Category Archives: Blog

Your blog category

‘ಪುಷ್ಪ 2’ ದಾಖಲೆ ಅಳಿಸಿ ಹಾಕಿದ ‘ಧುರಂಧರ್’; ರಣವೀರ್ ಸಿಂಗ್ ಈಗ ಬಾಕ್ಸ್ ಆಫೀಸ್ ಸುಲ್ತಾನ – Kannada News | Ranveer Singh starrer Dhurandhar movie beats Pushpa 2 Hindi Collection

ಸೂಪರ್ ಹಿಟ್ ‘ಧುರಂಧರ್’ (Dhurandhar) ಸಿನಿಮಾ ಈಗಲೂ ಅನೇಕ ಕಡೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಿಂದ ರಣವೀರ್ ಸಿಂಗ್ (Ranveer Singh) ಅವರು ಬಾಕ್ಸ್ ಆಫೀಸ್ ಸುಲ್ತಾನ ಎನಿಸಿಕೊಂಡಿದ್ದಾರೆ. ಭಾರತದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ಈ ಚಿತ್ರ ಪಾತ್ರವಾಗಿದೆ. ಇಷ್ಟು ದಿನಗಳ ಕಾಲ ‘ಪುಷ್ಪ 2’ (Pushpa 2) ಸಿನಿಮಾ ಹೊಂದಿದ್ದ ದಾಖಲೆಯನ್ನು ಈಗ ‘ಧುರಂಧರ್’ ಸಿನಿಮಾ ಅಳಿಸಿ ಹಾಕಿದೆ. ಭಾರತದಲ್ಲಿ ಈ ಚಿತ್ರದ ಕಲೆಕ್ಷನ್ 831 ಕೋಟಿ ರೂಪಾಯಿ ಆಗಿದೆ ಎಂದು ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ.

ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ಈ ಬಗ್ಗೆ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ‘ಧುರಂದರ್- ಹೊಸ ಚಕ್ರವರ್ತಿ ಬಂದಿದ್ದಾನೆ. ಹಿಂದಿ ಸಿನಿಮಾದ ಬಿಸ್ನೆಸ್​​ನಲ್ಲಿ ಇದು ಐತಿಹಾಸಿಕ ಕ್ಷಣ. ಪುಷ್ಪ 2 ಚಿತ್ರವನ್ನು ಧುರಂಧರ್ ಹಿಂದಿಕ್ಕಿದೆ. ಇಷ್ಟು ದಿನಗಳ ತನಕ ಪುಷ್ಪ 2 ಚಿತ್ರದ ಹಿಂದಿ ವರ್ಷನ್ ಗಳಿಕೆಯನ್ನು ಮೀರಿಸುವುದನ್ನು ಊಹಿಸುವುದು ಕೂಡ ಕಷ್ಟ ಎಂಬಂತಿತ್ತು’ ಎಂದು ತರಣ್ ಆದರ್ಶ್ ಅವರು ಹೇಳಿದ್ದಾರೆ.

‘ಆದರೆ ದಾಖಲೆಗಳು ಇರುವುದೇ ಮುರಿಯಲು. ಧುರಂಧರ್ ಸಿನಿಮಾ ಅದನ್ನೇ ಮಾಡಿದೆ. ಕೊನೆಗೂ ಪುಷ್ಪ 2 ಚಿತ್ರದ ಹಿಂದಿ ಕಲೆಕ್ಷನ್​ ಅನ್ನು ಧುರಂಧರ್ ಸಿನಿಮಾ ಮೀರಿಸಿದೆ. ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ ಇದಾಗಿದೆ. 33ನೇ ದಿನಕ್ಕೆ ಈ ಸಾಧನೆ ಮಾಡಿದೆ. ಸಿಂಹಾಸನದಲ್ಲಿ ಇರುವ ಹೊಸ ಚಕ್ರವರ್ತಿ ಧುರಂಧರ್’ ಎಂದು ತರಣ್ ಆದರ್ಶ್ ಅವರು ಪೋಸ್ಟ್ ಮಾಡಿದ್ದಾರೆ.

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಹಿಂದಿಗೂ ಡಬ್ ಆಗಿ 830.10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈಗ ‘ಧುರಂಧರ್’ ಸಿನಿಮಾ 33 ದಿನಗಳಲ್ಲಿ 831.40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈಗಲೂ ಅನೇಕ ಕಡೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಬರುವ ವೀಕೆಂಡ್​​ನಲ್ಲಿ ಮತ್ತೆ ಕಲೆಕ್ಷನ್ ಜಾಸ್ತಿ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಧುರಂಧರ್’ ನಿರ್ದೇಶಕ ದೇವರ ಮಗ: ಸಿಕ್ಕಾಪಟ್ಟೆ ಹೊಗಳಿದ ವಿವೇಕ್ ಅಗ್ನಿಹೋತ್ರಿ

ಆದಿತ್ಯ ಧಾರ್ ನಿರ್ದೇಶನ ಮಾಡಿರುವ ‘ಧುರಂಧರ್’ ಸಿನಿಮಾದಲ್ಲಿ ನೈಜ ಘಟನೆ ಆಧಾರಿತ ಕಥೆ ಇದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್​​ಪಾಲ್ ಮುಂತಾದವರು ಅಭಿನಯಿಸಿದ್ದಾರೆ. ಈ ಸಿನಿಮಾದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿದೆ. ಇದೊಂದು ಪ್ರೊಪಗಾಂಡಾ ಸಿನಿಮಾ ಎಂದು ಹಲವರು ಟೀಕಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಟಾಕ್ಸಿಕ್’: ಯಾರ ಬಗ್ಗೆ ಎಚ್ಚರಿಸಿದ್ದರೋ ಅವನೇ ಎದುರು ಬರುತ್ತಿದ್ದಾನೆ – Kannada News | Yash starrer Toxic movie poster to released on January 08

ಟಾಕ್ಸಿಕ್’ (Toxic) ಪ್ರಸ್ತುತ ಭಾರತ ಚಿತ್ರರಂಗದ ಬಲು ನಿರೀಕ್ಷಿತ ಸಿನಿಮಾ. ಯಶ್ ನಟಿಸಿ, ಕತೆ ರಚಿಸಿ, ಸಹ ನಿರ್ಮಾಣ ಮಾಡುತ್ತಿರುವ ‘ಟಾಕ್ಸಿಕ್’ ಸಿನಿಮಾ ಭಾರಿ ದೊಡ್ಡ ಬಜೆಟ್​​ನಲ್ಲಿ ನಿರ್ಮಾಣ ಆಗುತ್ತಿದೆ. ವಿಶೇಷವೆಂದರೆ ಕನ್ನಡ ಸೇರಿದಂತೆ ಇತರೆ ಭಾರತೀಯ ಭಾಷೆಗಳಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ, ಏಕಕಾಲಕ್ಕೆ ಇಂಗ್ಲೀಷ್​​ನಲ್ಲಿಯೂ ನಿರ್ಮಾಣ ಆಗುತ್ತಿದೆ. ಆ ಮೂಲಕ ಅಂತರಾಷ್ಟ್ರೀಯ ಮಾರುಕಟ್ಟೆಗೆ ವಿಸ್ತರಣೆಗೊಳ್ಳುವ ಯೋಜನೆಯನ್ನು ಯಶ್ ಹಾಕಿಕೊಂಡಿದ್ದಾರೆ. ಇದೀಗ ಕಳೆದ ಕೆಲ ದಿನಗಳಿಂದ ‘ಟಾಕ್ಸಿಕ್’ ಸಿನಿಮಾದ ನಟಿಯರ ಪಾತ್ರಗಳ ಪೋಸ್ಟರ್​​ಗಳನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಇದೀಗ ನಾಯಕನ ಪೋಸ್ಟರ್ ಬಿಡುಗಡೆ ಮಾಡುವ ಸಮಯ ಸನ್ನಿಹಿತವಾಗಿದೆ.

ನಾಳೆ (ಜನವರಿ 08) ಯಶ್ ಅವರ ಹುಟ್ಟುಹಬ್ಬವಿದ್ದು ನಾಳೆಯ ದಿನ ‘ಟಾಕ್ಸಿಕ್’ ಸಿನಿಮಾದ ಮುಖ್ಯ ಪಾತ್ರ ಅಂದರೆ ಯಶ್ ಅವರ ಪಾತ್ರದ ಪೋಸ್ಟರ್ ಬಿಡುಗಡೆ ಆಗಲಿದೆ. ಈಗಾಗಲೇ ಯಶ್ ಅವರು ಇರುವ ಟಾಕ್ಸಿಕ್ ಸಿನಿಮಾದ ಕೆಲವು ಪೋಸ್ಟರ್​​ಗಳನ್ನು ಬಿಡುಗಡೆ ಮಾಡಲಾಗಿದೆಯಾದರೂ ಯಾವುದರಲ್ಲೂ ಪೂರ್ಣ ಮುಖ ತೋರಿಸಿಲ್ಲ, ಅಥವಾ ಸಂಪೂರ್ಣ ಲುಕ್ ತೋರಿಸಿಲ್ಲ ಆದರೆ ನಾಳೆ ಬಿಡುಗಡೆ ಆಗುವ ಪೋಸ್ಟರ್​​ನಲ್ಲಿ ಯಶ್ ಅವರ ಲುಕ್ ಜೊತೆಗೆ ಅವರ ಪಾತ್ರದ ಹೆಸರು ಇನ್ನಿತರೆ ಪರಿಚಯಗಳು ಲಭ್ಯ ಆಗುವ ಸಾಧ್ಯತೆ ಇದೆ.

ನಾಳೆ (ಜನವರಿ 08) ಯಶ್ ಅವರ ಪೋಸ್ಟರ್ ಬಿಡುಗಡೆ ಆಗಲಿರುವ ಮಾಹಿತಿಯನ್ನು ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೊಂಡಿದ್ದು, ‘ಯಾರ ಬಗ್ಗೆ ಅವರು ಎಚ್ಚರಿಸಿದ್ದರೊ ಆತನ ಅನಾವರಣ ಆಗಲಿದೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ನಾಳೆ (ಜನವರಿ 08) ಬೆಳಿಗ್ಗೆ 10 ಗಂಟೆ 10 ನಿಮಿಷಕ್ಕೆ ಯಶ್ ಅವರ ಪಾತ್ರದ ಪೋಸ್ಟರ್ ಬಿಡುಗಡೆ ಆಗಲಿದೆ. ಅಭಿಮಾನಿಗಳು ಸಖತ್ ಸ್ಟೈಲಿಷ್ ಮತ್ತು ಮಾಸ್ ಆಗಿರುವ ಪೋಸ್ಟರ್ ಅನ್ನು ನಿರೀಕ್ಷೆ ಮಾಡುತ್ತಿದ್ದಾರೆ.

‘ಟಾಕ್ಸಿಕ್’ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್​​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್​ಸ್ಟರ್ ಮೈಂಡ್ಸ್. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಕ್ಯಾಮೆರಾ ಹಿಡಿರುವುದು ಎರಡು ರಾಷ್ಟ್ರಪ್ರಶಸ್ತಿ ವಿಜೇತ ರಾಜೀವ್ ರವಿ. ಸಿನಿಮಾನಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಬಿಜೆಪಿ ಶಾಸಕ ಹೆಸರಿನಲ್ಲಿ ಯುವತಿಗೆ ಅಸಭ್ಯ ಮೆಸೇಜ್: ಅಸಲಿಗೆ ಆಗಿದ್ದೇನು? – Kannada News | Message to Woman On Jayanagar BJP MLA CK Ramamurthy Name In facebook And instagram, Complaints Filed

ಬೆಂಗಳೂರು, (ಜನವರಿ 07): ಫೇಸ್‌ಬುಕ್, ಇನ್ಸ್ಟಾಗ್ರಾಂ (Facebook, Instagram) ನಕಲಿ ಖಾತೆಯಿಂದ ಮಹಿಳೆಯರಿಗೆ ಅಸಭ್ಯ ಸಂದೇಶ ಹಾಗೂ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದ್ದು, ಈ ಸಂಬಂಧ ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ (CK Ramamurthy) ಸೈಬರ್ ಕ್ರೈಂಗೆ (Cyber Crime) ದೂರು ನೀಡಿದ್ದಾರೆ. ಜಯನಗರ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಫೇಸ್ ಬುಕ್, ಇನ್ಸ್ಟಾ ಖಾತೆ ಸೃಷ್ಟಿಸಿ ಮಾಡಿ ಹಲವರಿಗೆ ಮೆಸೇಜ್ ಕಳುಹಿಸಲಾಗಿದೆ. ಶಾಸಕ ಸಿ.ಕೆ. ರಾಮಮೂರ್ತಿ ಹೆಸರಿನಲ್ಲಿ ಮೆಸೇಜ್ ಹಿನ್ನೆಲೆ ಬೆಂ.ದಕ್ಷಿಣ ಸೈಬರ್ ಪೊಲೀಸ್ ಠಾಣೆಗೆ ಶಾಸಕ ದೂರು ನೀಡಿದ್ದಾರೆ. ಅಲ್ಲದೇ ಮೊಬೈಲ್ ಹ್ಯಾಕ್ ಆಗಿದೆ ಎಂದು ಸಿ.ಕೆ ರಾಮೂರ್ತಿ ಸ್ಪಷ್ಟನೆ ನೀಡಿದ್ದಾರೆ.

ಶಾಸಕರ ಅಧಿಕೃತ ಇನ್ಸ್ಟಾ ಪೇಜ್‌ನಿಂದ ಯುವತಿಗೆ ಹಾಯ್, ಹಲೋ ಗುಡ್ ಮಾರ್ನಿಂಗ್, ಗುಡ್ ಈವ್ನಿಂಗ್, ರೀಲ್ಸ್ ಸೂಪರ್ ಅಂತಾ ಸಂದೇಶ ರವಾನಿಸಲಾಗಿದೆ. ಸದ್ಯ ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆ ಶಾಸಕ ಸಿ.ಕೆ ರಾಮಮೂರ್ತಿ ಸೈಬರ್ ಕ್ರೈಂಗೆ ದೂರು ನೀಡಿ ಹ್ಯಾಕರ್ಸ್‌ ಹಾಗೂ ನಕಲಿ ಖಾತೆ ಸೃಷ್ಟಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.

ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ವಿಶ್ವಕಪ್​ಗೆ 10 ತಂಡಗಳು ಪ್ರಕಟ – Kannada News | 10 Squads Announced For T20 World Cup 2026

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Source link

ಬಸ್ಸಿನ ಸೀಟುಗಳು ಗಾಢ ಬಣ್ಣದಲ್ಲಿರಲು ಕಾರಣ ಇದೇ ನೋಡಿ – Kannada News | These are reason bus seats are dark in colour

ಹೆಚ್ಚಿನವರು ದಿನನಿತ್ಯದ ಓಡಾಟಕ್ಕಾಗಿ ಸ್ವಂತ ವಾಹನವನ್ನು ಬಳಸಿದರೆ, ಇನ್ನು ಕೆಲವರು ಬಸ್ಸಿನಲ್ಲಿ (Bus) ಪ್ರಯಾಣಿಸುತ್ತಾರೆ. ಬಸ್ಸಿನಲ್ಲಿ ಪ್ರಯತ್ನಿಸುವಾಗ ಅನೇಕ ವಿಷಯಗಳನ್ನು ಗಮನಿಸಿದ್ದೀರಬಹುದು. ಅದರಲ್ಲೊಂದು ಈ ಸೀಟುಗಳು ಗಾಢ ಬಣ್ಣದಲ್ಲಿರುವುದು. ಆದರೆ ಗಾಢವಾದ ಬಣ್ಣದಲ್ಲಿ ಇರುವುದು ಯಾಕೆ ಎನ್ನುವ ಬಗ್ಗೆ ಯಾರು ಕೂಡ ಯೋಚನೆಯೂ ಮಾಡಿರಲ್ಲ. ಆದರೆ ನೀವು ಈ ಗಾಢ ಬಣ್ಣದ ಆಯ್ಕೆಯ ಹಿಂದಿನ ಕಾರಣ ತಿಳಿದುಕೊಳ್ಳುವುದು ಬಹಳ ಮುಖ್ಯ.

ಗಾಢ ಬಣ್ಣದ ಆಯ್ಕೆಯ ಹಿಂದಿದೆ ಈ ಕಾರಣ

ಬಸ್ಸಿನಲ್ಲಿರುವ ಗಾಢ ಬಣ್ಣದಲ್ಲಿ ಸೀಟುಗಳನ್ನು ಕೊಳಕು ಮತ್ತು ತಿಳಿ ಕಲೆಗಳನ್ನು ಮರೆಮಾಡಲು ವಿನ್ಯಾಸಗೊಳಿಸಲಾಗಿದೆ. ಕೊಳೆಯನ್ನು ಮರೆಮಾಡುವುದರಿಂದ ಪ್ರಯಾಣಿಕರಿಗೆ ಬಸ್ಸಿನ ಸೀಟುಗಳು ಸ್ವಚ್ಛವಾಗಿರುವಂತೆ ಕಾಣುತ್ತವೆ.

ಇದನ್ನೂ ಓದಿ: ಭಾರತೀಯ ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸಿ ಅನುಭವ ಬಿಚ್ಚಿಟ್ಟ ವಿದೇಶಿಗ

ಅದಲ್ಲದೇ ಈ ಗಾಢ ಬಣ್ಣದ ಬಟ್ಟೆಗಳು ಪ್ಲಾಸ್ಟಿಕ್ ಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತವೆ ಹಾಗೂ ಸಣ್ಣಪುಟ್ಟ ಸವೆತಗಳನ್ನು ಕಾಣದಂತೆ ಮರೆಮಾಡುತ್ತದೆ. ಇದರಿಂದ ಬಸ್ ಮಾಲೀಕರು ಬಸ್ಸಿನ ಸೀಟುಗಳನ್ನು ಬದಲಾಯಿಸುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ಈ ಕಾರಣಗಳಿಂದಲೇ ಗಾಢ ಬಣ್ಣದ ಸೀಟುಗಳನ್ನು ಆಯ್ಕೆ ಮಾಡಲಾಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:50 pm, Wed, 7 January 26

Source link

ಹಣ ಕೊಡಲಿಲ್ಲವೆಂದು ಎರಡೂ ಕಾಲು ಮುರಿದ್ರು; ಪೊಲೀಸ್ ಇನ್ಸ್ಪೆಕ್ಟರ್‌ರಿಂದಲೇ ಮಾರಣಾಂತಿಕ ಹಲ್ಲೆ? – Kannada News | Hassan: Police Inspector Accused of Brutal Assault Over Money Dispute

ಪೊಲೀಸ್ ಇನ್ಸ್ಪೆಕ್ಟರ್‌ರಿಂದಲೇ ಮಾರಣಾಂತಿಕ ಹಲ್ಲೆ?

ಹಾಸನ, ಜನವರಿ 07: ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಮಾರಣಾಂತಿಕ ಹಲ್ಲೆ ಆರೋಪದ ಕೇಳಿ ಬಂದಿದೆ. ಹಾಸನ ತಾಲ್ಲೂಕಿನ ಕಾರ್ಲೆಕೊಪ್ಪಲು ಗ್ರಾಮದ ಶಶಿಧರ್ ಎಂಬವರ ಮೇಲೆ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್ ಅವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

‘ಕಬ್ಬಿಣದ ರಾಡ್‌ನಿಂದ ಹಲ್ಲೆ’

ನಿನ್ನೆ ಸಂಜೆ ಹಾಸನ ಜಿಲ್ಲೆಯ ಗೊರೂರು ಸಮೀಪದ ಉಳುವಾರೆ ಗ್ರಾಮದ ಬಳಿ ಇನ್ನೊವಾ ಕಾರಿನಲ್ಲಿ ಬಂದ ಶಿವಕುಮಾರ್ ಹಾಗೂ ಅವರೊಂದಿಗೆ ಇದ್ದ ಇಬ್ಬರು ತನ್ನನ್ನು ಅಡ್ಡಗಟ್ಟಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಶಶಿಧರ್ ಆರೋಪಿಸಿದ್ದಾರೆ. ಹಲ್ಲೆಯ ವೇಳೆ ಇಬ್ಬರು ತನ್ನನ್ನು ಹಿಡಿದುಕೊಂಡಿದ್ದು, ಶಿವಕುಮಾರ್ ಕಬ್ಬಿಣದ ರಾಡ್‌ನಿಂದ ನಿರಂತರವಾಗಿ ದಾಳಿ ಮಾಡಿದ್ದಾರೆ ಎಂದು ಶಶಿಧರ್ ಹೇಳಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಶಶಿಧರರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎರಡು ಕಾಲುಗಳು ಮುರಿದಿದ್ದು, ಹದಿನೈದು ಹೊಲಿಗೆ ಹಾಕಲಾಗಿದೆ. ಅಲ್ಲದೇ ಬಲ ಕಣ್ಣಿಗೆ ಗಂಭೀರ ಗಾಯವಾಗಿದೆ ಎಂದು  ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಹಣದ ವಿಚಾರಕ್ಕೆ ಕಲಹ

ಹತ್ತು ವರ್ಷಗಳ ಹಿಂದೆ ಶಿವಕುಮಾರ್ ಹಾಸನದಲ್ಲೇ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ವೇಳೆ ತಮ್ಮ ನಡುವೆ ಹಣಕಾಸಿನ ವ್ಯವಹಾರ ನಡೆದಿತ್ತು ಎಂದು ಶಶಿಧರ್ ಹೇಳಿದ್ದಾರೆ. ತನ್ನ ಹೆಸರಿನಲ್ಲಿ ಆಸ್ತಿ ಮಾಡಿಕೊಳ್ಳಲು ಶಿವಕುಮಾರ್ ಐವತ್ತು ಲಕ್ಷ ರೂಪಾಯಿ ನೀಡಿದ್ದು, ಅದರಲ್ಲಿ ಇಪ್ಪತ್ತು ಲಕ್ಷವನ್ನು ವಾಪಸ್ ಕೊಟ್ಟಿದ್ದೇನೆ. ಉಳಿದ ಮೂವತ್ತು ಲಕ್ಷ ಹಣಕ್ಕಾಗಿ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದರು. ಹಣ ನೀಡದ ಕಾರಣಕ್ಕೆ ಈ ರೀತಿ ಹಲ್ಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 2:25 pm, Wed, 7 January 26

Source link

ಫಸಲಿಗೆ ರೋಗದ ಜೊತೆಗೆ ಕೇಂದ್ರದ ಆಮದು ಹೊಡೆತ: ಡಬಲ್​​ ಶಾಕ್​​ಗೆ ಅಡಿಕೆ ಬೆಳೆಗಾರರು ಕಂಗಾಲು – Kannada News | Karnataka Areca Farmers Face Crisis as Crop Declines by More Than 50 percent Due to Multiple Diseases

ಬೆಂಗಳೂರು, ಜನವರಿ 07: ಉಳಿದ ಬೆಳೆಗಳಿಗೆ ಹೋಲಿಸಿದರೆ ಅಡಿಕೆ ಬೆಳೆ ಬೆಳೆಯೋದು ಸುಲಭ. ಒಮ್ಮೆ ಗಿಡ ನೆಟ್ಟರೆ ಮುಗೀತು. ಉಳಿದ ಬೆಳಗಳಷ್ಟು ಪಾಲನೆ ಇವಕ್ಕೆ ಬೇಕಿಲ್ಲ. ಆದಾಯವೂ ಭರ್ಜರಿಯಾಗಿ ಬರುತ್ತೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದ್ರೆ ವಾಸ್ತವದಲ್ಲಿ ಅಡಿಕೆ ಬೆಳಗೆರಾರರ ಗೋಳು ಒಂದೆರಡಲ್ಲ. ಸುಳಿ ರೋಗ, ಕೊಳೆ ರೋಗ ಹೀಗೆ ನಾನಾ ಸಂಕಷ್ಟಗಳನ್ನು ಇವರು ಎದುರಿಸುತ್ತಿದ್ದಾರೆ. ಇವುಗಳ ಪಟ್ಟಿಗೆ ಈಗ ಎಲೆಚುಕ್ಕಿ ರೋಗವೂ ಸೇರ್ಪಡೆಯಾಗಿರೋದು, ಅಡಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವವರ ಆತ್ಮಸ್ಥೈರ್ಯವನ್ನೇ ಕುಗ್ಗಿಸಿದೆ. ಈ ನಡುವೆ ಕೇಂದ್ರ ಸರ್ಕಾರ ವಿದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವ ಕಾರಣ ಬೆಳೆಗೆ ಉತ್ತಮ ಬೆಲೆಯ ನಿರೀಕ್ಷೆಯೂ ಹುಸಿಯಾಗಿದೆ.

ಅಡಿಕೆ ಬೆಳೆಯ ಕಾಡ್ತಿದೆ ಕೊಳೆ ಮತ್ತು ಎಲೆ ಚುಕ್ಕಿ ರೋಗ

ರಾಜ್ಯದಲ್ಲಿ ಹೆಚ್ಚಿರುವ ಕೊಳೆ ಮತ್ತು ಎಲೆ ಚುಕ್ಕಿ ರೋಗಕ್ಕೆ ರೈತರು ಅಕ್ಷರಶಃ ನಲುಗಿದ್ದಾರೆ. ಕೊಳೆ ರೋಗದ ಕಾರಣ ಅಡಿಕೆ ಉದುರಿ ಹಾಳಾದರೆ, ಹಿಡಿಮುಂಡಿ ರೋಗದಿಂದ ಮೇಲ್ಭಾಗ ಸಂಪೂರ್ಣ ಒಣಗಿ ಅಡಿಕೆ ಗಿಡಗಳು ಸಾಯುತ್ತಿವೆ. ಇದು ಸಾಲದಕ್ಕೆ ಎಲೆಚುಕ್ಕಿ ರೋಗವೂ ಗಿಡಗಳನ್ನು ಬಾಧಿಸುತ್ತಿರುವ ಕಾರಣ ಬೆಳೆ ಹಾಗಿರಲಿ, ಅಡಿಕೆ ಗಿಡಗಳನ್ನ ಉಳಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ. ಮಲೆನಾಡು ಭಾಗದಲ್ಲಿ ಒಂದು ಎಕರೆಗೆ 80-90 ಕ್ವಿಂಟಾಲ್ ಬರುತ್ತಿದ್ದ​​ ಫಸಲು ಈಗ 10-30 ಕ್ವಿಂಟಾಲ್​​ಗಳಿಗೆ ಇಳಿಕೆ ಕಂಡಿದೆ. ಅಂದರೆ ಶೇ.50ಕ್ಕಿಂತ ಹೆಚ್ಚು ಇಳುವರಿ ಕಡಿಮೆಯಾಗಿದೆ. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಈ ರೋಗಗಳು ವ್ಯಾಪಿಸುತ್ತಿದ್ದು, ಇದನ್ನು ನಿಯಂತ್ರಣಕ್ಕೆ ತರುವಲ್ಲಿ ಕೃಷಿ ವಿಜ್ಞಾನಿಗಳೂ ವಿಫಲರಾಗಿದ್ದಾರೆ ಎನ್ನುವುದು ರೈತರ ಆರೋಪ.

ಇದನ್ನೂ ಓದಿ:  ಕರ್ನಾಟಕ ಅಡಕೆ ಬೆಳೆಗಾರರ ಸಮಸ್ಯೆ ಪರಿಹರಿಸಲು ಕೇಂದ್ರ ಕೈಗೊಂಡ ಕ್ರಮಗಳೇನು? ಕೇಂದ್ರ ಕೃಷಿ ಸಚಿವ ಹೇಳಿದ್ದೇನು?

ರೈತರ ಆತಂಕ ಹೆಚ್ಚಿಸಿದ ಆಮದು

ದೇಶದಲ್ಲಿ ಉತ್ಪಾದನೆ ಆಗುವ 14 ಲಕ್ಷ ಟನ್​​ ಅಡಿಕೆಯ ಪೈಕಿ ಸುಮಾರು 10 ಲಕ್ಷ ಟನ್​​ ಕರ್ನಾಟಕವೇ ಉತ್ಪಾದಿಸುತ್ತದೆ. ಅಂದ್ರೆ ಶೇ. 80ರಷ್ಟು ಅಡಿಕೆಯ ಬೆಳೆಯುವ ಮೂಲಕ ಇದರಲ್ಲಿ ಸಿಂಹಪಾಲು ರಾಜ್ಯಹೊಂದಿದೆ. ದೇಶಕ್ಕೆ ಅಗತ್ಯವಿರುವಷ್ಟು ಅಡಿಕೆ ನಮ್ಮಲ್ಲೇ ಉತ್ಪಾದನೆ ಆಗುವಾಗ ವಿದೇಶಗಳಿಂದ ಆಮದು ಯಾಕ ಎಂದು ರೈತರು ಪ್ರಶ್ನಿಸಿದ್ದಾರೆ. ಕ್ವಿಂಟಾಲ್​​ಗೆ 64 ರಿಂದ 65 ಸಾವಿರ ರೂಪಾಯಿ ವರೆಗೂ ಹೋಗಿದ್ದ ಅಡಿಕೆ ಬೆಲೆ ಈಗ ಕುಸಿದಿದೆ. ಭೂತಾನ್, ಮಯನ್ಮಾರ್, ಶ್ರೀಲಂಕಾಗಳಿಂದ ಕಳಪೆ ಗುಣಮಟ್ಟದ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿರೋದು, ರಾಜ್ಯದಲ್ಲಿ ಗುಣಮಟ್ಟದ ಅಡಿಕೆ ಬೆಳೆಯುವ ಬೆಳೆಗಾರರಿಗೆ ಅನ್ಯಾಯಮಾಡಿದಂತಾಗಿದೆ. ಕನಅರ್ಟಕ ಸೇರಿ ದೇಶದಲ್ಲಿರುವ ಅಡಿಕೆ ಬೆಳೆಗಾರರಿಗೆ ಇದು ದೊಡ್ಡ ಹೊಡೆತ ಕೊಟ್ಟಿದೆ ಎಂದು ರೈತರು ಅಲವತ್ತುಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:28 pm, Wed, 7 January 26

Source link

ವಿದ್ಯಾರ್ಥಿನಿಯರಿಗೆ ಗುಡ್​​​​ನ್ಯೂಸ್ ಕೊಟ್ಟ ಸರ್ಕಾರ: ಬರಲಿದೆ ಮುಟ್ಟಿನ ಕಪ್‌ – Kannada News | Karnataka Students Get Menstrual Cups: Gov’t Saves 10 Cr, Boosts Health

ಬೆಂಗಳೂರು, ಜ.7: ಶಾಲಾ- ಕಾಲೇಜು ವಿದ್ಯಾರ್ಥಿನಿಯರು ಅನುಭವಿಸುವ ಮುಟ್ಟಿನ ಸಮಸ್ಯೆಯ ಬಗ್ಗೆ ಹೊಸ ಯೋಜನೆಯೊಂದನ್ನು ಸರ್ಕಾರ ಹಾಕಿಕೊಂಡಿದೆ. ಕರ್ನಾಟಕದ ಆಯ್ದ ಜಿಲ್ಲೆಗಳಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮುಟ್ಟಿನ ಕಪ್‌ಗಳನ್ನು ಒದಗಿಸುವ ಪ್ರಾಯೋಗಿಕ ಯೋಜನೆಯ ಯಶಸ್ವಿಯಾಗಿ ಅನುಷ್ಠಾನವಾದ ನಂತರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿದೆ. ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ (KSMSCL) ಮೂಲಕ 61 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ 10,38,912 ಮುಟ್ಟಿನ ಕಪ್‌ಗಳನ್ನು ಒದಗಿಸಲು ಸರ್ಕಾರ ಅನುಮೋದನೆ ಸಿಕ್ಕಿದೆ.

ಈ ಹಿಂದೆ ವಾರ್ಷಿಕವಾಗಿ 2,35,74,084 ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಖರೀದಿಸಲು ಸರ್ಕಾರ 71 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿತ್ತು. ಆದರೆ ಇದೀಗ ಮುಟ್ಟಿನ ಕಪ್‌ ನೀಡುವ ಈ ನಿರ್ಧಾರವು ಸ್ಯಾನಿಟರಿ ನ್ಯಾಪ್ಕಿನ್‌ಗಳ ಮೇಲಿನ ಸರ್ಕಾರದ ವೆಚ್ಚವನ್ನು 10 ಕೋಟಿ ರೂ.ಗಳಷ್ಟು ಕಡಿತಗೊಳಿಸಲಿದೆ ಎಂದು ಹೇಳಿದ್ದಾರೆ. ಮೂರು ತಿಂಗಳು ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಮತ್ತು ಮುಂದಿನ ಶೈಕ್ಷಣಿಕ ವರ್ಷಕ್ಕೆ ಒಂದು ಮುಟ್ಟಿನ ಕಪ್ ಅನ್ನು ಒದಗಿಸುವುದನ್ನು ಮುಂದುವರಿಸುತ್ತದೆ ಎಂದು ಇಲಾಖೆ ಹೇಳಿದೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ ಸಮಸ್ಯೆಗೆ ಹೊಸ ಪ್ಲಾನ್: ಶಾಲಾ ಬಸ್‌ನಲ್ಲಿ ಬಯೋ-ಟಾಯ್ಲೆಟ್ ಸೌಲಭ್ಯ

ಇದಕ್ಕೂ ಮೊದಲು, ಡಿಸೆಂಬರ್ 2025ರಲ್ಲಿ ಶುಚಿ ಕಿಟ್ ಅಡಿಯಲ್ಲಿ ಒದಗಿಸಲಾದ ಸ್ಯಾನಿಟರಿ ನ್ಯಾಪ್ಕಿನ್‌ಗಳ ಕೊರತೆಯಿಂದಾಗಿ ಹದಿಹರೆಯದ ಹುಡುಗಿಯರು ಶಾಲೆಗೆ ಹೋಗುತ್ತಿಲ್ಲ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಸದನದಲ್ಲಿ ಚರ್ಚೆ ನಡೆದಿತ್ತು. ಈ ಬಗ್ಗೆ ಸಚಿವ ಗುಂಡೂರಾವ್ ತಕ್ಷಣವೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಇಲಾಖೆ ಮೂರು ತಿಂಗಳ ಕಾಲ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಒದಗಿಸಲು ಅನುಮೋದನೆ ನೀಡಿದೆ. ಆದರೆ ಮುಟ್ಟಿನ ಕಪ್‌ ಬಗ್ಗೆ ಅನುಮೋದನೆ ಇನ್ನು ಸಿಕ್ಲಿಲ್ಲ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ಏಕೆ ಇಷ್ಟ ಆಗಲ್ಲ? ಕಾರಣ ಕೊಟ್ಟ ರಾಶಿಕಾ ಶೆಟ್ಟಿ – Kannada News | Bigg Boss Kannada 12: Gilli vs Rashika Shetty – Why is Gilli not Rashika’s favorite?

ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಎಲ್ಲರ ಫೇವರಿಟ್ ಹೀರೋ ಎನಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಗಿಲ್ಲಿ ಮಾಡುವ ಹಾಸ್ಯಕ್ಕೆ ದೊಡ್ಡ ಅಭಿಮಾನಿವರ್ಗ ಇದೆ. ಆದರೆ, ಕೆಲವರು ಗಿಲ್ಲಿಯನ್ನು ಇಷ್ಟಪಡುತ್ತಿಲ್ಲ. ಇದರಲ್ಲಿ ಬಿಗ್ ಬಾಸ್ ಸ್ಪರ್ಧಿ ರಾಶಿಕಾ ಕೂಡ ಒಬ್ಬರು. ಅವರು ಏಕೆ ಇಷ್ಟ ಆಗಲ್ಲ ಎಂಬುದಕ್ಕೆ ಕಾರಣ ನೀಡಿದ್ದಾರೆ.

ಮೂರು ತಂಡಗಳನ್ನಾಗಿ ಮಾಡಿಕೊಂಡು ಟಾಸ್ಕ್ ಆಡುವಂತೆ ಬಿಗ್ ಬಾಸ್ ಸೂಚಿಸಿದ್ದರು. ಈ ವೇಳೆ ರಾಶಿಕಾ ಹಾಗೂ ರಘು ಒಂದು ತಂಡವಾಗುವ ಆಲೋಚನೆಯಲ್ಲಿ ಇದ್ದುರು. ಮತ್ತೊಂದು ಸ್ಥಾನಕ್ಕೆ ರಕ್ಷಿತಾನ ಆಯ್ಕೆ ಮಾಡಿಕೊಳ್ಳೋಣ ಎಂದು ರಘು ವಾದಿಸುತ್ತಿದ್ದರು. ಇದು ರಾಶಿಕಾ ಶೆಟ್ಟಿಗೆ ಇಷ್ಟ ಆಗಿಲ್ಲ. ಅವರು ಇದನ್ನು ವಿರೋಧಿಸಿದರು. ಈ ವೇಳೆ ಇಬ್ಬರ ಮಧ್ಯೆ ಕಿರಿಕ್ ಆಗಿದೆ. ಆಗ ಮಧ್ಯ ಪ್ರವೇಶಿಸಿದ ಗಿಲ್ಲಿ ಅವರು ರಾಶಿಕಾ ಜೊತೆ ಜಗಳ ಆಡಿದ್ದಾರೆ. ಇದು ರಾಶಿಕಾಗೆ ಇಷ್ಟ ಆಗಿಲ್ಲ. ಅವರು ಗಿಲ್ಲಿ ಜೊತೆ ಜಗಳವಾಡಿದ್ದಾರೆ.

ಆ ಬಳಿಕ ರಾಶಿಕಾ ಅವರು ಈ ವಿಷಯವನ್ನು ಕಾವ್ಯಾ ಜೊತೆ ಚರ್ಚೆ ಮಾಡಿದ್ದಾರೆ. ‘ಗಿಲ್ಲಿ ವ್ಯಕ್ತಿತ್ವ ಹಾಗೂ ಬುದ್ಧಿ ಬಿಟ್ಟು ಯಾವತ್ತೂ ಬಾಳಲ್ಲ. ಇದಕ್ಕೆ ಗಿಲ್ಲಿ ಇಷ್ಟ ಆಗೋದಿಲ್ಲ’ ಎಂದು ನೇರವಾಗಿ ರಾಶಿಕಾ ಹೇಳಿದರು. ಈ ವಿಷಯ ಚರ್ಚೆ ಆಗುತ್ತಿದೆ. ರಾಶಿಕಾ ಮಾತನ್ನು ಅನೇಕರು ಖಂಡಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಟಾಪ್ 6 ಆಟದಿಂದ ಗಿಲ್ಲಿ ನಟ ಔಟ್; ಎಲ್ಲರಿಗೂ ಶಾಕ್

ಬಿಗ್ ಬಾಸ್ ಮನೆಯಲ್ಲಿರೋ ಗಿಲ್ಲಿ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ಅವರು ಎಲ್ಲರ ಫೇವರಿಟ್ ಸ್ಪರ್ಧಿಯಾಗಿದ್ದಾರೆ. ಜನವರಿ 17 ಹಾಗೂ 18ರಂದು ಫಿನಾಲೆ ನಡೆಯಲಿದೆ. ಯಾರು ಕಪ್ ಎತ್ತುತ್ತಾರೆ ಎಂಬ ವಿಷಯ ಅಂದು ರಿವೀಲ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Viral Video: ಟ್ರ್ಯಾಕ್​ನಲ್ಲಿ ಓಡುವ ಬದಲು ಮಾಲ್ ಒಳಗೆ ಜಾಗಿಂಗ್ ಮಾಡಿದ ಯುವಕ – Kannada News | Man’s Indoor Run Goes Viral as City Grapples With Poor Air Quality in Mumbai

ಮುಂಬೈ, ಜನವರಿ 07: ಯುವಕನೊಬ್ಬ ಟ್ರ್ಯಾಕ್​ನಲ್ಲಿ ಓಡುವ ಬದಲು ಮಾಲ್ ಅನ್ನೇ ಪರ್ಸನಲ್ ಟ್ರ್ಯಾಕ್ ಆಗಿ ಮಾಡಿಕೊಂಡು ಜಾಗಿಂಗ್(Jogging) ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೆಹಲಿಯಷ್ಟಲ್ಲದಿದ್ದರೂ ಮುಂಬೈನಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾಯು ಗುಣಮಟ್ಟ ಸೂಚ್ಯಂಕ(AQI)200ರ ಗಡಿ ದಾಟಿದೆ. ಹೀಗಾಗಿ ಯುವಕನೊಬ್ಬ ಟ್ರ್ಯಾಕ್​ನಲ್ಲಿ ಓಡುವ ಬದಲು ಮಾಲ್​ನಲ್ಲಿ ಜಾಗಿಂಗ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಈ ವೈರಲ್ ಕ್ಲಿಪ್ ಅನ್ನು ಭವಿನ್ ಪಾರ್ಮರ್ ಎಂಬುವವರು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.ಅದರಲ್ಲಿ ಟಿ ಶರ್ಟ್​ ಹಾಗೂ ಟ್ರ್ಯಾಕ್ ಪ್ಯಾಂಟ್ ಮತ್ತು ಸ್ಪೋರ್ಟ್ಸ್​ ಶೂ ಧರಿಸಿರುವ ಯುವಕ ಮಾಲ್ ಅನ್ನು ತನ್ನ ಪರ್ಸನಲ್ ಜಾಗಿಂಗ್ ಟ್ರ್ಯಾಕ್​ ಆಗಿ ಪರಿವರ್ತಿಸಿಕೊಂಡಿರುವುದನ್ನು ಕಾಣಬಹುದು.
ಮಾಲ್​ನಲ್ಲಿ ಜಾಗಿಂಗ್ ಮಾಡಿದರೆ ಒಳಗೆ ಗಾಳಿಯೂ ಶುದ್ಧವಾಗಿರುತ್ತದೆ, ಅಕ್ಕ ಪಕ್ಕದ ಜಾಗ ಕೂಡ ಶುಚಿಯಾಗಿರುತ್ತದೆ.

ಎಸಿ ಇರುವ ಕಾರಣ ಯಾವುದೇ ಸಮಸ್ಯೆ ಇರುವುದಿಲ್ಲ. ಈ ವಿಡಿಯೋವನ್ನು ಜನವರಿ 05ರಂದು ಪೋಸ್ಟ್ ಮಾಡಲಾಗಿದೆ. ಆನ್​ಲೈನ್​ನಲ್ಲಿ ಒಳ್ಳೆಯ ಅಟೆನ್ಷನ್ ಪಡೆದಿದೆ. 2.94 ಲಕ್ಷ ವೀಕ್ಷಣೆಯನ್ನು ಪಡೆದಿದೆ. 6,600 ಲೈಕ್ಸ್​ಗಳನ್ನು ಪಡೆದಿದೆ.

ಮತ್ತಷ್ಟು ಒದಿ: ಜಾಗಿಂಗ್, ವ್ಯಾಯಾಮ ಶುರು ಮಾಡುವ ಮುನ್ನ ಈ 10 ಟೆಸ್ಟ್​ಗಳನ್ನು ಮಾಡಿಸಲು ಮರೆಯದಿರಿ

ಕಳಪೆ ಗಾಳಿಯಿಂದ ರಕ್ಷಿಸಿಕೊಳ್ಳಲು ಇದು ಒಳ್ಳೆಯ ಪ್ಲ್ಯಾನ್ ಎಂದು ನೆಟ್ಟಿಗರು ಖುಷಿ ಪಟ್ಟಿದ್ದಾರೆ. ಜನವರಿ 7 ರ ಮುಂಜಾನೆ ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 332 ಕ್ಕೆ ತಲುಪಿದ್ದು, ಇದನ್ನು ‘ತೀವ್ರ’ ವರ್ಗಕ್ಕೆ ಸೇರಿದೆ. ಮಕ್ಕಳು, ಹಿರಿಯ ನಾಗರಿಕರು, ಉಸಿರಾಟ, ಹೃದಯ ಸಂಬಂಧಿ ಕಾಯಿಲೆಯಿಂದ ನರಳುವಂತಾಗಿದೆ.

ಮೆಟ್ರೋ ರೈಲು ಕಾರಿಡಾರ್‌ಗಳು, ಫ್ಲೈಓವರ್‌ಗಳು, ಕರಾವಳಿ ರಸ್ತೆ ವಿಸ್ತರಣೆಗಳು ಮತ್ತು ರಸ್ತೆ ಅಗಲೀಕರಣ ಕಾಮಗಾರಿಗಳಂತಹ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿಗಳು ಧೂಳಿನ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸಿವೆ. ತ್ವರಿತ ಖಾಸಗಿ ರಿಯಲ್ ಎಸ್ಟೇಟ್ ನಿರ್ಮಾಣವು ಮಾಲಿನ್ಯಕಾರಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ. ವಾಹನಗಳಿಂದ ಹೊರಸೂಸುವ ಹೊಗೆ, ವಿಶೇಷವಾಗಿ ಗರಿಷ್ಠ ಸಂಚಾರ ಸಮಯದಲ್ಲಿ, ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತಲೇ ಇರುತ್ತದೆ, ಇದರಿಂದಾಗಿ ಗಾಳಿಯ ಗುಣಮಟ್ಟ ನಿರ್ವಹಣೆ ನಗರಕ್ಕೆ ದೊಡ್ಡ ಸವಾಲಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:10 am, Wed, 7 January 26

Source link