Category Archives: Blog

Your blog category

ಹೆಣ್ಣು ತಾಯಿಯಾಗುವುದು ದುರ್ಬಲತೆಯೇ? 30 ಲಕ್ಷ ರೂ. ಸಂಬಳದ ಉದ್ಯೋಗ ನಿರಾಕರಿಸಿದ ಬೆಂಗಳೂರಿನ ಮಹಿಳೆ – Kannada News | Workplace Bias: Bengaluru Woman Refuses 30L Salary Post Maternity

ಬೆಂಗಳೂರು, ಜ.7: ಬೆಂಗಳೂರು ಮೂಲದ ಮಹಿಳೆಯೊಬ್ಬರು 30 ಲಕ್ಷ ಸಂಬಳ ಸಿಗುವ ಬ್ಯಾಂಕ್ (Motherhood Discrimination)​​  ಉದ್ಯೋಗವನ್ನು ನಿರಾಕರಿಸಿದ್ದಾರೆ. ಈ ಬಗ್ಗೆ ಸೋಶಿಯಲ್​​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಬಾರಿ ತಾಯಿ ಆಗಿರುವ ಬಗ್ಗೆ ಹಾಗೂ ಆ ತಾಯಿತನದ ಸುಖದ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆಯಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಕೋಮಲ್​​​ ಎಂಬ ಮಹಿಳೆ ಈ ಬಗ್ಗೆ ಹೇಳಿಕೊಂಡಿದ್ದಾರೆ. ತನ್ನ ನಿರ್ಧಾರವು ಹಣದ ಬಗ್ಗೆ ಅಲ್ಲ, ಹೆರಿಗೆಯ ನಂತರ ಕೆಲಸಕ್ಕೆ ಮರಳುವ ಮಹಿಳೆಯರಿಗೆ ಕಚೇರಿಯಲ್ಲಿ ಸಿಗುವ ಬೆಲೆ ಹೇಗಿರುತ್ತದೆ ಎಂಬುದನ್ನು ತಿಳಿಸಿದ್ದಾರೆ. ಮಗು ಪಡೆದ ನಂತರ ಮಹಿಳೆಯರು ದುರ್ಬಲರು ಎಂಬ ಭಾವನೆ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಕೋಮಲ್​​ ಅವರು ಹೇರಿಗೆ ಕಾರಣಕ್ಕೆ ಹಿಂದಿನ ಕೆಲಸವನ್ನು ಐದನೇ ತಿಂಗಳಲ್ಲಿ ತೊರೆದು ನಂತರ, ತಾಯಿತನದ ಸುಖವನ್ನು ಪಡೆದಿದ್ದಾರೆ ಎಂದು ಈ ಪೋಸ್ಟ್​​​ನಲ್ಲಿ ಹೇಳಿದ್ದಾರೆ. ಕೋಮಲ್​​ ಅವರ ಗಂಡ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದರು, ಆದರೆ ಕೋಮಲ್​ ಮುಂಬೈನಲ್ಲಿ ವಾಸವಾಗಿದ್ದರು. ನಂತರ ಅವರು ಕೂಡ ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ಇಲ್ಲಿನ ಬ್ಯಾಂಕ್​​​ವೊಂದು, ಅವರ ಪ್ರೊಫೈಲ್ ಮತ್ತು ಆದ್ಯತೆಯ ಸ್ಥಳ ಎರಡಕ್ಕೂ ಹೊಂದಿಕೆಯಾಗುವ ಕೆಲಸ ನೀಡಲು ಮುಂದಾಗಿತ್ತು. ಅದಕ್ಕಾಗಿ ಅವರಿಗೆ ಸಂದರ್ಶನವನ್ನು ಕೂಡ ಮಾಡಿತ್ತು. ಸಂದರ್ಶನಕ್ಕಾಗಿ 8 ತಿಂಗಳು ತೆಗೆದುಕೊಂಡಿದೆ.

ಉದ್ಯೋಗ ಪಡೆಯುವವರಿಗೆ ಬ್ಯಾಂಕ್​​​ ಯಾವುದೇ ಆಂತರಿಕ ನಿಯಮಗಳನ್ನು ಮಾಡಿರಲಿಲ್ಲ. ಆ ಕಾರಣಕ್ಕೆ ಇವರು ತಾಯಿ ಆಗಿರುವ ಬಗ್ಗೆ ಬ್ಯಾಂಕ್​​​ಗೆ ಹೇಳಿಲ್ಲ. ತಾಯೊಯಾದ ಕೇವಲ 14 ದಿನಗಳ ನಂತರ ಸಂದರ್ಶನವನ್ನು ಅಂತಿಮ ಮಾಡಿ, ಅವರಿಗೆ ಕೆಲಸ ಪಕ್ಕಾ ಮಾಡಿತ್ತು. ಆದರೆ ಈ ವೇಳೆ ಕೋಮಲ್​​ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಬ್ಯಾಂಕ್​​ಗೆ ತಿಳಿಯಿತು. ಅದಕ್ಕೆ ಕೋಮಲ್​​ ಕೂಡ ನಾನು ಇತ್ತೀಚೆಗೆ ತಾಯಿಯಾಗಿರುವುದು ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಬ್ಯಾಂಕ್​​ ಇದಕ್ಕೆ ಒಪ್ಪಿಲ್ಲ. ಆದರೆ ಇದರ ಹೊರತಾಗಿಯೂ, ಪ್ರಕ್ರಿಯೆ ಮುಂದುವರೆದಿದೆ ಎಂದು ಕೋಮಲ್ ಹೇಳಿದ್ದಾರೆ. ಮುಖಾಮುಖಿ ಸಂದರ್ಶನದಲ್ಲಿ, ಸಂದರ್ಶಕರು, 3 ತಿಂಗಳ ಮಗು ಇರಬೇಕಾದರೆ ಇಷ್ಟು ಬೇಗ ಯಾಕೆ ಮತ್ತೆ ಕೆಲಸ ಬಂದಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ವೈಯಕ್ತಿಕ ಕಾರಣ ನೀಡಿದ್ದಾರೆ.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

“ಸಂಸ್ಥೆಯು ನನ್ನ ಪ್ರೊಫೈಲ್ ಅನ್ನು ಇಷ್ಟಪಟ್ಟಿದ್ದರೂ, ತಾಯಿ ಎಂದು ತಿಳಿದ ನಂತರ ಆಫರ್​​ನ್ನು ಕೂಡ ಕಡಿಮೆ ಮಾಡಲಾಗಿತ್ತು. 30 ಲಕ್ಷ ರೂ. ಆಫರ್ ಅನ್ನು ಸ್ವೀಕರಿಸಿ ಅಥವಾ ಆಫರ್ ಹಿಂಪಡೆಯಬಹುದು ಎಂದು ಹೇಳಿದ್ದಾರೆ. ಇಲ್ಲಿ ಹಣದ ಮೌಲ್ಯಕ್ಕಿಂತ, ಕೆಲಸ, ಸಾಮರ್ಥ್ಯ, ಭಾವನೆಗಳಿಗೆ ಬೆಲೆ ಇಲ್ಲ. ಮಗುವಿದೆ ಎಂಬ ಕಾರಣಕ್ಕೆ ನನ್ನನ್ನು ದುರ್ಬಲ ಎಂದು ನಿರ್ಧರಿಸಿದ್ದಾರೆ. ಹಾಗಾಗಿ ನಾನು ಅಲ್ಲಿಂದ ಹೊರನಡೆದೆ, ಅವರ ಈ ಪ್ರಸ್ತಾಪವನ್ನು ತಿರಸ್ಕರಿಸುವುದು ನನ್ನ ಜೀವನದ ಉತ್ತಮ ನಿರ್ಧಾರವಾಗಿತ್ತು. ನಾನು ಈ ಬಗ್ಗೆ ಯಾವುದೇ ವಿಷಾದ ವ್ಯಕ್ತಪಡಿಸುವುದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ ಸಮಸ್ಯೆಗೆ ಹೊಸ ಪ್ಲಾನ್: ಶಾಲಾ ಬಸ್‌ನಲ್ಲಿ ಬಯೋ-ಟಾಯ್ಲೆಟ್ ಸೌಲಭ್ಯ

ಈ ಪೋಸ್ಟ್​​ಗೆ​ ಹಲವು ನೆಟ್ಟಿಗರು ಕಮೆಂಟ್​​ ಮಾಡಿದ್ದಾರೆ. ಒಳ್ಳೆಯ ನಿರ್ಧಾರ ಮಾತೃತ್ವ ರಜೆಯ ನಂತರ ಕೆಲಸಕ್ಕೆ ಮರಳುವವರ ದುಃಸ್ಥಿತಿ ಮತ್ತೊಂದು ವೃತ್ತಾಂತ ಎಂದು ಒಬ್ಬರು ಕಮೆಂಟ್​​ ಮಾಡಿದ್ದಾರೆ. ಇದು ಕಂಪನಿಯ ಸಮಸ್ಯೆ ಮಾತ್ರವಲ್ಲ, ಹಲವು ಕಡೆ ಇಂತಹ ಘಟನೆಗಳು ನಡೆದಿದೆ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ. ವೇತನ, ಮನ್ನಣೆ ಮತ್ತು ನಿರೀಕ್ಷೆಗಳ ವಿಷಯದಲ್ಲಿ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಮಹಿಳೆಯರ ಕಡೆಗೆ ಪಕ್ಷಪಾತ ಹೊಂದಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

GDP growth: ಇಂಡಿಯಾ ರೇಟಿಂಗ್ಸ್ ಪ್ರಕಾರ ಮುಂದಿನ ವರ್ಷ ಭಾರತದ ಜಿಡಿಪಿ ಬೆಳವಣಿಗೆ ಶೇ. 6.9 – Kannada News | India Ratings Agency estimates GDP growth to be 6.9pc in 27fy

ನವದೆಹಲಿ, ಜನವರಿ 7: ಈ ಹಣಕಾಸು ವರ್ಷದಲ್ಲಿ ಜಾಗತಿಕ ಅನಿಶ್ಚಿತ ವಾತಾವರಣ ನಡುವೆಯೂ ಮೊದಲ ಆರು ತಿಂಗಳಲ್ಲಿ ಭಾರತ ಶೇ. 8ರಷ್ಟು ಆರ್ಥಿಕ ಅಭಿವೃದ್ಧಿ ದಾಖಲಿಸಿದೆ. ಈ ವರ್ಷ ನಿರೀಕ್ಷೆಮೀರಿದ ಪ್ರಮಾಣದಲ್ಲಿ ಜಿಡಿಪಿ ಹಿಗ್ಗುವ ಸಾಧ್ಯತೆ ಹೆಚ್ಚಿದೆ. ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಏಜೆನ್ಸಿ (India Ratings) ಪ್ರಕಾರ ಈ ವರ್ಷ ಭಾರತ ಶೇ. 7.4ರಷ್ಟು ಬೆಳವಣಿಗೆ ಹೊಂದಬಹುದು. ಆದರೆ, ಮುಂದಿನ ವರ್ಷ ಹೇಗೆ? ಈ ಏಜೆನ್ಸಿ ಪ್ರಕಾರ ಮುಂದಿನ ವರ್ಷದಲ್ಲಿ (2026-27) ಭಾರತದ ಜಿಡಿಪಿ (GDP) ಶೇ. 6.9 ದರವನ್ನು ದಾಖಲಿಸಬಹುದು ಎಂದು ಅಂದಾಜಿಸಲಾಗಿದೆ.

ಸರ್ಕಾರ ಜಾರಿಗೆ ತಂದ ವಿವಿಧ ಸುಧಾರಣೆಗಳಿಂದ ಬೆಳವಣಿಗೆಗೆ ಪುಷ್ಟಿ

ಇಂಡಿಯಾ ರೇಟಿಂಗ್ ಏಜೆನ್ಸಿ ಅಭಿಪ್ರಾಯದ ಪ್ರಕಾರ ಕಳೆದ ಬಜೆಟ್​ನಲ್ಲಿ (2025-26) ತೆಗೆದುಕೊಳ್ಳಲಾದ ಕ್ರಮಗಳು, ಜಿಎಸ್​ಟಿ ದರ ಇಳಿಕೆ, ವಿವಿಧ ದೇಶಗಳ ನಡುವೆ ಮಾಡಿಕೊಳ್ಳಲಾದ ಮುಕ್ತ ವ್ಯಾಪಾರ ಒಪ್ಪಂದ, ಇವೆಲ್ಲವೂ ಅಭಿವೃದ್ಧಿಗೆ ಪುಷ್ಟಿ ಕೊಡಬಲ್ಲುವು. ಅಮೆರಿಕದ ಟ್ಯಾರಿಫ್ ಸೇರಿದಂತೆ ಬಾಹ್ಯ ಒತ್ತಡಗಳನ್ನು ಮೆಟ್ಟಿ ನಿಂತು ಬೆಳವಣಿಗೆ ಹೊಂದಲು ಈ ಸುಧಾರಣಾ ಕ್ರಮಗಳು ನೆರವಾಗಬಹುದು ಎಂದು ಈ ಏಜೆನ್ಸಿ ನಿರೀಕ್ಷಿಸಿದೆ.

ಇದನ್ನೂ ಓದಿ: 50 ವರ್ಷದಲ್ಲಿ ವಿಶ್ವ ಹೇಗಿರುತ್ತೆ? ಫ್ರಾನ್ಸ್, ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತಾ ಪಾಕಿಸ್ತಾನ? ಭಾರತ ಹೇಗಿದ್ದೀತು?

ಭಾರತದ ಬೆಳವಣಿಗೆಯ ಹಾದಿಯಲ್ಲಿರುವ ತೊಡಕುಗಳ್ಯಾವುವು?

ಇಂಡಿಯಾ ರೇಟಿಂಗ್ ಅಂಡ್ ರಿಸರ್ಚ್ ಸಂಸ್ಥೆಯು ಭಾರತದ ಬೆಳವಣಿಗೆಯ ಸಾಧಕಗಳ ಜೊತೆಗೆ ಬಾಧಕವಾಗಿರುವ ಅಂಶಗಳನ್ನೂ ತೋರಿಸಿ ಎಚ್ಚರಿಸಿದೆ. 2026ರ ಮಧ್ಯದಲ್ಲಿ ಎಲ್ ನಿನೋ ಪರಿಣಾಮ ಭಾರತದ ಮೇಲಾಗಬಹುದು. ಅಂದರೆ ಮುಂಗಾರು ಋತು ಮೊಟಕುಗೊಳ್ಳಬಹುದು. ಏಜೆನ್ಸಿ ಪ್ರಸ್ತಾಪಿಸಿರುವ ಪ್ರಮುಖ ತೊಡಕುಗಳಲ್ಲಿ ಇದೂ ಒಂದು.

ಇದರ ಜೊತೆಗೆ, ದುರ್ಬಲ ಕರೆನ್ಸಿ, ಬಂಡವಾಳ ಹೊರಹೋಗುವಿಕೆ, ಜಾಗತಿಕ ವ್ಯಾಪಾರ ವಹಿವಾಟು ಕುಂಠಿತಗೊಳ್ಳುವುದು, ತೆರಿಗೆ ಸಂಗ್ರಹ ಕಡಿಮೆಗೊಳ್ಳುವುದು ಇತ್ಯಾದಿ ಸವಾಲುಗಳು ಭಾರತದ ಮುಂದಿವೆ.

ಇದನ್ನೂ ಓದಿ: ಭಾರತದ ಜಿಡಿಪಿ ಲೆಕ್ಕಾಚಾರಕ್ಕೆ ಬೇಸ್ ಇಯರ್ 2011-12 ಅಲ್ಲ, 2022-23; ಇದರಿಂದೇನು ಪ್ರಯೋಜನ?

ಹಾಗೆಯೇ, 2025-26 ಅನ್ನು ಜಿಡಿಪಿ ಲೆಕ್ಕಾಚಾರಕ್ಕೆ ಆಧಾರ ವರ್ಷವಾಗಿ ಇಡಲಾಗುತ್ತದೆ. ಈ ವರ್ಷ ಪ್ರಬಲ ಬೆಳವಣಿಗೆ ದರ ದಾಖಲಾಗುತ್ತದೆ. ಇದರಿಂದಾಗಿ ಮುಂದಿನ ವರ್ಷ (2026-27) ಪ್ರಬಲ ಬೇಸ್ ಎಫೆಕ್ಟ್​ನಿಂದ ಜಿಡಿಪಿ ದರಕ್ಕೆ ಹಿನ್ನಡೆಯಾಗಲೂ ಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನೀವು ಸೀಫುಡ್ ಪ್ರೀಯರೆ? ಇಷ್ಟಪಟ್ಟು ತಿನ್ನುವ ಆಹಾರದಲ್ಲಿರಬಹುದು ಮೈಕ್ರೋಪ್ಲಾಸ್ಟಿಕ್‌! ಹೇಗೆ ತಡೆಯುವುದು ತಿಳಿದುಕೊಳ್ಳಿ – Kannada News | Microplastics & Food Safety: Tips to Reduce Exposure

ಇತ್ತೀಚಿನ ದಿನಗಳಲ್ಲಿ ಜನರು ಪ್ಲಾಸ್ಟಿಕ್ ಕವರ್‌ ಮತ್ತು ಬಾಟಲಿಗಳ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಆದರೆ ಇದರಿಂದ ಪ್ಲಾಸ್ಟಿಕ್ ಮುಕ್ತ ಭಾರತ ನಮ್ಮದಾಗುತ್ತದೆ ಎಂಬುದು ತಪ್ಪು ಕಲ್ಪನೆ. ಮೈಕ್ರೋಪ್ಲಾಸ್ಟಿಕ್‌ ಕಣಗಳು ಈಗಾಗಲೇ ಎಲ್ಲೆಡೆ ಹರಡಿದ್ದು, ನಾವು ದಿನನಿತ್ಯ ಬಳಸುವ ಉಪ್ಪಿನಿಂದ ಹಿಡಿದು ಕುಡಿಯುವ ನೀರಿನವರೆಗೆ ಈ ಮೈಕ್ರೋಪ್ಲಾಸ್ಟಿಕ್‌ಗಳು (Microplastics) ನಮ್ಮ ಆಹಾರವನ್ನು ಪ್ರವೇಶಿಸಿದೆ. ಹಾಗಾಗಿ ಈ ಬಗ್ಗೆ ಇನ್ನಾದರೂ ಗಮನಹರಿಸಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾದರೆ ಮೈಕ್ರೋಪ್ಲಾಸ್ಟಿಕ್‌ ಕಣಗಳು ಹೇಗೆ ನಮ್ಮ ಆಹಾರದಲ್ಲಿ ಸೇರಿಕೊಳ್ಳುತ್ತದೆ, ಅವುಗಳಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ, ಅದನ್ನು ಹೇಗೆ ತಡೆಯಬಹುದು ಎಂಬುದರ ಬಗ್ಗೆ ತಿಳಿಯುವುದು ಬಹಳ ಅನಿವಾರ್ಯ. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಮೈಕ್ರೋಪ್ಲಾಸ್ಟಿಕ್‌ಗಳು ಎಂದರೇನು?

5 ಮಿಲಿಮೀಟರ್‌ಗಿಂತ ಚಿಕ್ಕದಾದ ಪ್ಲಾಸ್ಟಿಕ್ ಕಣಗಳನ್ನು ಮೈಕ್ರೋಪ್ಲಾಸ್ಟಿಕ್‌ ಎನ್ನಲಾಗುತ್ತದೆ. ಕೈಗಾರಿಕಾ ತ್ಯಾಜ್ಯ, ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲಿ ಆಹಾರ ಸಂಗ್ರಹಣೆ, ಜಲ ಮಾಲಿನ್ಯ ಹೀಗೆ ನಾನಾ ರೀತಿಯ ಕಾರಣಗಳಿಂದ, ಅವು ನಮ್ಮ ಆಹಾರ ಸರಪಳಿಯನ್ನು ಪ್ರವೇಶಿಸುತ್ತಿವೆ. ಪ್ಯಾಕ್ ಮಾಡಿದ ಆಹಾರಗಳಲ್ಲಿ ಅವುಗಳ ಸಾಂದ್ರತೆ ಹೆಚ್ಚಾಗಿದ್ದು ಇವುಗಳನ್ನು ತಡೆಗಟ್ಟಲು, ಆಹಾರ ಶೇಖರಣಾ ವಿಧಾನಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ.

ಸಮುದ್ರಾಹಾರ ಅಥವಾ ಸೀಫುಡ್

ಮೀನು ಮತ್ತು ಸೀಗಡಿ ತಿನ್ನಲು ಇಷ್ಟಪಡುವವರು ಸೀಗಡಿಗಳಂತಹ ಚಿಪ್ಪುಗಳನ್ನು ಹೊಂದಿರುವ ಜೀವಿಗಳು ಸಮುದ್ರದಿಂದ ಹೆಚ್ಚು ಮೈಕ್ರೋಪ್ಲಾಸ್ಟಿಕ್‌ಗಳನ್ನು ಹೀರಿಕೊಳ್ಳುತ್ತವೆ. ಹಾಗಾಗಿ ಚಿಕ್ಕ ಮಿನುಗಳಿಗಿಂತ ದೊಡ್ಡ ಮೀನುಗಳ ಆಯ್ಕೆ ಮಾಡುವುದು ಸುರಕ್ಷಿತವಾಗಿದೆ.

ಉಪ್ಪಿನಲ್ಲಿ ಪ್ಲಾಸ್ಟಿಕ್

ಅಡುಗೆಯಲ್ಲಿ ಬಳಸುವ ಸಮುದ್ರದ ಉಪ್ಪಿನಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಹೊಂದಿರುತ್ತದೆ. ಹಾಗಾಗಿ ಅಯೋಡಿಕರಿಸಿದ ಉಪ್ಪು ಅಥವಾ ಸಾಕಷ್ಟು ಶುದ್ಧೀಕರಿಸಿದ ಉಪ್ಪನ್ನು ಆಯ್ಕೆ ಮಾಡುವುದು ಒಳ್ಳೆಯದು. ಸಾಧ್ಯವಾದಷ್ಟು ನೈಸರ್ಗಿಕ ವಿಧಾನಗಳನ್ನು ಬಳಸಿ ತಯಾರಿಸಿದ ಉಪ್ಪಿಗೆ ಆದ್ಯತೆ ನೀಡುವುದು ಸೂಕ್ತ.

ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದನ್ನು ತಪ್ಪಿಸಿ

ಅನೇಕರು ಪ್ರಯಾಣ ಮಾಡುವಾಗ ಪ್ಲಾಸ್ಟಿಕ್ ಬಾಟಲಿಗಳನ್ನು ಖರೀದಿಸಿ ಅದರಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯುತ್ತಾರೆ. ಆದರೆ ಆ ಬಾಟಲಿಗಳಿಂದ ಮೈಕ್ರೋಪ್ಲಾಸ್ಟಿಕ್‌ಗಳು ನೀರಿನಲ್ಲಿ ಬೆರೆತುಹೋಗಿರುತ್ತದೆ. ಬದಲಾಗಿ, ಕಾರ್ಬನ್ ಅಥವಾ ಯುಎಫ್ ಫಿಲ್ಟರ್‌ಗಳ ಮೂಲಕ ಫಿಲ್ಟರ್ ಮಾಡಿದ ನೀರನ್ನು ಕುಡಿಯುವುದು ಉತ್ತಮ. ಈ ನೀರನ್ನು ಸಂಗ್ರಹಿಸಲು, ಪ್ಲಾಸ್ಟಿಕ್ ಬಾಟಲಿಗಳ ಬದಲಿಗೆ ಸ್ಟೇನ್‌ಲೆಸ್ ಸ್ಟೀಲ್ ಬಾಟಲಿಗಳು ಅಥವಾ ಮಣ್ಣಿನ ಮಡಕೆಗಳನ್ನು ಬಳಸಬಹುದು.

ಇದನ್ನೂ ಓದಿ: ಪಾದಗಳು ತಣ್ಣಗಾಗುವುದಕ್ಕೆ ಮಧುಮೇಹ ಕಾರಣವೇ? ಇಲ್ಲಿದೆ ಸ್ಪಷ್ಟ ಮಾಹಿತಿ

ಜೇನುತುಪ್ಪ – ಟೀ ಬ್ಯಾಗ್‌ಗಳು

ಜೇನುತುಪ್ಪವನ್ನು ಶುದ್ಧೀಕರಿಸಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಪ್ಯಾಕ್ ಮಾಡುವ ಪ್ರಕ್ರಿಯೆಯಲ್ಲಿ, ಪ್ಲಾಸ್ಟಿಕ್ ಕಣಗಳು ಅದರೊಳಗೆ ಹೋಗುತ್ತವೆ. ಆದ್ದರಿಂದ, ಗಾಜಿನ ಜಾಡಿಗಳಲ್ಲಿ ಲಭ್ಯವಿರುವ ಜೇನುತುಪ್ಪವನ್ನು ಮಾತ್ರ ಬಳಸಬೇಕು. ಅದೇ ರೀತಿ, ಟೀ ಬ್ಯಾಗ್‌ಗಳ ಬಗ್ಗೆಯೂ ಬಹಳ ಜಾಗರೂಕರಾಗಿರಬೇಕು. ನೈಲಾನ್‌ನಿಂದ ಮಾಡಿದ ಟೀ ಬ್ಯಾಗ್‌ಗಳು ಬಿಸಿ ನೀರಿನಲ್ಲಿ ಮುಳುಗಿಸಿದಾಗ ಮೈಕ್ರೋಪ್ಲಾಸ್ಟಿಕ್‌ಗಳನ್ನು ಬಿಡುಗಡೆ ಮಾಡುತ್ತವೆ. ಅದಕ್ಕಾಗಿಯೇ ಚಹಾ ಪುಡಿಗಳನ್ನು ನೇರವಾಗಿ ನೀರಿನಲ್ಲಿ ಕುದಿಸುವುದು ಆರೋಗ್ಯಕರ.

ಮೈಕ್ರೋಪ್ಲಾಸ್ಟಿಕ್‌ಗಳು ನಮ್ಮ ಕಣ್ಣಿಗೆ ಕಾಣದೆ ಆರೋಗ್ಯ ಹಾಳು ಮಾಡುತ್ತದೆ. ಹಾಗಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ, ನಾವು ಇಂತಹ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ತಪ್ಪಿಸಬಹುದು. ಜೊತೆಗೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಗಾಜು ಅಥವಾ ಸ್ಟೀಲ್ ಪಾತ್ರೆಗಳನ್ನು ಬಳಸುವುದರಿಂದ ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಶ್ವಿನಿ ಮೇಲೆ ಸಿಟ್ಟು ತೀರಿಸಿಕೊಂಡ ರಾಶಿಕಾ: ಮಾತುಗಳಿಗೆ ಮಿತಿ ಇಲ್ಲ – Kannada News | Bigg Boss Kannada 12: Rashika fight with Ashwini Gowda

ಬಿಗ್​​ಬಾಸ್ ಕನ್ನಡ 12 (Bigg Boss Kannada) ಇನ್ನೇನು ಮುಗಿಯುವ ಹಂತ ಬಂದಿದೆ. ಮೊದಲೆಲ್ಲ ಗೆಳೆಯರಾಗಿದ್ದವರು ಕೆಲವರು ಈಗ ದುಷ್ಮನ್​​ಗಳಾಗಿದ್ದಾರೆ. ಅಶ್ವಿನಿ ಅವರಂತೂ ಆಗಾಗ್ಗೆ ತಮ್ಮ ಅವತಾರ ಬದಲಾವಣೆ ಮಾಡಿಕೊಳ್ಳುತ್ತಲೇ ಇದ್ದಾರೆ. ಕೆಲವು ದಿನಗಳ ಹಿಂದಷ್ಟೆ ಅಶ್ವಿನಿ ಹಾಗೂ ರಾಶಿಕಾ ಒಳ್ಳೆಯ ಗೆಳೆಯರಂತಿದ್ದರು ಆದರೆ ಕಳೆದ ಕೆಲ ದಿನಗಳಿಂದ ಇದು ಬದಲಾಗಿದೆ. ಇಬ್ಬರೂ ಕೂಡ ಪರಸ್ಪರ ಹಾವು-ಮುಂಗುಸಿ ಆಗಿದ್ದಾರೆ. ಈಗ ಟಾಸ್ಕ್ ಒಂದರಲ್ಲಿ ರಾಶಿಕಾ, ಅಶ್ವಿನಿ ವಿರುದ್ಧ ಚೆನ್ನಾಗಿ ಸಿಟ್ಟು ತೀರಿಸಿಕೊಂಡಿದ್ದಾರೆ. ಮಾತ್ರವಲ್ಲದೆ ವಿಷಕಾರಿ ಮಾತುಗಳಿಂದ ಚುಚ್ಚಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮದುವೆ ಬಳಿಕ ಸಮಂತಾ ಮೊದಲ ಸಿನಿಮಾ; ಹೇಗಿದೆ ನೋಡಿ ಫಸ್ಟ್ ಲುಕ್ – Kannada News | Samantha Ruth Prabhu starrer Maa Inti Bangaram movie first look poster released

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ನಿರ್ದೇಶಕ ರಾಜ್ ನಿಡಿಮೋರು ಜೊತೆ ಇತ್ತೀಚೆಗೆ ಮದುವೆ ಆದರು. ಈಗ ಮತ್ತೆ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಮಂತಾ ನಟನೆಯ ಹೊಸ ಸಿನಿಮಾ ‘ಮಾ ಇಂಟಿ ಬಂಗಾರಂ’ (Maa Inti Bangaram) ಬಿಡುಗಡೆಗೆ ಸಜ್ಜಾಗುತ್ತಿದೆ. 2 ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದ ಸಮಂತಾ (Samantha) ಅವರು ಈ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಅದನ್ನು ನೋಡಿದ ಬಳಿಕ ಅಭಿಮಾನಿಗಳಿಗೆ ಈ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ರುತ್ ಪ್ರಭು ಅವರು ‘ಮಾ ಇಂಟಿ ಬಂಗಾರಂ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ಸಮಂತಾ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ತಮ್ಮದೇ ಪ್ರೊಡಕ್ಷನ್ ಹೌಸ್ ಮೂಲಕ ಬಂಡವಾಳ ಹೂಡಿದ್ದಾರೆ. ಆ ಕಾರಣದಿಂದಲೂ ಅವರಿಗೆ ಈ ಸಿನಿಮಾ ತುಂಬಾ ಸ್ಪೆಷಲ್ ಆಗಿದೆ.

‘ಮಾ ಇಂಟಿ ಬಂಗಾರಂ’ ಸಿನಿಮಾದ ಫಸ್ಟ್ ಲುಕ್​​ನಲ್ಲಿ ಸಮಂತಾ ಅವರು ಸೀರೆ ಧರಿಸಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್ ಪಾತ್ರವನ್ನು ಬಿಟ್ಟು ಅವರು ರಫ್ ಆ್ಯಂಡ್ ಟಫ್ ಪಾತ್ರ ಮಾಡಿದ್ದಾರೆ. ವಿಲನ್​​ಗಳ ಮೂಳೆ ಮುರಿಯಲು ಸಜ್ಜಾಗಿರುವ ದುರ್ಗೆಯ ರೀತಿ ಅವರು ಪೋಸ್ ನೀಡಿದ್ದಾರೆ. ಸಮಂತಾ ರುತ್ ಪ್ರಭು ಅಭಿಮಾನಿಗಳು ಈ ಸಿನಿಮಾ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.

ಈ ಪೋಸ್ಟರ್ ನೋಡಿದ ಅಭಿಮಾನಿಗಳು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಲೇಡಿ ಬಾಸ್ ಮರಳಿ ಬಂದಿದ್ದಾರೆ’, ‘ಸಮಂತಾ ಅವರ ಕಮ್​ಬ್ಯಾಕ್ ಬಹಳ ಮಾಸ್ ಆಗಿದೆ’ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ. ಫ್ಯಾನ್ಸ್ ಪುಟಗಳಲ್ಲಿ ಈ ಪೋಸ್ಟರ್ ವೈರಲ್ ಆಗುತ್ತಿದೆ. ಬಿ.ವಿ. ನಂದಿನಿ ರೆಡ್ಡಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ನಿಧಿ ಅಗರ್​​ವಾಲ್ ಬಳಿಕ ಸಮಂತಾಗೂ ಫ್ಯಾನ್ಸ್ ಕಾಟ: ವಿಡಿಯೋ ವೈರಲ್

ಫಸ್ಟ್ ಲುಕ್ ಪೋಸ್ಟರ್ ಜೊತೆ ಇನ್ನೊಂದು ಗುಡ್ ನ್ಯೂಸ್ ನೀಡಲಾಗಿದೆ. ಜನವರಿ 9ರಂದು ಬೆಳಗ್ಗೆ 10 ಗಂಟೆಗೆ ‘ಮಾ ಇಂಟಿ ಬಂಗಾರಂ’ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ ಎಂದು ಕೂಡ ತಿಳಿಸಲಾಗಿದೆ. ಆದರೆ ಸಿನಿಮಾದ ರಿಲೀಸ್ ದಿನಾಂಕ ಇನ್ನೂ ಬಹಿರಂಗ ಆಗಿಲ್ಲ. ಇದು ಸಮಂತಾ ಅವರು 2ನೇ ಮದುವೆ ಆದ ಬಳಿಕ ಬರುತ್ತಿರುವ ಮೊದಲ ಸಿನಿಮಾ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಊಟ ಮಾಡಿದ ತಕ್ಷಣ ನೀರು ಕುಡಿಯುವ ಅಭ್ಯಾಸ ಎಷ್ಟು ಡೇಂಜರ್‌ ನೋಡಿ – Kannada News | What are the problems of drinking water immediately after a meal?

ನಮ್ಮ ದೇಹಕ್ಕೆ ನೀರು (water) ಬಹಳ ಮುಖ್ಯ. ಅದೇ ರೀತಿ ಸಮಯಕ್ಕೆ ಸರಿಯಾಗಿ ಮತ್ತು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು ಸಹ ತುಂಬಾನೇ ಮುಖ್ಯ. ಸಾಮಾನ್ಯವಾಗಿ ಬಾಯಾರಿದಾಗ ನೀರನ್ನು ಕುಡಿಯುತ್ತೇವೆ. ಇದಲ್ಲದೆ ಇನ್ನೂ ಹೆಚ್ಚಿನವರು ಊಟವಾದ ತಕ್ಷಣವೇ ನೀರನ್ನು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆರೋಗ್ಯ ತಜ್ಞರ ಪ್ರಕಾರ ಆರೋಗ್ಯದ ದೃಷ್ಟಿಯಿಂದ ಈ ಅಭ್ಯಾಸ ಒಳ್ಳೆಯದಲ್ಲ. ಈ ಅಭ್ಯಾಸವು ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಅನೇಕ ರೋಗಗಳಿಗೆ ಕಾರಣವಾಗಬಹುದು. ಹಾಗಿದ್ರೆ ಊಟ ಮಾಡಿದ ಎಷ್ಟು ಸಮಯದ ಬಳಿಕ ನೀರನ್ನು ಕುಡಿಯುವುದು ಸೂಕ್ತ ಎಂಬುದರ ಮಾಹಿತಿಯನ್ನು ತಿಳಿಯಿರಿ.

ಊಟ ಮಾಡಿದ ಎಷ್ಟು ಸಮಯದ ನಂತರ ನೀರು ಕುಡಿಯಬೇಕು?

ಆರೋಗ್ಯ ತಜ್ಞರ ಪ್ರಕಾರ, ಆಹಾರ ಜೀರ್ಣವಾಗಲು ಕನಿಷ್ಠ ಎರಡು ಗಂಟೆಗಳು ಬೇಕಾಗುತ್ತದೆ. ಈ ಸಮಯದಲ್ಲಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಆಹಾರ ಸೇವಿಸಿದ 45 ರಿಂದ 60 ನಿಮಿಷಗಳ ನಂತರ ನೀರು ಕುಡಿದರೆ ಸೂಕ್ತ. ನೀವು ಮೊದಲು ನೀರು ಕುಡಿಯಲು ಬಯಸಿದರೆ, ಊಟಕ್ಕೆ ಅರ್ಧ ಗಂಟೆ ಮೊದಲು ನೀರು ಕುಡಿಯಿರಿ. ಇದು ದೇಹವು ಆಹಾರದ ಪೋಷಕಾಂಶಗಳನ್ನು ಚೆನ್ನಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ.

ಊಟವಾದ ತಕ್ಷಣ ನೀರು ಕುಡಿಯುವುದರಿಂದಾಗುವ ಅಡ್ಡಪರಿಣಾಮಗಳು:

ಆಹಾರವನ್ನು ಜೀರ್ಣಿಸಿಕೊಳ್ಳಲು ತೊಂದರೆ: ನಮ್ಮ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡಲು ಹೊಟ್ಟೆಯಲ್ಲಿ ಜೀರ್ಣಕಾರಿ ರಸವನ್ನು ಉತ್ಪಾದಿಸುತ್ತದೆ. ತಿಂದ ತಕ್ಷಣ ನೀರು ಕುಡಿಯುವುದರಿಂದ ಈ ಜೀರ್ಣಕಾರಿ ರಸಗಳು ದುರ್ಬಲವಾಗುತ್ತವೆ ಮತ್ತು ಅವುಗಳ ಪರಿಣಾಮಕಾರಿತ್ವ ಕಡಿಮೆಯಾಗುತ್ತದೆ, ಇದು ಅಜೀರ್ಣ, ಗ್ಯಾಸ್ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಹೊಟ್ಟೆ ಭಾರ: ಊಟವಾದ ತಕ್ಷಣ ನೀರು ಕುಡಿಯುವುದರಿಂದ ಹೊಟ್ಟೆಯ ಉಷ್ಣತೆ ಕಡಿಮೆಯಾಗುತ್ತದೆ, ಇದರಿಂದಾಗಿ ಆಹಾರವು ಹೊಟ್ಟೆಯಲ್ಲಿ ಹೆಚ್ಚು ಹೊತ್ತು ಉಳಿಯುತ್ತದೆ, ಇದರಿಂದಾಗಿ ಹೊಟ್ಟೆ ಭಾರ, ಉಬ್ಬುವುದು ಮತ್ತು ಆಮ್ಲೀಯತೆಯ ಭಾವನೆ ಉಂಟಾಗುತ್ತದೆ.

ತೂಕ ಹೆಚ್ಚಾಗುವುದು:  ಆಹಾರ ಸರಿಯಾಗಿ ಜೀರ್ಣವಾಗದಿದ್ದಾಗ, ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಾರಂಭವಾಗುತ್ತದೆ, ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಈ ಅಭ್ಯಾಸವು ದೀರ್ಘಾವಧಿಯಲ್ಲಿ ತೂಕ ಹೆಚ್ಚಾಗಲು ಕಾರಣವಾಗಬಹುದು.

ಪೋಷಕಾಂಶಗಳ ಹೀರಿಕೊಳ್ಳುವಿಕೆ ಕಡಿಮೆಯಾಗುತ್ತದೆ: ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ, ದೇಹವು ಆಹಾರದಿಂದ ಪಡೆಯುವ ಪೋಷಕಾಂಶಗಳನ್ನು ಸಂಪೂರ್ಣವಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ದೀರ್ಘಾವಧಿಯಲ್ಲಿ ಜೀವಸತ್ವಗಳು ಮತ್ತು ಖನಿಜಗಳ ಕೊರತೆಗೆ ಕಾರಣವಾಗಬಹುದು.

ಇದನ್ನೂ ಓದಿ: ಸೂರ್ಯನ ಬೆಳಕಿನಿಂದ ವಿಟಮಿನ್‌ ಡಿ ಪಡೆಯುವ ಸರಿಯಾದ ಮಾರ್ಗ ಯಾವುದು? 90% ಜನರಿಗೆ ಇದು ಗೊತ್ತೇ ಇಲ್ಲ

ಸರಿಯಾದ ಸಮಯಕ್ಕೆ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು:

ಆಹಾರ ಸೇವಿಸಿದ ಒಂದು ಗಂಟೆಯ ನಂತರ ನೀರು ಕುಡಿಯುವುದರಿಂದ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವಾಗುತ್ತದೆ:

  • ತೂಕ ನಿಯಂತ್ರಣದಲ್ಲಿರುತ್ತದೆ ಮತ್ತು ಬೊಜ್ಜು ಹೆಚ್ಚಾಗುವುದಿಲ್ಲ.
  • ಜೀರ್ಣಕ್ರಿಯೆ ಬಲಗೊಳ್ಳುತ್ತದೆ ಮತ್ತು ಹೊಟ್ಟೆ ಹಗುರವಾಗಿರುತ್ತದೆ.
  • ಗ್ಯಾಸ್ ಮತ್ತು ಆಮ್ಲೀಯತೆಯ ಸಮಸ್ಯೆ ಇರುವುದಿಲ್ಲ.
  • ದೇಹವು ಆಹಾರದಿಂದ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಹಾಯವಾಗುತ್ತದೆ.
  • ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ ಮತ್ತು ದೇಹವು ಹೆಚ್ಚು ವಿಶ್ರಾಂತಿ ಪಡೆಯುತ್ತದೆ.

ಊಟವಾದ ತಕ್ಷಣ ನೀರು ಕುಡಿಯುವುದು ಹಾನಿಕಾರಕ. ಸರಿಯಾದ ಸಮಯಕ್ಕೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುವುದಲ್ಲದೆ, ಬೊಜ್ಜು, ಆಮ್ಲೀಯತೆ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ತಡೆಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

KITS Recruitment 2026: KITSನಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ನೇಮಕಾತಿ; ಹೀಗೆ ಅರ್ಜಿ ಸಲ್ಲಿಸಿ – Kannada News | KITS Recruitment 2026: Assistant Manager Jobs in Bangalore, Apply by Jan 22!

ಕರ್ನಾಟಕ ಇನ್ನೋವೇಶನ್ ಆ್ಯಂಡ್​ ಟೆಕ್ನಾಲಜಿ ಸೊಸೈಟಿ (KITS) ಅಧಿಕೃತ ಅಧಿಸೂಚನೆಯ ಮೂಲಕ ಸಹಾಯಕ ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿಡಿಯಲ್ಲಿ ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಜನವರಿ 22 ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸತಕ್ಕದ್ದು.

KITS ಹುದ್ದೆಯ ಅಧಿಸೂಚನೆ:

  • ಸಂಸ್ಥೆಯ ಹೆಸರು : ಕರ್ನಾಟಕ ಇನ್ನೋವೇಶನ್ ಆ್ಯಂಡ್ ಟೆಕ್ನಾಲಜಿ ಸೊಸೈಟಿ ( KITS )
  • ಹುದ್ದೆಗಳ ಸಂಖ್ಯೆ: 3
  • ಉದ್ಯೋಗ ಸ್ಥಳ: ಬೆಂಗಳೂರು
  • ಹುದ್ದೆಯ ಹೆಸರು: ಸಹಾಯಕ ವ್ಯವಸ್ಥಾಪಕ
  • ಸಂಬಳ: ತಿಂಗಳಿಗೆ 45,000 – 5,40,000 ರೂ.

ಶೈಕ್ಷಣಿಕ ಅರ್ಹತೆ:

KITS ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, B.Sc, BE/B.Tech, MBA, ಸ್ನಾತಕೋತ್ತರ ಪದವಿ, PGDM/PGDBA ಅನ್ನು ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ: ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೆಡಿಟ್ ಆಫೀಸರ್ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ KITS ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • ಸಹಾಯಕ ವ್ಯವಸ್ಥಾಪಕರು ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • KITS ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಪ್‌ಲೋಡ್ ಮಾಡಿ.
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.
  • ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯದಾಗಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾಯಿ ಮೇಲಿನ ದ್ವೇಷಕ್ಕೆ ಮುಗ್ಧ ಮಗುವಿನ ಕತ್ತು ಹಿಸುಕಿ ಕೊಲೆ! – Kannada News | Whitefield Child Murder: 6 Yr Old Killed in Nallurhalli, Mother’s Enmity Suspected

ತಾಯಿ ಮೇಲಿನ ದ್ವೇಷಕ್ಕೆ ಮುಗ್ಧ ಮಗುವಿನ ಕತ್ತು ಹಿಸುಕಿ ಕೊಲೆ!

ಬೆಂಗಳೂರು, ಜನವರಿ 07: ನಗರದ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಲೂರಹಳ್ಳಿಯಲ್ಲಿ 6 ವರ್ಷದ ಮಗುವನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ತಾಯಿಯ ಮೇಲಿನ ದ್ವೇಷದಿಂದ ಮಗಳನ್ನು ಹತ್ಯೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಆರೋಪಿಗಾಗಿ ತೀವ್ರ ಶೋಧ ನಡೆಯುತ್ತಿದೆ.

ಶವವನ್ನು ಬ್ಯಾಗ್​ನಲ್ಲಿ ಕಟ್ಟಿ ಮೋರಿಗೆ ಬಿಸಾಕಿದ ಪಾಪಿ!

ಕೋಲ್ಕತ್ತಾ ಮೂಲದ 6 ವರ್ಷದ ಬಾಲಕಿ ಶಹಜಾನ್ ಕತೂನ್​ನ ಕತ್ತು ಹಿಸುಕಿ ಕೊಲೆಗೊಂಡಿರುವ ಘಟನೆ ನಗರವನ್ನೇ ಬೆಚ್ಚಿಬೀಳಿಸಿದೆ. ತಾಯಿ ಮೇಲಿನ ದ್ವೇಷಕ್ಕೆ ಮುಗ್ಧ ಮಗುವನ್ನೇ ಗುರಿಯಾಗಿಸಿರುವ ಶಂಕೆ ವ್ಯಕ್ತವಾಗಿದೆ. ಬಾಲಕಿಯ ತಂದೆ ಇಂಜಮುಲ್ ಶೇಕ್ ಲೇಬರ್ ಕೆಲಸ ಮಾಡುತ್ತಿದ್ದು, ನಿನ್ನೆ (ಜ.6) ಮಧ್ಯಾಹ್ನ ತಮ್ಮ ಮಗಳು ಒಂದು ದಿನದಿಂದ ಕಾಣೆಯಾಗಿರುವುದಾಗಿ ವೈಟ್‌ಫೀಲ್ಡ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಬಾಲಕಿ ಪರಿಚಿತ ವ್ಯಕ್ತಿಯೊಂದಿಗೇ ಹೋಗಿರುವುದು ದೃಢಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ನಲ್ಲೂರಹಳ್ಳಿ ಪ್ರದೇಶದಲ್ಲಿ ಪೊಲೀಸರು ಮಧ್ಯರಾತ್ರಿವರೆಗೆ ಕೂಂಬಿಂಗ್ ರೀತಿಯ ಕಾರ್ಯಾಚರಣೆ ನಡೆಸಿದ್ದಾರೆ. ಮಧ್ಯರಾತ್ರಿ ದೇವಸ್ಥಾನ ರಸ್ತೆಯ ಮೋರಿಯೊಂದರಲ್ಲಿ ಬ್ಯಾಗ್‌ನೊಳಗೆ ಪತ್ತೆಯಾಗಿದ್ದ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪ್ಲಾಸ್ಟಿಕ್ ವೈರ್‌ನಿಂದ ಕುತ್ತಿಗೆ ಬಿಗಿದು ಕೊಲೆ

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪ್ಲಾಸ್ಟಿಕ್ ವೈರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವುದು ತಿಳಿದುಬಂದಿದೆ. ಮೃತದೇಹದ ಮೇಲೆ ಯಾವುದೇ ಹಲ್ಲೆ ಅಥವಾ ಲೈಂಗಿಕ ದೌರ್ಜನ್ಯದ ಗುರುತುಗಳು ಕಂಡುಬಂದಿಲ್ಲ ಎಂದು ವೈಟ್‌ಫೀಲ್ಡ್ ಡಿಸಿಪಿ ತಿಳಿಸಿದ್ದಾರೆ. ಸ್ಥಳೀಯರು ಹೇಳುವಂತೆ ಆರೋಪಿ ಕುಟುಂಬ ಮತ್ತು ಬಾಲಕಿಯ ಕುಟುಂಬದ ನಡುವೆ ಹಿಂದಿನಿಂದಲೂ ವೈಷಮ್ಯವಿದ್ದು, ತಾಯಿ ಮೇಲಿನ ದ್ವೇಷದಿಂದಲೇ ಈ ಕೃತ್ಯ ನಡೆದಿರಬಹುದು ಎನ್ನಲಾಗಿದೆ. ಆರೋಪಿ ಯಾರು ಎಂಬುದು ಪೊಲೀಸರಿಗೆ ಗೊತ್ತಾಗಿದ್ದು, ವಿಶೇಷ ತಂಡ ರಚಿಸಿ ಹುಡುಕಾಟ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

6,6,6,6,6,6,6,6,6,6,.. ವೈಭವ್ ಸಿಡಿಲಬ್ಬರದ ಶತಕಕ್ಕೆ ಹರಿಣಗಳು ಕಂಗಾಲು – Kannada News | India U19 Captain Vaibhav Suryavanshi Scores Youngest ODI Century World Record

ದಕ್ಷಿಣ ಆಫ್ರಿಕಾ ಹಾಗೂ ಭಾರತ ಅಂಡರ್-19 ತಂಡಗಳ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಯೂತ್ ಏಕದಿನ ಸರಣಿಯ ಕೊನೆಯ ಪಂದ್ಯ ಇಂದು ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿದೆ. ಆರಂಭಿಕರಾದ ಆರನ್ ಜಾರ್ಜ್​ ಹಾಗೂ ವೈಭವ್ ಸೂರ್ಯವಂಶಿ ಮೊದಲ ವಿಕೆಟ್​ಗೆ ದ್ವಿಶತಕದ ಜೊತೆಯಾಟ ಕಟ್ಟಿದ್ದಾರೆ. ಇದೇ ವೇಳೆ ನಾಯಕ ವೈಭವ್ ಸೂರ್ಯವಂಶಿ ನಾಯಕನಾಗಿ ಚೊಚ್ಚಲ ಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಯೂತ್ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ಅತಿ ಕಿರಿಯ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ವೈಭವ್ ಸೂರ್ಯವಂಶಿ 63 ಎಸೆತಗಳಲ್ಲಿ ಎಂಟು ಸಿಕ್ಸರ್ ಮತ್ತು ಆರು ಬೌಂಡರಿಗಳ ಸಹಿತ ಶತಕ ಬಾರಿಸಿದರು. ಶತಕದ ಬಳಿಕ ಗೇರ್ ಬದಲಿಸಿದ ವೈಭವ್ 10 ಸಿಕ್ಸರ್ ಮತ್ತು ಒಂಬತ್ತು ಬೌಂಡರಿಗಳನ್ನು ಒಳಗೊಂಡಂತೆ ಒಟ್ಟು 127 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದು ವೈಭವ್ ಅವರ ಅಂಡರ್-19 ಏಕದಿನ ವೃತ್ತಿಜೀವನದಲ್ಲಿ ಮೂರನೇ ಶತಕವಾಗಿದೆ. ಈ ಹಿಂದೆ ಅವರು ಇಂಗ್ಲೆಂಡ್ ಮತ್ತು ಯುಎಇ ಅಂಡರ್-19 ತಂಡದ ವಿರುದ್ಧ ಎರಡು ಶತಕಗಳನ್ನು ಬಾರಿಸಿದ್ದರು. ಆದರೆ ನಾಯಕನಾಗಿ ವೈಭವ್​ಗೆ ಇದು ಮೊದಲ ಶತಕವಾಗಿದೆ.

ದಕ್ಷಿಣ ಆಫ್ರಿಕಾ ಪ್ರವಾಸವು ವೈಭವ್ ಸೂರ್ಯವಂಶಿಗೆ ನಾಯಕತ್ವದಿಂದಾಗಿ ಮಾತ್ರ ವಿಶೇಷವಾಗಿರಲಿಲ್ಲ. ಬದಲಿಗೆ ಇದು ವೈಭವ್ ಅವರ ಮೊದಲ ದಕ್ಷಿಣ ಆಫ್ರಿಕಾ ಪ್ರವಾಸವೂ ಆಗಿತ್ತು. U19 ಏಕದಿನ ವಿಶ್ವಕಪ್‌ಗೆ ಸ್ವಲ್ಪ ಮೊದಲು ವೈಭವ್ ಸೂರ್ಯವಂಶಿ ತಮ್ಮ ದಕ್ಷಿಣ ಆಫ್ರಿಕಾ ಪ್ರವಾಸವನ್ನು ದಿಟ್ಟ ರೀತಿಯಲ್ಲಿ ಮುಗಿಸಿದ್ದು ಶ್ಲಾಘನೀಯ. ಈ ಪ್ರವಾಸದಲ್ಲಿ ಅವರು ಆಡಿದ ಮೂರು ಪಂದ್ಯಗಳಲ್ಲಿ ಒಂದು ಶತಕ ಮತ್ತು ಅರ್ಧಶತಕ ಸೇರಿದಂತೆ 206 ರನ್ ಕಲೆಹಾಕಿದರು. ಈ ಅವಧಿಯಲ್ಲಿ ಅವರ ಬ್ಯಾಟಿಂಗ್ ಸರಾಸರಿ 103 ಆಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PM Kisan eKYC: ಪಿಎಂ ಕಿಸಾನ್ ಸ್ಕೀಮ್- ರೈತರು ಇಕೆವೈಸಿ ಮಾಡಲು 3 ವಿಧಾನಗಳು – Kannada News | PM Kisan scheme, 3 methods of updating e KYC to get installment money

ಪಿಎಂ ಕಿಸಾನ್ ಸ್ಕೀಮ್ ಯೋಜನೆಯಲ್ಲಿ (PM Kisan Scheme) ರೈತರ ವ್ಯವಸಾಯಕ್ಕೆ ನೆರವಾಗಲು ಸರ್ಕಾರ ವರ್ಷಕ್ಕೆ ಮೂರು ಬಾರಿ ಸಹಾಯಧನ ನೀಡುತ್ತದೆ. ತಲಾ 2 ಸಾವಿರ ರೂಗಳಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ ನೀಡಲಾಗುತ್ತದೆ. ದೇಶಾದ್ಯಂತ 10 ಕೋಟಿಗೂ ಅಧಿಕ ರೈತರು ಈ ಯೋಜನೆಗೆ ನೊಂದಾಯಿಸಿದ್ದಾರೆ. ಸ್ಕೀಮ್​ಗೆ ನೊಂದಾಯಿಸಿದರೂ ಬಹಳಷ್ಟು ರೈತರಿಗೆ ಕಂತಿನ ಹಣ ಲಭಿಸಿಲ್ಲ. ಇದಕ್ಕೆ ಹೆಚ್ಚಿನ ಕಾರಣ ಇಕೆವೈಸಿ ಮಾಡದೇ ಇರುವುದು.

ಬ್ಯಾಂಕ್ ಅಕೌಂಟ್, ಮ್ಯೂಚುವಲ್ ಫಂಡ್, ಡೀಮ್ಯಾಟ್ ಅಕೌಂಟ್, ಗ್ಯಾಸ್ ಕನೆಕ್ಷನ್ ಇತ್ಯಾದಿ ಬಹಳಷ್ಟು ಕಾರ್ಯಗಳಿಗೆ ಆಗಾಗ್ಗೆ ಕೆವೈಸಿ ಅಪ್​ಡೇಟ್ ಮಾಡಬೇಕೆಂದು ಹೇಳಲಾಗುತ್ತದೆ. ಪಿಎಂ ಕಿಸಾನ್ ಯೋಜನೆಯಲ್ಲೂ ಕೆವೈಸಿ ಪರಿಷ್ಕರಿಸಬೇಕು. ನೇರ ಕೆವೈಸಿ ಬದಲು ಇಕೆವೈಸಿ ಅಪ್​ಡೇಟ್ ಮಾಡುವ ಅವಕಾಶ ಕೊಡಲಾಗಿದೆ. ಇಕೆವೈಸಿಯನ್ನು ಅಪ್​ಡೇಟ್ ಮಾಡಲು ಮೂರು ವಿಧಾನಗಳಿವೆ. ಅದರ ವಿವರ ಇಲ್ಲಿದೆ…

ಇದನ್ನೂ ಓದಿ: ಚಿನ್ನದಂತೆ ಬೆಳ್ಳಿಗೂ ಸದ್ಯದಲ್ಲೇ ಬರಲಿದೆ ಹಾಲ್ಮಾರ್ಕ್ ಗುರುತು

ಕೆವೈಸಿ ಅಪ್​ಡೇಟ್ ಮಾಡುವುದು ಯಾಕೆ?

ಫಲಾನುಭವಿಗಳು ಅಸ್ತಿತ್ವದಲ್ಲಿ ಇದ್ದಾರೆ ಎಂದು ಋಜುವಾತುಪಡಿಸಲು ಇಕೆವೈಸಿಯನ್ನು ಮತ್ತೆ ಪಡೆಯಲಾಗುತ್ತದೆ. ಇಕೆವೈಸಿ ಮಾಡಲು ಮೂರು ವಿಧಾನಗಳು ಕೆಳಕಂಡಂತಿವೆ:

  1. ಒಟಿಪಿ ಆಧಾರಿತ ಇಕೆವೈಸಿ
  2. ಬಯೋಮೆಟ್ರಿಕ್ ಆಧಾರಿತ ಇಕೆವೈಸಿ
  3. ಮುಖ ಚರ್ಯೆ ಬಳಸಿ ಇ-ಕೆವೈಸಿ

ಒಟಿಪಿ ಆಧಾರಿತವಾಗಿ ಇ-ಕೆವೈಸಿ ಮಾಡುವುದು ಹೇಗೆ?

ಪಿಎಂ ಕಿಸಾನ್ ಪೋರ್ಟಲ್​ಗೆ ಹೋಗಿ ಅಲ್ಲಿ ಇಕೆವೈಸಿ ಲಿಂಕ್ ಕ್ಲಿಕ್ ಮಾಡಿ. ಆಧಾರ್ ಸಂಖ್ಯೆ ನಮೂದಿಸಿದಾಗ ಆಧಾರ್​ಗೆ ಜೋಡಿತವಾದ ಮೊಬೈಲ್ ನಂಬರ್​ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿದ ಬಳಿಕ ಇಕೆವೈಸಿ ಅಪ್​ಡೇಟ್ ಆಗುತ್ತದೆ.

ಬಯೋಮೆಟ್ರಿಕ್ ಆಧಾರಿತ ಇಕೆವೈಸಿ ಮಾಡುವುದು ಹೇಗೆ?

ರೈತರ ಊರಿಗೆ ಸಮೀಪದಲ್ಲೇ ಇರುವ ನಾಗರಿಕ ಸೇವಾ ಕೇಂದ್ರಗಳು ಅಥವಾ ರಾಜ್ಯ ಸೇವಾ ಕೇಂದ್ರಗಳಿಗೆ ಹೋಗಿ ಅಲ್ಲಿ ನಿಮ್ಮ ಆಧಾರ್ ನಂಬರ್ ಕೊಟ್ಟು ಇ-ಕೆವೈಸಿ ಅಪ್​ಡೇಟ್ ಮಾಡಿಸಬಹುದು. ಇದಕ್ಕೆ 15 ರೂ ಶುಲ್ಕ ಇರುತ್ತದೆ.

ಇದನ್ನೂ ಓದಿ: ಈ ಎಸ್​ಎಂಬಿಯಲ್ಲಿ ಆಕರ್ಷಕ ಬಡ್ಡಿ ಆಫರ್; ನಿತ್ಯವೂ ಚಕ್ರಬಡ್ಡಿ; ಏನಿದರ ಅನುಕೂಲ?

ಫೇಸ್ ರೆಕಗ್ನಿಶನ್ ಆಧಾರಿತವಾದ ಇ-ಕೆವೈಸಿ

ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಮತ್ತು ಆಧಾರ್ ಫೇಸ್ ಆರ್​ಡಿ ಆ್ಯಪ್ ಈ ಎರಡು ಅಪ್ಲಿಕೇಶನ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು. ಪಿಎಂ ಕಿಸಾನ್ ಆ್ಯಪ್​ಗೆ ಲಾಗಿನ್ ಆಗಿ ಅಲ್ಲಿ ಇಕೆವೈಸಿ ಕ್ಲಿಕ್ ಮಾಡಿ. ನಿಮ್ಮ ಮುಖಚರ್ಯೆಯನ್ನು ಅದು ಸ್ಕ್ಯಾನ್ ಮಾಡುತ್ತದೆ. ಅದು ಯಶಸ್ವಿಯಾದಲ್ಲಿ ಇಕೆವೈಸಿ ಪೂರ್ಣಗೊಳ್ಳುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link