ಹೊನ್ನಾವರದ ಬಳಿ ಪಲ್ಟಿಯಾಗಿ ಹೊತ್ತಿ ಉರಿದ ಕಾರು: ಗುರುತು ಸಿಗದಂತೆ ಸುಟ್ಟು ಕರಕಲಾದ ಇಬ್ಬರು! – Kannada News | Honnavar car fire tragedy two burnt alive after car overturns
ಕಾರವಾರ/ಚಾಮರಾಜನಗರ: ಪಲ್ಟಿಯಾಗಿ ಕಾರು ಹೊತ್ತಿ ಉರಿದ ಪರಿಣಾಮ ಇಬ್ಬರು ಸಜೀವ ದಹನವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ನಲ್ಲಿ ನಡೆದಿದೆ. ಕಾರು ಮರಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬಂದಿದ್ದು, ಕಾರಿನ ನಂಬರ್ಪ್ಲೇಟ್ ಕೂಡ ಬೆಂಕಿಯಲ್ಲಿ ಸುಟ್ಟುಹೋಗಿದೆ. ಹೀಗಾಗಿಕಾರು ಮತ್ತು ಕಾರಿನಲ್ಲಿ ಇದ್ದವರ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮೃತರು ಸಿದ್ದಾಪುರ ಮೂಲದವರೆಂದು ಗೊತ್ತಾಗಿದ್ದು, ಘಟನೆ ಬಗ್ಗೆ ಸಂಬಂಧಿಕರಿಗೆ ಮಾಹಿತಿ ರವಾನೆ ಮಾಡಲಾಗಿದೆ. ಘಟನಾ ಸ್ಥಳದಲ್ಲಿ…