Category Archives: Blog

Your blog category

ಯಾದಗಿರಿ: ಒಂದೇ ಕುಟುಂಬ 6 ಜನ ಸಜೀವದಹನ; ಶಾಕಿಂಗ್​ ಮಾಹಿತಿ ಬಿಚ್ಚಿಟ್ಟ ಎಸ್​​ಪಿ – Kannada News | Yadagiri Car Bus Collision: Six Burnt Alive in Tragic Accident; SP Provides Details

ಯಾದಗಿರಿ, ಏಪ್ರಿಲ್​ 17: ಕಾರು ಮತ್ತು ಖಾಸಗಿ ಬಸ್​ ಮುಖಾಮುಖಿ ಡಿಕ್ಕಿ ಹೊಡೆದು ಒಂದೇ ಕುಟುಂಬದ 6 ಜನ ಸಜೀವದಹನವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಬಳಿ ನಡೆದಿದೆ. ಘಟನೆ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್​ಪಿ ಪೃಥ್ವಿಕ್ ಶಂಕರ್​​, ಕಾರಿನಲ್ಲಿ ಒಂದೇ ಕುಟುಂಬದ ಎಂಟು ಜನ ಪ್ರಯಾಣಿಸುತ್ತಿದ್ದರು. ಇದರಲ್ಲಿ ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವನ್ನಪ್ಪಿದ ಎಲ್ಲರೂ ರಾಯಚೂರು ಜಿಲ್ಲೆಯ ಶಿರವಾರ್ ಪಟ್ಟಣ ನಿವಾಸಿಗಳು. ಸುರಪುರ ಪಟ್ಟಣದ ವೇಣುಗೋಪಾಲ ಸ್ವಾಮಿ ದರ್ಶನ ಮುಗಿಸಿಕೊಂಡು ವಾಪಸ್ ಹೋಗುವಾಗ ಕಾರು ಓವರ್ ಟೆಕ್ ಮಾಡಲು ಹೋದಾಗ ಘಟನೆ ಸಂಭವಿಸಿದೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮದುವೆ ಆಗ್ತಾರಾ ‘ಹೃದಯಂ’ ಜೋಡಿ ಪ್ರಣವ್, ಕಲ್ಯಾಣಿ? ಸ್ಪಷ್ಟನೆ ನೀಡಿದ ತಾಯಿ – Kannada News | Lissy Lakshmi slams Kalyani Priyadarshan and Pranav Mohanlal wedding rumours

ಸೂಪರ್ ಹಿಟ್ ‘ಹೃದಯಂ’ ಸಿನಿಮಾದಲ್ಲಿ ನಟಿಸಿದ ಬಳಿಕ ಪ್ರಣವ್ ಮೋಹನ್‌ಲಾಲ್ ಮತ್ತು ಕಲ್ಯಾಣಿ ಪ್ರಿಯದರ್ಶನ್ (Kalyani Priyadarshan) ಬಗ್ಗೆ ವದಂತಿಗಳು ಜಾಸ್ತಿ ಆದವು. ನಿಜಜೀವನದಲ್ಲೂ ಅವರಿಬ್ಬರು ಜೋಡಿಯಾಗಬೇಕು ಎಂಬುದು ಅಭಿಮಾನಿಗಳ ಆಸೆ. ಕಲ್ಯಾಣಿ ಮತ್ತು ಪ್ರಣವ್ (Pranav Mohanlal) ನಡುವಿನ ಸಂಬಂಧ ಯಾವ ರೀತಿ ಇದೆ ಎಂಬ ಬಗ್ಗೆ ಗಾಸಿಪ್ ಮಂದಿ ಹಲವು ರೀತಿಯ ಕಥೆ ಕಟ್ಟಿದ್ದಾರೆ. ಆದರೆ ಆ ಎಲ್ಲ ಅಂತೆ-ಕಂತೆಗಳಿಗೆ ಕಲ್ಯಾಣಿ ತಾಯಿ ಲಿಸ್ಸಿ ಲಕ್ಷ್ಮಿ ಅವರು ತೆರೆ ಎಳೆದಿದ್ದಾರೆ.

ಇತ್ತೀಚೆಗೆ ಮಲಯಾಳಂ ಹೊಸ ವರ್ಷವಾದ ವಿಷು ಹಬ್ಬದ ಪ್ರಯುಕ್ತ ಲಿಸ್ಸಿ ಲಕ್ಷ್ಮಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶುಭಾಶಯ ಕೋರಿ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಪೋಸ್ಟ್‌ಗೆ ಅಭಿಮಾನಿಯೊಬ್ಬರು, ‘ಕಲ್ಯಾಣಿ ಮತ್ತು ಪ್ರಣವ್ ಮದುವೆಯ ನಿರೀಕ್ಷೆಯಲ್ಲಿ..’ ಎಂದು ಕಮೆಂಟ್ ಮಾಡಿದ್ದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಲಿಸ್ಸಿ, ‘ಇದು ಸುಳ್ಳು ಸುದ್ದಿ’ ಕಮೆಂಟ್ ಮಾಡುವ ಮೂಲಕ ಎಲ್ಲ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ.

ಕಲ್ಯಾಣಿ ಮತ್ತು ಪ್ರಣವ್ ಬಾಲ್ಯದ ಸ್ನೇಹಿತರು. ಚಿತ್ರರಂಗಕ್ಕೆ ಬರುವ ಮೊದಲಿನಿಂದಲೂ ಇಬ್ಬರ ಕುಟುಂಬಗಳ ನಡುವೆ ಉತ್ತಮ ಸಂಬಂಧವಿದೆ. ಕಲ್ಯಾಣಿ ಅವರು ಪ್ರಣವ್ ಅವರನ್ನು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಾರೆ. ಅವರಿಬ್ಬರ ನಡುವೆ ಒಡಹುಟ್ಟಿದವರ ರೀತಿ ಬಾಂಧವ್ಯ ಇದೆ. ಆ ಬಗ್ಗೆ ಕಲ್ಯಾಣಿ ಪ್ರಿಯದರ್ಶನ್ ಅವರು ಈ ಮೊದಲು ಕೂಡ ಹೇಳಿದ್ದರು.

ತಮ್ಮ ಸಂಬಂಧದ ಬಗ್ಗೆ ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಲ್ಯಾಣಿ, ‘ನನ್ನ ಸ್ವಂತ ಸಹೋದರನಿಗಿಂತ ಅಪ್ಪು ಜೊತೆಗೇ ನನ್ನ ಫೋಟೋಗಳು ಹೆಚ್ಚಿವೆ. ನಮ್ಮದು ಒಡಹುಟ್ಟಿದವರ ರೀತಿಯ ಬಾಂಧವ್ಯ. ಚೆನ್ನೈನಲ್ಲಿ ನನ್ನ ಸ್ನೇಹಿತರಿಗೆ ನಾನು ಆತನನ್ನು ಕಸಿನ್ ಎಂದೇ ಪರಿಚಯಿಸುತ್ತಿದ್ದೆ’ ಎಂದು ಹೇಳಿದ್ದರು. ಆದರೂ ಜನರು ಗಾಸಿಪ್ ಮಾಡೋದು ನಿಲ್ಲಿಸಿಲ್ಲ.

ಇದನ್ನೂ ಓದಿ: ಮೋಹನ್​ಲಾಲ್ ಪುತ್ರ ಪ್ರಣವ್ ಜೀವನಕ್ಕೆ ವಿದೇಶಿ ಮಹಿಳೆ ಎಂಟ್ರಿ

‘ಹೃದಯಂ’ ಸಿನಿಮಾದಲ್ಲಿ ಕಲ್ಯಾಣಿ ಮತ್ತು ಪ್ರಣವ್ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ನೋಡಿ ಫಿದಾ ಆಗಿದ್ದ ಅಭಿಮಾನಿಗಳು, ಇವರು ನಿಜ ಜೀವನದಲ್ಲೂ ಒಂದಾಗಲಿ ಎಂದು ಹಾರೈಸುತ್ತಿದ್ದರು. ಆದರೆ ಲಿಸ್ಸಿ ಅವರ ಈ ಸ್ಪಷ್ಟನೆಯಿಂದ ಪ್ರಣವ್ ಮತ್ತು ಕಲ್ಯಾಣಿ ಕೇವಲ ಆತ್ಮೀಯ ಸ್ನೇಹಿತರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಕೇವಲ ಈ 4 ಕ್ರಮಗಳನ್ನು ಅನುಸರಿಸಿ ಸಾಕು! – Kannada News | Lower Your Cancer Risk: 4 Science Backed Daily Habits

Lower Your Cancer Risk: 5 Science-Backed Daily HabitsImage Credit source: Getty Images

ಭಾರತ ಸೇರಿದಂತೆ ವಿಶ್ವದಾದ್ಯಂತ ಕ್ಯಾನ್ಸರ್ (Cancer) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ಇದು ಗಂಭೀರ ಕಾಯಿಲೆಯಾದರೂ, ಸರಿಯಾದ ಜೀವನಶೈಲಿ ಮತ್ತು ಆಹಾರ ಪದ್ಧತಿಗಳನ್ನು ಅನುಸರಿಸುವ ಮೂಲಕ ಇದರ ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಡಾ. ರೋಹಿತ್ ಕಪೂರ್ ಅವರ ಪ್ರಕಾರ, ಜೀನ್ಸ್ ಸಂಬಂಧಿತ ಕೆಲವು ಪ್ರಕರಣಗಳನ್ನು ಹೊರತುಪಡಿಸಿದರೆ, ಹೆಚ್ಚಿನ ಕ್ಯಾನ್ಸರ್ ಪ್ರಕರಣಗಳು ನಮ್ಮ ದಿನನಿತ್ಯದ ಅಭ್ಯಾಸಗಳು ಮತ್ತು ಆಹಾರ ಪದ್ಧತಿಗಳೊಂದಿಗೆ ಸಂಬಂಧ ಹೊಂದಿವೆ. ಆದ್ದರಿಂದ ಜೀವನಶೈಲಿಯಲ್ಲಿ ಬದಲಾವಣೆ ತರುವುದು ಅತ್ಯಂತ ಮುಖ್ಯ ಎನ್ನುತ್ತಾರೆ. ಹಾಗಾದರೆ ಯಾವ ರೀತಿಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆರೋಗ್ಯಕರ ಆಹಾರ ಸೇವನೆ ಮಾಡಿ

ಹಸಿರು ತರಕಾರಿ, ಹಣ್ಣು ಮತ್ತು ಪೋಷಕಾಂಶಯುಕ್ತ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ. ಕಿತ್ತಳೆ, ಮಾವಿನ ಹಣ್ಣುಗಳಂತಹ ಸಿಟ್ರಸ್ ಹಣ್ಣುಗಳು ಮತ್ತು ಡ್ರೈ ಫ್ರೂಟ್ಸ್‌ಗಳನ್ನು ಆಹಾರದಲ್ಲಿ ಸೇರಿಸುವುದು ಫ್ರೀ ರ್ಯಾಡಿಕಲ್‌ಗಳಿಂದ ರಕ್ಷಿಸುತ್ತದೆ. ಫಾಸ್ಟ್ ಫುಡ್ ಮತ್ತು ಹೆಚ್ಚು ಮಸಾಲೆ ಬಳಕೆಯನ್ನು ತಪ್ಪಿಸುವುದು ಉತ್ತಮ.

ತಂಬಾಕು ಮತ್ತು ಮದ್ಯಪಾನದಿಂದ ದೂರವಿರಿ

ತಂಬಾಕು ಮತ್ತು ಮದ್ಯಪಾನ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಾಗಿವೆ. ಧೂಮಪಾನ ಮತ್ತು ತಂಬಾಕು ಸೇವನೆ ಬಾಯಿ, ಶ್ವಾಸಕೋಶ ಮತ್ತು ಗಂಟಲಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಮದ್ಯಪಾನ ಯಕೃತ್ತಿನ ಕ್ಯಾನ್ಸರ್‌ಗೆ ಕಾರಣವಾಗಬಹುದು. ಆದ್ದರಿಂದ ಈ ಅಭ್ಯಾಸಗಳಿಂದ ದೂರವಿರುವುದು ಅತ್ಯಗತ್ಯ.

ಇದನ್ನೂ ಓದಿ: ಮೌತ್ ಕಾಂಡೋಮ್‌ ಎಂದರೇನು? ಇದು ಓರಲ್ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆಯೇ?

ತೂಕ ನಿಯಂತ್ರಣದಲ್ಲಿರಲಿ

ಅತಿಯಾದ ತೂಕ ಹಲವಾರು ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುತ್ತದೆ. ದಿನಕ್ಕೆ ಕನಿಷ್ಠ 15– 20 ನಿಮಿಷ ವ್ಯಾಯಾಮ ಮಾಡುವ ಮೂಲಕ ತೂಕವನ್ನು ನಿಯಂತ್ರಿಸಬಹುದು.

ಕುಟುಂಬ ಇತಿಹಾಸ ಇದ್ದರೆ ಜಾಗೃತೆಯಲ್ಲಿರಿ

ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸ ಇದ್ದರೆ ಹೆಚ್ಚಿನ ಎಚ್ಚರಿಕೆ ಅಗತ್ಯ. ವಿಶೇಷವಾಗಿ ಸ್ತನ ಕ್ಯಾನ್ಸರ್‌ನಂತಹ ಕಾಯಿಲೆಗಳು ತಲೆಮಾರಿನಿಂದ ತಲೆಮಾರಿಗೆ ಬರುವ ಸಾಧ್ಯತೆ ಇದೆ. ಆದ್ದರಿಂದ 20 ವರ್ಷದ ನಂತರ ನಿಯಮಿತ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್: ಎಷ್ಟು? ಎಂದಿನಿಂದ ಜಾರಿ? ಇಲ್ಲಿದೆ ವಿವರ – Kannada News | Karnataka KERC Hikes Electricity 56 Paise per Unit, effect From May

ಬೆಂಗಳೂರು, ಏಪ್ರಿಲ್​ 17: ರಾಜ್ಯದ ಜನರಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ದರ ಏರಿಕೆಯ ಶಾಕ್ ನೀಡಿದೆ. ಪ್ರತಿ ಯೂನಿಟ್ ವಿದ್ಯುತ್ ದರದ ಮೇಲೆ ಸರಾಸರಿ 56 ಪೈಸೆ ಹೆಚ್ಚಳ ಮಾಡಿ ಕೆಇಆರ್​​ಸಿ ಶುಕ್ರವಾರ ಆದೇಶ ಹೊರಡಿಸಿದೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Source link

1.2 ಲಕ್ಷ ಹಣ ಪಡೆಯುವಾಗ ಪಿಡಿಓ, ಯುಟ್ಯೂಬರ್ ಲೋಕಾಯುಕ್ತ ಬಲೆಗೆ – Kannada News | Kalalughatta Panchayat PDP And Local youtuber Caught Lokayukta With Rs 1.2 Lakh Bribe at Bengaluru

ಬೆಂಗಳೂರು, (ಏಪ್ರಿಲ್ 17): ನಿವೇಶನದ ಖಾತೆ ಮಾಡಿಕೊಡಲು ಲಂಚ  (Bribe) ಸ್ವೀಕರಿಸುತ್ತಿದ್ದಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಯುಟ್ಯೂಬರ್ ಲೋಕಾಯುಕ್ತ  (Lokayukta) ಬಲೆಗೆ ಬಿದ್ದಿದ್ದಾರೆ. ಕಳಲುಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾಮಣಿ, ಹಾಗೂ ಸ್ಥಳೀಯ ಖಾಸಗಿ ವಾಹಿನಿ ಪ್ರತಿನಿಧಿ ಗಂಗಾಧರ್ ಒಂದು ಲಕ್ಷ ರೂ. ಲಂಚದ ಹಣದ ಸಮೇತ ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ ಪಿ ಗೌತಮ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಸದ್ಯ ಗೀತಾಮಣಿ ಹಾಗೂ ಗಂಗಾಧರ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಪಿಡಿಓ ಗೀತಾಮಣಿ ಅವರು ⁠1,50,000 ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಈ ಹಣವನ್ನು ಯುಟ್ಯೂಬರ್ ಗಂಗಾಧರ್ ಗೆ ನೀಡುವಂತೆ ಸೂಚಿಸಿದ್ದರು. ಈ ವಿಚಾರವನ್ನು ಗೀತಾಮಣಿ, ಗಂಗಾಧರ್​​ಗೆ ಹೇಳಿದ್ದರು. ಡೀಲ್​​ ನಂತೆ ಫೈಜಲ್ ನಿಂದ ಗಂಗಾಧರ್ 1,20,000 ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಅಧಿಕಾರಿಗಳು ಪಿಐ ಉಮಾ ಮಹೇಶ್, ಹಾಗೂ ಎಸ್ ಪಿ ಮಹಾಂತೇಶ್ವರ ಜಿದ್ದಿ ತಂಡ ದಾಳಿ ಮಾಡಿದ್ದು, ರೆಡ್​ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ವಿಜಯಪುರ: ಇನ್ನೊಂದೆಡೆ ಪೆಟ್ರೋಲ್ ಬಂಕ್ ಜಾಗದ ನಕಾಶೆ ಆನ್ ಲೈನ್ ನಲ್ಲಿ ಅಪ್ಲೋಡ್ ಮಾಡಲು ಲಂಚ ಸ್ವೀಕರಿಸುತ್ತಿದ್ದಾಗ ಎಸ್​​ಡಿಎ ಹಾಗೂ ಕಂಪ್ಯೂಟರ್ ಆಪರೇಟರ್ ಸಿಕ್ಕಿಬಿದ್ದಿದ್ದಾರೆ. ಜಿಲ್ಲಾಡಳಿತ ಕಚೇರಿಯ ಎಸ್ ಡಿ ಎ ಅರವಿಂದ ಪವಾರ್ ಹಾಗೂ ಕಂಪ್ಯೂಟರ ಆಪರೇಟರ್ ಅಯ್ಯಬ್ ತೊಣಸ್ಯಾಳ ಲೋಕಾಯುಕ್ತ ಬಲೆಗೆ ಬಿದ್ದಿವರು. 15,000 ನಗದು ಸ್ವೀಕಾರ ಮಾಡುವ ವೇಳೆ ರೆಡ್ ಹ್ಯಾಂಡ್ ಅಗಿ ಸಿಕ್ಕಿಬಿದ್ದಿದ್ದು, ಸದ್ಯ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಆರ್​​ಸಿಬಿ ಗ್ರೀನ್ ಜೆರ್ಸಿ ತೊಡುವುದು ಏಕೆ? ಈ ಜೆರ್ಸಿಯ ವಿಶೇಷತೆ ಏನು? – Kannada News | RCB’s Green Jersey Game vs Delhi Capitals: IPL 2026 Match 26 Preview and History

ಐಪಿಎಲ್ 2026 (IPL 2026) ರ 26ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ತಂಡಗಳ ನಡುವೆ ನಡೆಯಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3:30 ರಿಂದ ಆರಂಭವಾಗಲಿರುವ ಈ ಪಂದ್ಯ ಕನ್ನಡಿಗರು vs ಕರ್ನಾಟಕದ ತಂಡದ ನಡುವಿನ ಕಾಳಗ ಎನ್ನಬಹುದು. ಏಕೆಂದರೆ ಡೆಲ್ಲಿ ತಂಡದಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಇದ್ದಾರೆ. ಹೀಗಾಗಿ ಈ ಪಂದ್ಯ ಕನ್ನಡಿಗರಿಗೆ ತುಂಬಾ ವಿಶೇಷವಾಗಿರಲಿದೆ. ಇನ್ನು ಈ ಪಂದ್ಯವನ್ನು ಮತ್ತಷ್ಟು ವಿಶೇಷಗೊಳಿಸುವ ಸಲುವಾಗಿ ಆರ್​ಸಿಬಿ ಈ ಪಂದ್ಯದಲ್ಲಿ ಗ್ರೀನ್ ಜೆರ್ಸಿಯನ್ನು ಧರಿಸಿ ಕಣಕ್ಕಿಳಿಯಲಿದೆ.

ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ

ವಾಸ್ತವವಾಗಿ, 2011 ರ ಐಪಿಎಲ್​ ಆವೃತ್ತಿಯಿಂದ ಆರ್​ಸಿಬಿ ತಂಡ ಸೀಸನ್​ನಲ್ಲಿ ಆಡುವ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ತನ್ನ ಅಭಿಮಾನಿಗಳಲ್ಲಿ ಸ್ವಚ್ಛ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್​ಸಿಬಿ ಈ ಹಸಿರು ಜೆರ್ಸಿಯನ್ನು ಧರಿಸಲಿದೆ. ಅದರಂತೆ ಈ ಬಾರಿಯೂ ಆರ್​ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಸಿರು ಜೆರ್ಸಿ ತೊಟ್ಟು ಆಡಲಿದೆ. ತಂಡದ ಹೊಸ ಜೆರ್ಸಿ ಸಾಕಷ್ಟು ಆಕರ್ಷಕವಾಗಿದೆ. ಈ ಜೆರ್ಸಿಯ ಟೀ ಶರ್ಟ್‌ನಲ್ಲಿ ಹಸಿರು ಮತ್ತು ನೀಲಿ ಬಣ್ಣಗಳನ್ನು ಬಳಸಲಾಗಿದೆ.

ಗ್ರೀನ್ ಜೆರ್ಸಿಯಲ್ಲಿ ದಾಖಲೆ

ಮೇಲೆ ಹೇಳಿದಂತೆ 2011 ರಿಂದ, ಆರ್‌ಸಿಬಿ ಪ್ರತಿ ಐಪಿಎಲ್ ಆವೃತ್ತಿಯಲ್ಲಿ ಹಸಿರು ಜೆರ್ಸಿ ಧರಿಸಿ ಒಂದು ಪಂದ್ಯವನ್ನು ಆಡುತ್ತದೆ. ಮರುಬಳಕೆಯ ವಸ್ತುಗಳಿಂದ ತಯಾರಿಸಿದ ಈ ಜೆರ್ಸಿಯನ್ನು ಆರ್​ಸಿಬಿ ಮಧ್ಯಾಹ್ನದ ಪಂದ್ಯಗಳಲ್ಲಿ ಧರಿಸಿ ಆಡುತ್ತದೆ. ಇನ್ನು ಹಸಿರು ಜೆರ್ಸಿಯಲ್ಲಿ ಆರ್‌ಸಿಬಿಯ ರಿಪೋರ್ಟ್ ಕಾರ್ಡ್ ನೋಡುವುದಾದರೆ.. ಆರ್​ಸಿಬಿ ಇದುವರೆಗೆ ಹಸಿರು ಜೆರ್ಸಿ ತೊಟ್ಟು 15 ಪಂದ್ಯಗಳನ್ನಾಡಿದೆ. ಇದರಲ್ಲಿ ಕೇವಲ 5 ಪಂದ್ಯಗಳನ್ನು ಗೆದ್ದಿರುವ ಆರ್​ಸಿಬಿ 9 ಪಂದ್ಯಗಳಲ್ಲಿ ಸೋತಿದೆ. ಉಳಿದಂತೆ 1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.

IPL 2026: ಆರ್​​ಸಿಬಿ ನಾಯಕನ ಈ ಎರಡು ಗುಣಗಳನ್ನು ಮನಸಾರೆ ಮೆಚ್ಚಿಕೊಂಡ ಶ್ರೇಯಸ್ ಅಯ್ಯರ್

ಇನ್ನು ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ವಿರುದ್ಧ ಗ್ರೀನ್ ಜೆರ್ಸಿ ತೊಟ್ಟು ಆಡಿದ್ದ ಆರ್​ಸಿಬಿ ಭರ್ಜರಿ ಗೆಲುವು ದಾಖಲಿಸಿತ್ತು. ಆ ಪಂದ್ಯದಲ್ಲಿ ಆರ್​ಸಿಬಿ ಆರಂಭಿಕರಾದ ಫಿಲ್ ಸಾಲ್ಟ್ (65) ಹಾಗೂ ವಿರಾಟ್ ಕೊಹ್ಲಿ (62) ಅರ್ಧಶತಕದ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಹೀಗಾಗಿ ಈ ಬಾರಿಯೂ ಅದೇ ಪ್ರದರ್ಶನವನ್ನು ಮುಂದುವರೆಸಲು ಆರ್​ಸಿಬಿ ಪ್ರಯತ್ನಿಸಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಣ, ಚಿನ್ನಾಭರಣಕ್ಕಾಗಿ ಚಿಕ್ಕಮ್ಮನ ಕೊಲೆ ಮಾಡಿ ಶವ ಸುಟ್ಟಿದ್ದ ಲೇಡಿ: ವರ್ಷದ ಬಳಿಕ ಹತ್ಯೆ ರಿವೀಲ್​ – Kannada News | Woman Murder case Solved: Victim Identified, Accused Arrested After Year Long Hunt

ಕೊಲೆಯಾದ ಮಹಿಳೆ, ಬಂಧಿತರುImage Credit source: tv9 kannada

ಚಿಕ್ಕಬಳ್ಳಾಪುರ, ಏಪ್ರಿಲ್​ 17: ವರ್ಷದ ಹಿಂದೆ ಓರ್ವ ಮಹಿಳೆಯನ್ನ ಕೊಂದು (kill) ಶವದ ಗುರುತು ಸಿಗದಂತೆ ಶವವನ್ನು ಪೆಟ್ರೋಲ್ ಹಾಕಿ ಸುಟ್ಟು ಹಾಕಲಾಗಿತ್ತು. ಸಿಕ್ಕ ಬುರುಡೆ ಹಾಗೂ ಮೂಳೆಗಳ ಆಧಾರದಲ್ಲಿ ಪೊಲೀಸರು ಇದೀಗ ಕೊಲೆಯಾದ ಮಹಿಳೆಯ (woman) ಗುರುತು ಪತ್ತೆಹಚ್ಚಿದ್ದು, ಕೊಲೆ ಮಾಡಿ ಏನು ಗೊತ್ತಿಲ್ಲದಂತೆ ಇದ್ದ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ತಲೆ ಬುರುಡೆ, ಮೂಳೆಗಳು ಪತ್ತೆ

2025 ಅಕ್ಟೋಬರ್ 19. ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಬಳ್ಳಾಪುರದ ಗೌರಿಬಿದನೂರು ಮಧ್ಯೆದ ಕುರುಚಲು ಕಾಡಿನ ಕಣಿವೆ ಪ್ರದೇಶದಲ್ಲಿ, ಮನುಷ್ಯನ ತಲೆ ಬುರುಡೆ, ಮೂಳೆಗಳು ಪತ್ತೆಯಾಗಿದ್ದವು. ಸ್ಥಳಕ್ಕೆ ಭೇಟಿ ನೀಡಿದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ, ಸ್ಥಳದಲ್ಲಿ ಅರೆಬೆರೆ ಸುಟ್ಟ ಬಟ್ಟೆ, ಮೂಗುತಿ, ಸೀರೆ ಸೇರಿದಂತೆ ಮಹಿಳೆಯರು ಧರಿಸುವ ಕೆಲವು ವಸ್ತುಗಳು ಸಿಕ್ಕಿದ್ದವು. ಇದರಿಂದ ಮೃತಪಟ್ಟಿರುವುದು ಮಹಿಳೆ ಎನ್ನುವುದು ಗೊತ್ತಾಗಿತ್ತು.

ಇದನ್ನೂ ಓದಿ: ಅಡಿಕೆ ತೋಟದ ಬಳಿ ಮಹಿಳೆಯ ತಲೆ ಬುರುಡೆ, ಮೂಳೆಗಳು ಪತ್ತೆ: ಅಕ್ರಮ ಸಂಬಂಧಕ್ಕೆ ನಡೆಯಿತಾ ಹತ್ಯೆ?

ಮೃತ ಮಹಿಳೆಯ ಗುರುತು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಟ್ಟಿದ್ದರು. ಕೊನೆಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವ ಘೋಷಣೆ ಮಾಡಿದ್ದರು. ಆದರೂ ಮೃತರ ಗುರುತು ಪತ್ತೆಯಾಗಿರಲಿಲ್ಲ. ಬರೋಬ್ಬರಿ ವರ್ಷದ ನಂತರ ಈಗ ಪೊಲೀಸರು ಮೃತ ಮಹಿಳೆಯ ಗುರುತು ಪತ್ತೆಹಚ್ಚಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿಪ್ಪರಾಯನದುರ್ಗ ನಿವಾಸಿ ನುಣಕಮ್ಮ (52) ಕೊಲೆ ಆಗಿದ್ದ ಮಹಿಳೆ.

ಚಿಕಿತ್ಸೆ ನೆಪದಲ್ಲಿ ಕರೆದುಕೊಂಡು ಹೋಗಿ ಕೊಲೆ

ಇನ್ನು ನುಣಕಮ್ಮಗೆ ಗಂಡ ಮಕ್ಕಳು ಇರಲಿಲ್ಲ. ಅಣ್ಣನ ಮನೆಯಲ್ಲಿ ಇದ್ದರು. ನುಣಕಮ್ಮಳಿಗೆ ಮಗಳು ಆಗಬೇಕಿದ್ದ 32 ವರ್ಷದ ನಾಗಲಕ್ಷ್ಮಿ ಹಾಗೂ ಆಕೆಯ ಪ್ರೀಯಕರ ಆಂಧ್ರದ ಮಡಕಸಿರ ನಿವಾಸಿ ಅಶೋಕ್ ಕುಮಾರ್ (27) ಸೇರಿ ಕೊಲೆ ಮಾಡಿದ್ದು ಬಯಲಾಗಿದೆ. ಪಿಡ್ಸ್ ಬರುತ್ತಿದೆ ಎಂದು ನುಣಕಮ್ಮಳನ್ನ ಚಿಕಿತ್ಸೆ ಕೊಡಿಸುವುದಾಗಿ ನಂಬಿಸಿ, ಬೈಕ್​​ನಲ್ಲಿ ಕರೆದುಕೊಂಡು ಸೆಪ್ಟೆಂಬರ್ 20 ರಂದು ಚಿಕ್ಕಬಳ್ಳಾಪುರದ ಅರಣ್ಯದಲ್ಲಿ ಕೊಂದು ಶವ ಬಿಸಾಡಿ ಹೋಗಿದ್ದರು.

ವರ್ಷದ ಬಳಿಕ ಇಬ್ಬರ ಬಂಧನ

ಇನ್ನು ನುಣಕಮ್ಮಳ ಬಳಿ ಇದ್ದ ಮನೆಯ ಬೀರು ಬೀಗ ತೆಗೆದುಕೊಂಡು, ಆಕೆಯ ಮನೆಯಲ್ಲಿದ್ದ ಹಣ, ಚಿನ್ನಾಭರಣ ಕಳ್ಳತನ ಮಾಡಿ ನೆಮ್ಮದಿಯಾಗಿದ್ದರು. ಕೊಲೆ ಮಾಡಿದ ನಾಲ್ಕು ದಿನಗಳ ನಂತರ ಮತ್ತೆ ವಾಪಸ್ ಬಂದು ಶವಕ್ಕೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು. ನಂತರ ಏನು ಗೊತ್ತಿಲ್ಲದಂತೆ ಇದ್ದರು. ಆದರೆ ಪೊಲೀಸರು ವರ್ಷದ ನಂತರ ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ನೆಲಮಂಗಲ: ಪರ ಸ್ತ್ರೀ ವ್ಯಾಮೋಹಕ್ಕಾಗಿ ಪತ್ನಿಗೆ ಕಿರುಕುಳ, ನ್ಯಾಯಕ್ಕಾಗಿ ಡಿವೈಎಸ್ಪಿ ಕಚೇರಿ ಮೆಟ್ಟಿಲೇರಿದ ಮಹಿಳೆ

ಆರೋಪಿಗಳು ಚಾಪೆ ಕೆಳಗೆ ತೂರಿದರೆ, ಪೊಲೀಸರು ರಂಗೋಲಿ ಕೆಳಗೆ ತೂರಿ, ಕೊಲೆ ಪ್ರಕರಣ ಭೇದಿಸಿದ್ದಾರೆ. ಆದರೆ ಆರೋಪಿ ನಾಗಲಕ್ಷ್ಮಿ ಹಣ, ಚಿನ್ನಾಭರಣ ಹಾಗೂ ಚೀಟಿ ಹಣಕ್ಕೆ ಪ್ರಿಯಕರನ ಜೊತೆ ಸೇರಿ ಸ್ವಂತ ಚಿಕ್ಕಮ್ಮಳನ್ನು ಕೊಂದು ನಾಟಕವಾಡಿದ್ದು ಮಾತ್ರ ವಿಪರ್ಯಾಸ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮುಸ್ಲಿಂ ನಾಯಕರ ಬೆನ್ನಿಗೆ ನಿಂತ ಸತೀಶ್ ಜಾರಕಿಹೊಳಿ, ಡಿಕೆಶಿ ಭೇಟಿಯ ಗುಟ್ಟು ರಟ್ಟು – Kannada News | Minister Satish Jarkiholi Stand With Muslim Leaders, here Is details Why He Met DK Shivakumar

ಬೆಂಗಳೂರು, (ಏಪ್ರಿಲ್ 17): ದಾವಣಗೆರೆ ದಕ್ಷಿಣ ಉಪ ಚುನಾವಣೆ  (Davanagere South By Election) ಬಳಿಕ ಕಾಂಗ್ರೆಸ್‌ನಲ್ಲಿ (Congress) ಒಳಜಗಳ ಭುಗಿಲೆದ್ದಿದೆ. ದಾವಣೆಗರೆ ಬೈ ಎಲೆಕ್ಷನ್​​ನಲ್ಲಿ ಟಿಕೆಟ್ ಕೃತಪ್ಪಿದ್ದಕ್ಕೆ ಕಲ ಮುಸ್ಲಿಂ ನಾಯಕರು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಪರ ಕೆಲಸ ಮಾಡಿಲ್ಲ. ಬದಲಿಗೆ ಸೋಲಿಸಲು ಷಡ್ಯಂತ್ರ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಆರೋಪ ಬೆನ್ನಲ್ಲೇ ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ. ಅಲ್ಲದೇ ನಾಸೀರ್ ಅಹ್ಮದ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯಿಂದ ವಜಾ ಮಾಡಲಾಗಿದ್ದು, ಇದೀಗ ಸಚಿವ ಜಮೀರ್ ಅಹ್ಮದ್ ಬುಡಕ್ಕೆ ಬಂದಿದೆ. ಇದರಿಂದ ಮುಸ್ಲಿಂ ಸಮುದಾಯ ಕಾಂಗ್ರೆಸ್​​ ವಿರುದ್ಧ ಸಿಡಿದೆದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಪಾಠ ಕಲಿಸುತ್ತೇವೆಂದು ಎಚ್ಚರಿಕ ನೀಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಚಿವ ಸತೀಶ್ ಜಾರಕಿಹೊಳಿ ಮುಸ್ಲಿಂ ನಾಯಕರ ಬೆನ್ನಿಗೆ ನಿಂತಿದ್ದು, ಜಬ್ಬರ್ ಅವರ ಮೇಲಿನ ಕ್ರಮದ ಬಗ್ಗೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾಡಿದ್ದಾರೆ. ಅಲ್ಲದೇ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದಾಗಿಯೂ ಸಹ ಹೇಳಿದ್ದಾರೆ.

ಡಿಕೆಶಿಯನ್ನ ಭೇಟಿಯಾದ ಸತೀಶ್ ಜಾರಕಿಹೊಳಿ

ಹೌದು…ಅಬ್ದುಲ್ ಜಬ್ಬಾರ್ ಅವರನ್ನ ಪಕ್ಷದಿಂದ ಅಮಾನತು ಮಾಡಿರುವ ಬಗ್ಗೆ ಬೇಸರಗೊಂಡಿರುವ ಸತೀಶ್ ಜಾರಕಿಹೊಳಿ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಮೊದಲೇ ಸತೀಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್ ನಡುವಿನ ಸಂಬಂಧ ಅಷ್ಟಕಷ್ಟೇ. ಇಬ್ಬರೂ ಒಂದೇ ಪಕ್ಷದ ನಾಯಕರಾಗಿದ್ದರೂ ಸಹ ಸತೀಶ್‌ ಜಾರಕಿಹೊಳಿ ಕರ್ನಾಟಕ ಕಾಂಗ್ರೆಸ್‌ನ ಕೇಂದ್ರವಾಗಿದ್ದರೆ, ಡಿಕೆ ಶಿವಕುಮಾರ್ ಸಹ ಮತ್ತೊಂದು ಕೇಂದ್ರ. ಹೀಗೆ ಇಬ್ಬರೂ ಪ್ರಭಾವಿಗಳು. ಅಷ್ಟೇ ಅಲ್ಲ ರಾಜಕೀಯ ವಿಚಾರದಲ್ಲಿ ಇಬ್ಬರೂ ತಮ್ಮದೇ ನಡೆಯಬೇಕೆನ್ನುವ ಹಠವಾದಿಗಳು. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್‌ ಅವರಿಗೆ ಯಾರಾದರೂ ಪ್ರಬಲ ಟಕ್ಕರ್‌ ಕೊಡಬಲ್ಲರು ಅಂದ್ರೆ ಅದು ಸತೀಶ್‌ ಜಾರಕಿಹೊಳಿ.

ಇದನ್ನೂ ಓದಿ: ಸಂಪುಟ ಸಭೆಯಲ್ಲಿ ಕಿಡಿ ಹೊತ್ತಿಸಿದ ದಾವಣಗೆರೆ ದಂಗಲ್: ಮುಸ್ಲಿಂ ನಾಯಕರ ತಲೆದಂಡಕ್ಕೆ ಸಚಿವರ ಆಕ್ಷೇಪ

ಅಷ್ಟೇ ಅಲ್ಲ ಸಿದ್ದರಾಮಯ್ಯನವರ ಪರವಾಗಿ ನಿಂತು ಡಿಕೆಶಿ ವಿರುದ್ಧ ಮಾತನಾಡುವ ನಾಯಕ ಅಂದ್ರೆ ಅದು ಸತೀಶ್ ಜಾರಕಿಹೊಳಿ. ಡಿಕೆಶಿ ಹಾಗೂ ಅವರ ಬಣ ಸಿಎಂ ಬದಲಾವಣೆ ಧ್ವನಿ ಎತ್ತಿದಾಗಲೆಲ್ಲ ಸಿದ್ದರಾಮಯ್ಯನವರ ಪರವಾಗಿ ನಿಂತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಧ್ವನಿ ಎತ್ತಿದ್ದೂ ಉಂಟು. ಹೀಗಿರುವಾಗ ಸತೀಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್ ಪರಸ್ಪರ ಭೇಟಿ ಮಾಡಿದ್ದು, ಅಬ್ದುಲ್ ಜಬ್ಬಾರ್ ಅವರ ಅಮಾನತು ವಾಪಸ್ ತೆಗೆದುಕೊಳ್ಳುವಂತೆ ಡಿಕೆಶಿಗೆ ಸಲಹೆ ನೀಡಿದ್ದಾರೆ. ಅಲ್ಲದೇ ಈ ಸಂಬಂಧ ಹೈಕಮಾಂಡ್ ಜತೆ ಚರ್ಚಿಸಲು ದೆಹಲಿಗೆ ಹೋಗುವುದಾಗಿಯೂ ಪರೋಕ್ಷವಾಗಿ ತಮ್ಮದೇ ಸಂದೇಶವೊಂದನ್ನ ರವಾನಿಸಿದ್ದಾರೆ.

ಸತೀಶ್‌ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್‌ ಭೇಟಿ ಸೌಜನ್ಯಯುತ ಭೇಟಿ ಎಂದು ಬಣ್ಣಿಸಲಾಗಿದೆ. ಆದ್ರೆ, ಇದು ಸೌಜನ್ಯಯುತ ಭೇಟಿ ಅಲ್ಲ ಕಾಂಗ್ರೆಸ್‌ನಲ್ಲಿ ಸದ್ಯ ಭುಗಿಲೆದ್ದಿರುವ ಮುಸ್ಲಿಂ ನಾಯಕರ ಅಸಮಾಧಾನದ ಕುರಿತು ಚರ್ಚೆ ನಡೆಸಿದ್ದಾರೆ. ಅಲ್ಲದೇ ಅಬ್ದುಲ್ ಜಬ್ಬಾರ್ ಅಮಾನತು ಶಿಕ್ಷೆಯನ್ನು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ಬೆಳವಣಿಗೆಗಳು ಮಾರಕವಾಗಹುದು ಎನ್ನುವುದನ್ನು ಸಹ ಸತೀಶ್ ಜಾರಕಿಹೊಳಿ, ಡಿಕೆಶಿ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಅಬ್ದುಲ್ ಜಬ್ಬಾರ್ ಅವರನ್ನ ವಾಪಸ್ ಕರೆದುಕೊಳ್ಳಬೇಕೆಂದು ಹೇಳಿದ್ದೇನೆಂದು ಸ್ವತಃ ಸತೀಶ್ ಜಾರಕಿಹೊಳಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಮುಂದಿನ ವಾರ ಹೈಕಮಾಂಡ್ ಭೇಟಿ ಮಾಡುವುದಾಗಿಯೂ ಸಹ ಹೇಳಿದ್ದಾರೆ. ಇದರೊಂದಿಗೆ ಸಾಹುಕಾರ, ಮುಸ್ಲಿಂ ನಾಯಕರ ಬೆನ್ನಿಗೆ ನಿಂತಿದ್ದಾರೆ.

ಸಚಿವ ಸಂಪುಟದಲ್ಲಿ ಧ್ವನಿ ಎತ್ತಿರುವ ಸಾಹುಕಾರ

ಇನ್ನು ನಿನ್ನೆ (ಏಪ್ರಿಲ್ 16) ನಡೆದ ಸಚಿವ ಸಂಪುಟದಲ್ಲೂ ಸಹ ಮುಸ್ಲಿಂ ನಾಯಕರ ಮೇಲಿನ ಕ್ರಮದ ಬಗ್ಗೆ ಪ್ರಸ್ತಾಪಿಸಿ ಬೇಸರ ಹೊರಹಾಕಿದ್ದಾರೆ.  ನಾವು ಮುಸ್ಲಿಂ ಸಮುದಾಯವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಸಿದರೆ, ಅಬ್ದುಲ್ ಜಬ್ಬಾರ್ ಮೇಲೆ ಕ್ರಮ ಕೈಗೊಂಡಿದ್ದು ತೀರಾ ಅವಸರದ ನಿರ್ಧಾರ. ಇದು ಸಮುದಾಯವೇ ನಮಗೆ ಸವಾಲು ಹಾಕುವಂತೆ ಮಾಡಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಪರೋಕವಾಗಿ ಎಚ್ಚರಿಸಿದ್ದಾರೆ.

ಹೈಕಮಾಂಡ್ ಭೇಟಿಗೂ ಮುಂದಾಗಿರುವ ಜಾರಕಿಹೊಳಿ

ಅಬ್ದುಲ್ ಜಬ್ಬಾರ್ ಅವರ ಅಮಾನತು ವಾಪಸ್ ಪಡೆಯಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಸತೀಶ್ ಜಾರಕಿಹೊಳಿ ಸಲಹೆ ಕೊಟ್ಟಿದ್ದಾರೆ. ಒಂದು ವೇಳೆ ಸಸ್ಪೆಂಡ್ ವಾಪಸ್ ಪಡೆಯದಿದ್ದರೆ ಜಾರಕಿಹೊಳಿ ಹೈಕಮಾಂಡ್ ನಾಯಕರ ಭೇಟಿಗೂ ಸಿದ್ಧವಾಗಿ ನಿಂತಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿದ್ದಾರೆ. ಮುಂದಿನ ವಾರ ದೆಹಲಿಗೆ ತೆರಳಿ ಹೈಕಮಾಂಡ್​​ ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದೊಂದಿಗೆ ಜಾರಕಿಹೊಳಿ ಮುಸ್ಲಿಂ ನಾಯಕರ ಬೆನ್ನಿಗೆ ನಿಂತಿರುವುದು ಸ್ಪಷ್ಟವಾಗಿದೆ.

ಹಾಗಾದ್ರೆ ಸತೀಶ್ ಜಾರಕಿಹಿಳಿ ಸಲಹೆಯನ್ನು ಸ್ವೀಕರಿಸಿ ಅಬ್ದುಲ್ ಜಬ್ಬಾರ್ ಅಮಾನತು ವಾಪಸ್ ಪಡೆದುಕೊಳ್ಳುತ್ತಾರಾ? ಅಥವಾ ಇಲ್ವಾ?  ಮುಂದಿನ ದಿನಗಳಲ್ಲಿ ಏನೆಲ್ಲಾ ರಾಜಕೀಯ ಬೆಳವಣಿಗೆಗಳು  ಆಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನಾನು ಅವತ್ತು ಆಡಿದ ಮಾತು ಸತ್ಯವಾಗಿದೆ ಎಂದ ಬಿ.ಎಸ್​​.ಯಡಿಯೂರಪ್ಪ – Kannada News | Ex CM B.S. Yediyurappa Reacts to Life Imprisonment for MLA Vinay Kulkarni

ಚಿಕ್ಕಮಗಳೂರು, ಏಪ್ರಿಲ್​​ 17: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ ಧಾರವಾದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಆದೇಶ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಿ.ಎಸ್​​. ಯಡಿಯೂರಪ್ಪ ನಾನು ಅವತ್ತು ಆಡಿದ ಮಾತು ಸತ್ಯವಾಗಿದೆ ಎಂದಿದ್ದಾರೆ. ಅಲ್ಲದೆ ಯೋಗೀಶ್ ಗೌಡ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ ಎಂದು ತಿಳಿಸಿದ್ದಾರೆ. ಆರಂಭದಲ್ಲಿ ಸ್ಥಳೀಯ ಪೊಲೀಸರು ಇದನ್ನು ಜಮೀನು ವಿವಾದವೆಂದು ತನಿಖೆ ಮಾಡಿದ್ದರು. ನಂತರ ಯೋಗೀಶ್ ಗೌಡ ಕುಟುಂಬದ ಒತ್ತಾಯದ ಮೇರೆಗೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಈ ಪ್ರಕರಣವನ್ನು CBI (ಸಿಬಿಐ) ತನಿಖೆಗೆ ವಹಿಸಿತ್ತು ಎಂಬುದಿಲ್ಲಿ ಗಮನಾರ್ಹ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಿಸಿಲ ಶಾಖದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಈ ಈ ಅಗತ್ಯ ಸಲಹೆಗಳನ್ನು ಪಾಲಿಸಿ – Kannada News | Keep these things in mind when going out this hot summer

ದಿನದಿಂದ ದಿನಕ್ಕೆ ಬಿಸಿಲ ತಾಪಮಾನ ಹೆಚ್ಚುತ್ತಿದ್ದು, ಸುಡುವ ಬಿಸಿಲ ತಾಪಕ್ಕೆ (Summer Heat) ಜನ ಬೆಂದು ಹೋಗಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಿಸಿಲ ಧಗೆಗೆ ಮನೆಯಿಂದ ಹೊರಗೆ ಕಾಲಿಡುವುದೇ ಕಷ್ಟಸಾಧ್ಯವಾಗಿದೆ. ಅದರಲ್ಲೂ ಈ ಉಷ್ಣಾಂಶ ಏರಿಕೆಯಿಂದ ನಿರ್ಜಲೀಕರಣ, ಶಾಖದ ಹೊಡೆತದಂತಹ ಸಮಸ್ಯೆಗಳಿಗೆ ಸಿಲುಕಿ ಜನ ಹೈರಾಣಾಗಿದ್ದಾರೆ. ಹೀಗಿರುವಾಗ ಈ ಹೆಚ್ಚುತ್ತಿರುವ ಬೇಸಿಗೆಯಲ್ಲಿ ನಮ್ಮ ಆರೋಗ್ಯದ ಬಗ್ಗೆ  ಸ್ವಲ್ಪ ಕಾಳಜಿ ವಹಿಸಿಕೊಳ್ಳುವುದು ತುಂಬಾನೇ ಮುಖ್ಯ. ಹೀಗಿರುವಾಗ ಶಾಖದ ಹೊಡೆತದಿಂದ ತಪ್ಪಿಸಿಕೊಳ್ಳಲು ನಿಮ್ಮನ್ನು ನೀವು ಈ ರೀತಿ ಕಾಳಜಿ ವಹಿಸಿ, ಜೊತೆಗೆ ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಈ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ.

ಬೇಸಿಗೆಯಲ್ಲಿ ನಿಮ್ಮನ್ನು ನೀವು ಈ ರೀತಿ ಕಾಳಜಿ ವಹಿಸಿ:

ದೇಹದ ನೀರಿನಂಶ ಕಾಪಾಡಿಕೊಳ್ಳಿ: ಬೇಸಿಗೆಯಲ್ಲಿ ದೇಹದ ನೀರಿನಂಶ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ಸಾಕಷ್ಟು ನೀರು ಕುಡಿಯಿರಿ. ಬಾಯಾರಿಕೆಯಾಗಿದ್ದರೆ ನಿಂಬೆ ಪಾನಕ ಕುಡಿಯಬಹುದು. ಬೇಸಿಗೆಯಲ್ಲಿ ಊಟದ ಜೊತೆಗೆ ಮಜ್ಜಿಗೆ ಅಥವಾ ಲಸ್ಸಿ ಕುಡಿಯಿರಿ. ಹಣ್ಣಿನ ಜ್ಯೂಸ್‌ ಕುಡಿಯಿರಿ. ಇವು ದೇಹಕ್ಕೆ ನೀರಿನಾಂಶವನ್ನು ಒದಗಿಸುತ್ತವೆ ಮತ್ತು ದೇಹವನ್ನು ತಂಪಾಗಿಸುತ್ತವೆ. ಜೊತೆಗೆ ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ತಪ್ಪದೇ ನೀರಿನ ಬಾಟಲಿಯನ್ನು ಕೊಂಡೊಯ್ಯಿರಿ.

ಬಿಸಿಲಿಗೆ ಹೊರಗೆ ಹೋಗುವುದನ್ನು ತಪ್ಪಿಸಿ: ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ, ಅಂದರೆ ಬಿಸಿಲಿನ ಝಳ ಹೆಚ್ಚಿರುವ  ಸಮಯದಲ್ಲಿ, ಹೊರಗೆ ಹೋಗುವುದನ್ನು ತಪ್ಪಿಸಿ. ಅಗತ್ಯವಿದ್ದರೆ  ಮಾತ್ರ ಹೊರಗೆ ಹೋಗಿ. ಹೊರಗೆ ಹೋಗಲೇಬೇಕಾದರೆ, ನೆರಳಿರುವ ಪ್ರದೇಶದಲ್ಲಿ  ಆಗಾಗ್ಗೆ ವಿರಾಮ ತೆಗೆದುಕೊಳ್ಳಿ.  ಶಾಖದ ಹೊಡೆತದಿಂದ ತಪ್ಪಿಸಲು ಚೆನ್ನಾಗಿ ನೀರು ಕುಡಿಯಿರಿ.

ಆರಾಮದಾಯಕ ಬಟ್ಟೆ ಧರಿಸಿ: ಹತ್ತಿ ಅಥವಾ ಲಿನಿನ್‌ನಂತಹ ಉಸಿರಾಡುವ, ಸಡಿಲವಾದ, ಹಗುರವಾದ ಮತ್ತು ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ಇಂತಹ ಹಗುರ ಬಟ್ಟೆಗಳು ಉತ್ತಮ ಗಾಳಿಯ ಪ್ರಸರಣಕ್ಕೆ ಅವಕಾಶ ಮಾಡಿಕೊಡುತ್ತವೆ ಮತ್ತು ನಿಮ್ಮನ್ನು ತಂಪಾಗಿರಿಸುತ್ತವೆ. ಭಾರವಾದ ಮತ್ತು ಕಿರಿಕಿರಿ ಭಾವನೆಯನ್ನು ಉಂಟುಮಾಡುವ ಬಟ್ಟೆಗಳನ್ನು ಧರಿಸದಿರಿ. ನೇರ ಸೂರ್ಯನ ಬೆಳಕು ಮತ್ತು ಸುಡುವ ಗಾಳಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಅಗಲವಾದ ಅಂಚುಳ್ಳ ಟೋಪಿ, ಸನ್ಗ್ಲಾಸ್ ಮತ್ತು ಛತ್ರಿಯನ್ನು ಬಳಸಿ.

ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರ ಸೇವನೆಯನ್ನು ತಪ್ಪಿಸಿ:   ಬೇಸಿಗೆಯಲ್ಲಿ ಹೊಟ್ಟೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ, ನೀವು ಮಸಾಲೆಯುಕ್ತ ಅಥವಾ ಎಣ್ಣೆಯುಕ್ತ ಆಹಾರವನ್ನು ಈ ಸಮಯದಲ್ಲಿ ತಿನ್ನುವುದನ್ನು ತಪ್ಪಿಸಬೇಕು. ವಿಶೇಷವಾಗಿ, ಹೊರಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಆದಷ್ಟು ಹಗುರವಾದ ಆಹಾರವನ್ನು ಸೇವನೆ ಮಾಡಿ.

ಇದನ್ನೂ ಓದಿ: ನಿಮ್ಮ ದಿನವನ್ನು ಧನಾತ್ಮಕವಾಗಿ ಆರಂಭಿಸಲು ಸಲಹೆಗಳನ್ನು ಪಾಲಿಸಿ

ಪ್ರಮುಖ ವಸ್ತುಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ: ನೀವು ಮನೆಯಿಂದ ಹೊರಗೆ ಹೋಗುತ್ತಿದ್ದೀರಿ ಎಂದಾದರೆ ಮುಖ್ಯವಾಗಿ ನೀರಿನ ಬಾಟಲಿಯನ್ನು ಕೊಂಡೊಯ್ಯಿರಿ. ಸೂರ್ಯನ ಶಾಖದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ಯಾವಾಗಲೂ ಸನ್ಗ್ಲಾಸ್, ಕ್ಯಾಪ್, ಟವಲ್ ಅಥವಾ ಛತ್ರಿಯನ್ನು ಕೊಂಡೊಯ್ಯಿರಿ. ಇವು ಶಾಖದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.

ಖಾಲಿ ಹೊಟ್ಟೆಯಲ್ಲಿ ಎಂದಿಗೂ ಹೊರಗೆ ಹೋಗಬೇಡಿ:  ಬೇಸಿಗೆಯಲ್ಲಿ ಆರೋಗ್ಯವಾಗಿರಲು, ಖಾಲಿ ಹೊಟ್ಟೆಯಲ್ಲಿ ಮನೆಯಿಂದ ಹೊರಗೆ ಹೋಗುವುದನ್ನು ತಪ್ಪಿಸುವುದು ಬಹಳ ಮುಖ್ಯ. ಬಿಸಿಲಿನಲ್ಲಿ ಖಾಲಿ ಹೊಟ್ಟೆಯಲ್ಲಿ ಹೊರಗೆ ಹೋದರೆ ತಲೆತಿರುಗುವಿಕೆಗೆ ಕಾರಣವಾಗಬಹುದು. ಹೆಚ್ಚುವರಿಯಾಗಿ, ಆಮ್ಲೀಯತೆ ಮತ್ತು ವಾಂತಿ ಮುಂತಾದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:38 pm, Fri, 17 April 26

Source link