Category Archives: Blog

Your blog category

ತಿದ್ದುಪಡಿಗೆ ಅಲ್ಲ, ಮಹಿಳಾ ಮೀಸಲಾತಿಗೇ ಪ್ರತಿಪಕ್ಷದ ವಿರೋಧ: ಗೃಹ ಸಚಿವ ಅಮಿತ್​​ ಶಾ – Kannada News | Amit Shah Slams Opposition on Women’s Reservation, Delimitation and Caste Census

ನವದೆಹಲಿ, ಏಪ್ರಿಲ್​​ 17: ಮಹಿಳಾ ಮೀಸಲಾತಿ ಮಸೂದೆ, ಕ್ಷೇತ್ರ ಮರುವಿಂಗಡಣೆ ಬಗ್ಗೆ ಚರ್ಚೆ ಸಂಬಂಧ ಲೋಕಸಭೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಉತ್ತರ ನೀಡಿದ್ದಾರೆ. ಯಾರೂ ಕೂಡ ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಲ್ಲ. ಎಲ್ಲರೂ ಕೂಡ ಸ್ವಾಗತ ಮಾಡಿದ್ದಾರೆ. ಆದ್ರೆ, ಇಂಡಿಯಾ ಮೈತ್ರಿಕೂಟ ಪರೋಕ್ಷವಾಗಿ ಅದನ್ನು ವಿರೋಧಿಸಿದೆ. ಅವರ ವಿರೋಧ ತಿದ್ದುಪಡಿಗಳಿಗೆ ಅಲ್ಲ. ಬದಲಾಗಿ ಮಹಿಳಾ ಮೀಸಲಾತಿಗೇ ಪ್ರತಿಪಕ್ಷ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಹೀಗಾಗಿ ವಿರೋಧ ಪಕ್ಷದವರು ಮಹಿಳಾ ವಿರೋಧಿ ಮನಸ್ಥಿತಿಯವರು ಎಂದು ಅಮಿತ್​​ ಶಾ ತಿವಿದಿದ್ದಾರೆ.

ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ಸಮಾನ ಪ್ರತಿನಿಧಿತ್ವಕ್ಕಾಗಿ ಕ್ಷೇತ್ರ ಮರುವಿಂಗಡಣೆ ಅಗತ್ಯ. ಕ್ಷೇತ್ರ ಮರುವಿಂಗಡಣೆಗೆ ವಿರೋಧಿಸುವುದು SC/ST ಸ್ಥಾನಗಳ ಹೆಚ್ಚಳಕ್ಕೂ ವಿರೋಧಿಸಿದಂತೆಯೇ ಎಂದಿದ್ದಾರೆ. ಅಲ್ಲದೆ 2029ರ ಚುನಾವಣೆಗೆ ಮೊದಲು ಬಿಲ್​​ಗಳನ್ನಯ ಜಾರಿಗೆ ತರುವ ಉದ್ದೇಶ ಸರ್ಕಾರದ್ದಾಗಿದೆ. 20 ಲಕ್ಷಕ್ಕೂ ಹೆಚ್ಚು ಮತದಾರರಿರುವ 127 ಲೋಕಸಭಾ ಕ್ಷೇತ್ರಗಳಿವೆ. ಇಷ್ಟು ಜನರ ಸಮಸ್ಯೆಗಳನ್ನು ಒಬ್ಬ ಸಂಸದ ಹೇಗೆ ನಿಭಾಯಿಸಬಹುದು ಮತ್ತು ಅವರ ಅಗತ್ಯಗಳನ್ನು ಪೂರೈಸಬಹುದು? ಎಂದು ಅವರು ಇದೇ ವೇಳೆ ಸದನವನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ಪರ ಮತ ಚಲಾಯಿಸಲು ಸಂಸದರಿಗೆ ಮೋದಿ ಮನವಿ

‘ಸುಳ್ಳನ್ನು ಜೋರಾಗಿ ಹೇಳಿದರೆ ಅದು ಸತ್ಯವಾಗಲ್ಲ’

ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಲಾಗಿದೆ. ಆದರೆ ಉತ್ತರದವರಿಗೆ ಇರುವಷ್ಟೇ ಅಧಿಕಾರ ಈ ಸದನದಲ್ಲಿ ದಕ್ಷಿಣದವರಿಗೂ ಇದೆ. ಸುಳ್ಳನ್ನು ಜೋರಾಗಿ ಹೇಳಿದರೆ ಅದು ಸತ್ಯವಾಗಲ್ಲ. ಸತ್ಯ ಯಾವತ್ತೂ ಸತ್ಯವೇ. ಉತ್ತರ-ದಕ್ಷಿಣ ವಿಭಜನೆ ಬೇಕಿರೋದು ವಿಪಕ್ಷದವರಿಗೆ. ಯಾವುದೇ ರಾಜ್ಯಕ್ಕೂ, ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ನಷ್ಟವಾಗುವುದಿಲ್ಲ. ಲಕ್ಷದ್ವೀಪವಾಗಲಿ ಉತ್ತರ ಪ್ರದೇಶ ಆಗಲಿ, ಪ್ರತಿಯೊಂದು ರಾಜ್ಯಕ್ಕೂ ಸಂಸತ್ತಿನಲ್ಲಿ ನ್ಯಾಯಸಮ್ಮತ ಪ್ರತಿನಿಧಿತ್ವ ದೊರೆಯಲಿದೆ. ಅಧಿಕಾರದಲ್ಲಿದ್ದಾಗಲೂ, ವಿರೋಧ ಪಕ್ಷದಲ್ಲಿದ್ದಾಗಲೂ ಕಾಂಗ್ರೆಸ್ ಕ್ಷೇತ್ರ ಮರುವಿಂಗಡಣೆಗೆ ವಿರೋಧಿಸಿದೆ ಎಂದು ಅಮಿತ್​​ ಶಾ ಆರೋಪಿಸಿದ್ದಾರೆ.

543 ಸಂಸತ್ ಸ್ಥಾನಗಳಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ಈ ಐದು ರಾಜ್ಯಗಳಲ್ಲಿ ಪ್ರಸ್ತುತ 129 ಸ್ಥಾನಗಳಿದ್ದು, ಇದು ಶೇ. 23.76 ಆಗಿದೆ. ಶೇ.50 ಹೆಚ್ಚಳದ ನಂತರ ಸ್ಥಾನಗಳನ್ನು ಹಂಚಿದರೆ ಇದು 129ರಿಂದ 195ಕ್ಕೆ ಏರಿಕೆಗೊಂಡು, 816 ಸ್ಥಾನಗಳಲ್ಲಿ ಶೇ. 23.87 ಆಗುತ್ತದೆ. ಹೀಗಾಗಿ ಯಾರಿಗೂ ನಷ್ಟವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

‘ಜನಗಣತಿ ವೇಳೆಯೇ ಜಾತಿಗಣತಿ’

ಕೋವಿಡ್-19 ಮಹಾಮಾರಿಯ ಕಾರಣ 2021ರಲ್ಲಿ ಜನಗಣತಿ ನಡೆಸಲು ಸಾಧ್ಯವಾಗಲಿಲ್ಲ. 2024ರಲ್ಲಿ ಮಾಡಲು ಮುಂದಾದಾಗ ಹಲವರು ಜಾತಿ ಆಧಾರಿತ ಜನಗಣತಿಗೆ ಒತ್ತಾಯಿಸಿದರು. ಅಂತಿಮವಾಗಿ  ಜಾತಿ ಜನಗಣತಿ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್​​ ನಿರ್ಣಯದಂತೆ ಜನಗಣತಿ ವೇಳೆ ಜಾತಿ ಗಣತಿಯೂ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:59 pm, Fri, 17 April 26

Source link

GT vs KKR IPL 2026 Live Score: ಟಾಸ್ ಗೆದ್ದ ಕೆಕೆಆರ್ ಬ್ಯಾಟಿಂಗ್ ಆಯ್ಕೆ – Kannada News | Gujarat Titans vs Kolkata Knight Riders IPL 2026 Live Cricket Score GT vs KKR Match on 17th april latest news in Kannada

ಐಪಿಎಲ್ 2026 ರ 25 ನೇ ಪಂದ್ಯವು ಗುಜರಾತ್ ಟೈಟಾನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯುತ್ತಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಇದುವರೆಗೆ ಐದು ಪಂದ್ಯಗಳನ್ನು ಆಡಿದ್ದು, ಇನ್ನೂ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಆದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಒಂದು ಪಾಯಿಂಟ್ ಹೊಂದಿದೆ. ಇತ್ತ ಗುಜರಾತ್ ಆಡಿರುವ 4 ಪಂದ್ಯಗಳಲ್ಲಿ ಎರಡಲ್ಲಿ ಗೆಲುವು ಸಾಧಿಸಿದೆ.

Source link

IPL 2026: ಮೊದಲ ಬಾರಿಗೆ ಬದಲಾದ ಸಮಯದಲ್ಲಿ ಪಂದ್ಯವನ್ನಾಡಲಿದೆ ಆರ್​ಸಿಬಿ – Kannada News | IPL 2026: RCB vs DC Match Preview, Live Stream and Prediction

ಐಪಿಎಲ್ 2026 (IPL 2026) ರ ಏಪ್ರಿಲ್ 18 ರ ಶನಿವಾರದಂದು ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ. ದಿನದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು (RCB vs DC) ಎದುರಿಸಲಿದೆ. ಈ ಆವೃತ್ತಿಯಲ್ಲಿ ರಜತ್ ಪಾಟಿದಾರ್ ನಾಯಕತ್ವದ ಆರ್​ಸಿಬಿ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದ್ದು, ಏಕೈಕ ಪಂದ್ಯದಲ್ಲಿ ಸೋಲನುಭವಿಸಿದೆ. ಇತ್ತ ಸತತ ಗೆಲುವಿನೊಂದಿಗೆ ಲೀಗ್ ಆರಂಭಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಕೊನೆಯ ಎರಡು ಪಂದ್ಯಗಳನ್ನು ಸೋತಿದೆ. ಹೀಗಾಗಿ ಡೆಲ್ಲಿ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದ್ದರೆ, ಆರ್​ಸಿಬಿ ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಪ್ರಯತ್ನಿಸಲಿದೆ.

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯ ಯಾವಾಗ ನಡೆಯಲಿದೆ?

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯ ಏಪ್ರಿಲ್ 18 ರ ಶನಿವಾರದಂದು ನಡೆಯಲಿದೆ.

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯ ಎಲ್ಲಿ ನಡೆಯಲಿದೆ?

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸುವುದು ಹೇಗೆ?

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯವನ್ನು ಮೊಬೈಲ್‌ನಲ್ಲಿ ವೀಕ್ಷಿಸುವುದು ಹೇಗೆ?

ಜಿಯೋ-ಹಾಟ್‌ಸ್ಟಾರ್ ಅಪ್ಲಿಕೇಶನ್ ಬಳಸಿಕೊಂಡು ನಿಮ್ಮ ಮೊಬೈಲ್ ಫೋನ್‌ನಲ್ಲಿ ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯವನ್ನು ನೀವು ವೀಕ್ಷಿಸಬಹುದು.

IPL 2026: ಆರ್​ಸಿಬಿ ವೇಗಿ ರಸಿಕ್ ಸಲಾಂಗೆ 2 ವರ್ಷ ನಿಷೇಧ ಹೇರಿದ್ದ ಬಿಸಿಸಿಐ..!

ಉಭಯ ತಂಡಗಳು

ಆರ್​ಸಿಬಿ ಪೂರ್ಣ ತಂಡ: ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ರಜತ್ ಪಾಟಿದಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ವೆಂಕಟೇಶ್ ಅಯ್ಯರ್, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾಣ್, ಜೋಶ್ ಹೇಜಲ್​ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಅಭಿನಂದನ್ ಸಿಂಗ್, ಜಾಕೋಬ್ ಡಫಿ,

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪಾತುಮ್ ನಿಸ್ಸಾಂಕ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸಮೀರ್ ರಿಜ್ವಿ, ಡೇವಿಡ್ ಮಿಲ್ಲರ್, ಅಕ್ಸರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕಿಬ್ ನಬಿ ದಾರ್, ಲುಂಗಿ ಎನ್‌ಗಿಡಿ, ಕುಲ್ದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್, ವಿಪ್ರಜ್ ನಿಗಮ್, ಅಶುತೋಷ್ ಶರ್ಮಾ, ಕರುಣ್ ನಾಯರ್, ಎಂ. ಅಜಯ್ ಜಾದವ್ ಮಂಡಲ್, ಪೃಥ್ವಿ ಶಾ, ತ್ರಿಪುರ ವಿಜಯ್, ಅಭಿಷೇಕ್ ಪೊರೆಲ್, ಸಾಹಿಲ್ ಪರಾಖ್, ಮಾಧವ್ ತಿವಾರಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪಠಿಸಿದ ಬಾಲಿವುಡ್ ನಟ – Kannada News | Bollywood actor Vidyut Jamwal chant Gayatri Mantra at CinemaCon 2026

ಸಿನಿಮಾ (Cinema) ಮಂದಿ, ವೀಶೇಷವಾಗಿ ಬಾಲಿವುಡ್​​ನವರು (Bollywood) ಧರ್ಮ, ಸಂಸ್ಕೃತಿಯಿಂದ ದೂರ. ಅವರದ್ದು ಗ್ಲಾಮರಸ್, ಸ್ಟೈಲಿಸ್ಟ್ ಬದುಕು ಎಂದೇ ಬಹುತೇಕರು ತಿಳಿದುಕೊಂಡಿದ್ದಾರೆ. ಆದರೆ ಇದೀಗ ಬಾಲಿವುಡ್​ನ ಜನಪ್ರಿಯ ನಟರೊಬ್ಬರು ಪ್ರತಿಷ್ಠಿತ ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪಠಿಸಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದ್ದು, ನಟನ ಪ್ರಯತ್ನಕ್ಕೆ ಅನೇಕರು ಭೇಷ್ ಎಂದಿದ್ದಾರೆ. ಅಂದಹಾಗೆ ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪಠಿಸಿರುವುದು ಬಾಲಿವುಡ್​​ನ ಜನಪ್ರಿಯ ನಟ ವಿದ್ಯುತ್ ಜಾಮ್​​ವಾಲ್.

ತಮ್ಮ ಅದ್ಭುತ ಫಿಟ್​ನೆಸ್​​ ಮತ್ತು ಮಾರ್ಷಲ್ ಆರ್ಟ್ ಕಲೆಯ ಮೂಲಕ ಜನಪ್ರಿಯರಾಗಿರುವ ವಿದ್ಯುತ್ ಜಮ್ವಾಲ್ ಮೊದಲ ಬಾರಿಗೆ ಹಾಲಿವುಡ್ ಸಿನಿಮಾನಲ್ಲಿ ನಟಿಸಿದ್ದಾರೆ. ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ಸಿನೆಮಾಕಾನ್ 2026’ ಅವರು ನಟಿಸಿರುವ ಹಾಲಿವುಡ್ ಸಿನಿಮಾ ‘ಸ್ಟ್ರೀಟ್ ಫೈಟರ್’ನ ಪ್ರಚಾರದಲ್ಲಿ ಅವರು ಭಾಗಿ ಆಗಿದ್ದರು. ಈ ವೇಳೆ ಜಾಗತಿಕ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪ್ರತಿಧ್ವನಿಸುವಂತೆ ಮಾಡಿದ್ದಾರೆ.

ವಿಶ್ವಪ್ರಸಿದ್ಧ ವಿಡಿಯೋ ಗೇಮ್ ಸರಣಿ ‘ಸ್ಟ್ರೀಟ್ ಫೈಟರ್’ ಆಧರಿತ ಈ ಸಿನಿಮಾದಲ್ಲಿ ವಿದ್ಯುತ್ ಅವರು ಐಕಾನಿಕ್ ಯೋಗ ಮಾಸ್ಟರ್ ‘ಧಲ್ಸಿಮ್’ ಪಾತ್ರವನ್ನು ನಿರ್ವಹಿಸಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಟ್ರೈಲರ್ ಸಹ ಬಿಡುಗಡೆ ಆಗಿದೆ. ಸಿನಿಮಾಕಾನ್ 2026ನಲ್ಲಿ ಸಿನಿಮಾದ ತಂಡ ಸೇರಿ ಪ್ರಚಾರ ಕಾರ್ಯದಲ್ಲಿ ಭಾಗಿ ಆಗಿತ್ತು. ಕಾರ್ಯಕ್ರಮದ ವೇಳೆ ವಿದ್ಯುತ್ ಅವರು ಇತರೆ ನಟರ ಅನುಮತಿ ಪಡೆದು ಕಣ್ಣುಮುಚ್ಚಿ ಸೂರ್ಯ ಮಂತ್ರ, ಚಂದ್ರ ಮಂತ್ರ ಮತ್ತು ಗಾಯತ್ರಿ ಮಂತ್ರವನ್ನು ಭಕ್ತಿಯಿಂದ ಪಠಿಸಿದರು. ವಿಶೇಷವೆಂದರೆ, ವೇದಿಕೆಯಲ್ಲಿದ್ದ ಅವರ ಸಹನಟರಾದ ನೋವಾ ಸೆಂಟಿನಿಯೊ ಸೇರಿದಂತೆ ಇತರ ಜಾಗತಿಕ ತಾರೆಗಳು ಕೂಡ ವಿದ್ಯುತ್ ಅವರಿಗೆ ಸಾಥ್ ನೀಡಿ ಮೌನ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಇದನ್ನೂ ಓದಿ:ನನ್ನನ್ನು ಕೆಟ್ಟದಾಗಿ ಮುಟ್ಟಿದರು: ಕನ್ನಡದಲ್ಲಿ ಅಭಿನಯಿಸಿದ ಬಾಲಿವುಡ್ ನಟಿಯಿಂದ ಆರೋಪ

ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ವಿದ್ಯುತ್ ಜಾಮ್​ವಾಲ್, ‘ವಿಶ್ವದ ಅತ್ಯಂತ ಗದ್ದಲದ ಮತ್ತು ಲವಲವಿಕೆಯ ನಗರಗಳಲ್ಲಿ ಒಂದಾದ ಲಾಸ್ ವೇಗಾಸ್‌ನ ‘ಸಿನೆಮಾಕಾನ್’ ವೇದಿಕೆಯಲ್ಲಿ ಪ್ರಾರ್ಥನೆ ಸಲ್ಲಿಸುವ ಗೌರವ ನನಗೆ ಸಿಕ್ಕಿದೆ. ನಾನು ಪಠಿಸಿದ ಭಾರತೀಯ ಮಂತ್ರಗಳು ಅಲ್ಲಿನ ಗದ್ದಲದ ನಡುವೆ ಒಂದು ನಿಶ್ಯಬ್ದವನ್ನು, ಶಾಂತಿ ಮತ್ತು ಮೌನದ ಅಲೆಯನ್ನು ಸೃಷ್ಟಿಸಿದವು. ಆ ಕ್ಷಣದಲ್ಲಿ ಆ ಸಭಾಂಗಣದಲ್ಲಿದ್ದ ಪ್ರತಿಯೊಬ್ಬರ ಜೊತೆ ನಾನು ಪದಗಳಿಲ್ಲದ, ಭಾಷೆಯ ಗಡಿ ಮೀರಿದ ಒಂದು ಆಳವಾದ ಬಾಂಧವ್ಯವನ್ನು ಅನುಭವಿಸಿದೆ. ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮನ್ನು ಬೆಸೆದಿತ್ತು. ಜಾಗತಿಕ ಸಾಮರಸ್ಯದ ಈ ದರ್ಶನವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ದೊಡ್ಡ ಭಾಗ್ಯ.’ ಎಂದು ವಿದ್ಯುತ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಕಿಟಾವೊ ಸಕುರೈ ನಿರ್ದೇಶನದ ‘ಸ್ಟ್ರೀಟ್ ಫೈಟರ್’ ಚಿತ್ರದಲ್ಲಿ ನೋವಾ ಸೆಂಟಿನಿಯೊ, ಜೇಸನ್ ಮೊಮೊವಾ, ಅಂಡ್ರ್ಯೂ ಕೋಜಿ ಮತ್ತು ಕುರ್ಟಿಸ್ ’50 ಸೆಂಟ್’ ಜಾಕ್ಸನ್ ಅಂತಹ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಈ ಸಾಹಸಮಯ ಸಿನಿಮಾವು ಇದೇ ವರ್ಷದ ಅಕ್ಟೋಬರ್ 16 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ತಮ್ಮ ಮೊದಲ ಹಾಲಿವುಡ್ ಸಿನಿಮಾದ ಪಯಣವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿದ ವಿದ್ಯುತ್ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಮರ್ಷಿಯಲ್ ಅಡುಗೆ ಅನಿಲವಾಗಿ ಎಥನಾಲ್ ಬಳಕೆ? ಎಲ್​ಪಿಜಿ ಅವಲಂಬನೆ ತಗ್ಗಿಸಲು ಸರ್ಕಾರದಿಂದ ಹೊಸ ಮಾರ್ಗೋಪಾಯ – Kannada News | Govt thinks of using ethanol as commercial cooking gas, to reduce dependency on LPG

ನವದೆಹಲಿ, ಏಪ್ರಿಲ್ 17: ಪಶ್ಚಿಮ ಏಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಎಲ್‌ಪಿಜಿ (LPG) ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಎದುರಿಸಲು ಭಾರತ ಸರ್ಕಾರವು ಒಂದು ಮಹತ್ವದ ಹೆಜ್ಜೆಯನ್ನು ಇರಿಸುತ್ತಿದೆ. ಕಮರ್ಷಿಯಲ್ ಗ್ಯಾಸ್ ಆಗಿ ಬಳಸಲು ಎಲ್​ಪಿಜಿ ಜೊತೆಗೆ ಮತ್ತೊಂದು ಪರ್ಯಾಯವಾದ ಇಂಧನದ ಬಳಕೆ ಕುರಿತು ಯೋಚಿಸಲಾಗುತ್ತಿದೆ. ವಾಣಿಜ್ಯ ಬಳಕೆಯ ಅಡುಗೆ ಇಂಧನವಾಗಿ ‘ಎಥೆನಾಲ್’ (Ethanol) ಬಳಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.

ಭಾರತದಲ್ಲಿ ಪೆಟ್ರೋಲ್‌ಗೆ ಶೇ. 20 ರಷ್ಟು ಎಥೆನಾಲ್ ಮಿಶ್ರಣ ಮಾಡಿದ ನಂತರವೂ, ಸುಮಾರು 1,000 ಕೋಟಿ ಲೀಟರ್‌ಗಳಷ್ಟು ಹೆಚ್ಚುವರಿ ಎಥೆನಾಲ್ ಲಭ್ಯವಿದೆ. ಇದನ್ನು ಅಡುಗೆ ಇಂಧನವಾಗಿ ಬಳಸಲು ಉದ್ಯಮ ಪ್ರತಿನಿಧಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಪೂರೈಕೆಯ ಕೊರತೆಯಿಂದಾಗಿ ಸರ್ಕಾರವು ಎಲ್‌ಪಿಜಿಯನ್ನು ಸದ್ಯಕ್ಕೆ ಮನೆ ಬಳಕೆಗೆ ಮೊದಲ ಆದ್ಯತೆಯಾಗಿ ನೀಡುತ್ತಿದೆ. ಹೀಗಾಗಿ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ವಿಮಾನ ನಿಲ್ದಾಣಗಳಂತಹ ದೊಡ್ಡ ಘಟಕಗಳಲ್ಲಿನ ವಾಣಿಜ್ಯ ಅಡುಗೆ ಮನೆಗಳಲ್ಲಿ ಎಥೆನಾಲ್ ಅನ್ನು ಎಲ್​ಪಿಜಿಗೆ ಪರ್ಯಾಯವಾಗಿ ಬಳಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಮೆರಿಕದ ನಿಷೇಧದ ನಡುವೆಯೂ ರಷ್ಯನ್ ತೈಲ ಖರೀದಿ ಮುಂದುವರಿಸಲಿರುವ ಭಾರತ

ಬೆಲೆ ಮತ್ತು ಗುಣಮಟ್ಟ

ಇಂಧನ ಮಟ್ಟದ ಎಥನಾಲ್ ಜೊತೆಗೆ ಹೈಡ್ರಸ್ ಅಥವಾ ಜಲಯುಕ್ತ ಎಥನಾಲ್ ಕೂಡ ಇದೆ. ಈ ಹೈಡ್ರಸ್ ಎಥನಾಲ್​ನಲ್ಲಿ ಶೇ. 95ರಷ್ಟು ಇಥನಾಲ್ ಹಾಗೂ ಸ್ವಲ್ಪ ನೀರು ಇರುತ್ತದೆ. ಆದರೆ, ಫುಯಲ್ ಗ್ರೇಡ್ ಎಥನಾಲ್​ಗಿಂತ ಈ ಹೈಡ್ರಸ್ ಎಥನಾಲ್ ಕಡಿಮೆ ಬೆಲೆ.

ವಾಣಿಜ್ಯ ಎಲ್‌ಪಿಜಿ ಬೆಲೆ ಕೆ.ಜಿ.ಗೆ ಸುಮಾರು 103 ರೂ. ಇದ್ದರೆ, ಹೈಡ್ರಸ್ ಎಥೆನಾಲ್ ಬೆಲೆ ಸುಮಾರು 70 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.

ಎಲ್‌ಪಿಜಿಗೆ ಹೋಲಿಸಿದರೆ ಎಥೆನಾಲ್‌ನಲ್ಲಿ ಶಾಖದ ಸಾಮರ್ಥ್ಯ (Calorific value) ಸ್ವಲ್ಪ ಕಡಿಮೆ ಇರುತ್ತದೆ (LPG: 12,000 kcal/kg vs Ethanol: 7,100 kcal/kg). ಅಂದರೆ ಎಲ್‌ಪಿಜಿಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದ ಎಥೆನಾಲ್ ಬೇಕಾಗಬಹುದು, ಆದರೆ ಇದು ಪರಿಸರ ಸ್ನೇಹಿಯಾಗಿದೆ. ಈ ಹೈಡ್ರಸ್ ಎಥನಾಲ್ ಅನ್ನು ಸದ್ಯ ಆಲ್ಕೋಹಾಲ್ ಸ್ಟವ್ ಅಥವಾ ಬಯೋ ಇಥನಾಲ್ ಬರ್ನರ್​ಗಳಲ್ಲಿ ಬಳಸಲಾಗುತ್ತಿದೆ. ಇದರ ಪ್ರಮುಖ ಕೊರತೆ ಎಂದರೆ ಕಡಿಮೆ ಶಾಖ ಬಿಡುಗಡೆ ಮಾಡುವುದು. ಅಂದರೆ, ಅಡುಗೆ ಮಾಡಲು ಎಲ್​ಪಿಜಿಗಿಂತ ಹೆಚ್ಚು ಹೈಡ್ರಸ್ ಎಥನಾಲ್ ಅನ್ನು ವ್ಯಯಿಸಬೇಕಾಗುತ್ತದೆ.

ಇದನ್ನೂ ಓದಿ: ಜಾಗತಿಕ ರಾಜಕೀಯದಲ್ಲಿ ಬದಲಾದ ಲೆಕ್ಕಾಚಾರ, ಪಾಕಿಸ್ತಾನ ಭೇಟಿಗೆ ಇರಾನ್ ಒಪ್ಪಂದದ ಷರತ್ತು ವಿಧಿಸಿದ ಟ್ರಂಪ್

ಎಥೆನಾಲ್ ಮೂಲ

ಭಾರತದಲ್ಲಿ ಎಥೆನಾಲ್ ಅನ್ನು ಮುಖ್ಯವಾಗಿ ಕಬ್ಬು, ಮೆಕ್ಕೆಜೋಳ ಮತ್ತು ನುಚ್ಚಕ್ಕಿಯಿಂದ (Broken Rice) ತಯಾರಿಸಲಾಗುತ್ತದೆ. ಇದನ್ನು ಅಡುಗೆಗೆ ಬಳಸುವುದರಿಂದ ದೇಶದ ರೈತರಿಗೂ ಹೆಚ್ಚಿನ ಲಾಭ ಸಿಗುವ ನಿರೀಕ್ಷೆಯಿದೆ.

ಮುಂಬರುವ ವಾರಗಳಲ್ಲಿ ಈ ಕುರಿತು ‘ಶ್ವೇತಪತ್ರ’ (White Paper) ವನ್ನು ಅಂತರ-ಸಚಿವಾಲಯ ಸಮಿತಿಗೆ ಸಲ್ಲಿಸಲಾಗುವುದು. ತಾಂತ್ರಿಕ ಸುರಕ್ಷತೆ ಮತ್ತು ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ – Kannada News | Rahul Gandhi lowered the dignity of the post of Leader of Opposition Chirag Paswan alleges

ನವದೆಹಲಿ, ಏಪ್ರಿಲ್ 17: ಕೇಂದ್ರ ಸಚಿವ ಮತ್ತು ಎಲ್​ಜೆಪಿ ಸಂಸದ ಚಿರಾಗ್ ಪಾಸ್ವಾನ್ (Chirag Paswan) ಇಂದು ಸಂಸತ್​​ನಲ್ಲಿ ಅಧಿವೇಶನದಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮಾಡಿದ ಭಾಷಣದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. “ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನ ಸ್ಥಾನದ ಘನತೆಯನ್ನು ಕಡಿಮೆ ಮಾಡಿದ್ದಾರೆ. ಉದಾಹರಣೆಗಳನ್ನು ನೀಡುವ ಭರದಲ್ಲಿ ಪ್ರಧಾನಿ ಮೋದಿಯವರ ಹೆಸರನ್ನು ತಮ್ಮ ಜೊತೆ ಎಳೆದುಕೊಂಡು ಮಿತಿ ಮೀರಿ ವರ್ತಿಸಿದ್ದಾರೆ. ಈ ಮೂಲಕ ಅವರ ಪಕ್ಷದಿಂದ ಮೊದಲ ಬಾರಿಗೆ ಸಂಸದರಾದವರ ಮುಂದೆ ತಮ್ಮ ಗೌರವವನ್ನು ತಾವೇ ಕೆಳಗೆ ಹಾಕಿಕೊಂಡಿದ್ದಾರೆ. ಕಿರಿಯ ಸಂಸದರ ಮುಂದೆ ನಗೆಪಾಟಲಿಗೀಡಾಗಿದ್ದಾರೆ. ” ಎಂದು ಅವರು ಆರೋಪಿಸಿದ್ದಾರೆ.

“ರಾಹುಲ್ ಗಾಂಧಿ ಅವರ ಭಾಷಣದಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವು ನಿರ್ಣಾಯಕ ಪಾತ್ರವನ್ನು ಹೊಂದಿದೆ. ಆದರೆ ನನಗೆ ಹೆಂಡತಿಯ ಸಮಸ್ಯೆಯಿಲ್ಲ ಎನ್ನುತ್ತಾ ಲೋಕಸಭಾ ವಿರೋಧ ಪಕ್ಷದ ನಾಯಕರೊಬ್ಬರು ಸದನದಲ್ಲಿ ತನ್ನನ್ನು ತಾನೇ ಅಪಹಾಸ್ಯ ಮಾಡಿಕೊಳ್ಳಲು ಬಯಸಿದರೆ, ಅವರು ಕೇವಲ ಹಾಸ್ಯ ಭಾಷಣಗಳನ್ನು ನೀಡಲು ಬಯಸಿದರೆ, ಅವರು ವಿರೋಧ ಪಕ್ಷದ ನಾಯಕರಾಗಲು ಯೋಗ್ಯರಲ್ಲ ಎಂದು ನನಗೆ ಅನಿಸುತ್ತದೆ” ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಜಿತ್ ಜೊತೆ ನಯನತಾರಾ ಪತಿಯ ‘ಕೆಜಿಎಫ್’ ಮಾದರಿ ಸಿನಿಮಾ ನಿಂತುಹೋಗಿದ್ದೇಕೆ? – Kannada News | Vignesh Shivan said he wrote a story for Ajit Kumar inspiring with KGF

ಕೆಜಿಎಫ್’ (KGF) ಮತ್ತು ‘ಕೆಜಿಎಫ್ 2’ ಸಿನಿಮಾಗಳು ಹಲವು ಸಿನಿಮಾ ನಿರ್ದೇಶಕರಿಗೆ, ನಾಯಕರಿಗೆ, ನಿರ್ಮಾಪಕರಿಗೆ ಮಾದರಿ ಹಾಕಿಕೊಟ್ಟ ಸಿನಿಮಾಗಳು. ನಾಯಕನ ಎಲಿವೇಶನ್, ಚಿತ್ರೀಕರಣದ ರೀತಿ, ಸಿನಿಮಾದ ಸ್ಕೇಲ್, ಆಧುನಿಕ ಗ್ಯಾಂಗ್​​ಸ್ಟರ್ ಕತೆಗಳು ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಂತಿತ್ತು ಆ ಸಿನಿಮಾ. ‘ಕೆಜಿಎಫ್’ನಿಂದ ಸ್ಪೂರ್ತಿ ಪಡೆದು ಹಲವು ನಿರ್ದೇಶಕರು ಬೇರೆ ಬೇರೆ ರೀತಿಯ ಸಿನಿಮಾಗಳನ್ನು ಮಾಡಿದರು. ಕನ್ನಡದಲ್ಲಿ ‘ಕಬ್ಜ’ ಸಿನಿಮಾ ಸಹ ‘ಕೆಜಿಎಫ್’ ಸ್ಪೂರ್ತಿಯಿಂದಲೇ ಬಂದಿದ್ದು. ಅಸಲಿಗೆ ಸ್ಟಾರ್ ನಟಿ ನಯನತಾರಾ ಅವರ ಪತಿ ವಿಘ್ನೇಶ್ ಶಿವನ್ ಸಹ ‘ಕೆಜಿಎಫ್’ ಸಿನಿಮಾದಿಂದ ಸ್ಪೂರ್ತಿ ಪಡೆದು ಸಿನಿಮಾ ಕತೆಯೊಂದನ್ನು ರೆಡಿ ಮಾಡಿಕೊಂಡಿದ್ದರು, ಆದರೆ ಅದು ಸಿನಿಮಾ ಆಗಲಿಲ್ಲ.

ಅವರೇ ಹೇಳಿಕೊಂಡಿರುವಂತೆ, ತಮಿಳಿನ ಸ್ಟಾರ್ ನಟ ಅಜಿತ್ ಅವರನ್ನು ಮನಸಿನಲ್ಲಿಟ್ಟುಕೊಂಡು ದೊಡ್ಡ ಸ್ಕೇಲ್​​ನ ‘ಕೆಜಿಎಫ್’ ಮಾದರಿ ಗ್ಯಾಂಗ್​​ಸ್ಟರ್ ಕತೆಯೊಂದನ್ನು ಅವರು ಮಾಡಿದ್ದರಂತೆ. ಆದರೆ ಬಜೆಟ್ ಸಮಸ್ಯೆಯಿಂದಾಗಿ ಆ ಕತೆ ಸಿನಿಮಾ ಆಗಲಿಲ್ಲ ಎಂದಿದ್ದಾರೆ ವಿಘ್ನೇಶ್ ಶಿವನ್. ಅಸಲಿಗೆ ಅಜಿತ್ ಅವರ 62ನೇ ಸಿನಿಮಾವನ್ನು ವಿಘ್ನೇಶ್ ಶಿವನ್ ಅವರು ನಿರ್ದೇಶಿಸಬೇಕಿತ್ತು. ಆ ಬಗ್ಗೆ ಘೋಷಣೆಯೂ ಆಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಿನಿಮಾ ಸೆಟ್ಟೇರಲಿಲ್ಲ. ಇದೀಗ ವಿಘ್ನೇಶ್ ಅವರ ‘ಎಲ್​ಐಕೆ’ ಹೆಸರಿನ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಕಾರ್ಯಕ್ರಮದಲ್ಲಿ ಅವರು ಅಜಿತ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಚಿತ್ರದ ದೊಡ್ಡ ಸ್ಪಾಯ್ಲರ್ ರಿವೀಲ್ ಮಾಡಿ ತಪ್ಪು ಮಾಡಿದ್ರಾ ಯಶ್?

‘ಮದುವೆಯ ದಿನ ತಾಳಿ ಕಟ್ಟುವ ಕೊನೆಯ ಕ್ಷಣದಲ್ಲಿ ವರ ಮಂಟಪದಿಂದ ಎದ್ದು ಹೋದರೆ ವಧುವಿನ ಸ್ಥಿತಿ ಹೇಗಿರುತ್ತದೆಯೋ, ಅಜಿತ್ ಸರ್ ಸಿನಿಮಾ ನಿಂತುಹೋದಾಗ ನನಗೂ ಹಾಗೆಯೇ ಅನ್ನಿಸಿತು. ಅಂತಹ ದೊಡ್ಡ ಅವಕಾಶ ಕೈತಪ್ಪಿದಾಗ ಮತ್ತೊಂದು ಸಿನಿಮಾವನ್ನು ಆರಂಭಿಸುವುದು ಬಹಳ ಕಷ್ಟವಾಗಿತ್ತು’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ನಾನು ಅಜಿತ್ ಅವರಿಗಾಗಿ ಕತೆಯೊಂದನ್ನು ಬರೆದಿದ್ದೆ, ಸುಮಾರು ಎರಡು-ಮೂರು ವರ್ಷ ಅದಕ್ಕಾಗಿ ವ್ಯಯಿಸಿದ್ದೆ. ಆದರೆ ನಿರ್ಮಾಣ ತಂಡವು ಚಿತ್ರದ ದ್ವಿತೀಯಾರ್ಧವನ್ನು ಬದಲಾಯಿಸುವಂತೆ ಸಲಹೆ ನೀಡಿತು. ನಿರ್ದೇಶಕ ಪ್ರಶಾಂತ್ ನೀಲ್ ಅವರ ‘ಕೆಜಿಎಫ್’ ಚಿತ್ರದ ಕನಸಿಗೆ ಹೊಂಬಾಳೆ ಫಿಲ್ಮ್ಸ್ ಬೆನ್ನೆಲುಬಾಗಿ ನಿಂತಿತ್ತು. ನಾನು ಕೆಜಿಎಫ್, ಆರ್ ಆರ್ ಆರ್ ನಂತಹ ಚಿತ್ರಗಳನ್ನು ನೋಡಿ, ಅಜಿತ್ ಸರ್ ಅವರ ಅಭಿಮಾನಿಯಾಗಿ ಅವರ ಜೊತೆ ಅಷ್ಟೇ ಬೃಹತ್ ಮಟ್ಟದ ಸಿನಿಮಾ ಮಾಡಬೇಕೆಂದು ಬಯಸಿದ್ದೆ. ಆದರೆ, ನಾನು ಆ ಚಿತ್ರಕ್ಕಾಗಿ ಅಂದುಕೊಂಡಿದ್ದ ಬಜೆಟ್‌ಗೆ ನಿರ್ಮಾಣ ಸಂಸ್ಥೆಯು ಬೆಂಬಲ ನೀಡಲಿಲ್ಲ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

NEET UG ಆಕಾಂಕ್ಷಿಗಳಿಗೆ ಗೂಗಲ್​ನಿಂದ ಭರ್ಜರಿ ಗಿಫ್ಟ್; ಜೆಮಿನಿ ಆ್ಯಪ್‌ನಲ್ಲಿ ಸಿಗಲಿದೆ ಉಚಿತ ಅಣಕು ಪರೀಕ್ಷೆ! – Kannada News | Google Gemini Offers Free NEET UG Mock Tests: Boost Your Exam Prep with AI

ಗೂಗಲ್ ಇಂಡಿಯಾ ತನ್ನ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವಾದ ‘ಜೆಮಿನಿ’ (Gemini) ಮೂಲಕ ಉಚಿತ NEET UG ಅಭ್ಯಾಸ ಪರೀಕ್ಷೆಗಳನ್ನು ಪರಿಚಯಿಸಿದೆ. ಸಾಮಾನ್ಯವಾಗಿ ನೀಟ್ ಪರೀಕ್ಷೆಯ ಕೋಚಿಂಗ್ ಪಡೆಯಲು ಲಕ್ಷಾಂತರ ರೂಪಾಯಿ ಶುಲ್ಕ ತೆರಬೇಕಾಗುತ್ತದೆ. ಇದನ್ನು ಮನಗಂಡ ಗೂಗಲ್ ಇಂಡಿಯಾ, ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಅಳವಡಿಸುವ ತನ್ನ ಗುರಿಯ ಭಾಗವಾಗಿ ಈ ಯೋಜನೆಯನ್ನು ಘೋಷಿಸಿದೆ. ಗೂಗಲ್ ತನ್ನ ಅಧಿಕೃತ ‘X’ (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅಭ್ಯರ್ಥಿಗಳು ತಮ್ಮ ತಯಾರಿಯನ್ನು ಈಗ ಸಂಪೂರ್ಣ ಉಚಿತವಾಗಿ ಜೆಮಿನಿ ಅಪ್ಲಿಕೇಶನ್‌ನಲ್ಲಿ ಮಾಡಬಹುದಾಗಿದೆ.

ಅಣಕು ಪರೀಕ್ಷೆ ತೆಗೆದುಕೊಳ್ಳುವುದು ಹೇಗೆ?

ಈ ಸೌಲಭ್ಯವನ್ನು ಪಡೆಯಲು ಅಭ್ಯರ್ಥಿಗಳು ಯಾವುದೇ ಕಷ್ಟಪಡಬೇಕಿಲ್ಲ. ಜೆಮಿನಿ ಅಪ್ಲಿಕೇಶನ್ ತೆರೆದು ಕೇವಲ ಒಂದು ವಾಕ್ಯ ಹೇಳಿದರೆ ಸಾಕು:

“ನಾನು ನೀಟ್ ಅಣಕು ಪರೀಕ್ಷೆಯನ್ನು ತೆಗೆದುಕೊಳ್ಳಲು ಬಯಸುತ್ತೇನೆ” (I want to take a NEET mock test)

ಹೀಗೆ ಹೇಳಿದ ತಕ್ಷಣ ಜೆಮಿನಿ ಎಐ ನಿಮ್ಮ ಪಠ್ಯಕ್ರಮಕ್ಕೆ ಅನುಗುಣವಾಗಿ ಪ್ರಶ್ನೆಗಳನ್ನು ಕೇಳಲು ಮತ್ತು ನಿಮ್ಮ ತಯಾರಿಯನ್ನು ಮೌಲ್ಯಮಾಪನ ಮಾಡಲು ಆರಂಭಿಸುತ್ತದೆ. ಇದು ಕೇವಲ ಪ್ರಶ್ನೆಗಳನ್ನಷ್ಟೇ ನೀಡುವುದಿಲ್ಲ, ಬದಲಿಗೆ ಸಂವಾದಾತ್ಮಕವಾಗಿ (Interactive) ಕಲಿಕೆಯ ಅನುಭವವನ್ನು ನೀಡುತ್ತದೆ.

ಈ ಯೋಜನೆಯ ವಿಶೇಷತೆಗಳೇನು?

  • ವಾಸ್ತವಿಕ ಪರೀಕ್ಷಾ ಅನುಭವ: ಈ ಅಭ್ಯಾಸ ಪರೀಕ್ಷೆಗಳು ನಿಜವಾದ NEET UG ಪರೀಕ್ಷೆಯ ಮಾದರಿಯಲ್ಲೇ ಇರಲಿವೆ. ಇದು ಅಭ್ಯರ್ಥಿಗಳಲ್ಲಿ ಪರೀಕ್ಷೆಯ ಬಗೆಗಿನ ಭಯವನ್ನು ಹೋಗಲಾಡಿಸಿ ಆತ್ಮವಿಶ್ವಾಸ ತುಂಬುತ್ತದೆ.
  • ಸರಳ ಇಂಟರ್ಫೇಸ್: ಬಳಕೆದಾರ ಸ್ನೇಹಿ ವಿನ್ಯಾಸದಿಂದಾಗಿ ವಿದ್ಯಾರ್ಥಿಗಳು ಸುಲಭವಾಗಿ ಪ್ರಶ್ನೆಗಳಿಗೆ ಉತ್ತರಿಸಬಹುದು ಮತ್ತು ವಿವರಣೆಗಳನ್ನು ಪಡೆಯಬಹುದು.
  • ಎಲ್ಲರಿಗೂ ಲಭ್ಯ: ಯಾವುದೇ ಶುಲ್ಕವಿಲ್ಲದೆ, ದೇಶದ ಮೂಲೆಮೂಲೆಯ ವಿದ್ಯಾರ್ಥಿಗಳು ಇಂಟರ್ನೆಟ್ ಮೂಲಕ ಉನ್ನತ ಮಟ್ಟದ ತಯಾರಿ ನಡೆಸಲು ಇದು ಸಹಕಾರಿ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಸವಾಲುಗಳಿಗೆ ಪರಿಹಾರ:

ಪ್ರತಿ ವರ್ಷ ಸುಮಾರು 1.25 ಲಕ್ಷ MBBS ಸೀಟುಗಳಿಗಾಗಿ ನಡೆಯುವ ಈ ಭೀಕರ ಸ್ಪರ್ಧೆಯಲ್ಲಿ, ಸರಿಯಾದ ಮಾರ್ಗದರ್ಶನವಿಲ್ಲದೆ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಹಿಂದೆ ಬೀಳುತ್ತಿದ್ದರು. ಗೂಗಲ್‌ನ ಈ ಉಪಕ್ರಮವು ಶಿಕ್ಷಣವನ್ನು ಪ್ರಜಾಪ್ರಭುತ್ವೀಕರಣಗೊಳಿಸುವತ್ತ (Democratization of Education) ದೊಡ್ಡ ಹೆಜ್ಜೆಯಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ.

ನೀಟ್ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಇಂದೇ ಜೆಮಿನಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ವೈದ್ಯಕೀಯ ಕನಸಿನ ಹಾದಿಯನ್ನು ಸುಗಮಗೊಳಿಸಿಕೊಳ್ಳಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:50 pm, Fri, 17 April 26

Source link

ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಐತಿಹಾಸಿಕ ತೀರ್ಪು ಎಂದ ಲಾಯರ್ – Kannada News | Life imprisonment for 16 people including Vinay Kulkarni: A historic verdict, says lawyer

ಬೆಂಗಳೂರು, ಏಪ್ರಿಲ್​ 17: ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾಗಿದೆ. ಆ ಬಳಿಕ 10 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಇನ್ನು ಈ ಬಗ್ಗೆ ಮಾಧ್ಯಮದವರೊಂದಿಗೆ ವಕೀಲ​ ಶಿವಾನಂದ ಪೆರ್ಲಾ ಮಾತನಾಡಿದ್ದು, ಇದೊಂದು ಐತಿಹಾಸಿಕ ತೀರ್ಪು ಎಂದಿದ್ದಾರೆ.  15 ಜೂನ್ 2016 ರಂದು ಧಾರವಾಡದ ಉದಯ ಜಿಮ್‌ನಲ್ಲಿ ಯೋಗೇಶ್ ಗೌಡ ಅವರ ಭೀಕರ ಕೊಲೆಯಾಗಿತ್ತು. ಪ್ರಕರಣದ ಪ್ರಾರಂಭದಲ್ಲಿ ಧಾರವಾಡ ಪೊಲೀಸರು ಬಸವರಾಜ್ ಮುತ್ತಕಿ ಮತ್ತು ಐದು ಇತರರ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ನಂತರ, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಒಟ್ಟು 21 ಜನರ ಮೇಲೆ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿತು ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

High Court Jobs: ಕರ್ನಾಟಕ ಹೈಕೋರ್ಟ್ ನೇಮಕಾತಿ; 90 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | Karnataka High Court Civil Judge Recruitment 2026: 90 Vacancies for LLB Graduates – Apply Now!

ನ್ಯಾಯಾಂಗ ಸೇವೆಯಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಕಾನೂನು ಪದವೀಧರರಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ಕರ್ನಾಟಕ ಹೈಕೋರ್ಟ್ ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ಸಿವಿಲ್ ನ್ಯಾಯಾಧೀಶರ (Civil Judges) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಪ್ರತಿಷ್ಠಿತ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಬಹುದು.

ಹುದ್ದೆಗಳ ವಿವರ ಮತ್ತು ಸಂಬಳದ ಶ್ರೇಣಿ:

ಒಟ್ಟು 90 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಈ ಹುದ್ದೆಗಳಿಗೆ ವೇತನ ಶ್ರೇಣಿಯು ತಿಂಗಳಿಗೆ ರೂ. 77,840 ರಿಂದ 1,36,520/- ವರೆಗೆ ಇರಲಿದ್ದು, ಸರ್ಕಾರದ ನಿಯಮಾನುಸಾರ ಇತರೆ ಭತ್ಯೆಗಳೂ ಲಭ್ಯವಿರುತ್ತವೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ (LLB) ಪದವಿ ಪೂರ್ಣಗೊಳಿಸಿರಬೇಕು. ವಯೋಮಿತಿಗೆ ಸಂಬಂಧಿಸಿದಂತೆ ಗರಿಷ್ಠ ವಯಸ್ಸು 45 ವರ್ಷಗಳು. ಮೀಸಲಾತಿ ಅಡಿಯಲ್ಲಿ ಬರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ:

  • SC/ST/ಪ್ರವರ್ಗ-I: 05 ವರ್ಷಗಳು ಸಡಿಲಿಕೆ.
  • ಕ್ಯಾಟ್-2A/2B/3A/3B: 03 ವರ್ಷಗಳು ಸಡಿಲಿಕೆ.

ಅರ್ಜಿ ಶುಲ್ಕದ ವಿವರ

ಅಭ್ಯರ್ಥಿಗಳು ಎರಡು ಹಂತದ ಪರೀಕ್ಷಾ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ:

  • ಪೂರ್ವಭಾವಿ ಪರೀಕ್ಷಾ ಶುಲ್ಕ: ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳಿಗೆ ರೂ. 500/-
  • SC/ST/ಪ್ರವರ್ಗ-I ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ. 250/-

ಮುಖ್ಯ ಪರೀಕ್ಷಾ ಶುಲ್ಕ:

(ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು)

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಆಯ್ಕೆ ಪ್ರಕ್ರಿಯೆ ಹೇಗೆ?

ಅಭ್ಯರ್ಥಿಗಳ ಅರ್ಹತೆಯನ್ನು ಪರೀಕ್ಷಿಸಲು ಹಂತ-ಹಂತದ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ:

  • ಪೂರ್ವಭಾವಿ ಪರೀಕ್ಷೆ (Preliminary Exam)
  • ಮುಖ್ಯ ಲಿಖಿತ ಪರೀಕ್ಷೆ (Main Written Exam)
  • ಸ್ಟೆನೋಗ್ರಫಿ ಪರೀಕ್ಷೆ (ಅಗತ್ಯವಿದ್ದರೆ)
  • ವೈಯಕ್ತಿಕ ಸಂದರ್ಶನ (Interview)

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತರು ಈ ಕೆಳಗಿನ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು:

  • ಮೊದಲು ಕರ್ನಾಟಕ ಹೈಕೋರ್ಟ್‌ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
  • ಅಗತ್ಯ ದಾಖಲೆಗಳಾದ ಐಡಿ ಪ್ರೂಫ್, ಶೈಕ್ಷಣಿಕ ಪ್ರಮಾಣಪತ್ರಗಳು, ರೆಸ್ಯೂಮ್ ಮತ್ತು ಫೋಟೋಗಳನ್ನು ಸಿದ್ಧವಾಗಿಡಿ.
  • ಅಧಿಕೃತ ವೆಬ್‌ಸೈಟ್ ಲಿಂಕ್ ಮೂಲಕ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.
  • ಕೊನೆಯದಾಗಿ ಅರ್ಜಿ ಸಲ್ಲಿಸಿ (Submit), ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು ಪ್ರಿಂಟ್ ತೆಗೆದುಕೊಳ್ಳಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link