Category Archives: Blog

Your blog category

SBI Recruitment 2025: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ; 1146 ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | SBI SCO Recruitment 2026: 1146 Specialist Officer Posts, Apply by Jan 10!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶಾದ್ಯಂತ ತನ್ನ ಶಾಖೆಗಳ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ಪೆಷಲಿಸ್ಟ್ ಕೇಡರ್ ಆಫೀಸರ್ (SCO) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯ ಅಡಿಯಲ್ಲಿ ಒಟ್ಟು 1146 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಒಟ್ಟು ಹುದ್ದೆಗಳಲ್ಲಿ, 582 VP ವೆಲ್ತ್ (SRM) ಹುದ್ದೆಗಳು, 237 AVP ವೆಲ್ತ್ (RM) ಹುದ್ದೆಗಳು ಮತ್ತು 327 ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ ಹುದ್ದೆಗಳಾಗಿವೆ. ಅರ್ಹ ಅಭ್ಯರ್ಥಿಗಳು ಜನವರಿ 10 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಸಂಬಂಧಿತ ಹುದ್ದೆಗಳ ಪ್ರಕಾರ ಸಂಬಂಧಿತ ವಿಭಾಗದಲ್ಲಿ ಪದವಿ ಪಡೆದಿರಬೇಕು. ಅಧಿಸೂಚನೆಯ ಪ್ರಕಾರ ಅವರು ಕೆಲಸದ ಅನುಭವವನ್ನು ಸಹ ಹೊಂದಿರಬೇಕು. ವಿವಿಧ ವಿಭಾಗಗಳಲ್ಲಿನ ಹುದ್ದೆಗಳ ಪ್ರಕಾರ ಅಭ್ಯರ್ಥಿಗಳ ವಯಸ್ಸಿನ ಮಿತಿ ಮೇ 1, 2025 ರಂತೆ 20 ರಿಂದ 42 ವರ್ಷಗಳ ನಡುವೆ ಇರಬೇಕು. ಒಬಿಸಿಗೆ ಮೂರು ವರ್ಷಗಳು, ಎಸ್‌ಸಿ, ಎಸ್‌ಟಿಗೆ ಐದು ವರ್ಷಗಳು ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಹತ್ತು ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇದೆ.

ಇದನ್ನೂ ಓದಿ: ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೆಡಿಟ್ ಆಫೀಸರ್ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಆಸಕ್ತ ಅಭ್ಯರ್ಥಿಗಳು ಜನವರಿ 10 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು ತಲಾ 750 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಅಂತಿಮ ಆಯ್ಕೆಯು ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಶೈಕ್ಷಣಿಕ ಅರ್ಹತೆ ಮತ್ತು ಸಂದರ್ಶನವನ್ನು ಆಧರಿಸಿರುತ್ತದೆ. ಕೆಳಗಿನ ಅಧಿಸೂಚನೆಯಲ್ಲಿ ಇನ್ನಷ್ಟು ವಿವರವಾದ ಮಾಹಿತಿಯನ್ನು ಪಡೆದುಕೊಳ್ಳಿ.

SBIನ  ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hallmark Silver: ಚಿನ್ನದಂತೆ ಬೆಳ್ಳಿಗೂ ಸದ್ಯದಲ್ಲೇ ಬರಲಿದೆ ಹಾಲ್ಮಾರ್ಕ್ ಗುರುತು – Kannada News | Hallmarking the silver may become mandatory soon, says report

ನವದೆಹಲಿ, ಜನವರಿ 7: ಚಿನ್ನದ ಪರಿಶುದ್ಧತೆಯ ಮಟ್ಟ ತೋರಿಸುವ ಹಾಲ್ಮಾರ್ಕ್ ಗುರುತು ವ್ಯವಸ್ಥೆಯನ್ನು ಬೆಳ್ಳಿಗೂ (Silver) ತರಲು ಸರ್ಕಾರ ಚಿಂತನೆ ನಡೆಸಿದೆ. ಗ್ರಾಹಕರಿಗೆ ನೈಜ ಬೆಳ್ಳಿ ವಸ್ತುಗಳು ದೊರಕಲು ಈ ಹಾಲ್ಮಾರ್ಕಿಂಗ್ ವ್ಯವಸ್ಥೆ ನೆರವಾಗಲಿದೆ. ಶೀಘ್ರದಲ್ಲೇ ಬೆಳ್ಳಿಗೂ ಹಾಲ್ಮಾರ್ಕಿಂಗ್ ಮುದ್ರೆ ಹಾಕುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್​ನ (ಬಿಐಎಸ್) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ಮನಿ ಕಂಟ್ರೋಲ್ ವೆಬ್​ಸೈಟ್​ನಲ್ಲಿ ವರದಿಯಾಗಿದೆ.

ಬೆಳ್ಳಿ ಆಭರಣಗಳು ಮತ್ತು ಗಟ್ಟಿಗಳಿಗೆ ಹಾಲ್ಮಾರ್ಕ್ ಗುರುತು ಮಾಡುವ ಕಾರ್ಯ ಈಗಾಗಲೇ ಮಾಡಲಾಗುತ್ತಿದೆ. ಈವರೆಗೂ 20 ಲಕ್ಷಕ್ಕೂ ಅಧಿಕ ಬೆಳ್ಳಿ ವಸ್ತುಗಳಿಗೆ ಹಾಲ್ಮಾರ್ಕ್ ಹಾಕಲಾಗಿದೆ. ಆದರೆ ಹಾಲ್ಮಾರ್ಕ್ ಅನ್ನು ಕಡ್ಡಾಯವಾಗಿ ಹಾಕಬೇಕೆಂಬ ನಿಯಮ ಇನ್ನೂ ಜಾರಿಯಾಗಿಲ್ಲ. ಚಿನ್ನಕ್ಕೆ ಹಾಲ್ಮಾರ್ಕ್ ಕಡ್ಡಾಯ ಮಾಡುವ ಮುಂಚೆಯೂ ಆ ಗುರುತು ಹಾಕಲಾಗುತ್ತಿತ್ತು. ಅದರಂತೆ ಬೆಳ್ಳಿಗೂ ಸದ್ಯದಲ್ಲೇ ಹಾಲ್ಮಾರ್ಕ್ ಹಾಕುವುದನ್ನು ಕಡ್ಡಾಯಪಡಿಸಬಹುದು.

ಇದನ್ನೂ ಓದಿ: ಈ ಎಸ್​ಎಂಬಿಯಲ್ಲಿ ಆಕರ್ಷಕ ಬಡ್ಡಿ ಆಫರ್; ನಿತ್ಯವೂ ಚಕ್ರಬಡ್ಡಿ; ಏನಿದರ ಅನುಕೂಲ?

ಹಾಲ್ಮಾರ್ಕ್ ಹೇಗೆ ಹಾಕಿಸುವುದು?

ಸರ್ಕಾರವೇನಾದರೂ ಬೆಳ್ಳಿಗೆ ಹಾಲ್ಮಾರ್ಕ್ ಕಡ್ಡಾಯಪಡಿಸಿದಂದಿನಿಂದ ಮಾರಾಟವಾಗುವ ಎಲ್ಲಾ ಬೆಳ್ಳಿ ವಸ್ತುಗಳಿಗೆ ಹಾಲ್ಮಾರ್ಕ್ ಇರುತ್ತದೆ. ಈಗಾಗಲೇ ಖರೀದಿಸಿರುವ ಬೆಳ್ಳಿ ಆಭರಣಕ್ಕೆ ಹಾಲ್ಮಾರ್ಕ್ ಇಲ್ಲವೆಂದರೆ ಅದನ್ನು ಹಾಕಿಸಲು ಅವಕಾಶ ಇದೆ.

ನಿಮ್ಮ ಪ್ರದೇಶದ ಸಮೀಪದಲ್ಲಿ ಇರುವ ಬಿಐಎಸ್ ಮಾನ್ಯತೆ ಇರುವ ಅಸ್ಸಾಯಿಂಗ್ ಅಂಡ್ ಹಾಲ್ಮಾರ್ಕಿಂಗ್ ಸೆಂಟರ್​ಗೆ (ಎಎಚ್​ಸಿ) ಹೋಗಿ ಚಿನ್ನದ ರೀತಿಯಲ್ಲಿ ಬೆಳ್ಳಿ ವಸ್ತುಗಳ ಶುದ್ಧತೆ ಪರೀಕ್ಷೆಗೆ ನೀಡಬಹುದು. ಒಂದು ವಸ್ತುವಿಗೆ 45 ರೂ ಶುಲ್ಕ ಇರುತ್ತದೆ. ಅದರ ಶುದ್ಧತೆ ಎಷ್ಟು ಎಂಬುದು ಈ ಪರೀಕ್ಷೆಯಲ್ಲಿ ಗೊತ್ತಾಗುತ್ತದೆ. ಪರೀಕ್ಷೆ ಬಳಿಕ 6 ಅಂಕಿಗಳ ಎಚ್​ಯುಐಡಿ ನಂಬರ್, ಬಿಐಎಸ್ ಲೋಗೋ ಇತ್ಯಾದಿ ಇರುವ ಹಾಲ್ಮಾರ್ಕ್ ಗುರುತನ್ನು ಬೆಳ್ಳಿ ಅಥವಾ ಚಿನ್ನದ ವಸ್ತುವಿನ ಮೇಲೆ ಮುದ್ರಿಸಲಾಗುತ್ತದೆ.

ಇದನ್ನೂ ಓದಿ: 50 ವರ್ಷದಲ್ಲಿ ವಿಶ್ವ ಹೇಗಿರುತ್ತೆ? ಫ್ರಾನ್ಸ್, ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತಾ ಪಾಕಿಸ್ತಾನ? ಭಾರತ ಹೇಗಿದ್ದೀತು?

ಕಳೆದ ಒಂದೆರಡು ವರ್ಷದಿಂದ ಬೆಳ್ಳಿಗೆ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಿದೆ. ಬೆಳ್ಳಿಯನ್ನು ಅನೇಕ ಉದ್ಯಮಗಳಲ್ಲಿ ಬಳಸಲಾಗುತ್ತದೆ. ಆಭರಣಕ್ಕಾಗಿಯೂ ಅದರ ಬಳಕೆ ಆಗುತ್ತದೆ. ಹೀಗಾಗಿ, ಚಿನ್ನಕ್ಕಿಂತ ಬೆಳ್ಳಿ ಬೆಲೆ ಹೆಚ್ಚು ವೇಗದಲ್ಲಿ ಏರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸ್ಥಳೀಯ ಸಂಸ್ಥೆ ಚುನಾವಣೆ: JDS ಜೊತೆ ಮೈತ್ರಿಗೆ ಮಂಡ್ಯದಲ್ಲಿ ಬಿಜೆಪಿಗರ ಅಪಸ್ವರ – Kannada News | Mandya BJP Leaders Oppose Alliance with JDS for Local Body Elections

ಮಂಡ್ಯ, ಜನವರಿ, 07: ಜಿಲ್ಲೆಯಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಬಿಜೆಪಿ ನಾಯಕರು ತೀವ್ರವಾಗಿ ವಿರೋಧಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಕೋರ್ ಕಮಿಟಿ ಸದಸ್ಯರ ಮುಂದೆ ಈ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಮಾಜಿ ಸಂಸದೆ ಸುಮಲತಾ ಅಂಬರೀಷ್ ಮತ್ತು ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ ಹಾಗೂ ಜಿಲ್ಲೆಯ ಇತರ ಪರಾಜಿತ ಅಭ್ಯರ್ಥಿಗಳು ಇದಕ್ಕೆ ದನಿಗೂಡಿಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಬೇಕೆಂದು ಆಗ್ರಹಿಸಲಾಗಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇದ್ದರೂ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ಹಿತಾಸಕ್ತಿ ಕಾಪಾಡಲು ಮೈತ್ರಿ ಸಾಧ್ಯವಿಲ್ಲ ಎಂಬುದು ಅವರ ವಾದವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೇಕಿದ್ರೆ ಆಡಿ, ಇಲ್ಲಾಂದ್ರೆ ಹೊರ ನಡೀರಿ… ಬಾಂಗ್ಲಾಗೆ ಖಡಕ್ ಸೂಚನೆ! – Kannada News | ICC rejects Bangladesh’s T20 World Cup Matches Shifting request

ಟಿ20 ವಿಶ್ವಕಪ್​​ ತಮ್ಮ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಮನವಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿದೆ. ಟಿ20 ವಿಶ್ವಕಪ್ಟೂರ್ನಿ ಆಡುವುದಾದರೆ ಭಾರತದಲ್ಲೇ ಆಡಿ, ಇಲ್ಲದಿದ್ದರೆ ವಾಕ್ ಓವರ್ ನೀಡಿ ಎಂದು ಐಸಿಸಿ ಬಿಸಿಬಿಗೆ ಸೂಚಿಸಿದೆ ಎಂದು ವರದಿಯಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಬಾಂಗ್ಲಾ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಹೊರಗಿಟ್ಟ ಬೆನ್ನಲ್ಲೇ ಬಾಂಗ್ಲಾದೇಶ್ ತಂಡದ ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಐಸಿಸಿಗೆ ಮನವಿ ಮಾಡಿತ್ತು.

ಬಾಂಗ್ಲಾದೇಶ್, ಬಾಂಗ್ಲಾದೇಶ್ ಕ್ರಿಕೆಟ್ ಅಥವಾ ಬಾಂಗ್ಲಾದೇಶ ಕ್ರಿಕೆಟಿಗರ ಅವಮಾನವನ್ನು ನಾವು ಸಹಿಸುವುದಿಲ್ಲ. ಗುಲಾಮಗಿರಿಯ ದಿನಗಳು ಮುಗಿದಿವೆ. ಬಾಂಗ್ಲಾದೇಶದ ಕ್ರಿಕೆಟಿಗನೊಬ್ಬನಿಗೆ ಭಾರತದಲ್ಲಿ ಆಡಲು ಸಾಧ್ಯವಾಗದಿದ್ದರೆ, ಬಾಂಗ್ಲಾದೇಶ್ ತನ್ನ ಇಡೀ ಕ್ರಿಕೆಟ್ ತಂಡವು ವಿಶ್ವಕಪ್ ಆಡಲು ಭಾರತಕ್ಕೆ ಪ್ರಯಾಣಿಸುವುದು ಸುರಕ್ಷಿತವೆಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಟಿ20 ವಿಶ್ವಕಪ್​ನ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಿಸಿಬಿ ಐಸಿಸಿಗೆ ಪತ್ರ ಬರೆದಿದೆ ಬಾಂಗ್ಲಾದೇಶ್​​ನ ಕ್ರೀಡಾ ಸಚಿವಾಲಯದ ಉಸ್ತುವಾರಿ ಸಚಿವ ಆಸಿಫ್ ನಜ್ರುಲ್ ತಿಳಿಸಿದ್ದರು.

ಇದೀಗ ಮನವಿಯನ್ನು ಐಸಿಸಿಗೆ ತಿರಸ್ಕರಿಸಿದೆ. ಟಿ20 ವಿಶ್ವಕಪ್ಗಾಗಿ ಬಾಂಗ್ಲಾದೇಶ್ ತಂಡವು ಭಾರತಕ್ಕೆ ಪ್ರಯಾಣಿಸಬೇಕಾಗುತ್ತದೆ. ಇಲ್ಲದಿದ್ದರೆ ಅಂಕಗಳನ್ನು ಕಳೆದುಕೊಳ್ಳಬೇಕು.ಅಂದರೆ ಪಂದ್ಯದಿಂದ ಹಿಂದೆ ಸರಿಯೊಂದೇ ಆಯ್ಕೆ. ಇದರ ಹೊರತಾಗಿ ಬೇರೆ ಯಾವುದೇ ಆಯ್ಕೆಗಳಿಲ್ಲ ಎಂದು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ಗೆ ಐಸಿಸಿ ತಿಳಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇತ್ತ ಐಸಿಸಿಯ ಸೂಚನೆಯಿಂದಾಗಿ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ಇಕ್ಕಟ್ಟಿಗೆ ಸಿಲುಕಿದೆ. ಏಕೆಂದರೆ ಈಗಾಗಲೇ ಭಾರತದಲ್ಲಿ ಟಿ20 ವಿಶ್ವಕಪ್ ಆಡಲ್ಲ ಎಂದು ಸೂಚಿಸಿರುವ ಬಿಸಿಬಿಗೆ ಐಸಿಸಿ ಕಡೆಯಿಂದ ಖಡಕ್ ಸೂಚನೆ ದೊರೆತಿದೆ. ಹೀಗಾಗಿ ಭಾರತದಲ್ಲಿ ಟಿ20 ವಿಶ್ವಕಪ್ ಆಡಬೇಕು ಇಲ್ಲ ಟೂರ್ನಿಯಿಂದ ಹೊರ ನಡೆಯಬೇಕು.

ಒಂದು ವೇಳೆ ಟೂರ್ನಿಯಿಂದ ಹಿಂದೆ ಸರಿದರೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ವಿರುದ್ಧ ಐಸಿಸಿ ಕ್ರಮ ಕೈ ಗೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅದರಲ್ಲೂ ಬಿಸಿಬಿ ಮೇಲೆ ನಿಷೇಧ ಹೇರಿದರೆ ಮುಂಬರುವ ಐಸಿಸಿ ಏಕದಿನ ವಿಶ್ವಕಪ್​​​ನಲ್ಲಿ ಕಣಕ್ಕಿಳಿಯಲು ಸಾಧ್ಯವಾಗುವುದಿಲ್ಲ. ಇದರಿಂದ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ನ ಆದಾಯಕ್ಕೆ ಹೊಡೆತ ಬೀಳಲಿದೆ.

ಇದನ್ನೂ ಓದಿ: ಐಪಿಎಲ್​ನಿಂದ ಹೊರಬಿದ್ದ ಬೆನ್ನಲ್ಲೇ ಮುಸ್ತಫಿಝುರ್​ ರೆಹಮಾನ್​ಗೆ ಬಿಗ್ ಆಫರ್..!

ಹೀಗಾಗಿ ಸದ್ಯ ಬಾಂಗ್ಲಾದೇಶ್ ಮುಂದಿರುವುದು ಭಾರತದಲ್ಲಿ ಟೂರ್ನಿ ಆಡುವುದೊಂದೇ ಆಯ್ಕೆ. ಹಾಗಾಗಿ ಜನವರಿ 10 ರಂದು ನಡೆಯಲಿರುವ ಐಸಿಸಿ ಸಭೆಯಲ್ಲಿ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ತನ್ನ ನಿಲುವನ್ನು ಸ್ಪಷ್ಟಪಡಿಸಲಿದೆ ಎಂದು ತಿಳಿದು ಬಂದಿದೆ.

Source link

Video: ಅಜ್ಜಿಗೆ ವಿಡಿಯೋ ಕಾಲ್ ಮಾಡುವುದನ್ನು ಹೇಳಿಕೊಟ್ಟ ಮೊಮ್ಮಗಳು – Kannada News | Grandmother learns to make video calls under the guidance of her granddaughter

ಮನೆಯಲ್ಲಿ ಅಜ್ಜ ಅಜ್ಜಿಯಂದಿರಿಂದರೆ (grandparents) ಅವರಿಗೆ ಮೊಬೈಲ್ ಬಳಕೆ ಅಷ್ಟಾಗಿ ತಿಳಿದಿರುವುದಿಲ್ಲ. ಯಾರದರೂ ಕಾಲ್ ಮಾಡಿದರೆ ಮೊಬೈಲ್ ಅನ್ನು ಕೈಯಲ್ಲಿ ಹಿಡಿದುಕೊಂಡು ನಿಂತು ಬಿಡುತ್ತಾರೆ. ಆದರೆ ಇಲ್ಲೊಬ್ಬಳು ಮೊಮ್ಮಗಳು (granddaughter) ತನ್ನ ಅಜ್ಜಿಗೆ ಸ್ಮಾರ್ಟ್ ಪೋನ್‌ನಲ್ಲಿ ವಿಡಿಯೋ ಕಾಲ್ ಮಾಡುವುದು ಹೇಗೆಂದು ಕಲಿಸಿ ಕೊಡುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎನ್ನುವುದನ್ನು ಸಾರಿ ಹೇಳುತ್ತಿದೆ.

ಚಟೋರಿ ಅಮ್ಮ (chatori _ amma) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಇದಾಗಿದೆ. ಕಲಿಕೆಗೆ ಯಾವುದೇ ವಯಸ್ಸಿಲ್ಲ. ಅವಳು ವೀಡಿಯೊ ಕರೆ ಮಾಡುವುದು ಹೇಗೆಂದು ಕಲಿಯುತ್ತಿದ್ದಾಳೆ” ಎಂಬ ಕ್ಲಿಪಿಂಗ್‌ನಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಅಜ್ಜಿಯೊಬ್ಬರು ಮೊಮ್ಮಗಳು ಓಜಸ್ವಿ ಚತುರ್ವೇದಿ ಸಹಾಯದಿಂದ ವಾಟ್ಸಾಪ್‌ನಲ್ಲಿ ವೀಡಿಯೊ ಕರೆ ಮಾಡುವುದು ಹೇಗೆಂದು ಕಲಿಯುತ್ತಿರುವುದನ್ನು ತೋರಿಸಲಾಗಿದೆ. ಅಜ್ಜಿಯೂ ಮೊಮ್ಮಗಳು ನೀಡುವ ಪ್ರತಿ ಸೂಚನೆಯನ್ನು ಎಚ್ಚರಿಕೆಯಿಂದ ಅನುಸರಿಸಿ ಸ್ಕ್ರೀನ್ ಮೇಲೆ ಟ್ಯಾಪ್ ಮಾಡುತ್ತಿರುವುದನ್ನು ಕಾಣಬಹುದು. ಈ ವೇಳೆ ಅಜ್ಜಿಯ ಕೈಗಳು ನಡುಗುತ್ತಿದೆ. ಆದರೆ ಮೊಮ್ಮಗಳು ತನ್ನ ಪ್ರೀತಿಯ ಅಜ್ಜಿಗೆ  ಮಾರ್ಗದರ್ಶನ ನೀಡುತ್ತಾ, ಏನು ಮತ್ತು ಯಾವಾಗ ಒತ್ತಬೇಕೆಂದು ಎಂದು ವಿವರಿಸುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ಅಜ್ಜಿಯ ಮುಂದೆ ಪ್ರತ್ಯಕ್ಷನಾಗಿ ಸರ್ಪ್ರೈಸ್ ನೀಡಿದ ಮೊಮ್ಮಗ

ಈ ವಿಡಿಯೋ ಇದುವರೆಗೆ 1.5 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇಂತಹ ತಾಳ್ಮೆ ಎಲ್ಲರಲ್ಲೂ ಇರಲ್ಲ. ಇಂತಹ ಮೊಮ್ಮಗಳನ್ನು ಪಡೆದ ನೀವೇ ಧನ್ಯ ಎಂದು ಹೇಳಿದ್ದಾರೆ. ಮತ್ತೊಬ್ಬರು, ಶುದ್ಧ ಪ್ರೀತಿ ಇದು ಎಂದಿದ್ದಾರೆ. ಇನ್ನೊಬ್ಬರು, ಅಜ್ಜಿ ಮೊಮ್ಮಗಳ ಬಾಂಧವ್ಯ ಸೊಗಸಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಶ್ಮಿಕಾ ಮಂದಣ್ಣಗೂ ಸಂಜಯ್​​ ದತ್​​ಗೂ ಇದೆ ಸಾಮ್ಯತೆ ಏನದು? – Kannada News | Sanjay Dutt and Rashmika Mandanna has one similarity among them

ರಶ್ಮಿಕಾ ಮಂದಣ್ಣ (Rashmika Mandanna) ಪ್ಯಾನ್ ಇಂಡಿಯಾ ಸ್ಟಾರ್ ನಟಿ, ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುತ್ತಾ ಸಾಗುತ್ತಿದ್ದಾರೆ. ಇದೀಗ ವಿಜಯ್ ದೇವರಕೊಂಡ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಶ್ಮಿಕಾ, ಶೀಘ್ರವೇ ವಿಜಯ್ ದೇವರಕೊಂಡ ಜೊತೆ ಅದ್ಧೂರಿ ವಿವಾಹ ಸಹ ಆಗಲಿದ್ದಾರೆ. ಇನ್ನೊಂದೆಡೆ ಸಂಜಯ್ ದತ್, ಪ್ಯಾನ್ ಇಂಡಿಯಾ ಸ್ಟಾರ್ ವಿಲನ್ ಎನಿಸಿಕೊಂಡಿದ್ದಾರೆ. ಬಾಲಿವುಡ್​ನ ಸ್ಟಾರ್​​ಗಳಲ್ಲಿ ಒಬ್ಬರಾದ ಸಂಜಯ್ ದತ್ ಬಾಲಿವುಡ್​​ನಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲೂ ಬೇಡಿಕೆಯ ಸ್ಟೈಲಿಷ್ ವಿಲನ್. ಸಂಜಯ್ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿದ್ದಿಲ್ಲ. ಆದರೆ ಈ ಇಬ್ಬರಿಗೂ ಒಂದು ಸಾಮ್ಯತೆ ಇದೆ, ಏನದು ಗೊತ್ತೆ?

1000 ಕೋಟಿ ಗಳಿಕೆ ಎನ್ನುವುದು ಭಾರತದ ಸಿನಿಮಾಗಳ ಪಾಲಿಗೆ ಅಲ್ಟಿಮೇಟ್ ಯಶಸ್ಸು. ಯಾವುದೇ ಸಿನಿಮಾ 1000 ಕೋಟಿ ಗಳಿಸಿತೆಂದರೆ ಅದು ದಾಖಲೆ ನಿರ್ಮಿಸಿದಂತೆಯೇ ಸರಿ. ಆದರೆ ಈ 1000 ಕೋಟಿ ಸಿನಿಮಾ ಯಾರ ಖಾತೆಯಲ್ಲಿ ಹೆಚ್ಚಿದೆ ಎಂದರೆ ಸಹಜವಾಗಿ ಪ್ರಭಾಸ್, ಶಾರುಖ್ ಖಾನ್, ಅಲ್ಲು ಅರ್ಜುನ್ ಎಂಬ ಉತ್ತರ ಬರಬಹುದು ಆದರೆ ಅತಿ ಹೆಚ್ಚು ಸಾವಿರ ಕೋಟಿ ಗಳಿಸಿರುವ ಸಿನಿಮಾಗಳಲ್ಲಿ ನಟಿಸಿರುವುದು ರಶ್ಮಿಕಾ ಮಂದಣ್ಣ ಮತ್ತು ಸಂಜಯ್ ದತ್. ಇದೇ ಈ ಇಬ್ಬರ ನಡುವೆ ಇರುವ ಸಾಮ್ಯತೆ.

ರಶ್ಮಿಕಾ ಮಂದಣ್ಣ ಮತ್ತು ಸಂಜಯ್ ದತ್ ಇಬ್ಬರೂ ಸಹ ಸಾವಿರ ಕೋಟಿಗೂ ಹೆಚ್ಚು ಗಳಿಕೆ ಮಾಡಿರುವ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ನಟಿಸಿರುವ ‘ಪುಷ್ಪ 2’ 1000 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ರಣ್​​ಬೀರ್ ಕಪೂರ್ ಜೊತೆಗೆ ನಟಿಸಿದ ‘ಅನಿಮಲ್’ ಸಿನಿಮಾ ಸಹ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 1000 ಕೋಟಿ ಗಳಿಕೆ ಮಾಡಿದೆ. ಬಳಿಕ ವಿಕ್ಕಿ ಕೌಶಲ್ ಜೊತೆಗೆ ನಟಿಸಿದ ‘ಛಾವಾ’ ಸಿನಿಮಾ ಸಹ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 1000 ಕೋಟಿಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡಿದೆ. ಆ ಮೂಲಕ ಮೂರು, 1000 ಕೋಟಿ ಸಿನಿಮಾಗಳು ರಶ್ಮಿಕಾ ಫಿಲ್ಮಾಗ್ರಫಿ ಸೇರಿಕೊಂಡಿವೆ.

ಇದನ್ನೂ ಓದಿ:ಸಂಜಯ್ ದತ್​ಗೆ ಜೈಲಿನಲ್ಲಿ ಕೆಲಸ ಮಾಡಿದ್ದಕ್ಕೆ ಸಿಕ್ಕ ಹಣ ಎಷ್ಟು?

ಇನ್ನು ಸಂಜಯ್ ದತ್ ಅವರ ಮೊದಲ 1000 ಕೋಟಿ ಸಿನಿಮಾ ಕನ್ನಡದ ‘ಕೆಜಿಎಫ್ 2’. ಈ ಸಿನಿಮಾ ವಿಶ್ವಬಾಕ್ಸ್ ಆಫೀಸ್​​ನಲ್ಲಿ 1250 ಕೋಟಿ ಗಳಿಕೆ ಮಾಡಿದೆ. ಬಳಿಕ ಶಾರುಖ್ ಖಾನ್ ನಾಯಕರಾಗಿ ನಟಿಸಿರುವ ‘ಜವಾನ್’ ಸಿನಿಮಾನಲ್ಲೂ ಸಂಜಯ್ ದತ್ ನಟಿಸಿದ್ದು, ಈ ಸಿನಿಮಾ 1100 ಕೋಟಿ ಹಣ ಗಳಿಕೆ ಮಾಡಿತು. ಇದೀಗ ಸಂಜಯ್ ದತ್, ‘ಧುರಂಧರ್’ ಸಿನಿಮಾನಲ್ಲಿ ನಟಿಸಿದ್ದು, ಈ ಸಿನಿಮಾ ಸಹ 1000 ಕೋಟಿ ಕಲೆಕ್ಷನ್ ಗಡಿಯನ್ನು ದಾಟಿದೆ. 1000 ಕೋಟಿ ಗಳಿಸಿದ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ ಶ್ರೇಯ ಸಂಜಯ್ ದತ್ ಮತ್ತು ರಶ್ಮಿಕಾ ಮಂದಣ್ಣ ಅವರ ಬಳಿ ಇದೆ. ಮುಂದೆ ಇದು ಬದಲಾದರೂ ಆಗಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

1.31 ಕೋಟಿ ರೂ. ಸಂಬಳಕ್ಕಿಂತ ಬೆಂಗಳೂರಿನ 45 ಲಕ್ಷ ರೂ. ಹೆಚ್ಚು ಲಾಭದಾಯಕ ಎಂದ ಟೆಕ್ಕಿ, ಯಾಕೆ ಗೊತ್ತಾ? – Kannada News | Bangalore vs. London: Engineer Compares Life Quality and Salary Differences

ಬೆಂಗಳೂರು, ಜ.7: ಬೆಂಗಳೂರು ಹೆಚ್ಚು ಆದಾಯ ನೀಡುವ ನಗರ, ಇಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭ, ಎಲ್ಲದಕ್ಕೂ ಅವಕಾಶ ಇದೆ. ಹಾಗಾಗಿ ಬೇರೆ ಊರಿನ ಜನ ಇಲ್ಲಿ ಕೆಲಸಕ್ಕಾಗಿ ಬರುತ್ತಾರೆ. ಇದೀಗ ಇಲ್ಲೊಬ್ಬರು ಬೆಂಗಳೂರಿನಲ್ಲಿ ಕೆಲಸ ಮಾಡಲು ಹಾಗೂ ಜೀವನಶೈಲಿಗೆ ತುಂಬಾ ಬೆಸ್ಟ್​​ ನಗರ ಎಂದು ಹೇಳಿದ್ದಾರೆ. ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ಲಿಂಕ್ಡ್‌ಇನ್​​ನಲ್ಲಿ ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ (Bangalore vs London) ನಡುವಿನ ಜೀವನಶೈಲಿ, ಆದಾಯ ವ್ಯತ್ಯಾಸದ ಬಗ್ಗೆ ಹೇಳಿದ್ದಾರೆ. ವೈಭವ್ ಅಗರ್ವಾಲ್ ಎಂಬುವವರು ಈ ಪೋಸ್ಟ್​​ನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 45 ಲಕ್ಷ ರೂ. ವಾರ್ಷಿಕ ಪ್ಯಾಕೇಜ್ ಅನ್ನು ಲಂಡನ್‌ನ £ 108,000 (1.31 ಕೋಟಿ ರೂ.)ಸಂಬಳಕ್ಕೆ ಹೋಲಿಸಿದ್ದಾರೆ. ಇದು ನಿಜವಾದ ಜೀವನದ ಗುಣಮಟ್ಟವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದ್ದಾರೆ.

45 ಲಕ್ಷ ರೂ. ಅನ್ನು £108 ಹೋಲಿಸಿದ್ದರೆ ಲಂಡನ್‌ ಪ್ಯಾಕೆಜ್​​​​ ಹೆಚ್ಚು, ಆದರೆ ಇದು ಕಾಗದ ಮೌಲ್ಯ, ಆದರೆ ಜೀವನಶೈಲಿಯಲ್ಲಿ ಬೆಂಗಳೂರು ಉತ್ತಮ, ಶ್ರೀಮಂತರ ಬದುಕಬೇಕಾದರೆ ಇದು ಉತ್ತಮ ಎಂದು ಹೇಳಿದ್ದಾರೆ. ಇಲ್ಲಿ ಜೀವನ ಶೈಲಿಯ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದು ಹೇಳಿದ್ದಾರೆ. ಬೆಂಗಳೂರು ಹಾಗೂ ಲಂಡನ್​​​​ ಜೀವನಶೈಲಿಯನ್ನು ಅದ್ಭುತವಾಗಿ ವಿವರಿಸಿದ್ದಾರೆ. ಬೆಂಗಳೂರಿನ ಖರ್ಚು ವೆಚ್ಚ ಹೇಗೆ? ಇಲ್ಲಿ ವಾರ್ಷಿಕ ಸಂಬಳ 45 ಲಕ್ಷ ರೂ. ಅದರಲ್ಲಿ ನಿವ್ವಳ ಆದಾಯ: 2.7 ಲಕ್ಷ ರೂ/ತಿಂಗಳು. ವಸತಿ: ಗೇಟೆಡ್ ಸೊಸೈಟಿಯಲ್ಲಿ ಐಷಾರಾಮಿ 2BHK (50 ಸಾವಿರ ರೂ.) ಅಡುಗೆಯವರಿಗೆ ( 5 ಸಾವಿರ ರೂ.), ಮನೆ ಕೆಲಸದವರಿಗೆ (3 ಸಾವಿರ ರೂ.) ಪ್ರಯಾಣಕ್ಕಾಗಿ ಉಬರ್, ದಿನಸಿಗಾಗಿ ಬ್ಲಿಂಕಿಟ್, ಇತರ ಖರ್ಚುಗಳು.

ಇಲ್ಲಿದೆ ನೋಡಿ ಪೋಸ್ಟ್​:

ಇನ್ನು ಲಂಡನ್​​ನಲ್ಲಿ ಇದಕ್ಕಿಂತ ವಿಭಿನ್ನವಾಗಿದೆ. ನಿವ್ವಳ ಆದಾಯ: £6,100/ತಿಂಗಳು (40% ತೆರಿಗೆ ಎಲ್ಲ ಸೇರಿ 7,40,839 ರೂ.) 1BHK ಮನೆ (ನಗರವಲ್ಲದ ಪ್ರದೇಶದಲ್ಲಿ 2.4 ಲಕ್ಷ ರೂ.), ಇನ್ನು ಸಾರ್ವಜನಿಕ ವಾಹನಗಳನ್ನು ಬಳಸಿಕೊಳ್ಳುವುದು, ಅಡುಗೆ ನಾವೇ ಮಾಡಿಕೊಳ್ಳಬೇಕು. ಶೌಚಾಲಯ, ಪಾತ್ರೆ ಎಲ್ಲವನ್ನು ನಾವೇ ಸ್ವಚ್ಛ ಮಾಡಬೇಕು. ನೀವು ಐಷಾರಾಮಿ ಮತ್ತು ಸೌಕರ್ಯವನ್ನು ಬಯಸಿದರೆ, ಬೆಂಗಳೂರನ್ನು ಆರಿಸಿ. ನೀವು ಜಾಗತಿಕ ಮಾನ್ಯತೆ, ಶುದ್ಧ ಗಾಳಿ ಮತ್ತು ಹೆಚ್ಚು ಆದಾಯ ಗಳಿಸಬೇಕಾದರೆ ಲಂಡನ್​​​ನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಹಣಕ್ಕಿಂತ ನೆಮ್ಮದಿ ಹೆಚ್ಚು ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದರೆ ಬೆಂಗಳೂರು ಉತ್ತಮ ಎಂದು ಹೇಳಿದ್ದಾರೆ.

ಇದನ್ನೂ ಓದಿ: 2025ರಲ್ಲಿ 47 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರಿನ ದಂಪತಿ

\ಈ ಲಿಂಕ್ಡ್‌ಇನ್​​ ಪೋಸ್ಟ್​​ಗೆ ನೆಟ್ಟಿಗರು ಕೂಡ ಕಮೆಂಟ್​​ ಮಾಡಿದ್ದಾರೆ. ಆದಾಯ ಹೊಂದಿರುವ ಜನರು ಕೇವಲ ಸಂಬಳದ ಕಾರಣದಿಂದಾಗಿ ಹೋಗುವುದಿಲ್ಲ, ಅವರು ಬಹುಸಂಸ್ಕೃತಿಯ ಮಾನ್ಯತೆ, ಕಲಿಕೆ, ಆತ್ಮವಿಶ್ವಾಸ, ಕಲಿಕೆ, ಜೀವನದ ಗುಣಮಟ್ಟ, ಉತ್ತಮ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ, ಶುದ್ಧ ಗಾಳಿ, ನೀರು, ಕಡಿಮೆ ಅಪರಾಧ, ಹೆಚ್ಚು ಮಾನವೀಯ ಮೌಲ್ಯಗಳನ್ನು ತಿಳಿದುಕೊಳ್ಳ ಉದ್ದೇಶದಿಂದಲ್ಲೂ ಹೋಗುಬಹುದು. ನಮ್ಮದೇ ಆದ ಕೋಣೆಯನ್ನು ಸ್ವಚ್ಛಗೊಳಿಸುವುದು, ನಮ್ಮ ಆಹಾರವನ್ನು ಬೇಯಿಸುವುದು ನಮ್ಮ ವೈಯಕ್ತಿಕ ಆಯ್ಕೆಯಾಗಿದೆ ಎಂದು ಮತ್ತೊಬ್ಬರು ಕಮೆಂಟ್​​ ಮಾಡಿದ್ದಾರೆ,

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:17 pm, Wed, 7 January 26

Source link

Gold Rate Today Bangalore: ಚಿನ್ನದ ಬೆಲೆ ಬುಧವಾರವೂ ಏರಿಕೆ; ಬೆಳ್ಳಿಯೂ ಜಿಗಿತ – Kannada News | Gold Price Today on 7th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 7: ಅಮೂಲ್ಯ ಲೋಹಗಳ ಬೆಲೆ ಏರಿಕೆ ಮುಂದುವರಿದಿದೆ. ಚಿನ್ನದ ಬೆಲೆ (Gold Rates) ಗ್ರಾಮ್​ಗೆ 60 ರೂ ಹೆಚ್ಚಿದೆ. ಭಾರತದಲ್ಲಿ ಮಾತ್ರವಲ್ಲ, ಹೆಚ್ಚಿನ ದೇಶಗಳಲ್ಲೂ ಈ ಹಳದಿ ಲೋಹದ ದರ ಏರಿದೆ. ಈ ವಾರದ ಮೊದಲ ಮೂರು ದಿನದಲ್ಲಿ ಚಿನ್ನದ ಬೆಲೆಯಲ್ಲಿ 300 ರೂಗೂ ಅಧಿಕ ಪ್ರಮಾಣದಲ್ಲಿ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಬುಧವಾರ ಭರ್ಜರಿ ಜಿಗಿತ ಕಂಡಿದೆ. ಒಂದೇ ದಿನದಲ್ಲಿ 10 ರೂ ಜಂಪ್ ಆಗಿದೆ. ಮೂರು ದಿನದಲ್ಲಿ ಬೆಳ್ಳಿ ಬೆಲೆ 22 ರೂನಷ್ಟು ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,39,480 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,300 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,300 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 7ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,948 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,785 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,461 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 263 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,948 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,785 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 263 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,785 ರೂ
  • ಚೆನ್ನೈ: 12,870 ರೂ
  • ಮುಂಬೈ: 12,785 ರೂ
  • ದೆಹಲಿ: 12,800 ರೂ
  • ಕೋಲ್ಕತಾ: 12,785 ರೂ
  • ಕೇರಳ: 12,785 ರೂ
  • ಅಹ್ಮದಾಬಾದ್: 12,790 ರೂ
  • ಜೈಪುರ್: 12,800 ರೂ
  • ಲಕ್ನೋ: 12,800 ರೂ
  • ಭುವನೇಶ್ವರ್: 12,785 ರೂ

ಇದನ್ನೂ ಓದಿ: ಈ ಎಸ್​ಎಂಬಿಯಲ್ಲಿ ಆಕರ್ಷಕ ಬಡ್ಡಿ ಆಫರ್; ನಿತ್ಯವೂ ಚಕ್ರಬಡ್ಡಿ; ಏನಿದರ ಅನುಕೂಲ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 569 ರಿಂಗಿಟ್ (12,634 ರುಪಾಯಿ)
  • ದುಬೈ: 498.50 ಡಿರಾಮ್ (12,206 ರುಪಾಯಿ)
  • ಅಮೆರಿಕ: 139 ಡಾಲರ್ (12,502 ರುಪಾಯಿ)
  • ಸಿಂಗಾಪುರ: 178.80 ಸಿಂಗಾಪುರ್ ಡಾಲರ್ (12,554 ರುಪಾಯಿ)
  • ಕತಾರ್: 498.50 ಕತಾರಿ ರಿಯಾಲ್ (12,298 ರೂ)
  • ಸೌದಿ ಅರೇಬಿಯಾ: 507 ಸೌದಿ ರಿಯಾಲ್ (12,159 ರುಪಾಯಿ)
  • ಓಮನ್: 53.05 ಒಮಾನಿ ರಿಯಾಲ್ (12,392 ರುಪಾಯಿ)
  • ಕುವೇತ್: 40.86 ಕುವೇತಿ ದಿನಾರ್ (12,028 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 263 ರೂ
  • ಚೆನ್ನೈ: 283 ರೂ
  • ಮುಂಬೈ: 263 ರೂ
  • ದೆಹಲಿ: 263 ರೂ
  • ಕೋಲ್ಕತಾ: 263 ರೂ
  • ಕೇರಳ: 283 ರೂ
  • ಅಹ್ಮದಾಬಾದ್: 263 ರೂ
  • ಜೈಪುರ್: 263 ರೂ
  • ಲಕ್ನೋ: 263 ರೂ
  • ಭುವನೇಶ್ವರ್: 283 ರೂ
  • ಪುಣೆ: 263

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ಮನಸ್ಸು ಒಳ್ಳೇದು, ನಾನೇ ತಪ್ಪು ತಿಳಿದುಕೊಂಡಿದ್ದೆ; ಮರುಗಿದ ರಘು – Kannada News | Raghu Opinion changed on Gilli Nata Ahead of Bigg Boss Kannada Season 12 Finale

ರಘು ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಆದರೆ, ನಂತರ ಇಬ್ಬರ ಮಧ್ಯೆ ಕಿರಿಕ್ ಆಯಿತು. ಗಿಲ್ಲಿಯ ವರ್ತನೆ ರಘು ಅವರಿಗೆ ಇಷ್ಟ ಆಗಲೇ ಇಲ್ಲ. ಅಂದಿನಿಂದ ಗಿಲ್ಲಿಯನ್ನು ರಘು ದ್ವೇಷಿಸಲು ಆರಂಭಿಸಿದರು. ಆದರೆ, ಈಗ ಅವರು ಏಕಾಏಕಿ ಬದಲಾಗಿದ್ದಾರೆ. ಫಿನಾಲೆ ಸಮೀಪಿಸುವಾಗ ಗಿಲ್ಲಿಯ ನಿಜವಾದ ವ್ಯಕ್ತಿತ್ವ ಗೊತ್ತಾಗಿದೆ. ‘ಗಿಲ್ಲಿ ಮನಸ್ಸು ಒಳ್ಳೆಯದು. ನಾನು ಮೊದಲು ತಪ್ಪು ತಿಳಿದುಕೊಂಡಿದ್ದೆ’ ಎಂದು ರಘು ಅವರು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Hanuman Photo Vastu: ಮನೆಯಲ್ಲಿ ತಪ್ಪಿಯೂ ಈ ಕೋಣೆಯಲ್ಲಿ ಹನುಮಂತನ ಫೋಟೋ ಇಡಬೇಡಿ – Kannada News | Hanuman Photo Vastu: Best Placement and Forms for Home Peace and Prosperity

ಸಾಕಷ್ಟು ಜನರು ತಮ್ಮ ಮನೆಗಳಲ್ಲಿ ಹನುಮಂತನ ಫೋಟೋವನ್ನು ಇಟ್ಟುಕೊಂಡು ಪ್ರತಿ ಮಂಗಳವಾರ ಅಥವಾ ಶನಿವಾರ ಪೂಜಿಸುತ್ತಾರೆ. ಆದಾಗ್ಯೂ, ಹನುಮಂತನ ಹಲವು ರೂಪಗಳಿವೆ. ಉಗ್ರ ರೂಪ, ಪರ್ವತವನ್ನು ಎತ್ತುವವನು, ಐದು ಮುಖಗಳನ್ನು ಹೊಂದಿರುವವನು, ರಾಮನ ಮೇಲಿನ ಭಕ್ತಿ, ಗದೆಯನ್ನು ಹಿಡಿದಿರುವುದು, ಲಂಕೆಯನ್ನು ಸುಡುವುದು ಮತ್ತು ಬಾಲ ಹನುಮಂತ ಸೇರಿದಂತೆ ಹನುಮನ ಹಲವು ರೂಪಗಳಿವೆ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ಹನುಮಂತನು ಸಂಜೀವಿನಿ ಪರ್ವತವನ್ನು ಎತ್ತುತ್ತಿರುವ ಫೋಟೋ ಇರುವುದು ಒಳ್ಳೆಯದು. ಇದು ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಸಂಕೇತಿಸುತ್ತದೆ. ಯಾವುದೇ ಸಂದರ್ಭದಲ್ಲಿ ಮನೆಯೊಳಗೆ ಕೋಪಗೊಂಡ ರೂಪದಲ್ಲಿ ಹನುಮಂತನ ಫೋಟೋ ಇರಬಾರದು. ಇದು ಮನೆಯಲ್ಲಿ ಉದ್ವಿಗ್ನ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಶಾಂತಿಯುತ, ಶಾಂತ ಸ್ಥಿತಿಯಲ್ಲಿರುವ ಹನುಮಂತನ ಫೋಟೋವನ್ನು ಮಾತ್ರ ಮನೆಯಲ್ಲಿ ಇಡಬೇಕು.

ಅದೇ ರೀತಿ, ಮನೆಯಲ್ಲಿ ಹನುಮಂತನ ಫೋಟೋ ಇಡುವಾಗ, ವಾಸ್ತು ನಿಯಮಗಳನ್ನು ಪಾಲಿಸಬೇಕು. ವಿಶೇಷವಾಗಿ, ದಿಕ್ಕಿನ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಹನುಮಂತನ ಚಿತ್ರವು ದಕ್ಷಿಣಕ್ಕೆ ಮುಖ ಮಾಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ದಕ್ಷಿಣದಿಂದ ಬರುವ ನಕಾರಾತ್ಮಕ ಶಕ್ತಿಗಳು ಹನುಮಂತನ ಪ್ರಭಾವದಿಂದ ನಾಶವಾಗುತ್ತವೆ ಮತ್ತು ಮನೆಯಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಅಲ್ಲದೆ, ಯಾವುದೇ ಸಂದರ್ಭದಲ್ಲಿ ಮಲಗುವ ಕೋಣೆಯಲ್ಲಿ ಹನುಮಂತನ ಫೋಟೋ ಇಡಬಾರದು. ಹನುಮಂತನು ಬ್ರಹ್ಮಚಾರಿಯಾಗಿರುವುದರಿಂದ, ಫೋಟೋವನ್ನು ಮಲಗುವ ಕೋಣೆಯಲ್ಲಿ ಇಡುವುದು ಅಶುಭ. ಹನುಮಂತನ ಫೋಟೋವನ್ನು ಲಿವಿಂಗ್ ರೂಮಿನಲ್ಲಿ ಅಥವಾ ಪೂಜಾ ಕೊಠಡಿಯಲ್ಲಿ ಇಡುವುದು ಶುಭ ಎಂದು ವಾಸ್ತು ತಜ್ಞರು ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link