‘ಅಮೃತಧಾರೆ’ ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್ಗಳು ಎದುರಾಗುತ್ತಿರುವುದನ್ನು ನೋಡುತ್ತಿರಬಹುದು. ವಿಲನ್ ಜಯದೇವ್ ನಂಬಿ ಹೋದ ಎಲ್ಲರೂ ಬೀದಿಗೆ ಬೀಳುವುದು ಪಕ್ಕಾ ಆಗಿದೆ. ಇದಕ್ಕೆ ಹೊಸ ಸಾಕ್ಷಿ ಸಿಕ್ಕಿದೆ ಎಂದೇ ಹೇಳಬಹುದು. ಆತ ತನ್ನ ಸ್ವಂತ ತಾಯಿಯನ್ನೇ ಹೊರಹಾಕಿದ್ದಾನೆ. ಈ ಬೆಳವಣಿಗೆ ಧಾರಾವಾಹಿ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.
ಜಯದೇವ್ಗೆ ತೊಂದರೆ ಮೇಲೆ ತೊಂದರೆ ಎದುರಾಗುತ್ತಿದೆ. ಆತ ದೀವಾನ್ ಕಂಪನಿ ಲೋಗೋ ತನ್ನದು ಎಂದು ಹೇಳಿಕೊಂಡಿದ್ದ. ಆದರೆ, ಇದು ಗೌತಮ್ ಹೆಸರಲ್ಲಿ ನೋಂದಣಿ ಆಗಿತ್ತು. ತಂದೆ ಈ ಕೆಲಸ ಮಾಡಿದ್ದ. ಈ ದಾಖಲೆಯನ್ನು ನೀಡಿದ್ದು ಪಾರ್ಥ ಮತ್ತು ಜಯದೇವ್ನಿಂದ ಪಾರ್ಥ ಈಗ ದೂರ ಆಗಿದ್ದಾನೆ. ಇದನ್ನು ನೋಡಿ ಸ್ವತಃ ಜಯದೇವ್ ಕೂಡ ಶಾಕ್ ಆದನು. ಈಗ ಆತ ತನ್ನ ತಾಯಿಗೆ ಕೆಟ್ಟದನ್ನು ಮಾಡುತ್ತಿದ್ದಾನೆ ಮತ್ತು ಇದನ್ನು ನೋಡಿ ಆತನ ಪತ್ನಿಗೂ ಶಾಕ್ ಆಗಿದೆ.
ಜಯದೇವ್ ತಾಯಿ ಶಕುಂತಲ ಕ್ಲಬ್ಗೆ ಹೋಗಿ ದುಡ್ಡು ಕಳೆದು ಬರುತ್ತಾಳೆ. ಈಗಲೂ ಹಾಗೆಯೇ ಆಗಿದೆ. ಆಕೆ, ತಾಯಿ ದುಡ್ಡು ಕಳೆದು ಬಂದಳು. ಅದು ಕೂಡ 3 ಕೋಟಿ ರೂಪಾಯಿ. ಹೀಗಾಗಿ, ಈ ಹಣವನ್ನು ಕೊಡುವಂತೆ ಜಯದೇವ್ ಬಳಿ ಕೇಳಿದಳು. ಇದನ್ನು ಕೇಳಿ ಜಯದೇವ್ ಶಾಕ್ ಆದ. ನಾನು ಕೊಡಲ್ಲ ಎಂದು ನೇರ ಮಾತಲ್ಲಿ ಹೇಳಿದ.
ಇದನ್ನೂ ಓದಿ: ಜಯದೇವ್ಗೆ ಶಾಕ್ ಕೊಟ್ಟ ಗೌತಮ್; ಲೋಗೋ ವಿವಾದಕ್ಕೆ ತೆರೆ
ಮಗನ ಈ ಮಾತನ್ನು ಕೇಳಿ ಶಕುಂತಲಗೆ ಬೇಸರ ಆಗಿದೆ. ಅವಳು ನೇರವಾಗಿ ಅಸಮಾಧಾನ ಹೊರಹಾಕಿದಳು ಮತ್ತು ಗೌತಮ್ನ ಹೊಗಳಿದಳು. ಇದನ್ನು ಕೇಳಿ ಜಯದೇವ್ ಸಿಟ್ಟು ಮಾಡಿಕೊಂಡಿದ್ದಾನೆ. ‘ನನ್ನ ಎದುರೇ ನನ್ನ ಶತ್ರುನ ಹೊಗಳುತ್ತೀಯಾ’ ಎಂದು ಕೋಪಗೊಂಡಿದ್ದಾನೆ. ಅಲ್ಲದೆ ತಾಯಿಯನ್ನು ಮನೆಯಿಂದ ಹೊರ ಹಾಕಿದ್ದಾಳೆ. ಈಗ ಆತನ ಪಾಲಿಗೆ ಉಳಿದುಕೊಂಡಿದ್ದು ಪತ್ನಿ ಮಾತ್ರ. ಅವಳು ಕೂಡ ಯಾವುದೇ ಸಂದರ್ಭದಲ್ಲಿ ಹೊರಹೋಗಬಹುದು. ಆಕೆ ಬಂದಿರೋದು ಆಸ್ತಿಗೆ ವಾರಸುದಾರ ಆಗಬೇಕು ಎಂದು. ಆದರೆ, ಜಯದೇವ್ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ, ಜಯದೇವ್ ವಿರುದ್ಧ ಆಕೆ ಒಳಗೊಳಗೆ ಸಂಚು ಮಾಡುವುದನ್ನು ನೀವು ಕಾಣಬಹುದು. ಅವಳು ಕೂಡ ಜೆಡಿಯಿಂದ ದೂರ ಆಗಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 7:51 am, Fri, 17 April 26
