ಎನ್​ಟಿಆರ್-ನೀಲ್ ಸಿನಿಮಾ ರಿಲೀಸ್ ದಿನಾಂಕ ಘೋಷಣೆ; ಅಭಿಮಾನಿಗಳಿಗೆ ಬೇಸರ – Kannada News | NTR Prashanth Neel Film Release Date Revealed: Releasing on Jun 11 2027

ಜೂನಿಯರ್ ಎನ್​​ಟಿಆರ್ ಹಾಗೂ ಪ್ರಶಾಂತ್ ನೀಲ್ (Prashant Neel) ಸಿನಿಮಾ ಘೋಷಣೆ ಆಗಿದ್ದು ಕೆಲವು ವರ್ಷಗಳ ಹಿಂದೆ. ಆ ಬಳಿಕ, ಸಿನಿಮಾ ಸೆಟ್ಟೇರಲು ಬಹಳ ಸಯಮ ತೆಗೆದುಕೊಂಡಿತು. ಈ ಚಿತ್ರದ ಶೂಟಿಂಗ್ ಆರಂಭ ಆಗಿ ಸಾಕಷ್ಟು ಸಮಯ ಕಳೆದಿದೆ. ಆದರೆ, ಈವರೆಗೆ ಸಿನಿಮಾದ ರಿಲೀಸ್ ದಿನಾಂಕ ಹಾಗೂ ಟೈಟಲ್ ರಿವೀಲ್ ಆಗಿರಲಿಲ್ಲ. ಈಗ ಈ ಚಿತ್ರದ ಬಿಡುಗಡೆ ದಿನಾಂಕವನ್ನು ತಂಡ ಘೋಷಣೆ ಮಾಡಿದೆ. ಈ ಇತ್ರ ಜೂನ್ 11ರಂದು ತೆರೆಗೆ ಬರಲಿದೆ! ಈ ಸಿನಿಮಾಗೆ ಟೈಟಲ್ ಇನ್ನೂ ರಿವೀಲ್ ಆಗಿಲ್ಲ.

ಜೂನ್ 4ರಂದು ‘ಟಾಕ್ಸಿಕ್’ ರಿಲೀಸ್ ಆಗುತ್ತಿದೆ. ಜೂನ್ 11ರಂದು ‘ಎನ್​​ಟಿಆರ್​ನೀಲ್’ ಸಿನಿಮಾ ಬರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮದೇ? ಅದಕ್ಕೆ ಉತ್ತರ ಇದೆ. ಎನ್​​ಟಿಆರ್ ನೀಲ್ ಚಿತ್ರ ಈ ವರ್ಷ ಅಲ್ಲ, ಅದು ತೆರೆಗೆ ಬರುತ್ತಿರುವುದು 2027ರ ಜೂನ್ 11ರಂದು. ಅಂದರೆ ಒಂದು ವರ್ಷಗಳಿಗೂ ಅಧಿಕ ಕಾಲ ಈ ಸಿನಿಮಾಗಾಗಿ ಅಭಿಮಾನಿಗಳಿಗೆ ಕಾಯಬೇಕು. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.

ಪ್ರಶಾಂತ್ ನೀಲ್ ಅವರ ಸಿನಿಮಾ ಶೂಟ್ 2025ರಲ್ಲೇ ಆರಂಭ ಆಗಿದೆ. ವಿವಿಧ ಹಂತಗಳಲ್ಲಿ ಸಿನಿಮಾದ ಶೂಟ್ ಮಾಡಲಾಗಿದೆ. ವಿದೇಶಕ್ಕೂ ತೆರಳಿ ತಂಡ ಶೂಟಿಂಗ್ ಮಾಡಿದೆ. ಇನ್ನೂ ಸಾಕಷ್ಟು ಶೂಟಿಂಗ್ ಬಾಕಿ ಇರಬಹುದು ಎಂದು ಪ್ರೇಕ್ಷಕರು ಊಹಿಸಿದ್ದಾರೆ. ಈ ಕಾರಣದಿಂದಲೇ ಸಿನಿಮಾ ರಿಲೀಸ್ ಮುಂದಿನ ವರ್ಷಕ್ಕೆ ಹೋಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾ ನಿಂತು ಹೋಗಿದೆ ಎಂಬ ವದಂತಿ ಕೂಡ ಈ ಮೊದಲು ಹಬ್ಬಿತ್ತು.

ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ರಿಲೀಸ್ ಆಗಿದ್ದು 2023ರಲ್ಲಿ. ಇದಾದ ಬಳಿಕ ಅವರು ಈ ಚಿತ್ರದ ಕೆಲಸದಲ್ಲಿ ಬ್ಯುಸಿ ಆದರು. ಈಗ ಅವರು ಒಂದು ಚಿತ್ರಕ್ಕೆ ನಾಲ್ಕು ವರ್ಷ ತೆಗೆದುಕೊಂಡಂತೆ ಆಗಲಿದೆ. ಒಂದು ಸಿನಿಮಾಗೆ ಇಷ್ಟು ಸಮಯ ಮೀಸಲಿಟ್ಟರೆ ಹೇಗೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹಾರರ್ ಚಿತ್ರಕ್ಕಾಗಿ ‘ಮೈತ್ರಿ ಮೂವೀ ಮೇಕರ್ಸ್’ ಜೊತೆ ಕೈ ಜೋಡಿಸಿದ ಪ್ರಶಾಂತ್ ನೀಲ್

ಪ್ರಶಾಂತ್ ನೀಲ್-ಎನ್​​​ಟಿಆರ್ ಸಿನಿಮಾಗೆ ‘ಮೈತ್ರಿ ಮೂವೀ ಮೇಕರ್ಸ್’ ಬಂಡವಾಳ ಹೂಡುತ್ತಿದೆ. ಈಗಾಗಲೇ ಅದ್ದೂರಿ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡಿ ಅವರು ಗಮನ ಸೆಳೆದಿದ್ದಾರೆ. ಈ ಚಿತ್ರ ಕೂಡ ಅದ್ದೂರಿಯಾಗಿರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *