Category Archives: Blog

Your blog category

Mangaluru Walk-in Interview: ನಿರುದ್ಯೋಗಿಗಳಿಗೆ ಸಿಹಿಸುದ್ದಿ; ಮಂಗಳೂರಿನಲ್ಲಿ ಏಪ್ರಿಲ್ 22 ರಂದು ಬೃಹತ್ ಉದ್ಯೋಗ ಮೇಳ! – Kannada News | Mangaluru Walk in Interview: My G Future and Akshaya Patra Jobs on April 22nd!

ನಿರುದ್ಯೋಗಿಗಳಿಗೆ ಸಿಹಿಸುದ್ದಿImage Credit source: Pinterest

ಮಂಗಳೂರು: ಕರಾವಳಿ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಸರ್ಕಾರವು ಭರ್ಜರಿ ಅವಕಾಶವೊಂದನ್ನು ಕಲ್ಪಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಬರುವ ಏಪ್ರಿಲ್ 22 ರಂದು ನೇರ ಸಂದರ್ಶನ (Walk-in Interview) ನಡೆಯಲಿದ್ದು, ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ನೇತೃತ್ವದಲ್ಲಿ ಈ ಪ್ರಕ್ರಿಯೆ ನಡೆಯಲಿದೆ.

ಯಾವೆಲ್ಲಾ ಸಂಸ್ಥೆಗಳಲ್ಲಿ ಅವಕಾಶ?

ಈ ಬಾರಿಯ ಉದ್ಯೋಗ ಮೇಳದಲ್ಲಿ ಪ್ರಮುಖವಾಗಿ ಎರಡು ಸಂಸ್ಥೆಗಳು ಭಾಗವಹಿಸುತ್ತಿವೆ. ಮೊದಲನೆಯದಾಗಿ, ಪ್ರಸಿದ್ಧ ರಿಟೇಲ್ ಸಂಸ್ಥೆಯಾದ ‘ಮೈ ಜಿ ಫ್ಯೂಚರ್’ (My G Future) ಕಂಪನಿಯು ಮ್ಯಾನೇಜ್‌ಮೆಂಟ್ ಮತ್ತು ಸೇಲ್ಸ್ ವಿಭಾಗದಲ್ಲಿ ಹಲವು ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಎರಡನೆಯದಾಗಿ, ಸಾಮಾಜಿಕ ಸೇವೆಯಲ್ಲಿ ತೊಡಗಿರುವ ‘ಅಕ್ಷಯಪಾತ್ರ ಫೌಂಡೇಶನ್’ ಸಂಸ್ಥೆಯು ತಾಂತ್ರಿಕ ಮತ್ತು ಅಡುಗೆ ವಿಭಾಗದ ಸಿಬ್ಬಂದಿಗಳ ಹುಡುಕಾಟದಲ್ಲಿದೆ.

ವಿದ್ಯಾರ್ಹತೆ ಮತ್ತು ಹುದ್ದೆಗಳ ವಿವರ:

ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮೈ ಜಿ ಫ್ಯೂಚರ್ ಸಂಸ್ಥೆಯಲ್ಲಿ ಬ್ಯುಸಿನೆಸ್ ಮ್ಯಾನೇಜರ್, ಬಿಲ್ಲಿಂಗ್ ಎಕ್ಸಿಕ್ಯೂಟಿವ್, ಶೋ ರೂಮ್ ಸೇಲ್ಸ್ ಮತ್ತು ಕಸ್ಟಮರ್ ಸರ್ವಿಸ್ ವಿಭಾಗಗಳಲ್ಲಿ ಕೆಲಸ ಮಾಡಲು ಪದವಿ ಅಥವಾ ಪಿಯುಸಿ ಮುಗಿಸಿದವರಿಗೆ ಆದ್ಯತೆ ನೀಡಲಾಗುತ್ತದೆ. ಇನ್ನು ಅಕ್ಷಯಪಾತ್ರ ಫೌಂಡೇಶನ್‌ನಲ್ಲಿ ಚಾಲಕರು, ಹೆಲ್ಪರ್ ಹಾಗೂ ಅಡುಗೆ ಕೆಲಸಗಾರರ ಹುದ್ದೆಗಳಿದ್ದು, ಎಸ್‌ಎಸ್‌ಎಲ್‌ಸಿ (SSLC) ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಸಂದರ್ಶನ ಎಲ್ಲಿ ಮತ್ತು ಯಾವಾಗ?

ಬರುವ ಏಪ್ರಿಲ್ 22 ರಂದು ಮಂಗಳೂರಿನ ಪಡೀಲ್‌ನಲ್ಲಿರುವ ಜಿಲ್ಲಾಡಳಿತ ಕಟ್ಟಡದ ನೆಲಮಹಡಿಯಲ್ಲಿರುವ ಉದ್ಯೋಗ ವಿನಿಮಯ ಕಚೇರಿಯಲ್ಲಿ ಈ ಸಂದರ್ಶನ ಆಯೋಜಿಸಲಾಗಿದೆ. ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ತಮ್ಮ ಅಪ್‌ಡೇಟೆಡ್ ಬಯೋಡಾಟಾ (Resume) ಮತ್ತು ಶೈಕ್ಷಣಿಕ ದಾಖಲೆಗಳೊಂದಿಗೆ ನೇರವಾಗಿ ಹಾಜರಾಗಬಹುದು.

ಹೆಚ್ಚಿನ ಮಾಹಿತಿ ಹಾಗೂ ಸಂಪರ್ಕ:

ಸರ್ಕಾರದ ಈ ಯೋಜನೆಯು ಸ್ಥಳೀಯರಿಗೆ ಉದ್ಯೋಗ ನೀಡುವ ಉದ್ದೇಶ ಹೊಂದಿದ್ದು, ಯಾವುದೇ ಶುಲ್ಕವಿಲ್ಲದೆ ಅಭ್ಯರ್ಥಿಗಳು ಸಂದರ್ಶನ ಭಾಗಿಯಾಗಬಹುದು. ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನತೆ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿಯ ದೂರವಾಣಿ ಸಂಖ್ಯೆ 0824-2457139 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೇಕೆದಾಟು ಯೋಜನೆಗೆ ಅಡ್ಡಗಾಲು: ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ – Kannada News | Mekedatu Row: JD(S) Slams Congress for Aligning with Anti Project DMK

ಬೆಂಗಳೂರು, ಏಪ್ರಿಲ್​​ 21: ಮೇಕೆದಾಟು ಯೋಜನೆ ತಡೆಯುವ ಬಗ್ಗೆ ಡಿಎಂಕೆ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಹೀಗಿದ್ದರೂ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ. ಶಿವಕುಮಾರ್​​ ಸೇರಿದಂತೆ ಸಿದ್ದರಾಮಯ್ಯ ಸಂಪುಟದ ಎಲ್ಲಾ ಮಂತ್ರಿಗಳು ತಮಿಳುನಾಡಿಗೆ ಹೋಗಿ, ವಾರಗಟ್ಟಲೆ ಠಿಕಾಣಿ ಹೂಡಿ ಡಿಎಂಕೆ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಹೀಗಾಗಿ “ನಮ್ಮ ನೀರು ನಮ್ಮ ಹಕ್ಕು” ಎಂದು ಹೋರಾಟದ ಬೃಹತ್ ನಾಟಕವಾಡಿದ ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು ಎಂದು ಜೆಡಿಎಸ್​​ ಕಿಡಿ ಕಾರಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಜ್ಯದಲ್ಲಿ ‘ಹೀಟ್ ವೇವ್’ ಅಬ್ಬರ: ಆಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಬೆಡ್ ಮೀಸಲಿಡಲು ದಿನೇಶ್ ಗುಂಡೂರಾವ್ ಸೂಚನೆ! – Kannada News | Heatwave Crisis in Karnataka: Minister Urges Caution, Govt Sets Up Special Wards

ಬೆಂಗಳೂರು, ಏ.21: ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಕುರಿತು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಬಿಸಿ ಗಾಳಿ (Heat Wave) ಹೆಚ್ಚಿರುವುದರಿಂದ ಜನರು ತೀವ್ರ ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ. ನೆನ್ನೆ (ಏ.20) ಬೀದರ್‌ನಲ್ಲಿ 20 ವರ್ಷದ ಯುವಕ ಹೀಟ್‌ಸ್ಟ್ರೋಕ್‌ಗೆ ಬಲಿಯಾಗಿದ್ದಾನೆ. ಇದೀಗ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಎಂದೂ ಕಾಣದಂತಹ ದಾಖಲೆ ಮಟ್ಟದ ಉಷ್ಣಾಂಶ ದಾಖಲಾಗುತ್ತಿದೆ. ಮಳೆಯೂ ಇಲ್ಲದ ಕಾರಣ ಪರಿಸ್ಥಿತಿ ಮತ್ತಷ್ಟು ಸವಾಲಾಗಿ ಪರಿಣಮಿಸಿದೆ. ಬಿಸಿಲಿನ ತಾಪಕ್ಕೆ ಈಗಾಗಲೇ ರಾಜ್ಯದಲ್ಲಿ ಒಂದು ಸಾವು ವರದಿಯಾಗಿದೆ ಎಂದು ಸಚಿವರು ಖಚಿತಪಡಿಸಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ಪ್ರಖರತೆ ವಿಪರೀತವಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಹೀಟ್​ ಸ್ಟ್ರೋಕ್​ಗೆ ಮೊದಲ ಬಲಿ! ಬೀದರ್​ನಲ್ಲಿ ಬಿಸಿಲ ಝಳ ತಾಳಲಾರದೆ ಕುಸಿದು ಬಿದ್ದ ಯುವಕ ಸ್ಥಳದಲ್ಲೇ ಸಾವು

ಬಿಸಿಲಿನ ಹೊಡೆತಕ್ಕೆ (Heat Stroke) ಒಳಗಾಗುವವರಿಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಮತ್ತು ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ತುರ್ತು ಚಿಕಿತ್ಸೆಗಾಗಿ ವೈದ್ಯರು ಸನ್ನದ್ಧರಾಗಿದ್ದಾರೆ. ಮಧ್ಯಾಹ್ನದ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ. ಬಿಸಿ ಗಾಳಿಯ ಪ್ರಭಾವ ಇರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಸಚಿವರು ತಿಳಿಸಿದ್ದಾರೆ.ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸೂರ್ಯನ ಶಾಖ ವಿಪರೀತವಾಗಿದ್ದು, ಅಲ್ಲಿನ ಜನರು ಮನೆಯಿಂದ ಹೊರಬರುವಾಗ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಜಿಲ್ಲಾ ಆಸ್ಪತ್ರೆಗಳಲ್ಲಿ ಈಗಾಗಲೇ ಅಗತ್ಯ ಔಷಧಿ ಮತ್ತು ಚಿಕಿತ್ಸಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಹೈಟೆಕ್ ‘ಹೀಟ್ ಸ್ಟ್ರೋಕ್ ವಾರ್ಡ್’ ಸಜ್ಜು

ಜಿಲ್ಲೆಯಲ್ಲಿ ಸೂರ್ಯನ ತಾಪಮಾನ ಏರುತ್ತಲೇ ಇದ್ದು, ಪ್ರಸ್ತುತ 40 ರಿಂದ 41 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಈ ಬಿಸಿ ಗಾಳಿ ಮತ್ತು ಉಷ್ಣಾಘಾತದ (Heat Stroke) ಭೀತಿಯ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಿಸಿಲಿನ ಹೊಡೆತಕ್ಕೆ ಒಳಗಾಗುವವರಿಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ‘ಹೀಟ್ ಸ್ಟ್ರೋಕ್ ವಾರ್ಡ್’ ಅನ್ನು ಸಿದ್ಧಪಡಿಸಲಾಗಿದೆ. ಈ ವಾರ್ಡ್‌ನಲ್ಲಿ ಒಟ್ಟು 10 ಸುಸಜ್ಜಿತ ಬೆಡ್‌ಗಳಿದ್ದು, ಇವುಗಳನ್ನು ಐಸಿಯು (ICU) ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ವಿಶೇಷ ವಾರ್ಡ್‌ನ ನಿರ್ವಹಣೆಗಾಗಿ ಇಬ್ಬರು ನರ್ಸ್‌ಗಳು ಹಾಗೂ ಪ್ರತ್ಯೇಕ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ.

ನಿನ್ನೆಯಷ್ಟೇ ಆಸ್ಪತ್ರೆಯಲ್ಲಿ ಫ್ಯಾನ್ ಸೌಲಭ್ಯದ ಕೊರತೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾದ ಬೆನ್ನಲ್ಲೇ, ಆಸ್ಪತ್ರೆ ಅಧೀಕ್ಷಕರು ಎಚ್ಚೆತ್ತುಕೊಂಡು ಈ ತುರ್ತು ಚಿಕಿತ್ಸಾ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ ಜಿಲ್ಲಾ ಆಸ್ಪತ್ರೆಯ ಮುಖ್ಯ ಅಧೀಕ್ಷಕರಾದ ಡಾ. ಮಂಜುನಾಥ್ ಅವರು ಜನರಿಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಬೆಳಿಗ್ಗೆ 10 ಗಂಟೆಯ ನಂತರ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ. ಮಕ್ಕಳು ಮತ್ತು ವೃದ್ಧರು ಪ್ರತಿ ಒಂದು ಗಂಟೆಗೊಮ್ಮೆ ತಪ್ಪದೇ ನೀರು ಕುಡಿಯಬೇಕು. ಬಿಸಿ ಗಾಳಿಯ ಪ್ರಭಾವದಿಂದ ತಲೆಸುತ್ತು ಅಥವಾ ಸುಸ್ತು ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಲಿಸುತ್ತಿದ್ದ ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ – Kannada News | Jharkhand Youth Commits Suicide By Jumping In front of Tipper at Bengaluru, Caught on CCTV

ಬೆಂಗಳೂರು, (ಏಪ್ರಿಲ್ 21): ಚಲಿಸುತ್ತಿದ್ದ ಟಿಪ್ಪರ್​​ಗೆ ತಲೆಕೊಟ್ಟು ಯುವಕ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಕುಂಬಳಗೂಡು ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಾರ್ಖಂಡ್ (jharkhand )​ ಮೂಲದ ರಾಜು ಪಹರಿಯಾ ಆತ್ಮಹತ್ಯೆಗೆ ಶರಣು ಯುವಕ. ರಾಜು ಕೂಲಿ ಕೆಲಸಕ್ಕೆಂದು ಏಪ್ರಿಲ್ 11ರಂದು ಜಾರ್ಖಂಡ್​ನಿಂದ ಬೆಂಗಳೂರಿಗೆ ಬಂದಿದ್ದ. ಆದ್ರೆ, ಅದೇನಾಯ್ತೋ ಏನೋ ರಸ್ತೆ ಪಕ್ಕದಲ್ಲೇ ಕುಳಿತ್ತಿದ್ದ ರಾಜು, ಏಕಾಏಕಿ ಹೋಗಿ ಚಲಿಸುತ್ತಿದ್ದ ಟಿಪ್ಪರ್ ಕೆಳಗೆ ಬೆದ್ದಿದ್ದಾನೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Vastu Tips: ಮನೆಯ ಈಶಾನ್ಯ ಮೂಲೆಯಲ್ಲಿ ಮಾಡುವ ಸಣ್ಣ ಬದಲಾವಣೆ ನಿಮ್ಮ ಅದೃಷ್ಟವನ್ನೇ ಬದಲಾಯಿಸಲಿದೆ – Kannada News | North East Vastu Defects: Solutions for Financial Stability and Health in Your Home

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪ್ರತಿಯೊಂದು ಮೂಲೆಯೂ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಆರ್ಥಿಕ ಮುಗ್ಗಟ್ಟು, ಮನೆಯಲ್ಲಿ ಸದಾ ಜಗಳ ಅಥವಾ ಅನಾರೋಗ್ಯ ಸಮಸ್ಯೆಗಳಿಂದ ನೀವು ಬಳಲುತ್ತಿದ್ದೀರಾ? ಹಾಗಿದ್ದಲ್ಲಿ, ನಿಮ್ಮ ಮನೆಯ ಈಶಾನ್ಯ (North-East) ಮೂಲೆಯಲ್ಲಿ ವಾಸ್ತು ದೋಷವಿರಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಈಶಾನ್ಯವು ಕೇವಲ ಒಂದು ದಿಕ್ಕಲ್ಲ, ಅದು ‘ದೈವಿಕ ಮೂಲೆ’. ಇಲ್ಲಿ ಮಾಡುವ ಸಣ್ಣ ಬದಲಾವಣೆಗಳು ನಿಮ್ಮ ಹಣೆಬರಹವನ್ನೇ ಬದಲಿಸುವ ಶಕ್ತಿ ಹೊಂದಿವೆ.

ಈಶಾನ್ಯ ದೇವತೆಗಳ ವಾಸಸ್ಥಾನ:

ಮನೆಯ ಈಶಾನ್ಯ ದಿಕ್ಕು ಅತ್ಯಂತ ಪವಿತ್ರವಾದದ್ದು. ಇದನ್ನು ಸಕಾರಾತ್ಮಕ ಶಕ್ತಿಯ ದ್ವಾರವೆಂದು ಪರಿಗಣಿಸಲಾಗುತ್ತದೆ. ಈ ಮೂಲೆಯು ಎಷ್ಟು ಪವಿತ್ರ ಮತ್ತು ಶಾಂತವಾಗಿರುತ್ತದೆಯೋ, ಅಷ್ಟೇ ವೇಗವಾಗಿ ಮಹಾಲಕ್ಷ್ಮಿಯ ಕೃಪೆ ನಿಮ್ಮ ಮನೆಯ ಮೇಲೆ ಉಂಟಾಗುತ್ತದೆ.

ಭಾರವಾದ ವಸ್ತುಗಳಿಂದ ಮುಕ್ತಿ ನೀಡಿ:

ಅನೇಕರು ತಿಳಿಯದೇ ಹಳೆಯ ಪೀಠೋಪಕರಣಗಳು, ಕಬ್ಬಿಣದ ಸಾಮಾನುಗಳು ಅಥವಾ ಭಾರವಾದ ಕಪಾಟುಗಳನ್ನು ಈಶಾನ್ಯ ಮೂಲೆಯಲ್ಲಿ ಇಡುತ್ತಾರೆ. ಈಶಾನ್ಯವು ಯಾವಾಗಲೂ ಹಗುರವಾಗಿ ಮತ್ತು ಖಾಲಿಯಾಗಿರಬೇಕು. ಇಲ್ಲಿ ಭಾರವಾದ ವಸ್ತುಗಳನ್ನು ಇಡುವುದರಿಂದ ಪ್ರಗತಿ ಕುಂಠಿತವಾಗುತ್ತದೆ. ಈ ಜಾಗದಲ್ಲಿ ಕಸ ಅಥವಾ ಧೂಳು ಜಮೆಯಾಗದಂತೆ ನಿರಂತರವಾಗಿ ಸ್ವಚ್ಛಗೊಳಿಸಿ.

ಪೂಜಾ ಮಂದಿರ:

ಮನೆಯ ಈಶಾನ್ಯ ಮೂಲೆಯಲ್ಲಿ ದೇವಸ್ಥಾನ ಅಥವಾ ಪೂಜಾ ಕೊಠಡಿ ಇರುವುದು ಅತ್ಯಂತ ಶುಭದಾಯಕ. ಪ್ರತಿದಿನ ಇಲ್ಲಿ ದೀಪ ಹಚ್ಚಿ, ಸುಗಂಧ ದ್ರವ್ಯಗಳನ್ನು ಬಳಸುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದು ಕುಟುಂಬದ ಸದಸ್ಯರಲ್ಲಿ ಧನಾತ್ಮಕ ಚಿಂತನೆ ಮತ್ತು ವೃತ್ತಿಜೀವನದಲ್ಲಿ ಪ್ರಗತಿಯನ್ನು ತರುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ನೀರಿನ ಅಂಶ, ಹಣದ ಹರಿವಿಗೆ ದಾರಿ:

ಈಶಾನ್ಯ ದಿಕ್ಕು ನೀರಿನ ಅಂಶಕ್ಕೆ (Water Element) ಸಂಬಂಧಿಸಿದೆ. ಈ ದಿಕ್ಕಿನಲ್ಲಿ ನೀರಿನ ಮೂಲವಿದ್ದರೆ ಸಂಪತ್ತು ಆಕರ್ಷಿತವಾಗುತ್ತದೆ. ಒಂದು ಸಣ್ಣ ನೀರಿನ ಕಾರಂಜಿ, ಅಕ್ವೇರಿಯಂ ಅಥವಾ ಕನಿಷ್ಠ ಪಕ್ಷ ಒಂದು ಪಾತ್ರೆಯಲ್ಲಿ ಶುದ್ಧವಾದ ನೀರನ್ನು ಇರಿಸಿ. ಇದು ಮನೆಯಲ್ಲಿ ಹಣದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಬೆಳಕು, ಗಾಳಿ ಮತ್ತು ಬಣ್ಣಗಳ ಸಂಯೋಜನೆ:

ಈಶಾನ್ಯ ಮೂಲೆಯ ಕೋಣೆಗಳು ಕತ್ತಲೆಯಿಂದ ಕೂಡಿರಬಾರದು. ಈ ಭಾಗದಲ್ಲಿ ತಿಳಿ ಬಣ್ಣಗಳನ್ನು (ಉದಾಹರಣೆಗೆ ತಿಳಿ ನೀಲಿ ಅಥವಾ ಬಿಳಿ) ಬಳಸುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಈ ಮೂಲೆಯಲ್ಲಿ ಕಿಟಕಿಗಳಿದ್ದರೆ ನೈಸರ್ಗಿಕ ಬೆಳಕು ಮತ್ತು ಗಾಳಿ ಸಂಚರಿಸಿ ವಾತಾವರಣವನ್ನು ಆಹ್ಲಾದಕರವಾಗಿಸುತ್ತದೆ. ಕತ್ತಲೆಯಾದ ಈಶಾನ್ಯವು ಮಾನಸಿಕ ಆತಂಕಕ್ಕೆ ಕಾರಣವಾಗಬಹುದು, ಆದ್ದರಿಂದ ಇಲ್ಲಿ ಸದಾ ಬೆಳಕಿರುವಂತೆ ನೋಡಿಕೊಳ್ಳಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾರ್ಚ್​ನಲ್ಲಿ ಪ್ರಮುಖ ವಲಯಗಳ ಉತ್ಪಾದನೆಯಲ್ಲಿ ಕುಸಿತ; ಆರ್ಥಿಕ ವರ್ಷದ ಒಟ್ಟಾರೆ ಬೆಳವಣಿಗೆ ಶೇ. 2.6ಕ್ಕೆ ಇಳಿಕೆ – Kannada News | India’s core sectors output slowdown, as March month growth contracts

ನವದೆಹಲಿ, ಏಪ್ರಿಲ್ 21: ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ ಎಂಟು ಪ್ರಮುಖ ವಲಯಗಳ (Core Sector) ಉತ್ಪಾದನೆಯು 2026ರ ಮಾರ್ಚ್‌ನಲ್ಲಿ ಕುಸಿತ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಈ ವಲಯಗಳು ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (IIP) ಒಟ್ಟು ತೂಕದ ಸುಮಾರು ಶೇ. 40.27 ರಷ್ಟು ಪಾಲನ್ನು ಹೊಂದಿರುವುದರಿಂದ, ಇಲ್ಲಿನ ಕುಸಿತವು ದೇಶದ ಒಟ್ಟಾರೆ ಆರ್ಥಿಕ ಪ್ರಗತಿಯ ಮೇಲೆ ನೇರ ಪರಿಣಾಮ ಬೀರುತ್ತದೆ.

ಭಾರಿ ಕುಸಿತ ಕಂಡ ವಲಯಗಳು:

  • ರಸಗೊಬ್ಬರ (Fertilizer): ಅತಿ ಹೆಚ್ಚು ಅಂದರೆ ಶೇ. 24.6 ರಷ್ಟು ಭಾರಿ ಕುಸಿತ ಕಂಡಿದೆ. ಇದು ಕೃಷಿ ವಲಯದ ಮೇಲೆ ಮುಂದಿನ ದಿನಗಳಲ್ಲಿ ಪರಿಣಾಮ ಬೀರಬಹುದು.
  • ಕಚ್ಚಾ ತೈಲ (Crude Oil): ಶೇ. 5.7 ರಷ್ಟು ಇಳಿಕೆಯಾಗಿದೆ. ಇದು ಸತತವಾಗಿ ಇಳಿಮುಖವಾಗುತ್ತಿರುವುದು ದೇಶದ ಆಮದು ವೆಚ್ಚವನ್ನು ಹೆಚ್ಚಿಸುವ ಸಾಧ್ಯತೆ ಇದೆ.
  • ಕಲ್ಲಿದ್ದಲು ಮತ್ತು ವಿದ್ಯುತ್: ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇ. 4.0 ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ಶೇ. 0.5 ರಷ್ಟು ಇಳಿಕೆಯಾಗಿದೆ. ಕೈಗಾರಿಕೆಗಳಿಗೆ ಬೇಕಾದ ಇಂಧನ ಮತ್ತು ಶಕ್ತಿಯ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದನ್ನು ಇದು ತೋರಿಸುತ್ತದೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಚೀನಾಕ್ಕೆ ಟಕ್ಕರ್ ಕೊಡಲು ಭಾರತದ ಮಾಸ್ಟರ್ ಪ್ಲಾನ್: ಬರಲಿದೆ ಬೃಹತ್ ತೈಲ ಪೈಪ್‌ಲೈನ್

ಚೇತರಿಕೆ ಕಂಡ ವಲಯಗಳು

  • ನೈಸರ್ಗಿಕ ಅನಿಲ (Natural Gas): ಶೇ. 6.4 ರಷ್ಟು ಉತ್ತಮ ಬೆಳವಣಿಗೆ ದಾಖಲಿಸಿದೆ.
  • ಸಿಮೆಂಟ್ ಮತ್ತು ಉಕ್ಕು: ಮೂಲಸೌಕರ್ಯ ವಲಯಕ್ಕೆ ಪೂರಕವಾದ ಸಿಮೆಂಟ್ (ಶೇ. 4.0) ಮತ್ತು ಉಕ್ಕು (ಶೇ. 2.2) ಉತ್ಪಾದನೆಯಲ್ಲಿ ಅಲ್ಪ ಪ್ರಗತಿ ಕಂಡುಬಂದಿದೆ.

ಐದು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಪ್ರಗತಿ

2025-26ರ ಇಡೀ ಆರ್ಥಿಕ ವರ್ಷದಲ್ಲಿ ಎಂಟು ಪ್ರಮುಖ ವಲಯಗಳ ಒಟ್ಟೂ ಬೆಳವಣಿಗೆಯ ದರವು ಶೇ. 2.6 ಕ್ಕೆ ಇಳಿದಿದೆ. ಇದು 2024-25ರಲ್ಲಿದ್ದ ಶೇ. 4.5 ಕ್ಕೆ ಹೋಲಿಸಿದರೆ ಗಮನಾರ್ಹ ಕುಸಿತವಾಗಿದೆ. ಕೊನೆಯ ಬಾರಿಗೆ ಇಷ್ಟು ಕಡಿಮೆ ಮಟ್ಟದ ಪ್ರಗತಿಯು ಕಳೆದ ಐದು ವರ್ಷಗಳ ಹಿಂದೆ ದಾಖಲಾಗಿತ್ತು.

ಕುಸಿತಕ್ಕೆ ಪ್ರಮುಖ ಕಾರಣಗಳು

ಪಶ್ಚಿಮ ಏಷ್ಯಾದಲ್ಲಿ (Middle East) ನಡೆಯುತ್ತಿರುವ ಭೌಗೋಳಿಕ ರಾಜಕೀಯ ಸಂಘರ್ಷಗಳಿಂದಾಗಿ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಒಂದು ಕಾರಣವಾಗಿದೆ. ಅನೇಕ ಕೈಗಾರಿಕೆಗಳು ಉತ್ಪಾದನೆಗೆ ಬೇಕಾದ ಅಗತ್ಯ ಕಚ್ಚಾ ವಸ್ತುಗಳ ಕೊರತೆಯನ್ನು ಎದುರಿಸುತ್ತಿವೆ. ಮತ್ತೊಂದು ಕಾರಣವೆಂದರೆ, ಜಾಗತಿಕ ಮತ್ತು ಸ್ಥಳೀಯ ಮಾರುಕಟ್ಟೆಗಳಲ್ಲಿನ ಕೆಲವು ಉತ್ಪನ್ನಗಳಿಗೆ ಬೇಡಿಕೆ ತಗ್ಗಿರುವುದು ಕೂಡ ಉತ್ಪಾದನೆಯ ಮೇಲೆ ಪರಿಣಾಮ ಬೀರಿರುವುದು.

ಇದನ್ನೂ ಓದಿ: ಅಮೆರಿಕ ಇತಿಹಾಸದ ಅತಿದೊಡ್ಡ ರೀಫಂಡ್: ಟ್ರಂಪ್ ಸುಂಕದ ಹಣ ಇಂದಿನಿಂದ ವಾಪಸ್

ಕೋರ್ ಸೆಕ್ಟರ್‌ನಲ್ಲಿನ ಈ ನಕಾರಾತ್ಮಕ ಬೆಳವಣಿಗೆಯು ಮುಂಬರುವ ತಿಂಗಳುಗಳಲ್ಲಿ ದೇಶದ ಜಿಡಿಪಿ ಮತ್ತು ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (IIP) ದತ್ತಾಂಶಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ಸರ್ಕಾರದ ಮೂಲಸೌಕರ್ಯ ಯೋಜನೆಗಳು ವೇಗ ಪಡೆದರೆ ಮಾತ್ರ ಮುಂದಿನ ದಿನಗಳಲ್ಲಿ ಈ ವಲಯಗಳು ಚೇತರಿಸಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೊಟ್ಟ ಮಾತು ಉಳಿಸಿಕೊಂಡ ಕಾಂಗ್ರೆಸ್​​: ಆಕ್ಸಿಜನ್​​ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ – Kannada News | Siddaramaiah Govt Fulfils Promise: Jobs for Families of Chamarajanagar Oxygen Tragedy Victims

ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ ವಿತರಣೆImage Credit source: Tv9 Kannada

ಚಾಮರಾಜನಗರ, ಏಪ್ರಿಲ್​​ 21: ಕೊರೊನಾ ಎರಡನೇ ಅಲೆಯ ಸಂದರ್ಭ 2021ರ ಮೇ 2ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಹಲವು ರೋಗಿಗಳು ಪ್ರಾಣ ಕಳೆದುಕೊಂಡಿದ್ದರು. ಈ ಸಂಬಂಧ ಸಂತ್ರಸ್ತ ಕುಟುಂಬಗಳಿಗೆ ಕೊಟ್ಟ ಮಾತನ್ನು ರಾಜ್ಯ ಕಾಂಗ್ರೆಸ್​​ ಉಳಿಸಿಕೊಂಡಿದು, ಸಿದ್ದರಾಮಯ್ಯ ನೆತೃತ್ವದ ರಾಜ್ಯ ಸರ್ಕಾರ 25 ಮಂದಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ ವಿತರಣೆ ಮಾಡಿದೆ. ಗುಂಡ್ಲುಪೇಟೆಯ ದೇವರಾಜ್ ಅರಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​​ ನೇಮಕಾತಿ ಪತ್ರ ವಿತರಿಸಿದ್ದಾರೆ.

ಭಾರತ್ ಜೋಡೋ ಯಾತ್ರೆ ವೇಳೆ ಸಂತ್ರಸ್ತ ಕುಟುಂಬಗಳ ಸದಸ್ಯರಿಗೆ ಸರ್ಕಾರಿ ಉದ್ಯೋಗದ ನೀಡುವ ಭರವಸೆಯನ್ನು ಕಾಂಗ್ರೆಸ್​​ ನಾಯಕ ರಾಹುಲ್​​ ಗಾಂಧಿ ನೀಡಿದ್ದರು. ಅದರಂತೆ ಸಂತ್ರಸ್ತ ಕುಟುಂಬಗಳ 25 ಮಂದಿಗೆ ಚಾಮರಾಜನಗರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಖಾಯಂ ನೌಕರಿಯನ್ನು ರಾಜ್ಯ ಸರ್ಕಾರ ನೀಡಿದೆ. ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಬ್ಬರದ ಸಂದರ್ಭ, ಕೋವಿಡ್​​ ಎರಡನೇ ಅಲೆಯ ವೇಳೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಬಾರಿ ದುರಂತವೊಂದು ನಡೆದಿತ್ತು. ಆಮ್ಲಜನಕದ ಕೊರತೆಯಿಂದಾಗಿ ಒಟ್ಟು 36 ಮಂದಿ ಪ್ರಾಣಕಳೆದುಕೊಂಡಿದ್ದು, ಈ ವಿಚಾರ ದೇಶಾದ್ಯಂತ ಸುದ್ದಿಯಾಗಿತ್ತು. ಈ ಪೈಕಿ 21 ಸಂತ್ರಸ್ತ ಕುಟುಂಬಗಳು ಸರ್ಕಾರಿ ಉದ್ಯೋಗಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಮೃತಪಟ್ಟ ಕುಟುಂಬದವರಿಗೆ ಸರ್ಕಾರಿ ನೌಕರಿ ಭರವಸೆಯನ್ನುವಿರೋಧ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್​​ ನೀಡಿದ್ದರು. ಆ ವೇಳೆ ತಲಾ ಒಂದು‌ ಲಕ್ಷ ರೂ‌. ಪರಿಹಾರ ನೀಡುವುದರ ಜೊತೆಗೆ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದಾಗಿಯೂ ಆಶ್ವಾಸನೆ ನೀಡಲಾಗಿತ್ತು.

ಇದನ್ನೂ ಓದಿ: ಪ್ರೇಯಸಿಯನ್ನ ಅಜ್ಜನ ಮನೆಗೆ ಕರೆದೊಯ್ದು ಪ್ರಿಯಕರ; ಮುಂದಾಗಿದ್ದು ಘನಘೋರ!

ಸುದೀರ್ಘ ಹೋರಾಟ

ಘಟನೆಯ ಬಳಿಕ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗಬೇಕೆಂಬ ನಿಟ್ಟಿನಲ್ಲಿ ಅಂದಿನಿಂದಲೂ ಹೋರಾಟಗಳು ನಡೆದುಕೊಂಡು ಬಂದಿದ್ದವು. ಅಂತಿಮವಾಗಿ ಇವರ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ 25 ಮಂದಿಗೆ ಸರ್ಕಾರಿ ನೌಕರಿಯನ್ನು ನೀಡಿದೆ. ಕುಟುಂಬದ ಸದಸ್ಯರನ್ನು ಕಳೆದುಕೊಂಡು ಕಂಗಾಲಾಗಿದ್ದವರ ಬಾಳಲ್ಲಿ ಸರ್ಕಾರದ ಈ ನಿರ್ಧಾರ ಹೊಸ ಅಶಾಕಿರಣ ಮೂಡಿಸಿದ್ದು, ಸಂತ್ರಸ್ತ ಕುಟುಂಬಗಳ ಸುದೀರ್ಘ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸ್ಟಾರ್ ಆಟಗಾರರಿಗೆ ವಿಶ್ರಾಂತಿ: ಟೀಮ್ ಇಂಡಿಯಾಗೆ ಹೊಸ ನಾಯಕ! – Kannada News | India to Test Bench Strength Against Afghanistan

India vs Afghanistan: ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ದೊಡ್ಡ ಬದಲಾವಣೆಗಳಾಗುವ ಸಾಧ್ಯತೆಯಿದೆ. ಸತತ ಕ್ರಿಕೆಟ್ ಪಂದ್ಯಗಳ ಒತ್ತಡ ಮತ್ತು ಕಾರ್ಯಭಾರ ನಿರ್ವಹಣೆಯ ಹಿನ್ನೆಲೆಯಲ್ಲಿ, ಟೀಮ್ ಇಂಡಿಯಾದ ಸ್ಟಾರ್ ಆಟಗಾರರಿಗೆ ಬಿಸಿಸಿಐ ವಿಶ್ರಾಂತಿ ನೀಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ವಿಶ್ರಾಂತಿಗೆ ಪ್ರಮುಖ ಕಾರಣಗಳು:

  • ಐಪಿಎಲ್ 2026ರ ಒತ್ತಡ: ಐಪಿಎಲ್ ಫೈನಲ್ ಪಂದ್ಯವು ಮೇ 31 ರಂದು ನಡೆಯಲಿದ್ದು, ಜೂನ್ 6 ರಿಂದ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಆಟಗಾರರಿಗೆ ಚೇತರಿಸಿಕೊಳ್ಳಲು ಕೇವಲ 5 ದಿನಗಳ ಕಾಲಾವಕಾಶ ಮಾತ್ರ ಇರಲಿದೆ. ಹೀಗಾಗಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ.
  • WTC ಅಂಕಪಟ್ಟಿಗೆ ಸೇರಿಲ್ಲ: ಈ ಟೆಸ್ಟ್ ಪಂದ್ಯವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (2025-27) ಭಾಗವಾಗಿಲ್ಲ. ಆದ್ದರಿಂದ, ಈ ಪಂದ್ಯದ ಫಲಿತಾಂಶವು ಭಾರತದ ಫೈನಲ್ ಹಾದಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
  • ಮುಂದಿನ ಸರಣಿಗಳ ಸಿದ್ಧತೆ: ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಮುಗಿದ ತಕ್ಷಣ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ನಂತರ ಇಂಗ್ಲೆಂಡ್ ಪ್ರವಾಸವಿರುವುದರಿಂದ ಪ್ರಮುಖ ಆಟಗಾರರ ಫಿಟ್​ನೆಸ್​ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ.

ಈ ಎಲ್ಲಾ ಕಾರಣಗಳಿಂದಾಗಿ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯಿಂದ ಟೀಮ್ ಇಂಡಿಯಾದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ವಿಶ್ರಾಂತಿ ಪಡೆಯಲಿರುವ ಸಂಭಾವ್ಯ ಆಟಗಾರರು:

ಭಾರತ ಟೆಸ್ಟ್ ತಂಡದ ನಾಯಕ ಶುಭ್​ಮನ್ ಗಿಲ್, ವೇಗಾಸ್ತ್ರ ಜಸ್​​ಪ್ರೀತ್ ಬುಮ್ರಾ, ಅನುಭವಿ ಆಲ್​ರೌಂಡರ್ ರವೀಂದ್ರ ಜಡೇಜಾ ಮತ್ತು ಕೆ.ಎಲ್. ರಾಹುಲ್ ಅವರಿಗೆ ಈ ಪಂದ್ಯದಿಂದ ವಿಶ್ರಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ. ಇವರೊಂದಿಗೆ ಮತ್ತಷ್ಟು ಆಟಗಾರರ ಹೆಸರು ಕೂಡ ಸೇರ್ಪಡೆಯಾಗುವ ಸಾಧ್ಯತೆಯಿದೆ.  ಇನ್ನು ಟೆಸ್ಟ್ ಪಂದ್ಯದ ವೇಳೆ ವಿಶ್ರಾಂತಿ ಪಡೆಯುವ ಆಟಗಾರರು ನಂತರ ನಡೆಯುವ ಏಕದಿನ ಸರಣಿಗೆ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.

ಹೊಸ ನಾಯಕ ಯಾರು?

ಒಂದು ವೇಳೆ ಶುಭ್​ಮನ್ ಗಿಲ್ ವಿಶ್ರಾಂತಿ ಪಡೆದರೆ ಹಿರಿಯ ಆಟಗಾರರಲ್ಲಿ ಯಾರಾದರೂ ತಂಡದ ನಾಯಕರಾಗಿ ಕಾಣಿಸಿಕೊಳ್ಳಬಹುದು. ಅಂದರೆ ಅಫ್ಘಾನ್ ವಿರುದ್ಧದ ಟೆಸ್ಟ್​ನಲ್ಲಿ ಭಾರತ ತಂಡವನ್ನು ಹೊಸ ನಾಯಕ ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ. ಇನ್ನು ಈ ಸರಣಿಗೆ ಯುವ ಆಟಗಾರರಾದ ಅಭಿಮನ್ಯು ಈಶ್ವರನ್ ಮತ್ತು ಸಾಯಿ ಸುದರ್ಶನ್​ ಆಯ್ಕೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಭಾರತ vs ಅಫ್ಘಾನಿಸ್ತಾನ್ ಸರಣಿ ವೇಳಾಪಟ್ಟಿ:

  • ಜೂನ್ 6 – 10: ಏಕೈಕ ಟೆಸ್ಟ್ (ಮುಲ್ಲನ್‌ಪುರ)
  • ಜೂನ್ 14: ಮೊದಲ ಏಕದಿನ ಪಂದ್ಯ (ಧರ್ಮಶಾಲಾ)
  • ಜೂನ್ 17: ಎರಡನೇ ಏಕದಿನ ಪಂದ್ಯ (ಲಕ್ನೋ)
  • ಜೂನ್ 20: ಮೂರನೇ ಏಕದಿನ ಪಂದ್ಯ (ಚೆನ್ನೈ)

ಇದನ್ನೂ ಓದಿ: ಪಾಕಿಸ್ತಾನ್ ಸೂಪರ್ ಲೀಗ್​ನಿಂದ ಮೂವರು ಐಪಿಎಲ್ ಆಟಗಾರರು ಬ್ಯಾನ್..!

ಈ ಸರಣಿಯ ಬಳಿಕ ಟೀಮ್ ಇಂಡಿಯಾ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಸರಣಿ ಆಡಲಿದೆ. ಅದಕ್ಕೂ ಮುನ್ನ ಭಾರತದ ‘ಬೆಂಚ್ ಸ್ಟ್ರೆಂತ್’ ಪರೀಕ್ಷಿಸಲು ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ. ಹೀಗಾಗಿ ಅಫ್ಘಾನಿಸ್ತಾನ್ ಸರಣಿಯಲ್ಲಿ ಒಂದಷ್ಟು ಹೊಸ ಮುಖಗಳು ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Published On – 12:55 pm, Tue, 21 April 26

Source link

ತಿಲಕ್ ವರ್ಮಾ ಮೇಲೆ ಪಾಂಡ್ಯ ಗರಂ? ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! – Kannada News | Viral Moments: Hardik Pandya’s High Voltage Pep Talk to Tilak Varma

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 30ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಅಮೋಘ ಗೆಲುವು ದಾಖಲಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ತಿಲಕ್ ವರ್ಮಾ (101) ಅಜೇಯ ಶತಕ ಸಿಡಿಸಿದ್ದರು. ಈ ಶತಕದ ನೆರವಿನೊಂದಿಗೆ ಮುಂಬೈ ಇಂಡಿಯನ್ಸ್​ 20 ಓವರ್​ಗಳಲ್ಲಿ 199 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಕೇವಲ 100 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು 99 ರನ್​ಗಳ ಭರ್ಜರಿ ಜಯ ಸಾಧಿಸಿತು.

ಈ ಗೆಲುವಿನ ಬಳಿಕ ಮೈದಾನದಲ್ಲಿ ನಡೆದ ಒಂದು ಸನ್ನಿವೇಶದ ವಿಡಿಯೋ ಭಾರೀ ವೈರಲ್ ಆಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಬ್ಯಾಟರ್ ತಿಲಕ್ ವರ್ಮಾ ಅವರ ಮೇಲೆ ರೇಗಿದ್ದಾರೆ ಎಂದು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ.

ಏನಿದು ಘಟನೆ?

ಈ ಪಂದ್ಯದ ನಡುವೆ ಸ್ಟ್ರಾಟಜಿಕ್ ಟೈಮ್‌ಔಟ್ ಸಮಯದಲ್ಲಿ ಈ ಘಟನೆ ನಡೆದಿದೆ. ತಿಲಕ್ ವರ್ಮಾ ಆರಂಭದಲ್ಲಿ ರನ್ ಗಳಿಸಲು ಪರದಾಡುತ್ತಿದ್ದರು (22 ಎಸೆತಗಳಲ್ಲಿ 19 ರನ್). ಈ ವೇಳೆ ಮೈದಾನಕ್ಕೆ ಬಂದ ನಾಯಕ ಹಾರ್ದಿಕ್ ಪಾಂಡ್ಯ, ತಿಲಕ್ ಅವರತ್ತ ಕೈ ಸನ್ನೆಯೊಂದಿಗೆ ಜೋರಾಗಿ ಏನನ್ನೋ ಹೇಳುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನು ಕಂಡ ಅಭಿಮಾನಿಗಳು ಹಾರ್ದಿಕ್ ತನ್ನದೇ ಆಟಗಾರನ ಮೇಲೆ ಕೋಪಗೊಂಡಿದ್ದಾರೆ ಎಂದು ಭಾವಿಸಿದ್ದರು.

ಹಾರ್ದಿಕ್ ಪಾಂಡ್ಯ ಸ್ಪಷ್ಟನೆ:

ಈ ಪಂದ್ಯದ ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ ಹಾರ್ದಿಕ್ ಪಾಂಡ್ಯ, “ನಾನು ಅವರ ಮೇಲೆ ರೇಗುತ್ತಿರಲಿಲ್ಲ, ಅದು ಪ್ರೇರೇಪಿಸುವ ಮಾತುಗಳಷ್ಟೇ. ‘ನೀನು ಇದನ್ನು ಮಾಡಬಲ್ಲೆ, ನೀನು ಗೆಲ್ಲಿಸಿ ತೋರಿಸುತ್ತೀಯಾ!’ ಎಂದು ಅವರನ್ನು ಹುರಿದುಂಬಿಸಿದ್ದೆ” ಎಂದಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ತಿಲಕ್ ವರ್ಮಾ ಕೂಡ ಹಾರ್ದಿಕ್ ಪಾಂಡ್ಯ ತನ್ನ ಹುರಿದುಂಬಿಸಿದ್ದರು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ನಾಯಕ ರಣ ಉತ್ಸಾಹದಲ್ಲಿದ್ದರು. ಹೀಗಾಗಿ ನಾನು ಅವರಿಗೆ ಸ್ವಲ್ಪ ಶಾಂತರಾಗಿ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.

ಕೆಲಸ ಮಾಡಿದ “ಪೆಪ್ ಟಾಕ್”:

ತಿಲಕ್ ವರ್ಮಾ ಅವರನ್ನು ಹುರಿದುಂಬಿಸಿದ ಬೆನ್ನಲ್ಲೇ ಟೈಮ್‌ಔಟ್ ಬಳಿಕ ಅಬ್ಬರಿಸಿದ ತಿಲಕ್ ವರ್ಮಾ, ಕೇವಲ 45 ಎಸೆತಗಳಲ್ಲಿ ತಮ್ಮ ಚೊಚ್ಚಲ ಐಪಿಎಲ್ ಶತಕ (101* ರನ್) ಸಿಡಿಸಿದರು. ಇವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ 99 ರನ್‌ಗಳ ಬೃಹತ್ ಜಯ ದಾಖಲಿಸಲು ಸಾಧ್ಯವಾಯಿತು.

ಇದನ್ನೂ ಓದಿ: ವಿರಾಟ್ ಕೊಹ್ಲಿಗಾಗಿ ಬ್ಯಾಟ್ ಹಿಡಿಯಲಿದ್ದಾರೆ ನೊವಾಕ್ ಜೋಕೊವಿಚ್!

ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಏಳನೇ ಸ್ಥಾನಕ್ಕೇರಿದೆ. ಅಲ್ಲದೆ ಒಟ್ಟು 4 ಅಂಕಗಳೊಂದಿಗೆ ಪ್ಲೇಆಫ್ ರೇಸ್ ಆಸೆಯನ್ನು ಜೀವಂತವಿರಿಸಿಕೊಂಡಿದೆ.

Source link

ಕುಮಾರಸ್ವಾಮಿ ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು ನೋಡಿ!

ಬೆಂಗಳೂರು, ಏಪ್ರಿಲ್ 21: ಸಚಿವ ಜಮೀರ್ ಅಹ್ಮದ್ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಜತೆ ರಹಸ್ಯವಾಗಿ ಮಾತುಕತೆ ನಡೆಸಿದ್ದು, ಜೆಡಿಎಸ್ ಸೇರ್ಪಡೆ ಬಗ್ಗೆ ಚರ್ಚಿಸಿದ್ದಾರೆ ಎಂಬ ವದಂತಿಗಳ ಬಗ್ಗೆ ಇದೀಗ ಸ್ಪಷ್ಟನೆ ದೊರೆತಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್ ಖಾನ್, ಅವೆಲ್ಲ ಬರೀ ಊಹಾಪೋಹ ಅಷ್ಟೆ. ನಾನ್ಯಾಕೆ ಜೆಡಿಎಸ್ ಸೇರಬೇಕು? ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ ಎಂದಿದ್ದಾರೆ. ನಾನು 2017ರಲ್ಲಿ ಕಾಂಗ್ರೆಸ್‌ಗೆ ಬಂದೆ. 2018ರಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗಲೂ ನಾನು ಮಂತ್ರಿಯಾಗುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ, ಪಕ್ಷ ನನಗೆ ಐದು ಖಾತೆಗಳ ಹೊಣೆ ನೀಡಿ ಸಚಿವನನ್ನಾಗಿ ಮಾಡಿತು. ವಕ್ಫ್, ಹಜ್, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ಖಾತೆಗಳನ್ನು ನೀಡಿತು. 2023ರಲ್ಲಿಯೂ ತಮಗೆ ನಾಲ್ಕು ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಹೀಗಿದ್ದಾಗ ಕಾಂಗ್ರೆಸ್ ಯಾಕೆ ತ್ಯಜಿಸಲಿ ಎಂದು ಪ್ರಶ್ನಿಸಿದರು.

ತನ್ನಗಿಂತ ಹಿರಿಯರಾದ ರೋಷನ್ ಬೇಗ್ (ಏಳು ಬಾರಿ ಶಾಸಕ), ತನ್ವೀರ್ ಸೇಠ್ (ಐದು ಬಾರಿ ಶಾಸಕ) ಮತ್ತು ಹ್ಯಾರಿಸ್ (ಮೂರು-ನಾಲ್ಕು ಬಾರಿ ಶಾಸಕ) ಅವರಂತಹ ನಾಯಕರು ಪಕ್ಷದಲ್ಲಿರುವಾಗಲೂ ಕಾಂಗ್ರೆಸ್ ತಮಗೆ ಅವಕಾಶ ನೀಡಿದೆ. ಪಕ್ಷ ನನಗೆ ಎರಡು ಬಾರಿ ಮಂತ್ರಿ ಸ್ಥಾನ ನೀಡಿದ್ದು, ಅದಕ್ಕಿಂತ ಹೆಚ್ಚಿನದೇನು ಬೇಕು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಕುಮಾರಸ್ವಾಮಿ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link