಾರೆ. ಭಾರತ ಈ ಒಪ್ಪಂದವನ್ನು ಜಾಗರೂಕತೆಯಿಂದ ಸ್ವಾಗತಿಸಿದೆ. ಆದರೆ, ಭಾರತಕ್ಕೆ ಇದು ದುರಂತ ತರುತ್ತದೆ ಎಂದು ಲೆವಿ ವಾದಿಸಿದ್ಧಾರೆ. ಈ ಶಾಂತಿ ಒಪ್ಪಂದವು ಭಾರತಕ್ಕೆ ಹೇಗೆ ಹಿನ್ನಡೆ ತರಬಲ್ಲುದು ಎಂದು ಅವರು ಕೆಲ ನಿದರ್ಶನಗಳನ್ನು ನೀಡಿದ್ದಾರೆ.

ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಸ್ಥಾನಮಾನ ಹೆಚ್ಚಳ

ಈ ಒಪ್ಪಂದದ ಸಂಧಾನ ಮಾತುಕತೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಪ್ರಮುಖ ಪಾತ್ರ ವಹಿಸಿದ್ದಾರೆ. ಐಲಾನ್ ಲೆವಿ ಅವರ ಪ್ರಕಾರ, “ಈ ಒಪ್ಪಂದವು ಭಾರತದ ಪರಮ ವೈರಿಯಾದ ಪಾಕಿಸ್ತಾನವನ್ನು ಜಾಗತಿಕ ಶಾಂತಿ ಸಂರಕ್ಷಕನ ಸ್ಥಾನಕ್ಕೆ ಏರಿಸಿದೆ”. ಪಾಕಿಸ್ತಾನದ ಭಯೋತ್ಪಾದನಾ ಪರ ನೀತಿಯನ್ನು ಜಗತ್ತಿನೆದುರು ಬಯಲು ಮಾಡಲು ಭಾರತ ನಡೆಸುತ್ತಿದ್ದ ಪ್ರಯತ್ನಗಳಿಗೆ ಇದು ಹಿನ್ನಡೆ ತರಲಿದ್ದು, ಇಸ್ಲಾಮಾಬಾದ್ ಅನ್ನು ಗ್ಲೋಬಲ್ ಸೌತ್​ನ (Global South) ನಾಯಕನನ್ನಾಗಿ ಬಿಂಬಿಸಲು ಸಹಾಯ ಮಾಡುತ್ತದೆ ಎಂಬುದು ಅವರ ವಾದ.

ಇದನ್ನೂ ಓದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ; ಪಶ್ಚಿಮ ಏಷ್ಯಾದಲ್ಲಿ ಶಾಂತಿಗೆ ಕರೆ ನೀಡಿದ ಮೋದಿ

ಭಾರತದ ವ್ಯಾಪಾರ ಮಾರ್ಗಕ್ಕೆ ಕುತ್ತು

ಭಾರತವು ಪಶ್ಚಿಮ ಏಷ್ಯಾದ ಮೂಲಕ ಯುರೋಪ್ ತಲುಪಲು ರೂಪಿಸಿದ್ದ ಮಹತ್ವಾಕಾಂಕ್ಷೆಯ ‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ (IMEC) ಯೋಜನೆಗೆ ಈ ಒಪ್ಪಂದದಿಂದ ಧಕ್ಕೆಯಾಗಬಹುದು. ನಿರ್ಬಂಧಗಳಿಂದ ಮುಕ್ತಿ ಪಡೆದು ಆರ್ಥಿಕವಾಗಿ ಬಲಗೊಳ್ಳುವ ಇರಾನ್, ಬ್ಯಾಲಿಸ್ಟಿಕ್ ಕ್ಷಿಪಣಿಗಳ ನೆರವಿನಿಂದ ಭಾರತದ ಪಶ್ಚಿಮದ ವ್ಯಾಪಾರ ಹೆಬ್ಬಾಗಿಲನ್ನು ತನ್ನ ಹತೋಟಿಗೆ ತೆಗೆದುಕೊಳ್ಳಬಹುದು. ಇದರಿಂದಾಗಿ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳು ಮುಕ್ತವಾಗಿ ಓಡಾಡುವಂತಾಗಿ, ಹಿಂದೂ ಮಹಾಸಾಗರ ಮತ್ತು ಕೆಂಪು ಸಮುದ್ರದ ಹಡಗು ಮಾರ್ಗಗಳಿಗೆ ಹೊಸ ಭದ್ರತಾ ಆತಂಕ ಎದುರಾಗಲಿದೆ ಎಂದು ಐಲಾನ್ ಲೆವಿ ಎಚ್ಚರಿಸಿದ್ದಾರೆ.

ಗಲ್ಫ್ ರಾಷ್ಟ್ರಗಳಲ್ಲಿರುವ 1 ಕೋಟಿ ಭಾರತೀಯರ ಭದ್ರತೆಗೆ ಅಪಾಯ

ಮಧ್ಯಪ್ರಾಚ್ಯ ಅಥವಾ ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು 10 ಮಿಲಿಯನ್ (1 ಕೋಟಿ) ಭಾರತೀಯ ವಲಸೆ ಕಾರ್ಮಿಕರು ವಾಸಿಸುತ್ತಿದ್ದಾರೆ. ಈ ಒಪ್ಪಂದವು ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಭೀತಿಯನ್ನು ಸಂಪೂರ್ಣವಾಗಿ ತೊಡೆದುಹಾಕಿಲ್ಲ. ಈ ಪ್ರದೇಶದಲ್ಲಿ ಇರಾನ್‌ನ ಬೆದರಿಕೆಗಳು ಸಂಪೂರ್ಣವಾಗಿ ಶಾಂತವಾಗದ ಹೊರತು, ಅಲ್ಲಿರುವ ಭಾರತೀಯ ಕಾರ್ಮಿಕರ ರಕ್ಷಣೆ ಮತ್ತು ಅವರು ಭಾರತಕ್ಕೆ ಕಳುಹಿಸುವ ಹಣದ (Remittances) ಭದ್ರತೆಗೆ ಆತಂಕ ಮುಂದುವರಿಯಲಿದೆ ಎಂದು ಇಸ್ರೇಲ್​ನ ಮಾಜಿ ವಕ್ತಾರರು ಅಭಿಪ್ರಾಯಪಟ್ಟಿದ್ದಾರೆ.

ಇರಾನ್ ಪರಮಾಣು ಸಮಸ್ಯೆಗೆ ಪರಿಹಾರ ಸಿಗದಿರುವುದು

ಈ ಒಪ್ಪಂದದಲ್ಲಿ ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಕ್ಷಿಪಣಿ ಸಾಮರ್ಥ್ಯಗಳನ್ನು ತಡೆಯುವ ಯಾವುದೇ ಕಟ್ಟುನಿಟ್ಟಿನ ನಿಯಮಗಳಿಲ್ಲ. ಅಮೆರಿಕ ತನ್ನ ಸಂಪೂರ್ಣ ಹಿಡಿತವನ್ನು ಬಿಟ್ಟುಕೊಟ್ಟು ಶರಣಾಗಿರುವುದರಿಂದ, ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಇರಾನ್ ಭವಿಷ್ಯದಲ್ಲಿ ಪರಮಾಣು ಅಸ್ತ್ರಗಳನ್ನು ಹೊಂದಬಹುದು. ಇದು ಭಾರತದ ರಾಷ್ಟ್ರೀಯ ಭದ್ರತೆಗೆ ದೀರ್ಘಕಾಲದ ದೊಡ್ಡ ಬೆದರಿಕೆಯಾಗಲಿದೆ ಎಂದೂ ಲೆವಿ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Video: ಅಮೆರಿಕ-ಇರಾನ್ ಶಾಂತಿ ಒಪ್ಪಂದ: 108 ದಿನಗಳ ಯುದ್ಧಕ್ಕೆ ತೆರೆ, ಪ್ರಮುಖ ಷರತ್ತುಗಳೇನು?

ಭೌಗೋಳಿಕ ರಾಜಕೀಯ ವಿಶ್ಲೇಷಕರಾದ ಇಯಾನ್ ಬ್ರೆಮ್ಮರ್ ಕೂಡ ಇದನ್ನು ಬೆಂಬಲಿಸಿದ್ದು, “ವಿಶ್ವಕ್ಕೆ ಹಾರ್ಮುಜ್ ಜಲಮಾರ್ಗ ಮುಕ್ತವಾಗಬೇಕಿರುವುದು ಅನಿವಾರ್ಯವಾಗಿತ್ತು. ಆದರೆ ಪರಮಾಣು ಮತ್ತು ಕ್ಷಿಪಣಿ ನಿಯಂತ್ರಣದ ಬಗ್ಗೆ ಒಪ್ಪಂದದಲ್ಲಿ ಯಾವುದೇ ಉಲ್ಲೇಖವಿಲ್ಲದಿರುವುದು ಟ್ರಂಪ್ ಆಡಳಿತದ ಬಹುದೊಡ್ಡ ವಿದೇಶಾಂಗ ನೀತಿಯ ವಿಫಲತೆ” ಎಂದು ಕರೆದಿದ್ದಾರೆ.

ಹೀಗಾಗಿ, ಮಧ್ಯಪ್ರಾಚ್ಯದಲ್ಲಿ ಭಾರತವು ಹೊಂದಿರುವ ‘ತಟಸ್ಥ ನೀತಿ’ಯನ್ನು (Neutrality) ಇನ್ನು ಮುಂದೆ ಕಾಪಾಡಿಕೊಳ್ಳುವುದು ಕಷ್ಟವಾಗಬಹುದು ಮತ್ತು ಭಾರತವು ಇಸ್ರೇಲ್‌ನೊಂದಿಗೆ ಮತ್ತಷ್ಟು ಹತ್ತಿರದ ಕಾರ್ಯತಂತ್ರದ ಸಂಬಂಧವನ್ನು ಹೊಂದುವುದು ಅನಿವಾರ್ಯವಾಗಲಿದೆ ಎಂದು ಲೆವಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿ ನನಗೆ ಅಧಿಕಾರ ಸಾಕು ಅಂದಿದ್ರು; ಅಚ್ಚರಿಯ ಸಂಗತಿ ಬಿಚ್ಚಿಟ್ಟ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ – Kannada News | PM Modi never wanted power Union Minister Pralhad Joshi reveals interesting Details

ಬೆಂಗಳೂರು, ಜೂನ್ 15: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟಿವಿ9 ಜೊತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ದಾಖಲೆಯ ಆಡಳಿತಾವಧಿ ಮತ್ತು ನಾಯಕತ್ವದ ಕುರಿತು ಮಾತನಾಡಿದ್ದಾರೆ. ಟಿವಿ9ನ ರಂಗನಾಥ್ ಭಾರದ್ವಾಜ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದಾಖಲೆಯ ಆಡಳಿತಾವಧಿ ಮತ್ತು ನಾಯಕತ್ವದ ಕುರಿತು ಪ್ರಲ್ಹಾದ್ ಜೋಶಿ (Pralhad Joshi) ಸುದೀರ್ಘವಾಗಿ ಮಾತನಾಡಿದ್ದಾರೆ.

ಆರಂಭದಲ್ಲಿ ಯು.ಆರ್. ಅನಂತಮೂರ್ತಿ ಅವರಂತಹ ಕೆಲವರು ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಾಗಿ ಹೇಳಿದ್ದರು. ಇದು ಅವರ ನಾಯಕತ್ವದ ಬಗ್ಗೆ ಇದ್ದ ಆರಂಭಿಕ ಅನುಮಾನಗಳನ್ನು ಸೂಚಿಸುತ್ತದೆ. ಆದರೆ ಮೋದಿ ಅವರು ಇದೇ ವ್ಯವಸ್ಥೆಯಲ್ಲಿ ಕೆಲಸ ಮಾಡಿ, ರಾಷ್ಟ್ರ ಮೊದಲು ಎಂಬ ತತ್ವವನ್ನು ಅಕ್ಷರಶಃ ಅನುಷ್ಠಾನಕ್ಕೆ ತಂದರು. ಅವರಿಗೆ ಅಧಿಕಾರದ ಆಸಕ್ತಿ ಇರಲಿಲ್ಲ. 2002ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ತಮ್ಮ ಕೆಲಸ ಮುಗಿದ ನಂತರ, ಅವರು ಸಂಘಟನಾ ಕಾರ್ಯಕ್ಕೆ ಮರಳಲು ಯೋಚಿಸಿದ್ದರು. ಇದು ಅವರ ನಿರ್ಲಿಪ್ತ ಸ್ವಭಾವವನ್ನು ತೋರಿಸುತ್ತದೆ. ಮೋದಿ ಎಂದಿಗೂ ಅಧಿಕಾರಕ್ಕೆ ಆಸೆ ಪಡಲಿಲ್ಲ. ಅವರು ಅಧಿಕಾರ ಸಾಕು ಎಂದಿದ್ದರು. ಮೋದಿ ಅವರು ಜನರಲ್ಲಿ ನಿರಾಶೆಯನ್ನು ತುಂಬುವ ಬದಲು, ಭರವಸೆ ಮತ್ತು ಆಸೆಯನ್ನು ತುಂಬುವ ನಾಯಕರಾಗಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಬಣ್ಣಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್‌ನಲ್ಲಿ ತುರ್ತು ಪರಿಸ್ಥಿತಿ ಮನಸ್ಥಿತಿ ಇನ್ನೂ ಜೀವಂತವಾಗಿದೆ; ಅಶೋಕ್ ಗೆಹ್ಲೋಟ್ ಹೇಳಿಕೆಗೆ ಬಿಜೆಪಿ ತಿರುಗೇಟು – Kannada News | Congress has not shed Emergency mindset BJP Hits back on Ashok Gehlot’s remarks

ನವದೆಹಲಿ, ಜೂನ್ 15: ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ (Ashok Gehlot) ಇಂದು ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. ಇಂದು ಇಂದಿರಾ ಗಾಂಧಿ ಬದುಕಿರುತ್ತಿದ್ದರೆ, ಅವರು ಅಧಿಕಾರದಲ್ಲಿರುತ್ತಿದ್ದರೆ ಬಿಜೆಪಿಯನ್ನು ಬ್ಯಾನ್ ಮಾಡುತ್ತಿದ್ದರು ಎಂದು ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಕಾಂಗ್ರೆಸ್ ನಾಯಕತ್ವಕ್ಕೆ ಇಂದಿಗೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಅವರು ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲು ಬಯಸುತ್ತಾರೆ ಎಂದು ಬಿಜೆಪಿ ಆರೋಪಿಸಿದೆ.

“ಕಾಂಗ್ರೆಸ್ ಪಕ್ಷಕ್ಕೆ ಇಂದಿಗೂ 1975ರ ತುರ್ತು ಪರಿಸ್ಥಿತಿಯ ಸರ್ವಾಧಿಕಾರಿ ಮನಸ್ಥಿತಿಯಿಂದ ಹೊರಬರಲು ಸಾಧ್ಯವಾಗಿಲ್ಲ. ಒಂದು ವೇಳೆ ಇವರು ಮತ್ತೆ ಅಧಿಕಾರಕ್ಕೆ ಬಂದರೆ ವಿರೋಧ ಪಕ್ಷಗಳನ್ನೇ ನಿಷೇಧಿಸಿ ಪ್ರಜಾಪ್ರಭುತ್ವವನ್ನು ಧ್ವಂಸ ಮಾಡುತ್ತಾರೆ” ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಇಂದಿರಾ ಗಾಂಧಿ ಬದುಕಿದ್ದರೆ ಬಿಜೆಪಿಗೆ ನಿಷೇಧ ಹೇರುತ್ತಿದ್ದರು; ವಿವಾದಕ್ಕೀಡಾದ ಅಶೋಕ್ ಗೆಹ್ಲೋಟ್

ಜೈಪುರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ಬಿಜೆಪಿ ಮತ್ತು ಆರ್‌ಎಸ್‌ಎಸ್ ಸೈದ್ಧಾಂತಿಕ ನಿಲುವುಗಳು ದೇಶಕ್ಕೆ ಅಪಾಯಕಾರಿ. ಒಂದು ವೇಳೆ ಇಂದು ಇಂದಿರಾ ಗಾಂಧಿಯವರಂತಹ ನಾಯಕರು ಅಧಿಕಾರದಲ್ಲಿರುತ್ತಿದ್ದರೆ, ಅವರು ಬಿಜೆಪಿಯಂತಹ ಪಕ್ಷವನ್ನು ಖಂಡಿತವಾಗಿಯೂ ನಿಷೇಧಿಸುತ್ತಿದ್ದರು. ಹಿಂದುತ್ವ ಮತ್ತು ಧರ್ಮದ ಹೆಸರಿನಲ್ಲಿ ನೀವು ರಾಜಕೀಯ ಪಕ್ಷವನ್ನು ನಡೆಸಲು ಸಾಧ್ಯವಿಲ್ಲ. ಧರ್ಮದ ಆಧಾರದ ಮೇಲೆ ರಾಜಕೀಯ ಮಾಡಲು ನಮ್ಮ ಸಂವಿಧಾನ ಅನುಮತಿ ನೀಡುವುದಿಲ್ಲ. ದೇಶದಲ್ಲಿ ಸದ್ಯದ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿದೆ” ಎಂದು ಹೇಳಿದ್ದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಇಡಿ (ED), ಸಿಬಿಐ (CBI) ಮತ್ತು ಐಟಿ ಇಲಾಖೆಗಳಂತಹ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷಗಳನ್ನು ಹತ್ತಿಕ್ಕುತ್ತಿದೆ. ಚುನಾವಣಾ ಆಯೋಗವು ಬಿಜೆಪಿಯ ಏಜೆಂಟ್‌ನಂತೆ ಕೆಲಸ ಮಾಡುತ್ತಿದೆ ಎಂದು ಗೆಹ್ಲೋಟ್ ಆರೋಪಿಸಿದ್ದರು.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನ 2ನೇ ಪಟ್ಟಿ ಪ್ರಕಟ; ಕಮಲನಾಥ್, ಅಶೋಕ್ ಗೆಹ್ಲೋಟ್ ಪುತ್ರರಿಗೆ ಸ್ಥಾನ

ಅಶೋಕ್ ಗೆಹ್ಲೋಟ್ ಹೇಳಿಕೆ ಹೊರಬೀಳುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಮತ್ತು ಶೆಹಜಾದ್ ಪೂನಾವಾಲಾ ಕಾಂಗ್ರೆಸ್ ವಿರುದ್ಧ ವೀಡಿಯೊ ಮೂಲಕ ವಾಗ್ದಾಳಿ ನಡೆಸಿದ್ದಾರೆ. “ಅಶೋಕ್ ಗೆಹ್ಲೋಟ್ ಅವರ ಹೇಳಿಕೆ ಕಾಂಗ್ರೆಸ್ ಇಂದಿಗೂ ಪ್ರಜಾಪ್ರಭುತ್ವ ವಿರೋಧಿ ಎಂಬುದನ್ನು ಸ್ಪಷ್ಟಪಡಿಸಿದೆ. ಗಾಂಧಿ-ವಾದ್ರಾ ಕುಟುಂಬವೇ ಭಾರತೀಯ ಪ್ರಜಾಪ್ರಭುತ್ವಕ್ಕೆ ಇರುವ ಅತಿ ದೊಡ್ಡ ಗಂಡಾಂತರ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿಯನ್ನು ಹೇರಿ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತದೆ ಎಂಬುದು ಇದರಿಂದ ಸಾಬೀತಾಗಿದೆ” ಎಂದು ಪ್ರದೀಪ್ ಭಂಡಾರಿ ಹೇಳಿದ್ದಾರೆ.

“ವಿರೋಧ ಪಕ್ಷಗಳನ್ನು ನಿಷೇಧಿಸುವುದು ಕಾಂಗ್ರೆಸ್‌ನ ಹಳೆಯ ರೋಗ. ಜನಬೆಂಬಲ ಕಳೆದುಕೊಂಡಿರುವ ಕಾಂಗ್ರೆಸ್, ಈಗ ಇಂತಹ ಹತಾಶೆಯ ಹೇಳಿಕೆಗಳನ್ನು ನೀಡುತ್ತಿದೆ. ಕಾಂಗ್ರೆಸ್ ಈ ಹಿಂದೆ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಗಾಗಿ ದೇಶದ ಜನರ ಕ್ಷಮೆ ಕೇಳುವ ಬದಲು, ಇಂದಿಗೂ ಅದನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕುಟುಂಬಕ್ಕೆ ರಾಜಕೀಯ ಎದುರಾಳಿಗಳನ್ನು ನಿಷೇಧಿಸುವ ಸರ್ವಾಧಿಕಾರಿ ಆಸೆ ಇದೆ” ಎಂದು ಬಿಜೆಪಿ ಆರೋಪಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link