Category Archives: Blog

Your blog category

ಗುಂಡಿ ಬಿದ್ದ ರಸ್ತೆಗಳು, ಹದಗೆಟ್ಟ ವ್ಯವಸ್ಥೆ; ರಾಜ್ಯ ಸರ್ಕಾರದ ವಿರುದ್ಧ ಮೋಹನ್‌ದಾಸ್ ಪೈ ಸಿಡಿಮಿಡಿ! – Kannada News | Mohandas Pai Slams Bengaluru’s Failing Infrastructure, Cites Corruption and IT Flight Risk

ಗುಂಡಿ ಬಿದ್ದ ರಸ್ತೆಗಳು, ಹದಗೆಟ್ಟ ವ್ಯವಸ್ಥೆ; ಸರ್ಕಾರದ ವಿರುದ್ಧ ಮೋಹನ್‌ದಾಸ್ ಪೈ ಸಿಡಿಮಿಡಿ!

ಬೆಂಗಳೂರು, ಏಪ್ರಿಲ್ 21: ಸಿಲಿಕಾನ್ ಸಿಟಿಯ ಗುಂಡಿ ಬಿದ್ದ ರಸ್ತೆಗಳು ಮತ್ತು ಹದಗೆಡುತ್ತಿರುವ ಮೂಲಸೌಕರ್ಯಗಳ ಕುರಿತು ಖ್ಯಾತ ಉದ್ಯಮಿ ಹಾಗೂ ಇನ್ಫೋಸಿಸ್ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ (Mohandas Pai) ಕರ್ನಾಟಕ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ‘X’ ನಲ್ಲಿ ನಗರದ ಅವ್ಯವಸ್ಥೆಯ ಫೋಟೋ ಹಂಚಿಕೊಂಡಿರುವ ಅವರು, ಜಿಬಿಎ ರಸ್ತೆ ದುರಸ್ತಿ ಕಾರ್ಯವು “ಅತ್ಯಂತ ಪ್ರಾಚೀನ ಮತ್ತು ಶೋಚನೀಯ” ಎಂದು ಕಿಡಿಕಾರಿದ್ದಾರೆ.

ಐಟಿ ವಲಯದ ಆತಂಕ ಮತ್ತು ವಲಸೆಯ ಭೀತಿ

ಬ್ಲ್ಯಾಕ್‌ಬಕ್ ಸಿಇಒ ಬೆಂಗಳೂರನ್ನು ತೊರೆಯುವ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ ಪೈ ಅವರು ವಾಗ್ದಾಳಿ ಚರ್ಚೆಗೆ ಗ್ರಾಸವಾಗಿದೆ. ವಿಶ್ವದ ಶ್ರೇಷ್ಠ ಕಂಪನಿಗಳಿರುವ, ಸುಮಾರು ಎಂಟು ಲಕ್ಷ ಜನರು ಕೆಲಸ ಮಾಡುವ ಪ್ರಮುಖ ರಸ್ತೆಗಳನ್ನೇ ದುರಸ್ತಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಹೂಡಿಕೆದಾರರು ಮತ್ತು ಉದ್ಯಮಿಗಳು ನಗರದ ಭವಿಷ್ಯದ ಬಗ್ಗೆ ಭರವಸೆ ಕಳೆದುಕೊಳ್ಳುತ್ತಿದ್ದು, ಐಟಿ ಕಂಪನಿಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಸಂಭವವಿದೆ ಎಂದು ಅವರು ಎಚ್ಚರಿಸಿದ್ದಾರೆ.

ವ್ಯವಸ್ಥೆಯ ವೈಫಲ್ಯ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಗ್ಗೆ ಹತ್ತಾರು ಸಲಹೆಗಳನ್ನು ನೀಡಿದ್ದರೂ ಯಾವುದೇ ಸುಧಾರಣೆ ತಂದಿಲ್ಲ ಎಂದು ಪೈ ದೂರಿದ್ದಾರೆ. ಗುತ್ತಿಗೆದಾರರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿ ಆಗುತ್ತಿಲ್ಲ ಮತ್ತು ಪ್ರತಿ ಹಂತದಲ್ಲೂ ದೊಡ್ಡ ಮಟ್ಟದ ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ಗುಣಮಟ್ಟದ ಕೆಲಸಗಳು ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮೆಟ್ರೋ ಮತ್ತು ಉಪನಗರ ರೈಲು ಯೋಜನೆಗಳ ವಿಳಂಬವನ್ನು ಟೀಕಿಸಿದ ಅವರು, ಅಧಿಕಾರಿಗಳ ನಿರಂತರ ವರ್ಗಾವಣೆಯಿಂದ ಯೋಜನೆಗಳಲ್ಲಿ ಸ್ಥಿರತೆ ಇಲ್ಲದಂತಾಗಿದೆ ಎಂದಿದ್ದಾರೆ.

ಇದನ್ನೂ ಓದಿ ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಮೋಹನ್ ದಾಸ್ ಕೆಂಡಾಮಂಡಲ

ಸಾರ್ವಜನಿಕರ ಆಕ್ರೋಶ

ಮೋಹನ್‌ದಾಸ್ ಪೈ ಅವರ ಪೋಸ್ಟ್‌ಗೆ ಸಾವಿರಾರು ನಾಗರಿಕರು ಬೆಂಬಲ ಸೂಚಿಸಿದ್ದು, ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದು ನಿಜಕ್ಕೂ ಭಾರತದ ಸಿಲಿಕಾನ್ ವ್ಯಾಲಿಯೇ? ಇಲ್ಲಿ ರಸ್ತೆಗಳೇ ಇಲ್ಲ, ಕೇವಲ ತೇಪೆ ಹಚ್ಚಿದ ಗುಂಡಿಗಳಿವೆ ಎಂದು ಕೆಲವರು ಅಳಲು ತೋಡಿಕೊಂಡಿದ್ದಾರೆ. ಗುಣಮಟ್ಟದ ತಪಾಸಣೆ ನಡೆಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸರ್ಕಾರದ ಮುಂದಿರುವ ಸವಾಲು

ಸರ್ಕಾರಿ ಶಾಲೆಗಳ ಕುಸಿತ, ಉನ್ನತ ಶಿಕ್ಷಣದಲ್ಲಿನ ಖಾಲಿ ಹುದ್ದೆಗಳು ಮತ್ತು ಮೂಲಸೌಕರ್ಯದ ಕೊರತೆಯನ್ನು ನೀಗಿಸದಿದ್ದರೆ, ನಗರದ ಉದ್ಯೋಗ ಸೃಷ್ಟಿ ಸಾಮರ್ಥ್ಯ ಕುಂಠಿತಗೊಳ್ಳಲಿದೆ ಎಂದು ಪೈ ಎಚ್ಚರಿಸಿದ್ದಾರೆ. ಸದ್ಯ ಜಿಬಿಎ ಆಯುಕ್ತರು ಮಳೆಗಾಲದ ಮುನ್ನೆಚ್ಚರಿಕೆ ಹಾಗೂ ಗುಂಡಿ ಮುಚ್ಚುವ ಕಾರ್ಯಕ್ಕೆ ಸೂಚನೆ ನೀಡಿದ್ದರೂ, ಅದು ಎಷ್ಟರ ಮಟ್ಟಿಗೆ ಜಾರಿಯಾಗಲಿದೆ ಎಂಬುದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಮಕೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು! – Kannada News | Tumakuru Bus Accident: KSRTC Bus Overturns Near Gubbi on NH 206; 40 Passengers Escape Miraculously

ತುಮಕೂರು, ಏಪ್ರಿಲ್ 21: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಳ್ಳಿಪಾಳ್ಯದ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿದ್ದು, ಭೀಕರ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಬಸ್‌ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ತಿಪಟೂರು ಡಿಪೋಗೆ ಸೇರಿದ ಈ ಬಸ್ ಹೊಸದುರ್ಗದಿಂದ ಬೆಂಗಳೂರಿನ ಕಡೆಗೆ ತೆರಳುತ್ತಿತ್ತು. ಬಸ್‌ನಲ್ಲಿ ಪ್ರಯಾಣಿಕರು ಭರ್ತಿಯಾಗಿದ್ದರು. ಗುಬ್ಬಿ ಸಮೀಪದ ಕಳ್ಳಿಪಾಳ್ಯದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್, ರಸ್ತೆ ಬದಿಯ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಐದಾರು ಜನರಿಗೆ ಗಂಭೀರ ಗಾಯ

ಅಪಘಾತದಲ್ಲಿ ಐದಾರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 40ಕ್ಕೂ ಹೆಚ್ಚು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಕಿಸ್ತಾನದ ಬಟ್ಟೆ ಬ್ರ್ಯಾಂಡ್ ಜಾಹೀರಾತಿನಲ್ಲಿ ಆಲಿಯಾ ಭಟ್! – Kannada News | Pakistan fashion brand used Alia Bhatt’s images to promote their brand

ಆಲಿಯಾ ಭಟ್ (Alia Bhatt) ಭಾರತದ ಸ್ಟಾರ್ ನಟಿ, ಹಲವಾರು ಬ್ರ್ಯಾಂಡುಗಳಿಗೆ ಅವರು ರಾಯಭಾರಿ ಸಹ ಆಗಿದ್ದಾರೆ. ಹಲವು ಫ್ಯಾಷನ್ ಶೋಗಳಲ್ಲಿ ರ್ಯಾಂಪ್ ವಾಕ್ ಸಹ ಮಾಡಿದ್ದಾರೆ. ಖುದ್ದು ಆಲಿಯಾ ಅವರು ಫ್ಯಾಷನ್ ಬ್ರ್ಯಾಂಡ್ ಒಂದರ ಮಾಲಕಿಯೂ ಹೌದು. ಆದರೆ ಇದೀಗ ಆಲಿಯಾ ಭಟ್ ಅವರು ಪಾಕಿಸ್ತಾನದ ಬಟ್ಟೆ ಬ್ರ್ಯಾಂಡಿನ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ! ವಜಾಯೆಶಾ ಹೆಸರಿನ ಬ್ರ್ಯಾಂಡಿನ ಬಟ್ಟೆಗಳನ್ನು ಧರಿಸಿ ಆಲಿಯಾ ಭಟ್ ಫೋಸು ನೀಡಿದ್ದಾರೆ. ಪಾಕಿಸ್ತಾನದಲ್ಲಿ ಈ ಫೋಟೊಗಳು ವೈರಲ್ ಆಗಿವೆ. ಆದರೆ ನಿಜಾಂಶ ಬೇರೆಯೇ ಇದೆ.

ಅಸಲಿಗೆ ನಟಿ ಆಲಿಯಾ ಭಟ್ ಪಾಕ್​ ಬ್ರ್ಯಾಂಡಿಗಾಗಿ ಯಾವುದೇ ಫೋಟೊಶೂಟ್ ಮಾಡಿಸಿಲ್ಲ, ಪಾಕ್ ಬ್ರ್ಯಾಂಡಿನ ಬಟ್ಟೆಗಳನ್ನು ಸಹ ಧರಿಸಿಲ್ಲ. ಆದರೆ ವಜಾಯೆಶಾ ಬ್ರ್ಯಾಂಡಿನವರು ಎಐ ಬಳಸಿ ಆಲಿಯಾ ಅವರ ಚಿತ್ರಗಳನ್ನು ತಿರುಚಿ ತಮ್ಮ ಬಟ್ಟೆಯ ಜಾಹೀರಾತಿಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಗಳು ವೈರಲ್ ಆಗುತ್ತಿದ್ದಂತೆ ಆಲಿಯಾ ಭಟ್ ಅಭಿಮಾನಿಗಳು, ನೆಟ್ಟಿಗರು, ವಜಾಯಿಷಾ ಇನ್​​ಸ್ಟಾಗ್ರಾಂ ಪೇಜಿನಲ್ಲಿ ಛೀಮಾರಿ ಹಾಕಿದ್ದು, ಆಲಿಯಾ ಭಟ್, ಕೇಸು ಹಾಕುವುದು ಖಾತ್ರಿ ಎಂದಿದ್ದಾರೆ.

Alia Bhatt1

ಆಲಿಯಾ ಭಟ್ ಅವರು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಚಿತ್ರಗಳನ್ನು ಬಳಸಿಕೊಂಡು ಆಲಿಯಾ, ತಮ್ಮ ಬ್ರ್ಯಾಂಡಿನ ಸೆಲ್ವಾರ್ ಕಮೀಜ್ ಇನ್ನಿತರೆ ಉಡುಗೆಗಳನ್ನು ತೊಟ್ಟು ಫೋಸು ಕೊಡುತ್ತಿರುವಂತೆ ಚಿತ್ರಗಳನ್ನು ಬದಲಾಯಿಸಿ ಬಳಸಲಾಗಿದೆ. ಆಲಿಯಾ ಭಟ್ ಅವರು ಫ್ಯಾಷನ್ ಶೋಗಳಲ್ಲಿ ಮಾಡರ್ನ್ ಡ್ರೆಸ್ ಧರಿಸಿ ತೆಗೆಸಿಕೊಂಡ ಚಿತ್ರಗಳನ್ನು ಸಹ ತಿರುಚಿ ತಮ್ಮ ಉಡುಗೆಗಳನ್ನು ಹಾಕಿಕೊಂಡಿರುವಂತೆ ಬದಲಾಯಿಸಲಾಗಿದೆ.

Alia Bhatt2

ಆಲಿಯಾ ಭಟ್ ಅವರು ನ್ಯಾಯಾಲಯದಿಂದ ಪರ್ಸನಾಲಿಟಿ ರೈಟ್ಸ್ (ವ್ಯಕ್ತಿತ್ವ ರಕ್ಷಣೆ ಹಕ್ಕು) ಅನ್ನು ಪಡೆದುಕೊಂಡಿದ್ದಾರೆ. ಅವರ ಅನುಮತಿ ಇಲ್ಲದೆ ಯಾರೂ ಸಹ ಯಾವುದೇ ಕಾರಣಕ್ಕೂ ಸಹ ಅವರ ಚಿತ್ರವನ್ನು, ವಿಡಿಯೋವನ್ನು, ಧ್ವನಿಯನ್ನು, ಅವರ ಹಾವ-ಭಾವದ ನಕಲನ್ನು ಸಹ ಬಳಸುವಂತಿಲ್ಲ. ಆದರೆ ಪಾಕ್​​ನ ಸಂಸ್ಥೆಯೊಂದು ನೇರವಾಗಿ ಚಿತ್ರವನ್ನೇ ಬಳಸಿದೆ, ಮಾತ್ರವಲ್ಲದೆ ಆಲಿಯಾರ ಚಿತ್ರವನ್ನು ತಿರುಚಿದೆ ಸಹ. ಆಲಿಯಾ ಭಟ್ ಇದರ ವಿರುದ್ಧ ಹೇಗೆ ಕ್ರಮ ಕೈಗೊಳ್ಳುತ್ತಾರೆ ನೋಡಬೇಕಿದೆ. ಪಾಕಿಸ್ತಾನದ ಸಂಸ್ಥೆಯ ವಿರುದ್ಧ ಕೇಸು ಹಾಕುವುದು ಉಪಯೋಗ ಆಗಲಾರದಾದರೂ, ಇನ್​​ಸ್ಟಾಗ್ರಾಂಗೆ ರಿಪೋರ್ಟ್ ಮಾಡಿ ಆ ಸಂಸ್ಥೆಯ ಇನ್​​ಸ್ಟಾ ಪೇಜನ್ನು ರದ್ದು ಮಾಡಿಸಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 1:16 pm, Tue, 21 April 26

Source link

Kakanmath Temple: ಕಾಕನಮಠ ದೇವಾಲಯ; ಬರೀ ಒಂದರ ಮೇಲೊಂದರಂತೆ ಕಲ್ಲುಗಳನ್ನಿಟ್ಟು ಕಟ್ಟಿದ 115 ಅಡಿ ಎತ್ತರದ ಭವ್ಯ ಶಿವ ದೇವಾಲಯ – Kannada News | Kakanmath Temple Morena: Ancient Shiva Marvel Built Without Cement

ಕಾಕನಮಠ ದೇವಾಲಯImage Credit source: kevinstandagephotography

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಸಿಹೋನಿಯಾ ಪ್ರದೇಶದಲ್ಲಿರುವ ‘ಕಾಕನಮಠ ದೇವಾಲಯ’ವು ಕೇವಲ ಒಂದು ಪುರಾತನ ಕಟ್ಟಡವಲ್ಲ. ಇದು ವಾಸ್ತುಶಿಲ್ಪದ ಅಚ್ಚರಿ ಮತ್ತು ನಿಗೂಢತೆಗಳ ಸಂಗಮ. ಸುಮಾರು 115 ಅಡಿ ಎತ್ತರದ ಈ ಭವ್ಯ ಶಿವ ದೇವಾಲಯವು ಇಂದಿಗೂ ಇತಿಹಾಸಕಾರರನ್ನು ಮತ್ತು ವಿಜ್ಞಾನಿಗಳನ್ನು ಬೆರಗುಗೊಳಿಸುತ್ತಿದೆ. ತನ್ನ ವಿಶಿಷ್ಟ ನಿರ್ಮಾಣ ಶೈಲಿಯಿಂದಲೇ ಜಗತ್ಪ್ರಸಿದ್ಧಿಯಾಗಿದೆ.

ನಿರ್ಮಾಣದ ರಹಸ್ಯ: ವಾಸ್ತುಶಿಲ್ಪದ ಮಾಯಾಲೋಕ:

ಈ ದೇವಾಲಯದ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಇದರ ನಿರ್ಮಾಣದಲ್ಲಿ ಸಿಮೆಂಟ್, ಪ್ಲಾಸ್ಟರ್ ಅಥವಾ ಸುಣ್ಣದಂತಹ ಯಾವುದೇ ಅಂಟಿಕೊಳ್ಳುವ ವಸ್ತುಗಳನ್ನು ಬಳಸಲಾಗಿಲ್ಲ. ಬದಲಾಗಿ ಬೃಹತ್ ಗಾತ್ರದ ಕಲ್ಲುಗಳನ್ನು ಒಂದರ ಮೇಲೊಂದು ಸಮತೋಲನದಲ್ಲಿರಿಸಿ (Interlocking system) ಅಂತಹ ಎತ್ತರದ ರಚನೆಯನ್ನು ನಿರ್ಮಿಸಲಾಗಿದೆ. ಶತಮಾನಗಳಿಂದ ಅನೇಕ ನೈಸರ್ಗಿಕ ವಿಕೋಪಗಳು ಸಂಭವಿಸಿದರೂ, ಸುತ್ತಲಿನ ಸಣ್ಣ ದೇವಾಲಯಗಳು ಕುಸಿದಿದ್ದರೂ, ಈ ಮುಖ್ಯ ದೇವಾಲಯವು ಇಂದಿಗೂ ಅಚಲವಾಗಿ ನಿಂತಿರುವುದು ಇಂಜಿನಿಯರ್‌ಗಳಿಗೆ ಒಂದು ದೊಡ್ಡ ಸವಾಲಾಗಿದೆ.

ಐತಿಹಾಸಿಕ ಹಿನ್ನೆಲೆ:

ಇತಿಹಾಸಕಾರರ ಪ್ರಕಾರ, ಈ ದೇವಾಲಯವನ್ನು 11 ನೇ ಶತಮಾನದಲ್ಲಿ ಕಚ್ಛಾಪಘಾಟ (ಕಚ್ವಾಹ) ರಾಜವಂಶದ ರಾಜ ‘ಕೀರ್ತಿರಾಜ್’ ನಿರ್ಮಿಸಿದನು. ರಾಜನ ಪತ್ನಿ ಕಾಕನವತಿ ಶಿವನ ಪರಮ ಭಕ್ತೆಯಾಗಿದ್ದಳು. ಅವಳ ಇಚ್ಛೆಯಂತೆ ಈ ಭವ್ಯ ದೇವಾಲಯ ನಿರ್ಮಾಣವಾದ ಕಾರಣ ಇದಕ್ಕೆ ‘ಕಾಕನಮಠ’ ಎಂಬ ಹೆಸರು ಬಂದಿತು. ಯಾವುದೇ ಆಧುನಿಕ ತಂತ್ರಜ್ಞಾನವಿಲ್ಲದ ಆ ಕಾಲದಲ್ಲಿ ಅಷ್ಟು ಎತ್ತರಕ್ಕೆ ಭಾರೀ ಕಲ್ಲುಗಳನ್ನು ಸಾಗಿಸಿ, ಅವುಗಳ ಮೇಲೆ ಅದ್ಭುತ ಶಿಲ್ಪಗಳನ್ನು ಕೆತ್ತಿದ ಶಿಲ್ಪಿಗಳ ಕೌಶಲ್ಯ ಅವಿಸ್ಮರಣೀಯ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ದೆವ್ವಗಳು ನಿರ್ಮಿಸಿದ ದೇವಾಲಯವೇ? – ಒಂದು ರೋಚಕ ದಂತಕಥೆ:

ಸ್ಥಳೀಯವಾಗಿ ಒಂದು ಆಸಕ್ತಿದಾಯಕ ಜಾನಪದ ಕಥೆ ಪ್ರಚಲಿತದಲ್ಲಿದೆ. ಈ ದೇವಾಲಯವನ್ನು ಮನುಷ್ಯರು ಕಟ್ಟಿದ್ದಲ್ಲ, ಬದಲಾಗಿ ಶಿವನ ಆಜ್ಞೆಯ ಮೇರೆಗೆ ದೆವ್ವಗಳು ಒಂದೇ ರಾತ್ರಿಯಲ್ಲಿ ನಿರ್ಮಿಸಿದವು ಎಂದು ಜನರು ನಂಬುತ್ತಾರೆ. ಕಥೆಯ ಪ್ರಕಾರ, ಬೆಳಗಿನ ಜಾವದಲ್ಲಿ ಯಾರೋ ಹಿಟ್ಟು ಬೀಸುವ ಶಬ್ದ ಕೇಳಿದಾಗ ದೆವ್ವಗಳು ಕೆಲಸವನ್ನು ಅರ್ಧಕ್ಕೇ ಬಿಟ್ಟು ಹೋದವಂತೆ. ಅದಕ್ಕಾಗಿಯೇ ದೇವಾಲಯದ ಶಿಖರವು ಇಂದಿಗೂ ಅಪೂರ್ಣವಾಗಿ ಕಾಣುತ್ತದೆ ಎನ್ನಲಾಗುತ್ತದೆ. ಈ ಕಥೆಗೆ ಪುರಾವೆ ಇಲ್ಲದಿದ್ದರೂ, ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುವ ಕಲ್ಲುಗಳ ಜೋಡಣೆಯು ಈ ನಿಗೂಢತೆಗೆ ಪುಷ್ಠಿ ನೀಡುತ್ತದೆ.

ಪ್ರಸ್ತುತ ಸ್ಥಿತಿ ಮತ್ತು ಪ್ರಾಮುಖ್ಯತೆ:

ದೇವಾಲಯದ ಕೆಲವು ಭಾಗಗಳು ಹಾನಿಗೊಳಗಾಗಿದ್ದರೂ, ಅದರ ವೈಭವ ಕಿಂಚಿತ್ತೂ ತಗ್ಗಿಲ್ಲ. ಇಲ್ಲಿನ ಅಪರೂಪದ ಶಿಲ್ಪಕಲೆಗಳನ್ನು ಪ್ರಸ್ತುತ ವಸ್ತುಸಂಗ್ರಹಾಲಯಗಳಲ್ಲಿ ಸಂರಕ್ಷಿಸಿಡಲಾಗಿದೆ. ಇಂದು ಇದು ಕೇವಲ ಭಕ್ತರ ಧಾರ್ಮಿಕ ಕೇಂದ್ರ ಮಾತ್ರವಲ್ಲದೆ, ಇತಿಹಾಸ ಪ್ರಿಯರು ಮತ್ತು ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿರಾಟ್ ಕೊಹ್ಲಿಗಾಗಿ ಬ್ಯಾಟ್ ಹಿಡಿಯಲಿದ್ದಾರೆ ನೊವಾಕ್ ಜೋಕೊವಿಚ್! – Kannada News | Novak Djokovic’s Cricket Love via Virat Kohli

ವಿಶ್ವ ಟೆನ್ನಿಸ್ ಅಂಗಳದ ಅಧಿಪತಿ ನೊವಾಕ್ ಜೋಕೊವಿಚ್ (Novak Djokovic) ಈಗ ಕ್ರಿಕೆಟ್ ಪ್ರೇಮಿಯಾಗಿ ಬದಲಾಗಿದ್ದಾರೆ! ಇದಕ್ಕೆ ಕಾರಣ ಬೇರೆ ಯಾರೂ ಅಲ್ಲ, ಭಾರತದ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ (Virat Kohli). ಇತ್ತೀಚೆಗೆ ಮ್ಯಾಡ್ರಿಡ್‌ನಲ್ಲಿ ನಡೆದ ‘ಲಾರಿಯಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್’ ಸಮಾರಂಭದಲ್ಲಿ ಮಾತನಾಡಿದ ಜೋಕೊವಿಚ್, ತಾನು ಕ್ರಿಕೆಟ್ ವೀಕ್ಷಿಸಲು ಮತ್ತು ಆಸಕ್ತಿ ಬೆಳೆಸಿಕೊಳ್ಳಲು ವಿರಾಟ್ ಕೊಹ್ಲಿ ಅವರೊಂದಿಗಿನ ಸ್ನೇಹವೇ ಮುಖ್ಯ ಕಾರಣ ಎಂದು ಬಹಿರಂಗಪಡಿಸಿದ್ದಾರೆ.

ಕೊಹ್ಲಿ ಕಾರಣದಿಂದ ಕ್ರಿಕೆಟ್ ಪರಿಚಯ:

ಸರ್ಬಿಯಾ ಮೂಲದ ನೊವಾಕ್ ಜೋಕೊವಿಚ್​ಗೆ ಕ್ರಿಕೆಟ್ ಬಗ್ಗೆ ಮೊದಲೇನೂ ತಿಳಿದಿರಲಿಲ್ಲ. ಆದರೆ, ವಿರಾಟ್ ಕೊಹ್ಲಿ ಅವರ ಸಾಧನೆ ಮತ್ತು ಅವರ ವ್ಯಕ್ತಿತ್ವದಿಂದ ಪ್ರಭಾವಿತರಾದ ಜೋಕೊವಿಚ್, ಈಗ ಕ್ರಿಕೆಟ್ ಪಂದ್ಯಗಳನ್ನು ಗಮನಿಸುತ್ತಿದ್ದಾರೆ.  “ನನ್ನ ಗೆಳೆಯ ವಿರಾಟ್‌ಗಾಗಿ ನಾನು ಕ್ರಿಕೆಟ್ ಪ್ರೇಮಿಯಾಗಿದ್ದೇನೆ” ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾ ಸ್ನೇಹ:

ಈ ಇಬ್ಬರು ದಿಗ್ಗಜರ ಸ್ನೇಹ ಶುರುವಾಗಿದ್ದು ಇನ್‌ಸ್ಟಾಗ್ರಾಮ್ ಮೂಲಕ ಎಂಬುದು ವಿಶೇಷ. ಒಂದೊಮ್ಮೆ ಕೊಹ್ಲಿ ಅವರು ಜೋಕೊವಿಚ್‌ಗೆ ಸಂದೇಶ ಕಳುಹಿಸಲು ಹೋದಾಗ, ಅದಾಗಲೇ ಜೋಕೊವಿಚ್ ಅವರಿಂದ ಮೆಸೇಜ್ ಬಂದಿರುವುದನ್ನು ಕಂಡು ಆಶ್ಚರ್ಯಚಕಿತರಾಗಿದ್ದರಂತೆ! ಅಂದಿನಿಂದ ಇಂದಿನವರೆಗೆ ಇವರಿಬ್ಬರು ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ.

ಭಾರತಕ್ಕೆ ಬರಲಿದ್ದಾರೆ ಜೋಕೊವಿಚ್:

ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡುವ ಹಂಬಲವನ್ನು ನೊವಾಕ್ ಜೋಕೊವಿಚ್ ವ್ಯಕ್ತಪಡಿಸಿದ್ದಾರೆ. ಈ ಭೇಟಿಯ ವೇಳೆ ವಿರಾಟ್ ಕೊಹ್ಲಿ ಅವರೊಂದಿಗೆ ಸೇರಿ ಟೆನ್ನಿಸ್ ಮತ್ತು ಕ್ರಿಕೆಟ್‌ನ ‘ಕ್ರಾಸ್‌ಓವರ್’ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಆಸೆಯನ್ನೂ ಅವರು ತೋಡಿಕೊಂಡಿದ್ದಾರೆ.

ಪರಸ್ಪರ ಗೌರವ:

“ವಿರಾಟ್ ಒಬ್ಬ ಅದ್ಭುತ ಕ್ರೀಡಾಪಟು ಮತ್ತು ವ್ಯಕ್ತಿ. ಅವರ ಆಟದ ಬಗ್ಗೆ ನನಗೆ ಅಪಾರ ಗೌರವವಿದೆ” ಎಂದು ಜೋಕೊವಿಚ್ ಹೊಗಳಿದ್ದಾರೆ. ಇದಕ್ಕೆ ಪ್ರತಿಯಾಗಿ ವಿರಾಟ್ ಕೂಡ ಹಲವು ಬಾರಿ ಜೋಕೊವಿಚ್ ಅವರ ಫಿಟ್‌ನೆಸ್ ಮತ್ತು ಮಾನಸಿಕ ದೃಢತೆಯನ್ನು ಕೊಂಡಾಡಿದ್ದಾರೆ.

ವಿಶ್ವದ ಇಬ್ಬರು ಶ್ರೇಷ್ಠ ಕ್ರೀಡಾಪಟುಗಳ ಈ ಅಪರೂಪದ ಸ್ನೇಹ ಈಗ ಕ್ರೀಡಾ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದೆ. ಅಭಿಮಾನಿಗಳು ಈ ‘ಜೆರ್ಸಿ ನಂ. 18’ ಮತ್ತು ‘ಟೆನ್ನಿಸ್ ನಂ. 1’ ಜೋಡಿಯನ್ನು ಒಂದೇ ವೇದಿಕೆಯಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ನೊವಾಕ್ ಜೋಕೊವಿಚ್ ಸಾಧನೆಗಳು:

ಅತಿ ಹೆಚ್ಚು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳು: ಪುರುಷರ ಸಿಂಗಲ್ಸ್ ಟೆನ್ನಿಸ್‌ನಲ್ಲಿ ದಾಖಲೆಯ 24 ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಮೂಲಕ ಅತ್ಯಧಿಕ ಗ್ರಾಂಡ್ ಸ್ಲಾಮ್ ಗೆದ್ದ ಪುರುಷ ಟೆನ್ನಿಸ್ ತಾರೆ ಎನಿಸಿಕೊಂಡಿದ್ದಾರೆ.

  • ಆಸ್ಟ್ರೇಲಿಯನ್ ಓಪನ್: 10
  • ಫ್ರೆಂಚ್ ಓಪನ್: 3
  • ವಿಂಬಲ್ಡನ್: 7
  • ಯುಎಸ್ ಓಪನ್: 4

ವಿಶ್ವ ನಂ. 1 ಶ್ರೇಯಾಂಕದ ದಾಖಲೆ: ಎಟಿಪಿ (ATP) ಶ್ರೇಯಾಂಕದಲ್ಲಿ ಅತಿ ಹೆಚ್ಚು ವಾರಗಳ ಕಾಲ (400ಕ್ಕೂ ಹೆಚ್ಚು ವಾರಗಳು) ವಿಶ್ವದ ನಂ. 1 ಆಟಗಾರನಾಗಿ ಉಳಿದ ದಾಖಲೆ ಕೂಡ ನೊವಾಕ್ ಜೋಕೊವಿಚ್ ಹೆಸರಲ್ಲಿದೆ.

ಗೋಲ್ಡನ್ ಮಾಸ್ಟರ್ಸ್: ಒಂಬತ್ತೂ ಎಟಿಪಿ ಮಾಸ್ಟರ್ಸ್ 1000 (ATP Masters 1000) ಟೂರ್ನಿಗಳನ್ನು ಕನಿಷ್ಠ ಎರಡು ಬಾರಿ ಗೆದ್ದ ಏಕೈಕ ಆಟಗಾರ ನೊವಾಕ್ ಜೋಕೊವಿಚ್.

ಮುಖಾಮುಖಿ ದಾಖಲೆ: ಟೆನ್ನಿಸ್ ಲೋಕದ ದಿಗ್ಗಜರಾದ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಇಬ್ಬರ ವಿರುದ್ಧವೂ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ಕೂಡ ಜೋಕೊವಿಚ್ ಹೆಸರಿನಲ್ಲಿದೆ.

ಇದನ್ನೂ ಓದಿ: ಪಾಕಿಸ್ತಾನ್ ಸೂಪರ್ ಲೀಗ್​ನಿಂದ ಮೂವರು ಐಪಿಎಲ್ ಆಟಗಾರರು ಬ್ಯಾನ್..!

ಒಲಿಂಪಿಕ್ ಸಾಧನೆ:2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಕಾರ್ಲೋಸ್ ಅಲ್ಕರಾಝ್ ಅವರನ್ನು ಸೋಲಿಸಿ ನೊವಾಕ್ ಜೋಕೊವಿಚ್ ಚಿನ್ನದ ಪದಕ ಗೆದ್ದಿದ್ದರು.

Source link

ಇಬ್ಬರು ಮಕ್ಕಳಿದ್ದೂ ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು? – Kannada News | Heart Wrenching: Children Deny Last Rites for Mother in Belagavi

ಬೆಳಗಾವಿ, ಏಪ್ರಿಲ್​​ 21: ನಗರದಲ್ಲಿ ಹೃದಯ ಕಲಕುವ ಘಟನೆಯೊಂದು ನಡೆದಿದ್ದು, ತಾಯಿ ಮೃತಪಟ್ಟ ನಂತರ ಆಕೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮಕ್ಕಳು ನಿರಾಕರಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದ ಅಂಜನಾ ಧಾಮನೆ ಮೃತಪಟ್ಟಿದ್ದರು. ಕಳೆದ ಮೂರು ವರ್ಷಗಳಿಂದ ವೃದ್ಧಾಶ್ರಮದಲ್ಲಿದ್ದ ವೃದ್ಧೆ ಅಂಜನಾಗೆ, ಇಬ್ಬರು ಮಕ್ಕಳಿದ್ರೂ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರು. ಹೀಗಾಗಿ ಅಂಜನಾ ಸ್ಥಿತಿ ಕಂಡು ಸಹೋದರ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದ. ವೃದ್ಧೆ ಮೃತಪಟ್ಟ ಹಿನ್ನೆಲೆ ಮಕ್ಕಳಿಗೆ ಆಶ್ರಮ ಸಿಬ್ಬಂದಿ ಕರೆ ಮಾಡಿದ್ದು, ಈ ವೇಳೆ ನೀವೇ ಅಂತ್ಯಕ್ರಿಯೆ ಮಾಡಿ ಎಂದು ಪಾಪಿ ಮಕ್ಕಳು ಕರೆ ಕಟ್ ಮಾಡಿದ್ದಾರೆ. ಬಳಿಕ ನಗರಸೇವಕ ಶಂಕರ್ ಪಾಟೀಲ್, ಗಂಗಾಧರ್ ಪಾಟೀಲ್​ಗೆ ಕರೆ ಮಾಡಿ ವಿಷಯ ತಿಳಿಸಲಾಗಿದೆ. ಅಂತಿಮವಾಗಿ ಆಶ್ರಮಕ್ಕೆ ತೆರಳಿ ವೃದ್ಧೆಯ ಅಂತ್ಯಕ್ರಿಯೆಯನ್ನು ಸಮಾಜ ಸೇವಕರು ನೆರವೇರಿಸಿದ್ದಾರೆ. ಕೇವಲ 10 ಕಿ.ಮೀ. ದೂರದಲ್ಲಿದ್ರೂ ತಾಯಿಯ ಅಂತ್ಯಕ್ರಿಯೆಗೆ ಬಾರದ ಮಕ್ಕಳಾದ ಮಹೇಶ್, ಶ್ರೀಕಾಂತ್ ವಿರುದ್ಧ ಸಾರ್ವಜನಿಕ ವಲಯದಿಂದ ಆಕ್ರೋಶ ಕೇಳಿಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ, ದಿಕ್ಕಾಪಾಲಾಗಿ ಓಡಿದ ಜನ – Kannada News | Bee Swarm Sparks Panic at Mandore Garden, Visitors Rush for Safety

ಜೋಧ್​ಪುರ, ಏಪ್ರಿಲ್ 21: ಜೋಧ್​ಪುರದ ಮಂಡೋರ್ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ ನಡೆಸಿದ್ದು, ಜನರು ದಿಕ್ಕಾಪಾಲಾಗಿ ಓಡಿರುವ ವಿಡಿಯೋ ವೈರಲ್ ಆಗಿದೆ. ಜೋಧ್‌ಪುರ ಎಂದಿನಂತೆ ಪ್ರವಾಸಿಗರಿಂದ ಕಳೆಗಟ್ಟಿತ್ತು. ಮಂಡೋರ್ ಉದ್ಯಾನದ ಮುಖ್ಯ ದ್ವಾರದ ಬಳಿ ಪ್ರವಾಸಿಗರು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ, ಐತಿಹಾಸಿಕ ಸೌಂದರ್ಯವನ್ನು ಸವಿಯುತ್ತಿದ್ದರು. ಆದರೆ, ದೊಡ್ಡ ಆಪತ್ತು ಕಾದಿದೆ ಎಂದು ಯಾರೂ ಊಹಿಸಿರಲಿಲ್ಲ.

ಉದ್ಯಾನದ ಮುಖ್ಯ ದ್ವಾರದ ಬಳಿ ಇದ್ದ ಬೃಹತ್ ಜೇನುಗೂಡಿನಿಂದ ಸಾವಿರಾರು ಜೇನುನೊಣಗಳು ಒಮ್ಮೆಗೆ ಹೊರಬಂದವು. ನೋಡುನೋಡುತ್ತಿದ್ದಂತೆಯೇ ದಾಳಿ ಶುರು ಮಾಡಿದ್ದವು. ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ಜನರು ತಮ್ಮ ಕೈಯಲ್ಲಿದ್ದ ಬ್ಯಾಗ್, ಕೊಡೆಗಳನ್ನು ಎಸೆದು ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ. ಸಣ್ಣ ಮಕ್ಕಳು ಮತ್ತು ವೃದ್ಧರು ಆತಂಕದಿಂದ ಕಿರುಚುತ್ತಿದ್ದರು. ಇಡೀ ಪ್ರದೇಶದಲ್ಲಿ ಅವ್ಯವಸ್ಥೆ ಉಂಟಾಯಿತು. ಜೇನುನೊಣಗಳ ಗುಂಪು ನೂರಾರು ಪ್ರವಾಸಿಗರನ್ನು ಬೆನ್ನಟ್ಟಿತು, ಹಲವರಿಗೆ ತೀವ್ರವಾಗಿ ಕಚ್ಚಿ ಗಾಯಗೊಳಿಸಿತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಪುಟಾಣಿ ಫ್ಲೈಯಿಂಗ್ ಕಿಸ್ ಕೊಡುತ್ತಿದ್ದಂತೆ ನಾಚಿ ನೀರಾದ ಪುಟ್ಟ ಹುಡುಗ – Kannada News | A little boy holding his face as a little girl gives him a flying kiss.

ಪುಟಾಣಿ ಮಕ್ಕಳು (little kids) ತಮ್ಮ ಮುದ್ದು ಮುದ್ದಾದ ನಡೆ ನುಡಿಯಿಂದಲೇ ಮನಸ್ಸಿಗೆ ಹತ್ತಿರವಾಗುತ್ತಾರೆ. ಪುಟ್ಟ ಮಕ್ಕಳು ಕ್ಯೂಟ್ ಎಕ್ಸ್ಪ್ರೆಶನ್ ಕೊಡುವುದನ್ನು ನೋಡುತ್ತಿದ್ದರೆ ಅಪ್ಪಿ ಮುದ್ದಾಡಬೇಕೆನಿಸುತ್ತದೆ. ಪುಟ್ಟ ಕಂದಮ್ಮ ಮುದ್ದಾದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಪುಟ್ಟ ಹುಡುಗಿ ತನ್ನ ಎದುರು ಕುಳಿತಿದ್ದ ಪುಟ್ಟ ಹುಡುಗನಿಗೆ ಫ್ಲೈಯಿಂಗ್ ಕಿಸ್ ನೀಡಿದ್ದು, ಈ ಬಾಲಕ ನಾಚಿ ನೀರಾದ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

currenthub ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟಾಣಿಯೊಂದು ತನ್ನಎದುರು ಕುಳಿತಿದ್ದ ಪುಟ್ಟ ಹುಡುಗನಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾಳೆ. ಇದೇ ವೇಳೆ ನಾಚಿ ನೀರಾದ ಪುಟ್ಟ ಹುಡುಗನು ತನ್ನ ಎರಡು ಕೈಯಿಂದ ಮುಖ ಮುಚ್ಚಿಕೊಂಡಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಇದು ಬೇಸಿಗೆ ರಜೆಯ ಎಫೆಕ್ಟ್; ಆಟದ ನಡುವೆ ಜಗಳಕ್ಕಿಳಿದ ಮಕ್ಕಳು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಇವ್ನು ತುಂಬಾ ಮುದ್ದಾಗಿದ್ದಾನೆ ಎಂದಿದ್ದಾರೆ. ಇನ್ನೊಬ್ಬರು, ನಿನ್ನಷ್ಟು ಪುಣ್ಯವಂತ ಯಾರಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ದೃಶ್ಯ ನೋಡಿ 90 ರ ಮಕ್ಕಳು ನಿಜಕ್ಕೂ ಅಳ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಪಲ್ ಸಾಮ್ರಾಜ್ಯದಲ್ಲಿ ಹೊಸ ಯುಗ: ಟಿಮ್ ಕುಕ್ ನಿರ್ಗಮನ, ಜಾನ್ ಟೆರ್ನಸ್ ನೂತನ ಸಾರಥಿ – Kannada News | Apple leadership change, John Ternus replacing Tim Cook as new CEO

ಕ್ಯಾಲಿಫೋರ್ನಿಯಾ, ಏಪ್ರಿಲ್ 21: ವಿಶ್ವದ ತಂತ್ರಜ್ಞಾನ ದಿಗ್ಗಜ ಸಂಸ್ಥೆಯಾದ ಆಪಲ್ (Apple) ತನ್ನ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. ಸುದೀರ್ಘ ಕಾಲ ಸಂಸ್ಥೆಯನ್ನು ಮುನ್ನಡೆಸಿದ್ದ ಟಿಮ್ ಕುಕ್ (Tim Cook) ತಮ್ಮ ಸಿಇಒ ಸ್ಥಾನದಿಂದ ಕೆಳಗಿಳಿಯುತ್ತಿದ್ದು, ಅವರ ಜಾಗಕ್ಕೆ ಆಪಲ್‌ನ ಹಾರ್ಡ್‌ವೇರ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಜಾನ್ ಟೆರ್ನಸ್ (John Ternus) ನೇಮಕಗೊಂಡಿದ್ದಾರೆ. ಎಲ್ಲಾ ರಂಗಗಳಲ್ಲೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಪ್ರಭಾವ ದಟ್ಟವಾಗುತ್ತಿರುವ ಹೊತ್ತಲ್ಲೇ ಆ್ಯಪಲ್​ನಲ್ಲಿ ಈ ಬದಲಾವಣೆ ಆಗುತ್ತಿರುವುದು ಗಮನಾರ್ಹ. ಹೊಸ ಸಿಇಒಗೆ ಎಐ ಘಟ್ಟದ ಸವಾಲುಗಳು ಬಹಳ ಇರುವುದರಿಂದ ಅವರ ಮುಂದಿನ ಹೆಜ್ಜೆಗಳು ಕುತೂಹಲ ಮೂಡಿಸುತ್ತವೆ.

ಟಿಮ್ ಕುಕ್ ಅವರ ವಿದಾಯದ ಪತ್ರ (Community Letter)

ತಮ್ಮ ನಿರ್ಗಮನದ ಕುರಿತು ಆಪಲ್ ಸಮುದಾಯಕ್ಕೆ ಭಾವನಾತ್ಮಕ ಪತ್ರ ಬರೆದಿರುವ ಟಿಮ್ ಕುಕ್, “ಕಳೆದ ಒಂದೂವರೆ ದಶಕದಿಂದ ಈ ಅದ್ಭುತ ಸಂಸ್ಥೆಯನ್ನು ಮುನ್ನಡೆಸಿದ್ದು ನನ್ನ ಜೀವನದ ಅತಿದೊಡ್ಡ ಗೌರವ. ಸ್ಟೀವ್ ಜಾಬ್ಸ್ ಅವರ ಕನಸನ್ನು ಮುಂದುವರಿಸಲು ಪ್ರಯತ್ನಿಸಿದ್ದೇನೆ. ಈಗ ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಡುವ ಸಮಯ ಬಂದಿದೆ,” ಎಂದು ತಿಳಿಸಿದ್ದಾರೆ. ಆಪಲ್‌ನ ಮಾನವೀಯ ಮೌಲ್ಯಗಳು ಮತ್ತು ಪರಿಸರ ಕಾಳಜಿಯ ಬಗ್ಗೆ ಅವರು ಪತ್ರದಲ್ಲಿ ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ.

ಆಪಲ್ ರೂಪಿಸುವಲ್ಲಿ ಕುಕ್ ಪಾತ್ರ

2011ರಲ್ಲಿ ಸ್ಟೀವ್ ಜಾಬ್ಸ್ ಅವರಿಂದ ಅಧಿಕಾರ ವಹಿಸಿಕೊಂಡ ಟಿಮ್ ಕುಕ್, ಆಪಲ್ ಅನ್ನು ಕೇವಲ ಒಂದು ಕಂಪನಿಯನ್ನಾಗಿ ಉಳಿಸದೆ ಒಂದು ಜಾಗತಿಕ ಶಕ್ತಿಯನ್ನಾಗಿ (Global Powerhouse) ರೂಪಿಸಿದ್ದಾರೆ. ಟಿಮ್ ಕುಕ್ ಕಾಲಾವಧಿಯಲ್ಲಿ ಆಪಲ್‌ನ ಮಾರುಕಟ್ಟೆ ಮೌಲ್ಯವು 3 ಟ್ರಿಲಿಯನ್ ಡಾಲರ್ ದಾಟಿತು. ಆಪಲ್ ವಾಚ್ (Apple Watch), ಏರ್‌ಪಾಡ್ಸ್ (AirPods) ಮತ್ತು ಇತ್ತೀಚಿನ ವಿಷನ್ ಪ್ರೊ (Vision Pro) ಮೂಲಕ ಕಂಪನಿಯ ವ್ಯಾಪ್ತಿಯನ್ನು ವಿಸ್ತರಿಸಿದರು.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಚೀನಾಕ್ಕೆ ಟಕ್ಕರ್ ಕೊಡಲು ಭಾರತದ ಮಾಸ್ಟರ್ ಪ್ಲಾನ್: ಬರಲಿದೆ ಬೃಹತ್ ತೈಲ ಪೈಪ್‌ಲೈನ್

ಕೇವಲ ಐಫೋನ್ ಮಾರಾಟಕ್ಕೆ ಸೀಮಿತವಾಗದೆ ಆಪಲ್ ಮ್ಯೂಸಿಕ್, ಐಕ್ಲೌಡ್ ಮತ್ತು ಸರ್ವಿಸ್ ವಲಯದಿಂದ ಸಂಸ್ಥೆಗೆ ಭಾರಿ ಲಾಭ ತಂದುಕೊಡುವಲ್ಲಿ ಕುಕ್ ಚಾಣಾಕ್ಷ್ಯತನದ ಪಾತ್ರ ಇದೆ. 2030ರ ವೇಳೆಗೆ ಆಪಲ್ ಅನ್ನು ಸಂಪೂರ್ಣವಾಗಿ ಕಾರ್ಬನ್ ನ್ಯೂಟ್ರಲ್ (Carbon Neutral) ಮಾಡುವ ಗುರಿಯನ್ನು ಹಾಕಿಕೊಟ್ಟವರು ಕುಕ್.

ಯಾರು ಈ ಜಾನ್ ಟೆರ್ನಸ್?

ಜಾನ್ ಟೆರ್ನಸ್ (John Ternus) ಅವರು ಆಪಲ್ ಸಂಸ್ಥೆಯಲ್ಲಿ ದೀರ್ಘಕಾಲದ ಅನುಭವ ಹೊಂದಿರುವ ವ್ಯಕ್ತಿ. ಇವರು 2001ರಲ್ಲಿ ಆಪಲ್‌ನ ಉತ್ಪನ್ನ ವಿನ್ಯಾಸ (Product Design) ತಂಡಕ್ಕೆ ಸೇರಿದರು. ಅಂದಿನಿಂದ ಹಂತ ಹಂತವಾಗಿ ಬೆಳೆದು 2021ರಲ್ಲಿ ಹಾರ್ಡ್‌ವೇರ್ ಎಂಜಿನಿಯರಿಂಗ್‌ನ ಹಿರಿಯ ಉಪಾಧ್ಯಕ್ಷರಾದರು.

ಮೊದಲ ತಲೆಮಾರಿನ ಐಪ್ಯಾಡ್‌ನಿಂದ ಹಿಡಿದು ಇತ್ತೀಚಿನ ಐಫೋನ್, ಮ್ಯಾಕ್ ಮತ್ತು ಆಪಲ್‌ನ ಸ್ವಂತ ‘M-ಸರಣಿ’ ಚಿಪ್‌ಗಳ ತಯಾರಿಕೆಯಲ್ಲಿ ಜಾನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.

ಟೆರ್ನಸ್ ಅವರನ್ನು ಆಪಲ್ ಒಳಗೆ ಅತ್ಯಂತ ವಿಶ್ವಾಸಾರ್ಹ ಮತ್ತು ತಾಂತ್ರಿಕವಾಗಿ ಪ್ರಬುದ್ಧ ನಾಯಕ ಎಂದು ಗುರುತಿಸಲಾಗುತ್ತದೆ. ಸ್ವತಃ ಟಿಮ್ ಕುಕ್ ಕೂಡ ಜಾನ್ ಅವರ ನಾಯಕತ್ವದ ಗುಣಗಳನ್ನು ಹಲವು ಬಾರಿ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕೆಗಳಿಗೆ ಇರಾನ್​ನ ‘ಸೊಳ್ಳೆ ಪಡೆಗಳ’ ಕಾಟ

ಟಿಮ್ ಕುಕ್ ಸೇವೆ ಮುಂದುವರಿಯುತ್ತದೆ

ಟಿಮ್ ಕುಕ್ ಅವರು ತತ್​ಕ್ಷಣವೇ ಕಂಪನಿಯನ್ನು ತೊರೆಯುತ್ತಿಲ್ಲ. ಅವರು ಎಕ್ಸಿಕ್ಯೂಟಿವ್ ಚೇರ್ಮನ್ (Executive Chairman) ಆಗಿ ಮುಂದುವರಿಯಲಿದ್ದು, ಜಾನ್ ಟೆರ್ನಸ್ ಅವರಿಗೆ ಮಾರ್ಗದರ್ಶನ ನೀಡಲಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಜಾನ್ ಅವರ ಅನುಭವ ಮತ್ತು ಕುಕ್ ಅವರ ಆಡಳಿತಾತ್ಮಕ ದೂರದೃಷ್ಟಿ ಆಪಲ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ.

ಈ ಬದಲಾವಣೆಯು ಆಪಲ್ ಪ್ರಿಯರಲ್ಲಿ ಕುತೂಹಲ ಮೂಡಿಸಿದ್ದು, ಜಾನ್ ಅವರ ನೇತೃತ್ವದಲ್ಲಿ ಐಫೋನ್ ಮತ್ತು ಇತರ ಉತ್ಪನ್ನಗಳಲ್ಲಿ ಯಾವ ಹೊಸ ಕ್ರಾಂತಿ ನಡೆಯಲಿದೆ ಎಂದು ಜಗತ್ತು ಕಾಯುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಎನ್​ಟಿಆರ್-ನೀಲ್ ಸಿನಿಮಾ ರಿಲೀಸ್ ದಿನಾಂಕ ಘೋಷಣೆ; ಅಭಿಮಾನಿಗಳಿಗೆ ಬೇಸರ – Kannada News | NTR Prashanth Neel Film Release Date Revealed: Releasing on Jun 11 2027

ಜೂನಿಯರ್ ಎನ್​​ಟಿಆರ್ ಹಾಗೂ ಪ್ರಶಾಂತ್ ನೀಲ್ (Prashant Neel) ಸಿನಿಮಾ ಘೋಷಣೆ ಆಗಿದ್ದು ಕೆಲವು ವರ್ಷಗಳ ಹಿಂದೆ. ಆ ಬಳಿಕ, ಸಿನಿಮಾ ಸೆಟ್ಟೇರಲು ಬಹಳ ಸಯಮ ತೆಗೆದುಕೊಂಡಿತು. ಈ ಚಿತ್ರದ ಶೂಟಿಂಗ್ ಆರಂಭ ಆಗಿ ಸಾಕಷ್ಟು ಸಮಯ ಕಳೆದಿದೆ. ಆದರೆ, ಈವರೆಗೆ ಸಿನಿಮಾದ ರಿಲೀಸ್ ದಿನಾಂಕ ಹಾಗೂ ಟೈಟಲ್ ರಿವೀಲ್ ಆಗಿರಲಿಲ್ಲ. ಈಗ ಈ ಚಿತ್ರದ ಬಿಡುಗಡೆ ದಿನಾಂಕವನ್ನು ತಂಡ ಘೋಷಣೆ ಮಾಡಿದೆ. ಈ ಇತ್ರ ಜೂನ್ 11ರಂದು ತೆರೆಗೆ ಬರಲಿದೆ! ಈ ಸಿನಿಮಾಗೆ ಟೈಟಲ್ ಇನ್ನೂ ರಿವೀಲ್ ಆಗಿಲ್ಲ.

ಜೂನ್ 4ರಂದು ‘ಟಾಕ್ಸಿಕ್’ ರಿಲೀಸ್ ಆಗುತ್ತಿದೆ. ಜೂನ್ 11ರಂದು ‘ಎನ್​​ಟಿಆರ್​ನೀಲ್’ ಸಿನಿಮಾ ಬರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮದೇ? ಅದಕ್ಕೆ ಉತ್ತರ ಇದೆ. ಎನ್​​ಟಿಆರ್ ನೀಲ್ ಚಿತ್ರ ಈ ವರ್ಷ ಅಲ್ಲ, ಅದು ತೆರೆಗೆ ಬರುತ್ತಿರುವುದು 2027ರ ಜೂನ್ 11ರಂದು. ಅಂದರೆ ಒಂದು ವರ್ಷಗಳಿಗೂ ಅಧಿಕ ಕಾಲ ಈ ಸಿನಿಮಾಗಾಗಿ ಅಭಿಮಾನಿಗಳಿಗೆ ಕಾಯಬೇಕು. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.

ಪ್ರಶಾಂತ್ ನೀಲ್ ಅವರ ಸಿನಿಮಾ ಶೂಟ್ 2025ರಲ್ಲೇ ಆರಂಭ ಆಗಿದೆ. ವಿವಿಧ ಹಂತಗಳಲ್ಲಿ ಸಿನಿಮಾದ ಶೂಟ್ ಮಾಡಲಾಗಿದೆ. ವಿದೇಶಕ್ಕೂ ತೆರಳಿ ತಂಡ ಶೂಟಿಂಗ್ ಮಾಡಿದೆ. ಇನ್ನೂ ಸಾಕಷ್ಟು ಶೂಟಿಂಗ್ ಬಾಕಿ ಇರಬಹುದು ಎಂದು ಪ್ರೇಕ್ಷಕರು ಊಹಿಸಿದ್ದಾರೆ. ಈ ಕಾರಣದಿಂದಲೇ ಸಿನಿಮಾ ರಿಲೀಸ್ ಮುಂದಿನ ವರ್ಷಕ್ಕೆ ಹೋಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾ ನಿಂತು ಹೋಗಿದೆ ಎಂಬ ವದಂತಿ ಕೂಡ ಈ ಮೊದಲು ಹಬ್ಬಿತ್ತು.

ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ರಿಲೀಸ್ ಆಗಿದ್ದು 2023ರಲ್ಲಿ. ಇದಾದ ಬಳಿಕ ಅವರು ಈ ಚಿತ್ರದ ಕೆಲಸದಲ್ಲಿ ಬ್ಯುಸಿ ಆದರು. ಈಗ ಅವರು ಒಂದು ಚಿತ್ರಕ್ಕೆ ನಾಲ್ಕು ವರ್ಷ ತೆಗೆದುಕೊಂಡಂತೆ ಆಗಲಿದೆ. ಒಂದು ಸಿನಿಮಾಗೆ ಇಷ್ಟು ಸಮಯ ಮೀಸಲಿಟ್ಟರೆ ಹೇಗೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹಾರರ್ ಚಿತ್ರಕ್ಕಾಗಿ ‘ಮೈತ್ರಿ ಮೂವೀ ಮೇಕರ್ಸ್’ ಜೊತೆ ಕೈ ಜೋಡಿಸಿದ ಪ್ರಶಾಂತ್ ನೀಲ್

ಪ್ರಶಾಂತ್ ನೀಲ್-ಎನ್​​​ಟಿಆರ್ ಸಿನಿಮಾಗೆ ‘ಮೈತ್ರಿ ಮೂವೀ ಮೇಕರ್ಸ್’ ಬಂಡವಾಳ ಹೂಡುತ್ತಿದೆ. ಈಗಾಗಲೇ ಅದ್ದೂರಿ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡಿ ಅವರು ಗಮನ ಸೆಳೆದಿದ್ದಾರೆ. ಈ ಚಿತ್ರ ಕೂಡ ಅದ್ದೂರಿಯಾಗಿರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link