ಪಾಕಿಸ್ತಾನದ ಬಟ್ಟೆ ಬ್ರ್ಯಾಂಡ್ ಜಾಹೀರಾತಿನಲ್ಲಿ ಆಲಿಯಾ ಭಟ್! – Kannada News | Pakistan fashion brand used Alia Bhatt’s images to promote their brand

ಆಲಿಯಾ ಭಟ್ (Alia Bhatt) ಭಾರತದ ಸ್ಟಾರ್ ನಟಿ, ಹಲವಾರು ಬ್ರ್ಯಾಂಡುಗಳಿಗೆ ಅವರು ರಾಯಭಾರಿ ಸಹ ಆಗಿದ್ದಾರೆ. ಹಲವು ಫ್ಯಾಷನ್ ಶೋಗಳಲ್ಲಿ ರ್ಯಾಂಪ್ ವಾಕ್ ಸಹ ಮಾಡಿದ್ದಾರೆ. ಖುದ್ದು ಆಲಿಯಾ ಅವರು ಫ್ಯಾಷನ್ ಬ್ರ್ಯಾಂಡ್ ಒಂದರ ಮಾಲಕಿಯೂ ಹೌದು. ಆದರೆ ಇದೀಗ ಆಲಿಯಾ ಭಟ್ ಅವರು ಪಾಕಿಸ್ತಾನದ ಬಟ್ಟೆ ಬ್ರ್ಯಾಂಡಿನ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ! ವಜಾಯೆಶಾ ಹೆಸರಿನ ಬ್ರ್ಯಾಂಡಿನ ಬಟ್ಟೆಗಳನ್ನು ಧರಿಸಿ ಆಲಿಯಾ ಭಟ್ ಫೋಸು ನೀಡಿದ್ದಾರೆ. ಪಾಕಿಸ್ತಾನದಲ್ಲಿ ಈ ಫೋಟೊಗಳು ವೈರಲ್ ಆಗಿವೆ. ಆದರೆ ನಿಜಾಂಶ ಬೇರೆಯೇ ಇದೆ.

ಅಸಲಿಗೆ ನಟಿ ಆಲಿಯಾ ಭಟ್ ಪಾಕ್​ ಬ್ರ್ಯಾಂಡಿಗಾಗಿ ಯಾವುದೇ ಫೋಟೊಶೂಟ್ ಮಾಡಿಸಿಲ್ಲ, ಪಾಕ್ ಬ್ರ್ಯಾಂಡಿನ ಬಟ್ಟೆಗಳನ್ನು ಸಹ ಧರಿಸಿಲ್ಲ. ಆದರೆ ವಜಾಯೆಶಾ ಬ್ರ್ಯಾಂಡಿನವರು ಎಐ ಬಳಸಿ ಆಲಿಯಾ ಅವರ ಚಿತ್ರಗಳನ್ನು ತಿರುಚಿ ತಮ್ಮ ಬಟ್ಟೆಯ ಜಾಹೀರಾತಿಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಗಳು ವೈರಲ್ ಆಗುತ್ತಿದ್ದಂತೆ ಆಲಿಯಾ ಭಟ್ ಅಭಿಮಾನಿಗಳು, ನೆಟ್ಟಿಗರು, ವಜಾಯಿಷಾ ಇನ್​​ಸ್ಟಾಗ್ರಾಂ ಪೇಜಿನಲ್ಲಿ ಛೀಮಾರಿ ಹಾಕಿದ್ದು, ಆಲಿಯಾ ಭಟ್, ಕೇಸು ಹಾಕುವುದು ಖಾತ್ರಿ ಎಂದಿದ್ದಾರೆ.

Alia Bhatt1

ಆಲಿಯಾ ಭಟ್ ಅವರು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಚಿತ್ರಗಳನ್ನು ಬಳಸಿಕೊಂಡು ಆಲಿಯಾ, ತಮ್ಮ ಬ್ರ್ಯಾಂಡಿನ ಸೆಲ್ವಾರ್ ಕಮೀಜ್ ಇನ್ನಿತರೆ ಉಡುಗೆಗಳನ್ನು ತೊಟ್ಟು ಫೋಸು ಕೊಡುತ್ತಿರುವಂತೆ ಚಿತ್ರಗಳನ್ನು ಬದಲಾಯಿಸಿ ಬಳಸಲಾಗಿದೆ. ಆಲಿಯಾ ಭಟ್ ಅವರು ಫ್ಯಾಷನ್ ಶೋಗಳಲ್ಲಿ ಮಾಡರ್ನ್ ಡ್ರೆಸ್ ಧರಿಸಿ ತೆಗೆಸಿಕೊಂಡ ಚಿತ್ರಗಳನ್ನು ಸಹ ತಿರುಚಿ ತಮ್ಮ ಉಡುಗೆಗಳನ್ನು ಹಾಕಿಕೊಂಡಿರುವಂತೆ ಬದಲಾಯಿಸಲಾಗಿದೆ.

Alia Bhatt2

ಆಲಿಯಾ ಭಟ್ ಅವರು ನ್ಯಾಯಾಲಯದಿಂದ ಪರ್ಸನಾಲಿಟಿ ರೈಟ್ಸ್ (ವ್ಯಕ್ತಿತ್ವ ರಕ್ಷಣೆ ಹಕ್ಕು) ಅನ್ನು ಪಡೆದುಕೊಂಡಿದ್ದಾರೆ. ಅವರ ಅನುಮತಿ ಇಲ್ಲದೆ ಯಾರೂ ಸಹ ಯಾವುದೇ ಕಾರಣಕ್ಕೂ ಸಹ ಅವರ ಚಿತ್ರವನ್ನು, ವಿಡಿಯೋವನ್ನು, ಧ್ವನಿಯನ್ನು, ಅವರ ಹಾವ-ಭಾವದ ನಕಲನ್ನು ಸಹ ಬಳಸುವಂತಿಲ್ಲ. ಆದರೆ ಪಾಕ್​​ನ ಸಂಸ್ಥೆಯೊಂದು ನೇರವಾಗಿ ಚಿತ್ರವನ್ನೇ ಬಳಸಿದೆ, ಮಾತ್ರವಲ್ಲದೆ ಆಲಿಯಾರ ಚಿತ್ರವನ್ನು ತಿರುಚಿದೆ ಸಹ. ಆಲಿಯಾ ಭಟ್ ಇದರ ವಿರುದ್ಧ ಹೇಗೆ ಕ್ರಮ ಕೈಗೊಳ್ಳುತ್ತಾರೆ ನೋಡಬೇಕಿದೆ. ಪಾಕಿಸ್ತಾನದ ಸಂಸ್ಥೆಯ ವಿರುದ್ಧ ಕೇಸು ಹಾಕುವುದು ಉಪಯೋಗ ಆಗಲಾರದಾದರೂ, ಇನ್​​ಸ್ಟಾಗ್ರಾಂಗೆ ರಿಪೋರ್ಟ್ ಮಾಡಿ ಆ ಸಂಸ್ಥೆಯ ಇನ್​​ಸ್ಟಾ ಪೇಜನ್ನು ರದ್ದು ಮಾಡಿಸಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 1:16 pm, Tue, 21 April 26

Source link

Leave a Reply

Your email address will not be published. Required fields are marked *