Category Archives: Blog

Your blog category

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತದ ಐತಿಹಾಸಿಕ ಜಿಗಿತ: ಒಡಿಶಾದಲ್ಲಿ ದೇಶದ ಮೊದಲ ‘3D ಗ್ಲಾಸ್ ಚಿಪ್’ ಘಟಕಕ್ಕೆ ಚಾಲನೆ – Kannada News | Odisha: India’s 1st Advanced 3D Glass Chip Packaging Unit Launched, Boosts Semiconductor Hub

3ಡಿ ಗ್ಲಾಸ್ ಚಿಪ್ ಘಟಕದ ವಿವರಣೆ ಕೇಳುತ್ತಿರುವ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್.Image Credit source: PTI

ಭುವನೇಶ್ವರ್, ಏಪ್ರಿಲ್ 20: ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಹಬ್ ಆಗಿ ಮಾಡುವ ನಿಟ್ಟಿನಲ್ಲಿ ಒಡಿಶಾ ರಾಜ್ಯವು ಇಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ದೇಶದ ಮೊತ್ತಮೊದಲ ಸುಧಾರಿತ ‘3D ಗ್ಲಾಸ್ ಚಿಪ್ ಪ್ಯಾಕೇಜಿಂಗ್’ (Advanced 3D Glass Chip Packaging) ಘಟಕಕ್ಕೆ ಭುವನೇಶ್ವರದ ಇನ್ಫೋ ವ್ಯಾಲಿಯಲ್ಲಿ ಭಾನುವಾರ (ಏಪ್ರಿಲ್ 19, 2026) ಅದ್ಧೂರಿ ಚಾಲನೆ ನೀಡಲಾಗಿದೆ.

ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ (Mohan Charan Majhi) ಮತ್ತು ಕೇಂದ್ರ ರೈಲ್ವೆ ಹಾಗೂ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಪ್ರತಿಷ್ಠಿತ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಅಶ್ವಿನಿ ವೈಷ್ಣವ್ ಅವರು ಈ 3ಡಿ ಗ್ಲಾಸ್ ಚಿಪ್ ಯೋಜನೆ ಕುರಿತ ಒಂದು ವಿಡಿಯೋವನ್ನು ತಮ್ಮ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

ಅಶ್ವಿನಿ ವೈಷ್ಣವ್ ಅವರ ಟ್ವೀಟ್

ಏನಿದು 3D ಗ್ಲಾಸ್ ಚಿಪ್ ತಂತ್ರಜ್ಞಾನ?

ಸಾಮಾನ್ಯವಾಗಿ ಚಿಪ್‌ಗಳ ತಯಾರಿಕೆಯಲ್ಲಿ ಸಿಲಿಕಾನ್ ಬಳಸಲಾಗುತ್ತದೆ. ಆದರೆ ಈಗಿನ ಹೊಸ ತಂತ್ರಜ್ಞಾನದಲ್ಲಿ ‘ಗ್ಲಾಸ್ ಸಬ್‌ಸ್ಟ್ರೇಟ್’ (Glass Substrate) ಬಳಸಲಾಗುತ್ತಿದೆ. ಇದು ಚಿಪ್‌ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಲ್ಲದೆ, ಹೆಚ್ಚಿನ ಶಾಖವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದು ಕೃತಕ ಬುದ್ಧಿಮತ್ತೆ (AI), 5G ಸಂವಹನ ಮತ್ತು ಬಾಹ್ಯಾಕಾಶ ಸಂಶೋಧನೆಯಂತಹ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ.

ಇದನ್ನೂ ಓದಿ: ಮೆಷಿನ್​ಗಳು ಮನುಷ್ಯನ ಮಟ್ಟದ ಬುದ್ಧಿವಂತಿಕೆ ಹೊಂದಲು ಇನ್ನೆಷ್ಟು ವರ್ಷ ಬೇಕು? ಎಜಿಐ ಪಿತಾಮಹ ಬೆನ್ ಗರ್ಟ್ಜೆಲ್ ಹೇಳೋದಿದು

ಯೋಜನೆಯ ಪ್ರಮುಖ ಮುಖ್ಯಾಂಶಗಳು

ಅಮೆರಿಕ ಮೂಲದ ‘3D ಗ್ಲಾಸ್ ಸೊಲ್ಯೂಷನ್ಸ್’ ಸಂಸ್ಥೆಯು ತನ್ನ ಅಂಗಸಂಸ್ಥೆಯ ಮೂಲಕ ಸುಮಾರು ₹1,943 ಕೋಟಿ ಹೂಡಿಕೆ ಮಾಡುತ್ತಿದೆ. ಈ ಘಟಕದಿಂದ ರಾಜ್ಯದಲ್ಲಿ ಸುಮಾರು 2,500 ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ದೊರೆಯಲಿದೆ. ವಾರ್ಷಿಕವಾಗಿ ಸುಮಾರು 5 ಕೋಟಿ (50 ಮಿಲಿಯನ್) ಅಸೆಂಬಲ್ಡ್ ಯೂನಿಟ್​ಗಳು, 60,600 ಗ್ಲಾಸ್ ಪ್ಯಾನಲ್ ಸಬ್​ಸ್ಟ್ರೇಟ್, 13,200 ಎಚ್​ಡಿಐ ಮಾಡ್ಯೂಲ್​ಗಳನ್ನು ತಯಾರಿಸುವ ಗುರಿ ಹೊಂದಲಾಗಿದೆ. ಇಲ್ಲಿ ತಯಾರಾಗುವ ಚಿಪ್‌ಗಳನ್ನು ರಕ್ಷಣೆ (Defence), ಡಾಟಾ ಸೆಂಟರ್‌ಗಳು, AI ಮತ್ತು ಏರೋಸ್ಪೇಸ್ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ.

ತಂತ್ರಜ್ಞಾನ ಕೇಂದ್ರವಾಗುವತ್ತ ಒಡಿಶಾ

“ಇದು ಕೇವಲ ಕೈಗಾರಿಕಾ ಹೂಡಿಕೆಯಲ್ಲ. ಭವಿಷ್ಯದ ತಂತ್ರಜ್ಞಾನದ ಭದ್ರ ಬುನಾದಿ. ಒಡಿಶಾ ಇನ್ನು ಮುಂದೆ ಕೇವಲ ಖನಿಜಗಳ ನಾಡಲ್ಲ, ಬದಲಿಗೆ ತಂತ್ರಜ್ಞಾನದ ಕೇಂದ್ರವಾಗಿಯೂ ಗುರುತಿಸಿಕೊಳ್ಳಲಿದೆ” ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಈ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: ಫಾರೆಕ್ಸ್ ರಿಸರ್ವ್ಸ್: ಮತ್ತೆ 700 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಭಾರತ

ಆತ್ಮನಿರ್ಭರ ಭಾರತಕ್ಕೆ ಬಲ

ಈ ಯೋಜನೆಗೆ ಕೇಂದ್ರ ಸರ್ಕಾರವು ಸುಮಾರು 799 ಕೋಟಿ ರೂ ಹಾಗೂ ಒಡಿಶಾ ಸರ್ಕಾರ 399 ರೂ ಕೋಟಿಗಳಷ್ಟು ಪ್ರೋತ್ಸಾಹಧನ ನೀಡುತ್ತಿವೆ. ಈ ಮೂಲಕ ಭಾರತವು ಚಿಪ್ ತಯಾರಿಕೆಯಲ್ಲಿ ವಿದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ‘ಆತ್ಮನಿರ್ಭರ ಭಾರತ’ (ಸ್ವಾವಲಂಬಿ) ಕನಸಿನತ್ತ ದಾಪುಗಾಲು ಹಾಕುತ್ತಿದೆ.

ಒಟ್ಟಾರೆಯಾಗಿ, ಒಡಿಶಾದಲ್ಲಿ ಆರಂಭವಾಗಿರುವ ಈ ಹೈಟೆಕ್ ಘಟಕವು ಭಾರತದ ತಾಂತ್ರಿಕ ನಕ್ಷೆಯಲ್ಲಿ ಹೊಸ ಸಂಚಲನ ಮೂಡಿಸಿರುವುದು ಹೌದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಾಗೆಯ ವಿಗ್ರಹ ಹಾಗೂ ಮಿಸ್ಟರಿ; ಒಟಿಟಿಯಲ್ಲಿರೋ ಈ ಥ್ರಿಲ್ಲರ್ ಸಿನಿಮಾನ ಮಿಸ್ ಮಾಡಬೇಡಿ – Kannada News | Sambhavam Adhyayam Onnu Review: A Crow Idol Mystery Thriller on OTT

ಅದೊಂದು ದಟ್ಟಾರಣ್ಯ. ಕಾಡಿನ ಮಧ್ಯದಲ್ಲಿ ಒಂದು ದೇವಸ್ಥಾನ. ದೇವಸ್ಥಾನ ಎಂದಾಕ್ಷಣ ಅದು ಶಿವನದ್ದೋ ಅಥವಾ ಗಣೇಶನದ್ದೋ ಅಲ್ಲ. ಅದು ಕಾಗೆಯದ್ದು. ಕಾಗೆಯ ದೊಡ್ಡ ವಿಗ್ರಹ ಅಲ್ಲಿ ಸ್ಥಾಪನೆ ಆಗಿದೆ. ಅದಕ್ಕೊಂದು ಕರಾಳ ಇತಿಹಾಸ ಇದೆ. ಅಷ್ಟೇ ಅಲ್ಲ, ಆ ಕಾಡಿನಲ್ಲೂ ಒಂದು ಮಾಂತ್ರಿಕತೆ ಇದೆ. ಸಿನಿಮಾ ಉದ್ದಕ್ಕೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇದೆ. ಇದು ಕೆಲವರಿಗೆ ಇಷ್ಟ ಆಗಬಹುದು, ಇನ್ನೂ ಕೆಲವರು ಇದನ್ನು ಇಷ್ಟಪಡದೇ ಇರಬಹುದು. ಆ ಸಿನಿಮಾ ಹೆಸರು ‘ಸಂಭವಮ್ ಆಧ್ಯಾಯಮ್ ಒನ್ನು’.  ಜಿಯೋ ಹಾಟ್​​ಸ್ಟಾರ್​​ನಲ್ಲಿ ಇದು ವೀಕ್ಷಣೆಗೆ ಲಭ್ಯವಿದೆ. ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದಲ್ಲೂ ವೀಕ್ಷಣೆಗೆ ಲಭ್ಯವಿದೆ.

ಕಥಾ ನಾಯಕ ಆಗತಾನೇ ಬೇರೆ ಸ್ಟೇಷನ್​​ಗೆ ಪೋಸ್ಟಿಂಗ್ ಹಾಕಿಸಿಕೊಂಡು ಬಂದಿರುತ್ತಾನೆ. ಹೊಸ ಊರು, ಹೊಸ ಜನ. ಬಂದ ದಿನವೇ ಒಂದು ವಿಚಿತ್ರ ಘಟನೆ ನಡೆಯುತ್ತದೆ. ಆತ, ಅನಿವಾರ್ಯವಾಗಿ ಕಾಡಿನ ಮಧ್ಯೆ ಹೋಗಬೇಕಾಗುತ್ತದೆ. ಅದು ಆ ಕಾಗೆ ವಿಗ್ರಹದ ಹತ್ತಿರ. ಆ ಬಳಿಕ ಸಿನಿಮಾದ ನಿಜವಾದ ಕಥೆ ತೆರೆದುಕೊಳ್ಳುತ್ತದೆ. ಈ ಸಿನಿಮಾ ಒಳ್ಳೆಯ ರೇಟಿಂಗ್ ಪಡೆದುಕೊಂಡಿದೆ.

ಮಲಯಾಂ ಮಂದಿ ಥ್ರಿಲ್ಲರ್ ಸಿನಿಮಾಗಳನ್ನು ಹೆಣೆಯಲು ಎತ್ತಿದ ಕೈ. ಅದೇ ರೀತಿ ‘ಸಂಭವಮ್ ಆಧ್ಯಾಯಮ್ ಒನ್ನು’ ಸಿನಿಮಾ ಕೂಡ ಗಮನ ಸೆಳೆಯುತ್ತದೆ. ಆದರೆ, ಈ ಚಿತ್ರದಲ್ಲಿ ಕೆಲವು ದೊಡ್ಡ ದೊಡ್ಡ ಮೈನಸ್ ಪಾಯಿಂಟ್ ಕೂಡ ಇದೆ. ಆರಂಭದಲ್ಲಿ ಸಿನಿಮಾ ಸಾಕಷ್ಟು ಗಮನ ಸೆಳೆಯುತ್ತದೆ. ಆದರೆ, ಮುಂದೆ ಹೋದಂತೆ ಕೆಲವು ಕಡೆಗಳಲ್ಲಿ ಗೊಂದಲದ ಗೂಡಾಗುತ್ತದೆ. ಹಲವು ದೃಶ್ಯಗಳಿಗೆ ಸ್ಪಷ್ಟತೆ ಸಿಗೋದಿಲ್ಲ.

ಇದನ್ನೂ ಓದಿ: ಮಲಯಾಳಂನ ‘ಪಳ್ಳಿ ಚಟ್ಟಂಬಿ’ ಚಿತ್ರದಲ್ಲಿ ಬಳಕೆ ಆಯ್ತು ಯಕ್ಷಗಾನ; ಇದೆ ಕನ್ನಡದ ಡೈಲಾಗ್

ಇನ್ನು ಮೇಕಿಂಗ್ ವಿಷಯದಲ್ಲಿ ‘ಸಂಭವಮ್ ಆಧ್ಯಾಯಮ್ ಒನ್ನು’ ಗಮನ ಸೆಳೆದಿದೆ. ಈ ಚಿತ್ರದ ಕಾನ್ಸೆಪ್ಟ್ ಕೂಡ ಗಮನ ಸೆಳೆಯುವ ರೀತಿಯಲ್ಲಿ ಇದೆ. ಆದರೆ, ಗೊಂದಲಗಳನ್ನು ಬಗೆಹರಿಸಿದ್ದರೆ ಸಿನಿಮಾ ಇನ್ನಷ್ಟು ಉತ್ತಮವಾಗಿ ಮೂಡಿಬರುತ್ತಿತ್ತು. ಟೈಮ್​ಪಾಸ್​ಗೆ ಒಂದೊಳ್ಳೆಯ ಥ್ರಿಲ್ಲರ್ಸಿನಿಮಾ ನೋಡಬೇಕು ಎಂದಿದ್ದರೆ ‘ಸಂಭವಮ್ ಆಧ್ಯಾಯಮ್ ಒನ್ನು’ ಒಳ್ಳೆಯ ಆಯ್ಕೆ. ಜೀತು ಸತೀಶನ್ ಮಂಗಳತು ಈ ಚಿತ್ರ ನಿರ್ದೇಶನ ಮಾಡಿದರೆ, ಅಕ್ಸರ್ ಅಲಿ, ವಿನೀತ್ ಕುಮಾರ್, ಅಸ್ಸಿಮ್ ಜಮಾಲ್ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:11 am, Mon, 20 April 26

Source link

ಹೊಸಪೇಟೆ ಸರಣಿ ಅಪಘಾತ: ಕನ್ಯೆ ನೋಡಲು ಹೊರಟಿದ್ದ ಆ ಮೂರು ಜನ ಸೇರಿದ್ದು ಮಸಣಕ್ಕೆ! – Kannada News | 4 death in Serial Accident Near Hosapete in Vijayanagara District

ವಿಜಯನಗರ, ಏಪ್ರಿಲ್​​ 20: ಹೊಸಪೇಟೆ (Vijayanagara) ತಾಲೂಕಿನ ಡಾಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ಭಾನುವಾರ ನಡೆದಿತ್ತು. ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಇಬ್ಬರು ಸಾವನ್ನಪ್ಪಿದ್ದಾರೆಂದು ಹೇಳಲಾಗಿತ್ತು. ಆದರೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವಿನ್ನಪ್ಪಿದ್ದಾರೆಂದು ದೃಢಪಟ್ಟಿದೆ. ಮಗ ಕೊಟ್ರೇಶನ ಮದುವೆಗಾಗಿ ಕನ್ಯೆ ನೋಡಲು ತೆರಳುವಾಗಲೇ ಈ ಅವಘಡ ಸಂಭವಿಸಿದ್ದು, ಹಸೆಮಣೆ ಸೇರಬೇಕಾದವನು ಮಸಣ ಸೇರಿದ್ದಾನೆ.

ಹಮಾಲಿ ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ

ಕಿತ್ನೂರು ಗ್ರಾಮದ ಸುಜಾತಾ (34), ನಾಗಪ್ಪ (58), ಕೊಟ್ರೇಶ್ (28) ಹಾಗೂ ತಿಮ್ಮಲಾಪುರದ ದುರ್ಗಪ್ಪ (55) ಮೃತ ದುರ್ದೈವಿಗಳು. ಮಗ ಕೊಟ್ರೇಶನಿಗಾಗಿ ಹುಡುಗಿಯನ್ನು ನೋಡಲು ತಂದೆ ನಾಗಪ್ಪ ಹಾಗೂ ತಾಯಿ ಸುಜಾತಾ ಕಿತ್ನೂರು ಗ್ರಾಮದಿಂದ ಗಂಗಾವತಿ ಕಡೆಗೆ ಬೈಕ್​ನಲ್ಲಿ ಹೊರಟಿದ್ದರು. ಇದೇ ಸಂದರ್ಭದಲ್ಲಿ ಮರಿಯಮ್ಮನಹಳ್ಳಿ, ಹೊಸಪೇಟೆಗೆ ಮಾರ್ಗವಾಗಿ ಬರುತ್ತಿದ್ದ ಬೆಳ್ಳುಳ್ಳಿ ತುಂಬಿದ್ದ ಲಾರಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂವರೂ ಸೇರಿ ಹಮಾಲಿ ದುರ್ಗಪ್ಪ(ಹುಲಗಪ್ಪ) ಸಹ ಮೃತ ಪಟ್ಟಿದ್ದಾರೆ.

ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಅಪಘಾತದಲ್ಲಿ, ಬೆಳ್ಳುಳ್ಳಿ ತುಂಬಿಕೊಂಡು ಚಿತ್ರದುರ್ಗದ ಕಡೆ ತೆರಳುತ್ತಿದ್ದ ಲಾರಿ ಅತಿವೇಗದಲ್ಲಿ ಸಂಚರಿಸುತ್ತಿತ್ತು ಎನ್ನಲಾಗಿದೆ. ಸಮಯ ಮುಟ್ಟಲು ಚಾಲಕ ವೇಗ ಹೆಚ್ಚಿಸಿದ್ದರಿಂದ ನಿಯಂತ್ರಣ ತಪ್ಪಿದ ಲಾರಿ ಮೊದಲು ಬೈಕ್‌ಗೆ ಡಿಕ್ಕಿ ಹೊಡೆದಿದೆ. ನಂತರ ತಪ್ಪಿಸಿಕೊಳ್ಳಲು ಯತ್ನಿಸುವಾಗ ಕಾರು ಹಾಗೂ KSRTC ಬಸ್‌ಗೆ ಡಿಕ್ಕಿ ಹೊಡೆದು ಕೊನೆಗೆ ಪಲ್ಟಿಯಾಗಿದೆ.

ಇದನ್ನೂ ಓದಿ ಹೊಸಪೇಟೆಯ ಡಾಣಾಪುರ ಬಳಿ ಸರಣಿ ಅಪಘಾತ: ಬೈಕ್, ಕಾರು, ಬಸ್​ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ; ಇಬ್ಬರು ಸಾವು

ಡಿಕ್ಕಿಯ ರಭಸಕ್ಕೆ ಮೃತರ ದೇಹಗಳು ಛಿದ್ರಗಾಗಿದ್ದು, ದೃಶ್ಯ ಭೀಕಕವಾಗಿತ್ತೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಘಟನೆಯ ನಂತರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಐವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳಕ್ಕೆ ರವಾನೆ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಕಾರಿಗೆ ಗುದ್ದಿ ಚರಂಡಿಗೆ ನುಗ್ಗಿದ ಖಾಸಗಿ ಸ್ಲೀಪರ್ ಬಸ್! – Kannada News | Mandya road accident, Private bus crash, Bangalore Mysore highway, Budanur incident, Car bus collision, Kerala to Bangalore bus accident

ಮಂಡ್ಯ, ಏ.20: ಜಿಲ್ಲೆಯ ಬೂದನೂರು ಸಮೀಪದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ, ಖಾಸಗಿ ಸ್ಲೀಪರ್ ಬಸ್ ಒಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯು ಭಾನುವಾರ ಬೆಳಿಗ್ಗೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದಂತಾಗಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ, ಕೇರಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್, ಬೂದನೂರು ಸಮೀಪದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡಿದ್ದು, ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಗೆ ನುಗ್ಗಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯ ತೀವ್ರತೆ ಹೆಚ್ಚಿದ್ದರೂ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಹೆದ್ದಾರಿಯಲ್ಲಿ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಬಸ್ ಹಾಗೂ ಕಾರನ್ನು ತೆರವುಗೊಳಿಸಲಾಯಿತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಾಮರಾಜನಗರ: ಸತತ 17 ಗಂಟೆಗಳ ಕಾರ್ಯಾಚರಣೆ; ಕೆಸರಲ್ಲಿ ಸಿಲುಕಿದ್ದ ಮೂರು ಆನೆಗಳ ರಕ್ಷಣೆ – Kannada News | Forest Officials Rescue 3 Elephants Stuck in Mud After 17 Hour Operation in Chamarajanagar

ಚಾಮರಾಜನಗರ, ಏಪ್ರಿಲ್​​ 20: ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ಬಫರ್ ವಲಯಕ್ಕೆ ಸೇರಿದ ಉಡುತೊರೆ ಹಳ್ಳ ಜಲಾಶಯದ ಕೆಸರಿನಲ್ಲಿ ಸಿಲುಕಿದ್ದ ಮೂರು ಕಾಡಾನೆಗಳ್ನು ಅರಣ್ಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬಳಿಕ ಅವುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಆ ಪೈಕಿ ಎರಡು ಆನೆಗಳು ಕಾಡಿನತ್ತ ಪಯಣ ಬೆಳೆಸಿವೆ. ಮತ್ತೊಂದು ಆನೆಗೆ ಅರಣ್ಯಾಧಿಕಾರಿಗಳಿಂದ ಆರೈಕೆ ಮುಂದುವರಿದಿದೆ. ಸತತ 17 ಗಂಟೆಗಳ ಕಾರ್ಯಾಚರಣೆ ಬಳಿಕ ಮೂರು ಆನೆಗಳನ್ನ ರಕ್ಷಣೆ ಮಾಡಲಾಗಿತ್ತು. ಒಂದು ಆನೆ ತೀವ್ರ ಅಸ್ವಸ್ಥಗೊಂಡಿದ್ದು, ಮೇಲೇಳಲೂ ಆಗದ ಸ್ಥಿತಿಯಲ್ಲಿತ್ತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೊಸ ‘ರಾಜರಥ’ ಸಂಚಾರ ಆರಂಭ: ಕರ್ನಾಟಕದ 6 ಜಿಲ್ಲೆಗಳ ಪ್ರಯಾಣಿಕರಿಗೆ ಗುಡ್ ನ್ಯೂಸ್ – Kannada News | Hubballi Hyderabad AC Sleeper: NWKRTC Launches Rajaratha Luxury Bus Service

ಹುಬ್ಬಳ್ಳಿ, ಏ.20: ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರ ಬಹುಕಾಲದ ಬೇಡಿಕೆಯನ್ನು ಈಡೇರಿಸಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು, ತನ್ನ ಐಷಾರಾಮಿ ಬಸ್‌ಗಳ ಸಾಲಿಗೆ 4 ಹೊಸ ‘ರಾಜರಥ’ (Rajaratha) ಎಸಿ ಸ್ಲೀಪರ್ ಬಸ್‌ಗಳನ್ನು ಸೇರ್ಪಡೆಗೊಳಿಸಿದೆ. ಈ ಬಸ್‌ಗಳು ಪ್ರಮುಖವಾಗಿ ಕರ್ನಾಟಕದ ವಿವಿಧ ನಗರಗಳಿಂದ ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸಲಿವೆ. ಈ ಹೊಸ ಬಸ್‌ಗಳ ಸಂಚಾರದಿಂದ ಧಾರವಾಡ, ಗದಗ, ಕೊಪ್ಪಳ, ಬಳ್ಳಾರಿ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರಯಾಣಿಕರಿಗೆ ನೇರ ಅನುಕೂಲವಾಗಲಿದೆ.

ಪ್ರಮುಖ ಎರಡು ಮಾರ್ಗಗಳು:

ಹುಬ್ಬಳ್ಳಿ – ಹೈದರಾಬಾದ್: ಗದಗ, ಕೊಪ್ಪಳ, ಹೊಸಪೇಟೆ ಮತ್ತು ಬಳ್ಳಾರಿ ಮಾರ್ಗವಾಗಿ ಸಂಚರಿಸಲಿದೆ.

ಬೆಳಗಾವಿ – ಹೈದರಾಬಾದ್: ಬಾಗಲಕೋಟೆ ಮತ್ತು ರಾಯಚೂರು ಮಾರ್ಗವಾಗಿ ಸಂಚರಿಸಲಿದೆ.

ಬಸ್‌ನ ವಿಶೇಷತೆಗಳೇನು?

ಅತ್ಯಾಧುನಿಕ ಸೌಲಭ್ಯ: ಸಂಪೂರ್ಣ ಹವಾನಿಯಂತ್ರಿತ (AC) ವ್ಯವಸ್ಥೆ ಹಾಗೂ ಆರಾಮದಾಯಕ ಸ್ಲೀಪರ್ ಸೀಟುಗಳು.

ಸುರಕ್ಷತೆ: ಬಸ್‌ನಲ್ಲಿ ಅಗ್ನಿಶಾಮಕ ಉಪಕರಣಗಳು ಮತ್ತು ತುರ್ತು ನಿರ್ಗಮನ ದ್ವಾರಗಳ ಸುಧಾರಿತ ವ್ಯವಸ್ಥೆ ಇದೆ.

ತಂತ್ರಜ್ಞಾನ: ಪ್ರತಿ ಸೀಟಿನ ಬಳಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ವೈಯಕ್ತಿಕ ರೀಡಿಂಗ್ ಲೈಟ್ ಮತ್ತು ಲಗೇಜ್ ಇಡಲು ಹೆಚ್ಚಿನ ಸ್ಥಳಾವಕಾಶ ನೀಡಲಾಗಿದೆ.

ಇದನ್ನೂ ಓದಿ: ಐಷಾರಾಮಿ ‘ಪೋರ್ಷೆ’ ಕಾರಿನ ಬಾನೆಟ್ ಮೇಲೆ ಸಿಮೆಂಟ್ ಮಿಶ್ರಣ! ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಿದ ಉದ್ಯಮಿಯ ವೀಡಿಯೋ ವೈರಲ್

ಬುಕ್ಕಿಂಗ್ ಮತ್ತು ಸಂಪರ್ಕ ಮಾಹಿತಿ

ಪ್ರಯಾಣಿಕರು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು:

ಸಂಪರ್ಕ ಸಂಖ್ಯೆಗಳು: 77609 91635, 77609 91625

ಸಹಾಯವಾಣಿ: 77609 91555

ಆನ್‌ಲೈನ್ ಬುಕ್ಕಿಂಗ್: www.ksrtc.in ಅಥವಾ nwkrtc.karnataka.gov.in

ಖಾಸಗಿ ಬಸ್‌ಗಳ ಪೈಪೋಟಿಗೆ ಅಡ್ಡಿಯಾಗದಂತೆ, ಕಡಿಮೆ ದರದಲ್ಲಿ ಗುಣಮಟ್ಟದ ಮತ್ತು ಐಷಾರಾಮಿ ಸೇವೆಯನ್ನು ಜನಸಾಮಾನ್ಯರಿಗೆ ತಲುಪಿಸುವುದು NWKRTC ಉದ್ದೇಶವಾಗಿದೆ. ಹೈದರಾಬಾದ್‌ಗೆ ಹೋಗುವ ವ್ಯಾಪಾರಿಗಳು, ಐಟಿ ಉದ್ಯೋಗಿಗಳು ಮತ್ತು ಪ್ರವಾಸಿಗರಿಗೆ ಈ ಸೇವೆ ಹೆಚ್ಚು ಉಪಯುಕ್ತವಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಲು ಜಾರಿ ಕೆರೆಗೆ ಬಿದ್ದ ಅಳಿಯನ ರಕ್ಷಣೆಗೆ ಹೋದ ಮಾವನೂ ಸಾವು: ಅತ್ತ ಪಿರಿಯಾಪಟ್ಟಣದಲ್ಲಿ ಇಬ್ಬರು ಯುವಕರು ನೀರು ಪಾಲು – Kannada News | Hassan Drowning Tragedy: Uncle Dies While Trying to Save Nephew

ಕಾಲು ಜಾರಿ ಕೆರೆಗೆ ಬಿದ್ದ ಅಳಿಯನ ರಕ್ಷಣೆ ಗೆ ಹೋದ ಮಾವನೂ ಸಾವುImage Credit source: Tv9 Kannada

ಹಾಸನ/ಮೈಸೂರು, ಏಪ್ರಿಲ್​​ 20: ಕಾಲು ಜಾರಿ ಕೆರೆಗೆ ಬಿದ್ದ ಬಾಲಕನ ರಕ್ಷಣೆ ಗೆ ಹೋದ ಮಾವನೂ ದಾರುಣವಾಗಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಎನ್‌. ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಭಾಕರ್ (45), ಪ್ರತೀಕ್ (12) ಮೃತ ದುರ್ದೈವಿಗಳು. ಮೂಲತಃ ದುದ್ದ ಹೋಬಳಿ ಸೋಮನಹಳ್ಳಿ ಗ್ರಾಮದ ಪ್ರತೀಕ್ ಬೇಸಿಗೆ ರಜೆ ಹಿನ್ನಲೆ ಮಾವ ಪ್ರಭಾಕರ್ ಮನೆಗೆ ಬಂದಿದ್ದ. ಕೆರೆಯ ಏರಿ ಮೇಲೆ ಮಾವ ಮತ್ತು ಅಳಿಯ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಲು ಜಾರಿ ಕೆರೆಗೆ ಪ್ರತೀಕ್ ಬಿದ್ದಿದ್ದಾನೆ. ಆತನ ರಕ್ಷಿಸಿಲು ಕೆರೆಗೆ ಇಳಿದ ಪ್ರಭಾಕರ್, ಈಜು ಬಾರದ ಕಾರಣ ಅಳಿಯನ ಜೊತೆಗೇ ಜಲ ಸಮಾಧಿ ಆಗಿದ್ದಾರೆ. ಮೃತದೇಹವನ್ನು ಅಗ್ನಿಶಾಮಕದಳದ ಸಿಬ್ಬಂದಿ ಹೊರ ತೆಗೆದಿದ್ದು, ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಸಾವು

ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಪ್ರಾಣಬಿಟ್ಟಿರುವ ಘಟನೆ ಪಿರಿಯಾಪಟ್ಟಣದ ದೊಡ್ಡ ಹರವೆ ಗ್ರಾಮದ ಬಳಿ ನಡೆದಿದೆ. ಗಣೇಶ್ (22) ಮತ್ತು ಇಮ್ರಾನ್ (28) ಮೃತಪಟ್ಟವರಾಗಿದ್ದಾರೆ. ಪಟ್ಟಣದಲ್ಲಿ ಟೈಲ್ಸ್‌ ಮತ್ತು ಪೇಂಟಿಂಗ್‌ ಕೆಲಸ ಮಾಡುತ್ತಿದ್ದ ನಾಲ್ವರು ಯುವಕರು ಭಾನುವಾರ ಮಧ್ಯಾಹ್ನ ಈಜಲೆಂದು ನದಿಗೆ ತೆರಳಿದ್ದರು. ಈ ವೇಳೆ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ. ಗಣೇಶ್‌ ಮೃತದೇಹ ಹೊರಕ್ಕೆ ತೆಗೆಯಲಾಗಿದ್ದು, ಇಮ್ರಾನ್‌ ಶವಕ್ಕಾಗಿ ಶೋಧ ಮುಂದುವರಿದಿದೆ. ಈ ಸಂಬಧ ಬೈಲಕುಪ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಕುರಿ ಮೈತೊಳೆಯಲು ಕೆರೆಗೆ ಹೋಗಿದ್ದ ಸಹೋದರರು ನೀರುಪಾಲು; ಬದುಕು ದುರಂತ ಅಂತ್ಯ

ಕಾವೇರಿ ನದಿಯಲ್ಲಿ ಮುಳುಗಿ 6 ಜನ‌ ದುರ್ಮರಣ ಹೊಂದಿರುವ ಘಟನೆ ನಿನ್ನೆಯಷ್ಟೇ K.R.ನಗರದ ಅರ್ಕೇಶ್ವರ ದೇಗುಲದ ಬಳಿ ನಡೆದಿತ್ತು. ಉರೂಸ್​ ಹಿನ್ನೆಲೆ ದರ್ಗಾಕ್ಕೆ ಬಂದಿದ್ದ 8 ಜನರ ತಂಡ ನದಿಗೆ ಈಜಲು ತೆರಳಿದ್ದಾಗ ದುರ್ಘಟನೆ ಸಂಭವಿಸಿತ್ತು.ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ದುರದೃಷ್ಟವಶಾತ್ ಉಳಿದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ನೀರಲ್ಲಿ ಮುಳುಗಿ ಮತ್ತೆ ನಾಲ್ವರು ಪ್ರಾಣ ಬಿಟ್ಟಿರುವ ಘಟನೆ ರಾಜ್ಯದಲ್ಲಿ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:41 am, Mon, 20 April 26

Source link

Basava Jayanti 2026: ದಯವೇ ಧರ್ಮದ ಮೂಲವಯ್ಯ; ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ವಿಶ್ವಗುರು ಬಸವಣ್ಣ – Kannada News | Basava Jayanti 2026: What is the significance behind celebration of Basava Jayanti?

ಕಾಯಕವೇ ಕೈಲಾಸ, ದಯೆಯೇ ಧರ್ಮದ ಮೂಲ ಎಂದು ಮನುಕುಲಕ್ಕೆ ಮಹಾ ಸಂದೇಶವನ್ನು ಸಾರಿದ ಬಸವಣ್ಣನವರ (Basavanna) ಜನ್ಮ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ತಮ್ಮ ವಚನಗಳ ಮೂಲಕವೇ 12 ಶತಮಾನದಲ್ಲಿ ಸಮಾಜದಲ್ಲಿ ಆಚರಣೆಯಲ್ಲಿದ್ದ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಇತ್ಯಾದಿ ಅನಿಷ್ಠ ಪದ್ಧತಿಗಳನ್ನು ನಿರ್ಮೂಲನೆ ಮಾಡಿ, ಜ್ಞಾನದ ಬೆಳಕು ಚೆಲ್ಲಿ ಕ್ರಾಂತಿಯ ಬೀಜ ಬಿತ್ತಿದವರು ವಿಶ್ವ ಗುರು ಬಸವಣ್ಣ. ಪ್ರಸಿದ್ಧ ಸಂತರಾಗಿದ್ದ ಇವರು ರಾಜನೀತಿಜ್ಞರಾಗಿ, ಸಮಾಜ ಸುಧಾರಕರಾಗಿ ತಮ್ಮ ಕಾವ್ಯ ಮತ್ತು ಬರವಣಿಗೆಯ ಮತ್ತು ವಿಚಾರಧಾರೆಗಳ ಮೂಲಕ ಸಮಾಜದಲ್ಲಿನ ಅಜ್ಞಾನ, ಅಂಧಕಾರ, ಮೂಢನಂಬಿಕೆಗಳನ್ನು ಹೊಡೆದೋಡಿಸಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿ ತೀಡಿ ಮನುಕುಲಕ್ಕೆ ದಾರಿದೀಪವನ್ನು ತೋರಿದರು. ಮನುಕುಲಕ್ಕೆ ಸಮಾನತೆಯ ಪಾಠ ಕಲಿಸಿಕೊಟ್ಟ  ಬಸವಣ್ಣನವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ನಮಗೆಲ್ಲರಿಗೂ ಪಾಠ, ಬದುಕಿಗೆ ದಾರಿ.  ಅಲ್ಲದೆ ಇಂತಹ ಶ್ರೇಷ್ಠರ ತತ್ವ ಸಿದ್ಧಾಂತಗಳನ್ನು  ಅರ್ಥೈಸಿ ಜೀವನದಲ್ಲಿ ಅಳವಡಿಸಿಕೊಂಡರೆ ಸುಂದರ ಬದುಕು ನಮ್ಮದಾಕುತ್ತದೆ.

ಬಸವ ಜಯಂತಿ ಯಾವಾಗ?

ಮೂಢ ನಂಬಿಕೆ, ಮಡಿ ಮೈಲಿಗೆ, ಮೇಲು ಕೀಲು, ಲಿಂಗ ಅಸಮಾನತೆ ಜಾತಿ ವ್ಯವಸ್ಥೆ ಸೇರಿದಂತೆ ಸಮಾಜದಲ್ಲಿದ್ದ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿ ಹಲವಾರು ಸಾಮಾಜಿಕ ಸುಧಾರಣೆಗಳನ್ನು ತಂದವರು ಬಸವಣ್ಣನವರು. ಸಮಾಜ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಇವರ ಜನ್ಮ ಜಯಂತಿಯನ್ನು ಅಂದರೆ ಬಸವ ಜಯಂತಿಯನ್ನು ಪ್ರತಿವರ್ಷ ವೈಶಾಖ ಮಾಸದ ಶುಕ್ಷ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ.

ಸಾರ್ವಜನಿಕ ಬಸವ ಜಯಂತಿ ಆಚರಣೆ ಶುರುವಾದದ್ದು ಯಾವಾಗ?

ಕರ್ನಾಟಕದ ಗಾಂಧಿಯಂದು ಪ್ರಸಿದ್ಧರಾದ ಹರ್ಡೇಕರ ಮಂಜಪ್ಪನವರು 1913ರಲ್ಲಿ ಸಾರ್ವಜನಿಕವಾಗಿ ಬಸವ ಜಯಂತಿಯನ್ನು ಆಚರಿಸಲು ಮುಂದಾದರು. ವೀರಶೈವ, ಲಿಂಗಾಯತ ಸಮಾಜದ ಸಂಘಟನೆಗಾಗಿ ಬಸವ ಜಯಂತಿ ಆಚರಿಸಲು ಹೊರಟ ಅವರಿಗೆ ಬಸವಣ್ಣ ಜನಿಸಿದ ದಿನಾಂಕದ ಬಗ್ಗೆ ಗೊಂದಲ ಏರ್ಪಟ್ಟಿತ್ತು. ಆ ಸಮಯದಲ್ಲಿ ಮುರುಘಾಮಠದ ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳು ಅಕ್ಷಯ ತದಿಗೆಯಂದು ಬಸವ ಜಯಂತಿ ಆಚರಿಸಲು ಸೂಚಿಸಿದರು. ಅಂದಿನಿಂದ ಪ್ರತಿ ವರ್ಷ ಅಕ್ಷಯ ತೃತೀಯದಂದು ಬಸವ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಭಾರತದಲ್ಲಿರುವ ವಿಶ್ವ ಪಾರಂಪರಿಕ ತಾಣಗಳ ಬಗ್ಗೆ ನಿಮಗೆಷ್ಟು ಗೊತ್ತು?

ಜಸವ ಜಯಂತಿಯ ಮಹತ್ವವೇನು?

  • ಮಹಾನ್‌ ಕವಿ, ಸಮಾಜ ಸುಧಾರಕ ಮತ್ತು ದಾರ್ಶನಿಕರಾಗಿ ಹೆಸರನ್ನು ಗಳಿಸಿದ ಬಸವಣ್ಣನವರು ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ತಲೆ ಎತ್ತಿ ನಿಂತಿದ್ದ ಪಿಡುಗುಗಳನ್ನು ತೊಡೆದು ಹಾಕಲು ಸಾಮಾಜಿಕ ಜಾಗೃತಿಯನ್ನು ಪಸರಿಸಲು ಆರಂಭಿಸಿದರು.
  • ಜಾತಿ, ಬಣ್ಣ, ಅಂತಸ್ತಿನಲ್ಲಿ ವ್ಯತ್ಯಾಸವಿದ್ದರೂ ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಸಾರಿದ ಬಸವಣ್ಣನವರು ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ.
  • ಸಮಾಜಕ್ಕೆ ಇಷ್ಟೆಲ್ಲಾ ಕೊಡುಗೆ ನೀಡಿದ ವಿಶ್ವ ಗುರು ಬಸವಣ್ಣನವರಿಗೆ ಗೌರವ ಸಲ್ಲಿಸಲು, ಅವರ ತತ್ವ, ಆದರ್ಶಗಳನ್ನು ಸ್ಮರಿಸಲು ಬಸವ ಜಯಂತಿಯನ್ನು ಆಚರಿಸಲಾಗುತ್ತದೆ.
  • ಈ ದಿನದಂದು ಬಸವಣ್ಣನವರ ವಚನಗಳ ಪಠಣ, ಪ್ರದರ್ಶನಗಳು ಮತ್ತು ವಿಶೇಷ ಪೂಜೆಗಳು ನಡೆಯುತ್ತವೆ. ಹಲವಾರು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮಹಿಳೆಯ ಹಿಂಬಾಲಿಸಿಕೊಂಡು ಬಂದು ಆಕೆಯ ಮನೆಯೊಳಗೆ ನುಗ್ಗಲು ವ್ಯಕ್ತಿ ಯತ್ನ, ಆಮೇಲೇನಾಯ್ತು ನೋಡಿ – Kannada News | Doorstep Surprise: Husband’s Presence Halts Alleged Stalker

ನಗರದ ಬೀದಿ ದೀಪಗಳು ಮಂದವಾಗಿದ್ದವು. ಸಂಜೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆಗೆ ತನ್ನ ಹಿಂದೆ ಯಾರೋ ಬರುತ್ತಿದ್ದಾರೆ ಎಂಬ ಸಂಶಯ ಕಾಡಿತ್ತು. ಅವಳು ಹೆಜ್ಜೆ ಜೋರು ಮಾಡಿದಷ್ಟೂ, ಆ ಅಪರಿಚಿತ ವ್ಯಕ್ತಿಯ ಚಪ್ಪಲಿಯ ಸದ್ದು ಹತ್ತಿರವಾಗುತ್ತಿತ್ತು. ಅಪಾರ್ಟ್​ಮೆಂಟ್ ತಲುಪಿದರೆ ಸಾಕೆಂದು ಓಡಿ ಬಂದರೆ ಆತ ಅಲ್ಲಿಗೂ ಬಂದಿದ್ದ. ಆಕೆ ಮನೆಯ ಬಾಗಿಲು ಇನ್ನೇನು ತೆಗೀಬೇಕು ಅನ್ನುವಷ್ಟರಲ್ಲಿ ಆತ ಕೂಡ ಆಕೆಯ ಹಿಂದೆಯೇ ನಿಂತಿದ್ದ. ಆಕೆ ಬಾಗಿಲು ತೆರೆದು ಒಳಗೆ ಹೋಗಿದ್ದಾಳೆ. ಆತನೂ ಆಕೆಯ ಹಿಂದೆ ಹೋಗಬೇಕು ಅನ್ನುವಷ್ಟರಲ್ಲಿ ಆತನಿಗೆ ಅಚ್ಚರಿ ಕಾದಿತ್ತು, ಆಕೆಯ ಗಂಡ ಮನೆಯೊಳಗೆ ಇದ್ದ ಆತ ಮನೆಯೊಳಗಿಂದ ಹೊರಗೆ ಬರುವುದು ನೋಡಿ ಅಪರಿಚಿತ ವ್ಯಕ್ತಿ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ರವೀಂದ್ರ ಜಡೇಜಾನ ಕಡೆಗಣಿಸಿ ಪಂದ್ಯ ಸೋತ ರಾಜಸ್ಥಾನ್ ರಾಯಲ್ಸ್ – Kannada News | The Jadeja Snub: Riyan Parag’s Strategy Hurting RR

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 28ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ರಾಜಸ್ಥಾನ್ ರಾಯಲ್ಸ್ (RR) ತಂಡ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು 155 ರನ್​ಗಳು ಮಾತ್ರ. ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್ ತಂಡವು ಕೊನೆಯ ಓವರ್​ನಲ್ಲಿ ಗೆಲುವು ದಾಖಲಿಸಿತ್ತು.  ಅಂದರೆ ಈ ಪಂದ್ಯದಲ್ಲಿ ಗೆಲ್ಲುವ ಅವಕಾಶ ರಾಜಸ್ಥಾನ್ ರಾಯಲ್ಸ್ ತಂಡದ ಮುಂದಿತ್ತು. ಇದಾಗ್ಯೂ ನಾಯಕ ರಿಯಾನ್ ಪರಾಗ್ ತೆಗೆದುಕೊಂಡು ಒಂದು ನಿರ್ಧಾರದಿಂದ ಆರ್​ಆರ್ ಪಡೆ ಸೋಲನುಭವಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸೋಲಿಗೆ ಕಾರಣವೇನು?

ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅತ್ಯುತ್ತಮ ದಾಳಿ ಸಂಘಟಿಸಿದ್ದು ರವೀಂದ್ರ ಜಡೇಜಾ. ಮೂರು ಓವರ್​ಗಳನ್ನು ಎಸೆದಿದ್ದ ಜಡೇಜಾ ಕೇವಲ 8 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಇದಾಗ್ಯೂ ರಿಯಾನ್ ಪರಾಗ್ ಅವರು ರವೀಂದ್ರ ಜಡೇಜಾ ಅವರಿಗೆ ಪೂರ್ಣ ನಾಲ್ಕು ಓವರ್‌ಗಳನ್ನು ಬೌಲ್ ಮಾಡಲು ಅವಕಾಶ ನೀಡಲಿಲ್ಲ ಎಂಬುದೇ ಅಚ್ಚರಿ.

ಅದರಲ್ಲೂ ನಿರ್ಣಾಯಕ ಹಂತದಲ್ಲಿ ಜಡೇಜಾ ಅವರ ಅನುಭವವನ್ನು ಬಳಸಿಕೊಳ್ಳಲು ರಿಯಾನ್ ಪರಾಗ್ ಮುಂದಾಗಲಿಲ್ಲ. ಬದಲಾಗಿ ಡೆತ್ ಓವರ್‌ಗಳಲ್ಲಿ ಅನ್-ಕ್ಯಾಪ್ಡ್ ಬೌಲರ್ ಬ್ರಿಜೇಶ್ ಶರ್ಮಾ ಅವರಿಗೆ ಚೆಂಡನ್ನು ನೀಡಿದರು. ಹೀಗೆ ಎಸೆದ 10 ಎಸೆತಗಳಲ್ಲಿ ಬ್ರಿಜೇಶ್ ನೀಡಿದ್ದು ಬರೋಬ್ಬರಿ 21 ರನ್​ಗಳು.

ನಿರ್ಣಾಯಕ ಹಂತದಲ್ಲಿ ಬ್ರಿಜೇಶ್ ಶರ್ಮಾ ನೀಡಿದ 21 ರನ್​ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡ ಸೋಲನುಭವಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ರವೀಂದ್ರ ಜಡೇಜಾಗೆ ಒಂದು ಓವರ್ ಇದ್ದರೂ ಅದನ್ನು ಮಧ್ಯ ಭಾಗದಲ್ಲಿ ಹಾಕಿಸಿ, ಕೊನೆಯ ಹಂತದಲ್ಲಿ ಜೋಫ್ರಾ ಆರ್ಚರ್ ಅವರನ್ನು ಬಳಸಿಕೊಳ್ಳಲು ಆರ್​ಆರ್ ತಂಡಕ್ಕೆ ಉತ್ತಮ ಅವಕಾಶವಿತ್ತು. ಆದರೆ ರಿಯಾನ್ ಪರಾಗ್ ತೆಗೆದುಕೊಂಡ ಒಂದು ನಿರ್ಧಾರವು ಆರ್​ಆರ್ ಪಾಲಿಗೆ ಮುಳುವಾಯಿತು.

ರಿಯಾನ್ ಪರಾಗ್  ಸಮರ್ಥನೆ:

ಪಂದ್ಯದ ನಂತರ ಮಾತನಾಡಿದ ರಿಯಾನ್ ಪರಾಗ್, “ಆ ಸಮಯದಲ್ಲಿ ಕೆಕೆಆರ್ ಪರವಾಗಿ ರಿಂಕು ಸಿಂಗ್ ಮತ್ತು ಅನುಕುಲ್ ರಾಯ್ ಅವರಂತಹ ಎಡಗೈ ಬ್ಯಾಟರ್‌ಗಳು ಕ್ರೀಸ್‌ನಲ್ಲಿದ್ದರು. ಎಡಗೈ ಸ್ಪಿನ್ನರ್ ಆದ ಜಡೇಜಾ ಅವರಿಗೆ ಬೌಲಿಂಗ್ ನೀಡಿದರೆ ರನ್ ಬಿಟ್ಟುಕೊಡುವ ಸಾಧ್ಯತೆ ಇತ್ತು ಎಂಬ ಕಾರಣಕ್ಕೆ ನಾನು ಈ ನಿರ್ಧಾರ ತೆಗೆದುಕೊಂಡೆ,” ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವಿಶೇಷ ಎಂದರೆ ರವೀಂದ್ರ ಜಡೇಜಾಗೆ ರಿಯಾನ್ ಪರಾಗ್ ಓವರ್ ನೀಡದಿರುವುದು ಇದೇ ಮೊದಲೇನಲ್ಲ. ಏಪ್ರಿಲ್ 13 ರಂದು ನಡೆದ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲೂ ಜಡೇಜಾ ಅವರಿಗೆ ಒಂದೇ ಒಂದು ಓವರ್ ನೀಡಿರಲಿಲ್ಲ. ಇದೀಗ ಅನುಭವಿ ಆಟಗಾರರನ್ನು ತಂಡದಲ್ಲಿಟ್ಟುಕೊಂಡು ಅವರನ್ನು ಸರಿಯಾಗಿ ಬಳಸಿಕೊಳ್ಳದಿರುವುದು ಚರ್ಚೆಗೀಡಾಗಿದೆ.

ಅಶ್ವಿನ್ ಅಸಮಾಧಾನ:

ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ಸೇರಿದಂತೆ ಹಲವು ವಿಶ್ಲೇಷಕರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪರಿಸ್ಥಿತಿ ಏನೇ ಇರಲಿ, ಜಡೇಜಾರಂತಹ ವಿಶ್ವದರ್ಜೆಯ ಬೌಲರ್‌ನ ಅನುಭವದ ಮೇಲೆ ನಂಬಿಕೆ ಇಡಬೇಕಿತ್ತು. ಕೇವಲ ‘ಮ್ಯಾಚ್-ಅಪ್’ (ಎಡಗೈ ಬ್ಯಾಟರ್‌ಗೆ ಎಡಗೈ ಬೌಲರ್) ಲೆಕ್ಕಾಚಾರದಿಂದ ಪಂದ್ಯ ಗೆಲ್ಲಲು ಸಾಧ್ಯವಿಲ್ಲ” ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: IPL 2026: ನಿನ್ನ ಮುಖ ತೋರಿಸಬೇಡ… ಕಾರಣವೇನು?

ಮೇಲ್ನೋಟಕ್ಕೆ ಯುವ ನಾಯಕ ರಿಯಾನ್ ಪರಾಗ್ ಅವರು ಸಂಪ್ರದಾಯಕ್ಕಿಂತ ಭಿನ್ನವಾಗಿ ಯೋಚಿಸುತ್ತಿರುವುದು ಕಂಡು ಬಂದರೂ, ರವೀಂದ್ರ ಜಡೇಜಾ ಅವರಂತಹ ಆಟಗಾರನನ್ನು ಕಡೆಗಣಿಸುವುದು ತಂಡದ ಫಲಿತಾಂಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂಬುದಕ್ಕೆ ಆರ್​ಆರ್​ ತಂಡ ಕೊನೆಯ ಎರಡು ಸೋಲುಗಳೇ ಸಾಕ್ಷಿ.

Source link