KMFನಲ್ಲಿ ಉದ್ಯೋಗದ ಆಮಿಷ: ಲಕ್ಷ ಲಕ್ಷ ಹಣ ಕೊಟ್ಟು ಯಾಮಾರಿದ ಹಲವರು! – Kannada News | KMF Job Promise Scam: More Than 10 People Allegedly Cheated in Bengaluru
KMFನಲ್ಲಿ ಉದ್ಯೋಗದ ಹೆಸರಲ್ಲಿ ವಂಚನೆ ಬೆಂಗಳೂರು, ಜನವರಿ 08: ಕರ್ನಾಟಕ ಹಾಲು ಒಕ್ಕೂಟದಲ್ಲಿ (Karnataka Milk Federation) ಕೆಲಸದ ಆಸೆ ತೋರಿಸಿ ಉದ್ಯೋಗಾಂಕ್ಷಿಗಳಿಂದ ಹಣ ಪಡೆದು 10ಕ್ಕೂ ಹೆಚ್ಚು ಜನರಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ. ಒಂದೊಂದು ಹುದ್ದೆಗೆ 10 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ ಎನ್ನಲಾಗಿದ್ದು ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಕೆಎಎಸ್ ಅಧಿಕಾರಿಯೆಂದು ನಂಬಿಸಿ ಪರಿಚಯಿಸಿಕೊಂಡು ಆರೋಪಿಗಳು ವಂಚನೆ ನಡೆಸಿದ್ದಾರೆ. ತಾನು ಕೆಎಎಸ್ ಅಧಿಕಾರಿಯೆಂದು ಆರೋಪಿ ರಾಧಾಕೃಷ್ಣನ್ ದೂರುದಾರರಿಗೆ ಪರಿಚಯಿಸಿಕೊಂಡಿದ್ದ. ಪೇಪರ್ನಲ್ಲಿ ಕೆಎಂಎಫ್ನವರು ನೀಡಿದ ಜಾಹೀರಾತು ತೋರಿಸಿ…