Category Archives: Blog

Your blog category

Gold Rate Today Bangalore: 14,000 ರೂ ದಾಟಿದ ಅಪರಂಜಿ ಚಿನ್ನದ ಬೆಲೆ – Kannada News | Gold Price Today on 11th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 11: ಚಿನ್ನದ ಬೆಲೆ ಏರಿಕೆ ಮುಂದುವರಿದಿದೆ. ವಾರಾಂತ್ಯದಲ್ಲಿ ಇದರ ಬೆಲೆ (gold rate) ಗ್ರಾಮ್​ಗೆ 160 ರೂ ಹೆಚ್ಚಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆ ಹೆಚ್ಚಳವಾಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 14,000 ರೂ ಗಡಿ ದಾಟಿದೆ. ಮೊನ್ನೆ ಇಳಿಕೆಯಾಗಿದ್ದ ಬೆಳ್ಳಿ ಬೆಲೆ ಇವತ್ತು ಬರೋಬ್ಬರಿ 9 ರೂ ಹೆಚ್ಚಿದೆ. ಮತ್ತೊಮ್ಮೆ ಇದರ ಬೆಲೆ 260 ರೂ ಗಡಿ ಮುಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,28,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,40,460 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,28,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 11ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,046 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,875 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,534 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,046 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,875 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,875 ರೂ
  • ಚೆನ್ನೈ: 12,900 ರೂ
  • ಮುಂಬೈ: 12,875 ರೂ
  • ದೆಹಲಿ: 12,890 ರೂ
  • ಕೋಲ್ಕತಾ: 12,875 ರೂ
  • ಕೇರಳ: 12,875 ರೂ
  • ಅಹ್ಮದಾಬಾದ್: 12,880 ರೂ
  • ಜೈಪುರ್: 12,890 ರೂ
  • ಲಕ್ನೋ: 12,890 ರೂ
  • ಭುವನೇಶ್ವರ್: 12,875 ರೂ

ಇದನ್ನೂ ಓದಿ: ಪಿಎಫ್ ಹಣಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತಾ? ವಿತ್​ಡ್ರಾ ಮಾಡಿದಾಗ ಟ್ಯಾಕ್ಸ್ ಎಷ್ಟು? ನೀವು ತಿಳಿದಿರಬೇಕಾದ ಸಂಗತಿಗಳಿವು…

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 577 ರಿಂಗಿಟ್ (12,783 ರುಪಾಯಿ)
  • ದುಬೈ: 503 ಡಿರಾಮ್ (12,358 ರುಪಾಯಿ)
  • ಅಮೆರಿಕ: 140 ಡಾಲರ್ (12,634 ರುಪಾಯಿ)
  • ಸಿಂಗಾಪುರ: 180.90 ಸಿಂಗಾಪುರ್ ಡಾಲರ್ (12,680 ರುಪಾಯಿ)
  • ಕತಾರ್: 501 ಕತಾರಿ ರಿಯಾಲ್ (12,403 ರೂ)
  • ಸೌದಿ ಅರೇಬಿಯಾ: 511 ಸೌದಿ ರಿಯಾಲ್ (12,297 ರುಪಾಯಿ)
  • ಓಮನ್: 53.35 ಒಮಾನಿ ರಿಯಾಲ್ (12,505 ರುಪಾಯಿ)
  • ಕುವೇತ್: 40.97 ಕುವೇತಿ ದಿನಾರ್ (12,098 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 260 ರೂ
  • ಚೆನ್ನೈ: 275 ರೂ
  • ಮುಂಬೈ: 260 ರೂ
  • ದೆಹಲಿ: 260 ರೂ
  • ಕೋಲ್ಕತಾ: 260 ರೂ
  • ಕೇರಳ: 275 ರೂ
  • ಅಹ್ಮದಾಬಾದ್: 260 ರೂ
  • ಜೈಪುರ್: 260 ರೂ
  • ಲಕ್ನೋ: 260 ರೂ
  • ಭುವನೇಶ್ವರ್: 275 ರೂ
  • ಪುಣೆ: 260

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:44 am, Sun, 11 January 26

Source link

ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್: ಮಹತ್ವದ ಸಾಕ್ಷ್ಯ ಲಭ್ಯ – Kannada News | Arvind Reddy Case Twist: Exclusive Photos Reveal Expensive Gifts to Sandalwood Actress

ಬೆಂಗಳೂರು, ಜನವರಿ 11: ಸ್ಯಾಂಡಲ್​ವುಡ್​ ನಟಿ ಮತ್ತು ಉದ್ಯಮಿ ಅರವಿಂದ್​ ರೆಡ್ಡಿ ನಂಟಿನ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಈ ಹಿಂದೆ ಬಹಳ ಚರ್ಚೆಗೆ ಕಾರಣವಾಗಿದ್ದ ಈ ಪ್ರಕರಣದಲ್ಲಿ, ನಟಿಗೆ ಉದ್ಯಮಿ ಅರವಿಂದ್​ ರೆಡ್ಡಿ ಕೇವಲ ಕಾರು ಮಾತ್ರವಲ್ಲದೆ ಲಕ್ಷಾಂತರ ಮೌಲ್ಯದ ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳು ಲಭ್ಯವಾಗಿವೆ.  ಅರವಿಂದ್​ ರೆಡ್ಡಿ ನಟಿಯೊಂದಿಗೆ ಲಿವಿನ್​ ರಿಲೇಶನ್​ಶಿಪ್​ನಲ್ಲಿದ್ದಾಗ, ಆಕೆಗೆ 7 ಲಕ್ಷ ಮೌಲ್ಯದ ಟಿವಿ, 1 ಲಕ್ಷ ಮೌಲ್ಯದ ಹಾಸಿಗೆ, 10 ಲಕ್ಷ ಮೌಲ್ಯದ ಫರ್ನಿಚರ್, 33 ಸಾವಿರ ಮೌಲ್ಯದ ಡೈನಿಂಗ್ ಸೆಟ್, 1.30 ಲಕ್ಷ ಮೌಲ್ಯದ ಬೆಡ್, ಮತ್ತು 15 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ದಾವಣಗೆರೆ: ಕೌಟುಂಬಿಕ ಕಲಹಕ್ಕೆ ಮನನೊಂದು ಬಿಜೆಪಿ ಮುಖಂಡ ಆತ್ಮಹತ್ಯೆ – Kannada News | A BJP leader committed suicide due to family feud

ತನ್ನದೇ ಕಾರಿನಲ್ಲಿ ಬೆಂಕಿಹಚ್ಚಿಕೊಂಡು ದಾವಣಗೆರೆ ಪಾಲಿಕೆಯ ಮಾಜಿ ಸದಸ್ಯ ಚಂದ್ರಶೇಖರ್ ಸಂಕೋಲ್ ಆತ್ಮಹತ್ಯೆ

ದಾವಣಗೆರೆ, ಜನವರಿ 11: ಜಿಲ್ಲೆಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಬಿಜೆಪಿ ಮುಖಂಡ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಇತ್ತೀಚೆಗೆ ಅವರ ಮಕ್ಕಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಇದರಿಂದ ಮನನೊಂದ ಮುಖಂಡ ತಮ್ಮ ಕಾರಿನಲ್ಲಿಯೇ ಬೆಂಕಿ ಹಚ್ಚಿಕೊಂಡು ಸಜೀವದಹನಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ದಾವಣಗೆರೆ ಪಾಲಿಕೆಯ ಮಾಜಿ ಸದಸ್ಯ ಚಂದ್ರಶೇಖರ್ ಸಂಕೋಲ್ ಕಾರಿನಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ತಾಲೂಕಿನ ನಾಗನೂರು ಸಮೀಪದ ತೋಟದಲ್ಲಿ ಘಟನೆ ನಡೆದಿದೆ. ಇತ್ತೀಚೆಗೆ ಚಂದ್ರಶೇಖರ್ ಸಂಕೋಲ್ ಅವರ ಇಬ್ಬರು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರದಿಂದ ಮನನೊಂದಿದ್ದ ಚಂದ್ರಶೇಖರ್ ಸಂಕೋಲ್ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಹದಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯುವತಿ ಆತ್ಮಹತ್ಯೆ ಕೇಸ್, ಜೆಡಿಎಸ್‌ ಸ್ಥಳೀಯ ನಾಯಕಿಯ ಪುತ್ರ ಎಸ್ಕೇಪ್

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾದಲ್ಲಿ ಯುವತಿ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರಾರಿಯಾಗಿದ್ದಾನೆ. ಜೆಡಿಎಸ್ ಸ್ಥಳೀಯ ನಾಯಕಿ ಚೈತ್ರಾ ಕೊಠಾರಕರ್ ಅವರ ಪುತ್ರ ಚಿರಾಗ್ ಕೊಠಾರಕರ್ ವಿರುದ್ಧ  ಆರೋಪ ಕೇಳಿಬಂದಿದ್ದು, ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ.

ಇದನ್ನೋ ಓದಿ ಪ್ರೀತಿಸುವಂತೆ ಕಾಟ: ಜೆಡಿಎಸ್‌ ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ

ಕಳೆದ ಕೆಲ ದಿನಗಳಿಂದ ಕದ್ರಾ ಗ್ರಾಮದ ಕೆಪಿಸಿಎಲ್ ಕಾಲೋನಿಯ ನಿವಾಸಿ ರಿಶೇಲ್ ಡಿಸೋಜಾ (20) ಮನೆ ಬಳಿ ಬಂದು ಹೋಗುತ್ತಿದ್ದ ಚಿರಾಗ್, ತನ್ನ ಪ್ರೀತಿಸುವಂತೆ ರಿಶೇಲ್ಗೆ ಕಿರುಕುಳ ನೀಡುತ್ತಿದ್ದ. ಆದರೆ ರಿಶೇಲ್ ಮಾತ್ರ ಆತನ ಪ್ರೀತಿಯನ್ನು ಖಡಾ ಖಂಡಿತವಾಗಿ ನಿರಾಕರಿಸಿದ್ದಳು. ಆದರೂ ಬೆಂಬಿಡದ ಯುವಕ, ತನ್ನ ಪ್ರೀತಿ ನಿರಾಕರಿಸಿದ ನೀನು ಇದ್ರು ಸತ್ತ ಹಾಗೆ ಬೇಗ ಸತ್ತು ಹೋಗೆಂದು ಪಿಡಿಸುತ್ತಿದ್ದ. ಆತನ ಈ ದುರ್ವರ್ತನೆಯಿಂದ ಬೇಸತ್ತ ಯುವತಿ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಪ್ರೀತಿ ನಿರಾಕರಿಸಿದ್ದಕ್ಕೆ ಚಿರಾಗ್ ನಿರಂತರ ಕಿರುಕುಳ ನೀಡಿದ್ದೇ ಆತ್ಮಹತ್ಯೆಗೆ ಕಾರಣವೆಂದು ಮೃತಳ ತಂದೆ ಕ್ರಿಸ್ತೋದ್ ಡಿಸೋಜಾ ದೂರು ನೀಡಿದ್ದಾರೆ. ಕದ್ರಾ ಪೊಲೀಸರು ಆರೋಪಿಗಾಗಿ ತಂಡ ರಚಿಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Sun Transit 2026: ಸೂರ್ಯ ಪೂರ್ವಾಷಾಢಾ ನಕ್ಷತ್ರದಿಂದ ಉತ್ತರಾಷಾಢಾಕ್ಕೆ ಸಂಚಾರ; ಈ ರಾಶಿಗೆ ಅದೃಷ್ಟದ ಸುರಿಮಳೆ! – Kannada News | Sun Transit 2026: Ravi Sanchara’s Auspicious and Inauspicious Effects on Zodiac Signs

ಸೂರ್ಯನು ಸದ್ಯ ಧನು ರಾಶಿಯ ಪೂರ್ವಾಷಾಢಾ ನಕ್ಷದಲ್ಲಿ ಇದ್ದು ಉತ್ತರಾಷಾಢಾ ನಕ್ಷತ್ರಕ್ಕೆ ಹೋಗುವನು. ಶುಕ್ರನ ಆಧಿಪತ್ಯದಿಂದ ತನ್ನ ಆಧಿಪತ್ಯಕ್ಕೆ ಹೋಗುವನು. ಉತ್ತಮ ಸ್ಥಿತಿಯಲ್ಲಿ ಇರುವ ಕಾರಣ ಫಲವೂ ಉತ್ತಮವಾಗಿರಲಿದೆ. ಸೂರ್ಯನು ಯಾವೆಲ್ಲ ರಾಶಿಗೆ ಶುಭವನ್ನು ಕೊಡುವನು ಎನ್ನುವುದನ್ನು ನೋಡಬಹುದು. ಮುಖ್ಯವಾಗಿ, ಆತ್ಮವಿಶ್ವಾಸ, ಆರೋಗ್ಯ, ಸರ್ಕಾರಿ ಕಾರ್ಯ, ಸಂಪತ್ತು, ತಂದೆಗೆ ಸಂಧಿಸಿದ ಕಾರ್ಯಗಳು ಅಗುವ ಕಾರಣ ಸೂರ್ಯಾನುಗ್ರಹ ಬೇಕಾಗುತ್ತದೆ. ಗುರುವಿನ ದೃಷ್ಟಿಯೂ ಇನ್ನಷ್ಟು ಪುಷ್ಟಿಯನ್ನು ನೀಡುತ್ತದೆ.

ಮೇಷ ರಾಶಿ:

ಸರ್ಕಾರ ಅಥವಾ ಧಾರ್ಮಿಕ ಕ್ಷೇತ್ರದಲ್ಲಿ ಬೆಳವಣಿಗೆ. ಹಂತ ಹಂತವಾಗಿ ಆದಾಯ ಹೆಚ್ಚಳ. ಅತಿವ್ಯಯ ತಪ್ಪಿಸಿ
ಭೂಮಿ ಅಥವಾ ಮನೆ, ಕಚೇರಿ, ಜಾಗ ಖರೀದಿ ಮಾಡುವಿರಿ. ಆರೋಗ್ಯದಲ್ಲಿ ತೊಡೆ, ಸೊಂಟದ ಬಗ್ಗೆ ಜಾಗ್ರತೆ ಬೇಕು. ವಿದ್ಯಾಭ್ಯಾಸದಲ್ಲಿ ಹೊಸ ವಿಷಯಗಳಿಗೆ ಒತ್ತು, ಪರೀಕ್ಷೆಯಲ್ಲಿ ಯಶಸ್ಸು ಆತ್ಮವಿಶ್ವಾಸದಿಂದ ಧೈರ್ಯ, ನಿರ್ಧಾರದಲ್ಲಿ ಸ್ಪಷ್ಟತೆ ಸಿಗಕಿದೆ.

ಮಿಥುನ ರಾಶಿ:

ಸಂಘಟನೆ, ಮಾರ್ಗದರ್ಶನ, ತರಬೇತಿಯ‌ ಉದ್ಯೋಗದಿಂದ ಲಾಭ. ಹಣಕಾಸಿಗೆ ಸಂಬಂಧಿಸದಂತೆ ಆದಾಯದಲ್ಲಿ ಸ್ಥಿರತೆ. ಭೂಮಿಯ ದಾಖಲೆ ಪರಿಶೀಲನೆ ಅಗತ್ಯ, ಲಾಭವೂ ಸಾಧ್ಯ. ಆರೋಗ್ಯ ರಕ್ಷಣೆಗೆ ವ್ಯಾಯಾಮ, ಆಹಾರ ಸಮತೋಲನವಿರಲಿ.
ವಿದ್ಯಾಭ್ಯಾಸದಲ್ಲಿ ಹಳೆಯ ವಿಚಾರಗಳು ಗಟ್ಟಿಯಾಗಲಿದೆ. ಆತ್ಮವಿಶ್ವಾಸ ಬೆಳವಣಿಗೆಯಾಗಿ ನಿರ್ಧಾರದಲ್ಲಿ ಸ್ಪಷ್ಟತೆ, ಪ್ರಶಂಸೆ ಪ್ರಾಪ್ತಿ.

ಸಿಂಹ ರಾಶಿ:

ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ. ಹಣಕಾಸು ಸ್ಥಿರವಾಗುವ ಕಾರಣ ಮನಸ್ಸೂ ಸ್ಥಿರವಾಗಲಿದೆ. ಕೃಷಿ ಭೂಮಿ ಮತ್ತು ಮನೆ ಖರೀದಿಗೆ ಯಶಸ್ಸಿನ ಹೆಜ್ಜೆ.ಆರೋಗ್ಯದಲ್ಲಿ ಉಷ್ಣತೆ, ಸೊಂಟ, ಹೆಗಲು ನೋವಾಗಲಿದ್ದು ಜಾಗ್ರತೆ ಬೇಕು. ವಿದ್ಯಾಭ್ಯಾಸದಲ್ಲಿ ಪರೀಕ್ಷೆ ಫಲಕಾರಿಯಾಗಲಿದೆ.
ಆತ್ಮವಿಶ್ವಾಸವಿದ್ದರೆ ಸಾಮಾಜಿಕ ಗೌರವದಿಂದ ತೃಪ್ತಿ.

ಧನು ರಾಶಿ:

ಉದ್ಯೋಗದಲ್ಲಿ ನಾಯಕತ್ವ, ಹೊಣೆಗಾರಿಕೆಯನ್ನು ಯಶಸ್ವಿಯಾಗಿ ಪೂರ್ಣಮಾಡುವಿರಿ. ಹಣಕಾಸಿನಲ್ಲಿ ಹಂತ ಹಂತವಾಗಿ ವೃದ್ಧಿಯಿಂದ ನೆಮ್ಮದಿ ನಿಮ್ಮದು. ಚರಾಸ್ತಿಯ ಖರೀದಿಯನ್ನು ಮಾಡಲು ಒತ್ತಡ ಬರಲಿದೆ. ಆರೋಗ್ಯದಲ್ಲಿ ಉಷ್ಣತೆ, ರಕ್ತದೊತ್ತಡ ಅಧಿಕವಗಲಿದ್ದು, ಆಹಾರದ ಬಗ್ಗೆ ಜಾಗ್ರತೆ ಇರಲಿ. ವಿದ್ಯಾಭ್ಯಾಸದಲ್ಲಿ ಅಧ್ಯಯನ ಸುಸಂಪನ್ನವಗಲಿದೆ.
ಆತ್ಮವಿಶ್ವಾಸವಿದ್ದು ಧೈರ್ಯ, ಒತ್ತಡವಿಲ್ಲದೇ ಎಲ್ಲವನ್ನೂ ಸಾಧಿಸುವಿರಿ.

– ಲೋಹಿತ್ ಹೆಬ್ಬಾರ್

Source link

Bengaluru: ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ; ಪ್ರಯಾಣಿಕರು ಬದುಕಿದ್ದೇ ಪವಾಡ! – Kannada News | Auto Accident in Mahalakshmi Layout, Bengaluru Caught on CCTV

ಬೆಂಗಳೂರು, ಜನವರಿ 11: ರಸ್ತೆಗುಂಡಿಗೆ ಇಳಿದ ಪರಿಣಾಮ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿ ಆಟೋ ಪಲ್ಟಿಯಾಗಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​​ನ ನಾಲ್ಕನೇ ಕ್ರಾಸ್​​ನಲ್ಲಿ ನಡೆದಿದೆ. ಪಲ್ಟಿಯಾದ ರಭಸಕ್ಕೆ ಆಟೋದಿಂದ‌ ಪ್ರಯಾಣಿಕ ಹಾರಿ ಬಿದ್ದಿದ್ದರೆ, ಗ್ಲಾಸ್​​ ಒಡೆದು ಚಾಲಕ ಹೊರ ಬಂದಿದ್ದಾನೆ. ನೀರು ಲೀಕೇಜ್ ಆಗಿ ರಸ್ತೆಯಲ್ಲಿ ಗುಂಡಿ ಆಗಿದ್ದರೂ ಅದರ ಸುತ್ತ ಯಾವುದೇ ಬ್ಯಾರಿಕೇಡ್​​ ಹಾಕದಿರುವುದೇ ಅನಾಹುತಕ್ಕೆ ಕಾರಣ ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

In Pics: ಪ್ರಧಾನಿ ಮೋದಿ ಸೋಮನಾಥ ಭೇಟಿ, ಓಂಕಾರ ಪಠಣ, ಆಗಸದಲ್ಲಿ ಡ್ರೋನ್​ಗಳ ಝಲಕ್, ಎಲ್ಲೆಲ್ಲೂ ಶಿವಭಕ್ತಿ ಮಯ – Kannada News | Swabhiman Parv at Somnath: PM Modi Recalls a Thousand Years of Resistance, shares pictures

ಸೋಮನಾಥ ದೇವಾಲಯದ ಇತಿಹಾಸವು ಹೋರಾಟ ಮತ್ತು ವಿಜಯೋತ್ಸವದ ಅದ್ಭುತ ಕಥೆಯಾಗಿದೆ. ಮೊಹಮ್ಮದ್ ಘಜ್ನಿ 1026 ರಲ್ಲಿ ದೇವಾಲಯದ ಮೇಲೆ ಮೊದಲ ಪ್ರಮುಖ ದಾಳಿಯನ್ನು ನಡೆಸಿದ್ದ. ಆ ದಾಳಿ ನಡೆದು ಸಾವಿರ ವರ್ಷಗಳು ಕಳೆದಿವೆ. ಭಾರತ ತನ್ನ ಪರಂಪರೆಯನ್ನು ಎಂದಿಗೂ ಮರೆಯುವುದಿಲ್ಲ. ಸೋಮನಾಥವು ನಮ್ಮ ಅಚಲ ನಂಬಿಕೆಯ ಕೇಂದ್ರವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ವಿದೇಶಿ ಆಕ್ರಮಣಕಾರರು ಇದನ್ನು ಹಲವಾರು ಬಾರಿ ನಾಶಮಾಡಲು ಪ್ರಯತ್ನಿಸಿದ್ದರು, ಆದರೆ ಪ್ರತಿ ಬಾರಿಯೂ ದೇವಾಲಯವು ಇನ್ನೂ ಹೆಚ್ಚಿನ ಭವ್ಯತೆಯಿಂದ ಎದ್ದು ನಿಂತಿತ್ತು. ಸ್ವಾತಂತ್ರ್ಯದ ನಂತರ, ಸರ್ದಾರ್ ವಲ್ಲಭಭಾಯಿ ಪಟೇಲ್ ಅದನ್ನು ಪುನರ್ನಿರ್ಮಿಸಲು ಪ್ರತಿಜ್ಞೆ ಮಾಡಿದ್ದರು. 1951 ರಲ್ಲಿ, ದೇಶದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಇದನ್ನು ಸಾರ್ವಜನಿಕರಿಗೆ ಅರ್ಪಿಸಿದರು. 2026 ಈ ಐತಿಹಾಸಿಕ ಪುನಃಸ್ಥಾಪನೆಯ 75 ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.

Source link

Video: ಮೊದಲ ಬಾರಿಗೆ ಕಡಲ ತೀರಕ್ಕೆ ಭೇಟಿ ನೀಡಿ ಸೌಂದರ್ಯ ಸವಿದ ವೃದ್ಧ ದಂಪತಿ – Kannada News | An elderly couple visited the beach for the first time and enjoyed its beauty.

ನಮ್ಮ ಅಜ್ಜ ಅಜ್ಜಿಯಂದಿರಿಗೆ (grandparents) ಮನೆ ಬಿಟ್ಟರೆ ಪ್ರಪಂಚ ಬೇರೆ ಇಲ್ಲ. ಹೀಗಾಗಿ ಟ್ರಿಪ್, ಟ್ರಕ್ಕಿಂಗ್, ಸುತ್ತಾಟ ಇದ್ಯಾವುದನ್ನು ಎಂಜಾಯ್ ಮಾಡಿದವರೇ ಅಲ್ಲ. ಮಕ್ಕಳು, ಮೊಮ್ಮಕ್ಕಳು ಕರೆದುಕೊಂಡು ಹೋದರಷ್ಟೇ ಅವರ ಹಿಂದೆಯೇ ಪುಟಾಣಿ ಮಕ್ಕಳಂತೆ ಬರುತ್ತಾರೆ. ಇದೀಗ ವೃದ್ಧ ದಂಪತಿ ಮೊದಲ ಬಾರಿಗೆ ಬೀಚ್ (beach) ನೋಡಲು ಬಂದಿದ್ದಾರೆ. ಹೌದು, ಮೊದಲ ಬಾರಿಗೆ ಸಮುದ್ರ ತೀರದಲ್ಲಿ ನಡೆಯುತ್ತಾ, ಅಲೆಗಳನ್ನು ನೋಡುತ್ತಾ ಖುಷಿ ಪಡುತ್ತಿರುವ ವೃದ್ಧ ದಂಪತಿಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.

ದಿವ್ಯಾ ತಾವ್ಡೆ (@shortgirlthingss) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಂಡಿರುವ ಈ ವಿಡಿಯೋ ವೃದ್ಧ ದಂಪತಿ ಮೊದಲ ಬಾರಿಗೆ ಸಮುದ್ರ ತೀರಕ್ಕೆ ಭೇಟಿ ಕೊಟ್ಟಿರುವುದಾಗಿದೆ. ರಜಾದಿನದಂದು ಸಮುದ್ರ ವೀಕ್ಷಿಸಲು ತೆರಳಿದ್ದಲ್ಲ. ದಶಕಗಳಿಂದ ಅವರು ಕಿವಿಗಳಿಂದಷ್ಟೇ ಕೇಳಿದ್ದ ಸಮುದ್ರದ ಅಲೆಗಳ ಸದ್ದನ್ನು ಸ್ವತಃ ನೋಡಲು ತೆರಳಿದ್ದರು. ನನ್ನ ಅಜ್ಜ ಅಜ್ಜಿ ಸಮುದ್ರ ತೀರದಲ್ಲಿ ಈ ರೀತಿ ಕಾಣಿಸಿಕೊಂಡಿದ್ದಾರೆ. ಕೆಲವು ಕ್ಷಣಗಳು ಹೃದಯದಲ್ಲಿ ಹಾಗೆಯೇ ಉಳಿದು ಬಿಡುತ್ತದೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ವೃದ್ಧ ದಂಪತಿ ಕೈಕೈ ಹಿಡಿದು ಸಮುದ್ರದಲ್ಲಿ ನಿಂತುಕೊಂಡಿದ್ದಾರೆ. ತಮ್ಮ ಪಾದಗಳ ಮೇಲೆ ಅಲೆಗಳು ಅಪ್ಪಳಿಸುತ್ತಿದ್ದಂತೆ ಅವರ ಖುಷಿಯೂ ಮುಖದಲ್ಲಿ ವ್ಯಕ್ತವಾಗಿದೆ. ಈ ಹಿರಿಜೀವ ಸಾಂಪ್ರದಾಯಿಕ ಮಹಾರಾಷ್ಟ್ರದ ಉಡುಗೆ ತೊಟ್ಟಿರುವುದನ್ನು ಕಾಣಬಹುದು.

ಇದನ್ನೂ ಓದಿ:ಅಜ್ಜಿಗೆ ವಿಡಿಯೋ ಕಾಲ್ ಮಾಡುವುದನ್ನು ಹೇಳಿಕೊಟ್ಟ ಮೊಮ್ಮಗಳು

ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಹಿರಿ ಜೀವಕ್ಕೆ ಇದಕ್ಕಿಂತ ಖುಷಿ ಇನ್ನೇನಿದೆ ಎಂದಿದ್ದಾರೆ. ಮತ್ತೊಬ್ಬರು, ಈ ವಿಡಿಯೋ ನಿಮ್ಮ ಮುಖದಲ್ಲಿ ನಗು ಮೂಡಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇದಕ್ಕಾಗಿಯೇ ನಾನು ನನ್ನ ಇಂಟರ್‌ನೆಟ್‌ ಬಿಲ್‌ಗಳನ್ನು ಪಾವತಿಸುತ್ತೇನೆ. ನನ್ನ ದಿನವನ್ನು ಭಾವನಾತ್ಮಕ ಮತ್ತು ಸಂತೋಷಕರವಾಗಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:05 am, Sun, 11 January 26

Source link

ಗ್ರೋಕ್ ಅಶ್ಲೀಲ ಅವಾಂತರಗಳು; ತಪ್ಪೊಪ್ಪಿಕೊಂಡು ಭಾರತ ಸರ್ಕಾರದ ಆದೇಶ ಪಾಲಿಸಿದ ಎಕ್ಸ್ – Kannada News | X admits its mistakes over grok generated obscene content, says it will comply with Indian law

ನವದೆಹಲಿ, ಜನವರಿ 11: ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್ ಆದ ಎಕ್ಸ್​ನಲ್ಲಿ ಇತ್ತೀಚೆಗೆ ಎಐ ದುರುಪಯೋಗಪಡಿಸಿಕೊಂಡು ಅಶ್ಲೀಲ ಕಂಟೆಂಟ್ ಅನ್ನು ಸೃಷ್ಟಿಸುತ್ತಿರುವ ಪ್ರಕರಣ ಜಾಗತಿಕವಾಗಿ ಪಿಡುಗಾಗಿ ಪರಿಣಿಸಿದೆ. ಭಾರತ ಸರ್ಕಾರ ಈ ವಿಚಾರದಲ್ಲಿ ಗಂಭೀರವಾಗಿದ್ದು, ಗ್ರೋಕ್ (Grok AI) ಮೂಲಕ ಸೃಷ್ಟಿಯಾಗುತ್ತಿರುವ ಅಶ್ಲೀಲ ಕಂಟೆಂಟ್ ಅನ್ನು ಅಳಿಸಬೇಕೆಂದೂ ಮತ್ತು ಭಾರತೀಯ ಕಾನೂನು ನಿಯಮಗಳಿಗೆ ಬದ್ಧವಾಗಿರಬೇಕೆಂದೂ ಎಕ್ಸ್​ಗೆ ಸರ್ಕಾರ ತಿಳಿಸಿತ್ತು. ಇದರ ಬೆನ್ನಲ್ಲೇ ಎಕ್ಸ್ (ಹಿಂದಿನ ಟ್ವಿಟ್ಟರ್) ತನ್ನಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದು, ಭಾರತೀಯ ಕಾನೂನಿಗೆ ಬದ್ಧವಾಗಿರುವುದಾಗಿ ಭರವಸೆ ನೀಡಿದೆ.

ಸರ್ಕಾರದ ಆದೇಶದಂತೆ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ 3,500 ಕಂಟೆಂಟ್ ಅನ್ನು ಭಾರತದಲ್ಲಿ ಬ್ಲಾಕ್ ಮಾಡಲಾಗಿದೆ. ಈ ಅಶ್ಲೀಲ ಕಂಟೆಂಟ್ ಸೃಷ್ಟಿಗೆ ಕಾರಣವಾದ ಸುಮಾರು 600 ಅಕೌಂಟ್​ಗಳನ್ನು ಡಿಲೀಟ್ ಮಾಡಲಾಗಿದೆ. ಇನ್ಮುಂದೆ ಅಶ್ಲೀಲ ಇಮೇಜ್​ಗಳ ಸೃಷ್ಟಿಗೆ ಅವಕಾಶ ಕೊಡುವುದಿಲ್ಲ ಎಂದೂ ಎಕ್ಸ್ ತಿಳಿಸಿದೆ ಎಂದು ಸರ್ಕಾರದ ಮೂಲಗಳು ಮಾಧ್ಯಮಗಳಿಗೆ ತಿಳಿಸಿರುವುದು ವರದಿಯಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯ ದೃಷ್ಟಿ ಮತ್ತು ನಿಲುವು ಕಂಡು ಅಚ್ಚರಿಗೊಂಡ ಎಐ ಸ್ಟಾರ್ಟಪ್​ಗಳ ಮುಖ್ಯಸ್ಥರು

ಎಕ್ಸ್ ಬಳಕೆದಾರರಿಂದ ಗ್ರೋಕ್ ದುರುಪಯೋಗ

ಗ್ರೋಕ್ ಎಂಬುದು ಎಐ ಚಾಟ್​ಬೋಟ್ ಅಪ್ಲಿಕೇಶನ್. 2023ರಲ್ಲಿ ಇದರ ಬಿಡುಗಡೆಯಾಗಿದ್ದು. ಇದರಲ್ಲಿ ಗ್ರೋಕ್ ಇಮ್ಯಾಜಿನ್ ಎನ್ನುವ ಹೊಸ ಫೀಚರ್ ಪರಿಚಯಿಸಲಾಗಿದೆ. ಇದನ್ನು ಬಳಸಿ ವಯಸ್ಕರ ಅಥವಾ ಅಶ್ಲೀಲ ಕಂಟೆಂಟ್ ಸೃಷ್ಟಿಸಬಹುದು. ಪೇಯ್ಡ್ ಗ್ರಾಹಕರಿಗೆ ಈ ಫೀಚರ್ ಲಭ್ಯ ಇದೆ. ಆದರೆ, ಎಕ್ಸ್ ಬಳಕೆದಾರರಿಗೆ ಈ ಚಾಟ್​ಬೋಟ್ ಅನ್ನು ಉಚಿತವಾಗಿ ಬಳಸಲು ಅವಕಾಶ ಕೊಡಲಾಗಿದೆ. ಎಕ್ಸ್ ಪೋಸ್ಟ್​ಗಳಲ್ಲಿ ಗ್ರೋಕ್​​ಗೆ ಟ್ಯಾಗ್ ಮಾಡಿ ಬೇಕಾದ್ದನ್ನು ಕಮ್ಯಾಂಡ್ ಮಾಡಬಹುದು. ಪೋಸ್ಟ್ ಆಗಿರುವ ಒಬ್ಬ ವ್ಯಕ್ತಿ ಫೋಟೋವನ್ನು ನಗ್ನಗೊಳಿಸುವಂತೆ ಹೇಳಿದರೂ ಅದು ಮಾಡುತ್ತದೆ. ಒಂದು ವಿಚಾರದ ಬಗ್ಗೆ ಮಾಹಿತಿ ಹೆಕ್ಕಿ ತೆಗೆ ಎಂದರೆ ಅದನ್ನೂ ಮಾಡುತ್ತದೆ. ಆದರೆ ಎಕ್ಸ್​ನಲ್ಲಿ ಇತ್ತೀಚೆಗೆ ಜನರು ಅಶ್ಲೀಲ ಕಂಟೆಂಟ್ ಸೃಷ್ಟಿ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ.

ಹಲವು ದೇಶಗಳು ಈ ವಿಚಾರದಲ್ಲಿ ಎಕ್ಸ್ ಮೇಲೆ ಕುಪಿತಗೊಂಡಿವೆ. ಇಂಡೋನೇಷ್ಯಾ ದೇಶ ಗ್ರೋಕ್ ಅನ್ನೇ ಬ್ಲಾಕ್ ಮಾಡಿದೆ. ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಮಲೇಷ್ಯಾ ಮತ್ತು ಅಮೆರಿಕ ದೇಶಗಳು ಗ್ರೋಕ್ ವಿರುದ್ಧ ತನಿಖೆಗೆ ಯೋಜಿಸಿವೆ. ಅಮೆರಿಕದ ಮೂವರು ಸಂಸದರು ಆ್ಯಪ್ ಸ್ಟೋರ್ ಮತ್ತು ಪ್ಲೇಸ್ಟೋರ್​ಗಳಿಂದ ಗ್ರೋಕ್ ಆ್ಯಪ್ ಅನ್ನು ತೆಗೆದುಹಾಕುವಂತೆಯೂ ಆ್ಯಪಲ್ ಮತ್ತು ಗೂಗಲ್​ಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬಿಲ್​ನಲ್ಲಿ ನಕಲಿ ಜಿಎಸ್​ಟಿ ನಂಬರ್ ಕೊಟ್ಟು ಸರ್ಕಾರಕ್ಕೂ, ಗ್ರಾಹಕರಿಗೂ ಯಾಮಾರಿಸುತ್ತಾರೆ; ಅಸಲಿ ಪತ್ತೆ ಹಚ್ಚೋದು ಹೇಗೆ?

ಗ್ರೋಕ್ ಸೃಷ್ಟಿತ ಅಶ್ಲೀಲ ಕಂಟೆಂಟ್​ಗಳನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಜನವರಿ 2ರಂದು ಭಾರತ ಕೂಡ ಎಕ್ಸ್​ಗೆ ಎಚ್ಚರಿಕೆ ನೀಡಿತ್ತು. ಇದೀಗ ಎಕ್ಸ್ ತನ್ನ ತಪ್ಪು ಒಪ್ಪಿಕೊಂಡು, ಗ್ರೋಕ್ ಸೃಷ್ಟಿತ ಅಶ್ಲೀಲ ಕಂಟೆಂಟ್ ಅನ್ನು ಬ್ಲಾಕ್ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಭಾರತ ತಂಡದಿಂದ ಹೊರಬಿದ್ದ ರಿಷಭ್ ಪಂತ್: ಯುವ ಆಟಗಾರ ಆಯ್ಕೆ – Kannada News | Dhruv Jurel replaced Rishabh Pant in Team India’s Squad for ODI series

ಭಾರತ ಏಕದಿನ ತಂಡ : ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).

Source link

ಪತಿ ಸೈಕೋ ವರ್ತನೆ ಆರೋಪ ಕೇಸ್​​ಗೆ ಭರ್ಜರಿ ಟ್ವಿಸ್ಟ್​: ಮಹಿಳೆಯಾಗಿದ್ದು ಮೂರು ಮದುವೆ? – Kannada News | Shocking Twist in Bengaluru Marital Case: Wife Accused of Three Marriages

ಬೆಂಗಳೂರು, ಜನವರಿ 11: ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುವ ಜೊತೆಗೆ ಮನೆಯಲ್ಲಿ ಎಲ್ಲರ ಮುಂದೆಯೇ ಬೆತ್ತಲೆಯಾಗಿ ಪತಿ ಓಡಾಡ್ತಾನೆ. ಅತ್ತೆ ಮಾವನ ಮುಂದೆಯೇ ಬಟ್ಟೆಯಿಲ್ಲದೆ ತಿರುಗಾಡೋದಲ್ಲದೆ, ಹಾಗೆಯೇ ಪ್ಯಾಸೇಜ್​​ಗೆ ಕೂಡ ಹೋಗಿ ಅಕ್ಕ ಪಕ್ಕದವರಿಗೂ ಮುಜುಗರ ಉಂಟುಮಾಡ್ತಿದ್ದಾನೆ ಎಂದು ಪತ್ನಿ ಆರೋಪಿಸಿದ್ದ ಪ್ರಕರಣಕ್ಕೀಗ ಹೊಸ ಟ್ವಿಸ್ಟ್​​ ಸಿಕ್ಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಆರೋಪಿ ಪತಿ ಮಂಜುನಾಥ್​ ಹೆಂಡತಿ ವಿರುದ್ಧವೇ ಬಿಗ್​​ ಬಾಂಬ್​​ ಸಿಡಿಸಿದ್ದಾರೆ.

ತನ್ನ ಮೇಲೆ ಸೈಕೋ ವರ್ತನೆ ಮಾಡಿರುವ ಪತ್ನಿ ವಿರುದ್ಧವೇ ಪತಿ ಮಂಜುನಾಥ್​ ಗಂಭೀರ ಆರೋಪ ಮಾಡಿದ್ದು, ಹಲವು ಮದುವೆಗಳು ಅವಳಿಗಾಗಿವೆ. ಈಗ ನಾಲ್ಕನೇ ಗಂಡ ಬೇಕಂತೆ. ಶೋಕಿಗೆ ಗಂಡಂದಿರ ಹಣ ಬಳಸಿಕೊಂಡು ಹೀಗೆ ಮಾಡ್ತಿದ್ದಾಳೆ ಎಂದು ದೂರಿದ್ದಾರೆ. ಎರಡನೇ ಗಂಡನ ಜೊತೆ ಜಾಲಿ ಟ್ರಿಪ್​​, ಶೋಕಿಗೆ ಗಂಡನ ಹಣ ಚಿನ್ನಾಭರಣ ಬಳಸಿಕೊಂಡಿದ್ದಳು. ಆ ಬಳಿಕ ಮೂರನೇಯವನಾಗಿ ನನಗೆ ಖೆಡ್ಡಾ ತೋಡಿದ್ದಳು. 30 ಲಕ್ಷ ಹಣ, 50 ಗ್ರಾಂ ಚಿನ್ನಾಭರಣ, ಐಪೋನ್, ಐಪ್ಯಾಡ್ ಮತ್ತು ಟ್ಯಾಬ್​​ಗಳನ್ನು ತನ್ನಿಂದ ಪಡೆದಿರೋದಾಗಿ ದೂರುದಾರೆ ಮೇಘಶ್ರೀ ವಿರುದ್ಧವೇ ಮಂಜುನಾಥ್​​ ಆರೋಪಿಸಿದ್ದಾರೆ.

ಇದನ್ನೂ ಓದಿ: ಬೆತ್ತಲೆ ಓಡಾಟ, ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ; ಸೈಕೋ ಪತಿ ಕಾಟಕ್ಕೆ ಪತ್ನಿ ಕಂಗಾಲು

ಮೊದಲ ಹಾಗೂ ಎರಡನೇ ಗಂಡನ ವಿರುದ್ಧ ಮೇಘಶ್ರೀ ಈಗಾಗಲೇ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದಾಳೆ ಎಂದು ಆರೋಪಿಸಿರುವ ಮಂಜುನಾಥ್​​ ತನ್ನ ವಿರುದ್ಧ ಕಂಪ್ಲೇಂಟ್​​ ದಾಖಲಾಗುತ್ತಿದ್ದಂತೆ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಕೇವಲ ದೇವಾಸ್ಥಾನದಲ್ಲಿ ಹಾರ ಬದಲಿಸಿಕೊಂಡು ಗಂಡ ಎಂದು ಆರೋಪಿಸಿ ಆಕೆ ತನ್ನ ವಿರುದ್ಧ ದೂರು ನೀಡಿದ್ದಾಳೆ. ಆಕೆಗೆ 12 ಲಕ್ಷ ಹಣ ನೀಡಿ ಆಕೆಗೆ ಮನೆ ಲೀಸ್​​ಗೆ ಕೊಡಿಸಿದ್ದೆ. ಅವಳ ಅಸಲಿ ಮುಖವಾಡವನ್ನ ಪೊಲೀಸರ ಮುಂದೆ ಬಯಲು ಮಾಡ್ತೀನಿ ಎಂದು ಮಂಜುನಾಥ್​​ ಹೇಳಿದ್ದಾರೆ.

ಮದುವೆಗೆ ಅಂತಾ ದಾಖಲಾತಿ ಕೇಳಿದಾಗ ಆಕೆ ನೀಡಿಲ್ಲ. ಮನೆಯಲ್ಲಿ ಬಟ್ಟೆ ಬದಲಿಸುವಾಗ ಕದ್ದು ಫೋಟೋ ತೆಗೆದಿದ್ದಾಳೆ. ಆಕೆ ಕೆಲಸಕ್ಕೆ ಸೇರಿರೋದು ಕೂಡ ಫೇಕ್​​ ದಾಖಲೆಗಳನ್ನು ನೀಡಿ. ಅಲ್ಲದೆ ರೌಡಿಶೀಟರ್ ಓರ್ವನಿಂದ ತನಗೆ ಧಮ್ಕಿ ಕೂಡ ಹಾಕಿಸಿದ್ದಾಳೆ ಎಂದು ಆರೋಪಿಸಿ ಮಂಜುನಾಥ್​​ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link