Category Archives: Blog

Your blog category

ಬೆಂಗಳೂರಿಗೆ 11 ಎಲಿವೇಟೆಡ್ ಕಾರಿಡಾರ್, ಪ್ರಮುಖ ಆಸ್ತಿಗಳಿಗೆ ತೆರಿಗೆ ವಿನಾಯಿತಿ! ಸಚಿವ ಸಂಪುಟ ಮಹತ್ವದ ನಿರ್ಧಾರ – Kannada News | Karnataka Cabinet Approves 11 Elevated Corridors Worth rs 13262 Cr; Property Tax Waiver for Raj Bhavan, Kanteerava Stadium

ಸಚಿವ ಸಂಪುಟ ಸಭೆಯ ಬಳಿಕ ಹೊರ ತೆರಳುತ್ತಿರುವ ಸಿದ್ದರಾಮಯ್ಯImage Credit source: tv9

ಬೆಂಗಳೂರು, ಏಪ್ರಿಲ್ 17: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ (Karnataka Cabinet) ಸಭೆಯಲ್ಲಿ ರಾಜಧಾನಿ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಕಲ್ಯಾಣ ಕರ್ನಾಟಕದ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೃಹತ್ ಮೊತ್ತದ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಬೆಂಗಳೂರು ಮೂಲಸೌಕರ್ಯಕ್ಕೆ ಬಲ

ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸುಮಾರು 75.60 ಕಿಮೀ ಉದ್ದದ 11 ಎತ್ತರಿಸಿದ (Elevated) ಕಾರಿಡಾರ್‌ಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಈ ಯೋಜನೆಗೆ 13,262.70 ಕೋಟಿ ರೂ.ಗಳ ಅಂದಾಜು ಮೊತ್ತಕ್ಕೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಅಲ್ಲದೆ, ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಹೆಚ್ಚುವರಿ 2 ಪಥದ ಮೇಲ್ಸೇತುವೆ ಹಾಗೂ ಐಒಸಿ (IOC) ಜಂಕ್ಷನ್ ಬಳಿ ಎಲಿವೇಟೆಡ್ ರೋಟರಿ ಫ್ಲೈ ಓವರ್ ನಿರ್ಮಾಣದ ಪರಿಷ್ಕೃತ ಅಂದಾಜು ಮೊತ್ತ 436.44 ಕೋಟಿ ರೂ.ಗಳಿಗೆ ಅನುಮೋದನೆ ದೊರೆತಿದೆ.

ಪ್ರಮುಖ ಸ್ವತ್ತುಗಳಿಗೆ ತೆರಿಗೆ ವಿನಾಯಿತಿ

ಸಚಿವ ಸಂಪುಟವು ಬೆಂಗಳೂರಿನ ಕೆಲವು ಪ್ರಮುಖ ಐತಿಹಾಸಿಕ ಮತ್ತು ಸರ್ಕಾರಿ ಸ್ವತ್ತುಗಳಿಗೆ ಭಾರಿ ಮೊತ್ತದ ಆಸ್ತಿ ತೆರಿಗೆ ವಿನಾಯಿತಿ ನೀಡುವ ಮಹತ್ವದ ತೀರ್ಮಾನ ಕೈಗೊಂಡಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ರಾಜಭವನ, ಕುಮಾರ ಕೃಪಾ ಅತಿಥಿ ಗೃಹ, ಶ್ರೀ ಕಂಠೀರವ ಕ್ರೀಡಾಂಗಣ ಹಾಗೂ ದಕ್ಷಿಣ ಪಾಲಿಕೆ ವ್ಯಾಪ್ತಿಯ ಕೋರಮಂಗಲ ಕ್ರೀಡಾಂಗಣಕ್ಕೆ ಆಸ್ತಿ ತೆರಿಗೆ ಪಾವತಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಇದರಿಂದ ಸುಮಾರು 81 ಕೋಟಿ ರೂ.ಗಳಷ್ಟು ತೆರಿಗೆ ಮೊತ್ತ ಮನ್ನಾ ಆದಂತಾಗಿದೆ.

ಇತರ ಪ್ರಮುಖ ನಿರ್ಧಾರಗಳು

  • ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ನೂತನ ಕೇಂದ್ರ ಕಚೇರಿ ನಿರ್ಮಾಣಕ್ಕೆ 20 ಕೋಟಿ ರೂ. ಅನುಮೋದನೆ.
  • ಸಾರಿಗೆ ಇಲಾಖೆ: ಸುಪ್ರೀಂ ಕೋರ್ಟ್ ಆದೇಶದಂತೆ 16 ಮೋಟಾರು ವಾಹನ ನಿರೀಕ್ಷಕರ (MVI) ನೇಮಕಾತಿಗೆ ಘಟನೋತ್ತರ ಅನುಮೋದನೆ.
  • ಕಾರವಾರ ವಿಮಾನ ನಿಲ್ದಾಣ: ಕಾರವಾರ ವಿಮಾನ ನಿಲ್ದಾಣದ ಅಭಿವೃದ್ಧಿ ಜವಾಬ್ದಾರಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (AAI) ವರ್ಗಾಯಿಸಲು ಸಮ್ಮತಿ.

ಇದನ್ನೂ ಓದಿ: ಸಂಪುಟ ಸಭೆಯಲ್ಲಿ ಕಿಡಿ ಹೊತ್ತಿಸಿದ ದಾವಣಗೆರೆ ದಂಗಲ್: ಮುಸ್ಲಿಂ ನಾಯಕರ ತಲೆದಂಡಕ್ಕೆ ಸಚಿವರ ಆಕ್ಷೇಪ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:37 am, Fri, 17 April 26

Source link

ಪಾಂಡ್ಯ ಕ್ಯಾಪ್ಟನ್ಸಿಗೆ ಕೋಕ್? ಸತತ ಸೋಲಿನ ಬಳಿಕ ತಲೆದಂಡದ ಎಚ್ಚರಿಕೆ – Kannada News | Hardik Pandya Captaincy Crisis: MI’s IPL Woes, Is Sacking Looming

ಐದು ಬಾರಿ ಚಾಂಪಿಯನ್ಸ್ ಪಟ್ಟಕ್ಕೇರಿದ ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್ ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಕಳೆದ ವರ್ಷವೂ ತಂಡದ ಸ್ಥಿತಿ ಇದೇ ರೀತಿ ಇತ್ತು. ಕೆಕೆಆರ್​ ವಿರುದ್ಧದ ಮೊದಲ ಪಂದ್ಯ ಗೆದ್ದಿದ್ದು ಬಿಟ್ಟರೆ, ಉಳಿದ ನಾಲ್ಕಕ್ಕೆ ನಾಲ್ಕು ಪಂದ್ಯವನ್ನು ಪಾಂಡ್ಯ ನೇತೃತ್ವದ ಮುಂಬೈ ಪಡೆ ಸೋತಿದೆ. ಈ ಬೆನ್ನಲ್ಲೇ ದೊಡ್ಡ ತಲೆದಂಡದ ಎಚ್ಚರಿಕೆ ಬಂದಿದೆ. ಹಾರ್ದಿಕ್ ಪಾಂಡ್ಯ ಕಳಪೆ ಆಟ ಹಾಗೂ ಕ್ಯಾಪ್ಟನ್ಸಿ ಕಾರಣದಿಂದ ಅವರನ್ನು ಸ್ಥಾನದಿಂದ ಕೆಳಕ್ಕೆ ಇಳಿಸಲಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

ಏಪ್ರಿಲ್ 16ರಂದು ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮುಂಬೈ 7 ವಿಕೆಟ್​​​ಗಳ ಸೋಲನ್ನು ಕಂಡಿದೆ. ಮುಂಬೈ ಇಂಡಿಯನ್ಸ್ ನೀಡಿದ 195 ರನ್​​ಗಳ ಬೃಹತ್ ಮೊತ್ತವನ್ನು ಅನಾಯಾಸವಾಗಿ ಹೊಡೆದು ಹಾಕಿದೆ ಪಂಜಾಬ್ ತಂಡ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಹೋಂ ಗ್ರೌಂಡ್​​ನಲ್ಲೇ ಈ ಸೋಲು ಉಂಟಾಗಿದ್ದು ಮುಂಬೈ ತಂಡಕ್ಕೆ ಭಾರೀ ಮುಖಭಂಗ ಆದಂತೆ ಆಗಿದೆ. ಕ್ವಿಂಟನ್ ಡಿಕಾಕ್ ಅವರ ಶತಕದ ನಡುವೆಯೂ ಮುಂಬೈಗೆ ಗೆಲುವು ಸಿಕ್ಕಿಲ್ಲ.

ಸೋಲಿನ ನಂತರ ಮಾತನಾಡಿದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಪರಿಸ್ಥಿತಿಯನ್ನು ಸರಿಪಡಿಸಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೇ ಎಂದು ಯೋಚಿಸಬೇಕಿದೆ ಎಂದಿದ್ದಾರೆ. ಹಾರ್ದಿಕ್ ಕ್ಯಾಪ್ಟನ್ಸಿ ಹೋಗಬಹುದೇ ಎಂಬ ಪ್ರಶ್ನೆ ಕೂಡ ಮೂಡಿದೆ.

ಇದನ್ನೂ ಓದಿ: ಡಿ ಕಾಕ್ ಶತಕ ವ್ಯರ್ಥ; ಮುಂಬೈಗೆ ಸತತ 4ನೇ ಸೋಲು

‘ನಾವು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೇ ಅಥವಾ ಈಗ ಆಡುತ್ತಿರುವ ರೀತಿಯೇ ಆಡಿ ಪರಿಸ್ಥಿತಿಯನ್ನು ಬದಲಾಯಿಸುವ ಪ್ರಯತ್ನ ಮಾಡಬೇಕೇ ಎಂಬುದನ್ನು ನೋಡಬೇಕಿದೆ. ವೈಕ್ತಿಕವಾಗಿ ಎಡವುತ್ತಿದ್ದೀವಾ, ಗುಂಪಿನಲ್ಲಿ ಎಡವುತ್ತಿದ್ದೀವಾ ಅಥವಾ ನಮ್ಮ ಯೋಜನೆ ಸರಿಯಾಗಿ ಆಗುತ್ತಿಲ್ಲವೇ ಎಂಬಿತ್ಯಾದಿ ವಿಷಯಗಳನ್ನು ನೋಡಬೇಕಿದೆ. ಮುಂದೆ ಏನು ಮಾಡಬಹುದು ಎಂದು ನೋಡೋಣ’ ಎಂದು ಅವರು ಹೇಳಿದರು.
ಪಾಂಡ್ಯ ಕ್ಯಾಪ್ಟನ್ಸಿ ಬಗ್ಗೆ ಈಗಾಗಲೇ ಅಭಿಮಾನಿಗಳಿಂದ ಸಾಕಷ್ಟು ಟೀಕೆ ಕೇಳಿ ಬಂದಿದೆ. ಅವರು ಪ್ರೀತಿ ಬಗ್ಗೆ ಮಾತ್ರ ಗಂಭೀರವಾಗಿದ್ದಾರೆಯೇ ಹೊರತು ಆಟದ ಬಗ್ಗೆ ಗಂಭೀರವಾಗಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಗೆಲುವಿನ ರುಚಿ ಕಾಣಲು ಕ್ಯಾಪ್ಟನ್ಸಿ ಬದಲಿಸಲಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bird Flu: ಬೆಂಗಳೂರಿಗೂ ಕಾಲಿಟ್ಟ H5N1 ಹಕ್ಕಿ ಜ್ವರ; ಪೌಲ್ಟ್ರಿ ಫಾರಂ ಬಂದ್! – Kannada News | Bengaluru Bird Flu Alert: H5N1 Virus outbreak in poultry farm of Hesaraghatta

ಬೆಂಗಳೂರಿಗೂ ಕಾಲಿಟ್ಟ H5N1 ಹಕ್ಕಿ ಜ್ವರ

ಬೆಂಗಳೂರು, ಏಪ್ರಿಲ್ 17: ರಾಜ್ಯದಲ್ಲಿ ಹಕ್ಕಿ ಜ್ವರದ (Bird Flu) ಆತಂಕ ಹೆಚ್ಚಾಗಿದೆ. ಬೆಂಗಳೂರಿನ ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್ ಪತ್ತೆಯಾಗಿದೆ. ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ನಡೆಸಿದ ತಪಾಸಣೆಯ ವೇಳೆ ಕೋಳಿಗಳಲ್ಲಿ ಈ ಸೋಂಕು ಇರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ತಕ್ಷಣವೇ ಫಾರಂ ಅನ್ನು ಮುಚ್ಚಲಾಗಿದ್ದು, ಈ ಪ್ರದೇಶದಿಂದ ರಾಜ್ಯದ ವಿವಿಧ ಭಾಗಗಳಿಗೆ ಕೋಳಿ ಸರಬರಾಜು ಆಗುತ್ತಿದ್ದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಠಿಣಗೊಳಿಸಲಾಗಿದೆ.

ತಾಪಮಾನ ಹೆಚ್ಚಾದಂತೆ ವೇಗವಾಗಿ ಹರಡುತ್ತೆ ವೈರಸ್!

ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯಲ್ಪಡುವ ಬರ್ಡ್ ಫ್ಲೂ ವೈರಸ್ ಸೋಂಕು ಆಗಿದ್ದು ಅದು ಪಕ್ಷಿಗಳಿಗೆ ಮಾತ್ರವಲ್ಲ, ಮನುಷ್ಯರು ಮತ್ತು ಇತರ ಪ್ರಾಣಿಗಳಲ್ಲಿಯೂ ಕಂಡು ಬರುತ್ತದೆ. ಈಗ ಇದೇ ವೈರಸ್ ನಗರದಲ್ಲಿ ಕಂಡುಬರುತ್ತಿದ್ದು, ಪೌಲ್ಟ್ರಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಕೋಳಿ ಸಾಕಾಣಿಕೆದಾರರನ್ನು ವೈದ್ಯಾಧಿಕಾರಿಗಳು ಕ್ವಾರಂಟೈನ್ ಮಾಡಿದ್ದಾರೆ. ಸುತ್ತಮುತ್ತಲಿನ ಕೋಳಿ ಶೆಡ್‌ಗಳಲ್ಲೂ ತಪಾಸಣೆ ನಡೆಸುವಂತೆ ಪಶುವೈದ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಎಚ್ಚರಿಕಾ ನೋಟಿಸ್ ನೀಡಲಾಗಿದೆ. ಕೋಳಿ ಸಾಕಾಣಿಕೆ ಕೇಂದ್ರಗಳು ಹಾಗೂ ಕೋಳಿ ಅಂಗಡಿಗಳಲ್ಲಿ ವಿಶೇಷ ಪರಿಶೀಲನೆ ನಡೆಯುತ್ತಿದೆ. ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಈ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ ಹಕ್ಕಿ ಜ್ವರ ಮನುಷ್ಯರಿಗೂ ತಗುಲಬಹುದು; ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಮುಂಜಾಗ್ರತಾ ಕ್ರಮಗಳೇನು?

ಇದು ಮನುಷ್ಯರಿಗೂ ಹರಡಬಹುದಾದ್ದರಿಂದ ಸಾರ್ವಜನಿಕರು ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು. ಸೋಂಕಿತ ಹಕ್ಕಿಗಳನ್ನು ಸ್ಪರ್ಶಿಸಬಾರದು. ಆಹಾರವನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು. ಹಸಿ ಮೊಟ್ಟೆ ಮತ್ತು ಸರಿಯಾಗಿ ಬೇಯಿಸದ ಮಾಂಸವನ್ನು ತಿನ್ನಬಾರದು. ಕೈಗಳನ್ನು ನಿಯಮಿತವಾಗಿ ತೊಳೆಯುವುದು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವುದು ಸುರಕ್ಷಿತ ಕ್ರಮಗಳಾಗಿವೆ.

ವರದಿ: ಮಂಜುನಾಥ್,ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇವರಾಜ್​​ಗೆ ಈ ಇಬ್ಬರು ಹೀರೋಗಳ ಮೇಲಿದೆ ವಿಶೇಷ ಗೌರವ – Kannada News | Devaraj on Chiranjeevi and Balakrishna: Telugu Stars’ Professionalism and Kindness

ಸುದೀರ್ಘ ಚಲನಚಿತ್ರ ಪ್ರಯಾಣವನ್ನು ಹೊಂದಿರುವ ನಟ ದೇವರಾಜ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಜೀವನದ ಪ್ರಮುಖ ಘಟನೆಗಳನ್ನು ಮತ್ತು ತೆಲುಗು ಚಲನಚಿತ್ರೋದ್ಯಮದ ದಿಗ್ಗಜರೊಂದಿಗಿನ ಒಡನಾಟವನ್ನು ಹಂಚಿಕೊಂಡರು. ದೇವರಾಜ್ ಅವರು ಚಿರಂಜೀವಿ ಮತ್ತು ನಂದಮೂರಿ ಬಾಲಕೃಷ್ಣ ಅವರ ವ್ಯಕ್ತಿತ್ವಗಳು ಮತ್ತು ವೃತ್ತಿಗೆ ಅವರ ಬದ್ಧತೆಯನ್ನು ಹೊಗಳಿದರು.

ಬಾಲಕೃಷ್ಣ ಅವರ ಶಿಸ್ತು ಮತ್ತು ವೃತ್ತಿಯ ಬಗೆಗಿನ ಬದ್ಧತೆಯನ್ನು ದೇವರಾಜ್ ತುಂಬಾ ಮೆಚ್ಚಿಕೊಂಡರು. ‘ಚಿತ್ರೀಕರಣದ ಆರಂಭದಲ್ಲಿ ಬಾಲಕೃಷ್ಣ ಅವರೊಂದಿಗೆ ಮಾತನಾಡಲು ಹೆದರುತ್ತಿದ್ದೆ. ನಂತರ ಅವರ ಸ್ನೇಹಪರ ಸ್ವಭಾವ ಎಷ್ಟು ಎಂದು ಅರ್ಥವಾಯಿತು. ನರಸಾಪುರ ಅರಣ್ಯದಲ್ಲಿ ಚಿತ್ರೀಕರಣ ಮುಗಿದ ನಂತರ ಬಾಲಕೃಷ್ಣ ಸ್ವತಃ ನನ್ನನ್ನು ಹೋಟೆಲ್‌ಗೆ ಬಿಟ್ಟರು. ನಾನು ಎಂದಿಗೂ ಅದನ್ನು ಮರೆಯುವುದಿಲ್ಲ. ಈ ಘಟನೆ ಬಾಲಕೃಷ್ಣ ಅವರದ್ದು ಎಷ್ಟು ಮಹಾನ್ ವ್ಯಕ್ತಿತ್ವ ಎಂಬುದನ್ನು ತೋರಿಸುತ್ತದೆ’ ಎಂದು ಅವರು ಹೇಳಿದರು.

ಚಿರಂಜೀವಿ ಜೊತೆಗಿನ ತಮ್ಮ ಒಡನಾಟವನ್ನು ದೇವರಾಜ್ ವಿವರಿಸಿದರು. ‘ಚಿರಂಜೀವಿ ಯಾವಾಗಲೂ ತುಂಬಾ ಸ್ನೇಹಪರ ಮತ್ತು ಗೌರವಾನ್ವಿತ ವ್ಯಕ್ತಿ. ಚಿತ್ರದ ಶೂಟಿಂಗ್ ಒಂದರ ಘಟನೆ ಇದು. ತಮಿಳುನಾಡು-ಕೇರಳ ಗಡಿಯಲ್ಲಿ ರೈಲಿನಲ್ಲಿ ಶೂಟಿಂಗ್ ನಡೆಯಿತು. ಶೂಟಿಂಗ್ ವಿಳಂಬವಾದ ಕಾರಣ, ಮರುದಿನವೂ ಅವರು ಕೆಲಸ ಮಾಡಬೇಕಾಯಿತು. ಕೆಲಸ ಮುಗಿದ ನಂತರ, ಚಿರಂಜೀವಿ ನನಗೆ ಊಟದ ವ್ಯವಸ್ಥೆ ಮಾಡಿದರು. ಒಬ್ಬ ಸ್ಟಾರ್ ನಾಯಕನಾಗಿ ಇದನ್ನೆಲ್ಲಾ ಮಾಡುವ ಅಗತ್ಯವಿಲ್ಲದಿದ್ದರೂ, ಚಿರಂಜೀವಿ ತೋರಿಸಿದ ಈ ಆತಿಥ್ಯ ಮತ್ತು ಮಾನವೀಯತೆ’ ನನ್ನ ಮೇಲೆ ಪ್ರಭಾವ ಬೀರಿತು ಎಂದಿದ್ದಾರೆ ದೇವರಾಜ್ .

ಇದನ್ನೂ ಓದಿ: ‘ರಾಮರಸ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್; ಭಿನ್ನ ಪಾತ್ರದಲ್ಲಿ ನಟ

ತೆಲುಗು ಆಫರ್ ಕಡಿಮೆ ಆದಾಗ ಚಿರಂಜೀವಿ ಅವರು ತೆಲುಗು ಚಿತ್ರಗಳಲ್ಲಿ ಏಕೆ ನಟಿಸುತ್ತಿಲ್ಲ ಎಂದು ಕೇಳಿದ್ದಾಗಿ ದೇವರಾಜ್ ನೆನಪಿಸಿಕೊಂಡರು. ಒಬ್ಬ ಸ್ಟಾರ್ ನಾಯಕ ಸಮಸ್ಯೆಗಳನ್ನು ಸ್ವತಃ ಕೇಳಿ ತಿಳಿದುಕೊಳ್ಳುವುದು ಅಸಾಮಾನ್ಯ ಎಂದು ದೇವರಾಜ್ ಹೇಳಿದರು. ದೇವರಾಜ್ ಇತ್ತೀಚೆಗೆ ನಟನೆಯನ್ನು ಕಡಿಮೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:12 am, Fri, 17 April 26

Source link

Video: ಕೆಲಸ ಕಳೆದುಕೊಂಡ ಸ್ನೇಹಿತನಿಗೆ ಬೇಕರಿ ತೆರೆಯಲು ತನ್ನ 37 ಲಕ್ಷ ರೂ. ಬೆಲೆಯ ಕಾರನ್ನೇ ಕೊಟ್ಟ ಫ್ರೆಂಡ್ – Kannada News | Friendship Beyond Words: Man Gifts Rs 37 Lakh Car to Help Friend Rebuild Life

ಕೆಲಸ ಹೋದಾಗ ಜಗತ್ತೇ ಮುಳುಗಿದಂತಾಗುತ್ತದೆ. ಸಾಲದ ಕಂತುಗಳು, ಮನೆಯ ಖರ್ಚು ಮತ್ತು ಭವಿಷ್ಯದ ಆತಂಕ ಒಬ್ಬ ಮನುಷ್ಯನನ್ನು ಮಾನಸಿಕವಾಗಿ ಕುಗ್ಗಿಸಿಬಿಡುತ್ತವೆ. ಇಂತಹದ್ದೇ ಪರಿಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬನಿಗೆ ಅವನ ಸ್ನೇಹಿತ ನೀಡಿದ ‘ಕೊಡುಗೆ’ ಈಗ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ಸ್ನೇಹವೆಂಬುದು ಸುಖ ಬಂದಾಗ ಜತೆಗಿರುವುದು ಕಷ್ಟ ಬಂದಾಗಿ ಓಡಿ ಹೋಗುವುದಲ್ಲ, ಬದಲಾಗಿ ಆ ಕಷ್ಟದಿಂದ ಮೇಲೆತ್ತಲು ತನಗಾದ ಸಹಾಯ ಮಾಡುವುದು, ಇಲ್ಲೊಬ್ಬ ವ್ಯಕ್ತಿ ಕೆಲಸ ಕಳೆದುಕೊಳ್ಳುತ್ತಾನೆ, ಆತನಿಗೆ ಸಹಾಯ ಮಾಡಲು ಸ್ನೇಹಿತನೊಬ್ಬ ತನ್ನ 37 ಲಕ್ಷ ರೂ. ಬೆಲೆಯ ಕಾರನ್ನೇ ಕೊಟ್ಟಿದ್ದಾನೆ.

ಅವನೊಬ್ಬ ಸಾಮಾನ್ಯ ಉದ್ಯೋಗಿ, ಒಂದು ದಿನ ಇದ್ದಕ್ಕಿದ್ದಂತೆ ಕೆಲಸ ಹೋಯಿತು. ಕೈಯಲ್ಲಿ ಹಣವಿಲ್ಲ, ಮುಂದೆ ಏನು ಮಾಡಬೇಕೆಂಬ ದಾರಿಯೂ ತೋಚಲಿಲ್ಲ. ಈ ನೋವಿನಲ್ಲಿದ್ದಾಗ ಅವನಿಗೆ ನೆರವಾಗಿದ್ದು ಅವನ ಬಾಲ್ಯದ ಗೆಳೆಯ. ಆ ಗೆಳೆಯ ಕೇವಲ ಸಾಂತ್ವನದ ಮಾತುಗಳನ್ನು ಹೇಳಿ ಸುಮ್ಮನಾಗಲಿಲ್ಲ. ಗೆಳೆಯನಿಗೆ ಬೇಕರಿ ವ್ಯವಹಾರ ಪ್ರಾರಂಭಿಸುವ ಆಸೆ ಇತ್ತು, ಆದರೆ ಬಂಡವಾಳವಿರಲಿಲ್ಲ. ತಾನು ಅತಿ ಹೆಚ್ಚು ಪ್ರೀತಿಸುತ್ತಿದ್ದ, ಬರೋಬ್ಬರಿ 37 ಲಕ್ಷ ರೂ. ಮೌಲ್ಯದ ತನ್ನ ಐಷಾರಾಮಿ ಕಾರನ್ನೇ ಗೆಳೆಯನ ಕೈಗಿಟ್ಟು ಅದರೊಳಗೆ ಬೇಕರಿ ನಡೆಸುವಂತೆ ಹೇಳಿದ್ದಾನೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

KSCA ಸದಸ್ಯನಿಂದಲೇ IPL ಬ್ಲಾಕ್ ಟಿಕೆಟ್ ದಂಧೆ! ಚಿನ್ನಸ್ವಾಮಿ ಸ್ಟೇಡಿಯಂ ಹೋಟೆಲ್ ಕ್ಯಾಪ್ಟನ್ ಜೊತೆ ಸೇರಿ ಕೃತ್ಯ – Kannada News | IPL Ticket Black Marketing Racket Busted in Bengaluru: KSCA Member Involved, CCB Seizes Tickets Worth 17 Lakhs

ಐಪಿಎಲ್ ಟಿಕೆಟ್ (ಸಾಂದರ್ಭಿಕ ಚಿತ್ರ) ಹಾಗೂ ಆರೋಪಿ ಚಂದ್ರಶೇಖರ್Image Credit source: tv9

ಬೆಂಗಳೂರು, ಏಪ್ರಿಲ್ 17: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ (IPL) ಟಿಕೆಟ್‌ಗಳನ್ನು ಹೆಚ್ಚಿನ ಬೆಲೆಗೆ ಬ್ಲಾಕ್​ನಲ್ಲಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ವಿಶೇಷವೆಂದರೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಸದಸ್ಯನೊಬ್ಬನೇ ಈ ದಂಧೆಯ ಹಿಂದಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಕೆಎಸ್​ಸಿಎ ಸದ್ಯ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಹೋಟೆಲ್ ಕ್ಯಾಪ್ಟನ್ ಜೊತೆ ಸೇರಿ ಕೃತ್ಯ ಎಸಗುತ್ತಿದ್ದ ಎಂಬುದು ಸಿಸಿಬಿ ವಿಚಾರಣೆ ವೇಳೆ ಬಯಲಾಗಿದೆ.

ಸಿಸಿಬಿ ಕಾರ್ಯಾಚರಣೆ ವೇಳೆ ಲಾಕ್ ಆದ ಆರೋಪಿಗಳು

ಸಿಸಿಬಿ ಡಿಸಿಪಿ ಹರಿಬಾಬು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲಕ್ಷ್ಮೀ ಕ್ಯಾಟರ್ಸ್ ಹೋಟೆಲ್‌ನ ಕ್ಯಾಪ್ಟನ್ ಚಂದ್ರಶೇಖರ್ ಎಂಬಾತ ಸಿಕ್ಕಿಬಿದ್ದಿದ್ದಾನೆ. 15 ಸಾವಿರ ರೂಪಾಯಿ ಬೆಲೆಯ ಟಿಕೆಟ್‌ಗಳನ್ನು ಈತ ಬರೋಬ್ಬರಿ 19 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಸೆರೆಹಿಡಿದಿದ್ದಾರೆ. ವಿಚಾರಣೆ ವೇಳೆ ಈತ ನೀಡಿದ ಮಾಹಿತಿ ಆಘಾತಕಾರಿಯಾಗಿದ್ದು, ಕೆಎಸ್​​ಸಿಎ ಸದಸ್ಯ ಗಣೇಶ್ ಹರಿಕೇಶ್ ಎಂಬುವವರ ಹೆಸರನ್ನು ಬಾಯ್ಬಿಟ್ಟಿದ್ದಾನೆ.

17 ಲಕ್ಷ ರೂ. ಮೌಲ್ಯದ ಟಿಕೆಟ್ ಖರೀದಿಸಿ ಅಕ್ರಮ

ಆರೋಪಿ ಗಣೇಶ್ ಹರಿಕೇಶ್, ಎರಡು ಖಾಸಗಿ ಕಂಪನಿಗಳ ಹೆಸರಿನಲ್ಲಿ ಆನ್‌ಲೈನ್ ಮೂಲಕ ದೊಡ್ಡ ಪ್ರಮಾಣದಲ್ಲಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದ. ಆ ಬಳಿಕ ಚಂದ್ರಶೇಖರ್ ಮೂಲಕ ಅವುಗಳನ್ನು ಬ್ಲಾಕ್‌ನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಆರ್‌ಸಿಬಿಯ ಮೊದಲ ಪಂದ್ಯದಲ್ಲಿ ಇವರು 81 ಟಿಕೆಟ್‌ಗಳನ್ನು ಮಾರಾಟ ಮಾಡಿದ್ದರು. ಕಳೆದ ಪಂದ್ಯಕ್ಕೆ 100 ಟಿಕೆಟ್‌ಗಳನ್ನು ಸಿದ್ಧಪಡಿಸಿಕೊಂಡಿದ್ದರು. ಒಟ್ಟಾರೆಯಾಗಿ 17 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ 181 ಟಿಕೆಟ್‌ಗಳನ್ನು ಖರೀದಿಸಿದ್ದು, ಅವುಗಳ ಪೈಕಿ 100 ಟಿಕೆಟ್​ಗಳನ್ನು ಬ್ಲಾಕ್​ನಲ್ಲಿ ಮಾರಾಟ ಮಾಡಿರುವುದು ಪತ್ತೆಯಾಗಿದೆ.

  • 15,000 ರೂ. ಮೌಲ್ಯದ ಐಪಿಎಲ್ ಟಿಕೆಟ್‌ಗಳನ್ನು 19,000 ರೂ.ಗೆ ಮಾರಾಟ.
  • ಕೆಎಸ್​​ಸಿಎ ಸದಸ್ಯ ಗಣೇಶ್ ಹರಿಕೇಶ್ ಮತ್ತು ಹೋಟೆಲ್ ಕ್ಯಾಪ್ಟನ್ ಚಂದ್ರಶೇಖರ್ ಪ್ರಮುಖ ಆರೋಪಿಗಳು.
  • ಸುಮಾರು 17 ಲಕ್ಷ ರೂಪಾಯಿ ಮೌಲ್ಯದ ಒಟ್ಟು 181 ಐಪಿಎಲ್ ಟಿಕೆಟ್‌ಗಳ ಅಕ್ರಮ ವ್ಯವಹಾರ ಪತ್ತೆ.
  • ಟಿಕೆಟ್ ಪೂರೈಸಿದ ಖಾಸಗಿ ಕಂಪನಿಗಳಿಗೂ ಸಿಸಿಬಿಯಿಂದ ತನಿಖೆಯ ಬಿಸಿ.

ಇದನ್ನೂ ಓದಿ: ಸಿಕ್ಕ ಸಿಕ್ಕಲ್ಲಿಂದ ಐಪಿಎಲ್ ಟಿಕೆಟ್ ಖರೀದಿ ಮಾಡುವ ಮುನ್ನ ಎಚ್ಚರ! ಲಕ್ಷಾಂತರ ರೂ. ಕಳೆದುಕೊಳ್ಳುವಿರಿ

ಸದ್ಯ ಚಂದ್ರಶೇಖರ್ ಬಂಧನವಾಗುತ್ತಿದ್ದಂತೆ ಗಣೇಶ್ ಹರಿಕೇಶ್ ನಾಪತ್ತೆಯಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. ಟಿಕೆಟ್ ಪೂರೈಸಿದ ಜೀನಿ ಸೇರಿದಂತೆ ಎರಡು ಖಾಸಗಿ ಸಂಸ್ಥೆಗಳಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಸಿದ್ಧತೆ ನಡೆಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾಯಿನೇ ಹೊರ ಹಾಕಿದ ಜಯದೇವ್; ಒಬ್ಬಂಟಿಯಾಗ್ತಾನಾ ವಿಲನ್? – Kannada News | Amruthadhare: Jayadev’s Shocking Downfall Kicks Out Mother Amidst Plot Twists

‘ಅಮೃತಧಾರೆ’ ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್​​ಗಳು ಎದುರಾಗುತ್ತಿರುವುದನ್ನು ನೋಡುತ್ತಿರಬಹುದು. ವಿಲನ್ ಜಯದೇವ್ ನಂಬಿ ಹೋದ ಎಲ್ಲರೂ ಬೀದಿಗೆ ಬೀಳುವುದು ಪಕ್ಕಾ ಆಗಿದೆ. ಇದಕ್ಕೆ ಹೊಸ ಸಾಕ್ಷಿ ಸಿಕ್ಕಿದೆ ಎಂದೇ ಹೇಳಬಹುದು. ಆತ ತನ್ನ ಸ್ವಂತ ತಾಯಿಯನ್ನೇ ಹೊರಹಾಕಿದ್ದಾನೆ. ಈ ಬೆಳವಣಿಗೆ ಧಾರಾವಾಹಿ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.

ಜಯದೇವ್​​ಗೆ ತೊಂದರೆ ಮೇಲೆ ತೊಂದರೆ ಎದುರಾಗುತ್ತಿದೆ. ಆತ ದೀವಾನ್ ಕಂಪನಿ ಲೋಗೋ ತನ್ನದು ಎಂದು ಹೇಳಿಕೊಂಡಿದ್ದ. ಆದರೆ, ಇದು ಗೌತಮ್ ಹೆಸರಲ್ಲಿ ನೋಂದಣಿ ಆಗಿತ್ತು. ತಂದೆ ಈ ಕೆಲಸ ಮಾಡಿದ್ದ. ಈ ದಾಖಲೆಯನ್ನು ನೀಡಿದ್ದು ಪಾರ್ಥ ಮತ್ತು ಜಯದೇವ್​​ನಿಂದ ಪಾರ್ಥ ಈಗ ದೂರ ಆಗಿದ್ದಾನೆ. ಇದನ್ನು ನೋಡಿ ಸ್ವತಃ ಜಯದೇವ್ ಕೂಡ ಶಾಕ್ ಆದನು. ಈಗ ಆತ ತನ್ನ ತಾಯಿಗೆ ಕೆಟ್ಟದನ್ನು ಮಾಡುತ್ತಿದ್ದಾನೆ ಮತ್ತು ಇದನ್ನು ನೋಡಿ ಆತನ ಪತ್ನಿಗೂ ಶಾಕ್ ಆಗಿದೆ.

ಜಯದೇವ್ ತಾಯಿ ಶಕುಂತಲ ಕ್ಲಬ್​​ಗೆ ಹೋಗಿ ದುಡ್ಡು ಕಳೆದು ಬರುತ್ತಾಳೆ. ಈಗಲೂ ಹಾಗೆಯೇ ಆಗಿದೆ. ಆಕೆ, ತಾಯಿ ದುಡ್ಡು ಕಳೆದು ಬಂದಳು. ಅದು ಕೂಡ 3 ಕೋಟಿ ರೂಪಾಯಿ. ಹೀಗಾಗಿ, ಈ ಹಣವನ್ನು ಕೊಡುವಂತೆ ಜಯದೇವ್ ಬಳಿ ಕೇಳಿದಳು. ಇದನ್ನು ಕೇಳಿ ಜಯದೇವ್ ಶಾಕ್ ಆದ. ನಾನು ಕೊಡಲ್ಲ ಎಂದು ನೇರ ಮಾತಲ್ಲಿ ಹೇಳಿದ.

ಇದನ್ನೂ ಓದಿ: ಜಯದೇವ್​​ಗೆ ಶಾಕ್ ಕೊಟ್ಟ ಗೌತಮ್; ಲೋಗೋ ವಿವಾದಕ್ಕೆ ತೆರೆ

ಮಗನ ಈ ಮಾತನ್ನು ಕೇಳಿ ಶಕುಂತಲಗೆ ಬೇಸರ ಆಗಿದೆ. ಅವಳು ನೇರವಾಗಿ ಅಸಮಾಧಾನ ಹೊರಹಾಕಿದಳು ಮತ್ತು ಗೌತಮ್​​ನ ಹೊಗಳಿದಳು. ಇದನ್ನು ಕೇಳಿ ಜಯದೇವ್ ಸಿಟ್ಟು ಮಾಡಿಕೊಂಡಿದ್ದಾನೆ. ‘ನನ್ನ ಎದುರೇ ನನ್ನ ಶತ್ರುನ ಹೊಗಳುತ್ತೀಯಾ’ ಎಂದು ಕೋಪಗೊಂಡಿದ್ದಾನೆ. ಅಲ್ಲದೆ ತಾಯಿಯನ್ನು ಮನೆಯಿಂದ ಹೊರ ಹಾಕಿದ್ದಾಳೆ. ಈಗ ಆತನ ಪಾಲಿಗೆ ಉಳಿದುಕೊಂಡಿದ್ದು ಪತ್ನಿ ಮಾತ್ರ. ಅವಳು ಕೂಡ ಯಾವುದೇ ಸಂದರ್ಭದಲ್ಲಿ ಹೊರಹೋಗಬಹುದು. ಆಕೆ ಬಂದಿರೋದು ಆಸ್ತಿಗೆ ವಾರಸುದಾರ ಆಗಬೇಕು ಎಂದು. ಆದರೆ, ಜಯದೇವ್ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ, ಜಯದೇವ್ ವಿರುದ್ಧ ಆಕೆ ಒಳಗೊಳಗೆ ಸಂಚು ಮಾಡುವುದನ್ನು ನೀವು ಕಾಣಬಹುದು. ಅವಳು ಕೂಡ ಜೆಡಿಯಿಂದ ದೂರ ಆಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:51 am, Fri, 17 April 26

Source link

Video: ಐಸಿಯು ಬೆಡ್ ಮೇಲೆ ಮಲಗಿದ್ದ ವೃದ್ಧ ರೋಗಿಯ ಮೇಲೆ ಹಲ್ಲೆ ನಡೆಸಿದ ವೈದ್ಯ – Kannada News | Caught on Camera: Haryana Doctor Accused of Assaulting Elderly Patient

ಚಂಡೀಗಢ, ಏಪ್ರಿಲ್ 17: ಹರಿಯಾಣ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯೊಂದರ ಐಸಿಯು (ICU) ವಾರ್ಡ್‌ನಲ್ಲಿ ನಡೆದ ದೃಶ್ಯವೊಂದು ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಚಿಕಿತ್ಸೆ ನೀಡಬೇಕಾದ ಕೈಗಳೇ ವೃದ್ಧ ರೋಗಿಯ ಎದೆಯನ್ನು ಅಪ್ಪಳಿಸಿರುವ ಆಘಾತಕಾರಿ ವಿಡಿಯೋ ಈಗ ಬಹಿರಂಗಗೊಂಡಿದೆ. ವೈದ್ಯರೊಬ್ಬರು ವೃದ್ಧ ರೋಗಿಯಿದ್ದ ಹಾಸಿಗೆಯ ಬಳಿ ಬಂದು ಮೊದಲು ಸುತ್ತಲೂ ಕಣ್ಗಾವಲು ಕ್ಯಾಮೆರಾ ಎಲ್ಲಿವೆ ಎಂದು ಗಮನಿಸುತ್ತಾನೆ. ನಂತರ ಯಾರಿಗೂ ಕಾಣದಂತೆ ಹಾಸಿಗೆಯ ಸುತ್ತಲಿನ ಪರದೆಗಳನ್ನು (Curtains) ಎಳೆದು, ಹಾಸಿಗೆಯ ಮೇಲಿದ್ದ ಅಸಹಾಯಕ ವೃದ್ಧ ರೋಗಿಯ ಎದೆಗೆ ತನ್ನ ಮೊಣಕೈಯಿಂದ ಬಲವಾಗಿ ಗುದ್ದಿ ಹಲ್ಲೆ ನಡೆಸಿದ್ದಾನೆ. ವೃದ್ಧ ರೋಗಿಯು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೆ, ಆತನನ್ನು ಆರೈಕೆ ಮಾಡಬೇಕಾದ ವೈದ್ಯನು ತನ್ನ ಕೋಪವನ್ನು ಅಥವಾ ವಿಕೃತಿಯನ್ನು ರೋಗಿಯ ಮೇಲೆ ತೀರಿಸಿಕೊಂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Bengaluru Air Quality: ಕಲಬುರ್ಗಿ, ಉಡುಪಿಯಲ್ಲಿ ಏರ್ ಕ್ವಾಲಿಟಿ ಪುನಃ ಕಳಪೆ ಮಟ್ಟಕ್ಕೆ! – Kannada News | Bangalore Air Pollution Crisis: Bengaluru Air Quality dropped in Udupi and Kalaburagi

ಕಲಬುರ್ಗಿ, ಉಡುಪಿಯಲ್ಲಿ ಏರ್ ಕ್ವಾಲಿಟಿ ಪುನಃ ಕಳಪೆ ಮಟ್ಟಕ್ಕೆ!

ಬೆಂಗಳೂರು, ಏಪ್ರಿಲ್ 17: ರಾಜ್ಯದ ಏರ್ ಕ್ವಾಲಿಟಿಯಲ್ಲಿ ಕಳೆದ ಕೆಲ ದಿನಗಳಿಂದ ಸುಧಾರಣೆ ಕಂಡು ಬಂದಿದೆ. ದೇಶದ ಉಳಿದ ಯಾವುದೇ ಮೆಟ್ರೋ ಸಿಟಿಗಳಿಗೆ ಹೋಲಿಸಿದರೂ ಬೆಂಗಳೂರಿನ ವಾಯು ಗುಣಮಟ್ಟ  (Bengaluru Air Quality) ಉತ್ತಮವಾದದ್ದಾಗಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ಕಲಬುರ್ಗಿ, ಉಡುಪಿಯಲ್ಲಿ ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 140ಕ್ಕೆ ತಲುಪಿದೆ. ಕಲಬುರ್ಗಿ ಮತ್ತು ಉಡುಪಿಯ AQI 150 ದಾಟಿದ್ದು, ಆತಂಕ ಸೃಷ್ಟಿಸಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 140
  • ಮಂಗಳೂರು-120
  • ಮೈಸೂರು –126
  • ಬೆಳಗಾವಿ – 56
  • ಕಲಬುರ್ಗಿ-151
  • ಶಿವಮೊಗ್ಗ –120
  • ಬಳ್ಳಾರಿ – 102
  • ಹುಬ್ಬಳ್ಳಿ- 126
  • ಉಡುಪಿ –130
  • ವಿಜಯಪುರ –93

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೀ ಕನ್ನಡದಲ್ಲಿ ಬರ್ತಿದೆ ‘ಸರಿಗಮಪ ಲಿಟ್ಲ್​ ಚಾಂಪ್ಸ್’; ಈ ಬಾರಿಯ ವಿಶೇಷತೆ ಏನು? – Kannada News | Zee Kannada SaReGaMaPa Li’l Champs: New Season, Judges and show starts Details

ಜೀ ಕನ್ನಡದ ವಾಹಿನಿಯಲ್ಲಿ ಒಂದಾದ ಬಳಿಕ ಒಂದು ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಲೇ ಇರುತ್ತವೆ. ಇತ್ತೀಚೆಗೆ ‘ಜೋಡಿ ನಂ.1’ ಶೋ ಪ್ರಸಾರ ಆರಂಭಿಸಿದೆ. ಇನ್ನು, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋ ಇತ್ತೀಚೆಗೆ ಪೂರ್ಣಗೊಂಡಿದೆ. ಹೀಗಿರುವಾಗಲೇ ಜನರ ಫೇವರಿಟ್ ಶೋ ಎನಿಸಿಕೊಂಡಿರುವ ‘ಸರಿಗಮಪ ಲಿಟ್ಲ್ ಚಾಂಪ್ಸ್’ (SAREGAMAPA) ಆಗಮನಕ್ಕೆ ಜೀ ಕನ್ನಡ ವೇದಿಕೆ ರೆಡಿ ಮಾಡಿದೆ. ಈ ವೀಕೆಂಡ್​​ನಿಂದ ಶೋ ಪ್ರಾರಂಭ ಆಗಲಿದೆ. ಇದಕ್ಕಾಗಿ ವೀಕ್ಷಕರು ಕಾದಿದ್ದಾರೆ.

‘ಸರಿಗಮಪ’ ಶೋ ಅಂದರೆನೇ ಅನೇಕರಿಗೆ ಇಷ್ಟ. ಅದರಲ್ಲೂ ಈ ಬಾರಿ ಸಣ್ಣ ಮಕ್ಕಳಿಗೆ ಶೋ ವೇದಿಕೆ ಆಗಲಿದೆ ಎಂದಾಗ ಸಹಜವಾಗಿಯೇ ಕುತೂಹಲ ಹೆಚ್ಚಿರುತ್ತದೆ. ಈ ವರ್ಷ 3 ವರ್ಷದಿಂದ ಆರಂಭಿಸಿ 15 ವರ್ಷದೊಳಗಿನ ಮಕ್ಕಳು ಶೋನಲ್ಲಿ ಭಾಗವಹಿಸಬಹುದು ಎಂಬುದು ಈ ಬಾರಿಯ ವಿಶೇಷ. ಬೆಂಗಳೂರಿನಲ್ಲಿ ಮಾತ್ರ ಆಡಿಷನ್ ಮಾಡಿದರೆ ಕರ್ನಾಟಕದಲ್ಲಿರುವ ಅನೇಕರಿಗೆ ಇದರಲ್ಲಿ ಭಾಗವಹಿಸಲು ಸಾಧ್ಯವಾಗದೆ ಇರಬಹುದು. ಹೀಗಾಗಿ, ಕರ್ನಾಟಕದ ಮೂಲೆ ಮೂಲೆಗೆ ತೆರಳಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ.

‘ಸರಿಗಮಪ ಲಿಟ್ಲ್ ಚಾಂಪ್ಸ್’ ಏಪ್ರಿಲ್ 18ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ. ಸಣ್ಣ ಮಕ್ಕಳು ತಮ್ಮ ಪ್ರತಿಭೆಯನ್ನು ಕರ್ನಾಟಕದ ಜನತೆ ಮುಂದೆ ಇಡುತ್ತಿದ್ದಾರೆ. ಈ ಶೋ ಉದಯೋನ್ಮುಖ ಗಾಯಕರಿಗೆ ಉತ್ತಮ ವೇದಿಕೆ ಆಗಿದೆ.

ಇದನ್ನೂ ಓದಿ: ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್​​ಗಳಿಗೆ ಸರಿಗಮಪ ಉತ್ತರ

‘ಸರಿಗಮಪ’ ಶೋನ ಮತ್ತೊಂದು ಹೈಲೈಟ್ ಎಂದರೆ ಜಡ್ಜ್​​ಗಳು ಹಾಗೂ ಆ್ಯಂಕರ್ಸ್. ರಾಜೇಶ್ ಕೃಷ್ಣನ್, ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಮತ್ತು ಗಾಯಕ ವಿಜಯ್ ಪ್ರಕಾಶ್ ಅವರು ತೀರ್ಪುಗಾರರಾಗಿ ಇರಲಿದ್ದಾರೆ. ಇವರುಗಳು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಜನಪ್ರಿಯ ನಿರೂಪಕಿ ಅನುಶ್ರೀ ಅವರು ಈ ಶೋನ ನಡೆಸಿಕೊಡಲಿದ್ದಾರೆ. ಅವರು ಸಣ್ಣ ಮಕ್ಕಳ ಜೊತೆ ಮಗುವಾಗೇ ನಡೆದುಕೊಳ್ಳುವ ಗುಣ ಹೊಂದಿರೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link