ರೈಲ್ವೆ ಟಿಕೆಟ್ ಬುಕಿಂಗ್ ಅಲರ್ಟ್: ಆಧಾರ್ ದೃಢೀಕೃತ ಬಳಕೆದಾರರಿಗೆ ನಿಯಮ ಬದಲಾವಣೆ – Kannada News | IRCTC rules change for Aadhaar authenticated users, train fare change, tatkal ticket booking
ನವದೆಹಲಿ, ಜನವರಿ 12: ಐಆರ್ಸಿಟಿಸಿಯ ಆಧಾರ್ ದೃಢೀಕೃತ ಬಳಕೆದಾರರು ಟ್ರೈನ್ ಟಿಕೆಟ್ ಬುಕ್ ಮಾಡುವ ನಿಯಮಗಳಲ್ಲಿ ಬಹಳಷ್ಟು ಬದಲಾವಣೆ ಮಾಡಲಾಗಿದೆ. ಜನರಲ್ ರಿಸರ್ವ್ ಟಿಕೆಟ್ ಬುಕಿಂಗ್ ಹಾಗು ಅಡ್ವಾನ್ ರಿಸರ್ವೇಶನ್ ಪೀರಿಯಡ್ (ಎಆರ್ಪಿ) ಸಂಬಂಧಿಸಿದ ನಿಯಮಗಳಲ್ಲಿ ಈ ಬದಲಾವಣೆಗಳಿವೆ. ಇದರಲ್ಲಿ ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಆಧಾರ್ ದೃಢೀಕೃತ ಬಳಕೆದಾರರಿಗೆ ಆದ್ಯತೆ ಕೊಡುವ (ಸ್ಪೆಷಲ್ ವಿಂಡೋ) ಒಂದು ವ್ಯವಸ್ಥೆಯೂ ಇದೆ. ಈ ಹಿಂದೆ ಇದ್ದ ನಿಯಮಗಳ ಪ್ರಕಾರ, ಆಧಾರ್ ದೃಢೀಕೃತ ಬಳಕೆದಾರರು ರಿಸರ್ವ್ಡ್ ಟಿಕೆಟ್ ಬುಕಿಂಗ್ ಆರಂಭಗೊಂಡ ಮೊದಲ ದಿನ…