Category Archives: Blog

Your blog category

ಚಿಕ್ಕಮಗಳೂರಿನ ಹಲವೆಡೆ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ – Kannada News | Hikkamagaluru Hit by Cloudburst; Untimely Rains Damage Coffee Crops

ಚಿಕ್ಕಮಗಳೂರು, ಜನವರಿ 13: ಕಾಫಿನಾಡು ಚಿಕ್ಕಮಗಳೂರಲ್ಲಿ ಈ‌ ವರ್ಷದ ಮೊದಲ ‌ಮಳೆಯ ಸಿಂಚನವಾಗಿದೆ. ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ , ಕಳಸ, ಶೃಂಗೇರಿ, NR ಪುರ ಭಾಗದಲ್ಲಿ ವರುಣ ಅಬ್ಬರಿಸಿದ್ದು, ದಿಢೀರ್ ಸುರಿದ ಮಳೆಯಿಂದ ಜನರು ಕಂಗಾಲಾದ ಪ್ರಸಂಗ ನಡೆದಿದೆ. ಕಳೆದ ಒಂದು ವಾದದಿಂದ ಕೊರೆಯುವ ಚಳಿ, ಶೀತ ಗಾಳಿಗೆ ಜಿಲ್ಲೆಯ ಜನರು ಹೈರಾಣಾಗಿರುವ ನಡುವೆ ಧಾರಾಕಾರವಾಗಿ ಸುರಿದ ಮಳೆ ಕಾಫಿ ಬೆಳೆಗಾರರನ್ನ ಆತಂಕಕ್ಕೆ ದೂಡಿದೆ. ಜಿಲ್ಲೆಯಾದ್ಯಂತ ಕಾಫಿ ಫಸಲಿನ ಕೊಯ್ಲು ನಡೆಯುತ್ತಿದ್ದು, ಒಣ‌ ಹಾಕಿದ ಕಾಫಿ ಮಳೆಯಿಂದ ಸಂಪೂರ್ಣ ನೆನೆದು ಹಾಳಾಗಿದೆ. ಕೆಲವೆಡೆ ಬೆಳೆ ನೀರಲ್ಲಿ ಕೊಚ್ಚಿ ಹೋಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆರೋಗ್ಯವಾಗಿರಲು ಮಾತ್ರೆ ತಗೋಳೋದು ಬಿಟ್ಟು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನಕೊಡಿ! – Kannada News | Boost Immunity with These Superfoods

ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿರುವುದೇ ಒಂದು ದೊಡ್ಡ ಸವಾಲಾಗಿದೆ. ಜೀವನಶೈಲಿಯಲ್ಲಿ ಮಾಡಿಕೊಂಡಿರುವ ಬದಲಾವಣೆ, ಕೆಲಸದ ಒತ್ತಡ, ಸರಿಯಾಗಿ ಆಹಾರ ಸೇವನೆ ಮಾಡದಿರುವುದು ಸೇರಿದಂತೆ ನಾನಾ ಕಾರಣಗಳು ಇದಕ್ಕೆ ಕಾರಣವಾಗಿರಬಹುದು. ಏನೇ ಆಗಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದೇ ರೀತಿ ದೊಡ್ಡ ದೊಡ್ಡ ಕಾಯಿಲೆಗಳಿಂದ ದೂರವಿರಬೇಕಾಗುತ್ತದೆ. ಆದರೆ ಇದಕ್ಕೆ ನಾನಾ ರೀತಿಯ ಔಷಧಿ, ಮಾತ್ರೆಗಳನ್ನು ಸೇವನೆ ಮಾಡುವ ಮೊದಲು ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆಯನ್ನು (Immune System) ಬಲಪಡಿಸಿಕೊಳ್ಳಬೇಕು. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿ ಆರೋಗ್ಯವಾಗಿರಲು ಇದು ಪ್ರಮುಖ ಅಡಿಪಾಯವಾಗಿರುತ್ತದೆ. ಈ ರೋಗನಿರೋಧಕ ಶಕ್ತಿ ಬಲವಾಗಿದ್ದಷ್ಟೂ ಆರೋಗ್ಯ ಸಮಸ್ಯೆಗಳು ದೂರ ಉಳಿಯುತ್ತವೆ. ಹಾಗಾದರೆ ಇದನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

  • ಬೆಟರ್ ಹೆಲ್ತ್ ಪ್ರಕಾರ, ರೋಗನಿರೋಧಕ ಶಕ್ತಿ ಬಿಳಿ ರಕ್ತ ಕಣಗಳು, ಪ್ರತಿಕಾಯಗಳು, ದುಗ್ಧರಸ ವ್ಯವಸ್ಥೆ, ಗುಲ್ಮ, ಮೂಳೆ ಮಜ್ಜೆ ಮತ್ತು ಥೈಮಸ್ ಗ್ರಂಥಿಯಂತಹ ಹಲವು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಅದಕ್ಕಾಗಿಯೇ ನಿಮ್ಮ ರೋಗನಿರೋಧಕ ಶಕ್ತಿಯನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
  • ರೋಗನಿರೋಧಕ ಶಕ್ತಿ ದುರ್ಬಲಗೊಂಡರೆ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು. ಹಾಗಾಗಿ ಸೇವಿಸುವ ಆಹಾರವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.
  • ಅದಕ್ಕಾಗಿಯೇ ಆಹಾರದಲ್ಲಿ ಸಾಧ್ಯವಾದಷ್ಟು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ಸೇರಿಸಿಕೊಳ್ಳುವುದು ಒಳ್ಳೆಯದು. ಹಣ್ಣುಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ತ್ವರಿತವಾಗಿ ಹೆಚ್ಚಿಸುವ ಏಕೈಕ ಆಹಾರಗಳಾಗಿವೆ. ಆದ್ದರಿಂದ, ಪೌಷ್ಟಿಕತಜ್ಞರು ವರ್ಷದ ಆಯಾ ಸಮಯಕ್ಕೆ ಅನುಗುಣವಾಗಿ ಎಲ್ಲಾ ಋತುಗಳಲ್ಲಿ ಲಭ್ಯವಿರುವ ಹಣ್ಣುಗಳನ್ನು ಸೇವಿಸಲು ಸಲಹೆ ನೀಡುತ್ತಾರೆ.
  • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಕೇವಲ ಹಣ್ಣುಗಳಷ್ಟೇ ಅಲ್ಲ. ಗ್ರೀನ್ ಟೀ ಕೂಡ ಮುಖ್ಯ. ಟೀ ಅಥವಾ ಕಾಫಿ ಕುಡಿಯುವ ಬದಲು ಗ್ರೀನ್ ಟೀಯನ್ನು ನಿಮ್ಮ ದೈನಂದಿನ ಜೀವನಶೈಲಿಯಲ್ಲಿ ಸೇರಿಸಿಕೊಂಡರೆ, ರೋಗಗಳು ದೂರವಾಗುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಸಿ ನೀರಿನಿಂದ ತಲೆಸ್ನಾನ ಮಾಡುವುದರಿಂದ ಆಗುವ ಪರಿಣಾಮಗಳೇನು ಗೊತ್ತಾ? – Kannada News | What happens if you wash your hair with hot water?

ಕೂದಲಿನ (hair) ಆರೈಕೆಯ ದೃಷ್ಟಿಯಿಂದ ತಲೆ ಸ್ನಾನ ಮಾಡುವಾಗ ಕೆಲ ಸೂಕ್ಷ್ಮತೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ವಾರಕ್ಕೆ ಎಷ್ಟು ಬಾರಿ ತಲೆ ಸ್ನಾನ ಮಾಡಬೇಕು, ಯಾವ ಶ್ಯಾಂಪೂ ಕಂಡೀಷನರ್‌ ಬಳಸಿದರೆ ಉತ್ತಮ ಎಂಬುದನ್ನು ನೋಡುವಂತೆ ತಲೆ ಸ್ನಾನ ಮಾಡುವಾಗ ನೀರಿನ ತಾಪಮಾನದ ಬಗ್ಗೆಯೂ ಗಮನ ಕೊಡಬೇಕು. ತಪ್ಪಿಯೂ ಬಿಸಿ ಬಿಸಿ ನೀರಿನಿಂದ ತಲೆ ಸ್ನಾನ ಮಾಡಲೇಬಾರದಂತೆ. ಹೀಗೆ ಬಿಸಿ ನೀರಿನಿಂದ ತಲೆಸ್ನಾನ ಮಾಡುವ ಅಭ್ಯಾಸ ನಿಮಗೂ ಇದ್ಯಾ? ಹಾಗಿದ್ರೆ ಇದರಿಂದ ಕೂದಲಿಗೆ ಸಂಬಂಧಿಸಿದ ಯಾವೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಬಿಸಿ ನೀರಿನಿಂದ ತಲೆಸ್ನಾನ ಮಾಡುವುದರಿಂದ ಉಂಟಾಗುವ ಪರಿಣಾಮಗಳೇನು?

  • ನಮ್ಮ ನೆತ್ತಿಯಲ್ಲಿ ನೈಸರ್ಗಿಕ ಎಣ್ಣೆಗಳಿದ್ದು ಅವು ಕೂದಲನ್ನು ಪೋಷಿಸಿ ಹೊಳೆಯುವಂತೆ ಮಾಡುತ್ತದೆ. ಬಿಸಿ ನೀರಿನಿಂದ ಕೂದಲನ್ನು ತೊಳೆಯುವುದರಿಂದ ಈ ಎಣ್ಣೆ ಮಾಸಿ ಹೋಗುತ್ತವೆ ಮತ್ತು ಇದು ಕೂದಲು ಒಣಗುವಿಕೆಗೆ ಕಾರಣವಾಗುತ್ತದೆ.
  • ಕಲರಿಂಗ್‌ ಮಾಡಿದ ಕೂದಲಿಗೆ ಸಾಮಾನ್ಯ ಕೂದಲಿಗಿಂತ ಬಿಸಿನೀರು ಹೆಚ್ಚು ಹಾನಿಕಾರಕ. ಇದು ಕೂದಲಿನ ಹೊರಪೊರೆಗಳನ್ನು ತೆರೆಯುತ್ತದೆ, ಇದರಿಂದಾಗಿ ಬಣ್ಣ ಮಾಸಿ ಕೂದಲು ಮಂದವಾಗಿ ಕಾಣುತ್ತದೆ.
  • ಬಿಸಿ ನೀರಿನಿಂದ ಕೂದಲನ್ನು ತೊಳೆಯುವುದರಿಂದ ನೆತ್ತಿ ಒಣಗಿ, ತಲೆಹೊಟ್ಟು, ತುರಿಕೆ ಮತ್ತು ಕಿರಿಕಿರಿ ಸಮಸ್ಯೆ ಉಂಟಾಗುತ್ತದೆ.
  • ಬಿಸಿನೀರು ನೆತ್ತಿಗೆ ರಕ್ತ ಪರಿಚಲನೆಯನ್ನು ಕಡಿಮೆ ಮಾಡುತ್ತದೆ, ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೂದಲು ಉದುರುವ ಅಪಾಯವನ್ನು ಹೆಚ್ಚಿಸುತ್ತದೆ.
  • ಒಣ ನೆತ್ತಿ ಮತ್ತು ದುರ್ಬಲ ಕೂದಲು ಬೇರುಗಳಿಂದ ಒಡೆಯಲು ಪ್ರಾರಂಭಿಸುತ್ತದೆ, ಇದರಿಂದಾಗಿ ಅತಿಯಾದ ಕೂದಲು ಉದುರುವಿಕೆ ಉಂಟಾಗುತ್ತದೆ.
  • ನಿರಂತರವಾಗಿ ತಲೆಸ್ನಾನಕ್ಕೆ ಬಿಸಿನೀರನ್ನು ಬಳಸುವುದರಿಂದ ನಿಮ್ಮ ಕೂದಲಿನ ಹೊಳಪು ಕಡಿಮೆಯಾಗುತ್ತದೆ.
  • ಕೂದಲನ್ನು ಬಿಸಿ ನೀರಿನಿಂದ ತೊಳೆದಾಗ, ಕೂದಲಿನ ಕಿರುಚೀಲಗಳು ತೆರೆಯುತ್ತದೆ, ಕೂದಲಿನ ಹೊರಪೊರೆಗಳ ಕೆರಾಟಿನ್ ಮತ್ತು ಲಿಪಿಡ್ ಬಂಧಗಳನ್ನು ತೀವ್ರವಾಗಿ ಹಾನಿಗೊಳಿಸುತ್ತದೆ. ಬಿಸಿನೀರನ್ನು ನಿರಂತರವಾಗಿ ಬಳಸಿದರೆ, ನಿಮ್ಮ ಕೂದಲಿಗೆ ಆಗುವ ಹಾನಿಯನ್ನು ಸರಿಪಡಿಸುವುದು ಕಷ್ಟವಾಗುತ್ತದೆ.

ಇದನ್ನೂ ಓದಿ: ಶ್ಯಾಂಪೂಗೆ ವಸ್ತುವನ್ನು ಬೆರೆಸಿ ಹಚ್ಚಿದರೆ ನಯವಾದ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ

ತಲೆಸ್ನಾನ ಮಾಡಲು ಯಾವ ನೀರು ಉತ್ತಮ?

ಬಿಸಿನೀರು ಕೂದಲಿಗೆ ಗಮನಾರ್ಹ ಹಾನಿಯನ್ನು ಉಂಟುಮಾಡುತ್ತದೆ. ಹಾಗಾಗಿ ತಲೆ ಸ್ನಾನ ಮಾಡಲು ಉಗುರು ಬೆಚ್ಚಗಿನ ನೀರನ್ನು ಬಳಸಿ. ಇದು ನಿಮ್ಮ ನೆತ್ತಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದಲ್ಲದೆ, ಕೂದಲು  ಹಾನಿಗೊಳಗಾಗುವುದನ್ನು ತಡೆಯುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:37 pm, Tue, 13 January 26

Source link

ಚಳಿಗಾಲದಲ್ಲಿ ಮೈ ಬೆಚ್ಚಗಿಡುವ ಕಾಕಡ ಸಿಂಗಿ; ಆಯುರ್ವೇದ ಔಷಧ ಬಗ್ಗೆ ಬಾಬಾ ರಾಮದೇವ್ ಮಾಹಿತಿ – Kannada News | Kakra Singhi health benefits during winter, Baba Ramdev Explains

ಸಾಕಷ್ಟು ರೀತಿಯ ನೈಸರ್ಗಿಕ ಔಷಧೀಯ ಪದಾರ್ಥಗಳನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಬಹಳ ಪ್ರಯೋಜನಕಾರಿ ಎನಿಸುವ ಔಷಧೀಯ ಪದಾರ್ಥಗಳಲ್ಲಿ ಕಾಕಡ ಸಿಂಗಿ (Kakra Singhi) ಒಂದು. ಆಯುರ್ವೇದಲ್ಲಿ ಕಾಕಡ ಸಿಂಗಿಯನ್ನು ಅಮೂಲ್ಯ ಗಿಡಮೂಲಿಕೆ ಎಂದು ಕರೆಯಲಾಗುತ್ತದೆ. ಯೋಗ ಗುರು ಬಾಬಾ ರಾಮದೇವ್ (Baba Ramdev) ಅವರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್​ಗಳಲ್ಲಿ ಈ ಗಿಡಮೂಲಿಕೆ ಬಗ್ಗೆ ಮಾತನಾಡಿದ್ದಾರೆ. ಅದರ ಪ್ರಯೋಜನಗಳನ್ನು ತಿಳಿಸಿದ್ದಾರೆ. ಅವರ ಪ್ರಕಾರ, ಚಳಿಗಾಲದಲ್ಲಿ ಕಾಕಡ ಸಿಂಗಿ ಬಳಕೆ ಬಹಳ ಉಪಯುಕ್ತವೆನಿಸುತತದೆ. ಸಮತೋಲಿತ ಪ್ರಮಾಣದಲ್ಲಿ ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಚಳಿಗಾಲದ ಅನಾರೋಗ್ಯದಿಂದ ರಕ್ಷಣೆ ಪಡೆಯಬಹುದು ಎನ್ನುತ್ತಾರೆ ಬಾಬಾ ರಾಮದೇವ್.

ಕಾಕಡ ಸಿಂಗಿ ಸೇವನೆಯು ದೇಹವನ್ನು ಒಳಗಿನಿಂದ ಬಲಪಡಿಸುತ್ತದೆ ಮತ್ತು ಋತುವಿನ ಉದ್ದಕ್ಕೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರ ಪ್ರಯೋಜನಗಳೇನು ಎನ್ನುವ ಮಾಹಿತಿ ಇಲ್ಲಿದೆ…

ಕಾಕಡ ಸಿಂಗಿ ಎಂದರೇನು?

ಕಾಕಡಿ ಸಿಂಗಿ ಎಂಬುದು ಕಾಕಡಿ ಮರದ ರಾಳದಿಂದ ಪಡೆದ ನೈಸರ್ಗಿಕ ಆಯುರ್ವೇದ ಔಷಧವಾಗಿದೆ. ಇದನ್ನು ಸಾಮಾನ್ಯವಾಗಿ ಕಾಕಡ ಸಿಂಗಿ, ಕಾಕರ ಸಿಂಘಿ, ಕಾಕಡಿ ಸಿಂಗಿ ಇತ್ಯಾದಿ ಕರೆಯುತ್ತಾರೆ. ಇದನ್ನು ಆಯುರ್ವೇದದಲ್ಲಿ ಪ್ರಾಚೀನ ಕಾಲದಿಂದಲೂ ಕೆಮ್ಮು, ಆಸ್ತಮಾ, ಶೀತ ಮತ್ತು ಶ್ವಾಸಕೋಶದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಕಾಕಡಿ ಸಿಂಗಿಯು ಮೈಯನ್ನು ಬೆಚ್ಚಗಾಗಿಸುತ್ತದೆ. ಹೀಗಾಗಿ, ಚಳಿಗಾಲದಲ್ಲಿ ಶೀತದಿಂದ ದೂರ ಇರಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಶ್ವಾಸಕೋಶ ಸಮಸ್ಯೆಗಳಿಗೆ ಶ್ವಾಸರಿ ವಟೀ; ಪತಂಜಲಿಯ ಈ ಆಯುರ್ವೇದ ಔಷಧದ ಪ್ರಯೋಜನ ಮತ್ತು ಬಳಕೆ ವಿಧಾನ ತಿಳಿಯಿರಿ

ಶೀತ ಮತ್ತು ಜ್ವರ ತಡೆಗಟ್ಟುವಿಕೆ

ಬಾಬಾ ರಾಮದೇವ್ ಅವರ ಪ್ರಕಾರ, ಕಾಕಡ ಸಿಂಗಿಯು ಶೀತ, ಕೆಮ್ಮು ಮತ್ತು ಕಫ ಸಂಬಂಧಿತ ಸಮಸ್ಯೆಗಳಿಗೆ ಅತ್ಯಂತ ಪರಿಣಾಮಕಾರಿಯಾಗಿದೆ. ಇದರ ಔಷಧೀಯ ಗುಣಗಳು ಕಫವನ್ನು ಹೊರಹಾಕಲು ಮತ್ತು ಬದಲಾಗುತ್ತಿರುವ ಹವಾಮಾನದಿಂದ ಉಂಟಾಗುವ ಸೋಂಕುಗಳಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ದೇಹವನ್ನು ಬೆಚ್ಚಗಿಡುತ್ತದೆ

ಚಳಿಗಾಲದಲ್ಲಿ ಅನೇಕ ಜನರ ಕೈ ಮತ್ತು ಕಾಲುಗಳು ಶೀತದಿಂದ ತಣ್ಣಗೆ ಇರುತ್ತವೆ. ರಕ್ತದ ಪರಿಚಲನೆ ಸರಿಯಾಗಿ ಇಲ್ಲದಿರುವುದರ ಕುರುಹು ಇದು. ಚಳಿಗಾಲದಲ್ಲಿ ಕಾಕಡ ಸಿಂಗಿ ಅಥವಾ ಅದರ ಪುಡಿಯನ್ನು ಸೇವಿಸುವುದರಿಂದ ದೇಹವು ಬೆಚ್ಚಗಿರುತ್ತದೆ ಮತ್ತು ಶೀತದ ಕೈ ಮತ್ತು ಶೀತದ ಪಾದವನ್ನು ತಪ್ಪಿಸಬಹುದು ಎಂದು ಬಾಬಾ ರಾಮದೇವ್ ವಿವರಿಸುತ್ತಾರೆ.

ದೌರ್ಬಲ್ಯ ನಿವಾರಿಸಿ ಶಕ್ತಿ ಹೆಚ್ಚಿಸುತ್ತದೆ

ದೇಹಕ್ಕೆ ಶಕ್ತಿ ಒದಗಿಸಲು ಕಾಕಡ ಸಿಂಗಿ ಅತ್ಯಂತ ಪ್ರಯೋಜನಕಾರಿ ಎಂದು ಬಾಬಾ ರಾಮದೇವ್ ವಿವರಿಸುತ್ತಾರೆ. ಇದು ದೈಹಿಕ ದೌರ್ಬಲ್ಯ, ಆಯಾಸ ಮತ್ತು ಆಲಸ್ಯವನ್ನು ನಿವಾರಿಸುತ್ತದೆ, ದೇಹವನ್ನು ಒಳಗಿನಿಂದ ಬಲಪಡಿಸುತ್ತದೆ. ಎನರ್ಜಿ ಲೆವೆಲ್ ಕಡಿಮೆ ಇರುವ ಚಳಿಗಾಲದಲ್ಲಿ ಇದನ್ನು ಸೇವಿಸುವುದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: ದಿನಕ್ಕೆ ಕೇವಲ 20 ನಿಮಿಷ ಕಪಾಲಭಾತಿ ಮಾಡಿ ಆರೋಗ್ಯ ಕಾಪಾಡಿ: ಬಾಬಾ ರಾಮದೇವ್ ಸಲಹೆ

ಶ್ವಾಸಕೋಶಗಳಿಗೆ ಪ್ರಯೋಜನಕಾರಿ

ಕಾಕಡ ಸಿಂಗಿ ಸೇವನೆಯು ಶ್ವಾಸಕೋಶಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬಾಬಾ ರಾಮದೇವ್ ಅವರ ಪ್ರಕಾರ, ಇದು ಶ್ವಾಸಕೋಶವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಉಸಿರಾಟದ ತೊಂದರೆಗಳು, ಆಸ್ತಮಾ ಮತ್ತು ದೀರ್ಘಕಾಲದ ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ ಮತ್ತು ಆರೋಗ್ಯಕರ ಉಸಿರಾಟದ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.

ಕಾಕಡ ಸಿಂಗಿಯನ್ನು ಹೇಗೆ ಸೇವಿಸಬೇಕು?

ನೀವು ದಿನಸಿ ಅಂಗಡಿಯಲ್ಲೂ ಕಾಕಡ ಸಿಂಗಿ ಪಡೆಯಬಹುದು. ನೀವು ಅದನ್ನು ಆನ್‌ಲೈನ್‌ನಲ್ಲಿಯೂ ಖರೀದಿಸಬಹುದು. ಇದರ ಪುಡಿ ಮಾರುಕಟ್ಟೆಯಲ್ಲಿಯೂ ಲಭ್ಯವಿದೆ. ಇದನ್ನು ಸೇವಿಸಲು, ಒಂದು ಟೀಚಮಚ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಪ್ರತಿದಿನ ತೆಗೆದುಕೊಳ್ಳಿ. ಆದಾಗ್ಯೂ, ಡೋಸೇಜ್ ಅನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ವಯಸ್ಕರಿಗೆ 250 ರಿಂದ 500 ಮಿಲಿ ಪುಡಿ ಸಾಕು, ಮತ್ತು ಮಕ್ಕಳಿಗೆ 100-150 ಮಿಲಿ ಪುಡಿ ಸಾಕು.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್​​ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ – Kannada News | Malavalli MLA request to vote Gilli in Bigg Boss Kannada 12

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada) ಫಿನಾಲೆ ವಾರ ಚಾಲ್ತಿಯಲ್ಲಿದೆ. ಇದೇ ಭಾನುವಾರ ವಿನ್ನರ್ ಘೋಷಣೆ ಆಗಲಿದ್ದು, ವೋಟ್​ ಲೈನ್​​ಗಳು ಈಗಾಗಲೇ ಓಪನ್ ಆಗಿವೆ. ಬಿಗ್​​ಬಾಸ್ ಮನೆಯಲ್ಲಿ ಪ್ರಸ್ತುತ ಏಳು ಮಂದಿ ಸದಸ್ಯರಿದ್ದಾರೆ. ಅಶ್ವಿನಿ, ಗಿಲ್ಲಿ, ರಘು, ರಕ್ಷಿತಾ, ಕಾವ್ಯಾ, ಧ್ರುವಂತ್ ಮತ್ತು ಧನುಶ್. ಎಲ್ಲರ ಅಭಿಮಾನಿಗಳು ಸಹ ತಮ್ಮ ಮೆಚ್ಚಿನ ಸ್ಪರ್ಧಿಯ ಪರವಾಗಿ ಓಟು ಹಾಕಲು ಆರಂಭಿಸಿದ್ದು, ಕೆಲವರಂತೂ ಅಭಿಯಾನವನ್ನೇ ಮಾಡುತ್ತಿದ್ದಾರೆ. ಇದೀಗ ಗಿಲ್ಲಿ ಪರವಾಗಿ ಅವರ ಕ್ಷೇತ್ರದ ಶಾಸಕರೇ ಮತ ಕೇಳಿದ್ದಾರೆ. ಗಿಲ್ಲಿಗೆ ಓಟು ಹಾಕಿರೆಂದು ಮಂಡ್ಯ ಜಿಲ್ಲೆ ಮಳವಳ್ಳಿ ಕ್ಷೇತ್ರದ ಶಾಸಕ ನರೇಂದ್ರ ಸ್ವಾಮಿ ಅವರು ಮತ ಯಾಚನೆ ಮಾಡಿದ್ದಾರೆ. ಶಾಸಕ ಹೇಳಿರುವುದೇನು? ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಪರಾಶಕ್ತಿ’ ಸಿನಿಮಾ ಬ್ಯಾನ್ ಮಾಡಿ: ಕಾಂಗ್ರೆಸ್ ಆಗ್ರಹ, ಕಾರಣವೇನು? – Kannada News | Tamil Nadu congress demand ban on Parasakthi movie

ತಮಿಳುನಾಡು ಚಿತ್ರರಂಗಕ್ಕೆ ಈ ಸಂಕ್ರಾಂತಿ ಅಥವಾ ಪೊಂಗಲ್ ವಿವಾದಾತ್ಮಕವಾಗಿ ಪರಿಣಮಿಸಿದೆ. ಜನವರಿ 09ರಂದು ಬಿಡುಗಡೆ ಆಗಬೇಕಿದ್ದ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾ ಬಿಡುಗಡೆ ಆಗಲಿಲ್ಲ. ಸಿನಿಮಾ ವಿವಾದದಲ್ಲಿ ಸಿಲುಕಿಕೊಂಡಿದ್ದು ಪ್ರಕರಣ ನ್ಯಾಯಾಲಯದಲ್ಲಿದೆ. ‘ಜನ ನಾಯಗನ್’ ಎದುರು ಬಿಡುಗಡೆ ಆದ ‘ಪರಾಶಕ್ತಿ’ಗೂ ಸಹ ಸೆನ್ಸಾರ್ ಸಮಸ್ಯೆ ಎದುರಾಗಿತ್ತು, ಬರೋಬ್ಬರಿ 23 ಕಟ್​​ಗಳನ್ನು ಸಿನಿಮಾಕ್ಕೆ ಸೂಚಿಸಲಾಗಿತ್ತು. ಆದರೆ ಕೊನೆಗೂ ಸಿನಿಮಾ ಬಿಡುಗಡೆ ಆಗಿದ್ದು, ಬಿಡುಗಡೆ ಆದ ಬಳಿಕ ಸಿನಿಮಾಕ್ಕೆ ಒಂದಾದ ಮೇಲೊಂದರಂತೆ ಸಮಸ್ಯೆ ಎದುರಾಗುತ್ತಲೇ ಇದೆ.

‘ಜನ ನಾಯಗನ್’ ರೀತಿ ‘ಪರಾಶಕ್ತಿ’ ಸಹ ರಾಜಕೀಯ ವಿಷಯವನ್ನು ಒಳಗೊಂಡ ಸಿನಿಮಾ ಆಗಿದೆ. ಹಿಂದಿ ಹೇರಿಕೆಯ ವಿರುದ್ಧ ತಮಿಳರು ಮಾಡಿದ ಹೋರಾಟದ ಕತೆಯನ್ನು ‘ಪರಾಶಕ್ತಿ’ ಸಿನಿಮಾ ಒಳಗೊಂಡಿದೆ. ಅಲ್ಲದೆ, ಸಿನಿಮಾದ ನಿರ್ಮಾಪಕರು ಸಹ ತಮಿಳುನಾಡಿನ ಆಡಳಿತ ಪಕ್ಷವಾದ ಡಿಎಂಕೆಯ ಆಪ್ತರಾಗಿದ್ದು, ಸಿನಿಮಾನಲ್ಲಿ ಡಿಎಂಕೆ ಪರವಾದ ಹಲವು ಅಂಶಗಳನ್ನು ಸೇರಿಸಲಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ. ಇವುಗಳ ಜೊತೆಗೆ ಇದೀಗ ತಮಿಳುನಾಡು ಕಾಂಗ್ರೆಸ್, ‘ಪರಾಶಕ್ತಿ’ ಸಿನಿಮಾದ ವಿರುದ್ಧ ದನಿ ಎತ್ತಿದ್ದು ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದೆ.

ತಮಿಳುನಾಡು ಯುವ ಕಾಂಗ್ರೆಸ್ ‘ಪರಾಶಕ್ತಿ’ ಸಿನಿಮಾದ ವಿರುದ್ಧ ದನಿ ಎತ್ತಿದ್ದು, ಈ ಸಿನಿಮಾ ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದೆ ಎಂದಿದೆ. ಸಿನಿಮಾನಲ್ಲಿ ತೋರಿಸಿರುವಂತೆ 1965 ರಲ್ಲಿ ಕಾಂಗ್ರೆಸ್ ಸರ್ಕಾರವು, ಪೋಸ್ಟ್ ಆಫೀಸ್ ಹುದ್ದೆಗೆ ಹಿಂದಿಯಲ್ಲಿ ಅಪ್ಲಿಕೇಷನ್ ತುಂಬುವಂತೆ ಆದೇಶಿಸರಲಿಲ್ಲ. ಅಲ್ಲದೆ ಸಿನಿಮಾದ ನಾಯಕ ಶಿವಕಾರ್ತಿಕೇಯನ್ ನಿರ್ವಹಿಸಿರುವ ಪಾತ್ರ, 1965 ಫೆಬ್ರವರಿ 12 ರಂದು ಕೊಯಮತ್ತೂರಿನಲ್ಲಿ ಇಂದಿರಾ ಗಾಂಧಿಯನ್ನು ಭೇಟಿ ಮಾಡುವ ದೃಶ್ಯವಿದೆ. ಅಸಲಿಗೆ ಆ ಸಮಯದಲ್ಲಿ ಅವರು ಕೊಯಮತ್ತೂರಿಗೆ ಬಂದಿರಲೇ ಇಲ್ಲ. ಅಲ್ಲದೆ, ಸಿನಿಮಾದ ಕೆಲವು ದೃಶ್ಯಗಳಲ್ಲಿ ಇಂದಿರಾ ಗಾಂಧಿಯನ್ನು ಟೀಕಿಸುವ ದೃಶ್ಯವಿದೆ. ಇಂದಿರಾ ಗಾಂಧಿ, ಕೆ ಕಾಮರಾಜ್, ಲಾಲ್ ಬಹದ್ಧೂರ್ ಶಾಸ್ತ್ರಿ ಅವರ ನಿಜ ಚಿತ್ರಗಳನ್ನು ಬಳಸಲಾಗಿದೆ ಹಾಗೂ ಪೊಲ್ಲಚ್ಚಿಯಲ್ಲಿ 200ಕ್ಕೂ ಹೆಚ್ಚು ಜನರನ್ನು ಕೊಲ್ಲಲಾಗಿದೆ ಎಂದು ಕ್ಲೈಮ್ಯಾಕ್ಸ್​​ನಲ್ಲಿ ತೋರಿಸಲಾಗಿದೆ. ಇದಕ್ಕೆ ಯಾವುದೇ ಸಾಕ್ಷ್ಯ ಸಹ ಇಲ್ಲ’ ಎಂದಿದ್ದಾರೆ ತಮಿಳುನಾಡು ಯುವ ಕಾಂಗ್ರೆಸ್ ಉಪಾಧ್ಯಕ್ಷ ಭಾಸ್ಕರನ್.

ಇದನ್ನೂ ಓದಿ:‘ಜನ ನಾಯಗನ್’ ಪ್ರಕರಣ ಕೋರ್ಟ್​​ನಲ್ಲಿರುವಾಗ ವಿಜಯ್​ಗೆ ಸಿಬಿಐನಿಂದ ಸಂಕಷ್ಟ

ಈ ಸಿನಿಮಾ ಇತಿಹಾಸವನ್ನು ತಿರುಚುವ, ತಪ್ಪು ಮಾಹಿತಿಯನ್ನು ಜನಗಳಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದು, ಈ ಕೂಡಲೇ ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದರ ಜೊತೆಗೆ ‘ಪರಾಶಕ್ತಿ’ ಸಿನಿಮಾಕ್ಕೆ ನೆಗೆಟಿವ್ ಪ್ರಚಾರ ಮಾಡಲಾಗುತ್ತಿದೆ ಎಂದು ಸಹ ಸಿನಿಮಾದ ಕ್ರಿಯೇಟಿವ್ ನಿರ್ದೇಶಕ ದೇವ್ ರಾಮಂತ್ ಆರೋಪ ಮಾಡಿದ್ದು, ದಳಪತಿ ವಿಜಯ್ ಅಭಿಮಾನಿಗಳು ಉದ್ದೇಶಪೂರ್ವಕವಾಗಿ ‘ಪರಾಶಕ್ತಿ’ ಸಿನಿಮಾದ ವಿರುದ್ಧ ನೆಗೆಟಿವ್ ಸುದ್ದಿಗಳನ್ನು ಹಬ್ಬುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ‘ಪರಾಶಕ್ತಿ’ ಸಿನಿಮಾವನ್ನು ಸುಧಾ ಕೊಂಗರ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ಶಿವಕಾರ್ತಿಕೇಯನ್ ಜೊತೆಗೆ ಕನ್ನಡದ ನಟಿ ಶ್ರೀಲೀಲಾ ಸಹ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಸ್ತೆ ಬದಿ ನಿಂತಿದ್ದ ಅಪ್ರಾಪ್ತೆಯನ್ನೂ ಬಿಡದ ಕಾಮುಕ: ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ? – Kannada News | POCSO Case: Chikkaballapur Man arrested for assaulting Minor Girl

ಚಿಕ್ಕಬಳ್ಳಾಪುರ, ಜನವರಿ 13: ಡ್ರಾಪ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ನಡೆಸಿರುವ ಆರೋಪ ಚಿಕ್ಕಬಳ್ಳಾಪುರದಲ್ಲಿ ಕೇಳಿಬಂದಿದೆ. ರಾತ್ರಿ ಪೂರ್ತಿ ಕೂಂಬಿಂಗ್ ನಡೆಸಿ ಘಟನೆ ಸಂಬಂಧ ಆರೋಪಿ ಗಣೇಶ್​​ ಎಂಬಾತನನ್ನು ಬಂಧಿಸಿರುವ ಪೊಲೀಸರು, ಅಪ್ರಾಪ್ತ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಬಾಗೇಪಲ್ಲಿಯ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂತ್ರಸ್ತೆ, ಬಾಗೇಪಲ್ಲಿಯಿಂದ ವಾಪಸ್ಸು ಚಿಕ್ಕಬಳ್ಳಾಪುರ ತಾಲೂಕಿನ ಸ್ವಗ್ರಾಮಕ್ಕೆ ತೆರಳಲು ಪೆರೇಸಂದ್ರ ಕ್ರಾಸ್ ಬಳಿಯ ಬಸ್‍ನಿಲ್ದಾಣದಲ್ಲಿ ನಿಂತಿದ್ದಳು. ಆ ವೇಳೆ ಅಲ್ಲಿಗೆ ಬಂದ ಬೈಕ್ ಸವಾರ ಗಣೇಶ್​​ ಅಪ್ರಾಪ್ತ ವಿದ್ಯಾರ್ಥಿನಿಗೆ ಡ್ರಾಪ್ ಕೊಡುವ ನೆಪದಲ್ಲಿ ಆಕೆಯನ್ನು ಬೈಕ್ ಮೇಲೆ ಹತ್ತಿಸಿಕೊಂಡಿದ್ದಾನೆ. ನಂತರ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದು ಅತ್ಯಾಚಾರವೆಸಗಿದ್ದಾನಂತೆ. ನಂತರ ಭಯ ಭೀತನಾದ ಆರೋಪಿ ತನ್ನ ಸ್ನೇಹಿತನಿಗೆ ಕರೆ ಮಾಡಿ ಮಾಡಿದ ಪಾಪಕೃತ್ಯವನ್ನು ಹೇಳಿಕೊಂಡಿದ್ದಾನೆ. ಗಣೇಶ್​​ ಸ್ನೇಹಿತ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಆ ಬೆನ್ನಲ್ಲೇ ಪೊಲೀಸರು ನಿರ್ಜನ ಪ್ರದೇಶಕ್ಕೆ ಬಂದು ಹುಡುಕಾಡಿದ್ದಾರೆ.

ಇದನ್ನೂ ಓದಿ: ದಲಿತ ಅತಿಥಿ ಉಪನ್ಯಾಸಕಿಗೆ ಪ್ರಾಂಶುಪಾಲನಿಂದ ಲೈಂಗಿಕ ಕಿರುಕುಳ ಆರೋಪ; ಸಂತ್ರಸ್ತೆ ಹೇಳಿದ್ದೇನು?

ವಿಷಯ ತಿಳಿಯುತ್ತಿದ್ದಂತೆ ಆರೋಪಿಯ ಮೊಬೈಲ್​​ ಟ್ರೇಸ್​​ ಮಾಡಲಾಗಿದ್ದು, ನಿರ್ಜನ ಪ್ರದೇಶದಲ್ಲಿ ಕೂಂಬಿಂಗ್ ನಡೆಸಿ ಆರೋಪಿ ಹಾಗೂ ಸಂತ್ರಸ್ತೆಯನ್ನು ಪತ್ತೆಹಚ್ಚಲಾಗಿದೆ. ಬಳಿಕ ವಿದ್ಯಾರ್ಥಿನಿಯನ್ನು ಸ್ಥಳೀಯ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ರವಾನಿಸಿದ್ದು, ಆರೋಪಿ ಗಣೇಶ್​​ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನು ಚಿಕ್ಕಬಳ್ಳಾಪುರ ಮೂಲದ ಆರೋಪಿ ಗಣೇಶನಿಗೆ ಮದುವೆಯಾಗಿ ಮಕ್ಕಳಿದ್ದಾರೆ ಎನ್ನುವ ವಿಷಯ ತನಿಖೆ ವೇಳೆ ಗೊತ್ತಾಗಿದೆ. ಸಂತ್ರಸ್ತ ಬಾಲಕಿ ಮೊದಲೇ ತಂದೆ ಕಳೆದುಕೊಂಡಿದ್ದು, ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಘಟನೆಯಿಂದ ಆಕೆ ಮತ್ತಷ್ಟು ಅಘಾತಕ್ಕೆ ಒಳಗಾಗಿದ್ದಾಳೆ ಎನ್ನಲಾಗಿದ್ದು, ಪೆರೇಸಂದ್ರ ಠಾಣೆಯ ಪೊಲೀಸರು ಪೋಕ್ಸೋ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸ್ಟಾರ್ ನಿರ್ದೇಶಕನ ಜೊತೆ ಕೈ ಜೋಡಿಸಲಿರುವ ಕಮಲ್ ಹಾಸನ್ – Kannada News | Kamal Haasan and Vetrimaran joining hands for a movie

ಕಮಲ್ ಹಾಸನ್ (Kamal Haasan), ಭಾರತ ಚಿತ್ರರಂಗದ ಸೂಪರ್ ಸ್ಟಾರ್ ನಟ. ಕಮರ್ಶಿಯಲ್ ಸಿನಿಮಾಗಳ ಜೊತೆಗೆ ಪ್ರಯೋಗಾತ್ಮಕ ಸಿನಿಮಾಗಳು, ಸಂದೇಶ ಹೊಂದಿದ ಸಿನಿಮಾಗಳು ಹೀಗೆ ಅನೇಕ ಮಾದರಿಯ ಸಿನಿಮಾಗಳಲ್ಲಿ ನಟಿಸಿ ಎಲ್ಲರದಲ್ಲೂ ಟಾಪ್ ಎನಿಸಿಕೊಂಡಿದ್ದಾರೆ. ಆದರೆ ಕಮಲ್ ನಟನೆಯ ಕೊನೆಯ ಸಿನಿಮಾ ‘ಥಗ್ ಲೈಫ್’ ಸಿನಿಮಾ ದೊಡ್ಡ ಫ್ಲಾಪ್ ಆಗಿದೆ. ಆದರೆ ಇದೀಗ ಬಲು ಚರ್ಚಿತ, ಸ್ಟಾರ್ ನಿರ್ದೇಶಕರ ಸಿನಿಮಾನಲ್ಲಿ ನಟಿಸಲು ಕಮಲ್ ಹಾಸನ್ ಸಜ್ಜಾಗುತ್ತಿದ್ದಾರೆ. ಕಮಲ್ ಅಭಿಮಾನಿಗಳ ಜೊತೆಗೆ ಸಿನಿಮಾ ಪ್ರೇಮಿಗಳಿಗೂ ಸಹ ಈ ಸುದ್ದಿ ಕುತೂಹಲ ಮೂಡಿಸಿದೆ.

ಹಲವು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿರುವ, ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರುಗಳಲ್ಲಿ ಒಬ್ಬರೆನಿಸಿಕೊಂಡಿರುವ ವೆಟ್ರಿಮಾರನ್ ನಿರ್ದೇಶಿಸಲಿರುವ ಹೊಸ ಸಿನಿಮಾನಲ್ಲಿ ಕಮಲ್ ಹಾಸನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ‘ಆಡುಕುಲಂ’, ‘ವಿಸಾರನೈ’, ‘ವಿಡುದಲೈ’, ‘ವಡ ಚೆನ್ನೈ’, ‘ಅಸುರನ್’ ಇನ್ನೂ ಹಲವು ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ ವೆಟ್ರಿಮಾರನ್ ಇದೀಗ ಕಮಲ್ ಹಾಸನ್ ಅವರ ಸಿನಿಮಾ ನಿರ್ದೇಶಿಸಲಿದ್ದಾರೆ. ಇಬ್ಬರು ಅದ್ಭುತ ಪ್ರತಿಭಾವಂತರು ಒಟ್ಟಿಗೆ ಸೇರಿದಾಗ ಅದ್ಭುತ ಸಿನಿಮಾವೇ ಹೊರಹೊಮ್ಮಲಿದೆ ಎಂಬುದು ಸಿನಿಮಾ ಪ್ರೇಮಿಗಳ ನಿರೀಕ್ಷೆ.

ವೆಟ್ರಿಮಾರನ್ ಮತ್ತು ಕಮಲ್ ಹಾಸನ್ ಅವರುಗಳು ಈಗಾಗಲೇ ಸಿನಿಮಾದ ಕತೆಯ ಬಗ್ಗೆ ಚರ್ಚೆ ನಡೆಸಿದ್ದು ಇಬ್ಬರೂ ಸಹ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವೆಟ್ರಿಮಾರನ್ ಅವರ ಮುಂದಿನ ಸಿನಿಮಾ ಕಮಲ್ ಹಾಸನ್ ಜೊತೆಗೇ ಆಗಿರಲಿದೆ ಎನ್ನಲಾಗುತ್ತಿದೆ. ಕಮಲ್ ಹಾಸನ್ ಅವರ ಕೆಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು ಅವುಗಳ ಮುಗಿದ ಬಳಿಕ ವೆಟ್ರಿಮಾರನ್ ಜೊತೆಗೆ ಸಿನಿಮಾ ಶುರು ಮಾಡಲಿದ್ದಾರಂತೆ. ಸಿನಿಮಾದ ಇತರೆ ಪಾತ್ರಗಳ ಆಯ್ಕೆ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ನಿವೃತ್ತಿ ಬಗ್ಗೆ ಕಮಲ್ ಹಾಸನ್ ಮಾತು: ಕೊನೆ ಸಿನಿಮಾ ಯಾವಾಗ?

ವೆಟ್ರಿಮಾರನ್ ಪ್ರಸ್ತುತ ಸಿಂಭು ನಟನೆಯ ‘ಅರಸನ್’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದು ಸಹ ಅವರ ‘ವಡ ಚೆನ್ನೈ’ ಸಿನಿಮಾದ ಭಾಗವೇ ಆಗಿದೆ. ಸಿಂಭು ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಈಗಾಗಲೇ ಸಿನಿಮಾದ ಟೀಸರ್ ಸಹ ಬಿಡುಗಡೆ ಆಗಿದೆ. ಒಂದೇ ರಾತ್ರಿ ಮೂರು ಕೊಲೆ ಮಾಡಿದ ವ್ಯಕ್ತಿಯೊಬ್ಬನ ಕತೆ ಸಿನಿಮಾನಲ್ಲಿದೆ. ನಿಜ ಘಟನೆ ಆಧರಿಸಿದ ಸಿನಿಮಾ ಇದಾಗಿದ್ದು, ಸಿನಿಮಾ ಕೆಲವೇ ತಿಂಗಳುಗಳಲ್ಲಿ ಬಿಡುಗಡೆ ಆಗಲಿದೆ.

ಇನ್ನು ಕಮಲ್ ಹಾಸನ್ ಅವರು ಕೆಲವೇ ತಿಂಗಳಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಪ್ರಸ್ತುತ ಅವರು ತಮ್ಮ ಗೆಳೆಯ, ಸ್ಟಾರ್ ನಟ ರಜನೀಕಾಂತ್ ನಟಿಸುತ್ತಿರುವ ಸಿನಿಮಾದ ನಿರ್ಮಾಣ ಮಾಡುತ್ತಿದ್ದು, ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಇಂಡಿಯನ್ 3’ ಸಹ ಘೋಷಿಸಲಾಗಿದ್ದು, ಆದರೆ ಆ ಸಿನಿಮಾ ಶುರುವಾಗುವುದು ಅನುಮಾನವೇ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಡು ಹಂದಿಗಾಗಿ ಇಟ್ಟಿದ್ದ ದೇಶಿ ಬಾಂಬ್ ಕಚ್ಚಿ ಆನೆ ಮರಿ ದಾರುಣ ಸಾವು – Kannada News | Baby Elephant dies after Accidentally Biting country made bomb in Erode

ಈರೋಡ್, ಜನವರಿ 13: ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲಂ ಹುಲಿ ಅಭಯಾರಣ್ಯದಲ್ಲಿ ದೇಶಿ ನಿರ್ಮಿತ ಬಾಂಬ್ ನುಂಗಿ ಹೆಣ್ಣು ಆನೆ ಮರಿ (Baby Elephant) ಸಾವನ್ನಪ್ಪಿದೆ. ಈ ಹಿನ್ನೆಲೆಯಲ್ಲಿ ರೈತನೊಬ್ಬನನ್ನು ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಗುಥಿಯಾಲತ್ತೂರ್ ಮೀಸಲು ಅರಣ್ಯಕ್ಕೆ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ 2 ವರ್ಷದ ಆನೆ ಮರಿ ಸತ್ತಿರುವುದನ್ನು ಕಂಡು ಅರಣ್ಯ ಇಲಾಖೆಯ ಪಶುವೈದ್ಯರಿಗೆ ಮಾಹಿತಿ ನೀಡಿದರು.

ಆನೆ ಮರಿಯ ಸೊಂಡಿಲು ಮತ್ತು ಬಾಯಿಯಲ್ಲಿ ರಕ್ತಸ್ರಾವದ ಗಾಯಗಳು ಕಂಡುಬಂದಿತ್ತು. ಪಶುವೈದ್ಯರು ಶವಪರೀಕ್ಷೆ ನಡೆಸಿ ದೇಶಿ ನಿರ್ಮಿತ ಬಾಂಬ್ ಸೇವಿಸಿದ ನಂತರ ಆನೆ ಸಾವನ್ನಪ್ಪಿದೆ ಎಂದು ಘೋಷಿಸಿದ್ದಾರೆ. ಕಾಡು ಹಂದಿಗಳು ಹೊಲಗಳಿಗೆ ಪ್ರವೇಶಿಸದಂತೆ ತಡೆಯಲು ರೈತರು ಆ ಬಾಂಬ್ ಅನ್ನು ಅಲ್ಲಿಗೆ ಎಸೆದಿರಬಹುದು ಎಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ.

ಇದನ್ನೂ ಓದಿ: Train Accident: ಅಸ್ಸಾಂನಲ್ಲಿ ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದ ರೈಲು, 8 ಆನೆಗಳು ಸಾವು, ಹಳಿ ತಪ್ಪಿದ ಬೋಗಿಗಳು

ಈ ಘಟನೆಯ ನಂತರ, ಅರಣ್ಯ ಪ್ರದೇಶದಲ್ಲಿ ಬಾಂಬ್ ಇಟ್ಟವರು ಯಾರು ಎಂಬುದನ್ನು ಕಂಡುಹಿಡಿಯಲು ಅರಣ್ಯ ಇಲಾಖೆ ತನಿಖೆ ಆರಂಭಿಸಿತು. ಹತ್ತಿರದ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳ ವಿವರವಾದ ಪರಿಶೀಲನೆಯಿಂದ ಈ ಕೃತ್ಯಕ್ಕೆ ಕಾರಣ ಯಾರು ಎಂದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ನಡೆಸಿದ ನಂತರ, ಆ ಪ್ರದೇಶದ ರೈತ ಕಾಳಿಮುತ್ತು (43) ಎಂಬುವವರನ್ನು ಬಂಧಿಸಲಾಗಿದೆ. ಆನೆ ಮರಿಯ ಮೃತದೇಹವನ್ನು ಅದೇ ಪ್ರದೇಶದಲ್ಲಿ ಹೂಳಲಾಗಿದೆ.

ವಿಚಾರಣೆಯ ಸಮಯದಲ್ಲಿ, ಕಾಳಿಮುತ್ತು ಮತ್ತು ಇನ್ನೊಬ್ಬ ವ್ಯಕ್ತಿ ಕಾಡುಹಂದಿಗಳನ್ನು ಬೇಟೆಯಾಡಲು ದೇಶೀಯ ಬಾಂಬ್ ಇಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸರೊಂದಿಗೆ ಅರಣ್ಯ ಅಧಿಕಾರಿಗಳು, ಪ್ರಸ್ತುತ ಪರಾರಿಯಾಗಿರುವ ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರೀ 5,000 ರೂ ಎಸ್​ಐಪಿಗೆ ಸೀಮಿತವಾದರೆ ಸಂಪತ್ತು ಹೆಚ್ಚೋದಿಲ್ಲ; ಹೀಗೆ ಮಾಡಿ – Kannada News | Small investment can disappoint, do this step up trick to gain interest and wealth

ಹನಿ ಹನಿ ನೀರು ಸೇರಿಯೇ ಸಮುದ್ರ ಆಗೋದು ಅಂತಾರೆ. ಸಣ್ಣ ಸಣ್ಣ ಹೂಡಿಕೆಗಳೇ ದೊಡ್ಡ ಹಣಕಾಸು ಭದ್ರತೆ ತರುವುದುಂಟು. ಆದರೆ, ಸಣ್ಣ ಎಂದರೆ ಎಷ್ಟು ಸಣ್ಣ ಎಂಬುದು ಮುಖ್ಯ. ತೀರಾ ಸಣ್ಣ ಮೊತ್ತದ ಹೂಡಿಕೆಯನ್ನು (investment) ನಿಯಮಿತವಾಗಿ ಮಾಡಿದರೆ ಎರಡು ರೀತಿಯ ತೊಡಕು ಇರುತ್ತದೆ. ಒಂದು, ನಿಮಗೆ ರಿಟರ್ನ್ ಸಿಗುವ ಮೊತ್ತ ಕಡಿಮೆ ಇರುತ್ತದೆ. ಇನ್ನೊಂದು, ದೀರ್ಘಾವಧಿ ಹೂಡಿಕೆಯ ಉತ್ಸಾಹವೂ ಕುಂದುತ್ತದೆ.

ಉದಾಹರಣೆಗೆ, ನೀವು ತಿಂಗಳಿಗೆ 5,000 ರೂ ಎಸ್​ಐಪಿ ಆರಂಭಿಸುತ್ತೀರಿ ಎಂದಿಟ್ಟುಕೊಳ್ಳಿ. ಒಂದು ವರ್ಷದಲ್ಲಿ ನಿಮ್ಮ ಹೂಡಿಕೆ 60,000 ರೂ ಆಗುತ್ತದೆ. ಆ ಫಂಡ್ ಶೇ. 12ರ ದರದಲ್ಲಿ ಲಾಭ ಕೊಟ್ಟರೆ ವರ್ಷದಲ್ಲಿ 7,200 ರೂ ಮಾತ್ರವೇ ಹೆಚ್ಚಬಹುದು. ನೀವು ಐದು ವರ್ಷ ಎಸ್​ಐಪಿ ಮುಂದುವರಿಸಿದರೂ ಅದರಿಂದ ಸಿಗುವ ರಿಟರ್ನ್ ನಿಮಗೆ ದೊಡ್ಡ ಖುಷಿ ತರುವುದಿಲ್ಲ. ಶೇಕಡಾವಾರು ಲೆಕ್ಕದಲ್ಲಿ ಓಕೆ, ಆದರೆ, ಪ್ರಮಾಣದಲ್ಲಿ ನಿಮಗೆ ತೃಪ್ತಿಕರ ಮೊತ್ತ ಸಿಗುವುದಿಲ್ಲ. ಹೀಗಾಗಿ, ನೀವು ಎಸ್​ಐಪಿಯನ್ನೇ ನಿಲ್ಲಿಸಿಬಿಡುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: ಗಮನಿಸಿ…! ಕೆಲಸ ಬಿಟ್ಟು 3 ವರ್ಷಕ್ಕೆ ಇಪಿಎಫ್ ಅಕೌಂಟ್​ಗೆ ಬಡ್ಡಿ ಸಿಗಲ್ಲ ಅನ್ನೋದು ನಿಜ ಅಲ್ಲ; ಇಲ್ಲಿದೆ ಸತ್ಯಾಂಶ

ಹೂಡಿಕೆ ಮೊತ್ತ ದೊಡ್ಡದಾಗುತ್ತಾ ಹೋಗಬೇಕು..

ಹೂಡಿಕೆಯ ಮೂಲ ಗುಣಗಳಲ್ಲಿ ಹೂಡಿಕೆ ಮೊತ್ತ, ಅವಧಿ ಮತ್ತು ಲಾಭ ಈ ಮೂರೂ ಕೂಡ ಮುಖ್ಯ. ಈ ಮೂರೂ ಅಂಶಗಳು ಅಧಿಕವಾಗಿದ್ದರೆ ಶ್ರೀಮಂತಿಕೆ ಹೇಳದೇ ಕೇಳದೇ ಬಂದುಬಿಡುತ್ತದೆ.

ನೀವು 5,000 ಎಸ್​​ಐಪಿಯಿಂದಲೇ ಹೂಡಿಕೆ ಆರಂಭಿಸಬಹುದು. ಆದರೆ, ವರ್ಷಗಳು ಕಳೆದಂತೆ ಆ ಹೂಡಿಕೆ ಅಷ್ಟಕ್ಕೇ ಸೀಮಿತವಾಗಬಾರದು. ನಿಮ್ಮ ಆದಾಯ ಹೆಚ್ಚಿದಂತೆ ಹೂಡಿಕೆಯ ಮೊತ್ತವೂ ಹೆಚ್ಚುತ್ತಾ ಹೋಗಬೇಕು. 5,000 ರೂ ಎಸ್​ಐಪಿಯಿಂದ ಹೂಡಿಕೆಯು 20 ವರ್ಷದಲ್ಲಿ 50,000 ರೂ ಎಸ್​ಐಪಿಗಳಾಗಿ ಹೆಚ್ಚಬೇಕು. ಹೀಗೆ ಹೆಚ್ಚಿಸಲು ನೀವು ಸ್ಟೆಪಪ್ ತಂತ್ರ ಅನುಸರಿಸಬಹುದು. ನಿಮ್ಮ ಆದಾಯ ಪ್ರತೀ ವರ್ಷ ಹೆಚ್ಚಿದಂತೆ ಹೂಡಿಕೆಯ ಮೊತ್ತವನ್ನೂ ಹೆಚ್ಚಿಸುತ್ತಾ ಹೋಗುವುದೇ ಸ್ಟೆಪಪ್ ತಂತ್ರ.

5,000 ರೂ ಎಸ್​ಐಪಿಯಿಂದ ಆರಂಭಿಸಿ ವರ್ಷಕ್ಕೆ ಶೇ. 10ರಷ್ಟು ಸ್ಟೆಪಪ್ ಮಾಡುತ್ತಾ, ಅಂದರೆ ಶೇ. 10ರಷ್ಟು ಹೂಡಿಕೆ ಹೆಚ್ಚಿಸುತ್ತಾ 20 ವರ್ಷ ಹೂಡಿಕೆ ಮುಂದುವರಿಸಿದಲ್ಲಿ ಗಮನಾರ್ಹವಾದ ರಿಟರ್ನ್ ನಿಮಗೆ ಸಿಗುತ್ತದೆ. ಸ್ಟೆಪಪ್ ಇಲ್ಲದೆ 5,000 ರೂ ಎಸ್​ಐಪಿ 20 ವರ್ಷದಲ್ಲಿ ಎಷ್ಟು ರಿಟರ್ನ್ ಕೊಡುತ್ತೆ, ಮತ್ತು ಸ್ಟೆಪಪ್ ಇರುವ ಎಸ್​ಐಪಿ ಎಷ್ಟು ರಿಟರ್ನ್ ಕೊಡುತ್ತದೆ ಎಂಬುದನ್ನು ಹೋಲಿಸಿ ನೋಡಬಹುದು.

ಇದನ್ನೂ ಓದಿ: ಈ ಎಸ್​ಎಂಬಿಯಲ್ಲಿ ಆಕರ್ಷಕ ಬಡ್ಡಿ ಆಫರ್; ನಿತ್ಯವೂ ಚಕ್ರಬಡ್ಡಿ; ಏನಿದರ ಅನುಕೂಲ?

20 ವರ್ಷಗಳಿಗೆ ವಾರ್ಷಿಕ ಶೇ. 12 ಸಿಎಜಿಆರ್​ನಲ್ಲಿ ಬೆಳೆಯುವ ಫಂಡ್​ನಲ್ಲಿ 5,000 ರೂ ಎಸ್​ಐಪಿ ಮಾಡಿದರೆ ಸುಮಾರು 50 ಲಕ್ಷ ರೂ ಸಂಪತ್ತು ಸೃಷ್ಟಿಯಾಗುತ್ತದೆ. ಅದೇ ನೀವು ವಾರ್ಷಿಕವಾಗಿ ಶೇ 10 ಸ್ಟೆಪಪ್ ಮಾಡಿದಾಗ ನಿಮ್ಮ ಸಂಪತ್ತು 1.15 ಕೋಟಿಯಾಗಿರುತ್ತದೆ. ಇದಕ್ಕೆ ಕಾರಣ ಎಂದರೆ ಹೂಡಿಕೆ ಮೊತ್ತದಲ್ಲಿರುವ ವ್ಯತ್ಯಾಸ.

5,000 ರೂ ಎಸ್​ಐಪಿ ಮೂಲಕ 20 ವರ್ಷದಲ್ಲಿ ನೀವು 12 ಲಕ್ಷ ರೂ ಹೂಡಿಕೆ ಮಾಡಿರುತ್ತೀರಿ. ಅದೇ ಸ್ಟೆಪಪ್ ಮಾಡಿದಾಗ ನಿಮ್ಮ ಹೂಡಿಕೆಯು 34 ಲಕ್ಷ ರೂಗೂ ಅಧಿಕ ಆಗಿರುತ್ತದೆ. ಹೀಗಾಗಿ, ನಿಮ್ಮ ಹೂಡಿಕೆಗೆ ಬಹಳ ಒಳ್ಳೆಯ ರಿಟರ್ನ್ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link