Headlines

ತನ್ನದೇ ಕಾರಲ್ಲಿ ಶವವಾಗಿ ಪತ್ತೆಯಾದ 56 ವರ್ಷದ ವ್ಯಕ್ತಿ: ಸಾವಿಗೆ ಕಾರಣ ನಿಗೂಢ – Kannada News | Bengaluru: 56 Year Old Real Estate Businessman Found Dead in Car; Cause Mysterious

ಬೆಂಗಳೂರು, ಏಪ್ರಿಲ್​​ 20: ರಿಯಲ್​ ಎಸ್ಟೇಟ್​​ ಮತ್ತು ಸಣ್ಣ ಮಟ್ಟದ ಹಣಕಾಸು ವ್ಯವಹಾರ ನಡೆಸುತ್ತಿದ್ದ 56 ವರ್ಷದ ವ್ಯಕ್ತಿಯೋರ್ವರು ತಮ್ಮದೇ ಕಾರಿನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ (Bengaluru) ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನಡೆದಿದೆ. ಮೃತರನ್ನು ಬಸಾಪುರ ನಿವಾಸಿ ನಾರಾಯಣಪ್ಪ ಎಂದು ಗುರುತಿಸಲಾಗಿದ್ದು, ಕಾರಿನೊಳಗೆ ಚಾಲಕನ ಪಕ್ಕದ ಸೀಟ್‌ನಲ್ಲಿ ಅಚಲವಾಗಿ ಕುಳಿತಿದ್ದ ನಾರಾಯಣಪ್ಪ ಅವರನ್ನು ಗಮನಿಸಿದ ಸಾರ್ವಜನಿಕರು ಈ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ಅವರು ಅದಾಗಲೇ ಮೃತಪಟ್ಟಿರೋದು…

Read More

ದಿನ ಭವಿಷ್ಯ: ಬಸವ ಜಯಂತಿ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ – Kannada News | Horoscope April 20 Monday 2026: Know the fortune of each zodiac sign on Basava Jayanti

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಪ್ರೀತಿ, ಕರಣ : ಕೌಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ…

Read More

PBKS vs LSG: ಪಂದ್ಯ ಸೋತರೂ ಪ್ರೇಕ್ಷಕರ ಮನ ಗೆದ್ದ ಪಂತ್ ಬಾರಿಸಿದ ಸಿಕ್ಸರ್ – Kannada News | IPL 2026: PBKS Dominates LSG by 54 Runs; Rishabh Pant’s Epic One Handed Six!

ಐಪಿಎಲ್ 2026 ರ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್​ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ ದಾಖಲೆಯ 254 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಕ್ನೋ ತಂಡ 200 ರನ್ ಕಲೆಹಾಕಲಷ್ಟೇ ಶಕ್ತವಾಗಿ 54 ರನ್​​ಗಳಿಂದ ಪಂದ್ಯ ಸೋತಿತು. ಆದಾಗ್ಯೂ ಲಕ್ನೋ ತಂಡದ ಪರ ಏಕಾಂಗಿ ಹೋರಾಟ ನೀಡಿದ ನಾಯಕ ರಿಷಭ್ ಪಂತ್ 23 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 43 ರನ್ ಬಾರಿಸಿ ಔಟಾದರು. ಇನ್ನಿಂಗ್ಸ್​ನ…

Read More

ತನ್ನ ಕುಡಿತದ ಚಟದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಯುವನಟಿ ಜಾನ್ಹವಿ ಕಪೂರ್ – Kannada News | Janhvi Kapoor talks about alcohol addiction and how she break free from that

ಬಾಲಿವುಡ್​​ನ ಸ್ಟಾರ್ ಯುವ ನಟಿ ಜಾನ್ಹವಿ ಕಪೂರ್ (Janhvi Kapoor). ಇತ್ತೀಚೆಗೆ ದಕ್ಷಿಣದಲ್ಲೂ ಸಹ ಜೂ ಎನ್​​ಟಿಆರ್, ರಾಮ್ ಚರಣ್ ಅಂಥಹಾ ಸ್ಟಾರ್ ನಟರುಗಳೊಟ್ಟಿಗೆ ನಟಿಸುತ್ತಿದ್ದಾರೆ. ಬಾಲಿವುಡ್​​ನಲ್ಲಿ ಮುಂಚೂಣಿಯಲ್ಲಿರುವ ಯುವನಟಿ ಎನಿಸಿಕೊಂಡಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೊಕಾ-ಕೊಲಾ ಸೇರಿದಂತೆ ಹಲವು ಪ್ರತಿಷ್ಠಿತ ಬ್ರ್ಯಾಂಡುಗಳ ರಾಯಭಾರಿ ಆಗಿದ್ದಾರೆ. ಭಾರತದ ಬ್ಯುಸಿ ಸ್ಟಾರ್ ನಟಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇದೆಲ್ಲದರ ಜೊತೆಗೆ ಪಾರದರ್ಶಕತೆಗೆ ಒತ್ತು ಕೊಡುವ ನಟಿಯೂ ಸಹ ಆಗಿದ್ದು, ಇದೀಗ ಅವರ ಕುಡಿತದ ಚಟದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ…

Read More

ಚಿಕ್ಕಬಳ್ಳಾಪುರ: ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ದುರಂತ; ಪ್ಲಾಂಟ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ನಾಲ್ವರು ಕಾರ್ಮಿಕರು ಅಸ್ವಸ್ಥ! – Kannada News | STP Plant Accident: Four Workers Suffocate: Hospitalized Due to Negligence

ಚಿಕ್ಕಬಳ್ಳಾಪುರ, ಏಪ್ರಿಲ್​ 19: ಪ್ರತಿಷ್ಠಿತ ಖಾಸಗಿ ಕಂಪನಿಯಾದ ಎಸ್​​ಟಿಪಿ ಪ್ಲಾಂಟ್​ನಲ್ಲಿ (STP plant)  ಉಸಿರುಗಟ್ಟಿ ನಾಲ್ವರು ಕಾರ್ಮಿಕರು (Workers) ಅಸ್ವಸ್ಥಗೊಂಡ ಘಟನೆ ಚಿಕ್ಕಬಳ್ಳಾಪುರದ ಅಗಲಗುರ್ಕಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಪ್ರಶಾಂತ್, ಸುನಿಲ್, ಜಯಪ್ರಕಾಶ್ ಹಾಗೂ ಮದನ್ ಅಸ್ವಸ್ಥಗೊಂಡ ಕಾರ್ಮಿಕರು. ಸದ್ಯ ನಾಲ್ವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನಂದಿಗಿರಿಧಾಮ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಡೆದಿದ್ದೇನು? ಅಗಲಗುರ್ಕಿ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯ ಎಸ್.ಟಿ.ಪಿ ಪ್ಲಾಂಟ್‌ನ ಸಂಪು ಸ್ವಚ್ಛಗೊಳಿಸಲು ಕಾರ್ಮಿಕರು ಮುಂದಾಗಿದ್ದರು. ಮೊದಲು ಪ್ರಶಾಂತ್…

Read More

ದೀಪಿಕಾಗಾಗಿ ಶೂಟಿಂಗ್ ಶೆಡ್ಯೂಲ್ ಬದಲಿಸಲಿರುವ ಅಲ್ಲು ಅರ್ಜುನ್, ಶಾರುಖ್ ಖಾನ್ – Kannada News | For Deepika Padukone King and Raaka movie changing their shooting schedule

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಇಂದು (ಏಪ್ರಿಲ್ 19) ಖುಷಿ ವಿಷಯ ಹಂಚಿಕೊಂಡಿದ್ದಾರೆ. ಈಗಾಗಲೇ ಮುದ್ದಾದ ಹೆಣ್ಣು ಮಗುವಿನ ತಾಯಿ ಆಗಿರುವ ದೀಪಿಕಾ ಪಡುಕೋಣೆ, ಇದೀಗ ಎರಡನೇ ಮಗುವನ್ನು ಸ್ವಾಗತಿಸಲು ಸಜ್ಜಾಗಿದ್ದು, ತಾವು ಗರ್ಭಿಣಿ ಆಗಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಅಭಿಮಾನಿಗಳು, ಹಲವಾರು ಮಂದಿ ಬಾಲಿವುಡ್ ಸೆಲೆಬ್ರಿಟಿಗಳು ದೀಪಿಕಾರಿಗೆ ಶುಭಾಶಯಗಳನ್ನು ಕೋರಿದ್ದಾರೆ. ದೀಪಿಕಾ ಅವರು ಮತ್ತೆ ತಾಯಿ ಆಗುತ್ತಿರುವುದು ಖುಷಿಯ ವಿಷಯವಾದರೂ ಎರಡು ಸಿನಿಮಾಗಳಿಗೆ ಇದರಿಂದ ತುಸು ಸಮಸ್ಯೆ ಆಗಿದೆ. ಅದುವೇ ಶಾರುಖ್…

Read More

PBKS vs LSG: ಪ್ರಿಯಾಂಶ್-ಕನೋಲಿ ರೌದ್ರಾವತಾರಕ್ಕೆ ಆರ್​ಸಿಬಿಯ ದಾಖಲೆಗಳೆಲ್ಲ ಧ್ವಂಸ

ಐಪಿಎಲ್ 2026 ರ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್​ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ ದಾಖಲೆಯ 254 ರನ್ ಕಲೆಹಾಕಿತು. ತಂಡದ ಪರ ಪ್ರಿಯಾಂಶ್ ಆರ್ಯ ಹಾಗೂ ಕೂಪರ್ ಕನೋಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಹಾಗೆಯೇ ಎರಡನೇ ವಿಕೆಟ್​ಗೆ ಕೇವಲ 81 ಎಸೆತಗಳಲ್ಲಿ ದಾಖಲೆಯ 181 ರನ್​ಗಳ ಜೊತೆಯಾಟವನ್ನಾಡಿದರು. ಈ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪ್ರಿಯಾಂಶ್ 37 ಎಸೆತಗಳಲ್ಲಿ 93 ರನ್​ಗಳ ಇನ್ನಿಂಗ್ಸ್…

Read More

PBKS vs LSG: 6,6,6,6,6,6,6,6,6..! ಲಕ್ನೋ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಪ್ರಿಯಾಂಶ್ – Kannada News | Priyansh Arya’s Explosive 93 Powers Punjab Kings to Record 254 vs LSG in IPL 2026

ಐಪಿಎಲ್ 2026 (IPL 2026) ರ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್​ಜೈಂಟ್ಸ್ (PBKS vs LSG) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ ದಾಖಲೆಯ 254 ರನ್ ಕಲೆಹಾಕಿತು. ತಂಡದ ಪರ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಆರಂಭಿಕ ಪ್ರಿಯಾಂಶ್ ಆರ್ಯ (Priyansh Arya) 93 ರನ್​ಗಳ ಇನ್ನಿಂಗ್ಸ್ ಆಡಿದರು. ಪ್ರಿಯಾಂಶ್ ಅವರ ಈ ಇನ್ನಿಂಗ್ಸ್​ನಲ್ಲಿ ನಾಲ್ಕು ಬೌಂಡರಿಗಳು ಮತ್ತು ಒಂಬತ್ತು ಸಿಕ್ಸರ್‌ಗಳು ಸೇರಿದ್ದವು. ಕೇವಲ 37 ಎಸೆತಗಳಲ್ಲಿ ಈ…

Read More

ರಾಜ್ಯದ 5 ಜಿಲ್ಲೆಗಳಲ್ಲಿ 40 ಡಿಗ್ರಿ ದಾಟಿದ ತಾಪಮಾನ: ಬಿಸಿಲಿನ ಝಳದಿಂದ ಪಾರಾಗಲು ಜನರ ನಾನಾ ಕಸರತ್ತು – Kannada News | Karnataka Heatwave: Five Districts Cross 40 Degrees Celsius as Residents Struggle

ಬೆಂಗಳೂರು, ಏಪ್ರಿಲ್​ 19: ರಾಜ್ಯದಲ್ಲಿ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದ್ದು, ಪ್ರಮುಖವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳು ಅಕ್ಷರಶಃ ಕೆಂಡದಂತಾಗಿವೆ. ಐದು ಜಿಲ್ಲೆಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ್ದು, ಜನರು ಬಿಸಿಲಿನಿಂದ ತತ್ತರಿಸಿದ್ದಾರೆ. ಗದಗ, ರಾಯಚೂರು, ವಿಜಯಪುರ, ಯಾದಗಿರಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸೂರ್ಯನ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ದಾಖಲಾಗಿದೆ. ಮನೆಯಲ್ಲಿದ್ದರೂ ಫ್ಯಾನ್ ಮತ್ತು ಕೂಲರ್‌ಗಳಿಂದ ಬಿಸಿ ಗಾಳಿ ಬರುತ್ತಿರುವುದರಿಂದ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಮಧ್ಯಾಹ್ನದ ವೇಳೆ ಜನರು ಮನೆಯಿಂದ…

Read More

MLC ಮಾಡುವಂತೆ ರಾಹುಲ್ ಗಾಂಧಿಗೆ ಮೈಸೂರು ಕಾಂಗ್ರೆಸ್ ಕಾರ್ಯಕರ್ತ ಪತ್ರ – Kannada News | Mysuru Congress Worker Basavanna writes Letter To Rahul gandhi For MLC Post

ಮೈಸೂರು, (ಏಪ್ರಿಲ್ 19): ಒಂದೆಡೆ ಸಂಪುಟ ಪುನಾರಚನೆ ಮಾಡಬೇಕೆಂದು ಕೆಲ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಬಂದಿದ್ದಾರೆ. ಇದರ ಮಧ್ಯೆ ಮೈಸೂರಿನ ಕಾಂಗ್ರೆಸ್ ಕಾರ್ಯಕರ್ತ ಬಸವಣ್ಣ ಎನ್ನುವರು ವಿಧಾನಪರಿಷ್ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಸ್ಥಾನಮಾನ ನೀಡುವ ಬಗ್ಗೆ ಈಗಾಗಲೇ ಮೂರು ಬಾರಿ ಪತ್ರ ಬರೆದಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಈಗ ನಾಲ್ಕನೇ ಬಾರಿ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದು, ವಿಧಾನಪರಿಷತ್​ ಸದಸ್ಯ ಸ್ಥಾನ ಕೊಡಿ ಇಲ್ಲ ದಯಾಮರಣ ಕೊಡಿ ಎಂದಿದ್ದಾರೆ. ಈ ಬಗ್ಗೆ…

Read More