Category Archives: Blog

Your blog category

ಕರ್ನಾಟಕ ಹವಾಮಾನ ವರದಿ: ಇಂದು ಹೀಟ್ ವೇವ್ ಜೊತೆಗೆ ಕರಾವಳಿಯಲ್ಲಿ ವರುಣಾರ್ಭಟ! – Kannada News | Karnataka Weather Forecast: Heat wave alert in coastal area, Thunderstorm in south Karnataka

ಇಂದು ಹೀಟ್ ವೇವ್ ಜೊತೆಗೆ ಕರಾವಳಿಯಲ್ಲಿ ವರುಣಾರ್ಭಟ!
Image Credit source: google Gemini

ಬೆಂಗಳೂರು, ಏಪ್ರಿಲ್ 20: ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ (Karnataka Weather) ಹೆಚ್ಚಾಗಿದ್ದು, ಮುಂದಿನ 2 ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈಗಾಗಲೇ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕವು ಬಿಸಿಲಿನ ಬೇಗೆ ತತ್ತರಿಸಿದ್ದು, ಮುಂಬರುವ ದಿನಗಳಲ್ಲಿ ಈ ಭಾಗಗಳ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಹೀಟ್ ವೇವ್ ಜೊತೆಗೆ ಗುಡುಗು ಸಹಿತ ಮಳೆ

ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದೂ ಉಷ್ಣ ಅಲೆ ಇರಲಿದ್ದು, ಹೀಟ್ ವೇವ್ ಅಲರ್ಟ್​ ನೀಡಲಾಗಿದ್ದು, ಜೊತೆಗೆ ಗುಡುಗು ಸಹಿತ ಮಳೆಯೂ ಆಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರ್ಗಿ ಮತ್ತು ವಿಜಯಪುರದಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಉಳಿದೆಡೆ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಉಷ್ಣಾಘಾತದಿಂದ ರಕ್ಷಣೆ ಹೇಗೆ?

ಮುಂಬರುವ ದಿನಗಳಲ್ಲಿ ರಾಜ್ಯದೆಲ್ಲೆಡೆ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅವಶ್ಯಕತೆ ಇಲ್ಲದೆ ಮನೆಯಿಂದ ಹೊರಬರುವುದನ್ನು ತಪ್ಪಿಸುಂತೆ ಹೇಳಲಾಗಿದೆ. ಬೇಸಿಗೆ ರಜೆಯಲ್ಲಿ ಮಕ್ಕಳು ಬಿಸಿಲಲ್ಲಿ ಆಟವಾಡುವುದನ್ನು ಆದಷ್ಟು ನಿಯಂತ್ರಿಸುವಂತೆ ಸೂಚಿಸಲಾಗಿದೆ.

ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.

ಇದನ್ನೂ ಓದಿ ರಾಜ್ಯದಲ್ಲಿ ಬಿಸಿಲ ಬೇಗೆಯ ಜೊತೆಗೆ ವರುಣಾರ್ಭಟ! ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆಯ ಸಾಧ್ಯತೆ

ಇನ್ನೂ 5 ದಿನ ಇದೇ ವಾತಾವರಣ

ಏಪ್ರಿಲ್ 22 ರವರೆಗೆ ಕರ್ನಾಟಕದ ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಅಂತೆಯೇ ದಕ್ಷಿಣ ಒಳನಾಡಿನಲ್ಲಿಯೂ ಗುಡುಗು ಸಹಿತ ಮಳೆಯೊಂದಿಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 5 ದಿನಗಳವರೆಗೆ ಕರಾವಳಿ ಪ್ರದೇಶಗಳಲ್ಲಿ ಉಷ್ಣ ಅಲೆ ಇರಲಿದ್ದು, ಮುನ್ನೆಚ್ಚರಿಕಾ ಕ್ರಮವಹಿಸುವಂತೆ ಇಲಾಖೆ ತಿಳಿಸಿದೆ. ಜೊತೆಗೆ ಏಪ್ರಿಲ್ 21ರ ವರೆಗೆ ಉತ್ತರ ಒಳನಾಡಿನಲ್ಲಿ ಆಲಿಕಲ್ಲು ಮಳೆಯಾಗುವ ಸಂಭವವಿದೆ ಎಂದು ಹೇಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:46 am, Mon, 20 April 26

Source link

ಎರಡು ವರ್ಷಕ್ಕೊಂದು ಅನಿಮೇಟೆಡ್ ಸಿನಿಮಾ; 10 ವರ್ಷದ ಪ್ಲ್ಯಾನ್ ರೆಡಿ ಮಾಡಿದ ಹೊಂಬಾಳೆ – Kannada News | Hombale Films’ Mahavatara Universe: Parashurama and 10 Year Animated Dashavatara Plan

ಕಳೆದ ವರ್ಷ, ‘ಮಹಾವತಾರ ನರಸಿಂಹ’ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಮೂಡಿಸಿತು. ಈ ಅನಿಮೇಟೆಡ್ ಚಿತ್ರದೊಂದಿಗೆ ಹೊಂಬಾಳೆ ಚಿತ್ರಮಂದಿರಗಳಲ್ಲಿ ಹೊಸ ಅಲೆ ಸೃಷ್ಟಿಸಿತು. ಈಗ, ‘ಮಹಾವತಾರ ಸಿನಿಮ್ಯಾಟಿಕ್ ಯೂನಿವರ್ಸ್’ ನ ಭಾಗವಾಗಿ ಮತ್ತೊಂದು ಅದ್ಭುತ ಪ್ರಾಜೆಕ್ಟ್ ಘೋಷಿಸಲಾಗಿದೆ.
ಮೊದಲೇ ಹೇಳಿದಂತೆ ಭಗವಾನ್ ವಿಷ್ಣುವಿನ ಹತ್ತು ಅವತಾರಗಳನ್ನು ತರಲಾಗುತ್ತಿದೆಯಂತೆ. ‘ಮಹಾವತಾರ: ಪರಶುರಾಮ’ ಚಿತ್ರವನ್ನು ಪ್ರೇಕ್ಷಕರ ಎದುರು ತರಲಾಗುತ್ತಿದೆ. ವಿಷ್ಣುವಿನ ಅತ್ಯಂತ ಉಗ್ರ ರೂಪವೆಂದು ಪರಿಗಣಿಸಲಾದ ಪರಶುರಾಮನ ಕಥೆಯನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಪೋಸ್ಟರ್‌ನಲ್ಲಿ, ಪರಶುರಾಮನು ತನ್ನ ಮುಖ್ಯ ಆಯುಧವಾದ ಪರಶು (ಕೊಡಲಿ) ಹಿಡಿದುಕೊಂಡು ನಡೆಯುತ್ತಿರುವುದನ್ನು ತೋರಿಸಲಾಗಿದೆ.

ಆದರೆ, ಕೇವಲ ಪಾದಗಳನ್ನು ತೋರಿಸುವ ಮೂಲಕ, ನಿರ್ಮಾಪಕರು ಚಿತ್ರದ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಿದ್ದಾರೆ. ‘ಧರ್ಮವನ್ನು ಸೋಲಿಸಿ ಅನ್ಯಾಯ ಹೆಚ್ಚಾದಾಗ, ಪರಶುರಾಮ ಬರುತ್ತಾನೆ’ ಎಂಬ ಅರ್ಥವಿರುವ ಶೀರ್ಷಿಕೆಯು ಚಿತ್ರದ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಪರಶುರಾಮನ ಕೋಪ ಮತ್ತು ಅವನ ಉಗ್ರ ನೋಟವನ್ನು ಅನಿಮೇಷನ್ ತಂತ್ರಜ್ಞಾನದೊಂದಿಗೆ ಅತ್ಯಂತ ಭವ್ಯವಾದ ರೀತಿಯಲ್ಲಿ ಬೆಳ್ಳಿ ಪರದೆಯ ಮೇಲೆ ತೋರಿಸಲಾಗುವುದು ಎಂದು ತೋರುತ್ತದೆ.

‘ಮಹಾವತಾರ ನರಸಿಂಹ’ ಚಿತ್ರವನ್ನು ಕೇವಲ 6 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, 120 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಈ ಯಶಸ್ಸಿನಿಂದ ಉತ್ಸುಕರಾಗಿರುವ ಹೊಂಬಾಳೆ ಫಿಲ್ಮ್ಸ್, ಕ್ಲೀಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಬೃಹತ್ ಸರಣಿಯನ್ನು ಯೋಜಿಸಿದೆ. ಇದನ್ನು ಶಿಲ್ಪಾ ಧವನ್, ಕುಶಾಲ್ ದೇಸಾಯಿ ಮತ್ತು ಚೈತನ್ಯ ದೇಸಾಯಿ ಪ್ರಸ್ತುತಪಡಿಸಿದ್ದಾರೆ. ಅಶ್ವಿನ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ವಿಶ್ವದ ಭಾಗವಾಗಿ ಮುಂಬರುವ ಚಿತ್ರಗಳ ವಿವರಗಳನ್ನು ಸಹ ತಯಾರಕರು ಘೋಷಿಸಿದ್ದಾರೆ ಎಂದು ತಿಳಿದಿದೆ.

ಮಹಾವತಾರ: ಪರಶುರಾಮ್ (ಡಿಸೆಂಬರ್ 2027)

ಮಹಾವತಾರ: ರಘುನಂದನ್ (2029)

ಮಹಾವತಾರ: ದ್ವಾರಕಾದೀಶ (2031)

ಮಹಾವತಾರ: ಗೋಕುಲಾನಂದ (2033)

ಮಹಾವತಾರ: ಕಲ್ಕಿ (ಭಾಗ 1 & 2 – 2035, 2037)

ಅನಿಮೇಷನ್ ಕ್ಷೇತ್ರದಲ್ಲಿ ಭಾರತೀಯ ಪುರಾಣಗಳನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತರುವ ಗುರಿಯನ್ನು ತಂಡ ಹೊಂದಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರನ್ನೂ ಆಕರ್ಷಿಸುವಂತೆ ವಿನ್ಯಾಸಗೊಳಿಸಲಾದ ಈ ಚಿತ್ರವು ಡಿಸೆಂಬರ್ 2027 ರಲ್ಲಿ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಕೈಯಲ್ಲಿ ಗನ್ ಹಿಡಿದು ಬೆದರಿಸುತ್ತಾ ಬೈಕ್​​ನಲ್ಲಿ ಮೂವರ ಸವಾರಿ, ಭೀಕರ ಅಪಘಾತ, ಎಲ್ಲರೂ ಸಾವು – Kannada News | Thrill Ride Turns Fatal as Armed Trio Meets Deadly Crash in Bhopal

ಭೋಪಾಲ್, ಏಪ್ರಿಲ್ 20: ಕೈಯಲ್ಲಿ ಗನ್ ಹಿಡಿದು ಮೂವರು ಬೈಕ್​ನಲ್ಲಿ ಸವಾರಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಭೋಪಾಲ್​ನಲ್ಲಿ ನಡೆದಿದೆ. ಬಳಿಕ ಸಂಭವಿಸಿದ ಅಪಘಾತದಲ್ಲಿ ಮೂವರೂ ಪ್ರಾಣ ಕಳೆದುಕೊಂಡಿದ್ದಾರೆ. ವಿಡಿಯೋದಲ್ಲಿ ಮೂವರು ಸವಾರರು ಟ್ರಕ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿರುವುದನ್ನು ತೋರಿಸಲಾಗಿದೆ. ಆ ಕ್ಷಣದಲ್ಲಿ, ಇಟ್ಟಿಗೆಗಳನ್ನು ತುಂಬಿದ ಟ್ರಾಲಿ ಮುಂದೆ ಕಾಣಿಸಿಕೊಳ್ಳುತ್ತದೆ. ಅತಿ ವೇಗದಲ್ಲಿ ಪ್ರಯಾಣಿಸುತ್ತಿದ್ದಾಗ, ಸವಾ ನಿಯಂತ್ರಣ ಕಳೆದುಕೊಂಡು ಟ್ರಾಲಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ.

ಡಿಕ್ಕಿಯ ರಭಸಕ್ಕೆ ಮೂವರು ಸವಾರರು ಸಾವನ್ನಪ್ಪಿದ್ದಾರೆ. ಉಪಲಕ್ಷ್ ಕೋಲ್, ಅಮರೀಶ್ ಕೋಲ್ ಮತ್ತು ಹೇಮರಾಜ್ ಕೋಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರೂ ಒಂದೇ ಕುಟುಂಬದವರು. ವಿಡಿಯೋ ರೆಕಾರ್ಡ್​ ಮಾಡುತ್ತಾ ಹೋಗುತ್ತಿದ್ದ ಮತ್ತೊಂದು ಬೈಕ್​ನಲ್ಲಿರುವವರಿಗೂ ಕೂಡ ಅಪಘಾತವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಬಾಬರ್ ಆಝಂ – Kannada News | Babar Azam Creates New World Record with Few Dot Balls Century

ಟಿ20 ಕ್ರಿಕೆಟ್​ನಲ್ಲಿ ಪಾಕಿಸ್ತಾನ್ ಬ್ಯಾಟರ್ ಬಾಬರ್ ಆಝಂ (Babar Azam) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ. ಈ ಸೆಂಚುರಿಯೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಡಾಟ್ ಬಾಲ್ ಆಡಿ ಶತಕ ಪೂರೈಸಿದ ವಿಶ್ವ ದಾಖಲೆ ಬಾಬರ್ ಆಝಂ ಪಾಲಾಗಿದೆ.

ಪಾಕಿಸ್ತಾನ್ ಸೂಪರ್ ಲೀಗ್​ನ 29ನೇ ಪಂದ್ಯದಲ್ಲಿ ಪೇಶಾವರ್ ಝಲ್ಮಿ ಹಾಗೂ ಕ್ವೆಟ್ಟಾ ಗ್ಲಾಡಿಯೇಟರ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪೇಶಾವರ್ ಝಲ್ಮಿ ಪರ ಆರಂಭಿಕನಾಗಿ ಕಣಕ್ಕಿಳಿದ ಬಾಬರ್ ಆಝಂ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದರು.

ಮೊದಲ ಓವರ್​ನಿಂದಲೇ ರನ್​ ಗಳಿಸುತ್ತಾ ಸಾಗಿದ ಬಾಬರ್ ಆಝಂ ಒಂದೇ ಒಂದೇ ಒಂದು ಡಾಟ್ ಆಡದೇ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಅರ್ಧಶತಕದ ಬಳಿಕ ಬಾಬರ್ ಆಡಿದ್ದ ಒಂದೇ ಡಾಟ್ ಬಾಲ್. ಅಂದರೆ ತಾನೆದುರಿಸಿದ 36ನೇ ಎಸೆತದಲ್ಲಿ ಯಾವುದೇ ರನ್​ಗಳಿಸಿರಲಿಲ್ಲ.

ಇದಾದ ಬಳಿಕ ಸತತವಾಗಿ ಕನಿಷ್ಠ ಒಂದು ರನ್​ಗಳಿಸುತ್ತಾ ಸಾಗಿದ ಬಾಬರ್ ಆಝಂ 52 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಒಂದು ಡಾಟ್ ಬಾಲ್ ಆಡುವ ಮೂಲಕ ಸೆಂಚುರಿ ಸಿಡಿಸಿದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಇಂತಹದೊಂದು ಭರ್ಜರಿ ದಾಖಲೆ ನ್ಯೂಝಿಲೆಂಡ್​ನ ಫಿನ್ ಅಲೆನ್ ಹೆಸರಿನಲ್ಲಿತ್ತು. ಟಿ20 ವಿಶ್ವಕಪ್​ 2026 ರಲ್ಲಿ ಸೌತ್ ಆಫ್ರಿಕಾ ವಿರುದ್ಧ ಅಲೆನ್ 33 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಈ ವೇಳೆ ಅವರು ಕೇವಲ 4 ಡಾಟ್​ ಬಾಲ್​ಗಳನ್ನು ಮಾತ್ರ ಆಡಿದ್ದರು. ಈ ಮೂಲಕ ಅತೀ ಕಡಿಮೆ ಡಾಟ್​ ಬಾಲ್​ಗಳೊಂದಿಗೆ ಸೆಂಚುರಿ ಸಿಡಿಸಿದ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ ಕೇವಲ 1 ಡಾಟ್ ಬಾಲ್​ನೊಂದಿಗೆ ಶತಕ ಪೂರೈಸುವ ಮೂಲಕ ಬಾಬರ್ ಆಝಂ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ ಡಾಟ್ ಬಾಲ್ ಆಡಿ ಶತಕ ಬಾರಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Published On – 7:42 am, Mon, 20 April 26

Source link

‘ಧುರಂಧರ್ 2’ ಯಶಸ್ಸಿನ ಓಟಕ್ಕೆ ಬ್ರೇಕ್ ಕೊಟ್ಟ ‘ಭೂತ್ ಬಂಗ್ಲ’; ವೀಕೆಂಡ್​​ನಲ್ಲಿ ಭರ್ಜರಿ ಕಲೆಕ್ಷನ್ – Kannada News | Akshay Kumar’s Bhoot Bangala Dethrones Ranveer Singh’s Dhuranthar 2 at Box Office

ರಣವೀರ್ ಸಿಂಗ್ (Ranveer Singh) ಅವರ ‘ಧುರಂಧರ್ 2’ ಸಿನಿಮಾ ಒಳ್ಳೆಯ ರೀತಿಯಲ್ಲಿ ಕಲೆಕ್ಷನ್ ಮಾಡುತ್ತಾ ಸಾಗುತ್ತಾ ಇತ್ತು. ಸಿನಿಮಾ ರಿಲೀಸ್ ಆಗಿ ಸರಿಯಾಗಿ ಒಂದು ತಿಂಗಳು ಕಳೆದಿದೆ. ಆದಾಗ್ಯೂ ಇದರ ಓಟ ನಿಂತಿರಲಿಲ್ಲ. ಆದರೆ, ಈ ವೇಗಕ್ಕೆ ಅಕ್ಷಯ್ ಕುಮಾರ್ ನಟನೆಯ ‘ಭೂತ್ ಬಂಗ್ಲ’ ಸಿನಿಮಾ ಬ್ರೇಕ್ ಹಾಕಿದೆ. ಅಕ್ಷಯ್ ಕುಮಾರ್ ಚಿತ್ರ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಾ ಇದೆ. ಒಂದಾದ ಬಳಿಕ ಒಂದು ಗೆಲುವು ಸಿಗುತ್ತಿರುವುದಕ್ಕೆ ಬಾಲಿವುಡ್ ಮಂದಿ ಕೂಡ ಖುಷಿಯಾಗಿದ್ದಾರೆ.

ರಣವೀರ್ ಸಿಂಗ್ ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಯಿತು. ಸಿನಿಮಾ ರಿಲೀಸ್ ಆಗಿ 30 ದಿನ ಆಗಿದೆ. ಈ ಸಿನಿಮಾ ವಿಶ್ವ ಮಟ್ಟದಲ್ಲಿ 1756 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದ ಗ್ರಾಸ್ ಕಲೆಕ್ಷನ್ 1,335 ಕೋಟಿ ರೂಪಾಯಿ ಆಗಿದೆ. ಭಾನುವಾರ ಈ ಚಿತ್ರ 4 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದಕ್ಕೂ ಹಿಂದಿನ ಭಾನುವಾರ (ಏಪ್ರಿಲ್ 12) ಸಿನಿಮಾ 17 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದಕ್ಕೆ ಹೋಲಿಕೆ ಮಾಡಿದರೆ ಏಪ್ರಿಲ್ 19ರ ಗಳಿಕೆ ಬಹಳವೇ ಕಡಿಮೆ ಆಗಿದೆ. ಇದಕ್ಕೆ ಕಾರಣ ಆಗಿದ್ದು ಅಕ್ಷಯ್ ಕುಮಾರ್ ಅವರ ‘ಭೂತ್ ಬಂಗ್ಲ’ ಸಿನಿಮಾ.

‘ಧುರಂಧರ್ 2’ ಸಿನಿಮಾ ಅಬ್ಬರದ ಮಧ್ಯೆ ಸಿಕ್ಕಿ ಹಾಕಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ‘ಭೂತ್ ಬಂಗ್ಲ’ ಸಿನಿಮಾದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿತ್ತು. ಏಪ್ರಿಲ್ 17ರಂದು ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ಭಾನುವಾರ 23 ಕೋಟಿ ರೂಪಾಯಿ ಗಳಿಕೆ ಮಾಡಿದೆ. ‘ಧುರಂಧರ್ 2’ ಚಿತ್ರಕ್ಕೆ ನೀಡಲಾಗಿದ್ದ ಶೋಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಇದನ್ನು ‘ಭೂತ್ ಬಂಗ್ಲ’ಗೆ ನೀಡಲಾಗಿದೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಮತ್ತೆ ಪ್ರೆಗ್ನೆಂಟ್; 2ನೇ ಮಗುವಿನ ನಿರೀಕ್ಷೆಯಲ್ಲಿ ರಣವೀರ್ ಸಿಂಗ್

ಅಕ್ಷಯ್ ಕುಮಾರ್, ರಾಜ್​ಪಾಲ್ ಯಾದವ್ ಸೇರಿದಂತೆ ಅನೇಕರು ‘ಭೂತ್ ಬಂಗ್ಲ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ವಿಶ್ವ ಮಟ್ಟದ ಗಳಿಕೆ 95 ಕೋಟಿ ರೂಪಾಯಿ ಆಗಿದೆ. ಇದು ‘ಧುರಂಧರ್ 2’ ಯಶಸ್ಸಿನ ಓಟಕ್ಕೆ ಸಣ್ಣ ಬ್ರೇಕ್ ಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೇಣುಬಿಗಿದ ಸ್ಥಿತಿಯಲ್ಲಿ ಪೋಕ್ಸೋ ಕೇಸ್​​ ಆರೋಪಿ ಶವ ಪತ್ತೆ: ಆತ್ಮಹತ್ಯೆಯೋ? ಕೊಲೆಯೋ? – Kannada News | Kalaburagi pocso case accused hanged police probe suicide or foul play

ಕಲಬುರಗಿ, ಏಪ್ರಿಲ್​​ 20: ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾಗಿ ಪೋಕ್ಸೋ ಕೇಸ್​​ ಎದುರಿಸುತ್ತಿದ್ದ ಯುವಕನೋರ್ವನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ನಡೆದಿದೆ. ರೇವಣಸಿದ್ದಪ್ಪ ತಳಕೇರಿ (26) ಮೃತನಾಗಿದ್ದು, ಶೌಚಕ್ಕೆ ಹೋಗಿ ಬರೋದಾಗಿ ಹೇಳಿ ಹೋರಹೋದವ ಊರಾಚೆಗಿನ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿದ್ದಾನೆ. ಹೀಗಾಗಿ ರೇವಣಸಿದ್ದಪ್ಪ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಟಂಟಂ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ರೇವಣಸಿದ್ದಪ್ಪ, ತನ್ನದೇ ಆಟೋದಲ್ಲಿ ನಿತ್ಯ ಓಡಾಡ್ತಿದ್ದ ಅಪ್ರಾಪ್ತ ಬಾಲಕಿಯನ್ನು ಪ್ರೇಮಿಸಿದ್ದ. ಈ ನಡುವೆ ಇವರಿಬ್ಬರ ನಡುವಿನ ಪ್ರೇಮದ ವಿಚಾರ ಮನೆಯವರಿಗೂ ಗೊತ್ತಾಗಿದೆ. ಹೀಗಾಗಿ ಈತನ ಪೋಷಕರು ಮಗನನ್ನು ಊರು ಬಿಡಿಸಿ ಹೈದರಾಬಾದ್​​ಗೆ ಕರೆದುಕೊಂಡು ಹೋಗಿ ಕೆಲಸಕ್ಕೆ ಸೇರಿಸಿದ್ದರು. ಆದರೂ ಪ್ರಿತಿಸಿದ ಯುವತಿಯನ್ನು ತೊರೆಯಲು ಒಪ್ಪದ ಈತ ಆಕೆಯನ್ನು ಸಂಪರ್ಕಿಸಿ ಹೈದರಾಬಾದ್‌ಗೆ ಕರೆಸಿಕೊಂಡಿದ್ದ. ಸಾಲದ್ದಕ್ಕೆ ಆಕೆಯನನ್ನು ವಿವಾಹ ಕೂಡ ಆಗಿದ್ದ. ಈ ವಿಚಾರ ಬಾಲಕಿಯ ಮನೆಯವರಿಗೆ ಗೊತ್ತಾಗಿದ್ದೇ ತಡ ಪೊಲೀಸ್​​ ದೂರು ದಾಖಲಾಗಿದೆ.  ಪೋಕ್ಸೋ ಪ್ರಕರಣದ ಅಡಿ ರೇವಣಸಿದ್ದಪ್ಪನ ಬಂಧಿಸಿದ್ದ ಪೊಲೀಸರು, ಈತನನ್ನು ಜೈಲಿಗೆ ಕಳುಹಿಸಿದ್ದರು. ಕಳೆದ ಎರಡು ವಾರಗಳ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ರೇವಣಸಿದ್ದಪ್ಪ, ಊರುಬಿಟ್ಟು ಹೋಗೋಣ ಎಂದು ತಾಯಿಗೆ ಹೇಳಿದ್ದ. ಆದರೆ ತಾಯಿ ಮಗನಿಗೆ ಇಲ್ಲೇ ಇರೋಣ ಎಂದು ಧೈರ್ಯ ಹೇಳಿದ್ದಳು. ಈ ನಡುವೆಯೇ ಯುವಕನ ದಾರುಣ ಅಂತ್ಯವಾಗಿದೆ.

ಇದನ್ನೂ ಓದಿ: ಪಬ್ಬಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ; ಮಹಡಿಯಿಂದ ಬಿದ್ದು ಯುವಕ ಸಾವು!

ಇನ್ನು ರೇವಣಸಿದ್ದಪ್ಪ ಅಪ್ರಾಪ್ತ ಬಾಲಕಿಯನ್ನ ಮದುವೆಯಾದ ಬಳಿಕ, ಬಾಲಕಿಯ ಪೋಷಕರು ಆಕೆಯನ್ನ ಕರೆದುಕೊಂಡು ಬಂದು ತಾಳಿ ಕಿತ್ತುಹಾಕಿದ್ದರು. ಅಲ್ಲದೆ, ಅದನ್ನು ರೇವಣಸಿದ್ದಪ್ಪನ ಮುಖದ ಮೇಲೆ ಬಿಸಾಕಿದ್ದರಂತೆ. ಹೀಗಾಗಿ ಅತ್ತ ತಾನು ಪ್ರೀತಿಸಿದ ಹುಡುಗಿಯೂ ಇಲ್ಲ‌, ಇತ್ತ ಪೋಕ್ಸೋ ಪ್ರಕರಣ ಬೇರೆ ಎಂದು ರೇವಣಸಿದ್ದಪ್ಪ ತೀವ್ರವಾಗಿ ನೊಂದಿದ್ದ. ಇನ್ಸ್ಟಾಗ್ರಾಂನಲ್ಲಿ ತನ್ನದೇ ಫೋಟೋಗೆ RIP ಎಂದು ಬರೆದು ಪೋಸ್ಟ್ ಕೂಡ ಮಾಡಿದ್ದ.ಪರಿಸ್ಥಿತಿ ವಿಕೋಪಕ್ಕೆ ಹೋಗ್ತಿರೊದನ್ನ ಮನಗಂಡ ಪೋಷಕರು, ರೇವಣಸಿದ್ದಪ್ಪನನ್ನ ತಮ್ಮ ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಆದರೂ ತಮ್ಮ ಗ್ರಾಮಕ್ಕೆ ಈತ ಬಂದು ಹೋಗ್ತಿದ್ದ. ಇದರ ಮಧ್ಯೆ ಊರಲ್ಲಿ ರೇವಣಸಿದ್ದಪ್ಪನ ಮೇಲೆ ದಾಖಲಾಗಿದ್ದ ಪೋಕ್ಸೋ ಕೇಸ್ ಬಗ್ಗೆ ಜನ ಮಾತಾಡಿಕೊಳ್ಳತೊಡಗಿದ್ದರು. ಹೀಗಾಗಿ ಪ್ರಾಣಕಳೆದುಕೊಳ್ಳುವ ನಿರ್ಧಾರಕ್ಕೆ ಈತ ಬಂದಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೇವಣಸಿದ್ದಪ್ಪ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡಿದ್ದಾನ ಅಥವಾ ಯಾರಾದರೂ ಕೊಲೆ ಮಾಡಿ ಶವವನ್ನ ಮರಕ್ಕೆ ನೇಣು ಹಾಕಿದ್ದಾರಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇರಾನ್ ಶಾಂತಿ ಮಾತುಕತೆ ತಿರಸ್ಕರಿಸಿದ್ದೇಕೆ, ಅಮೆರಿಕದ ಅತಿಯಾದ ಬೇಡಿಕೆಗಳು ಮತ್ತು ದ್ವಂದ್ವ ನೀತಿಗೆ ಇರಾನ್ ಗರಂ – Kannada News | Ceasefire Strain: Iran Declines Talks, Points to US Conditions

ಡೊನಾಲ್ಡ್ ಟ್ರಂಪ್ -ಖಮೇನಿ Image Credit source: Google Gemini

ಟೆಹ್ರಾನ್, ಏಪ್ರಿಲ್ 20: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್​ನಲ್ಲಿ ನಡೆಯಬೇಕಿದ್ದ ಅಮೆರಿಕ ಮತ್ತು ಇರಾನ್(Iran) ನಡುವಿನ ಎರಡನೇ ಸುತ್ತಿನ ಮಹತ್ವದ ಮಾತುಕತೆಯನ್ನು ಇರಾನ್ ಅಧಿಕೃತವಾಗಿ ತಿರಸ್ಕರಿಸಿದೆ. ಅಮೆರಿಕದ ಅತಿಯಾದ ಬೇಡಿಕೆಗಳು ಮತ್ತು ನೌಕಾ ದಿಗ್ಬಂಧನವೇ ಈ ಬಿಕ್ಕಟ್ಟಿಗೆ ಕಾರಣ ಎಂದು ಇರಾನ್ ದೂರಿದೆ.

ಇರಾನ್​ನ ಐಆರ್​ಎನ್​ಎ ಬಿತ್ತರಿಸಿದ್ದ ವರದಿ ಪ್ರಕಾರ, ಇಸ್ಲಾಮಾಬಾದ್‌ನಲ್ಲಿ ಮಾತುಕತೆ ನಡೆಯಲಿದೆ ಎಂಬ ವರದಿಗಳನ್ನು ಇರಾನ್ ಸಂಪೂರ್ಣವಾಗಿ ನಿರಾಕರಿಸಿದೆ. ಅಮೆರಿಕ ತನ್ನ ನಿರ್ಧಾರಗಳನ್ನು ಪದೇ ಪದೇ ಬದಲಿಸುತ್ತಿದೆ ಮತ್ತು ಕದನ ವಿರಾಮದ ನೀತಿಗಳನ್ನು ಉಲ್ಲಂಘಿಸಿ ನೌಕಾ ದಿಗ್ಬಂಧನದ ಮೂಲಕ ಬೆದರಿಕೆ ಹಾಕುತ್ತಿದೆ. ಇಂತಹ ವಾತಾವರಣದಲ್ಲಿ ರಚನಾತ್ಮಕ ಮಾತುಕತೆ ಸಾಧ್ಯವಿಲ್ಲ ಎಂದು ಇರಾನ್ ಕಟುವಾಗಿ ಹೇಳಿದೆ.

ಟ್ರಂಪ್ ಆಶಾವಾದ ಮತ್ತು ನಿಯೋಗದ ಸಿದ್ಧತೆ
ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಮಾತುಕತೆಯ ಬಗ್ಗೆ ಭಾರಿ ಆಶಾವಾದ ಹೊಂದಿದ್ದರು. ತಮ್ಮ ‘ಟ್ರೂತ್ ಸೋಶಿಯಲ್’ ಪೋಸ್ಟ್‌ನಲ್ಲಿ ಅವರು, ಒಪ್ಪಂದ ಸಿದ್ಧವಾಗಿದೆ, ನಮಗೆ ಉತ್ತಮ ಅವಕಾಶವಿದೆ ಎಂದು ಬರೆದುಕೊಂಡಿದ್ದರು. ಇದಕ್ಕಾಗಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಅಳಿಯ ಜೇರೆಡ್ ಕುಶ್ನರ್ ಅವರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಿದ್ಧತೆ ನಡೆಸಿದ್ದರು.

ಶಾಂತಿ ಮಾತುಕತೆಗೆ ಅಡ್ಡಿಯಾಗಿರುವುದು ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನ. ಇತ್ತೀಚೆಗೆ ಇರಾನ್‌ನ ಹಡಗೊಂದರ ಮೇಲೆ ಅಮೆರಿಕದ ವಿಧ್ವಂಸಕ ನೌಕೆ ಗುಂಡು ಹಾರಿಸಿ ಅದನ್ನು ವಶಪಡಿಸಿಕೊಂಡ ಘಟನೆ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. “ದಿಗ್ಬಂಧನವನ್ನು ತೆಗೆದುಹಾಕದೆ ಯಾವುದೇ ಮಾತುಕತೆ ಇಲ್ಲ” ಎಂಬುದು ಇರಾನ್‌ನ ಪಟ್ಟು.

ಮತ್ತಷ್ಟು ಓದಿ: ಹಾರ್ಮುಜ್​ನಲ್ಲಿ ಭಾರತದ ಹಡಗುಗಳ ಮೇಲೆ ಇರಾನ್ ದಾಳಿ, ಇರಾನ್ ರಾಯಭಾರಿ ಬಳಿ ವಿವರಣೆ ಕೇಳಿದ ಭಾರತ

ಫೆಬ್ರವರಿ 28 ರಂದು ನಡೆದ ಅಚ್ಚರಿಯ ದಾಳಿಯ ನಂತರ ಜಾರಿಗೆ ಬಂದಿದ್ದ ಎರಡು ವಾರಗಳ ಕದನ ವಿರಾಮವು ಏಪ್ರಿಲ್ 22ಕ್ಕೆ ಮುಕ್ತಾಯಗೊಳ್ಳಲಿದೆ. ಟ್ರಂಪ್ ಅವರು ಇರಾನ್ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸುತ್ತಲೇ, ಮತ್ತೊಂದೆಡೆ ನ್ಯಾಯಯುತ ಒಪ್ಪಂದ ನೀಡುತ್ತಿರುವುದಾಗಿ ಹೇಳುತ್ತಿದ್ದಾರೆ. ಒಂದು ವೇಳೆ ಒಪ್ಪಂದವಾಗದಿದ್ದರೆ ಇರಾನ್‌ನ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ವಾಷಿಂಗ್ಟನ್ ತನ್ನ ಮೇಲೆ ಒತ್ತಡ ಹೇರಲು “ದೂಷಣೆಯ ಆಟ”ವಾಡುತ್ತಿದೆ ಮತ್ತು ಮಾತುಕತೆಯ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದೆ ಎಂದು ಟೆಹ್ರಾನ್ ಆರೋಪಿಸಿದೆ. ಇದರಿಂದಾಗಿ ಇಸ್ಲಾಮಾಬಾದ್ ಮಾತುಕತೆಗಳು ಆರಂಭವಾಗುವ ಮೊದಲೇ ವಿಫಲಗೊಂಡಂತಾಗಿವೆ.

ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಈ ಸಂಧಾನ ಪ್ರಕ್ರಿಯೆಯು ಮಧ್ಯಪ್ರಾಚ್ಯದ ಭವಿಷ್ಯವನ್ನು ನಿರ್ಧರಿಸಬೇಕಿತ್ತು. ಆದರೆ, ಇರಾನ್‌ನ ಕಠಿಣ ನಿಲುವು ಮತ್ತು ಅಮೆರಿಕದ ಬಿಗಿ ಹಿಡಿತದಿಂದಾಗಿ ಕದನ ವಿರಾಮದ ನಂತರ ಮತ್ತೆ ಭೀಕರ ಯುದ್ಧ ಸಂಭವಿಸುವ ಆತಂಕ ಎದುರಾಗಿದೆ. ಈ ಮಾತುಕತೆಗೆ ಪಾಕಿಸ್ತಾನವು ಆತಿಥ್ಯ ವಹಿಸಬೇಕಿತ್ತು ಮತ್ತು ಇತ್ತೀಚೆಗಷ್ಟೇ ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರು ಇರಾನ್‌ಗೆ ಭೇಟಿ ನೀಡಿ ಮಾತುಕತೆಗೆ ವೇದಿಕೆ ಸಿದ್ಧಪಡಿಸಿದ್ದರು. ಆದರೆ ಈಗ ಇರಾನ್ ಹಿಂದೆ ಸರಿದಿರುವುದು ರಾಜತಾಂತ್ರಿಕ ಹಿನ್ನಡೆಯಾಗಿ ಕಂಡುಬರುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದೀಪಿಕಾ-ರಣವೀರ್ ಮಧ್ಯೆ ಯಾವುದೂ ಸರಿ ಇಲ್ಲ ಎಂದವರಿಗೆಲ್ಲ ಬಿತ್ತು ಬಲವಾದ ಏಟು – Kannada News | Deepika Padukone and Ranveer Singh Expecting Second Child: Debunking Separation Rumors

‘ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸಂಸಾರ ಸರಿ ಇಲ್ಲ’-ಹೀಗೊಂದು ವಿಷಯ ಇತ್ತೀಚೆಗೆ ಬಲವಾಗಿ ಚರ್ಚೆ ಆಗಿತ್ತು. ಇದಕ್ಕೆ ಕಾರಣವೂ ಇದೆ. ರಣವೀರ್ ಸಿಂಗ್ ಅವರು ‘ಧುರಂಧರ್ 2’ ಯಶಸ್ಸಿನ ಅಲೆಯಲ್ಲಿ ತೇಲಿದರೂ ದೀಪಿಕಾ ಪಡುಕೋಣೆ ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹೊರಹಾಕಿರಲಿಲ್ಲ. ಇದು ಚರ್ಚೆಗೆ ಕಾರಣ ಆಗಿತ್ತು. ರಣವೀರ್-ದೀಪಿಕಾ ದೂರ ಆಗುತ್ತಾರೆ ಎಂದೆಲ್ಲ ಮಾತನಾಡಿಕೊಂಡಿದ್ದೇ ಬಂತು. ಆದರೆ, ಹಾಗಾಗಲೇ ಇಲ್ಲ. ದೀಪಿಕಾ (Deepika Padukone) ಎರಡನೇ ಬಾರಿಗೆ ತಾಯಿ ಆಗುತ್ತಿರುವುದಾಗಿ ಘೋಷಿಸಿದ್ದಾರೆ. ಇವರ ಸಂಬಂಧ ಸರಿ ಇಲ್ಲ ಎಂದವರಿಗೆಲ್ಲ ಭಾರೀ ಮುಖಭಂಗ ಆಗಿದೆ.

ದೀಪಿಕಾ ಎಡಪಂಕ್ತೀಯ ಸಿದ್ಧಾಂತಗಳನ್ನು ನಂಬುತ್ತಾರೆ. ಅದಕ್ಕೆ ಈ ಮೊದಲು ಅವರು ಜೆಎನ್​ಯು ಯುನಿವರ್ಸಿಟಿಗೆ ತೆರಳಿ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಬೆಂಬಲ ಕೊಟ್ಟಿದ್ದರು. ರಣವೀರ್ ಸಿಂಗ್ ಅವರು ಇತ್ತೀಚೆಗೆ ಆರ್​​ಎಸ್​ಎಸ್ ಕಚೇರಿಗೆ ತೆರಳಿದ್ದರು. ಈ ಘಟನೆಯಿಂದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಅವರ ಸಿದ್ಧಾಂತ ಬೇರೆ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿದೆ. ಆದರೆ, ಇದು ಅವರ ಸಂಸಾರದ ಮೇಲೆ ಯಾವುದೇ ಪರಿಣಾಮ ಬಿರಿಲ್ಲ.

ದೀಪಿಕಾ ಹಾಗೂ ರಣವೀರ್ ಅವರನ್ನು ಇಷ್ಟಪಡದ ಕೆಲವರು ಇತ್ತೀಚೆಗೆ ಬಾಯಿಗೆ ಬಂದಂತೆ ಮಾತನಾಡಿದ್ದರು. ‘ರಣವೀರ್-ದೀಪಿಕಾ ಸಿದ್ಧಾಂತ, ಆಲೋಚನೆಗಳು ಹೊಂದಿಕೆ ಆಗುತ್ತಿಲ್ಲ. ಇವರು ಬೇರೆ ಆಗುತ್ತಾರೆ’ ಎಂದೆಲ್ಲ ಕೆಲವರು ವದಂತಿ ಹಬ್ಬಿಸಿದ್ದು ಇದೆ. ಆದರೆ, ಇದು ಸುಳ್ಳು ಎಂಬುದು ಈಗ ಸ್ಪಷ್ಟವಾಗಿದೆ. ಈ ರೀತಿಯ ಸುದ್ದಿ ಹಬ್ಬಿಸಿದವರಿಗೆ ದೀಪಿಕಾ ದೊಡ್ಡ ಏಟು ಕೊಟ್ಟಿದ್ದಾರೆ. ಎಲ್ಲಾ ಸೆಲೆಬ್ರಿಟಿಗಳು ಎಲ್ಲಾ ವಿಷಯವನ್ನೂ ಹೇಳಿಕೊಳ್ಳುವುದಿಲ್ಲ. ಹಾಗಂದ ಮಾತ್ರಕ್ಕೆ ಅವರ ಜೀವನ ಸರಿ ಇಲ್ಲ ಎಂದು ನಿರ್ಧರಿಸಬಾರದು. ರಣವೀರ್-ದೀಪಿಕಾ ಪ್ರಕರಣ ಇದಕ್ಕೆ ಒಳ್ಳೆಯ ಉದಾಹರಣೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಮತ್ತೆ ಪ್ರೆಗ್ನೆಂಟ್; 2ನೇ ಮಗುವಿನ ನಿರೀಕ್ಷೆಯಲ್ಲಿ ರಣವೀರ್ ಸಿಂಗ್

ದೀಪಿಕಾ ಹಾಗೂ ರಣವೀರ್ ಅವರು ಭಾನುವಾರ ಪ್ರೆಗ್ನೆನ್ಸಿ ಘೋಷಣೆ ಮಾಡಿದರು. ಮಗಳು ದುವಾ ಬಳಿ ಪ್ರೆಗ್ನೆನ್ಸಿ ಕಿಟ್ ಹಿಡಿಸಿ ಈ ವಿಷಯ ಅಭಿಮಾನಿಗಳಿಗೆ ತಿಳಿಸಿದರು.  ಈಗ ದೀಪಿಕಾ ಎರಡನೇ ಬಾರಿಗೆ ತಾಯಿ ಆಗುತ್ತಿದ್ದು ಎಲ್ಲರೂ ಶುಭ ಕೋರುತ್ತಿದ್ದಾರೆ. ಅವರು ಮೊದಲು ಒಪ್ಪಿಕೊಂಡ ಸಿನಿಮಾ ಕೆಲಸ ಪೂರ್ಣಗೊಳಿಸಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಇಂದು ಅಕ್ಷಯ ತೃತೀಯ ಆಚರಣೆ ವಿಧಾನ ಹೇಗೆ ನೋಡಿ! – Kannada News | Akshaya Tritiya: Auspicious Rituals, Significance and Puja Timings for Eternal Prosperity

ಇಂದು ಅಕ್ಷಯ ತೃತೀಯ ಆಚರಣೆ ವಿಧಾನ ಹೇಗೆ ಎಂಬುದನ್ನು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ನಾವು ಹುಟ್ಟಿದ ಕ್ಷಣದಿಂದ ಸಾವಿನವರೆಗೂ ದೇವರ ಅನುಗ್ರಹ, ತಂದೆ-ತಾಯಿಗಳ ಆಶೀರ್ವಾದದ ಜೊತೆಗೆ, ಗುರುವಿನ ಅನುಗ್ರಹವು ಅತ್ಯಂತ ಮಹತ್ವದ್ದಾಗಿದೆ. “ಹರ ಮುನಿದರೂ ಗುರು ಕಾಯುವನು” ಎಂಬ ನುಡಿಯು ಗುರುವಿನ ಸರ್ವೋಚ್ಚ ಸ್ಥಾನವನ್ನು ಸಾರುತ್ತದೆ.

ಇತಿಹಾಸದ ಪ್ರಕಾರ, ಇದು ತ್ರೇತಾಯುಗ ಆರಂಭವಾದ ದಿನ, ಪಾಂಡವರಿಗೆ ಅಕ್ಷಯ ಪಾತ್ರೆ ದೊರೆತ ದಿನ, ಕುಬೇರನಿಗೆ ಮಹಾಲಕ್ಷ್ಮಿ ಒಲಿದ ದಿನ, ಪರಶುರಾಮ ಜಯಂತಿ ಮತ್ತು ಗಂಗೆ ಭೂಮಿಗೆ ಇಳಿದ ದಿನವಾಗಿದೆ. ಮಹಾಭಾರತದ ರಚನೆಯೂ ಇದೇ ದಿನ ಪ್ರಾರಂಭವಾಯಿತು. ಈ ದಿನ ಅನ್ನದಾನ, ವಸ್ತ್ರದಾನ, ಜಲದಾನಗಳು ಅತ್ಯಂತ ಶುಭಪ್ರದ. ಯಾವುದೇ ಹೊಸ ಕಾರ್ಯ, ಗೃಹಪ್ರವೇಶ ಅಥವಾ ವಿವಾಹಕ್ಕೆ ಈ ದಿನ ಶುಭಪ್ರದವಾಗಿದ್ದು, ಯಾವುದೇ ದೋಷವಿರುವುದಿಲ್ಲ. ಶುಭ ಮುಹೂರ್ತಗಳಲ್ಲಿ ಪೂಜೆ ಸಲ್ಲಿಸಿ, ಸಾಲ ಮಾಡದೆ ಶಕ್ತ್ಯಾನುಸಾರ ದಾನ ಕಾರ್ಯಗಳನ್ನು ಕೈಗೊಳ್ಳುವುದು ಉತ್ತಮ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

 

Source link

Horoscope Today: ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಮನ್ನಣೆ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 20, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ತದಿಗೆ ತಿಥಿ, ಅಶ್ವಿನಿ ನಕ್ಷತ್ರ, ಆಯುಷ್ಮಾನ್ ಯೋಗ ಮತ್ತು ಕೌಲವ ಕರಣ ಒಳಗೊಂಡಿರುವ ವಿಶೇಷ ದಿನವಾಗಿದೆ. ಈ ದಿನವು ಅಕ್ಷಯ ತೃತೀಯ, ಬಸವ ಜಯಂತಿ ಮತ್ತು ಶಂಭೂರಿನಲ್ಲಿ ಸುಬ್ರಹ್ಮಣ್ಯ ಉತ್ಸವವನ್ನು ಆಚರಿಸುವ ಒಂದು ಮಹಾ ಪರ್ವ ದಿನವಾಗಿದೆ.

ಅಕ್ಷಯ ತೃತೀಯ ಎಂದರೆ “ಕ್ಷಯವಿಲ್ಲದೆ ಇರುವುದು” ಎಂದರ್ಥ. ಈ ದಿನ ಕೈಗೊಳ್ಳುವ ಯಾವುದೇ ಶುಭ ಕಾರ್ಯಗಳು ಕ್ಷಯವಾಗದೆ ಅಭಿವೃದ್ಧಿಯನ್ನು ಕಾಣುತ್ತವೆ. ತ್ರೇತಾಯುಗದ ಪ್ರಾರಂಭ, ಗಂಗೆಯ ಅವತಾರ, ವೇದವ್ಯಾಸರು ಮಹಾಭಾರತ ರಚಿಸಿದ ದಿನ, ಕುಚೇಲನಿಗೆ ಶ್ರೀಕೃಷ್ಣನ ಅನುಗ್ರಹ, ಪಾಂಡವರಿಗೆ ಅಕ್ಷಯ ಪಾತ್ರೆ ಪ್ರಾಪ್ತಿ, ಮತ್ತು ಕುಬೇರನಿಗೆ ಮಹಾಲಕ್ಷ್ಮಿಯ ವರ ಸಿದ್ಧಿಯಾದ ಮಹತ್ವದ ದಿನ ಇದಾಗಿದೆ ಎಂದು ಗುರೂಜಿ ಹೇಳಿದ್ದಾರೆ.

 

 

 

 

Source link