Headlines

Bengaluru Air Quality: ಬೆಂಗಳೂರು, ಮೈಸೂರು ವಾಯು ಗುಣಮಟ್ಟದಲ್ಲಿಂದು ಸುಧಾರಣೆ – Kannada News | Bangalore Air Pollution Crisis: Bengaluru, Mysuru Air Quality is getting better

ಬೆಂಗಳೂರು, ಮೈಸೂರು ವಾಯು ಗುಣಮಟ್ಟದಲ್ಲಿಂದು ಸುಧಾರಣೆ ಬೆಂಗಳೂರು, ಏಪ್ರಿಲ್ 19: ರಾಜ್ಯದ ಏರ್ ಕ್ವಾಲಿಟಿಯಲ್ಲಿ ಕಳೆದ ಕೆಲ ದಿನಗಳಿಂದ ಸುಧಾರಣೆ ಕಂಡು ಬಂದಿದೆ. ದೇಶದ ಉಳಿದ ಯಾವುದೇ ಮೆಟ್ರೋ ಸಿಟಿಗಳಿಗೆ ಹೋಲಿಸಿದರೂ ಬೆಂಗಳೂರಿನ ವಾಯು ಗುಣಮಟ್ಟ  (Bengaluru Air Quality)  ಉತ್ತಮವಾದದ್ದಾಗಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇಂದು…

Read More

IPL 2026: ಹೀಗೊಂದು ‘ಅವಮಾನಕರ’ ದಾಖಲೆ ಬರೆದ RCB

ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಆರು ತಂಡಗಳು ಒಂದೇ ಮೈದಾನದಲ್ಲಿ 100 ಪಂದ್ಯಗಳನ್ನಾಡಿದೆ. ಈ ನೂರು ಪಂದ್ಯಗಳ ಸಾಧನೆ ಮಾಡಿದ ಮೊದಲ ತಂಡ ಎಂದರೆ ಇಂಗ್ಲೆಂಡ್​ನ ಸರ್ರೆ ಟೀಮ್. ಇದಾದ ಬಳಿಕ ಹ್ಯಾಂಪ್​ಶೇರ್ ಸೇರಿದಂತೆ ಹಲವು ತಂಡಗಳು ಕೌಂಟಿ ಕ್ರಿಕೆಟ್​ನಲ್ಲಿ ಒಂದೇ ಮೈದಾನದಲ್ಲಿ 100 ಕ್ಕಿಂತ ಹೆಚ್ಚು ಪಂದ್ಯಗಳನ್ನಾಡಿದೆ. ಈ ಪಟ್ಟಿಗೆ ಹೊಸ ಸೇರ್ಪಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB). ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 100 ಪಂದ್ಯಗಳನ್ನಾಡಿದ ವಿಶೇಷ ದಾಖಲೆ ಬರೆದಿದೆ. ಆದರೆ…

Read More

‘ರಾಮಾಯಣ’ ಚಿತ್ರಕ್ಕೆ ಪಾಶ್ಚಿಮಾತ್ಯ ಶೈಲಿಯ ಸ್ಪರ್ಶ: ಸಮರ್ಥನೆ ಮಾಡಿಕೊಂಡ ಯಶ್ – Kannada News | Yash and Namit Malhotra defend Ramayana international look at Cinemacon Las Vegas

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ (Ramayana) ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಿರ್ದೇಶಕ ನಿತೇಶ್ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಪ್ರಚಾರ ಕಾರ್ಯಕ್ರಮಗಳು ಅದ್ದೂರಿಯಾಗಿ ಆರಂಭವಾಗಿವೆ. ಇತ್ತೀಚೆಗೆ ಲಾಸ್ ವೇಗಸ್‌ನಲ್ಲಿ ನಡೆದ ಪ್ರತಿಷ್ಠಿತ ‘ಸಿನಿಮಾಕಾನ್’ (CinemaCon) ಕಾರ್ಯಕ್ರಮದಲ್ಲಿ ನಟ ಯಶ್ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಚಿತ್ರದ ಬಗ್ಗೆ ಮಾತನಾಡಿದರು. ಈ ವೇಳೆ ಸಿನಿಮಾದಲ್ಲಿನ ಪಾಶ್ಚಿಮಾತ್ಯ ಶೈಲಿಯ ಬಗ್ಗೆ ಯಶ್ (Yash) ಸ್ಪಷ್ಟನೆ ನೀಡಿದರು. ‘ರಾಮಾಯಣ’ ಸಿನಿಮಾದ ಗ್ಲಿಂಪ್ಸ್ ಇತ್ತೀಚೆಗೆ ಬಿಡುಗಡೆ…

Read More

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಬಿಸಿಲ ಬೇಗೆಯ ಜೊತೆಗೆ ವರುಣಾರ್ಭಟ! ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆಯ ಸಾಧ್ಯತೆ – Kannada News | Karnataka Weather Forecast: Heat wave alert in coastal area, Hailstorm in south Karnataka

ರಾಜ್ಯದಲ್ಲಿ ಬಿಸಿಲ ಬೇಗೆಯ ಜೊತೆಗೆ ವರುಣಾರ್ಭಟ! ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆಯ ಸಾಧ್ಯತೆ Image Credit source: google Gemini ಬೆಂಗಳೂರು, ಏಪ್ರಿಲ್ 19: ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ (Karnataka Weather)  ಹೆಚ್ಚಾಗಿದ್ದು, ಮುಂದಿನ 2 ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈಗಾಗಲೇ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕವು ಬಿಸಿಲಿನ ಬೇಗೆ ತತ್ತರಿಸಿದ್ದು, ಮುಂಬರುವ ದಿನಗಳಲ್ಲಿ ಈ ಭಾಗಗಳ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ…

Read More

ಲಗ್ಗೆರೆ ಬಸ್ ನಿಲ್ದಾಣದಲ್ಲಿ ಅಗ್ನಿಗೆ ಆಹುತಿಯಾದ ಬಿಎಂಟಿಸಿ ಬಸ್​​: ಕ್ಷಣ ಮಾತ್ರದಲ್ಲಿ ತಪ್ಪಿದ ದುರಂತ – Kannada News | BMTC Bus Engulfed in Flames at Laggere Bus Stand, Bengaluru

ಬೆಂಗಳೂರು, ಏಪ್ರಿಲ್​ 19: ಲಗ್ಗೆರೆ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ಒಂದು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ನಿನ್ನೆ ಸಂಜೆ ಸುಮಾರು 4:50ಕ್ಕೆ ಮೆಜೆಸ್ಟಿಕ್‌ನಿಂದ ಲಗ್ಗೆರೆ ಬಸ್ ನಿಲ್ದಾಣಕ್ಕೆ ಬಂದಿದ್ದ ಬಿಎಂಟಿಸಿ ಬಸ್‌ ನಿಲ್ಲಿಸಿದ ನಂತರ ಚಾಲಕ ಮತ್ತು ನಿರ್ವಾಹಕರು ಬಸ್ ನಿಲ್ದಾಣದೊಳಗೆ ತೆರಳಿದ್ದರು. ಅದಾಗಿ ಐದೇ ನಿಮಿಷದೊಳಗೆ ಬಸ್‌ನ ಇಂಜಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ, ಅಧಿಕಾರಿಗಳು, ಚಾಲಕ-ನಿರ್ವಾಹಕರು ಹಾಗೂ ಸ್ಥಳೀಯರು ಬೆಂಕಿಯನ್ನು ನಂದಿಸಲು ಫೋಮ್ ಮತ್ತು ನೀರನ್ನು ಬಳಸಿ…

Read More

ಕಾಡುಕೋಣದ ದಾಳಿಗೆ ಪ್ರಾಣಬಿಟ್ಟ ಕಾಫಿ ತೋಟದ ಕೆಲಸಗಾರ: 30 ವರ್ಷದ ಯುವಕನ ದಾರುಣ ಸಾವು – Kannada News | Chikkamagaluru: Wild Bison Attack Kills Coffee Worker, Escalates Human Animal Conflict

ಕಾಡುಕೋಣದ ದಾಳಿಗೆ ಬಲಿಯಾದ ಯುವಕImage Credit source: Tv9 Kannada ಚಿಕ್ಕಮಗಳೂರು, ಏಪ್ರಿಲ್​​ 19: ರಾಜ್ಯದಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಮುಂದುವರಿದಿದೆ. ಕಾಡಾನೆಗಳ ಉಪಟಳದಿಂದ ಮೊದಲೇ ಕಂಗೆಟ್ಟಿದ್ದ ಕಾಫಿ ನಾಡು ಚಿಕ್ಕಮಗಳೂರಲ್ಲಿ (Chikkamagaluru) ಇದೀಗ ಕಾಡುಕೋಣಗಳ ಹಾವಳಿಯೂ ಶುರುವಾಗಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕಾಡುಕೋಣ ದಾಳಿ ನಡೆಸಿದ ಪರಿಣಾಮ 30 ವರ್ಷದ ಯುವಕ ಚೇತನ್​​ ಎಂಬಾತ ದಾರುಣವಾಗಿ ಮೃತಪಟ್ಟಿದ್ದಾನೆ. ಎದೆಯ ಭಾಗಕ್ಕೆ ಕಾಡುಕೋಣ ಇರಿದ ಕಾರಣ ಆತ ಉಸಿರು ಚೆಲ್ಲಿರುವ…

Read More

Daily Devotional: ಜೀವನ ಪೂರ್ತಿ ಮನುಷ್ಯನಿಗೆ ಗುರುವಿನ ಅನುಗ್ರಹ ಬೇಕೇ ಬೇಕು, ಯಾಕೆ ಗೊತ್ತಾ? – Kannada News | Why a Gurus Guidance is Essential for Human Existence

ಜೀವನ ಪೂರ್ತಿ ಮನುಷ್ಯನಿಗೆಗುರುವಿನ ಅನುಗ್ರಹ ಬೇಕಾ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ನಾವು ಹುಟ್ಟಿದ ಕ್ಷಣದಿಂದ ಸಾವಿನವರೆಗೂ ದೇವರ ಅನುಗ್ರಹ, ತಂದೆ-ತಾಯಿಗಳ ಆಶೀರ್ವಾದದ ಜೊತೆಗೆ, ಗುರುವಿನ ಅನುಗ್ರಹವು ಅತ್ಯಂತ ಮಹತ್ವದ್ದಾಗಿದೆ. “ಹರ ಮುನಿದರೂ ಗುರು ಕಾಯುವನು” ಎಂಬ ನುಡಿಯು ಗುರುವಿನ ಸರ್ವೋಚ್ಚ ಸ್ಥಾನವನ್ನು ಸಾರುತ್ತದೆ. ತಂದೆ-ತಾಯಿಗಳು ಮೊದಲ ಗುರುಗಳಾದರೆ, ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಉದ್ಯೋಗದಲ್ಲಿ ಮಾರ್ಗದರ್ಶನ ನೀಡುವವರು ಸಹ ಗುರುಗಳೇ. ಪರಿಪೂರ್ಣ ಜೀವನ ಮತ್ತು ಮಾನಸಿಕ ನೆಮ್ಮದಿಗಾಗಿ ಗುರುವಿನ ಆಶ್ರಯ…

Read More

Horoscope Today: ಇಂದು ಈ ರಾಶಿಯವರಿಗೆ ಖರ್ಚು ವೆಚ್ಚಗಳು ಹೆಚ್ಚಾಗಲಿವೆ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 19, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ಬಿದಿಗೆ ತಿಥಿ, ಅಶ್ವಿನಿ ನಕ್ಷತ್ರ, ಆಯುಷ್ಮಾನ್ ಯೋಗ ಮತ್ತು ಕೌಲವ ಕರಣ ಒಳಗೊಂಡಿರುವ ವಿಶೇಷ ದಿನವಾಗಿದೆ. ರವಿ ಮತ್ತು ಚಂದ್ರ ಇಬ್ಬರೂ ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದು, ರವಿ ಉಚ್ಚ ಸ್ಥಾನದಲ್ಲಿದ್ದಾನೆ ಎಂದು ಗುರೂಜಿ ವಿವರಿಸಿದ್ದಾರೆ. ಗುರೂಜಿ…

Read More

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಸ್ವಾರ್ಥದ ಪರವಾಗಿ ಯೋಚಿಸಿ, ದುಃಖ – Kannada News | Horoscope April 19 Sunday 2026; Dina Rashi Bhavishya Today, Checkout the details here

ಮೇಷ ರಾಶಿ: ಬಾಂಧವ್ಯದಲ್ಲಿ ಅಭಿಪ್ರಾಯ ಭೇದದಿಂದ ಕಲಹವಾಗಬಹುದು. ಹಣದ ನಷ್ಟದ ಸಂಭವವಿದೆ. ದೂರದ ಬಂಧುಗಳಿಂದ‌ ಕಾರ್ಯ ಮಾಡಬಹುದು. ವಿದ್ಯಾರ್ಥಿಗಳ ಸಾಧನೆಯ ಹಾದಿಯು ಸುಗಮವಾಗುವುದು. ಸ್ವಂತ ಭೂಮಿ ಅಥವಾ ಮನೆಯನ್ನು ಕೊಳ್ಳುವ ವಿಚಾರವೊರುವುದು. ದೂರಪ್ರಯಾಣದಿಂದ ಆತಂಕ ಸೃಷ್ಟಯಾಗಬಹುದು. ದೌರ್ಬಲ್ಯವನ್ನು ನೀವು ಸಹಾಕರಾತ್ಮಕವಾಗಿ ಪಡೆದುಕೊಂಡು ಮುನ್ನಡೆಯಬಹುದು. ಅತಿಯಾದ ನಿದ್ರೆಯಿಂದ ಮನಸ್ಸು ಕುಗ್ಗುವುದು. ವೃಷಭ ರಾಶಿ: ಹೊಸ ಪರಿಚಯಗಳಿಂದ ದೂರವಿರಲು ಪ್ರಯತ್ನಿಸಿ. ತಮ್ಮಂದಿರು ಮತ್ತು ಅಣ್ಣಂದಿರೊಡನೆ ಜಗಳ ಆಗದಂತೆ ನೋಡಿಕೊಳ್ಳಿ. ಕೆಲ ಕೆಲಸಗಳು ವಿಳಂಬವಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬಡ್ತಿ ದೊರೆತು…

Read More

SRH vs CSK: ಸನ್‌ರೈಸರ್ಸ್ ವಿರುದ್ಧ 10 ರನ್​ಗಳಿಂದ ಸೋತ ಸಿಎಸ್​ಕೆ

ಐಪಿಎಲ್ 2026 ರ 27 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಮಣಿಸಿದ ಸನ್‌ರೈಸರ್ಸ್ ಲೀಗ್​ನಲ್ಲಿ ಮೂರನೇ ಗೆಲುವು ದಾಖಲಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಇತ್ತ ಕಳೆದೆರಡು ಪಂದ್ಯಗಳಲ್ಲಿ ಗೆದ್ದು ಗೆಲುವಿನ ಹಾದಿಗೆ ಮರಳಿದ್ದ ಸಿಎಸ್​ಕೆ ಮತ್ತೆ ಸೋಲಿನ ಸುಳಿಗೆ ಸಿಲುಕಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ತಂಡ 194 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಎಸ್​ಕೆ…

Read More