Basava Jayanti 2026: ದಯವೇ ಧರ್ಮದ ಮೂಲವಯ್ಯ; ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ವಿಶ್ವಗುರು ಬಸವಣ್ಣ – Kannada News | Basava Jayanti 2026: What is the significance behind celebration of Basava Jayanti?

ಕಾಯಕವೇ ಕೈಲಾಸ, ದಯೆಯೇ ಧರ್ಮದ ಮೂಲ ಎಂದು ಮನುಕುಲಕ್ಕೆ ಮಹಾ ಸಂದೇಶವನ್ನು ಸಾರಿದ ಬಸವಣ್ಣನವರ (Basavanna) ಜನ್ಮ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ತಮ್ಮ ವಚನಗಳ ಮೂಲಕವೇ 12 ಶತಮಾನದಲ್ಲಿ ಸಮಾಜದಲ್ಲಿ ಆಚರಣೆಯಲ್ಲಿದ್ದ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಇತ್ಯಾದಿ ಅನಿಷ್ಠ ಪದ್ಧತಿಗಳನ್ನು ನಿರ್ಮೂಲನೆ ಮಾಡಿ, ಜ್ಞಾನದ ಬೆಳಕು ಚೆಲ್ಲಿ ಕ್ರಾಂತಿಯ ಬೀಜ ಬಿತ್ತಿದವರು ವಿಶ್ವ ಗುರು ಬಸವಣ್ಣ. ಪ್ರಸಿದ್ಧ ಸಂತರಾಗಿದ್ದ ಇವರು ರಾಜನೀತಿಜ್ಞರಾಗಿ, ಸಮಾಜ ಸುಧಾರಕರಾಗಿ ತಮ್ಮ ಕಾವ್ಯ ಮತ್ತು ಬರವಣಿಗೆಯ ಮತ್ತು ವಿಚಾರಧಾರೆಗಳ ಮೂಲಕ ಸಮಾಜದಲ್ಲಿನ ಅಜ್ಞಾನ, ಅಂಧಕಾರ, ಮೂಢನಂಬಿಕೆಗಳನ್ನು ಹೊಡೆದೋಡಿಸಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿ ತೀಡಿ ಮನುಕುಲಕ್ಕೆ ದಾರಿದೀಪವನ್ನು ತೋರಿದರು. ಮನುಕುಲಕ್ಕೆ ಸಮಾನತೆಯ ಪಾಠ ಕಲಿಸಿಕೊಟ್ಟ  ಬಸವಣ್ಣನವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ನಮಗೆಲ್ಲರಿಗೂ ಪಾಠ, ಬದುಕಿಗೆ ದಾರಿ.  ಅಲ್ಲದೆ ಇಂತಹ ಶ್ರೇಷ್ಠರ ತತ್ವ ಸಿದ್ಧಾಂತಗಳನ್ನು  ಅರ್ಥೈಸಿ ಜೀವನದಲ್ಲಿ ಅಳವಡಿಸಿಕೊಂಡರೆ ಸುಂದರ ಬದುಕು ನಮ್ಮದಾಕುತ್ತದೆ.

ಬಸವ ಜಯಂತಿ ಯಾವಾಗ?

ಮೂಢ ನಂಬಿಕೆ, ಮಡಿ ಮೈಲಿಗೆ, ಮೇಲು ಕೀಲು, ಲಿಂಗ ಅಸಮಾನತೆ ಜಾತಿ ವ್ಯವಸ್ಥೆ ಸೇರಿದಂತೆ ಸಮಾಜದಲ್ಲಿದ್ದ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿ ಹಲವಾರು ಸಾಮಾಜಿಕ ಸುಧಾರಣೆಗಳನ್ನು ತಂದವರು ಬಸವಣ್ಣನವರು. ಸಮಾಜ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಇವರ ಜನ್ಮ ಜಯಂತಿಯನ್ನು ಅಂದರೆ ಬಸವ ಜಯಂತಿಯನ್ನು ಪ್ರತಿವರ್ಷ ವೈಶಾಖ ಮಾಸದ ಶುಕ್ಷ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ.

ಸಾರ್ವಜನಿಕ ಬಸವ ಜಯಂತಿ ಆಚರಣೆ ಶುರುವಾದದ್ದು ಯಾವಾಗ?

ಕರ್ನಾಟಕದ ಗಾಂಧಿಯಂದು ಪ್ರಸಿದ್ಧರಾದ ಹರ್ಡೇಕರ ಮಂಜಪ್ಪನವರು 1913ರಲ್ಲಿ ಸಾರ್ವಜನಿಕವಾಗಿ ಬಸವ ಜಯಂತಿಯನ್ನು ಆಚರಿಸಲು ಮುಂದಾದರು. ವೀರಶೈವ, ಲಿಂಗಾಯತ ಸಮಾಜದ ಸಂಘಟನೆಗಾಗಿ ಬಸವ ಜಯಂತಿ ಆಚರಿಸಲು ಹೊರಟ ಅವರಿಗೆ ಬಸವಣ್ಣ ಜನಿಸಿದ ದಿನಾಂಕದ ಬಗ್ಗೆ ಗೊಂದಲ ಏರ್ಪಟ್ಟಿತ್ತು. ಆ ಸಮಯದಲ್ಲಿ ಮುರುಘಾಮಠದ ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳು ಅಕ್ಷಯ ತದಿಗೆಯಂದು ಬಸವ ಜಯಂತಿ ಆಚರಿಸಲು ಸೂಚಿಸಿದರು. ಅಂದಿನಿಂದ ಪ್ರತಿ ವರ್ಷ ಅಕ್ಷಯ ತೃತೀಯದಂದು ಬಸವ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಭಾರತದಲ್ಲಿರುವ ವಿಶ್ವ ಪಾರಂಪರಿಕ ತಾಣಗಳ ಬಗ್ಗೆ ನಿಮಗೆಷ್ಟು ಗೊತ್ತು?

ಜಸವ ಜಯಂತಿಯ ಮಹತ್ವವೇನು?

  • ಮಹಾನ್‌ ಕವಿ, ಸಮಾಜ ಸುಧಾರಕ ಮತ್ತು ದಾರ್ಶನಿಕರಾಗಿ ಹೆಸರನ್ನು ಗಳಿಸಿದ ಬಸವಣ್ಣನವರು ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ತಲೆ ಎತ್ತಿ ನಿಂತಿದ್ದ ಪಿಡುಗುಗಳನ್ನು ತೊಡೆದು ಹಾಕಲು ಸಾಮಾಜಿಕ ಜಾಗೃತಿಯನ್ನು ಪಸರಿಸಲು ಆರಂಭಿಸಿದರು.
  • ಜಾತಿ, ಬಣ್ಣ, ಅಂತಸ್ತಿನಲ್ಲಿ ವ್ಯತ್ಯಾಸವಿದ್ದರೂ ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಸಾರಿದ ಬಸವಣ್ಣನವರು ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ.
  • ಸಮಾಜಕ್ಕೆ ಇಷ್ಟೆಲ್ಲಾ ಕೊಡುಗೆ ನೀಡಿದ ವಿಶ್ವ ಗುರು ಬಸವಣ್ಣನವರಿಗೆ ಗೌರವ ಸಲ್ಲಿಸಲು, ಅವರ ತತ್ವ, ಆದರ್ಶಗಳನ್ನು ಸ್ಮರಿಸಲು ಬಸವ ಜಯಂತಿಯನ್ನು ಆಚರಿಸಲಾಗುತ್ತದೆ.
  • ಈ ದಿನದಂದು ಬಸವಣ್ಣನವರ ವಚನಗಳ ಪಠಣ, ಪ್ರದರ್ಶನಗಳು ಮತ್ತು ವಿಶೇಷ ಪೂಜೆಗಳು ನಡೆಯುತ್ತವೆ. ಹಲವಾರು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *