ಮೂಡಿಗೆರೆಯಲ್ಲಿ ಬಿರುಗಾಳಿ ಮಳೆ ಆರ್ಭಟ: ಅಂಗನವಾಡಿ ಶಿಕ್ಷಕಿ ಮನೆಯ ಮೇಲೆ ಬಿದ್ದ ಮರ; ರಸ್ತೆಗೆ ಉರುಳಿದ ವಿದ್ಯುತ್ ಕಂಬ! – Kannada News | Mudigere Rain Havoc: Chikkamagaluru Storm Topples Trees, Snaps Power Lines, Damages Homes
ಚಿಕ್ಕಮಗಳೂರು, ಏ.17: ರಾಜ್ಯದಲ್ಲಿ ಬೇಸಿಗೆ ಬಿಸಿಯ ನಡುವೆ ನೆನ್ನೆ ಕೆಲವು ಕಡೆ ಭಾರೀ ಮಳೆ ಬಂದಿದೆ. ಈ ಮಳೆಯ ಅಬ್ಬರಕ್ಕೆ ಚಿಕ್ಕಮಗಳೂರಿನಲ್ಲಿ ದೊಡ್ಡ ಅನಾಹುತಗಳು ನಡೆದಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಣಕಲ್ ಸಮೀಪದ ಬಿ.ಹೊಸಹಳ್ಳಿ ಗ್ರಾಮದಲ್ಲಿ ಬಿರುಗಾಳಿಯ ಹೊಡೆತಕ್ಕೆ ಬೃಹತ್ ತೆಂಗಿನಮರವೊಂದು ಅಂಗನವಾಡಿ ಶಿಕ್ಷಕಿ ಗೌರಮ್ಮ ಅವರಿಗೆ ಸೇರಿದ ಮನೆಯ ಮೇಲೆ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಮನೆಯ…