2025ರಲ್ಲಿ ಮೋದಿ, ಟ್ರಂಪ್ 8 ಬಾರಿ ಮಾತನಾಡಿದ್ದರು; ಲುಟ್ನಿಕ್ ಹೇಳಿಕೆಗೆ ಭಾರತ ಸ್ಪಷ್ಟನೆ – Kannada News | PM Modi and Trump spoke 8 times in 2025; MEA rejects Howard Lutnicks claim on India US trade deal
ನವದೆಹಲಿ, ಜನವರಿ 9: ಭಾರತದ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕರೆ ಮಾಡದ ಕಾರಣದಿಂದಲೇ ಕಳೆದ ವರ್ಷ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಮುಂದುವರೆಸಲು ಸಾಧ್ಯವವಾಗಲಿಲ್ಲ ಎಂಬ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ, ಅವರ ಈ ಹೇಳಿಕೆಯನ್ನು ಭಾರತ ನಿರಾಕರಿಸಿದೆ. ಪರಸ್ಪರ ಪ್ರಯೋಜನಕಾರಿ ಒಪ್ಪಂದವನ್ನು ಮಾಡಿಕೊಳ್ಳಲು ಭಾರತ ಸದಾ ಆಸಕ್ತಿ ಹೊಂದಿತ್ತು ಎಂದು ಭಾರತ ಹೇಳಿದೆ. ಅಮೆರಿಕ ಮತ್ತು ಭಾರತದ…