ಚಾಮರಾಜನಗರ, ಏಪ್ರಿಲ್ 20: ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ಬಫರ್ ವಲಯಕ್ಕೆ ಸೇರಿದ ಉಡುತೊರೆ ಹಳ್ಳ ಜಲಾಶಯದ ಕೆಸರಿನಲ್ಲಿ ಸಿಲುಕಿದ್ದ ಮೂರು ಕಾಡಾನೆಗಳ್ನು ಅರಣ್ಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬಳಿಕ ಅವುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಆ ಪೈಕಿ ಎರಡು ಆನೆಗಳು ಕಾಡಿನತ್ತ ಪಯಣ ಬೆಳೆಸಿವೆ. ಮತ್ತೊಂದು ಆನೆಗೆ ಅರಣ್ಯಾಧಿಕಾರಿಗಳಿಂದ ಆರೈಕೆ ಮುಂದುವರಿದಿದೆ. ಸತತ 17 ಗಂಟೆಗಳ ಕಾರ್ಯಾಚರಣೆ ಬಳಿಕ ಮೂರು ಆನೆಗಳನ್ನ ರಕ್ಷಣೆ ಮಾಡಲಾಗಿತ್ತು. ಒಂದು ಆನೆ ತೀವ್ರ ಅಸ್ವಸ್ಥಗೊಂಡಿದ್ದು, ಮೇಲೇಳಲೂ ಆಗದ ಸ್ಥಿತಿಯಲ್ಲಿತ್ತು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
