Category Archives: Blog

Your blog category

ತನ್ನದೇ ಕಾರಲ್ಲಿ ಶವವಾಗಿ ಪತ್ತೆಯಾದ 56 ವರ್ಷದ ವ್ಯಕ್ತಿ: ಸಾವಿಗೆ ಕಾರಣ ನಿಗೂಢ – Kannada News | Bengaluru: 56 Year Old Real Estate Businessman Found Dead in Car; Cause Mysterious

ಬೆಂಗಳೂರು, ಏಪ್ರಿಲ್​​ 20: ರಿಯಲ್​ ಎಸ್ಟೇಟ್​​ ಮತ್ತು ಸಣ್ಣ ಮಟ್ಟದ ಹಣಕಾಸು ವ್ಯವಹಾರ ನಡೆಸುತ್ತಿದ್ದ 56 ವರ್ಷದ ವ್ಯಕ್ತಿಯೋರ್ವರು ತಮ್ಮದೇ ಕಾರಿನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ (Bengaluru) ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನಡೆದಿದೆ. ಮೃತರನ್ನು ಬಸಾಪುರ ನಿವಾಸಿ ನಾರಾಯಣಪ್ಪ ಎಂದು ಗುರುತಿಸಲಾಗಿದ್ದು, ಕಾರಿನೊಳಗೆ ಚಾಲಕನ ಪಕ್ಕದ ಸೀಟ್‌ನಲ್ಲಿ ಅಚಲವಾಗಿ ಕುಳಿತಿದ್ದ ನಾರಾಯಣಪ್ಪ ಅವರನ್ನು ಗಮನಿಸಿದ ಸಾರ್ವಜನಿಕರು ಈ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ಅವರು ಅದಾಗಲೇ ಮೃತಪಟ್ಟಿರೋದು ದೃಢಪಟ್ಟಿದೆ.

ಪೊಲೀಸ್ ಮಾಹಿತಿಯ ಪ್ರಕಾರ, ನಾರಾಯಣಪ್ಪ ತಮ್ಮ ಸ್ನೇಹಿತರಾದ ಮಂಜುನಾಥ ರೆಡ್ಡಿ ಮತ್ತು ಶಿವು ಜೊತೆ ಎಲೆಕ್ಟ್ರಾನಿಕ್ಸ್ ಸಿಟಿಯ ಬಾರ್‌ಗೆ ತೆರಳಿದ್ದರು. ತೀವ್ರವಾಗಿ ಮದ್ಯಪಾನ ಮಾಡಿದ್ದ ಅವರು ನಿಲ್ಲಲೂ ಕಷ್ಟಪಡುತ್ತಿದ್ದರು. ಹೀಗಾಗಿ ಮಂಜುನಾಥ ರೆಡ್ಡಿ ಮತ್ತು ಶಿವು ಅವರ ಕೈ ಹಿಡಿದು ಬಾರ್​​ನಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ನಂತರ ನಾರಾಯಣಪ್ಪ ಕಾರಿನ ಚಾಲಕನ ಪಕ್ಕದ ಸೀಟ್‌ನಲ್ಲಿ ಕುಳಿತಿದ್ದು, ಅವರದ್ದೇ ಕಾರನ್ನು ಮಂಜುನಾಥ ರೆಡ್ಡಿ ಚಲಾಯಿಸಿದ್ದಾರೆ. ಸ್ನೇಹಿತ ಶಿವು ಬಾರ್​​ನಿಂದ ಹೊರ ಬಂದ ಬಳಿಕ ಇವರಿಂದ ಬೇರೆಯಾಗಿ ತೆರಳಿದ್ದಾರೆ. ಈ ಎಲ್ಲ ಘಟನೆಗಳ ಸಂಪೂರ್ಣ ಚಿತ್ರಣ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಇನ್ನೇನು ಟೇಕ್ ಆಫ್ ಆಗುವಷ್ಟರಲ್ಲೇ ಪ್ರಯಾಣಿಕ ಅಸ್ವಸ್ಥ; ಮಾನವೀಯತೆಗೆ ಸಾಕ್ಷಿಯಾದ ವಿಮಾನ

ಇನ್ನು ಕೆಲ ಕಿಲೋಮೀಟರ್ ಪ್ರಯಾಣಿಸಿದ ಬಳಿಕ ಮಂಜುನಾಥ ರೆಡ್ಡಿಗೆ ಕಾರು ಚಲಾಯಿಸಲು ಕಷ್ಟವಾಗಿದ್ದರಿಂದ ರಸ್ತೆಯ ಬದಿಯಲ್ಲಿ ಕಾರನ್ನು ನಿಲ್ಲಿಸಿ ಅವರು ಮನೆಗೆ ತೆರಳಿದ್ದಾರೆ. ಮರುದಿನ ಅದೇ ಸ್ಥಳದಲ್ಲಿ ಕಾರಿನೊಳಗೆ ನಾರಾಯಣಪ್ಪ ಅವರು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಕುರಿತು ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದು, ಯಾವುದೇ ಅನುಮಾನಾಸ್ಪದ ಅಂಶ ಇಲ್ಲವೆಂದು ತಿಳಿಸಿದ್ದಾರೆ. ದೇಹದಲ್ಲಿ ಯಾವುದೇ ಗಾಯಗಳಿಲ್ಲ, ಮಂಜುನಾಥ ರೆಡ್ಡಿ ಮತ್ತು ನಾರಾಯಣಪ್ಪ ನಡುವೆ ಯಾವುದೇ ಜಗಳ ನಡೆದಿಲ್ಲ. ಹೀಗಾಗಿ ಸಾವಿಗೆ ನಿಖರ ಕಾರಣವನ್ನು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವೇ ಗೊತ್ತಾಗಲಿದೆ ಎಂದು ಎಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ದಿನ ಭವಿಷ್ಯ: ಬಸವ ಜಯಂತಿ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ – Kannada News | Horoscope April 20 Monday 2026: Know the fortune of each zodiac sign on Basava Jayanti

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಪ್ರೀತಿ, ಕರಣ : ಕೌಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:04 – 18:37, ಯಮಗಂಡ ಕಾಲ 12:24 – 13:57, ಗುಳಿಕ ಕಾಲ 15:31- 17:04

ಮೇಷ ರಾಶಿ: ಕರೆಯದೇ ಎಲ್ಲಿಗೂ ಹೋಗುವ ಇಚ್ಛೆ ತೋರಿಸಲಾರಿರಿ. ಅನಿರೀಕ್ಷಿತ ಆಮಂತ್ರಣದಿಂದ ಉತ್ಸಾಹ. ಸಂಗಾತಿಯಿಂದ ಪ್ರೀತಿಯ ಮೆಲುಕು. ಬೇರೆಯವರನ್ನು ಇರಿಯಲು ಹೊರಟ ಮಾತು ನಿಮ್ಮನ್ನೇ ಇರಿದೀತು. ನೀವು ಇಂದು ಮಕ್ಕಳಿಗಾಗಿ ಖರ್ಚು ಮಾಡುವುದು ಅಗತ್ಯವೂ ಅನಿವಾರ್ಯವೂ ಆದೀತು. ಒಂದೇ ಕೆಲಸವನ್ನು ನಿರಂತರ ಮಾಡಿ ಶಿಸ್ತನ್ನು ರೂಢಿಸಿಕೊಳ್ಳಬೇಕಾಗುವುದು. ದೊಡ್ಡ ಕನಸನ್ನಿಟ್ಟುಕೊಳ್ಳುವುದು ಸೂಕ್ತ.

ವೃಷಭ ರಾಶಿ: ದೈಹಿಕ ಅನಾರೋಗ್ಯದಿಂದ ಕೋಪ ಅಧಿಕವಾಗಲಿದೆ. ಕುತೂಹಲದ ನಿಮ್ಮ ಸ್ವಭಾವವು ಇಂದು ಜಗಜ್ಜಾಹಿರಾಗಲಿದೆ. ಇತರರ ಬಗ್ಗೆ ದ್ವೇಷ ಭಾವನೆ ಬೇಡ, ಅದು ನಿಮ್ಮ ಶಕ್ತಿಯನ್ನು ಕಡಿಮೆ ಮಾಡುತ್ತದೆ. ವ್ಯಾಪಾರದಲ್ಲಿ ಹಾನಿ ಸಾಧ್ಯತೆ, ಜಾಣತನದಿಂದ ಹಣ ವ್ಯಯಿಸಿ. ಖರ್ಚಿನಿಂದಾಗಿ ಬೇಸರವು ಅಧಿಕವಾಗಬಹುದು. ನೀವು ನೋಡುವ ದೃಷ್ಟಿಯಿಂದ ಎಲ್ಲವೂ ಹಾಗೆ ಕಾಣಿಸುವುದು. ಮನಸ್ಸಿನ ಭಾರವು ನಿಮ್ಮ ಕೆಲಸವನ್ನು ನಿಲ್ಲಿಸುವುದು.

ಮಿಥುನ ರಾಶಿ: ಸ್ನೇಹಿತ ಜೊತೆ ಪ್ರವಾಸದ ಯೋಜನೆ ಉತ್ಸಾಹವನ್ನು ತುಂಬುತ್ತದೆ. ಸಂಗಾತಿಯ ಜೊತೆ ಹಳೆಯ ನೆನಪನ್ನು ಹಂಚಿಕೊಳ್ಳುವಿರಿ. ಆಪದ್ಧನ ಇಂದು ತನ್ನ ಅಸ್ತಿತ್ವವನ್ನು ತೋರಿಸಲಿದೆ‌. ಇದರ ಜೊತೆ ವ್ಯಯದ ದುಃಖವು ನಿಮಗೆ ಆಗುತ್ತದೆ. ಪ್ರಣಯವನ್ನು ಪ್ರಕಟಿಸಲು ಹೋಗಬೇಡಿ. ಇಂದು ನಿಮಗೆ ಹಿರಿಯರ ಉಪದೇಶವು ಅಧಿಕವಾಗಿ ಇರುವುದು. ಇನ್ನೊಬ್ಬರ ಬಗ್ಗೆ ನಿಮಗೆ ಅನುಕಂಪ ಹೆಚ್ಚಾದೀತು. ನಿಮ್ಮ ಏಕಾಗ್ರತೆಗೆ ಭಂಗಬರಬಹುದು.

ಕರ್ಕಾಟಕ ರಾಶಿ: ನಿಮ್ಮ ಮನಸ್ಸಿಗೆ ತೃಪ್ತಿ ಕೊಡುವಂತಹ ಕೆಲಸವನ್ನು ಮಾಡಿ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ ವ್ಯರ್ಥ ಖರ್ಚನ್ನು ನಿಯಂತ್ರಿಸಿ. ಕುಟುಂಬದಿಂದ ಬಲವಾದ ಬೆಂಬಲ ಸಿಗುತ್ತದೆ. ಸಂಗಾತಿಯಿಂದ ಅಲ್ಪಮಟ್ಟದ ನಿರಾಶೆ ಬರಬಹುದು. ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆ. ನಿಮ್ಮ ಕುಟುಂಬದ ಆಲೋಚನೆಯು ಅಧಿಕವಾಗಿ ಇರುವುದು. ಆದಾಯ ನೋಡಿ ಕೃಷಿಯಲ್ಲಿ ಆಸಕ್ತಿ ಉಂಟಾಗಬಹುದು. ರಮಣೀಯ ಸ್ಥಳಕ್ಕೆ ಸಂಗಾತಿಯ ಜೊತೆ ಹೋಗಲಿದ್ದೀರಿ.

ಸಿಂಹ ರಾಶಿ: ಹಣವನ್ನು ಉಳಿಸಿ ಹೂಡಿಕೆ ಮಾಡುತ್ತೇನೆ ಎಂದರೆ ಆಗದು. ಮಕ್ಕಳ ಜೊತೆ ಸಮಯವನ್ನು ಸಂತೋಷದಿಂದ ಕಳೆಯಬಹುದು. ಒತ್ತಡದ ದಿನದವನ್ನು ಮರೆಯಲು ಸಂತೋಷಕೂಟ ಮಾಡುವಿರಿ. ಹಣದ ವ್ಯಯವನ್ನು ಸಾಧ್ಯವಾದಷ್ಟು ಮಿತಿಗೊಳಿಸಿ. ಕುಟುಂಬದ ಸಲಹೆ ಅನುಸರಿಸಿ. ಪ್ರಭಾವಿ ವ್ಯಕ್ತಿಗಳು ಬಂಧುಗಳಾಗಿದ್ದು ಅವರಿಂದ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ನಿಮ್ಮ ಸ್ಥಿರಾಸ್ತಿ ಮಾರಾಟದ ಬಗ್ಗೆ ಪೂರ್ಣವಾಗಿ ನಿಮಗೆ ಬೆಂಬಲ ಸಿಗದೇ ಹೋಗಬಹುದು.

ಕನ್ಯಾ ರಾಶಿ: ಸೃಜನಾತ್ಮಕ ಕೆಲಸದಲ್ಲಿ ತೊಡಗಿಸಿಕೊಂಡು ಮನಸ್ಸಿಗೆ ಹಿತ. ಭೂಮಿಯ ಹೂಡಿಕೆ ಲಾಭಪ್ರದ. ಸಂಬಂಧಿಕರಿಂದ ಸಂಜೆಯ ಆಮಂತ್ರಣ ಸಿಗಬಹುದು. ಪ್ರೀತಿಯಲ್ಲಿ ಬಲವಂತ ಬೇಡ. ಸಹೋದರರೊಂದಿಗೆ ಸಂತೋಷ ಸಮಯ ಮೀಸಲಾಗುತ್ತದೆ. ಸಂಗಾತಿಯ ವರ್ತನೆ ಒತ್ತಡ ತರಬಹುದು. ತೀರ್ಥಯಾತ್ರೆಗೆ ಹೋಗಲು ತಯಾರಾಗಿರಿ. ಪ್ರೇಮಿಸಿದವರು ತಮ್ಮ ಕುಟುಂಬಕ್ಕೆ ಅದನ್ನು ತಿಳಿಸಿ ಅವರಿಂದ ಒಪ್ಪಿಗೆ ಪಡೆಯುವರು.

ತುಲಾ ರಾಶಿ: ಹೊಸ ಒಪ್ಪಂದಗಳು ಲಾಭದಾಯಕವಾಗಿ ತೋರುತ್ತಿದ್ದರೂ ಆತುರಾತುರವಾಗಿ ನಿರ್ಧಾರ ತೆಗೆದುಕೊಳ್ಳಬೇಡಿ. ಯಾವುದೇ ವ್ಯಕ್ತಿ ನಿಮ್ಮ ಸಂಬಂಧದ ಮಧ್ಯೆ ಬರಬಹುದು. ನೆರೆಹೊರೆಯವರು ಸಂಬಂಧದಲ್ಲಿ ಗೊಂದಲ ಉಂಟುಮಾಡಲು ಯತ್ನಿಸಬಹುದು. ವಾಹನ ಚಾಲನೆಯಲ್ಲಿ ಎಚ್ಚರ ತಪ್ಪಬಹುದು. ಅಂಗಳವನ್ನೇ ಹಾರಲಾರದವನು ಆಕಾಶವನ್ನು ಹಾರಿಯಾನು ಎಂದು ನಿಮ್ಮನ್ನು ಲೇವಡಿ ಮಾಡಬಹುದು.

ವೃಶ್ಚಿಕ ರಾಶಿ: ನಿಮಗೆ ಮಕ್ಕಳಿಂದ ಸಂತೋಷದ ಸುದ್ದಿ ಬರಬಹುದು. ನಿಮ್ಮನ್ನು ಹೆಚ್ಚು ಪ್ರೀತಿಸುವ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ಹಳೆ ಸ್ನೇಹಿತರೊಂದಿಗೆ ಇಂದು ಭೇಟಿಯಾಗುವ ಅವಕಾಶವಿದೆ. ವೈವಾಹಿಕ ಜೀವನದ ಬಗ್ಗೆ ಹೊಸ ಹಿತವಚನಗಳು ನಿಮ್ಮ ಮನಸ್ಸನ್ನು ತಂಪು ಮಾಡಬಹುದು. ನೀವು ಶಿಸ್ತಿಗೆ ಒಳಪಟ್ಟಷ್ಟು ನಿಮ್ಮ ಕೆಲಸಗಳು ಸುಲಲಿತವಾಗುವುದು. ಕೆಲವು ಸಂದರ್ಭಗಳು ನಿಮ್ಮ ಪರೀಕ್ಷೆಗಾಗಿ ಬರಲಿದ್ದು ಅದನ್ನು ಎದುರಿಸುವುದು ನಿಮ್ಮ ಮೇಲಿದೆ.

ಧನು ರಾಶಿ: ಅತ್ಯಂತ ಪ್ರಭಾವಿ ಜನರ ಬೆಂಬಲದಿಂದ ನಿಮ್ಮ ನೈತಿಕ ಸ್ಥೆರ್ಯವನ್ನು ಹೆಚ್ಚಿಸುತ್ತದೆ. ಹಣಕಾಸು ಲಾಭಗಳು ವಿವಿಧ ಮೂಲಗಳಿಂದ ಬರುತ್ತದೆ. ಸಂಬಂಧಿಗಳು ಹೆಚ್ಚು ಸಮಯ ಕೇಳಿದರೂ ಸ್ವಲ್ಪ ಸಮಯವನ್ನು ನಿಮಗಾಗಿ ಇಡುವಿರಿ. ನೀವು ಕೆಟ್ಟ ಸಮಯದಲ್ಲಿರುವವರನ್ನು ದೂರವಿರಿಸುವಿರಿ. ವ್ಯವಹಾರದಲ್ಲಿ ನಿಮಗೆ ವಿಶ್ವಾಸವು ಸಾಲದು. ಯಾರ ಬಳಿಯೂ ಏನನ್ನೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ನೀವು ಇರುವಿರಿ. ನಿಮ್ಮ ಎಲ್ಲ ಶ್ರಮದಾಯಕ ಯೋಜನೆ ಅಂತಿಮವಾಗಿ ಫಲವನ್ನು ನೀಡಲಿದೆ.

ಮಕರ ರಾಶಿ: ಸೌಂದರ್ಯವು ನಿಮ್ಮ ಸ್ವಭಾವವನ್ನು ನುಂಗಿ ಹಾಕುವುದು. ವಿಶೇಷವಾಗಿ ಕೋಪವನ್ನು, ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಅಮೂಲ್ಯ ವಸ್ತುವನ್ನು ಖರೀದಿಸಬಹುದು. ನೀವು ಪ್ರಾಮುಖ್ಯತೆ ನೀಡುವ ಸಂಬಂಧಗಳಿಗೆ ಸಮತೋಲನ ಅಗತ್ಯ ಹಾಗೂ ಸಣ್ಣ ಬೆಳವಣಿಗೆಯೂ ಭವಿಷ್ಯದ ಬದಲಾವಣೆಗಳಿಗೆ ದಾರಿ. ಕಾರ್ಯವಿಧಾನದ ಬದಲಾವಣೆಯಿಂದ ನಿಮಗೆ ಸಂತೋಷವಾಗಲಿದೆ.

ಕುಂಭ ರಾಶಿ: ಪರರ ದುಃಖದಲ್ಲಿ ಭಾಗಿಯಾಗಿ ಮನಸ್ಸನ್ನು ಹಗುರಗೊಳಿಸುವಿರಿ. ನಿಮ್ಮ ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳು ಮಾಡಬಹುದು. ಆದರೆ ಒತ್ತಡವನ್ನು ನಿಭಾಯಿಸಿ. ಮೌಲ್ಯ ಹೆಚ್ಚಾಗುವ ವಸ್ತುಗಳನ್ನು ಖರೀದಿಸಲು ಪರಿಪೂರ್ಣ ದಿನ. ತೆಗೆದುಕೊಳ್ಳುವ ನಿರ್ಧಾರವು ತಪ್ಪಾದೀತು ಎಂಬ ಆತಂಕ.. ರೋಗಬಾಧೆಯಿಂದ ನೀವು ಖಿನ್ನರಾಗುವಿರಿ. ಯಾವ ವಿಚಾರಕ್ಕೂ ಗೊಂದಲವಾಗುವಂತೆ ಇರುವುದು ಬೇಡ.

ಮೀನ ರಾಶಿ: ಕೆಲಸದಲ್ಲಿ ಮೇಲಧಿಕಾರಿಗಳಿಂದ ಒತ್ತಡ ಮತ್ತು ಮನೆಯಲ್ಲಿ ಬೇಜವಾಬ್ದಾರಿ. ಇದರಿಂದ ನಿಮ್ಮ ಏಕಾಗ್ರತೆಗೆ ತೊಂದರೆ ತರಬಹುದು. ವಾಹನವನ್ನು ಚೆನ್ನಾಗಿ ಚಲಾಯಿಸಲು ಬಯಸುತ್ತಿದ್ದರೆ, ಇಂದು ನೀವು ಹಣದ ಬಗ್ಗೆ ವಿಶೇಷ ಗಮನ ಹರಿಸಬೇಕು. ಕೆಲಸದಲ್ಲಿ ಎಲ್ಲವೂ ನಿಮ್ಮ ಪರವಾಗಿ ಇದ್ದಂತೆ ತೋರುತ್ತದೆ. ದಾಂಪತ್ಯದಲ್ಲಿ ಪ್ರೀತಿಯು ಹೆಚ್ಚಾಗಬಹುದು. ನೀವು ಇನ್ನೊಬ್ಬರ ಅಹಂಕಾರವನ್ನು ಹೆಚ್ಚಿಸಲು ಹೋಗುವುದು ಬೇಡ. ಅತ್ಯಂತ ಮುಖ್ಯವೆಂದು ಪರಿಗಣಿಸುವ ವಿಷಯಗಳಲ್ಲಿ ನಿಮ್ಮ ಪ್ರಯತ್ನಗಳನ್ನು ಮುಂದುವರೆಸಿ.

ಲೋಹಿತ ಹೆಬ್ಬಾರ್ – 8762924271 (what’s app only)

Source link

PBKS vs LSG: ಪಂದ್ಯ ಸೋತರೂ ಪ್ರೇಕ್ಷಕರ ಮನ ಗೆದ್ದ ಪಂತ್ ಬಾರಿಸಿದ ಸಿಕ್ಸರ್ – Kannada News | IPL 2026: PBKS Dominates LSG by 54 Runs; Rishabh Pant’s Epic One Handed Six!

ಐಪಿಎಲ್ 2026 ರ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್​ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ ದಾಖಲೆಯ 254 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಕ್ನೋ ತಂಡ 200 ರನ್ ಕಲೆಹಾಕಲಷ್ಟೇ ಶಕ್ತವಾಗಿ 54 ರನ್​​ಗಳಿಂದ ಪಂದ್ಯ ಸೋತಿತು. ಆದಾಗ್ಯೂ ಲಕ್ನೋ ತಂಡದ ಪರ ಏಕಾಂಗಿ ಹೋರಾಟ ನೀಡಿದ ನಾಯಕ ರಿಷಭ್ ಪಂತ್ 23 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 43 ರನ್ ಬಾರಿಸಿ ಔಟಾದರು.

ಇನ್ನಿಂಗ್ಸ್​ನ 7ನೇ ಓವರ್​ನಲ್ಲಿ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್, ಮಾರ್ಕೋ ಯಾನ್ಸನ್ ಬೌಲ್ ಮಾಡಿದ ಈ ಓವರ್​ನ 4ನೇ ಎಸೆತವನ್ನು ಪಂತ್ ಸಿಕ್ಸರ್​ಗಟ್ಟಿದರು. ಆ ನಂತರದ ಅಂದರೆ ಐದನೇ ಎಸೆತವನ್ನು ಪಂತ್ ಲಾಂಗ್ ಆಫ್​​ನಲ್ಲಿ ಭರ್ಜರಿ ಸಿಕ್ಸರ್​ಗಟ್ಟಿದರು. ಪಂತ್ ಬಾರಿಸಿದ ಈ ಸಿಕ್ಸರ್​​ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಏಕೆಂದರೆ ಪಂತ್ ಈ ಸಿಕ್ಸರ್​ ಅನ್ನು ಕೇವಲ ಒಂದು ಕೈನಿಂದ ಬಾರಿಸಿದರು.

Source link

ತನ್ನ ಕುಡಿತದ ಚಟದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಯುವನಟಿ ಜಾನ್ಹವಿ ಕಪೂರ್ – Kannada News | Janhvi Kapoor talks about alcohol addiction and how she break free from that

ಬಾಲಿವುಡ್​​ನ ಸ್ಟಾರ್ ಯುವ ನಟಿ ಜಾನ್ಹವಿ ಕಪೂರ್ (Janhvi Kapoor). ಇತ್ತೀಚೆಗೆ ದಕ್ಷಿಣದಲ್ಲೂ ಸಹ ಜೂ ಎನ್​​ಟಿಆರ್, ರಾಮ್ ಚರಣ್ ಅಂಥಹಾ ಸ್ಟಾರ್ ನಟರುಗಳೊಟ್ಟಿಗೆ ನಟಿಸುತ್ತಿದ್ದಾರೆ. ಬಾಲಿವುಡ್​​ನಲ್ಲಿ ಮುಂಚೂಣಿಯಲ್ಲಿರುವ ಯುವನಟಿ ಎನಿಸಿಕೊಂಡಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೊಕಾ-ಕೊಲಾ ಸೇರಿದಂತೆ ಹಲವು ಪ್ರತಿಷ್ಠಿತ ಬ್ರ್ಯಾಂಡುಗಳ ರಾಯಭಾರಿ ಆಗಿದ್ದಾರೆ. ಭಾರತದ ಬ್ಯುಸಿ ಸ್ಟಾರ್ ನಟಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇದೆಲ್ಲದರ ಜೊತೆಗೆ ಪಾರದರ್ಶಕತೆಗೆ ಒತ್ತು ಕೊಡುವ ನಟಿಯೂ ಸಹ ಆಗಿದ್ದು, ಇದೀಗ ಅವರ ಕುಡಿತದ ಚಟದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಜಾನ್ಹವಿ ಕಪೂರ್, ತಾವು ಕುಡಿತದ ದಾಸಿಯಾಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಮೊದಲೆಲ್ಲ ಯಾವಾಗಲಾದರೂ ಒಮ್ಮೆ, ಯಾವುದಾದರೂ ಪಾರ್ಟಿಗಳಲ್ಲಿ, ಸೋಷಿಯಲ್ ಗಾದರಿಂಗ್​​ಗಳಲ್ಲಿ ಮಾತ್ರ ಕುಡಿಯುತ್ತಿದ್ದೆ. ಆದರೆ ನಿಧಾನಕ್ಕೆ ಕುಡಿತ ಎನ್ನುವುದು ನನ್ನ ಮೇಲೆ ಕಂಟ್ರೋಲ್ ಸಾಧಿಸಿತು. ಬರ-ಬರುತ್ತಾ ಮದ್ಯದ ದಾಸಿಯಾಗಿದ್ದೆ. ಒಂದು ಹಂತದಲ್ಲಿ ಪ್ರತಿದಿನವೂ ನಾನು ಹ್ಯಾಂಗೋವರ್​​ನಿಂದೇ ಏಳುತ್ತಿದ್ದೆ’ ಎಂದಿದ್ದಾರೆ ನಟಿ.

‘ಕುಡಿತ ನನ್ನ ಜೀವನದ ವಿಲನ್ ಆಗಿಬಿಟ್ಟಿತ್ತು. ನನಗೆ ರಿಯಾಲಿಟಿ ಅರ್ಥವಾಗುವಷ್ಟರಲ್ಲಿ ಕುಡಿತದ ಚಟದಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಲು ಆರಂಭಿಸಿದ್ದೆ. ಆದರೆ ನಿಧಾನಕ್ಕೆ ನಾನು ಅದರಿಂದ ಹೊರಗೆ ಬಂದೆ. ಈಗ ಮದ್ಯದ ಸಣ್ಣ ವಾಸನೆಯನ್ನೂ ಸಹಿಸಲಾರದಂತೆ ಆಗಿದ್ದೀನಿ. ಚಟ ಎಂಬುದು ಬಹಳ ಅಪಾಯಕಾರಿಯಾದುದು. ಚಟದಿಂದ ಬಳಲುತ್ತಿರುವವರನ್ನು ಪಶುಗಳಂತೆ ನೋಡದೆ, ಅವರನ್ನು ಪ್ರೀತಿಯಿಂದ ನಿಭಾಯಿಸಿ, ಅವರಿಗೆ ಸಹಾಯ ಮಾಡಿ’ ಎಂದು ಜಾನ್ಹವಿ ಹೇಳಿದ್ದಾರೆ.

ಇದನ್ನೂ ಓದಿ;ಜಾನ್ಹವಿ ಕಪೂರ್ ಮನೆಯಲ್ಲಿ ಹೀಗಿದೆ ಕ್ರಿಸ್​​ಮಸ್ ಸಂಭ್ರಮ: ವಿಡಿಯೋ

‘ಮದ್ಯದ ವ್ಯಸನವು ವ್ಯಕ್ತಿಯ ನಡವಳಿಕೆ ಮತ್ತು ಸಂಬಂಧಗಳ ಮೇಲೆ ನಿರಂತರವಾಗಿ ಪ್ರಭಾವ ಬೀರುತ್ತದೆ. ನಮಗೇ ಪರಿಚಯ ಇಲ್ಲದ ನಮ್ಮ ಮತ್ತೊಂದು ರೂಪವನ್ನು ಅದು ತೋರಿಸುತ್ತದೆ. ನನ್ನ ಸ್ನೇಹಿತರು, ಕುಟುಂಬದವರು ಭಿನ್ನ ರೀತಿಯಿಂದ ನನ್ನನ್ನು ನೋಡುವಂತೆ ಮಾಡಿತು. ಅದು ನನ್ನ ಜೀವನಕ್ಕೆ ಮಾಡಿದ ಡ್ಯಾಮೇಜ್ ಅನ್ನು ನಾನು ಗುರುತಿಸಿದೆ, ಕೊನೆಗೆ ಅದರಿಂದ ನಾನು ಮುಕ್ತಳಾದೆ’ ಎಂದು ಜಾನ್ಹವಿ ಕಪೂರ್ ಹೇಳಿದ್ದಾರೆ.

ಜಾನ್ಹವಿ ಕಪೂರ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಮ್ ಚರಣ್ ಜೊತೆಗೆ ‘ಪೆದ್ದಿ’ ಸಿನಿಮಾನಲ್ಲಿ ನಟಿಸಿದ್ದು, ಆ ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಜೂ ಎನ್​​ಟಿಆರ್ ಜೊತೆಗೆ ‘ದೇವರ 2’ ಸಿನಿಮಾನಲ್ಲಿ ಜಾನ್ಹವಿ ನಟಿಸಲಿದ್ದಾರೆ. ವರುಣ್ ಧವನ್ ಜೊತೆಗೆ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಹಿಂದಿಯಲ್ಲಿ ಇನ್ನೂ ಒಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:48 pm, Sun, 19 April 26

Source link

ಚಿಕ್ಕಬಳ್ಳಾಪುರ: ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ದುರಂತ; ಪ್ಲಾಂಟ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ನಾಲ್ವರು ಕಾರ್ಮಿಕರು ಅಸ್ವಸ್ಥ! – Kannada News | STP Plant Accident: Four Workers Suffocate: Hospitalized Due to Negligence

ಚಿಕ್ಕಬಳ್ಳಾಪುರ, ಏಪ್ರಿಲ್​ 19: ಪ್ರತಿಷ್ಠಿತ ಖಾಸಗಿ ಕಂಪನಿಯಾದ ಎಸ್​​ಟಿಪಿ ಪ್ಲಾಂಟ್​ನಲ್ಲಿ (STP plant)  ಉಸಿರುಗಟ್ಟಿ ನಾಲ್ವರು ಕಾರ್ಮಿಕರು (Workers) ಅಸ್ವಸ್ಥಗೊಂಡ ಘಟನೆ ಚಿಕ್ಕಬಳ್ಳಾಪುರದ ಅಗಲಗುರ್ಕಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಪ್ರಶಾಂತ್, ಸುನಿಲ್, ಜಯಪ್ರಕಾಶ್ ಹಾಗೂ ಮದನ್ ಅಸ್ವಸ್ಥಗೊಂಡ ಕಾರ್ಮಿಕರು. ಸದ್ಯ ನಾಲ್ವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನಂದಿಗಿರಿಧಾಮ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದಿದ್ದೇನು?

ಅಗಲಗುರ್ಕಿ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯ ಎಸ್.ಟಿ.ಪಿ ಪ್ಲಾಂಟ್‌ನ ಸಂಪು ಸ್ವಚ್ಛಗೊಳಿಸಲು ಕಾರ್ಮಿಕರು ಮುಂದಾಗಿದ್ದರು. ಮೊದಲು ಪ್ರಶಾಂತ್ ಎಂಬ ಕಾರ್ಮಿಕ ಪ್ಲಾಂಟ್‌ನ ಒಳಕ್ಕೆ ಇಳಿದಿದ್ದು, ಅನಿಲ ಸೋರಿಕೆಯಿಂದಾಗಿ ಉಸಿರಾಟದ ಸಮಸ್ಯೆಗೆ ತುತ್ತಾಗಿದ್ದಾನೆ. ಆತನನ್ನು ರಕ್ಷಿಸಲು ಕೆಳಗಿಳಿದ ಸುನಿಲ್, ಜಯಪ್ರಕಾಶ್ ಹಾಗೂ ಮದನ್ ಕೂಡ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.

ಇದನ್ನೂ ಓದಿ: ರಾಜ್ಯದ 5 ಜಿಲ್ಲೆಗಳಲ್ಲಿ 40 ಡಿಗ್ರಿ ದಾಟಿದ ತಾಪಮಾನ: ಬಿಸಿಲಿನ ಝಳದಿಂದ ಪಾರಾಗಲು ಜನರ ನಾನಾ ಕಸರತ್ತು

ಘಟನೆಯಲ್ಲಿ ನಾಲ್ವರು ಯುವಕರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಅವರನ್ನು ತಕ್ಷಣವೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಿ ದಾಖಲಿಸಲಾಗಿದೆ. ಸದ್ಯ ಪ್ರಶಾಂತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿರ್ಲಕ್ಷ್ಯ ಆರೋಪ

ಕಾರ್ಮಿಕರನ್ನು ಪ್ಲಾಂಟ್‌ನೊಳಗೆ ಇಳಿಸುವ ಮೊದಲು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಸುರಕ್ಷತಾ ಉಪಕರಣಗಳಿಲ್ಲದೆ ಕಾರ್ಮಿಕರನ್ನು ಇಳಿಸಿರುವುದು ಕಂಪನಿಯ ಬೇಜವಾಬ್ದಾರಿತನವನ್ನು ತೋರಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಹಿಳೆ ಸಾವು: ಲಿವಿಂಗ್ ಟುಗೆದರ್​​ನಲ್ಲಿದ್ದ ವ್ಯಕ್ತಿಯನ್ನು ಬಂಧಿಸಿ ಮುಜುಗರಕ್ಕೀಡಾದ ಪೊಲೀಸ್ರು, ಏನಿದು ಕೇಸ್?

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ನಂದಿಗಿರಿಧಾಮ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ನಡೆಸಿದ್ದಾರೆ.

ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ: ಅಪಾರ ಪ್ರಮಾಣದ ಮೆಕ್ಕೆಜೋಳ ಸುಟ್ಟು ಭಸ್ಮ

ಕೊಪ್ಪಳ ನಗರದ ಹೊರವಲಯ ನಗರಸಭೆಯ ಕಸ ವಿಲೇವಾರಿ ಘಟಕದ ಮುಂಭಾಗದಲ್ಲಿ ಜಮೀನಿನಲ್ಲಿ ಬೆಳೆದಿದ್ದ ಅಪಾರ ಮೌಲ್ಯದ ಮೆಕ್ಕೆಜೋಳ ಬೆಂಕಿಗೆ ಆಹುತಿ ಆಗಿರುವ ಘಟನೆ ನಡೆದಿದೆ. ಸಿಂದೋಗಿ ರಸ್ತೆ ಪಕ್ಕದಲ್ಲಿರುವ ಗೇಸುದರಾಜ ಸಿಕ್ಕಲಗಾರ ಹಾಗೂ ಇಸ್ಮಾಯಿಲ್ ಸಿಕ್ಕಲಗಾರ ಎಂಬುವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ನಾಶವಾಗಿದೆ. ಸ್ಥಳಕ್ಕೆ ಅಧಿಕಾರಿಗಳು, ಅಗ್ನಿ ಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸೂಕ್ತ ಪರಿಹಾರ ನೀಡುವಂತೆ ರೈತರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published On – 10:35 pm, Sun, 19 April 26

Source link

ದೀಪಿಕಾಗಾಗಿ ಶೂಟಿಂಗ್ ಶೆಡ್ಯೂಲ್ ಬದಲಿಸಲಿರುವ ಅಲ್ಲು ಅರ್ಜುನ್, ಶಾರುಖ್ ಖಾನ್ – Kannada News | For Deepika Padukone King and Raaka movie changing their shooting schedule

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಇಂದು (ಏಪ್ರಿಲ್ 19) ಖುಷಿ ವಿಷಯ ಹಂಚಿಕೊಂಡಿದ್ದಾರೆ. ಈಗಾಗಲೇ ಮುದ್ದಾದ ಹೆಣ್ಣು ಮಗುವಿನ ತಾಯಿ ಆಗಿರುವ ದೀಪಿಕಾ ಪಡುಕೋಣೆ, ಇದೀಗ ಎರಡನೇ ಮಗುವನ್ನು ಸ್ವಾಗತಿಸಲು ಸಜ್ಜಾಗಿದ್ದು, ತಾವು ಗರ್ಭಿಣಿ ಆಗಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಅಭಿಮಾನಿಗಳು, ಹಲವಾರು ಮಂದಿ ಬಾಲಿವುಡ್ ಸೆಲೆಬ್ರಿಟಿಗಳು ದೀಪಿಕಾರಿಗೆ ಶುಭಾಶಯಗಳನ್ನು ಕೋರಿದ್ದಾರೆ. ದೀಪಿಕಾ ಅವರು ಮತ್ತೆ ತಾಯಿ ಆಗುತ್ತಿರುವುದು ಖುಷಿಯ ವಿಷಯವಾದರೂ ಎರಡು ಸಿನಿಮಾಗಳಿಗೆ ಇದರಿಂದ ತುಸು ಸಮಸ್ಯೆ ಆಗಿದೆ. ಅದುವೇ ಶಾರುಖ್ ಖಾನ್ ಅವರ ‘ಕಿಂಗ್’ ಮತ್ತು ಅಲ್ಲು ಅರ್ಜುನ್ ನಟನೆಯ ‘ರಾಕಾ’.

ದೀಪಿಕಾ ಪಡುಕೋಣೆ ಪ್ರಸ್ತುತ ಶಾರುಖ್ ಖಾನ್ ನಟನೆಯ ‘ಕಿಂಗ್’ ಮತ್ತು ಅಲ್ಲು ಅರ್ಜುನ್ ನಟಿಸಿ ಅಟ್ಲಿ ನಿರ್ದೇಶನ ಮಾಡುತ್ತಿರುವ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಎರಡೂ ಸಿನಿಮಾಗಳು ಆಕ್ಷನ್ ಕತೆಯನ್ನು ಹೊಂದಿದ್ದು, ಎರಡರಲ್ಲೂ ದೀಪಿಕಾ ಪಡುಕೋಣೆ ಮುಖ್ಯ ನಾಯಕಿ. ‘ಕಿಂಗ್’ ಸಿನಿಮಾದ ಚಿತ್ರೀಕರಣ ಅರ್ಧದಲ್ಲಿದ್ದರೆ, ‘ರಾಕಾ’ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಶುರುವಾಗಿದೆ. ಎರಡೂ ಸಿನಿಮಾಗಳ ಚಿತ್ರೀಕರಣ ಸಾಕಷ್ಟು ಬಾಕಿ ಇರುವಾಗಲೇ ದೀಪಿಕಾ ಪ್ರೆಗ್ನೆನ್ಸಿ ಘೋಷಿಸಿದ್ದು ಇದು ಎರಡೂ ಸಿನಿಮಾಗಳಿಗೆ ತುಸು ಸಮಸ್ಯೆ ಆಗಿದೆ.

ಇದನ್ನೂ ಓದಿ:8 ಗಂಟೆ ಕೆಲಸದ ಶಿಫ್ಟ್ ವಿವಾದ: ದೀಪಿಕಾ ಪಡುಕೋಣೆ ಪರ ನಿಂತ ಕಂಗನಾ ರಣಾವತ್

ಎರಡೂ ಸಿನಿಮಾಗಳಲ್ಲಿ ದೀಪಿಕಾ ಪಡುಕೋಣೆ ಸಾಕಷ್ಟು ಆಕ್ಷನ್ ದೃಶ್ಯಗಳಲ್ಲಿ ಭಾಗವಹಿಸಬೆಕಿದೆ. ಎರಡೂ ಸಿನಿಮಾಗಳಲ್ಲಿ ಖುದ್ದು ದೀಪಿಕಾ ಪಡುಕೋಣೆ ಸಹ ಆಕ್ಷನ್​ ಸೀನ್​​ಗಳಲ್ಲಿ ಭಾಗಿ ಆಗಲಿದ್ದಾರೆ. ಹಾಗಾಗಿ ಎರಡೂ ಸಿನಿಮಾ ತಂಡದವರು ದೀಪಿಕಾ ಅವರು ನಟಿಸಲಿರುವ ಸೀನ್​​ಗಳ ಚಿತ್ರೀಕರಣವನ್ನು ಬೇಗನೆ ಮುಗಿಸಲು ಯೋಜನೆ ಹಾಕಿಕೊಂಡಿವೆ. ಅದರಲ್ಲೂ ದೀಪಿಕಾರ ಆಕ್ಷನ್ ಸೀನ್​​ಗಳ ಚಿತ್ರೀಕರಣವನ್ನು ಬೇಗನೆ ಮುಗಿಸಲು ಸಜ್ಜಾಗಿದ್ದು, ಇದಕ್ಕಾಗಿ ಇಡೀ ಶೂಟಿಂಗ್ ಶೆಡ್ಯೂಲ್ ಅನ್ನು ಬದಲಾವಣೆ ಮಾಡಲಿವೆ ಎನ್ನಲಾಗುತ್ತಿದೆ.

ದೀಪಿಕಾ ಪಡುಕೋಣೆ ಈ ಹಿಂದೆ ಸಹ ಗರ್ಭಿಣಿ ಆಗಿದ್ದಾಗ ಸಿನಿಮಾನಲ್ಲಿ ನಟಿಸಿದ್ದರು. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ದೀಪಿಕಾ ಪಡುಕೋಣೆ ಗರ್ಭಿಣಿ ಆಗಿದ್ದರು. ಆ ಸಿನಿಮಾನಲ್ಲೂ ಸಹ ಅವರದ್ದು ಗರ್ಭಿಣಿ ಯುವತಿಯ ಪಾತ್ರ ಆಗಿತ್ತು. ಇದೀಗ ಮತ್ತೆ ಗರ್ಭಿಣಿ ಆಗಿದ್ದು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

PBKS vs LSG: ಪ್ರಿಯಾಂಶ್-ಕನೋಲಿ ರೌದ್ರಾವತಾರಕ್ಕೆ ಆರ್​ಸಿಬಿಯ ದಾಖಲೆಗಳೆಲ್ಲ ಧ್ವಂಸ

Source link

PBKS vs LSG: 6,6,6,6,6,6,6,6,6..! ಲಕ್ನೋ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಪ್ರಿಯಾಂಶ್ – Kannada News | Priyansh Arya’s Explosive 93 Powers Punjab Kings to Record 254 vs LSG in IPL 2026

ಐಪಿಎಲ್ 2026 (IPL 2026) ರ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್​ಜೈಂಟ್ಸ್ (PBKS vs LSG) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ ದಾಖಲೆಯ 254 ರನ್ ಕಲೆಹಾಕಿತು. ತಂಡದ ಪರ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಆರಂಭಿಕ ಪ್ರಿಯಾಂಶ್ ಆರ್ಯ (Priyansh Arya) 93 ರನ್​ಗಳ ಇನ್ನಿಂಗ್ಸ್ ಆಡಿದರು. ಪ್ರಿಯಾಂಶ್ ಅವರ ಈ ಇನ್ನಿಂಗ್ಸ್​ನಲ್ಲಿ ನಾಲ್ಕು ಬೌಂಡರಿಗಳು ಮತ್ತು ಒಂಬತ್ತು ಸಿಕ್ಸರ್‌ಗಳು ಸೇರಿದ್ದವು. ಕೇವಲ 37 ಎಸೆತಗಳಲ್ಲಿ ಈ ಸ್ಮರಣೀಯ ಇನ್ನಿಂಗ್ಸ್ ಆಡಿದ ಪ್ರಿಯಾಂಶ್ ಕೇವಲ 7 ರನ್​​ಗಳಿಂದ ಶತಕ ವಂಚಿತರಾದರು.

ಏಳು ರನ್‌ಗಳಿಂದ ಶತಕ ವಂಚಿತ

ಈ ಪಂದ್ಯದಲ್ಲಿ ಶತಕ ವಂಚಿತರಾದರು ಪಂಜಾಬ್ ತಂಡ ದಾಖಲೆಯ ಮೊತ್ತ ಕಲೆಹಾಕುವಲ್ಲಿ ಪ್ರಿಯಾಂಶ್ ಪ್ರಮುಖ ಪಾತ್ರವಹಿಸಿದರು. ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪ್ರಿಯಾಂಶ್​​ಗೆ ಇದು ನಾಲ್ಕನೇ ಐಪಿಎಲ್ ಅರ್ಧಶತಕವಾದರೆ, ಎಲ್‌ಎಸ್‌ಜಿ ವಿರುದ್ಧ ಅವರ ಮೊದಲ ಅರ್ಧಶತಕವಾಗಿದೆ. ದುರದೃಷ್ಟವಶಾತ್ ಅವರು ತಮ್ಮ ಎರಡನೇ ಐಪಿಎಲ್ ಶತಕವನ್ನು ಕೇವಲ ಏಳು ರನ್‌ಗಳಿಂದ ತಪ್ಪಿಸಿಕೊಂಡರು. ಆದಾಗ್ಯೂ ಪ್ರಿಯಾಂಶ್ ಎರಡನೇ ವಿಕೆಟ್​ಗೆ ಕೂಪರ್ ಕನೊಲಿ ಅವರ ಜೊತೆಗೂಡಿ ಕೇವಲ 81 ಎಸೆತಗಳಲ್ಲಿ ದಾಖಲೆಯ 181 ರನ್​ಗಳ ಜೊತೆಯಾಟವನ್ನಾಡಿದರು.

PBKS vs LSG IPL 2026 Live Score: ಲಕ್ನೋಗೆ 255 ರನ್ ಗುರಿ ನೀಡಿದ ಪಂಜಾಬ್

ಪ್ರಿಯಾಂಶ್ ಆರ್ಯ ಯಾರು?

ಸೆಪ್ಟೆಂಬರ್ 18, 2001 ರಂದು ಜನಿಸಿದ ಪ್ರಿಯಾಂಶ್ ಆರ್ಯ ಎಡಗೈ ಬ್ಯಾಟಿಂಗ್ ಮತ್ತು ಬಲಗೈ ಆಫ್ ಬ್ರೇಕ್‌ ಬೌಲಿಂಗ್ ಮಾಡುತ್ತಾರೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುವ ಪ್ರಿಯಾಂಶ್ ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ಪರ ಆಡುತ್ತಾರೆ. 2025 ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಪ್ರಿಯಾಂಶ್ 22 ಪಂದ್ಯಗಳಲ್ಲಿ 28.24 ಸರಾಸರಿ ಮತ್ತು 196 ಸ್ಟ್ರೈಕ್ ರೇಟ್‌ನಲ್ಲಿ 680 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳು ಮತ್ತು ಒಂದು ಶತಕವೂ ಸೇರಿದೆ. ಡಿಪಿಎಲ್‌ನಲ್ಲಿ ಸೌತ್ ದೆಹಲಿ ಸೂಪರ್‌ಸ್ಟಾರ್ಸ್ ಪರ ಆಡುವಾಗ ಅವರು ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿ ಸುದ್ದಿ ಮಾಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:40 pm, Sun, 19 April 26

Source link

ರಾಜ್ಯದ 5 ಜಿಲ್ಲೆಗಳಲ್ಲಿ 40 ಡಿಗ್ರಿ ದಾಟಿದ ತಾಪಮಾನ: ಬಿಸಿಲಿನ ಝಳದಿಂದ ಪಾರಾಗಲು ಜನರ ನಾನಾ ಕಸರತ್ತು – Kannada News | Karnataka Heatwave: Five Districts Cross 40 Degrees Celsius as Residents Struggle

ಬೆಂಗಳೂರು, ಏಪ್ರಿಲ್​ 19: ರಾಜ್ಯದಲ್ಲಿ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದ್ದು, ಪ್ರಮುಖವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳು ಅಕ್ಷರಶಃ ಕೆಂಡದಂತಾಗಿವೆ. ಐದು ಜಿಲ್ಲೆಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ್ದು, ಜನರು ಬಿಸಿಲಿನಿಂದ ತತ್ತರಿಸಿದ್ದಾರೆ. ಗದಗ, ರಾಯಚೂರು, ವಿಜಯಪುರ, ಯಾದಗಿರಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸೂರ್ಯನ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ದಾಖಲಾಗಿದೆ. ಮನೆಯಲ್ಲಿದ್ದರೂ ಫ್ಯಾನ್ ಮತ್ತು ಕೂಲರ್‌ಗಳಿಂದ ಬಿಸಿ ಗಾಳಿ ಬರುತ್ತಿರುವುದರಿಂದ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಮಧ್ಯಾಹ್ನದ ವೇಳೆ ಜನರು ಮನೆಯಿಂದ ಹೊರಬರಲು ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬೀದರ್ ಜಿಲ್ಲೆಯ ಮರಕಲ್ ಗ್ರಾಮದ ನಿವಾಸಿಗಳು ಬಿಸಿಲಿನಿಂದ ಪಾರಾಗಲು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಮನೆಗಳ ಮೇಲ್ಛಾವಣಿಯ ಮೇಲೆ ಟಾರ್ಪಾಲ್ ಹಾಕಿ ನೀರು ತುಂಬಿಸುವ ಮೂಲಕ ಮನೆಯನ್ನು ತಂಪಾಗಿರಿಸಿಕೊಳ್ಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

MLC ಮಾಡುವಂತೆ ರಾಹುಲ್ ಗಾಂಧಿಗೆ ಮೈಸೂರು ಕಾಂಗ್ರೆಸ್ ಕಾರ್ಯಕರ್ತ ಪತ್ರ – Kannada News | Mysuru Congress Worker Basavanna writes Letter To Rahul gandhi For MLC Post

ಮೈಸೂರು, (ಏಪ್ರಿಲ್ 19): ಒಂದೆಡೆ ಸಂಪುಟ ಪುನಾರಚನೆ ಮಾಡಬೇಕೆಂದು ಕೆಲ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಬಂದಿದ್ದಾರೆ. ಇದರ ಮಧ್ಯೆ ಮೈಸೂರಿನ ಕಾಂಗ್ರೆಸ್ ಕಾರ್ಯಕರ್ತ ಬಸವಣ್ಣ ಎನ್ನುವರು ವಿಧಾನಪರಿಷ್ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಸ್ಥಾನಮಾನ ನೀಡುವ ಬಗ್ಗೆ ಈಗಾಗಲೇ ಮೂರು ಬಾರಿ ಪತ್ರ ಬರೆದಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಈಗ ನಾಲ್ಕನೇ ಬಾರಿ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದು, ವಿಧಾನಪರಿಷತ್​ ಸದಸ್ಯ ಸ್ಥಾನ ಕೊಡಿ ಇಲ್ಲ ದಯಾಮರಣ ಕೊಡಿ ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಸವಣ್ಣ, ಕಾಂಗ್ರೆಸ್ ಪಕ್ಷಕ್ಕೆ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಆದ್ರೂ ನನಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿಲ್ಲ. ಮೈಸೂರು ದಸರಾ ಕಮಿಟಿಗೂ ನನ್ನನ್ನು ನೇಮಕ ಮಾಡಿಲ್ಲ. ಹೀಗಾಗಿ ರಾಹುಲ್ ಗಾಂಧಿಗೆ ಪೋಸ್ಟ್ ಮೂಲಕ ಪತ್ರ ಬರೆದಿದ್ದು, ಈ ಬಾರಿ ನನಗೆ ಎಂಎಲ್​ಸಿ ಸ್ಥಾನ ಕೊಡ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಕರ್ನಾಕಟದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link