ಅಡುಗೆಮನೆಯ ಮಸಾಲೆಯಲ್ಲಿ ವಿಷ; ಮಾಜಿ ಪತ್ನಿಯ ಇಡೀ ಕುಟುಂಬವನ್ನೇ ಕೊಲ್ಲಲು ನಡೆದಿತ್ತು ಸಂಚು!
ಹೈದರಾಬಾದ್, ಏಪ್ರಿಲ್ 21: ಸಿರಿಷಾ ಎಂಬ ಯುವತಿ ಇಂಗ್ಲೆಂಡ್ನಲ್ಲಿ ನೆಲೆಸಿದ್ದ ಫಾರ್ಮಾಸಿಸ್ಟ್ ಒಬ್ಬನನ್ನು ಮದುವೆಯಾಗಿದ್ದಳು. ಆದರೆ, ಆಕೆಗೆ ಆತನೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗದೆ ವಿಚ್ಛೇದನ ಪಡೆದು ಇನ್ನೊಬ್ಬನನ್ನು ಮದುವೆಯಾಗಿದ್ದಳು. 2ನೇ ವಿವಾಹವಾಗಿದ್ದ ಆಕೆ ಖುಷಿಯಾಗಿರುವುದನ್ನು ಮೊದಲ ಗಂಡನಿಗೆ ನೋಡಲು ಕಷ್ಟವಾಗುತ್ತಿತ್ತು. ಹೀಗಾಗಿ, ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಇಡೀ ಕುಟುಂಬವನ್ನೇ ನಾಶ ಮಾಡುವ ಸಂಚು ಮಾಡಿದ್ದ. ಇದು ಹೈದರಾಬಾದ್ನ ಕತೆ. 2023ರಲ್ಲಿ ನಡೆದ ಘಟನೆ ಇದು. ಶಶಿರೇಖಾ ಎಂಬ ಯುವತಿಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿತ್ತು. ಆಕೆಯ…