Category Archives: Blog

Your blog category

‘ಧುರಂಧರ್ 2’ ವಿರುದ್ಧ ಮತ್ತೊಂದು ಅರ್ಜಿ, ಪ್ರದರ್ಶನ ನಿಲ್ಲಿಸುವಂತೆ ಆಗ್ರಹ – Kannada News | Fresh PIL to stop Dhurandhar 2 screening in Uttar Pradesh

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹಲವು ದಾಖಲೆಗಳನ್ನು ಬರೆಯುತ್ತಿದೆ. ಸಿನಿಮಾ ಬಿಡುಗಡೆ ಆಗಿ ತಿಂಗಳ ಮೇಲಾದರೂ ಸಾವಿರಾರು ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ. ಸಿನಿಮಾವನ್ನು ಬಗ್ಗೆ ಸ್ವತಃ ಪ್ರಧಾನಿ ಮೋದಿ ಅವರೇ ಹೊಗಳಿದ್ದಾರೆ. ಇದೆಲ್ಲದರ ಜೊತೆಗೆ ಕೆಲವರು ಸಿನಿಮಾವನ್ನು ಟೀಕೆ ಸಹ ಮಾಡುತ್ತಿದ್ದು, ಇದೊಂದು ಪ್ರಾಪಗಾಂಡ ಸಿನಿಮಾ ಎನ್ನುತ್ತಿದ್ದಾರೆ. ಜೊತೆಗೆ ಸಿನಿಮಾ ಪ್ರದರ್ಶನ ನಿಲ್ಲಿಸುವ ಪ್ರಯತ್ನಗಳು ಸಹ ಅಲ್ಲಲ್ಲಿ ನಡೆಯುತ್ತಿವೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಆಗ್ರಹಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಉತ್ತರ ಪ್ರದೇಶದಲ್ಲಿ ಸಿನಿಮಾದ ವಿರುದ್ಧ ಹೈಕೋರ್ಟ್ ಮೊರೆ ಹೋಗಲಾಗಿದೆ.

‘ಧುರಂಧರ್ 2’ ಸಿನಿಮಾ ಕಾಲ್ಪನಿಕ ಕತೆಯಾದರೂ ಹಲವು ನಿಜ ವ್ಯಕ್ತಿಗಳ ಪಾತ್ರಗಳು ಸಿನಿಮಾನಲ್ಲಿವೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಪಾಕಿಸ್ತಾನದ ಹಲವು ಉಗ್ರ ಸಂಘಟನೆ ಮುಖಂಡರು, ಪಾಕ್​​ನ ರಾಜಕಾರಣಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಉತ್ತರ ಪ್ರದೇಶದ ಮಾಜಿ ಸಂಸದ ಅತೀಕ್ ಅಹ್ಮದ್ ಇನ್ನೂ ಕೆಲವರ ಪಾತ್ರಗಳು ಸಿನಿಮಾನಲ್ಲಿವೆ. ಇದೀಗ ಅತೀಕ್ ಅಸ್ಲಂ ಪಾತ್ರದ ಕುರಿತಾಗಿ ಕೆಲವರು ಆಕ್ಷೇಪ ಎತ್ತಿ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ.

‘ಧುರಂಧರ್ 2’ ಸಿನಿಮಾನಲ್ಲಿ ಮಾಜಿ ಸಂಸದ ಮತ್ತು ರೌಡಿಯಾಗಿಯೂ ಕುಖ್ಯಾತಿ ಪಡೆದಿದ್ದ ಅತೀಕ್ ಅಹ್ಮದ್ ಅನ್ನು ಪಾಕಿಸ್ತಾನದ ಜೊತೆಗೆ ಸಂಬಂಧ ಹೊಂದಿದ್ದ ವ್ಯಕ್ತಿಯಾಗಿ ತೋರಿಸಲಾಗಿದೆ. ಸಿನಿಮಾನಲ್ಲಿ ಆತನ ಕೊಲೆಯನ್ನು ರಾಷ್ಟ್ರೀಯ ಗುಪ್ತಚರ ಇಲಾಖೆ ಮಾಡಿಸಿದೆ ಎಂದು ತೋರಿಸಲಾಗಿದೆ. ಇದರ ವಿರುದ್ಧ ಅಲಹಾಬಾದ್ ಹೈಕೋರ್ಟ್​​ನಲ್ಲಿ ಕೇಸು ದಾಖಲಿಸಲಾಗಿದೆ.

ಇದನ್ನೂ ಓದಿ: ‘ಧುರಂಧರ್ 3’ ಸಿನಿಮಾ ಬರಲಿದೆಯೇ? ಕುತೂಹಲದ ಪ್ರಶ್ನೆಗೆ ಉತ್ತರ ನೀಡಿದ ನಟ ರಾಕೇಶ್ ಬೇಡಿ

ಎನ್​​ಜಿಓ ಒಂದು ಅಲಹಾಬಾದ್ ಹೈಕೋರ್ಟ್​​ನಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದು, ಸಿನಿಮಾ ಸುಳ್ಳು ಮಾಹಿತಿಗಳನ್ನು ಒಳಗೊಂಡಿದ್ದು, ಸತ್ಯಕ್ಕೆ ದೂರವಾದ ಅಂಶ ಸಿನಿಮಾನಲ್ಲಿದೆ. ಅಲ್ಲದೆ ಅತೀಕ್ ಅಹ್ಮದ್ ಕೊಲೆಯ ಪ್ರಕರಣ ಇನ್ನೂ ಚಾಲ್ತಿಯಲ್ಲಿದೆ. ಹಾಗಾಗಿ ‘ಧುರಂಧರ್ 2’ ಸಿನಿಮಾದ ಪ್ರದರ್ಶನವನ್ನು ಉತ್ತರ ಪ್ರದೇಶದಲ್ಲಿ ಶೀಘ್ರವೇ ನಿಲ್ಲಿಸುವಂತೆ ಆದೇಶ ನೀಡುವಂತೆ ಕೋರ್ಟ್​​ಗೆ ಮನವಿ ಮಾಡಲಾಗಿದೆ.

‘ಧುರಂಧರ್ 2’ ಸಿನಿಮಾನಲ್ಲಿ ಪಾಕ್​​ನ ಉಗ್ರ ಸಂಘಟನೆ ಮುಖಂಡನೊಬ್ಬ ಅತೀಖ್ ಅಹ್ಮದ್ ಜೊತೆಗೆ ಫೋನಿನಲ್ಲಿ ಮಾತನಾಡುತ್ತಿರುವ ದೃಶ್ಯವಿದೆ. ಅತೀಖ್ ಸಾವಿನ ದೃಶ್ಯವೂ ಇದೆ. ಸಿನಿಮಾನಲ್ಲಿ ಅತೀಖ್ ಪಾತ್ರಕ್ಕೆ ಅತೀಫ್ ಎಂದು ಹೆಸರು ನೀಡಲಾಗಿದೆ. ಅತೀಖ್ ಅವರನ್ನು ಪಾಕಿಸ್ತಾನದ ಜೊತೆಗೆ ಲಿಂಕ್ ಇದ್ದ ವ್ಯಕ್ತಿ ಎಂದು ತೋರಿಸಿರುವುದಕ್ಕೆ ಈಗಾಗಲೇ ಉತ್ತರ ಪ್ರದೇಶದ ಎಸ್​​ಪಿ ಪಕ್ಷದ ಕೆಲ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಪಿಐಎಲ್ ಸಹ ದಾಖಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ: 8 ಖಾಸಗಿ ಸ್ಲೀಪರ್ ಕೋಚ್ ಬಸ್​ಗಳ ಪಾರ್ಟಿಶನ್ ಡೋರ್​​ ತೆರವು – Kannada News | Devanahalli RTO Drive: Partition Doors Removed from 8 Sleeper Coach Buses

ದೇವನಹಳ್ಳಿ, ಏಪ್ರಿಲ್​​ 21: ಪದೇಪದೆ ಸ್ಲೀಪರ್​ ಕೋಚ್​ ಬಸ್​ಗಳ ಅಪಘಾತ ಹಿನ್ನೆಲೆ ಬೆಳ್ಳಂಬೆಳಗ್ಗೆ ದೇವನಹಳ್ಳಿ ಆರ್​ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಖಾಸಗಿ ಸ್ಲೀಪರ್ ಕೋಚ್ ಬಸ್​ಗಳ ಪಾರ್ಟಿಶನ್ ಡೋರ್​​ ತೆರವು ಮಾಡಿದ್ದಾರೆ. ದೇವನಹಳ್ಳಿ ಪಟ್ಟಣದ ರಾಣಿ ಕ್ರಾಸ್​ ಬಳಿ ಬಸ್​ಗಳನ್ನು ನಿಲ್ಲಿಸಿ ತೆರವು ಕಾರ್ಯ ನಡೆಸಲಾಗಿದೆ. ಹೈದರಾಬಾದ್​​ನಿಂದ ಬೆಂಗಳೂರಿಗೆ ಬರುತ್ತಿದ್ದ ಸ್ಲೀಪರ್ ಕೋಚ್ ಬಸ್​​ಗಳನ್ನು ನಡೆದಿರುವ ಅಧಿಕಾರಿಗಳು, ಬಸ್ ಡ್ರೈವರ್ ಮತ್ತು ಪ್ಯಾಸೆಂಜರ್​​ಗಳ ನಡುವಿನ ಡೋರ್ ತೆರವು ಮಾಡಿದ್ದಾರೆ.8 ಬಸ್​ಗಳ ಡೋರ್​ ಬಿಚ್ಚಿಸಿ ಸೀಜ್​​ ಮಾಡಲಾಗಿದೆ. ದೇವನಹಳ್ಳಿ ಆರ್​ಟಿಒ ಸುಧೀರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

 ನೋಡ್ತಾಯಿರಿ, ಇದು ಟರ್ನಿಂಗ್ ಪಾಯಿಂಟ್… ಹಾರ್ದಿಕ್ ಪಾಂಡ್ಯ ಉವಾಚ! – Kannada News | Hardik Pandya Post Match interview after GT vs MI

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 30ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲುವು ದಾಖಲಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 199 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 15.5 ಓವರ್​ಗಳಲ್ಲಿ 100 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು 99 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಈ ಗೆಲುವು ಕೇವಲ ಎರಡು ಅಂಕಗಳಲ್ಲ, ಬದಲಿಗೆ ಇಡೀ ತಂಡದ ಆತ್ಮವಿಶ್ವಾಸವನ್ನು ಬದಲಿಸುವ ‘ಟರ್ನಿಂಗ್ ಪಾಯಿಂಟ್’. ನೋಡ್ತಾಯಿರಿ ಈ ಒಂದು ಗೆಲುವು ತಂಡದ ಆತ್ಮವಿಶ್ವಾಸವನ್ನು ಬದಲಿಸಲಿದೆ ಎಂದಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಗೆಲುವಿನಲ್ಲಿ ಯುವ ಆಟಗಾರರ ಕೊಡುಗೆ ತುಂಬಾ ಮಹತ್ವದ್ದು, ವಿಶೇಷವಾಗಿ ತಿಲಕ್ ವರ್ಮಾ ಅವರ ಬ್ಯಾಟಿಂಗ್. ತಿಲಕ್ ಅದ್ಭುತ ಪ್ರತಿಭಾವಂತ. 14ನೇ ಓವರ್ ನಂತರ ನಾನು ಅವರಿಗೆ ನೀಡಿದ ಏಕೈಕ ಸಂದೇಶವೆಂದರೆ – ಚೆಂಡನ್ನು ನೋಡು, ಹೊಡಿ ಅಷ್ಟೇ. ಅದನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಹಾಗೆಯೇ  ಚೊಚ್ಚಲ ಪಂದ್ಯವಾಡಿದ ಕ್ರಿಶ್ ಮತ್ತು 4 ವಿಕೆಟ್ ಪಡೆದ ಅಶ್ವನಿ ಅವರ ಶಿಸ್ತಿನ ಬೌಲಿಂಗ್ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟಿತು. ಹೀಗಾಗಿ ಈ ಗೆಲುವಿನ ಶ್ರೇಯಸ್ಸು ನಮ್ಮ ಯುವ ಆಟಗಾರರಿಗೆ ಸಲ್ಲಬೇಕು ಎಂದು ಹಾರ್ದಿಕ್ ಪಾಂಡ್ಯ ಅಭಿಪ್ರಾಯಪಟ್ಟರು.

ಇದೇ ವೇಳೆ ಜಸ್​ಪ್ರೀತ್ ಬುಮ್ರಾ ಅವರಿಗೆ ಮೊದಲ ಓವರ್ ನೀಡಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಾರ್ದಿಕ್, ಬುಮ್ರಾ ವಿಶೇಷ ಬೌಲರ್. ಅವರನ್ನು  ತಂಡಕ್ಕೆ ಯಾವಾಗ ಅಗತ್ಯವಿದೆಯೋ ಅಲ್ಲಿ ಬಳಸಿಕೊಳ್ಳುತ್ತೇವೆ. ಇಂದು ನಮಗೆ ಹೊಸ ಚೆಂಡಿನಲ್ಲಿ ಆರಂಭಿಕ ವಿಕೆಟ್ ಬೇಕಿತ್ತು, ಅದಕ್ಕಾಗಿ ಬುಮ್ರಾ ಅವರನ್ನೇ ಆರಿಸಿದೆವು. ಇದು ನನ್ನ ಒಬ್ಬನ ನಿರ್ಧಾರವಲ್ಲ. ಬದಲಾಗಿ ತಂಡದ ಅಗತ್ಯಕ್ಕೆ ತಕ್ಕಂತೆ ಮಾಡಿದ ಬದಲಾವಣೆ ಎಂದು ಸ್ಪಷ್ಟಪಡಿಸಿದರು.

ಇನ್ನು ಈ ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ದಣಿದಂತೆ ಕಂಡು ಬಂದಿದ್ದರು. ಇದಕ್ಕೆ ಮುಖ್ಯ ಕಾರಣ ಅವರು ಪಂದ್ಯದುದ್ದಕ್ಕೂ ತೋರಿದ ರಣ ಉತ್ಸಾಹ.  ಈ ಬಗ್ಗೆ ಮಾತನಾಡಿದ ಪಾಂಡ್ಯ, ನಾನು ಎಷ್ಟು ಜೋರಾಗಿ ಕಿರುಚುತ್ತಿದ್ದೆ ಎಂದರೆ ನನಗೆ ತಲೆ ಸುತ್ತು ಬಂದಂತಾಗಿತ್ತು. ಆದರೆ ತಂಡದಲ್ಲಿ ಅಂತಹ ಎನರ್ಜಿ ತುಂಬುವುದು ಅನಿವಾರ್ಯವಾಗಿತ್ತು ಎಂದರು.

ಮುಂಬೈ ಇಂಡಿಯನ್ಸ್‌ಗೆ ಅಹಮದಾಬಾದ್ ಮೈದಾನದಲ್ಲಿ ಗೆಲುವು ದಾಖಲಿಸುವುದು ಯಾವಾಗಲೂ ಸವಾಲಿನ ಕೆಲಸ. ಅಂತಹ ಕಡೆ ಅಮೋಘ ಕ್ರಿಕೆಟ್ ಆಡಿ ಗೆದ್ದಿರುವುದು ತಂಡದ ಸೀಸನ್ ಅನ್ನು ಬದಲಿಸಲಿದೆ ಎಂಬ ದೃಢ ವಿಶ್ವಾಸವನ್ನು ಇದೇ ವೇಳೆ ಹಾರ್ದಿಕ್ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ್ ಸೂಪರ್ ಲೀಗ್​ನಿಂದ ಮೂವರು ಐಪಿಎಲ್ ಆಟಗಾರರು ಬ್ಯಾನ್..!

ಒಟ್ಟಾರೆಯಾಗಿ, ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಮತ್ತೆ ಗೆಲುವಿನ ಹಳಿಗೆ ಮರಳಿದ್ದು, ಇದೇ ರೀತಿಯ ಉತ್ಸಾಹದಲ್ಲಿ ಮುಂಬೈ ಇಂಡಿಯನ್ಸ್ ಮುಂಬರುವ ಪಂದ್ಯಗಳಲ್ಲೂ ಪ್ರದರ್ಶನ ನೀಡಲಿದೆಯಾ ಕಾದು ನೋಡಬೇಕಿದೆ.

Published On – 12:25 pm, Tue, 21 April 26

Source link

ಇದು ಹಿಂದೂ ರಾಷ್ಟ್ರ, ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್ – Kannada News | Muslim BJP Leader Storms Lenskart Store, Applies Tilak To Staff

ಮುಂಬೈ, ಏಪ್ರಿಲ್ 21: ಖ್ಯಾತ ಕನ್ನಡಕ ಬ್ರ್ಯಾಂಡ್ ‘ಲೆನ್ಸ್‌ಕಾರ್ಟ್’ (Lenskart) ಈಗ ವಿವಾದದ ಸುಳಿಯಲ್ಲಿದೆ. ಕೆಲಸದ ಸ್ಥಳದಲ್ಲಿ ಉದ್ಯೋಗಿಗಳು ಬೊಟ್ಟು, ತಿಲಕವಿಡುವುದಕ್ಕೆ ನಿಷೇಧ ಹೇರಿದೆ, ಆದ್ರೆ ಹಿಜಾಬ್ ಧರಿಸುವುದಕ್ಕೆ ಅನುಮತಿ ನೀಡಿದ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಮುಂಬೈನ ಮಳಿಗೆಯೊಂದಕ್ಕೆ ಪ್ರತಿಭಟನಾಕಾರರ ಗುಂಪು ನುಗ್ಗಿ ಪ್ರತಿಭಟನೆ ನಡೆಸಿದೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನಾಯಕಿ ನಾಜಿಯಾ ಇಲಾಹಿ ಖಾನ್ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಗುಂಪು ಮಳಿಗೆಯ ಒಳಗೆ ಪ್ರವೇಶಿಸುತ್ತಿದ್ದಂತೆಯೇ ವಾತಾವರಣ ಉದ್ವಿಗ್ನಗೊಂಡಿತು. ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುತ್ತಾ ಒಳಬಂದ ಗುಂಪು, ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿತು.

ನಾಜಿಯಾ ಇಲಾಹಿ ಖಾನ್ ಅವರು ಮಳಿಗೆಯ ಫ್ಲೋರ್ ಮ್ಯಾನೇಜರ್ ಮೊಹ್ಸಿನ್ ಖಾನ್ ಅವರನ್ನು ನೇರವಾಗಿ ಪ್ರಶ್ನಿಸಿದರು. ಉದ್ಯೋಗಿಗಳು ತಿಲಕ ಇಡುವುದನ್ನು ನೀವು ನಿಷೇಧಿಸಿದ್ದೀರಾ, ನೀವು ಮೊಹ್ಸಿನ್ ಖಾನ್ ಆಗಿರುವುದರಿಂದ ಹೀಗೆ ಮಾಡುತ್ತಿದ್ದೀರಾ, ಎಂದು ತೀಕ್ಷ್ಣವಾಗಿ ಕೇಳಿದರು. ಘಟನೆಯ ಸಮಯದಲ್ಲಿ ನಾಜಿಯಾ ಖಾನ್ ಅವರು ಅಲ್ಲಿನ ಹಿಂದೂ ಉದ್ಯೋಗಿಗಳನ್ನು ಮುಂದೆ ಕರೆದು, ಅವರ ಹಣೆಗೆ ತಿಲಕ ಹಚ್ಚಿದರು.ಈ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ತೀವ್ರ ಮುಜುಗರಕ್ಕೆ ಒಳಗಾದಂತೆ ಕಂಡರೂ, ಪ್ರತಿಭಟನಾಕಾರರ ಆಕ್ರೋಶಕ್ಕೆ ಹೆದರಿ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ.

ಮಳಿಗೆಯ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಾಜಿಯಾ ಖಾನ್, ಇದು ಹಿಂದೂ ರಾಷ್ಟ್ರ. ಇಲ್ಲಿ ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದನ್ನು ಸಹಿಸುವುದಿಲ್ಲ. ಲೆನ್ಸ್‌ಕಾರ್ಟ್ ಮಾಲೀಕರು ಬಹಿರಂಗವಾಗಿ ಕ್ಷಮೆಯಾಚಿಸಬೇಕು, ಇಲ್ಲವಾದರೆ ದೇಶಾದ್ಯಂತ ಇರುವ ಅವರ ಮಳಿಗೆಗಳನ್ನು ಮುಚ್ಚಿಸಲಾಗುವುದು ಅಥವಾ ಜನರು ಈ ಬ್ರ್ಯಾಂಡ್ ಅನ್ನು ಬಹಿಷ್ಕರಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮರ್ಯಾದಾ ಹತ್ಯೆ ಭೀತಿ; ತಂದೆಯಿಂದ ರಕ್ಷಣೆ ಕೋರಿ ಮಗಳಿಂದಲೇ ಹೈಕೋರ್ಟ್​ಗೆ ಅರ್ಜಿ! – Kannada News | Bengaluru Woman Seeks High Court Protection from Father Over Forced Marriage and Honor Killing Fear

ಬೆಂಗಳೂರು, ಏಪ್ರಿಲ್ 21: ತನ್ನ ಒಪ್ಪಿಗೆಯಿಲ್ಲದೆ ನಿಶ್ಚಯ ಮಾಡಿರುವ ಮದುವೆಯನ್ನು ಬೇಡ ಎಂದಿದ್ದಕ್ಕೆ ಮರ್ಯಾದಾ ಹತ್ಯೆ ಭೀತಿಯಿಂದ ಬೆಂಗಳೂರಿನ ಯುವತಿ ತಂದೆಯಿಂದ ರಕ್ಷಣೆ ಕೋರಿ ಹೈಕೋರ್ಟ್​ (High Court) ಮೆಟ್ಟಿಲೇರಿದ್ದಾಳೆ. ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಕಾಜಲ್ ರಾಜಪುರೋಹಿತ್ ಎಂಬ ಯುವತಿ, ತನ್ನ ತಂದೆ ಅಶೋಕ್ ರಾಜಪುರೋಹಿತ್ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದಾಳೆ.

ಮದುವೆ ಬೇಡ ಎಂದರೂ ತಂದೆಯ ಬಲವಂತ, ಮದುವೆಗೆ ತಯಾರಿ!

ಕಳೆದ ಎರಡು ವರ್ಷಗಳಿಂದ ಉದ್ಯೋಗದಲ್ಲಿರುವ ಯುವತಿಗೆ ಮದುವೆಯ ಮೇಲೆ ಆಸಕ್ತಿಯಿರಲಿಲ್ಲ. ತನ್ನ ಅಕ್ಕನಿಗೂ ಹೀಗೆ ಬಲವಂತದಿಂದ ಮದುವೆ ಮಾಡಿದ್ದನ್ನು ಕಂಡಿದ್ದ ಆಕೆಗೆ ತನ್ನ ಪರಿಸ್ಥಿತಿಯೂ ಹಾಗೆ ಆಗಿಬಿಡಬಹುದೆಂಬ ಆತಂಕವಿತ್ತು. ತಾನು ದುಡಿದು ತನ್ನ ಕಾಲ ಮೇಲೆ ನಿಂತ ಆಕೆಗೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲವೂ ಇತ್ತು. ಹೀಗಿರುವಾಗ ತನ್ನ ಒಪ್ಪಿಗೆಯಿಲ್ಲದೆ ತಂದೆ ಅಶೋಕ್ ರಾಜಸ್ಥಾನ ಮೂಲದ ಡಾ. ಯಶ್‌ಪಾಲ್ ಜೊತೆ ವಿವಾಹ ನಿಶ್ಚಯ ಮಾಡಿದ್ದರೆಂದು ಆರೋಪಿಸಿರುವ ಕಾಜಲ್, ತಂದೆಯ ನಿರ್ಧಾರವನ್ನು ವಿರೋಧಿಸಿದ್ದಾಳೆ. ವಿರೋಧದ ನಡುವೆಯೂ ವಿವಾಹಕ್ಕೆ ಸಿದ್ಧತೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿ ಹೈಕೋರ್ಟ್ ಮೊರೆ ಹೋಗಿದ್ದಾಳೆ.

ಇದನ್ನೂ ಓದಿ ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಸಿಗದು ‘ಡಿಫಾಲ್ಟ್ ಜಾಮೀನು’: ಕರ್ನಾಟಕ ಹೈಕೋರ್ಟ್​

ಯುವತಿಗೆ ಭದ್ರತೆ ಮೀಡುವಂತೆ ಆದೇಶಿಸಿದ ಕೋರ್ಟ್​

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ವೈಟ್‌ಫೀಲ್ಡ್ ಪೊಲೀಸರಿಗೆ ಕಾಜಲ್‌ಗೆ ಸೂಕ್ತ ಭದ್ರತೆ ಒದಗಿಸುವಂತೆ ನಿರ್ದೇಶನ ನೀಡಿದೆ. ಜೊತೆಗೆ ಆಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿದೆ. ತಂದೆಯಿಂದ ಜೀವಭಯವಿದೆ ಎಂದು ಆರೋಪಿಸಿರುವ ಈ ಪ್ರಕರಣ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹ್ಯಾಕರ್ ಶ್ರೀಕಿಯ ಐಷಾರಾಮಿ ಜೀವನ ನಲಪಾಡ್​ಗೆ ಕುತ್ತು ತಂದಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ – Kannada News | ED Continues Raid on Bitcoin Scam Kingpin Srikis Residence; Nalapads Financial Links Under Scrutiny

ಹ್ಯಾಕರ್ ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು ಬಂದಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿImage Credit source: tv9

ಬೆಂಗಳೂರು, ಏಪ್ರಿಲ್ 21: ಬಿಟ್ ಕಾಯಿನ್ ಹಗರಣಕ್ಕೆ (Bitcoin Scam) ಸಂಬಂಧಿಸಿದಂತೆ ಕಿಂಗ್ ಪಿನ್ ಶ್ರೀಕಿ ನಿವಾಸದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಏಪ್ರಿಲ್ 21 ರಂದೂ ಮುಂದುವರಿದಿದೆ. ಬೆಂಗಳೂರಿನ ಜಯನಗರದಲ್ಲಿರುವ ಶ್ರೀಕಿ ಮನೆಯಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಶೋಧ ಕಾರ್ಯ ನಡೆಯುತ್ತಿದೆ. ಕಾಂಗ್ರೆಸ್ (Congress) ಶಾಸಕ ಎನ್.ಎ. ಹ್ಯಾರಿಸ್ (NA Haris) ಮಗ ನಲಪಾಡ್ ಮತ್ತು ಶ್ರೀಕಿ ನಡುವೆ 4.65 ಕೋಟಿ ರೂಪಾಯಿಗಳ ಹಣಕಾಸು ವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದ್ದು, ಇದರ ಬಗ್ಗೆ ಇಡಿ ತೀವ್ರ ತನಿಖೆ ನಡೆಸುತ್ತಿದೆ.

ಈ ಹಗರಣ ಈಗ ಹ್ಯಾರಿಸ್ ಕುಟುಂಬಕ್ಕೂ ಸಂಕಷ್ಟ ತಂದೊಡ್ಡಿದೆ. ಇಡಿ ಅಧಿಕಾರಿಗಳು ಶ್ರೀಕಿಯನ್ನು ವಿಚಾರಣೆ ನಡೆಸುತ್ತಿದ್ದು, ಬ್ಯಾಂಕ್ ಖಾತೆಗಳ ಪರಿಶೀಲನೆಗಾಗಿ ಇಂದು ಬ್ಯಾಂಕ್‌ಗೆ ಕರೆದೊಯ್ಯುವ ಸಾಧ್ಯತೆಯಿದೆ. ಶ್ರೀಕಿಯ ಐಷಾರಾಮಿ ಜೀವನಶೈಲಿಗೆ ನಲಪಾಡ್ ಹಣಕಾಸು ಒದಗಿಸಿದ್ದರ ಕುರಿತು ಸಾಕ್ಷ್ಯಗಳನ್ನು ಇಡಿ ಕಲೆಹಾಕುತ್ತಿದೆ.

ನಲಪಾಡ್, ಶ್ರೀಕಿ ಮತ್ತು ಡಿಜಿಪಿ ಪುತ್ರ ರಿಷಬ್ ಒಟ್ಟಾಗಿ ಲಾವೆಲ್ಲೆ ರಸ್ತೆಯ ಸೆಕೆಂಡ್ ಹ್ಯಾಂಡ್ ಶೋರೂಂನಲ್ಲಿ ಪೋರ್ಷೆ ಕಾರ್ ಖರೀದಿಗೆ ಬಂದಿದ್ದರು. ಟೆಸ್ಟ್ ಡ್ರೈವ್ ಮಾಡುವಾಗ ಶ್ರೀಕಿ ಕಾರಿನಲ್ಲಿ ಸಿಗರೆಟ್ ಸೇದಲು ಯತ್ನಿಸಿದ್ದು, ಶೋರೂಂ ಸಿಬ್ಬಂದಿ ನಿರಾಕರಿಸಿದಾಗ ಜಗಳ ತೆಗೆದಿದ್ದ. ನಂತರ ಈ ಗ್ಯಾಂಗ್ 57 ಲಕ್ಷ ರೂಪಾಯಿಗೆ ಕಾರು ಖರೀದಿಸಿತ್ತು.

ಪೋರ್ಷೆ ಕಾರನ್ನೇ ಆಷ್‌ಟ್ರೇ ಆಗಿ ಬಳಸಿ, ಸಿಗರೆಟ್ ಬೂದಿ ಉದುರಿಸಿದ್ದ ಶ್ರೀಕಿ!

ಶ್ರೀಕಿ ಕಾರನ್ನು ಆಷ್‌ಟ್ರೇ ಆಗಿ ಬಳಸಿ, ಸಿಗರೆಟ್ ಬೂದಿ ಉದುರಿಸಿದ್ದಲ್ಲದೆ, ಲೈಟರ್‌ನಿಂದ ಕಾರಿನ ಸೀಟಿಗೆ ಬೆಂಕಿ ಕೂಡ ಹಾಕಿದ್ದ ಎನ್ನಲಾಗಿದೆ. ಬಳಿಕ ಇದೇ ಕಾರನ್ನು 47 ಲಕ್ಷ ರೂಪಾಯಿಗೆ ಅದೇ ಶೋರೂಂಗೆ ವಾಪಸ್ ಮಾರಾಟ ಮಾಡಿದ್ದರು. ಈ ಹಣಕಾಸು ವ್ಯವಹಾರವನ್ನು ನಲಪಾಡ್ ಮತ್ತು ರಿಷಬ್ ನಿರ್ವಹಿಸಿದ್ದರು. ಈ ಘಟನೆಯ ಬಗ್ಗೆ 2024ರಲ್ಲಿ ಸಿಐಡಿ ಎಸ್ಐಟಿ ತಂಡ ನಲಪಾಡ್ ಮತ್ತು ರಿಷಬ್ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿತ್ತು. ಶ್ರೀಕಿಯ ಹಣಕಾಸು ವ್ಯವಹಾರಕ್ಕೆ ನಲಪಾಡ್ ಸಹಕರಿಸಿದ್ದರಿಂದ ಈಗ ಆತನಿಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಹ್ಯಾರಿಸ್‌ ಕುಟುಂಬಕ್ಕೆ ಇ.ಡಿ ಶಾಕ್: ನಲಪಾಡ್​ಗೆ ಉರುಳಾಯ್ತಾ ಬಿಟ್ ಕಾಯಿನ್ ಹಗರಣ!

ಪೋರ್ಷೆ ಕಾರು ಖರೀದಿ ಸೇರಿದಂತೆ ಅವರ ಹಿಂದಿನ ಹಲವು ವ್ಯವಹಾರಗಳು ಈಗ ಇಡಿ ಪರಿಶೀಲನೆಗೆ ಒಳಪಟ್ಟಿವೆ. ತನಿಖೆಗೆ ಶ್ರೀಕಿ ಸಹಕರಿಸುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:40 am, Tue, 21 April 26

Source link

ಪಾಕಿಸ್ತಾನ್ ಸೂಪರ್ ಲೀಗ್​ನಿಂದ ಮೂವರು ಐಪಿಎಲ್ ಆಟಗಾರರು ಬ್ಯಾನ್..! – Kannada News | List of PSL players banned by PCB for joining IPL

ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL)​ ಜೊತೆ ಪಾಕಿಸ್ತಾನ್ ಸೂಪರ್ ಲೀಗ್​ನ (PSL) ಪೈಪೋಟಿ ಮುಂದುವರೆದಿದೆ. ಆದರೆ ಈ ಪೈಪೋಟಿ ಕಂಡು ಬರುತ್ತಿರುವುದು ಆಟಗಾರರ ಬ್ಯಾನ್ ವಿಷಯದಲ್ಲಿ. ಅಂದರೆ ಪಿಎಸ್​ಎಲ್​ಗೆ ಕೈ ಕೊಟ್ಟು ಐಪಿಎಲ್ ಸೇರುವ ಆಟಗಾರರನ್ನು ಪಾಕಿಸ್ತಾನ್ ಸೂಪರ್ ಲೀಗ್​ನಿಂದ ಬ್ಯಾನ್ ಮಾಡಲಾಗುತ್ತಿದೆ.

Source link

Vastu Tips: ಲಕ್ಷ್ಮಿ ಕೃಪೆಗೆ ಮನೆಯ ಈ ದಿಕ್ಕಿನಲ್ಲಿ ಈ ಒಂದು ಗಿಡ ನೆಡಿ; ಅದೃಷ್ಟವೇ ಬದಲಾಗಲಿದೆ! – Kannada News | Marigold Vastu Tips: Attract Prosperity, Positive Energy and Knowledge to Your Home

ಹಿಂದೂ ಸಂಪ್ರದಾಯದಲ್ಲಿ ಹಳದಿ ಬಣ್ಣವು ಸಂಪತ್ತು, ಸಮೃದ್ಧಿ ಮತ್ತು ಜ್ಞಾನದ ಸಂಕೇತವಾಗಿದೆ. ಈ ಕಾರಣದಿಂದಲೇ ಪೂಜಾ ಕಾರ್ಯಗಳಲ್ಲಿ ಹಳದಿ ಹೂವುಗಳಿಗೆ ವಿಶೇಷ ಮಹತ್ವವಿದೆ. ವಿಶೇಷವಾಗಿ, ಚೆಂಡು ಹೂವಿನ ಗಿಡವನ್ನು ಲಕ್ಷ್ಮಿ ಮತ್ತು ವಿಷ್ಣು ದೇವರಿಗೆ ಅತ್ಯಂತ ಪ್ರಿಯವಾದುದೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಚೆಂಡು ಹೂವಿನ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಧನಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ಮತ್ತು ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ನೋಡುವುದಾದರೆ, ಹಳದಿ ಚೆಂಡು ಹೂವುಗಳು ‘ಗುರು’ ಗ್ರಹವನ್ನು ಪ್ರತಿನಿಧಿಸುತ್ತವೆ, ಹೀಗಾಗಿ ಇವು ಮನೆಯಲ್ಲಿ ಜ್ಞಾನ, ಗೌರವ ಮತ್ತು ಕೀರ್ತಿಯನ್ನು ವೃದ್ಧಿಸುತ್ತವೆ ಎಂದು ಹೇಳಲಾಗುತ್ತದೆ.

ಮನೆಯಲ್ಲಿ ಚೆಂಡು ಹೂವಿನ ಗಿಡವನ್ನು ನೆಡುವುದರಿಂದ ಅನೇಕ ಪ್ರಯೋಜನಗಳಿವೆ. ಇದರ ಸುವಾಸನೆಯು ಮನಸ್ಸಿಗೆ ಹಿತವನ್ನು ನೀಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ವಾಸ್ತು ತಜ್ಞರ ಪ್ರಕಾರ, ಸರಿಯಾದ ದಿಕ್ಕಿನಲ್ಲಿ ನೆಟ್ಟ ಚೆಂಡು ಹೂವಿನ ಗಿಡವು ಮನೆಯನ್ನು ದುಷ್ಟಶಕ್ತಿಗಳ ಪ್ರಭಾವದಿಂದ ರಕ್ಷಿಸುತ್ತದೆ ಮತ್ತು ವಾತಾವರಣವನ್ನು ಶುದ್ಧವಾಗಿಡುತ್ತದೆ. ಕೇವಲ ಆಧ್ಯಾತ್ಮಿಕವಾಗಿ ಅಷ್ಟೇ ಅಲ್ಲದೆ, ಈ ಹೂವುಗಳನ್ನು ಪೂಜೆಯಲ್ಲಿ ಬಳಸುವುದರಿಂದ ಆರ್ಥಿಕ ಅಡೆತಡೆಗಳು ದೂರವಾಗಿ, ಹೊಸ ಅವಕಾಶಗಳು ಲಭಿಸುತ್ತವೆ ಎಂಬ ದೃಢವಾದ ನಂಬಿಕೆ ಇದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ವಾಸ್ತು ಪ್ರಕಾರ, ಚೆಂಡು ಹೂವಿನ ಗಿಡವನ್ನು ನೆಡಲು ಈಶಾನ್ಯ ದಿಕ್ಕು ಅತ್ಯಂತ ಶ್ರೇಷ್ಠವಾದದ್ದು, ಏಕೆಂದರೆ ಇದು ದೇವಸ್ಥಾನದ ದಿಕ್ಕು ಎಂದು ಪರಿಗಣಿಸಲ್ಪಟ್ಟಿದೆ. ಈಶಾನ್ಯ ದಿಕ್ಕಿನಲ್ಲಿ ಸ್ಥಳಾವಕಾಶ ಇಲ್ಲದಿದ್ದರೆ, ಉತ್ತರ ಅಥವಾ ಪೂರ್ವ ದಿಕ್ಕುಗಳು ಕೂಡ ಸಾಕಷ್ಟು ಅನುಕೂಲಕರವಾಗಿವೆ. ಈ ದಿಕ್ಕುಗಳಲ್ಲಿ ಗಿಡವನ್ನು ನೆಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಸುಗಮವಾಗುತ್ತದೆ. ಆದರೆ, ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಈ ಗಿಡವನ್ನು ನೆಡುವುದನ್ನು ಕಡ್ಡಾಯವಾಗಿ ತಪ್ಪಿಸಬೇಕು, ಏಕೆಂದರೆ ಇದು ಕುಟುಂಬದಲ್ಲಿ ಅನಗತ್ಯ ಕಲಹ ಮತ್ತು ಅಶಾಂತಿಗೆ ಕಾರಣವಾಗಬಹುದು.

ಈ ಗಿಡವನ್ನು ನಿರ್ವಹಿಸುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಶೌಚಾಲಯ, ಸ್ನಾನಗೃಹ ಅಥವಾ ಕಸದ ತೊಟ್ಟಿಯ ಬಳಿ ಚೆಂಡು ಹೂವಿನ ಗಿಡವನ್ನು ಎಂದಿಗೂ ಇಡಬಾರದು; ಗಿಡವು ಸದಾ ಸ್ವಚ್ಛವಾದ ಮತ್ತು ಸೂರ್ಯನ ಬೆಳಕು ಚೆನ್ನಾಗಿ ಬೀಳುವ ಸ್ಥಳದಲ್ಲಿರಬೇಕು. ಒಂದು ವೇಳೆ ಗಿಡವು ಬಾಡಿಹೋದರೆ ಅಥವಾ ಹೂವುಗಳು ಒಣಗಿದ್ದರೆ, ಅವುಗಳನ್ನು ತಕ್ಷಣವೇ ತೆಗೆದುಹಾಕುವುದು ಒಳ್ಳೆಯದು. ಏಕೆಂದರೆ ಒಣಗಿದ ಅಥವಾ ಬಾಡಿದ ಗಿಡಗಳನ್ನು ಮನೆಯಲ್ಲಿ ಇಡುವುದು ಆರ್ಥಿಕ ನಷ್ಟ ಮತ್ತು ಮಾನಸಿಕ ಖಿನ್ನತೆಗೆ ದಾರಿ ಮಾಡಿಕೊಡಬಹುದು ಎಂದು ವಾಸ್ತು ಶಾಸ್ತ್ರ ಎಚ್ಚರಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ ಅನುರಾಧ – Kannada News | Tara Anuradha remember Rakesh Poojari In Elra Kaleleyutte Kala Event

‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ಏಪ್ರಿಲ್ 24ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ನಟಿ ತಾರಾ ಅನುರಾಧಾ ನಟಿಸಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ತಾರಾ ಮಾತನಾಡಿದರು. ಈ ಸಿನಿಮಾ ವಿಶೇಷ ಅನಿಸಿದ್ದು ಏಕೆ ಎಂಬುದನ್ನು ವಿವರಿಸಿದರು. ಈ ವೇಳೆ ರಾಕೇಶ್ ಅವರನ್ನು ಕೂಡ ನೆನಪಿಸಿಕೊಂಡರು. ರಾಕೇಶ್ ಅವರು ‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾದಲ್ಲಿ ನಟಿಸಿದ್ದರು. ಇದು ಅವರ ಕೊನೆಯ ಸಿನಿಮಾ ಆಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹ್ಯಾಕರ್ ಶ್ರೀಕಿಯ ಐಷಾರಾಮಿ ಜೀವನ ನಲಪಾಡ್​ಗೆ ಕುತ್ತು ತಂದಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ – Kannada News | ED Continues Raid on Bitcoin Scam Kingpin Srikis Residence; Nalapads Financial Links Under Scrutiny

ಹ್ಯಾಕರ್ ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು ಬಂದಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿImage Credit source: tv9

ಬೆಂಗಳೂರು, ಏಪ್ರಿಲ್ 21: ಬಿಟ್ ಕಾಯಿನ್ ಹಗರಣಕ್ಕೆ (Bitcoin Scam) ಸಂಬಂಧಿಸಿದಂತೆ ಕಿಂಗ್ ಪಿನ್ ಶ್ರೀಕಿ ನಿವಾಸದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಏಪ್ರಿಲ್ 21 ರಂದೂ ಮುಂದುವರಿದಿದೆ. ಬೆಂಗಳೂರಿನ ಜಯನಗರದಲ್ಲಿರುವ ಶ್ರೀಕಿ ಮನೆಯಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಶೋಧ ಕಾರ್ಯ ನಡೆಯುತ್ತಿದೆ. ಕಾಂಗ್ರೆಸ್ (Congress) ಶಾಸಕ ಎನ್.ಎ. ಹ್ಯಾರಿಸ್ (NA Haris) ಮಗ ನಲಪಾಡ್ ಮತ್ತು ಶ್ರೀಕಿ ನಡುವೆ 4.65 ಕೋಟಿ ರೂಪಾಯಿಗಳ ಹಣಕಾಸು ವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದ್ದು, ಇದರ ಬಗ್ಗೆ ಇಡಿ ತೀವ್ರ ತನಿಖೆ ನಡೆಸುತ್ತಿದೆ.

ಈ ಹಗರಣ ಈಗ ಹ್ಯಾರಿಸ್ ಕುಟುಂಬಕ್ಕೂ ಸಂಕಷ್ಟ ತಂದೊಡ್ಡಿದೆ. ಇಡಿ ಅಧಿಕಾರಿಗಳು ಶ್ರೀಕಿಯನ್ನು ವಿಚಾರಣೆ ನಡೆಸುತ್ತಿದ್ದು, ಬ್ಯಾಂಕ್ ಖಾತೆಗಳ ಪರಿಶೀಲನೆಗಾಗಿ ಇಂದು ಬ್ಯಾಂಕ್‌ಗೆ ಕರೆದೊಯ್ಯುವ ಸಾಧ್ಯತೆಯಿದೆ. ಶ್ರೀಕಿಯ ಐಷಾರಾಮಿ ಜೀವನಶೈಲಿಗೆ ನಲಪಾಡ್ ಹಣಕಾಸು ಒದಗಿಸಿದ್ದರ ಕುರಿತು ಸಾಕ್ಷ್ಯಗಳನ್ನು ಇಡಿ ಕಲೆಹಾಕುತ್ತಿದೆ.

ನಲಪಾಡ್, ಶ್ರೀಕಿ ಮತ್ತು ಡಿಜಿಪಿ ಪುತ್ರ ರಿಷಬ್ ಒಟ್ಟಾಗಿ ಲಾವೆಲ್ಲೆ ರಸ್ತೆಯ ಸೆಕೆಂಡ್ ಹ್ಯಾಂಡ್ ಶೋರೂಂನಲ್ಲಿ ಪೋರ್ಷೆ ಕಾರ್ ಖರೀದಿಗೆ ಬಂದಿದ್ದರು. ಟೆಸ್ಟ್ ಡ್ರೈವ್ ಮಾಡುವಾಗ ಶ್ರೀಕಿ ಕಾರಿನಲ್ಲಿ ಸಿಗರೆಟ್ ಸೇದಲು ಯತ್ನಿಸಿದ್ದು, ಶೋರೂಂ ಸಿಬ್ಬಂದಿ ನಿರಾಕರಿಸಿದಾಗ ಜಗಳ ತೆಗೆದಿದ್ದ. ನಂತರ ಈ ಗ್ಯಾಂಗ್ 57 ಲಕ್ಷ ರೂಪಾಯಿಗೆ ಕಾರು ಖರೀದಿಸಿತ್ತು.

ಪೋರ್ಷೆ ಕಾರನ್ನೇ ಆಷ್‌ಟ್ರೇ ಆಗಿ ಬಳಸಿ, ಸಿಗರೆಟ್ ಬೂದಿ ಉದುರಿಸಿದ್ದ ಶ್ರೀಕಿ!

ಶ್ರೀಕಿ ಕಾರನ್ನು ಆಷ್‌ಟ್ರೇ ಆಗಿ ಬಳಸಿ, ಸಿಗರೆಟ್ ಬೂದಿ ಉದುರಿಸಿದ್ದಲ್ಲದೆ, ಲೈಟರ್‌ನಿಂದ ಕಾರಿನ ಸೀಟಿಗೆ ಬೆಂಕಿ ಕೂಡ ಹಾಕಿದ್ದ ಎನ್ನಲಾಗಿದೆ. ಬಳಿಕ ಇದೇ ಕಾರನ್ನು 47 ಲಕ್ಷ ರೂಪಾಯಿಗೆ ಅದೇ ಶೋರೂಂಗೆ ವಾಪಸ್ ಮಾರಾಟ ಮಾಡಿದ್ದರು. ಈ ಹಣಕಾಸು ವ್ಯವಹಾರವನ್ನು ನಲಪಾಡ್ ಮತ್ತು ರಿಷಬ್ ನಿರ್ವಹಿಸಿದ್ದರು. ಈ ಘಟನೆಯ ಬಗ್ಗೆ 2024ರಲ್ಲಿ ಸಿಐಡಿ ಎಸ್ಐಟಿ ತಂಡ ನಲಪಾಡ್ ಮತ್ತು ರಿಷಬ್ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿತ್ತು. ಶ್ರೀಕಿಯ ಹಣಕಾಸು ವ್ಯವಹಾರಕ್ಕೆ ನಲಪಾಡ್ ಸಹಕರಿಸಿದ್ದರಿಂದ ಈಗ ಆತನಿಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಹ್ಯಾರಿಸ್‌ ಕುಟುಂಬಕ್ಕೆ ಇ.ಡಿ ಶಾಕ್: ನಲಪಾಡ್​ಗೆ ಉರುಳಾಯ್ತಾ ಬಿಟ್ ಕಾಯಿನ್ ಹಗರಣ!

ಪೋರ್ಷೆ ಕಾರು ಖರೀದಿ ಸೇರಿದಂತೆ ಅವರ ಹಿಂದಿನ ಹಲವು ವ್ಯವಹಾರಗಳು ಈಗ ಇಡಿ ಪರಿಶೀಲನೆಗೆ ಒಳಪಟ್ಟಿವೆ. ತನಿಖೆಗೆ ಶ್ರೀಕಿ ಸಹಕರಿಸುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:40 am, Tue, 21 April 26

Source link