Category Archives: Blog

Your blog category

ಶಾಲಾ ಪಠ್ಯಪುಸ್ತಕದಲ್ಲಿ ಇರಲಿದೆ ಪುನೀತ್ ರಾಜ್​ಕುಮಾರ್ ಜೀವನದ ಪಾಠ – Kannada News | Karnataka school textbooks to have lesson on actor Puneeth Rajkumar

ನಟ ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಅವರು ಮಾಡಿದ ಸಾಧನೆ ಎಲ್ಲರಿಗೂ ಸ್ಫೂರ್ತಿ ಆಗಿದೆ. ಬಾಲನಟನಾಗಿ ಚಿತ್ರರಂಗದಲ್ಲಿ ಮಿಂಚಿ, ಹೀರೋ ಆಗಿಯೂ ಜನಮನ ಗೆದ್ದ ಪುನೀತ್ ಅವರು ಸಾಮಾಜಿಕ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿದ್ದರು. ಅವರ ಸಾಧನೆಯ ಕಥೆ ಅನೇಕರಿಗೆ ಸ್ಫೂರ್ತಿ ಆಗುತ್ತದೆ. ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪಡೆದ ಪುನೀತ್ ರಾಜ್​​ಕುಮಾರ್ ಅವರ ಜೀವನದ ಕಥೆ ಈಗ ಶಾಲಾ ಪಠ್ಯಪುಸ್ತಕದಲ್ಲಿ (Karnataka School Textbooks) ಸೇರ್ಪಡೆ ಆಗಲಿದೆ. ಆ ಬಗ್ಗೆ ತಯಾರಿ ನಡೆದಿದೆ. ಇದು ಪುನೀತ್ ರಾಜ್​ಕುಮಾರ್ ಅವರ ಅಭಿಮಾನಿಗಳಿಗೆ ಸಖತ್ ಸಂತಸ ತಂದಿದೆ.

ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ಈ ವಿಷಯವನ್ನು ಪರಿಗಣಿಸಲು ‘ಪಠ್ಯ ಪುಸ್ತಕ ಸಂಘ’ ತೀರ್ಮಾನಿಸಿದೆ. ಅಂದರೆ, ಮುಂದಿನ ದಿನಗಳಲ್ಲಿ ಕರ್ನಾಟಕದ ಶಾಲೆಗಳ ಪಠ್ಯಪುಸ್ತಕದಲ್ಲಿ ಪುನೀತ್ ರಾಜ್​ಕುಮಾರ್ ಅವರ ಸಾಧನೆಗಳನ್ನು ಸೇರಿಸಲಾಗುವುದು. ಆ ಮೂಲಕ ಮುಂದಿನ ಪೀಳಿಗೆಗೆ ಪುನೀತ್ ರಾಜ್​ಕುಮಾರ್ ಬಗ್ಗೆ ತಿಳಿಸಿಕೊಡಲಾಗುವುದು.

ಪುನೀತ್ ರಾಜ್​ಕುಮಾರ್ ಅವರು ಜನಿಸಿದ್ದು 1975ರ ಮಾರ್ಚ್ 17ರಂದು. ಬಾಲನಟನಾಗಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಹಲವು ಸಿನಿಮಾಗಳಿಗೆ ನಟಿಸಿ ಭೇಷ್ ಎನಿಸಿಕೊಂಡರು. ‘ಹೆಟ್ಟದ ಹೂವು’ ಸಿನಿಮಾಗಾಗಿ ‘ಅತ್ಯುತ್ತಮ ಬಾಲ ನಟ’ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡರು. ‘ಅಪ್ಪು’ ಸಿನಿಮಾದ ಮೂಲಕ 2002ರಲ್ಲಿ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದರು.

30ಕ್ಕೂ ಅಧಿಕ ಸಿನಿಮಾಗಳಲ್ಲಿ ಪುನೀತ್ ರಾಜ್​ಕುಮಾರ್ ಅವರು ಹೀರೋ ಆಗಿ ಅಭಿನಯಿಸಿದರು. ಹಲವು ಬಗೆಯ ಪಾತ್ರಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸಿದರು. ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಕಳಕಳಿ ಮೂಲಕವೂ ಅವರು ಜನರಿಗೆ ಹತ್ತಿರ ಆಗಿದ್ದರು. ಈ ಎಲ್ಲ ಅಂಶಗಳನ್ನು ಪಠ್ಯಪುಸ್ತಕದ ಮೂಲಕ ಮುಂದಿನ ಪೀಳಿಗೆಗೆ ತಿಳಿಸಲಾಗುವುದು.

ಇದನ್ನೂ ಓದಿ: ಪುನೀತ್ ರಾಜ್​​ಕುಮಾರ್ ಸಮಾಧಿಗೆ ನಮಿಸಲು ಬಂದ ಜನಸಾಗರ; ಕಿಂಚಿತ್ತೂ ಕಡಿಮೆ ಆಗಿಲ್ಲ ಅಭಿಮಾನ

ಈ ಬಗ್ಗೆ ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ‘ಟೈಮ್ಸ್ ಆಫ್ ಇಂಡಿಯಾ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನನಗೆ ಬಹಳ ಖುಷಿಯಾಗಿದೆ. ಈ ಗೌರವಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ತಂದೆಗೆ ಸಿಕ್ಕ ದೊಡ್ಡ ಗೌರವ ಇದು ಎಂದು ನಮ್ಮ ಮಕ್ಕಳಿಗೆ ತಿಳಿದಿದೆ. ಚಿತ್ರರಂಗದಲ್ಲಿ ಹಲವರು ಇದ್ದಾರೆ. ಆದರೆ ಈ ರೀತಿಯ ಗೌರವ ಎಲ್ಲರಿಗೂ ಸಿಗುವುದಿಲ್ಲ’ ಎಂದು ಅಶ್ವಿನಿ ಪುನೀತ್ ರಾಜ್​​ಕುಮಾರ್ ಹೇಳಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 4:13 pm, Fri, 9 January 26

Source link

ರೆಡ್ಡಿಗಳ ದಂಗಲ್​​ಗೆ ಖಾಕಿ ತಲೆದಂಡ: ಸಚಿವ ಜಮೀರ್​​ ಎದುರು ದಕ್ಷ ಅಧಿಕಾರಿ ಕಣ್ಣೀರು! – Kannada News | Ballari Clash: Senior Officer Vertika Katiyar Breaks Down in Front of Minister Zameer Over Her Transfer

ಸಚಿವರ ಬಳಿ ಅಧಿಕಾರಿ ಕಣ್ಣೀರು.

ಬೆಂಗಳೂರು, ಜನವರಿ 09: ಬ್ಯಾನರ್​​ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್​​ ಕಾರ್ಯಕರ್ತ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಹಿರಿಯ ಅಧಿಕಾರಿಗಳ ತಲೆದಂಡ ಮಾಡಿತ್ತು. ಆರಂಭದಲ್ಲಿ ಎಸ್ಪಿ ಪವನ್ ನೆಜ್ಜೂರು ಅವರನ್ನು ಮಾತ್ರ ಅಮಾನತು ಮಾಡಲಾಗಿತ್ತಾದರೂ ಬಳಿಕ ಡಿಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು. ಸಿವಿಲ್ ರೈಟ್ಸ್ ಮತ್ತು ಎನ್ಫೋರ್ಸ್​ಮೆಂಟ್​ ವಿಭಾಗಕ್ಕೆ ಟ್ರಾನ್ಸ್​​ಫರ್​​ ಆಗಿರುವ ವರ್ತಿಕಾ, ಸರ್ಕಾರದ ನಿಲುವಿಗೆ ತೀವ್ರ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ಸಚಿವರ ಮುಂದೆ ಕಣ್ಣೀರು

ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್‌ ಮುಂದೆ ದಕ್ಷ ಅಧಿಕಾರಿ ವರ್ತಿಕಾ ಕಟಿಯಾರ್​​ ಕಣ್ಣೀರು ಹಾಕಿದ್ದು, ತಡರಾತ್ರಿಯೂ ಸ್ಥಳದಲ್ಲಿದ್ದು ನ್ಯಾಯುತವಾಗಿ ಕೆಲಸ ಮಾಡಿದ್ದೇನೆ. ಇಷ್ಟಾದರೂ ತನ್ನ ವರ್ಗಾವಣೆ ಮಾಡಿ ಅನ್ಯಾಯ ಮಾಡಿದ್ದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. ತೀವ್ರ ಬೇಸರಗೊಂಡಿದ್ದ ವರ್ತಿಕಾರಿಗೆ ಈ ವೇಳೆ ಸಚಿವ ಜಮೀರ್ ಅಹಮ್ಮದ್‌ ಖಾನ್ ಧೈರ್ಯತುಂಬಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಳ್ಳಾರಿ ಬ್ಯಾನರ್ ಗಲಾಟೆ; ಭರತ್ ರೆಡ್ಡಿ ಬೆಂಬಲಿಗರಿಂದ ಜನಾರ್ದನ ರೆಡ್ಡಿ ವಿರುದ್ಧ ಸ್ಫೋಟಕ ಸಾಕ್ಷ್ಯ ಬಿಡುಗಡೆ

ಇನ್ನು ಸರ್ಕಾರ ತಮ್ಮನ್ನು ಅಮಾನತು ಮಾಡಿರುವ ವಿಚಾರವಾಗಿ ಪವನ್ ನೆಜ್ಜೂರು ಕೂಡ ಮಾನಸಿಕವಾಗಿ ಬಹಳ ನೊಂದಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ತುಮಕೂರಿನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಆಘಾತಕಾರಿ ಸುದ್ದಿಗಳು ಹರಿದಾಡಿದ್ದವು. ಸ್ನೇಹಿತನ ಫಾರ್ಮ್‌ಹೌಸ್‌ನಲ್ಲಿ ಮಾತ್ರೆ ಸೇವಿಸಿದ್ದ ನಜ್ಜೂರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ ಎನ್ನಲಾಗಿತ್ತು. ಬಳಿಕ ಈ ಬಗ್ಗೆ ಖುದ್ಧು ಸ್ಪಷ್ಟನೆ ನೀಡಿದ್ದ ಪವನ್ ನೆಜ್ಜೂರ್ ಅವರ ತಂದೆ, ಯಾವುದೇ ಕಾರಣಕ್ಕೂ ನನ್ನ ಪುತ್ರ ಆತ್ಮಹತ್ಯೆಯ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದರು.

ಬ್ಯಾನರ್​​ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಅವರನ್ನ ಅಮಾನತು ಮಾಡಿತ್ತು. ದುರ್ದೈವ ಅಂದರೆ ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಪವನ್ ನೆಜ್ಜೂರು ಸಸ್ಪೆಂಡ್ ಆಗಿದ್ದರು. ರೆಡ್ಡಿಗಳ ದಂಗಲ್‌ನಲ್ಲಿ ಪೊಲೀಸ್ ಅಧಿಕಾರಿಗಳ ತಲೆದಂಡದ ಬಗ್ಗೆ ಕಿಡಿ ಕಾರಿದ್ದ ವಿಪಕ್ಷಗಳು, ಸರ್ಕಾರದ ಮಾನ ಉಳಿಸಿಕೊಳ್ಳುವುದಕ್ಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದ್ದವು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು: ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ; RDX ಮೂಲಕ ಸ್ಫೋಟಿಸುವುದಾಗಿ ಇಮೇಲ್ – Kannada News | Bengaluru: Hebbal Kendriya Vidyalaya Bomb Threat Email; Hoax Confirmed by police

ಬೆಂಗಳೂರು, ಜನವರಿ 09: ಇತ್ತೀಚೆಗಷ್ಟೇ ಕೋಲಾರ ಸೇರಿದಂತೆ ಮೈಸೂರು, ಬಾಗಲಕೋಟೆ, ಧಾರವಾಡ ಮತ್ತು ಗದಗ ಕೋರ್ಟ್​ಗಳನ್ನ ಸ್ಫೋಟಿಸೋದಾಗಿ ಹುಸಿ ಬಾಂಬ್ ಬೆದರಿಕೆ (Email Bomb Threats) ಬಂದಿತ್ತು. ಅಷ್ಟೇ ಅಲ್ಲದೆ ಲಾಲ್‌ಬಾಗ್ ರಸ್ತೆಯಲ್ಲಿರುವ ಪಾಸ್‌ಪೋರ್ಟ್ ಕಚೇರಿ ಸ್ಫೋಟಿಸೋದಾಗಿ ಕೂಡ ಬೆದರಿಕೆ ಹಾಕಲಾಗಿತ್ತು. ಇದೀಗ ಹೆಬ್ಬಾಳದ ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ ಬಂದಿದೆ. 3 ಆರ್​​ಡಿಎಕ್ಸ್​ (RDX) ಇಟ್ಟಿದ್ದಾಗಿ ವಿದ್ಯಾಲಯದ ಇ-ಮೇಲ್​ ಐಡಿಗೆ ಕಿಡಿಗೇಡಿಗಳು ಸಂದೇಶ ರವಾನಿಸಿದ್ದಾರೆ.

ಪ್ರಾಂಶುಪಾಲರಿಂದ ಸದಾಶಿವನಗರ ಠಾಣೆಗೆ ದೂರು 

ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್​​ ಬರುತ್ತಿದ್ದಂತೆ ಕಾಲೇಜಿನ ಪ್ರಾಂಶುಪಾಲ ಪಿ.ಎಂ.ಪ್ರಕಾಶ್ ಅವರು ಬೆಂಗಳೂರಿನ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಈ  ವೇಳೆ ಯಾವುದೇ ಆರ್​ಡಿಎಕ್ಸ್ ಬಾಂಬ್​ ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್​ ಬೆದರಿಕೆ ಅನ್ನೋದು ಮೇಲ್ನೋಟಕ್ಕೆ ಪತ್ತೆ ಆಗಿದೆ. ಸದ್ಯ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ 5 ಕೋರ್ಟ್‌ ಸ್ಫೋಟಿಸೋದಾಗಿ ಬೆದರಿಕೆ ಇಮೇಲ್‌

ಇತ್ತೀಚೆಗೆ ರಾಜ್ಯದ 5 ಕೋರ್ಟ್‌ಗಳಿಗೆ ಬಾಂಬ್‌ ಸ್ಫೋಟದ ಬೆದರಿಕೆ ಸಂದೇಶ ಬಂದಿತ್ತು. ಮೈಸೂರಿನ ಹಳೇ ಕೋರ್ಟ್‌ನ ಮಧ್ಯಾಹ್ನ 1.55ಕ್ಕೆ ಸ್ಫೋಟಿಸೋದಾಗಿ ಇ-ಮೇಲ್ ಬಂದಿತ್ತು. ತಕ್ಷಣವೇ ಎಚ್ಚೆತ್ತ ನ್ಯಾಯಾಧೀಶರು, ವಕೀಲರು ಕೋರ್ಟ್ ಆವರಣದಿಂದ ಹೊರ ಬಂದಿದ್ದರು.

ಇದನ್ನೂ ಓದಿ: ಮೈಸೂರು, ಬಾಗಲಕೋಟೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ, ಪಾಸ್‌ಪೋರ್ಟ್ ಕಚೇರಿಗೂ ಬಂತು ಇ-ಮೇಲ್

ಇಷ್ಟೇ ಅಲ್ಲ ಧಾರವಾಡ ಹೈಕೋರ್ಟ್‌, ಬಾಗಲಕೋಟ, ಗದಗ ಹಾಗೂ ಹಾಸನ ಜಿಲ್ಲಾ ನ್ಯಾಯಾಲಯ ಕೂಡ ಸ್ಫೋಟಿಸುವ ಬಗ್ಗೆ ಬೆದರಿಕೆ ಇಮೇಲ್‌ ಬಂದಿದ್ದವು. ಪೊಲೀಸರು ತಪಾಸಣೆ ಮಾಡಿದರೂ ಒಂದೇ ಒಂದು ಸ್ಫೋಟದ ವಸ್ತುಗಳು ಸಿಕ್ಕಿಲ್ಲ.

ಇದನ್ನೂ ಓದಿ: ಗದಗ, ಮಂಗಳೂರು ಆಯ್ತು ಈಗ ಭಟ್ಕಳದ ತಹಶೀಲ್ದಾರ್ ಕಚೇರಿಗೂ ಬಾಂಬ್ ಬೆದರಿಕೆ!

ಇನ್ನು ಬೆಂಗಳೂರಿನ ಕೋರಮಂಗಲದ ಪಾಸ್‌ಪೋರ್ಟ್ ಕಚೇರಿ ಸ್ಫೋಟಿಸೋದಾಗಿ ಕೂಡ ಇತ್ತೀಚೆಗೆ  ಇಮೇಲ್‌ನಲ್ಲಿ ಬೆದರಿಕೆ ಸಂದೇಶ ಬಂದಿತ್ತು. ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ತಂಡಗಳ ಜತೆ ಕಚೇರಿಯಲ್ಲಾ ಪರಿಶೀಲಿಸಲಾಗಿತ್ತು. ಆದರೆ ಯಾವುದೇ ಶಂಕಾಸ್ಪದ ಹಾಗೂ ಸ್ಪೋಟಕ ವಸ್ತುಗಳು ಪತ್ತೆಯಾಗಿರಲಿಲ್ಲ. ಹಾಗಾಗಿ, ಇವು ಹುಸಿ ಬೆದರಿಕೆ ಇಮೇಲ್ ಅಂತಾ ಪೊಲೀಸರು ತೀರ್ಮಾನಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಲ್​ನಲ್ಲಿ ನಕಲಿ ಜಿಎಸ್​ಟಿ ನಂಬರ್ ಕೊಟ್ಟು ಸರ್ಕಾರಕ್ಕೂ, ಗ್ರಾಹಕರಿಗೂ ಯಾಮಾರಿಸುತ್ತಾರೆ; ಅಸಲಿ ಪತ್ತೆ ಹಚ್ಚೋದು ಹೇಗೆ? – Kannada News | Businesses can show fake GSTIN, know how to check authenticity of GST number

ನೀವು ಹೋಟೆಲ್​ಗೆ ಹೋದಾಗ ಅಥವಾ ಏನಾದರೂ ಸರಕು ಖರೀದಿಸಿದಾಗ ಜಿಎಸ್​ಟಿ (GST) ಸೇರಿಸಿ ಬಿಲ್ ಹಾಕುತ್ತಾರೆ. ಬಿಲ್​ನಲ್ಲಿ ಜಿಎಸ್​ಟಿ ಶೇ. 5 ಅಥವಾ ಶೇ. 18 ಸೇರಿಸಲಾಗಿರುತ್ತದೆ. ಜೊತೆಗೆ ಜಿಎಸ್​ಟಿ ನಂಬರ್ ಕೂಡ ನಮೂದಾಗಿರುತ್ತದೆ. ಇದನ್ನು ಕಂಡಾಗ ಅಧಿಕೃತವಾಗಿ ನಡೆಯುವ ಬ್ಯುಸಿನೆಸ್ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದರೆ, ಕೆಲವರು ಬಿಲ್​ನಲ್ಲಿ ಜಿಎಸ್​ಟಿ ಸೇರಿಸಿರುತ್ತಾರೆ, ಆದರೆ, ಜಿಎಸ್​ಟಿ ನಂಬರ್ ಏನು ಅಂತ ಹಾಕಿರೋದಿಲ್ಲ. ಜಿಎಸ್​ಟಿ ನಂಬರ್ ಹಾಕಿದರೂ ಅದು ಅಸಲಿಯೋ ಅಥವಾ ನಕಲಿಯೋ ಎಂದು ಯಾರಿಗೆ ಗೊತ್ತು?

ಕೆಲ ವಂಚಕರು ನಕಲಿ ಜಿಎಸ್​ಟಿ ನಂಬರ್ ಮತ್ತು ನಕಲಿ ಬಿಲ್ ಕೊಟ್ಟು ಗ್ರಾಹಕರ ಹಾಗೂ ಸರ್ಕಾರ ಇಬ್ಬರಿಗೂ ಪಂಗನಾಮ ಹಾಕುವುದುಂಟು. ಗ್ರಾಹಕರ ಜಾಗದಲ್ಲಿ ಉದ್ಯಮಿಯೇ ಆಗಿದ್ದರೆ ನಕಲಿ ಜಿಎಸ್​ಟಿ ಕಾರಣದಿಂದ ಅವರಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕೂಡ ಸಿಕ್ಕೋದಿಲ್ಲ. ಅಷ್ಟಕ್ಕೂ, ನಕಲಿ ಜಿಎಸ್​ಟಿ ನಂಬರ್ ಅನ್ನು ಪತ್ತೆ ಮಾಡುವುದು ಹೇಗೆ? ಈ ಕ್ರಮ ಬಹಳ ಸುಲಭ.

ಇದನ್ನೂ ಓದಿ: ಆನ್​ಲೈನ್ ಫ್ರಾಡ್ ಆದರೆ, ಹೂಡಿಕೆ ಸ್ಕೀಮ್ ಬಗ್ಗೆ ಅನುಮಾನ ಬಂದರೆ ಆರ್​ಬಿಐನ ಸಚೇತ್ ಪೋರ್ಟಲ್ ಮೊರೆಹೋಗಿ

ಪ್ಯಾನ್ ರೀತಿ ಜಿಎಸ್​ಟಿನ್​ಗೂ ಅರ್ಥಗರ್ಭಿತ ಅಂಕಿ ಅಕ್ಷರ ಸಂಯೋಜನೆ…

ಬ್ಯುಸಿನೆಸ್ ನಡೆಸುವ ಪ್ರತಿಯೊಬ್ಬ ವ್ಯಕ್ತಿ ಮತ್ತು ಸಂಸ್ಥೆಯೂ ಜಿಎಸ್​ಟಿಗೆ ನೊಂದಾಯಿಸಿರಬೇಕು. ಹೀಗೆ ರಿಜಿಸ್ಟರ್ ಮಾಡಿಕೊಂಡಿದ್ದರೆ ವಿಶೇಷವಾದ 15 ಅಂಕಿಗಳಿರುವ ಜಿಎಸ್​ಟಿ ನಂಬರ್ ನೀಡಲಾಗುತ್ತದೆ. ತೆರಿಗೆ ಪಾವತಿದಾರರಿಗೆ ಪ್ಯಾನ್ ನಂಬರ್ ಇದ್ದಂತೆ ಬ್ಯುಸಿನೆಸ್​ಮ್ಯಾನ್​ಗಳಿಗೆ ಜಿಎಸ್​ಟಿ ನಂಬರ್ ಇರುತ್ತದೆ.

ಜಿಎಸ್​ಟಿ ನಂಬರ್ 15 ಅಂಕಿಯದ್ದಾಗಿರುತ್ತದೆ. ರಾಜ್ಯದ ಕೋಡ್, ಬ್ಯುಸಿನೆಸ್​ನ ಪ್ಯಾನ್ ನಂಬರ್ ಇತ್ಯಾದಿ ಇರುತ್ತವೆ. ಮೊದಲ ಎರಡು ಡಿಜಿಟ್​ಗಳು ಅಂಕಿಯದ್ದಾಗಿರುತ್ತವೆ. ಕರ್ನಾಟಕದ್ದು 29 ಇರುತ್ತದೆ. ಮಹಾರಾಷ್ಟ್ರದ್ದು 27 ಇರುತ್ತದೆ. ಹೀಗೆ ಬೇರೆ ಬೇರೆ ರಾಜ್ಯಗಳಿಗೆ ಬೇರೆ ಬೇರೆ ಕೋಡ್ ಇರುತ್ತದೆ. ನಂತರದ 10 ಡಿಜಿಟ್​ಗಳು, ಅಂದರೆ 3ರಿಂದ 12ರ ಅಂಕಿಗಳು ಪ್ಯಾನ್ ನಂಬರ್ ಆಗಿರುತ್ತದೆ. 13ನೇ ಅಂಕಿಯು ಆ ಪ್ಯಾನ್ ಅಡಿಯಲ್ಲಿ ಆ ರಾಜ್ಯದೊಳಗೆ ಎಷ್ಟು ನೊಂದಣಿ ಮಾಡಿಕೊಳ್ಳಲಾಗಿದೆ ಆ ಸಂಖ್ಯೆಯಾಗಿರುತ್ತದೆ. ಇನ್ನು, 14ನೇ ಅಂಕಿ ಡೀಫಾಲ್ಟ್ ಆಗಿ Z ಆಗಿರುತ್ತದೆ. ಕೊನೆಯ ಹಾಗು 15ನೇ ಅಂಕಿಯು ದೋಷ ಪತ್ತೆಗೆಂದು ಚೆಕ್ ಕೋಡ್ ಆಗಿ ಒಂದು ಅಂಕಿಯನ್ನೋ ಅಥವಾ ಅಕ್ಷರವನ್ನೋ ನೀಡಲಾಗಿರುತ್ತದೆ.

ನಕಲಿ ಜಿಎಸ್​ಟಿ ನಂಬರ್ ಪತ್ತೆ ಮಾಡುವ ಕ್ರಮ ಹೇಗೆ?

ಜಿಎಸ್​ಟಿ ನಂಬರ್ ನೊಂದಾಯಿತವಾಗಿದೆಯಾ, ಅಸಲಿಯಾ, ಅಲ್ಲವಾ ಎಂಬುದನ್ನು ಪತ್ತೆ ಮಾಡಬಹುದು. ಅದರ ಕ್ರಮ ಹೀಗೆ:

  • ಜಿಎಸ್​ಟಿ ಪೋರ್ಟಲ್​ಗೆ ಹೋಗಿ. ಅದರ ವಿಳಾಸ: www.gst.gov.in/
  • ಇಲ್ಲಿ ‘ಸರ್ವಿಸಸ್’ ಟ್ಯಾಬ್​ನಲ್ಲಿ ‘ಸರ್ಚ್ ಟ್ಯಾಕ್ಸ್​ಪೇಯರ್’ ಅನ್ನು ಕ್ಲಿಕ್ ಮಾಡಿ.
  • ನಂತರ, ‘ಸರ್ಚ್ ಬೈ ಜಿಎಸ್​ಟಿನ್/ಯುಐಎನ್’ ಆಯ್ಕೆ ಮಾಡಿ.
  • ಸರ್ಚ್ ಬಾರ್​ನಲ್ಲಿ 15 ಅಂಕಿಗಳ ಜಿಎಸ್​ಟಿ ನಂಬರ್ ನಮೂದಿಸಿರಿ. ಬಳಿಕ ಕ್ಯಾಪ್ಚಾ ಹಾಕಿ ಸಬ್ಮಿಟ್ ಬಟನ್ ಒತ್ತಿರಿ.

ಇದನ್ನೂ ಓದಿ: ಪಿಎಫ್ ಹಣಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತಾ? ವಿತ್​ಡ್ರಾ ಮಾಡಿದಾಗ ಟ್ಯಾಕ್ಸ್ ಎಷ್ಟು? ನೀವು ತಿಳಿದಿರಬೇಕಾದ ಸಂಗತಿಗಳಿವು…

ಈಗ ಜಿಎಸ್​ಟಿ ನಂಬರ್ ನೊಂದಾಯಿಸಿದ ಬ್ಯುಸಿನೆಸ್ ಸಂಸ್ಥೆಯ ಎಲ್ಲಾ ಜಾತಕ ಬಹಿರಂಗಗೊಳ್ಳುತ್ತದೆ. ಬ್ಯುಸಿನೆಸ್​ನ ನೊಂದಾಯಿತ ಹೆಸರು, ಯಾವ ಕ್ಷೇತ್ರಗಳಲ್ಲಿ ವ್ಯಾಪಾರ, ರಿಜಿಸ್ಟ್ರೇಶನ್ ಆಗಿದ್ದು ಯಾವಾಗ, ಎಲ್ಲಿ ಇವೇ ಮುಂತಾದ ವಿವರಗಳನ್ನು ಯಾರು ಬೇಕಾದರೂ ನೋಡಬಹುದು.

ಜಿಎಸ್​ಟಿ ನಂಬರ್ ನಕಲಿಯಾಗಿದ್ದರೆ ಏನು ಮಾಡಬೇಕು?

ಒಂದು ವೇಳೆ ಜಿಎಸ್​ಟಿ ನಂಬರ್ ನಕಲಿಯಾಗಿದ್ದು ಗೊತ್ತಾದಾಗ ಅಲ್ಲಿ ವ್ಯಾಪಾರ ಮಾಡಬೇಡಿ. ಬಿಲ್​​ನಲ್ಲಿ ಸುಮ್ಮನೆ ಜಿಎಸ್​ಟಿ ತೋರಿಸಿ ಗ್ರಾಹಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರಬಹುದು. ಸರ್ಕಾರಕ್ಕೆ ಹೋಗಬೇಕಾದ ಹಣವನ್ನು ತಾವೇ ಇಟ್ಟುಕೊಳ್ಳುತ್ತಿರಬಹುದು. ಹೀಗೆ ನಕಲಿ ಜಿಎಸ್​ಟಿ ನಂಬರ್ ಹೊಂದಿರುವ ಕಂಪನಿ ವಿರುದ್ಧ ಹೆಲ್ಪ್​ಡೆಸ್ಕ್​ಗೆ ಇಮೇಲ್ ಕಳುಹಿಸಬಹುದು. ಅದರ ವಿಳಾಸ: helpdesk@gst.gov.in .

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

RRB Exam Dates 2026: 2026ರಲ್ಲಿ ನಡೆಯುವ ಪ್ರಮುಖ ರೈಲ್ವೆ ನೇಮಕಾತಿ ಪರೀಕ್ಷೆಯ ಸಂಪೂರ್ಣ ವಿವರ ಇಲ್ಲಿದೆ – Kannada News | RRB Exam Dates 2026: Railway Recruitment Board Releases Full Schedule and Admit Card Info

ಕೇಂದ್ರ ಸರ್ಕಾರದ ಅಧೀನದಲ್ಲಿರುವ ರೈಲ್ವೆ ಸಚಿವಾಲಯವಾದ ರೈಲ್ವೆ ನೇಮಕಾತಿ ಮಂಡಳಿ (RRB) ರಲ್ಲಿ ಹಲವಾರು ರೈಲ್ವೆ ಉದ್ಯೋಗ ಅಧಿಸೂಚನೆಗಳನ್ನು ಬಿಡುಗಡೆ ಮಾಡಿದೆ. ಈ ಉದ್ಯೋಗಗಳಿಗೆ ಆನ್‌ಲೈನ್ ಅರ್ಜಿಗಳು ಈಗಾಗಲೇ ಕೊನೆಗೊಂಡಿವೆ. ಈ ಆದೇಶದಲ್ಲಿ, ಹಲವಾರು RRB ಅಧಿಸೂಚನೆಗಳ ಪರೀಕ್ಷಾ ದಿನಾಂಕಗಳನ್ನು ಬಿಡುಗಡೆ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ನಡೆಯಲಿರುವ ಹಲವಾರು ಲಿಖಿತ ಪರೀಕ್ಷೆಗಳ ವೇಳಾಪಟ್ಟಿಯನ್ನು RRB ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಆರ್‌ಆರ್‌ಬಿ ರೈಲ್ವೆ ಪರೀಕ್ಷೆಗಳು ಯಾವಾಗ ಮತ್ತು ಯಾವ ದಿನಾಂಕಗಳಲ್ಲಿ ನಡೆಯುತ್ತವೆ?

  • 434 ಪ್ಯಾರಾಮೆಡಿಕಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆಗಳು ಮಾರ್ಚ್ 10 ರಿಂದ 12 ರವರೆಗೆ ಆನ್‌ಲೈನ್‌ನಲ್ಲಿ ನಡೆಯಲಿವೆ.
  • 6,238 ಹುದ್ದೆಗಳನ್ನು ಭರ್ತಿ ಮಾಡಲು ಬಿಡುಗಡೆ ಮಾಡಲಾದ ಟೆಕ್ನಿಷಿಯನ್ ಗ್ರೇಡ್ 1 ಸಿಗ್ನಲ್ ಮತ್ತು ಟೆಕ್ನಿಷಿಯನ್ ಗ್ರೇಡ್ 3 ಹುದ್ದೆಗಳಿಗೆ ಲಿಖಿತ ಪರೀಕ್ಷೆಗಳು ಮಾರ್ಚ್ 5 ರಿಂದ 9 ರವರೆಗೆ ನಡೆಯಲಿವೆ.
  • 9,970 ಹುದ್ದೆಗಳ ಭರ್ತಿಗೆ ಸಹಾಯಕ ಲೋಕೋ ಪೈಲಟ್ ಪರೀಕ್ಷೆಗಳು ಫೆಬ್ರವರಿ 16 ರಿಂದ 18 ರವರೆಗೆ ನಡೆಯಲಿವೆ.
  • 2,569 ಹುದ್ದೆಗಳಿಗೆ ಬಿಡುಗಡೆ ಮಾಡಲಾದ ಜೂನಿಯರ್ ಎಂಜಿನಿಯರ್, ಡಿಪೋರ್ಟ್ ಮೆಟೀರಿಯಲ್ ಸೂಪರಿಂಟೆಂಡೆಂಟ್, ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ (ಜೆಇ/ಡಿಎಂಎಸ್/ಸಿಎಂಎ) ಹುದ್ದೆಗಳಿಗೆ ಲಿಖಿತ ಪರೀಕ್ಷೆಗಳು ಫೆಬ್ರವರಿ 19, 20 ಮತ್ತು ಮಾರ್ಚ್ 3 ರಂದು ನಡೆಯಲಿವೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ವೇಳಾಪಟ್ಟಿಯ ಪ್ರಕಾರ ತಮ್ಮ ಸಿದ್ಧತೆಯನ್ನು ಮುಂದುವರಿಸಬೇಕಾಗುತ್ತದೆ. ಆದಾಗ್ಯೂ, ನಗರವು ಪರೀಕ್ಷೆಗಳ ವಿವರಗಳನ್ನು ನಗರಕ್ಕೆ ತಿಳಿಸಲು ಆಯಾ ಪರೀಕ್ಷೆಗಳಿಗೆ 10 ದಿನಗಳ ಮೊದಲು ನಗರ ಅಧಿಸೂಚನೆ ಸ್ಲಿಪ್‌ಗಳನ್ನು ಬಿಡುಗಡೆ ಮಾಡುತ್ತದೆ. ಅದರ ನಂತರ, ಪರೀಕ್ಷೆಗೆ ನಿಖರವಾಗಿ ನಾಲ್ಕು ದಿನಗಳ ಮೊದಲು ಪ್ರವೇಶ ಪತ್ರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಮಟ್ಟಿಗೆ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.

ಆರ್‌ಆರ್‌ಬಿ ರೈಲ್ವೆ ಪರೀಕ್ಷೆಗಳ ಸಂಪೂರ್ಣ ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WPL 2026: ಡಬ್ಲ್ಯುಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ; ಯಾರೆಲ್ಲ ಪ್ರದರ್ಶನ ನೀಡಲಿದ್ದಾರೆ? – Kannada News | Wpl 2026 opening ceremony mi vs rcb live stream

2026 ರ ಮಹಿಳಾ ಪ್ರೀಮಿಯರ್ ಲೀಗ್‌ನ ನಾಲ್ಕನೇ ಸೀಸನ್ ಇಂದು ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಗಲಿದೆ. ಲೀಗ್​ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಮೊದಲ ಪಂದ್ಯಕ್ಕೆ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣ ಆತಿಥ್ಯವಹಿಸುತ್ತಿದೆ. ಪಂದ್ಯ ರಾತ್ರಿ 7:30 ಕ್ಕೆ ಆರಂಭವಾಗಲಿದ್ದು, 7 ಗಂಟೆಗೆ ಟಾಸ್ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಪ್ರತಿ ಬಾರಿಯಂತೆ ಈ ಬಾರಿಯೂ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಾಲಿವುಡ್​ ಸ್ಟಾರ್ ಸೆಲೆಬ್ರಿಟಿಗಳು ನೃತ್ಯ ಹಾಗೂ ಹಾಡಿನ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಜನವರಿ 9, ಶುಕ್ರವಾರ ಸಂಜೆ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಾಹಿತಿ ಪ್ರಕಾರ ಸಂಜೆ 6:30 ಕ್ಕೆ, ಉದ್ಘಾಟನಾ ಸಮಾರಂಭ ಪ್ರಾರಂಭವಾಗಲಿದೆ. ಈ ಬಾರಿ ಬಿಸಿಸಿಐ ಉದ್ಘಾಟನಾ ಸಮಾರಂಭವನ್ನು ಬಹಳ ವಿಶೇಷ ರೀತಿಯಲ್ಲಿ ಯೋಜಿಸಿದೆ. ಜನಪ್ರಿಯ ಗಾಯಕ ಯೋ ಯೋ ಹನಿ ಸಿಂಗ್ ತಮ್ಮ ಜನಪ್ರಿಯ ಹಾಡುಗಳಿಂದ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಇವರೊಂದಿಗೆ ಬಾಲಿವುಡ್ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ತಮ್ಮ ಅದ್ಭುತ ನೃತ್ಯ ಪ್ರದರ್ಶನದೊಂದಿಗೆ ರಂಜಿಸಲಿದ್ದಾರೆ. ವಿಶೇಷವೆಂದರೆ ಮಾಜಿ ವಿಶ್ವ ಸುಂದರಿ ಹರ್ನಾಜ್ ಸಂಧು ಕೂಡ ಈ ಸಮಾರಂಭದಲ್ಲಿ ಮಿಂಚಲಿದ್ದಾರೆ. ಇದರೊಂದಿಗೆ ಇಡೀ ಕ್ರಿಕೆಟ್ ಮೈದಾನವು ಸೆಲೆಬ್ರಿಟಿಗಳಿಂದ ತುಂಬಿ ತುಳುಕಲಿದೆ.

ಅಭಿಮಾನಿಗಳು ಈ ಭವ್ಯ ಕಾರ್ಯಕ್ರಮ ಮತ್ತು ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು. ನೀವು ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ವೀಕ್ಷಿಸಲು ಬಯಸಿದರೆ, ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ. ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಈ ಡಿಜಿಟಲ್ ಹಬ್ಬವನ್ನು ಆನಂದಿಸಬಹುದು.

ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ದೆಹಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಸೇರಿದಂತೆ ಒಟ್ಟು ಐದು ತಂಡಗಳು ಸ್ಪರ್ಧಿಸಲಿವೆ. ಒಟ್ಟು 22 ಪಂದ್ಯಗಳು ನಡೆಯಲಿದ್ದು, ಲೀಗ್ ಪಂದ್ಯಗಳು ನವಿ ಮುಂಬೈನಲ್ಲಿ ನಡೆಯಲಿವೆ. ಪ್ಲೇಆಫ್‌ಗಳು ಮತ್ತು ಫೈನಲ್ ಪಂದ್ಯ ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯಲಿವೆ.

ಉಭಯ ತಂಡಗಳು

ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸಿವರ್-ಬ್ರಂಟ್, ಹೇಲಿ ಮ್ಯಾಥ್ಯೂಸ್, ಅಮನ್‌ಜೋತ್ ಕೌರ್, ಜಿ. ಕಮಲಿನಿ, ಅಮೆಲಿಯಾ ಕೆರ್, ಶಬ್ನಿಮ್ ಇಸ್ಮಾಯಿಲ್, ಸಂಸ್ಕೃತಿ ಗುಪ್ತಾ, ಸಜನಾ ಸಜೀವನ್, ರಾಹಿಲಾ ಫಿರ್ದೌಸ್, ನಿಕೋಲಾ ಕ್ಯಾರಿ, ಪೂನಂ ಖೆಮ್ನಾರ್, ತ್ರಿವೇಣಿ ವಸಿಷ್ಟ, ನಲ್ಲ ರೆಡ್ಡಿ, ಸೈಕಾ ಇಶಾಕ್, ಮಿಲ್ಲಿ ಇಲ್ಲಿಂಗ್‌ವರ್ತ್

ಆರ್​ಸಿಬಿ: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್, ಡಿ. ಹೇಮಲತಾ, ಸಯಾಲಿ ಸತ್ಘರೆ (ಎಲ್ಲಿಸ್ ಪೆರಿ ಬದಲಿಗೆ)

Source link

ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ – Kannada News | Dental Student Dies by Suicide After Alleged Harassment; Grieving Mother Seeks Justice

ಆನೇಕಲ್, ಜನವರಿ 09: ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ. ಉಪನ್ಯಾಸಕ ಮತ್ತು ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ನೊಂದು ನನ್ನ ಮಗಳು ನೇಣಿಗೆ ಶರಣಾಗಿದ್ದಾಳೆಂದು ತಾಯಿ ಆರೋಪಿಸಿದ್ದಾರೆ. ಟಾರ್ಚರ್ ನೀಡಿದ್ದ ಪ್ರಿನ್ಸಿಪಾಲ್ ಮತ್ತು ಅವಮಾನಿಸಿದ್ದ ಲೆಕ್ಚರರ್ ವಿರುದ್ಧ ಕೂಡಲೇ ಕ್ರಮಕೈಗೊಂಡು ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. ಶವಾಗಾರದ ಮುಂದೆ ಯಶಸ್ವಿನಿ ಮೃತದೇಹವಿಟ್ಟು ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಿನ ಜೀವನಶೈಲಿ ದುಬಾರಿ ಅಲ್ಲ: ತಿಂಗಳಿಗೆ 27,300 ರೂ ಖರ್ಚು ಮಾಡುವ ಯುವತಿಯ ಸಲಹೆ – Kannada News | Affordable Bangalore: How to Live Cheaply in Bengaluru and Manage Expenses

ಬೆಂಗಳೂರು, ಜ.9: ಬೆಂಗಳೂರು ದುಬಾರಿ… ದುಬಾರಿ (Bangalore living cost) ಎಂದು ಹೇಳುವವರು, ತಮ್ಮ ಖರ್ಚನ್ನು ಕಡಿಮೆ ಮಾಡಿದ್ರೆ ದುಬಾರಿ ಆಗುವುದಿಲ್ಲ, ಬೆಂಗಳೂರು ದುಬಾರಿ ಅಲ್ಲ. ಇಲ್ಲಿ ಪ್ರತಿಯೊಬ್ಬರು ಉತ್ತಮವಾಗಿ ಜೀವನ ಮಾಡಬಹುದು, ಹಾಗೂ ಖರ್ಚು ಕಡಿಮೆ ಎಂದು ಯುವತಿಯೊಬ್ಬಳು ರೆಡ್ಡಿಟ್​​​​ನಲ್ಲಿ ಹಂಚಿಕೊಂಡಿರುವ ಪೋಸ್ಟ್​​ ಭಾರೀ ವೈರಲ್​​ ಆಗುತ್ತಿದೆ. 24 ವರ್ಷದ ಈ ಯುವತಿ ತಮ್ಮ ಮಾಸಿಕ ವೆಚ್ಚಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದು ಬೆಂಗಳೂರಿನಲ್ಲಿ ಕಡಿಮೆ ವೆಚ್ಚ ಎಂದು ಈ ಯುವತಿ ಹೇಳಿದ್ದಾರೆ. ಬೆಂಗಳೂರಿನ ಜೀವನ ವೆಚ್ಚವು ಹೆಚ್ಚಾಗಿ ನೀವು ನಿಮ್ಮ ಜೀವನಶೈಲಿಯನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಬೆಂಗಳೂರು ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅಷ್ಟು ದುಬಾರಿಯಲ್ಲ ಎಂದು ಹೇಳಿದ್ದಾರೆ.

ಈ ಯುವತಿ ಒಂದು ವರ್ಷದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. “ಜನರು ಆಗಾಗ್ಗೆ ‘ಬೆಂಗಳೂರು ತುಂಬಾ ದುಬಾರಿಯಾಗಿದೆ’ ಎಂದು ಹೇಳುವುದರಿಂದ ಇದನ್ನು ಪೋಸ್ಟ್ ಮಾಡುತ್ತಿದ್ದೇನೆ” ಎಂದು ಈ ಪೋಸ್ಟ್​​ನಲ್ಲಿ ಹೇಳಿದ್ದಾರೆ. ಅವರು ಬೆಂಗಳೂರಿನಲ್ಲಿ ತಮ್ಮ ಖರ್ಚು ಎಷ್ಟಿದೆ ಎಂಬುದನ್ನು ವಿವರಿಸಿದ್ದಾರೆ. ಬಾಡಿಗೆ (1BHK, ಮಲಗುವ ಕೋಣೆ/ಹಾಲ್/ಅಡುಗೆಮನೆ) ಈ ಬಾಡಿಗೆ ಮನೆಯಲ್ಲಿ ನಾನು ಮತ್ತು ನನ್ನ ಸ್ನೇಹಿತೆ ಇಬ್ಬರಿಗೆ ಸೇರಿ 13,000 ರೂ., ಒಬ್ಬರಿಗೆ 7 ಸಾವಿರ ಬೀಳುತ್ತದೆ. ತಿಂಗಳ ಊಟದ ಖರ್ಚು, 10,800 ರೂ., ಪ್ರಯಾಣದ ಖರ್ಚು ಒಂದು ಸಾವಿರ, ಊರಿಗೆ ಹೋಗಿ ಬರಲು 4000 ರೂ., ವೈ-ಫೈ 500, ನೀರು (ಬಿಲ್ + ಕುಡಿಯುವ ಶುಲ್ಕ) 400 ರೂ., ಜಿಮ್-ವರ್ಕ್​ಔಟ್​​​​ 570 ರೂ., ಇತರೆ ಎಲ್ಲ ಖರ್ಚು 3000 ರೂ. ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೆಳೆಯನನ್ನು ಭೇಟಿಯಾಗಲು ಬೆಂಗಳೂರಿಗೆ ಬಂದ ವಿದೇಶಿ ಮಹಿಳೆ ಹೀಗೆಂದಿದ್ದೇಕೆ?

ಆದರೆ ಇದು ಬೆಂಗಳೂರಿನಲ್ಲಿ ದೊಡ್ಡ ಖರ್ಚೇ ಅಲ್ಲ, ನಿಮ್ಮ ಜೀವನಶೈಲಿ ನಿಮ್ಮ ನಿಯಂತ್ರಣದಲ್ಲಿದ್ದರೆ ಬೆಂಗಳೂರು ಅಷ್ಟು ದುಬಾರಿಯಲ್ಲ, 3 ಕಿ.ಮೀ ದೂರದಲ್ಲಿ ವಾಸಿಸುವ ನನ್ನ ಕೆಲವು ಸ್ನೇಹಿತರು ತಿಂಗಳಿಗೆ ಸುಮಾರು 45,000 ರೂ. ಖರ್ಚು ಮಾಡುತ್ತಾರೆ. ದೊಡ್ಡ ವ್ಯತ್ಯಾಸವೇನು? ಅವರ 1BHK ಬಾಡಿಗೆ ಮಾತ್ರ 26,000 ರೂ. ನೀಡುತ್ತಾರೆ. ಮತ್ತೆಲ್ಲ ನಮ್ಮಷ್ಟೇ ಖರ್ಚು. ಹಣ ಉಳಿಸಲು ದೊಡ್ಡ ಸಲಹೆ ಎಂದರೆ, ಶನಿವಾರ ಮತ್ತು ಭಾನುವಾರದಂದು ಮಧ್ಯಾಹ್ನ 12 ಗಂಟೆಯವರೆಗೆ ಮಲಗುವುದು. ಇನ್ನು ಪೋಸ್ಟ್​​ಗೆ ಅನೇಕರು ಕಮೆಂಟ್​ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಾಡಿಗೆಗಿಂತ 1.5 ಪಟ್ಟು ಹೆಚ್ಚು ಆಹಾರಕ್ಕಾಗಿ ಖರ್ಚು ಮಾಡುವ ಏಕೈಕ ವ್ಯಕ್ತಿ ನೀವಾಗಿರಬಹುದು ಒಬ್ಬರು ಕಮೆಂಟ್​ ಮಾಡಿದ್ದಾರೆ. ನನಗೆ ಮನೆಯಲ್ಲೇ ಅಡುಗೆ ಮಾಡಲು ಇಷ್ಟಪಡುತ್ತೇನೆ. ಆದರೆ ಅದಕ್ಕೆ ಹೆಚ್ಚಿನ ಸಮಯಬೇಕು. ಆಹಾರ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೆ ಕೈ ಜೋಡಿಸಿದ ಹಂಸಲೇಖ, ಎಸ್. ಮಹೇಂದರ್: ಹೊಸ ಸಿನಿಮಾ ಅನೌನ್ಸ್ – Kannada News | Director S Mahendar and Music Composer Hamsalekha join hands for new Kannada movie

ಹಿರಿಯ ನಿರ್ದೇಶಕ ಎಸ್. ಮಹೇಂದರ್ (S Mahendar) ಅವರು ಹಲವು ಗಮನಾರ್ಹ ಸಿನಿಮಾಗಳನ್ನು ನೀಡಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಮೆಚ್ಚುವಂತಹ ಸಿನಿಮಾಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಇನ್ನು, ಅವರ ನಿರ್ದೇಶನದ ಸಿನಿಮಾಗಳಲ್ಲಿ ಹಾಡುಗಳು ಕೂಡ ಗಮನ ಸೆಳೆಯುತ್ತವೆ. ಎಸ್. ಮಹೇಂದ್ರ ಅವರ ಸಿನಿಮಾಗೆ ಹಂಸಲೇಖ (Hamsalekha) ಅವರ ಸಂಗೀತ ಸೇರಿಕೊಂಡರೆ ಸೂಪರ್ ಹಿಟ್ ಎಂದೇ ಅರ್ಥ. ಅಂದಹಾಗೆ, ಹಂಸಲೇಖ ಮತ್ತು ಎಸ್. ಮಹೇಂದರ್ ಅವರು ಜೊತೆಯಾಗಿ ಮತ್ತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಈ ಸಿನಿಮಾಗೆ ಕೆ.ಸಿ ವಿಜಯ್ ಕುಮಾರ್ (KC Vijay Kumar) ಬಂಡವಾಳ ಹೂಡುತ್ತಿದ್ದಾರೆ.

ಹಂಸಲೇಖ ಮತ್ತು ಎಸ್. ಮಹೇಂದರ್ ಅವರು ಕನ್ನಡ ಚಿತ್ರರಂಗದ ದಿಗ್ಗಜರು. ಅವರಿಬ್ಬರ ಕಾಂಬಿನೇಷನ್​ನಲ್ಲಿ ‘ಗೌಡ್ರು’, ‘ಕರ್ಪೂರದ ಗೊಂಬೆ’, ‘ಗೌರವ’, ‘ಸ್ನೇಹಲೋಕ’, ‘ಗಟ್ಟಿಮೇಳ’, ‘ಶೃಂಗಾರಕಾವ್ಯ’, ‘ಕೊಡಗಿನ ಕಾವೇರಿ’, ‘ತಾಯಿ ಇಲ್ಲದ ತವರು’ ಮುಂತಾದ ಸಿನಿಮಾಗಳು ಜನಮನ ಗೆದ್ದಿವೆ. ಈಗ ಅವರು ಒಂದು ಗ್ಯಾಪ್ ಬಳಿಕ ಮತ್ತೆ ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ಆ ಬಗ್ಗೆ ಸುದ್ದಿ ಹೊರಬಿದ್ದಿದೆ.

‘ಶ್ರೀಗುರುರಾಯರು ಸಿನಿಮಾ’ ಬ್ಯಾನರ್ ಮೂಲಕ ಈ ಹೊಸ ಸಿನಿಮಾವನ್ನು ಕೆ.ಸಿ. ವಿಜಯ್ ಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇದು ಮ್ಯೂಸಿಕಲ್ ಹಿಟ್ ಜೋಡಿಯ ಕಾಂಬಿನೇಷನ್ ಆದ್ದರಿಂದ ಹಾಡುಗಳ ಮೇಲೆ ವಿಶೇಷ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಸದ್ಯಕ್ಕೆ ನಿರ್ದೇಶಕ, ಸಂಗೀತ ನಿರ್ದೇಶಕ ಹಾಗೂ ನಿರ್ಮಾಪಕರ ಹೆಸರು ಮಾತ್ರ ಬಹಿರಂಗ ಆಗಿದೆ. ಸಿನಿಮಾದ ಶೀರ್ಷಿಕೆ ಏನು ಎಂಬುದನ್ನು ಜನವರಿ 16ರಂದು ತಿಳಿಸಲಾಗುವುದು. ಅಲ್ಲದೇ, ಚಿತ್ರತಂಡದಲ್ಲಿ ಇನ್ನೂ ಯಾರೆಲ್ಲ ಇರಲಿದ್ದಾರೆ ಎಂಬ ಮಾಹಿತಿ ಕೂಡ ಅಂದೇ ಗೊತ್ತಾಗಲಿದೆ. ಹಂಸಲೇಖ ಅವರು ಸಂಗೀತ ನೀಡುತ್ತಿರುವುದರಿಂದ ಕೌತುಕ ಹೆಚ್ಚಿದೆ.

ಇದನ್ನೂ ಓದಿ: ಹಂಸಲೇಖ ಸಂಗೀತ, ಸಾಹಿತ್ಯದಲ್ಲಿ ‘ಸೋಲ್​ಮೇಟ್ಸ್’ ಸಿನಿಮಾ ಹಾಡು

ಹಂಸಲೇಖ ಮತ್ತು ಎಸ್. ಮಹೇಂದರ್ ಅವರು ಸುಮಾರು 20 ಸಿನಿಮಾಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದ ಸಿನಿಮಾಗಳ ಹಾಡುಗಳು ಇಂದಿಗೂ ಕೇಳುಗರ ಫೇವರಿಟ್ ಆಗಿ ಉಳಿದುಕೊಂಡಿವೆ. ಈಗ ಇದೇ ಜೋಡಿಯಿಂದ ಮತ್ತೊಂದು ಮ್ಯೂಸಿಕಲ್ ಹಿಟ್ ಸಿನಿಮಾವನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಜಣ್ಣ ಭೇಟಿ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ – Kannada News | Satish Jarkiholi Talks bout KPCC President DK Shivakumar Change after KN Rajanna Met

ಬೆಂಗಳೂರು, (ಜನವರಿ 09): ಸಿಎಂ ಕುರ್ಚಿ ಬದಲಾವಣೆ ಚರ್ಚೆ ನಡುವೆಯೇ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹಾಗೂ ಮಾಜಿ ಸಚಿವ ಕೆಎನ್ ರಾಜಣ್ಣ ( KN Rajanna) ಭೇಟಿ ಮಾಡಿದ್ದು ರಾಜ್ಯ ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದೆ. ಇಂದು (ಜನವರಿ 09) ಬೆಂಗಳೂರಿನಲ್ಲಿ ರಾಜಣ್ಣ ಅವರು ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಹತ್ವದ ಚರ್ಚೆ ಮಾಡಿದ್ದಾರೆ. ರಾಜಣ್ಣ ಭೇಟಿ ಬಳಿಕ ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಭೇಟಿ ಹಿಂದಿನ ರಹಸ್ಯವನ್ನು ಬಿಟ್ಟಿದ್ದಾರೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link