ಅಡ್ವಾನ್ಸ್ ಟ್ಯಾಕ್ಸ್ ಪಾವತಿಗೆ ಇಂದೇ ಕೊನೆಯ ದಿನ; ಡೆಡ್ಲೈನ್ ಮಿಸ್ ಆದವರಿಗೆ ಏನು ದಂಡ? – Kannada News | Advance Tax India: June 15 Deadline & Who Must Pay to Avoid Penalties
ನವದೆಹಲಿ, ಜೂನ್ 15: ನಮ್ಮ ದೇಶದ ಆದಾಯ ತೆರಿಗೆ (Income Tax) ನಿಯಮಗಳ ಪ್ರಕಾರ, ಹಣಕಾಸು ವರ್ಷದ ಕೊನೆಯಲ್ಲಿ ಒಂದೇ ಬಾರಿಗೆ ಪೂರ್ಣ ತೆರಿಗೆ ಕಟ್ಟುವ ಬದಲಿಗೆ, ಮುಂಗಡವಾಗಿ ಒಂದಷ್ಟು ತೆರಿಗೆ ಕಟ್ಟುವ ವ್ಯವಸ್ಥೆ ಇರುತ್ತದೆ. ಅದು ಅಡ್ವಾನ್ಸ್ ಟ್ಯಾಕ್ಸ್ ಸಿಸ್ಟಂ (Advance Tax). ಪ್ರಸಕ್ತ ಆರ್ಥಿಕ ವರ್ಷದ (2026-27) ಮೊದಲ ಕಂತಿನ ಮುಂಗಡ ತೆರಿಗೆ ಪಾವತಿಸಲು ಜೂನ್ 15 ಕೊನೆಯ ದಿನವಾಗಿದೆ. ಅಂದರೆ ಇವತ್ತೇ ಅದರ ಡೆಡ್ಲೈನ್ ಇದೆ. ಹಣಕಾಸು ವರ್ಷದ ಆರಂಭದಿಂದ ಇಲ್ಲಿಯವರೆಗೆ 10,000…