Category Archives: Blog

Your blog category

ಮಲೇಷ್ಯಾ ಧರ್ಮಗುರುವಿನ ಲಿಂಕ್, ವಾಟ್ಸಾಪ್ ಚಾಟ್; ಕಗ್ಗಂಟಾಗುತ್ತಲೇ ಇದೆ ಟಿಸಿಎಸ್ ಮತಾಂತರ ಪ್ರಕರಣ – Kannada News | WhatsApp Chats, Malaysia Linked Preacher; TCS Nashik conversion case widens

ನವದೆಹಲಿ, ಏಪ್ರಿಲ್ 15: ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಬಿಪಿಒ ಕಚೇರಿಯಲ್ಲಿನ ಮತಾಂತರ ಮತ್ತು ಲೈಂಗಿಕ ಕಿರುಕುಳ ಪ್ರಕರಣ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಇದು ಕಾರ್ಪೋರೇಟ್ ಜಿಹಾದ್​ ಎಂದು ಟೀಕೆಗಳು ಕೂಡ ವ್ಯಕ್ತವಾಗುತ್ತಿವೆ. ಈ ಪ್ರಕರಣದ ತನಿಖೆಯಲ್ಲಿ ಅಂತಾರಾಷ್ಟ್ರೀಯ ಸಂಪರ್ಕವಿರುವ ಮತಾಂತರ ಜಾಲವೊಂದು ಬೆಳಕಿಗೆ ಬಂದಿದೆ. ಫೆಬ್ರವರಿಯಲ್ಲಿ ಗುಪ್ತ ಪೊಲೀಸ್ ಕಾರ್ಯಾಚರಣೆ ನಡೆದ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಟಿಸಿಎಸ್​​ನಲ್ಲಿ (TCS) ರಹಸ್ಯವಾಗಿ ಹೌಸ್ ಕೀಪಿಂಗ್ ಸಿಬ್ಬಂದಿಯಂತೆ ನಿಯೋಜಿಸಲಾಗಿತ್ತು. ವಾಟ್ಸಾಪ್ ಚಾಟ್‌ಗಳು, ಕಿರುಕುಳಕ್ಕೊಳಗಾದವರ ಹೇಳಿಕೆಗಳು ಮತ್ತು ಶಂಕಿತ ಮಲೇಷ್ಯಾ ಸಂಬಂಧಿ ಧರ್ಮಗುರುವಿನ ವಿರುದ್ಧದ ಸಾಕ್ಷಿಗಳು ಆ ಕಚೇರಿಯೊಳಗೆ ಮತಾಂತರ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಪುರಾವೆಗಳಾಗಿದ್ದವು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಎಸ್‌ಐಟಿ ಮೂಲಗಳ ಪ್ರಕಾರ, ಆರೋಪಿಗಳ ಹೊರತಾಗಿ ಇನ್ನೂ 12 ಉದ್ಯೋಗಿಗಳನ್ನು ಗುರುತಿಸಲಾಗಿದೆ. ಇಲ್ಲಿಯವರೆಗೆ 8 ಮಹಿಳೆಯರು ಮತ್ತು ಒಬ್ಬ ಪುರುಷನ ದೂರುಗಳ ಆಧಾರದ ಮೇಲೆ 9 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಈ ಆರೋಪಗಳಲ್ಲಿ ಲೈಂಗಿಕ ಕಿರುಕುಳ, ಮದುವೆಯ ನೆಪದಲ್ಲಿ ಅತ್ಯಾಚಾರ, ಧಾರ್ಮಿಕ ಕುಶಲತೆ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವುದು ಸೇರಿವೆ.

ಇದನ್ನೂ ಓದಿ: ಟಿಸಿಎಸ್ ಕಚೇರಿಯಲ್ಲಿ ಮಹಿಳಾ ಪೊಲೀಸರ ಅಂಡರ್​ಕವರ್ ಆಪರೇಷನ್; ಸಿಕ್ಕಿಬಿದ್ದ ಕಾಮಾಂಧರು

ಆರೋಪಿಗಳಾದ ಟಿಸಿಎಸ್ ಉದ್ಯೋಗಿಗಳು ಮಹಿಳಾ ಸಹೋದ್ಯೋಗಿಗಳಿಗೆ ಕಿರುಕುಳ ನೀಡಿದ್ದಾರೆ ಮತ್ತು ಧಾರ್ಮಿಕ ಮತಾಂತರಕ್ಕೆ ಒತ್ತಡ ಹೇರಲು ಪ್ರಯತ್ನಿಸಿದ್ದಾರೆ ಎಂದು ಎಫ್‌ಐಆರ್‌ಗಳು ಹೇಳುತ್ತವೆ. ಈ ಘಟನೆಗಳ ಬಗ್ಗೆ 18ರಿಂದ 25 ವರ್ಷ ವಯಸ್ಸಿನ ಮಹಿಳೆಯರು ದೂರು ನೀಡಿದ್ದರು. 2022ರಿಂದ ಆರಂಭವಾಗಿ 3 ವರ್ಷಗಳಲ್ಲಿ ಈ ಘಟನೆಗಳು ನಡೆದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇಲ್ಲಿಯವರೆಗೆ, ಟಿಸಿಎಸ್​​ನ ಟೀಂ ಲೀಡರ್ ಮತ್ತು ಎಂಜಿನಿಯರ್‌ಗಳು ಸೇರಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಇತರರ ವಿರುದ್ಧ ತನಿಖೆ ಮುಂದುವರೆದಿದೆ. ಹೆಚ್​ಆರ್​ ಮ್ಯಾನೇಜರ್ ನಿದಾ ಖಾನ್ ಅವರು ತಲೆಮರೆಸಿಕೊಂಡಿದ್ದು, ಅಧಿಕಾರಿಗಳು ಸಂಸ್ಥೆಯೊಳಗಿನ ಅವರ ಪಾತ್ರ ಮತ್ತು ನೇಮಕಾತಿ ಪದ್ಧತಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಜಾಲವನ್ನು ಪತ್ತೆಹಚ್ಚಲು ರಹಸ್ಯ ಕಾರ್ಯಾಚರಣೆ ನಡೆಸಲಾಗಿತ್ತು.

ಇದನ್ನೂ ಓದಿ: ಟಿಸಿಎಸ್​ ಮತಾಂತರ, ಲೈಂಗಿಕ ಕಿರುಕುಳ ಪ್ರಕರಣ; ಕಠಿಣ ತನಿಖೆಗೆ ಟಾಟಾ ಕಂಪನಿ​ ಆದೇಶ

ಪೊಲೀಸರು 4 ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಟಿಸಿಎಸ್​ ಕ್ಯಾಂಪಸ್‌ನೊಳಗೆ ನಿಯೋಜಿಸಿದ್ದರು. ಅವರ ಸಂಶೋಧನೆಗಳು ಈ ಆರೋಪಗಳನ್ನು ಪರಿಶೀಲಿಸಲು ಸಹಾಯ ಮಾಡಿದೆ. ಮಲೇಷ್ಯಾದೊಂದಿಗೆ ಸಂಪರ್ಕ ಹೊಂದಿದ್ದಾರೆಂದು ನಂಬಲಾದ ಇಮ್ರಾನ್ ಎಂದು ಗುರುತಿಸಲಾದ ವ್ಯಕ್ತಿ ವಾಟ್ಸಾಪ್ ಸಂಭಾಷಣೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ವೀಡಿಯೊ ಕರೆಗಳ ಮೂಲಕ ಪರಿಚಯಿಸಲ್ಪಟ್ಟ ಧರ್ಮಗುರು ಎಂದು ಶಂಕಿಸಲಾಗಿದೆ. ಅವರ ಗುರುತು ಮತ್ತು ಪಾತ್ರದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.

ನೇಮಕಾತಿ ಪದ್ಧತಿಗಳು ಸೇರಿದಂತೆ ಟಿಸಿಎಸ್‌ನಲ್ಲಿ ಆಂತರಿಕ ಪ್ರಕ್ರಿಯೆಗಳನ್ನು ಪೊಲೀಸ್ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಮಹಾರಾಷ್ಟ್ರದ ಸಚಿವ ಗಿರೀಶ್ ಮಹಾಜನ್ ಕೆಲವು ಉದ್ಯೋಗಿಗಳು ಮಹಿಳೆಯರಿಗೆ ಉದ್ಯೋಗ ಮತ್ತು ಸಂಬಳದ ಭರವಸೆ ನೀಡಿ ಆಮಿಷವೊಡ್ಡಿದ್ದಾರೆ ಮತ್ತು ಅವರ ಧಾರ್ಮಿಕ ಪದ್ಧತಿಗಳನ್ನು ಅನುಸರಿಸಲು ಪ್ರೋತ್ಸಾಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಷಯ ಹೊರಬೀಳುತ್ತಿದ್ದಂತೆ ಟಿಸಿಎಸ್ ಕಟ್ಟುನಿಟ್ಟಾದ ಕ್ರಮ ತೆಗೆದುಕೊಂಡಿದ್ದು, ಆರೋಪಿಗಳಾಗಿರುವ ಉದ್ಯೋಗಿಗಳನ್ನು ಅಮಾನತುಗೊಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಪಪ್ರಜ್ಞೆಯಿಂದ ಸಾಕ್ಷಿ ನುಡಿದೆ: ಕೋರ್ಟ್ ತೀರ್ಪಿನ ಬಳಿಕ ಮಾಫಿ ಸಾಕ್ಷಿ ಸ್ಫೋಟಕ ಹೇಳಿಕೆ – Kannada News | Dharwad Yogesh Gowda Murder Case: Main Accused Basavaraj muttagi talks after Court verdict

ಧಾರವಾಡ, (ಏಪ್ರಿಲ್ 15): ಯೋಗೇಶ್ ಗೌಡ ಹತ್ಯೆ ಪ್ರಕರಣದ (Yogesh Gowda Murder Case) ಸುದೀರ್ಘ 10 ವರ್ಷಗಳ ಕಾಲ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಂತಿಮ ತೀರ್ಪು ಪ್ರಕಟಿಸಿದ್ದು, ಒಟ್ಟು ಆರೋಪಿಗಳ ಪೈಕಿ ಧಾರವಾಡ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಸೇರಿದಂತೆ 17 ಮಂದಿಯನ್ನು ದೋಷಿಗಳೆಂದು ತೀರ್ಪು ನೀಡಿ ಆದೇಶ ಹೊರಡಿಸಿದೆ. ಉಳಿದ ಆರೋಪಿಗಳಲ್ಲಿ ಇಬ್ಬರನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಲಾಗಿದ್ದು, ಇನ್ನಿಬ್ಬರನ್ನು ಮಾಫಿ ಸಾಕ್ಷಿಗಳೆಂದು ಪರಿಗಣಿಸಲಾಗಿದೆ. ಇನ್ನು ಕೋರ್ಟ್ ತೀರ್ಪಿನ ಬಳಿಕ ಪ್ರಕರಣದ ಮಾಫಿ ಸಾಕ್ಷಿ ಬಸವರಾಜ ಮುತ್ತಗಿ ಪ್ರತಿಕ್ರಿಯಿಸಿದ್ದು, ಇದು ನ್ಯಾಯಕ್ಕೆ ಸಿಕ್ಕ ಜಯ. ನ್ಯಾಯಾಂಗ ಮೇಲೆ ವಿಶ್ವಾಸ ಹೆಚ್ಚಾಗಿದೆ. ಈ ತೀರ್ಪಿನಿಂದ ನ್ಯಾಯಾಂಗದ ಮೇಲೆ ವಿಶ್ವಾಸ ಬರುವಂತಾಗಿದೆ. ರಾಜಕಾರಣಿಗಳ ಮಾತು ಕೇಳದಂತೆ ಯುವಕರಿಗೆ ವಿನಂತಿಸಿಕೊಳ್ಳುವೆ. ನನಗೆ, ನನ್ನ ಕುಟುಂಬಕ್ಕೆ ಜೀವ ಬೆದರಿಕೆಯಿದೆ. ನನಗೆ ಪಾಪಪ್ರಜ್ಞೆ ಕಾಡುತ್ತಿತ್ತು. ಅದಕ್ಕೆ ಬಂದು ಸಾಕ್ಷಿ ನುಡಿದಿದ್ದೇನೆ. ನಾವು ದಾರಿ ತಪ್ಪಿದಾಗ ಕುಟುಂಬವೂ ದೂರವಾಗುತ್ತದೆ. ನಾವು ಮಾದರಿಯಾಗಿ ಜೀವನ ಮಾಡಬೇಕಾಗಿದೆ. ಕೆಲವು ವಿಚಾರಗಳನ್ನು ಬಹಿರಂಗವಾಗಿ ಮಾತನಾಡಲು ಆಗಲ್ಲ ಎಂದಿದ್ದಾರೆ.

ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಕೇಸ್: ಕೈ ಶಾಸಕ ವಿನಯ್ ಕುಲಕರ್ಣಿ ಸೇರಿ 17 ಜನ ದೋಷಿ, ಕೋರ್ಟ್ ಮಹತ್ವದ ತೀರ್ಪು

Source link

42 ವರ್ಷ ವಯಸ್ಸಿನ ಧನುಷ್​ಗೆ 20ರ ಪ್ರಾಯದ ಸಾರಾ ಅರ್ಜುನ್ ಜೋಡಿ – Kannada News | Sara Arjun Dhanush D56 movie casting age gap controversy details

ಬಾಲನಟಿಯಾಗಿ ಭಾರತೀಯ ಚಿತ್ರರಂಗಕ್ಕೆ ಪರಿಚಿತರಾಗಿ ಈಗ ನಾಯಕಿಯಾಗಿ ಯಶಸ್ಸು ಕಂಡಿರುವ ಸಾರಾ ಅರ್ಜುನ್ (Sara Arjun) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾದಲ್ಲಿ ಅವರ ನಟನೆ ಗಮನ ಸೆಳೆಯಿತು. ಈಗ ಕಾಲಿವುಡ್ ಸ್ಟಾರ್ ನಟ ಧನುಷ್ ಅಭಿನಯದ ಮುಂದಿನ ಚಿತ್ರಕ್ಕೆ (D56) ನಾಯಕಿಯಾಗಿ ಸಾರಾ ಅರ್ಜುನ್ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಹರದಾಡುತ್ತಿದೆ. ಧನುಷ್ (Dhanush) ಮತ್ತು ಸಾರಾ ಅರ್ಜುನ್ ನಡುವೆ ಇರುವ ವಯಸ್ಸಿನ ಅಂತರದ ಕಾರಣದಿಂದ ಈ ವಿಷಯ ಚರ್ಚೆ ಆಗುತ್ತಿದೆ.

ಸಾರಾ ಅರ್ಜುನ್ ಅವರು ಧನುಷ್​ಗೆ ನಾಯಕಿ ಆಗುತ್ತಾರೆ ಎಂಬ ವಿಷಯ ಕೇಳಿಬರುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಇದಕ್ಕೆ ಮುಖ್ಯ ಕಾರಣ ಧನುಷ್ ಮತ್ತು ಸಾರಾ ನಡುವಿನ ವಯಸ್ಸಿನ ಅಂತರ. ಧನುಷ್ ಅವರಿಗೆ ಈಗ 42 ವರ್ಷ ವಯಸ್ಸು. ಆದರೆ ಸಾರಾ ಅರ್ಜುನ್ ಅವರಿಗೆ ಕೇವಲ 20 ವರ್ಷ ವಯಸ್ಸು!

ಇವರಿಬ್ಬರ ನಡುವೆ ಸುಮಾರು 22 ವರ್ಷಗಳಿಗೂ ಹೆಚ್ಚು ಅಂತರವಿದೆ. ಆದ್ದರಿಂದ ಚರ್ಚೆ ಜೋರಾಗಿದೆ. ಸಾರಾ ಅರ್ಜುನ್ ಅವರಿಗೆ ಇಂತಹ ಟೀಕೆಗಳು ಎದುರಾಗುತ್ತಿರುವುದು ಇದೇ ಮೊದಲಲ್ಲ. ‘ಧುರಂಧರ್’ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆ ನಟಿಸುವಾಗಲೂ ಇದೇ ರೀತಿಯ ವಯಸ್ಸಿನ ಅಂತರದ ಚರ್ಚೆಗಳು ನಡೆದಿದ್ದವು. ಆದರೆ, ಚಿತ್ರ ತೆರೆಕಂಡ ಮೇಲೆ ತಮ್ಮ ಪ್ರಬುದ್ಧ ಅಭಿನಯದ ಮೂಲಕ ಸಾರಾ ಅವರು ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ್ದರು.

ಈಗ ಎಲ್ಲರ ಕಣ್ಣು ಧನುಷ್ ಅಭಿನಯದ 56ನೇ ಚಿತ್ರದ ಮೇಲಿದೆ. ಸಾರಾ ಅವರು ಧನುಷ್ ಜೊತೆಗೂ ‘ಧುರಂಧರ್’ ರೀತಿಯ ಮ್ಯಾಜಿಕ್ ಮಾಡುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಚಿತ್ರದ ಕಥೆ ಮತ್ತು ಪಾತ್ರಕ್ಕೆ ಈ ಜೋಡಿ ಪೂರಕವಾಗಿದ್ದರೆ, ವಯಸ್ಸಿನ ಅಂತರದ ಬಗ್ಗೆ ನಡೆಯುತ್ತಿರುವ ಈ ಟೀಕೆ ತಾನಾಗಿಯೇ ತಣ್ಣಗಾಗಬಹುದು ಎಂಬುದು ಫ್ಯಾನ್ಸ್ ಅಭಿಪ್ರಾಯ.

ಇದನ್ನೂ ಓದಿ: ಮಧುಬಾಲಾ ಪಾತ್ರ ಮಾಡಲಿರುವ ಧುರಂಧರ್ ನಟಿ ಸಾರಾ ಅರ್ಜುನ್? ಬನ್ಸಾಲಿ ನಿರ್ಮಾಣದ ಚಿತ್ರಕ್ಕೆ ಸಿದ್ಧತೆ

‘ಧುರಂಧರ್ 2’ ದೊಡ್ಡ ಸಕ್ಸಸ್ ಆಗಿರುವುದರಿಂದ ಸಾರಾ ಅರ್ಜುನ್ ಅವರಿಗೆ ಭರ್ಜರಿ ಆಫರ್​ಗಳು ಬರುತ್ತಿವೆ. ಅವರ ವೃತ್ತಿಜೀವನದಲ್ಲಿ ‘D56’ ಒಂದು ಪ್ರಮುಖ ಮೈಲಿಗಲ್ಲಾಗುವ ಸಾಧ್ಯತೆಯಿದೆ. ವಯಸ್ಸಿನ ಅಂತರದ ಬಗ್ಗೆ ಕೇಳಿಬರುತ್ತಿರುವ ಟೀಕೆಗೆ ಸಾರಾ ಅರ್ಜುನ್ ಅವರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊಲೆ ಅಪರಾಧಿಯ ಶಾಸಕ ಸ್ಥಾನಕ್ಕೂ ಕುತ್ತು: ವಿನಯ್ ಕುಲಕರ್ಣಿ ಮುಂದಿರುವ ಕಾನೂನು ಆಯ್ಕೆಗಳೇನು? – Kannada News | May lose Vinay Kulkarni mla position for convicted In Yogesh Gowda Murder Case, What Next Option for Safe

ಬೆಂಗಳೂರು, (ಏಪ್ರಿಲ್ 15): ಧಾರವಾಡ ಬಿಜೆಪಿ ಮುಖಂಡ ಯೋಗೇಶ್‌ ಗೌಡ ಹತ್ಯೆ ಪ್ರಕರಣದಲ್ಲಿ (Dharwad Yogesh Gowda Murder Case) ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (Vinay Kulkarni) ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಸಿಬಿಐ ಅಧಿಕಾರಿಗಳು ಕೋರ್ಟ್​​ನಲ್ಲೇ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದಾರೆ. ಇನ್ನು ನಾಳೆ (ಏಪ್ರಿಲ್ 16) ಶಿಕ್ಷೆ ಪ್ರಮಾಣದ ಬಗ್ಗೆ ಕೋರ್ಟ್​​ನಲ್ಲಿ ವಾದಮಂಡನೆ ನಡೆಯಲಿದ್ದು, ಬಳಿಕ ಕೋರ್ಟ್ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಿದೆ. ಕೊಲೆ, ಹಾಗೂ ಒಳಸಂಚು ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಕನಿಷ್ಠ ಜೀವಾವಧಿ ಶಿಕ್ಷೆ, ಗರಿಷ್ಠ ಮರಣದಂಡನೆಗೆ ಅವಕಾಶವಿದ್ದು, ಇದೀಗ ವಿನಯ್ ಕುಲಕರ್ಣಿ ಶಾಸಕ ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ವಿನಯ್ ಕುಲಕರ್ಣಿ ಶಾಸಕ ಸ್ಥಾನಕ್ಕೆ ಕುತ್ತು

ಯಾವುದೇ ಶಾಸಕನ ವಿರುದ್ಧ 2 ವರ್ಷಕ್ಕಿಂತ ಹೆಚ್ಚಿನ ವರ್ಷ ಜೈಲು ಶಿಕ್ಷೆ ಪ್ರಕಟವಾದರೆ ತಕ್ಷಣ ಆತನ ಶಾಸಕ ಸ್ಥಾನ ರದ್ದಾಗುತ್ತದೆ. ಸದ್ಯ ವಿನಯ್ ಕುಲಕರ್ಣಿ ಪ್ರಕರಣ ಸಂಬಂಧ ಕೊಲೆ, ಹಾಗೂ ಒಳಸಂಚು ಆರೋಪ ಸಾಬೀತು ಹಿನ್ನೆಲೆ ಕನಿಷ್ಠ ಜೀವಾವಧಿ ಶಿಕ್ಷೆ, ಗರಿಷ್ಠ ಮರಣದಂಡನೆಗೆ ಅವಕಾಶವಿದ್ದು, 2 ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದರೆ ಶಾಸಕ ಸ್ಥಾನದಿಂದ ಅನರ್ಹತೆಗೊಳ್ಳಲಿದ್ದಾರೆ. ಹೀಗಾಗಿ ವಿನಯ್ ಕುಲಕರ್ಣಿ ಶಾಸಕ ಸ್ಥಾನಕ್ಕೆ ಕುತ್ತು ಬಂದಿದೆ.

ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಕೇಸ್: ಕೈ ಶಾಸಕ ವಿನಯ್ ಕುಲಕರ್ಣಿ ಸೇರಿ 17 ಜನ ದೋಷಿ, ಕೋರ್ಟ್ ಮಹತ್ವದ ತೀರ್ಪು

ವಿನಯ್ ಕುಲಕರ್ಣಿ ಮುಂದಿರುವ ಆಯ್ಕೆ ಏನು?

ಸದ್ಯ ವಿನಯ್ ಕುಲಕರ್ಣಿ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ನೀಡಿದ್ದು, ನಾಳೆ ಅಂದರೆ ಏಪ್ರಿಲ್ 16) ಶಿಕ್ಷೆ ಪ್ರಮಾಣ ಎಷ್ಟು ಎನ್ನುವುದನ್ನು ಕೋರ್ಟ್ ಪ್ರಕಟಿಸಲಿದೆ. ಇನ್ನು ವಿನಯ್ ಕುಲಕರ್ಣಿ ಮುಂದಿರುವ ಆಯ್ಕೆಗಳೇನು ಎನ್ನುವುದನ್ನು ನೋಡುವುದಾರೆ, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಜಾಮೀನು ಕೋರಬಹುದು. ಇಲ್ಲ ದೋಷಿಯನ್ನಾಗಿಸಿದ ತೀರ್ಪಿಗೂ ತಡೆಯಾಜ್ಞೆ ಕೋರಬಹುದು. ಒಂದು ವೇಳೆ ತಡೆಯಾಜ್ಞೆ ಸಿಕ್ಕರೆ ಮಾತ್ರ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಉಳಿಯಲಿದೆ. ಅಲ್ಲಿ ಒಂದು ವೇಳೆ ಅವರ ವಿರುದ್ಧ ತೀರ್ಪು ಬಂದರೆ ಜೈಲು ಸೇರಬೇಕು ಮಾತ್ರವಲ್ಲ ಅವರ ಶಾಸಕ ಸ್ಥಾನ ಕೂಡ ವಜಾಗೊಳ್ಳಲಿದೆ.

ಕ್ಷೇತ್ರಕ್ಕೆ ಕಾಲಿಡದೇ ಗೆದ್ದು ಬೀಗಿದ ವಿನಯ್ ಕುಲಕರ್ಣಿ

ಇದೇ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ವಿನಯ್ ಕುಲಕರ್ಣಿಗೆ ಕ್ಷೇತ್ರ ಪ್ರವೇಶಕ್ಕೆ ಕೋರ್ಟ್ ನಿರಾಕರಿಸಿತ್ತು. ಹೀಗಾಗಿ ಧಾರವಾಡ ಕ್ಷೇತ್ರಕ್ಕೆ ಪ್ರವೇಶ ಇಲ್ಲದಿದ್ದರೂ ಸಹ ವಿನಯ್ ಕುಲಕರ್ಣಿ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕ್ಷೇತ್ರದಿಂದ ಹೊರಗಿದ್ದುಕೊಂಡೇ ಅಂದು ಹಾಲಿ ಬಿಜೆಪಿ ಶಾಸಕರಾಗಿದ್ದ ಅಮೃತ್ ದೇಸಾಯಿ ಅವರನ್ನು ಸೋಲಿಸಿ ಶಾಸಕರಾಗಿ ವಿಧಾನಸಭೆಗೆ ಪ್ರವೇಶಿಸಿದ್ದರು.

2016ರಲ್ಲಿ ಧಾರವಾಡದ ಜಿಮ್​​ನಲ್ಲಿ ಯೋಗೇಶ್ ಗೌಡ ಕೊಲೆ ನಡೆದಿತ್ತು. ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಅಲ್ಲದೇ ಜೈಲಿನಲ್ಲಿ ಇದ್ದುಕೊಂಡೇ ಯೋಗಿಶ್‌ ಗೌಡ ಜಿಲ್ಲಾ ಪಂಚಾಯತ್‌ ಚುನಾವಣೆ ಗೆದ್ದಿದ್ದರಿಂದ ಹೈ ಪ್ರೊಫೈಲ್‌ ಕೇಸ್ ಆಗಿತ್ತು. ಈ ಕೊಲೆಯಲ್ಲಿ ವಿನಯ್‌ ಕುಲಕರ್ಣಿ ಹೆಸರು ಬಂದಿದ್ದರಿಂದ ಮತ್ತಷ್ಟು ಸಂಚಲನ ಮೂಡಿಸಿತ್ತು. ಬಳಿಕ ಈ ಕೊಲೆ ಪ್ರಕರಣದ ತನಿಖೆ ನಡೆಸಿದ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ವಿನಯ್ ಕುಲಕರ್ಣಿ ಅವರನ್ನು 15ನೇ ಆರೋಪಿಯನ್ನಾಗಿ ಉಲ್ಲೇಖಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಪುಟಾಣಿ ತೊದಲು ನುಡಿಯಲ್ಲಿ ಬೈಯುತ್ತಿದ್ದರೆ ಮುಗುಳುನಗೆ ಬೀರಿದ ತಂದೆ – Kannada News | The father burst into laughter at his daughter’s scolding.

ಮಗಳು ಎಲ್ಲರಿಗೂ ಹುಟ್ಟೋದಿಲ್ಲ, ಪುಣ್ಯವಂತರಿಗೆ ಮಾತ್ರ ಮಗಳು ಹುಟ್ಟೋದು ಎನ್ನುವ ಮಾತಿದೆ. ಮಗಳು ಹುಟ್ಟಿದರೆ ಸಂಭ್ರಮಿಸುವ ಅಪ್ಪಂದಿರು (father) ಇದ್ದಾರೆ. ಹೌದು, ಪ್ರತಿಯೊಬ್ಬ ಅಪ್ಪನಿಗೆ ಮುದ್ದಿನ ಮಗಳು ಪುಟ್ಟ ರಾಜಕುಮಾರಿಯಾಗಿರುತ್ತಾಳೆ. ಇತ್ತ ತಂದೆ ಮಗಳ ತೊದಲ ನುಡಿ ಕೇಳುತ್ತ  ಎಲ್ಲಾ ನೋವನ್ನು ಮರೆಯುತ್ತಾನೆ. ಈ ದೃಶ್ಯ ನೋಡಿದ್ರೆ ನಿಮಗೂ ಕೂಡ ಹಾಗೆ ಅನಿಸುತ್ತದೆ. ಆದರೆ ಇಲ್ಲೊಂದು ಪುಟಾಣಿ ತನ್ನ ತಂದೆಗೆ ತನ್ನದೇ ಭಾಷೆಯಲ್ಲಿ ಬೈಯುತ್ತಿದೆ. ಮಗಳ ಮುದ್ದು ಮುದ್ದಾದ ಬೈಗುಳದ ಮಾತು ಕೇಳಿ ತಂದೆ ಮುಗುಳುನಗೆ ಬೀರಿರುವ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ತಂದೆ ಮಗಳ ಬಾಂಧವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Acrostic ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತಂದೆಯೂ ಬೆಡ್ ಮೇಲೆ ಕುಳಿತಿರುವುದನ್ನು ಕಾಣಬಹುದು. ಎದುರಿಗೆ ನಿಂತಿದ್ದ ಪುಟಾಣಿ ತನ್ನ ತೊದಲು ಭಾಷೆಯಲ್ಲಿ ಅಪ್ಪನಿಗೆ ಬೈಯುತ್ತಿದೆ. ಮುದ್ದಿನ ಮಗಳ ಬೈಗುಳ ಕೇಳುತ್ತಾ ಆ ವ್ಯಕ್ತಿ ಮುಗುಳು ನಗುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮಗಳ ತೊಡೆ ಮೇಲೆ ತಲೆಯಿಟ್ಟು ಹಾಯಾಗಿ ಮಲಗಿದ ತಂದೆ; ಎಷ್ಟು ಚಂದ ನೋಡಿ ಈ ಬಾಂಧವ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಕ್ಯೂಟ್ ಎಂದರೆ ಮತ್ತೊಬ್ಬರು, ತಂದೆಗೆ ಮಗಳೇ ಎರಡನೇ ತಾಯಿ ಎಂದು ಹೇಳಿದ್ದಾರೆ. ಇನ್ನೊಬ್ಬರು ಪುಣ್ಯವಂತರಿಗೆ ಮಾತ್ರ ಮಗಳು ಹುಟ್ಟೋದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನ್ನಿಂದ ಖುಷಿಯಾಗಿರುವ ಚೀನಾದ ಅಧ್ಯಕ್ಷ ಬಿಗಿ ಅಪ್ಪುಗೆ ನೀಡುತ್ತಾರೆ; ಟ್ರಂಪ್ – Kannada News | China president will give me a big hug Donald Trump announces Hormuz opening

ವಾಷಿಂಗ್ಟನ್, ಏಪ್ರಿಲ್ 15: ಇರಾನ್​ಗೆ ಚೀನಾ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ ಎಂಬ ವದಂತಿಗಳು ಎಲ್ಲೆಡೆ ಹರಿದಾಡಿತ್ತು. ಆದರೆ, ನಾವು ಯಾವುದೇ ಆಯುಧಗಳ ಪೂರೈಕೆ ಮಾಡುತ್ತಿಲ್ಲ ಎಂದು ಚೀನಾ ಸ್ಪಷ್ಟನೆ ನೀಡಿತ್ತು. ಅದರ ಬೆನ್ನಲ್ಲೇ ತಮ್ಮ ಟ್ರೂತ್ ಸೋಷಿಯಲ್​ನಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್ (Donald Trump), ‘ಚೀನಾ ಇರಾನ್​ಗೆ ಶಸ್ತ್ರಾಸ್ತ್ರ ಒದಗಿಸುವುದಿಲ್ಲ ಎಂದಿದೆ. ನಾನು ಹಾರ್ಮುಜ್ ಜಲಸಂಧಿಯನ್ನು ತೆರೆಸುತ್ತಿರುವುದರಿಂದ ಚೀನಾ ಅಧ್ಯಕ್ಷರು ಬಹಳ ಖುಷಿಯಾಗಿದ್ದಾರೆ. ಅವರಿಂದ ನನಗೆ ಬಿಗಿಯಾದ ಅಪ್ಪುಗೆ ಸಿಗುವುದು ಖಚಿತ’ ಎಂದು ಹೇಳಿದ್ದಾರೆ.

ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದರ ವಿರುದ್ಧ ಇತರೆ ದೇಶಗಳಿಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚೀನಾ ತಾನು ಇರಾನ್​ಗೆ ಯಾವುದೇ ಶಸ್ತ್ರಾಸ್ತ್ರ ಪೂರೈಕೆ ಮಾಡುವುದಿಲ್ಲ ಎಂದು ಹೇಳಿದೆ. ಕಳೆದ ವಾರ, ಟೆಹ್ರಾನ್‌ಗೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿರುವ ರಾಷ್ಟ್ರದ ಮೇಲೆ ತಕ್ಷಣ 50% ಸುಂಕವನ್ನು ವಿಧಿಸುವುದಾಗಿ ಅವರು ಬೆದರಿಕೆ ಹಾಕಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆ ಟ್ರಂಪ್ 40 ನಿಮಿಷ ಫೋನ್ ಸಂಭಾಷಣೆ; ಹಾರ್ಮುಜ್ ಕುರಿತು ಚರ್ಚೆ

“ನಾನು ಶಾಸ್ವತವಾಗಿ ಹಾರ್ಮುಜ್ ಜಲಸಂಧಿಯನ್ನು ತೆರೆಸಲು ಮುಂದಾಗಿರುವುದಕ್ಕೆ ಚೀನಾ ತುಂಬಾ ಖುಷಿಯಾಗಿದೆ.ನಾನು ಕೆಲವು ವಾರಗಳಲ್ಲಿ ಅಲ್ಲಿಗೆ ಹೋಗಲಿದ್ದೇನೆ. ಆಗ ಚೀನಾದ ಅಧ್ಯಕ್ಷ ಕ್ಸಿ ನನಗೆ ಬಿಗಿಯಾದ ಅಪ್ಪುಗೆಯನ್ನು ನೀಡುತ್ತಾರೆಂಬ ನಿರೀಕ್ಷೆಯಿದೆ. ನಾವು ಒಟ್ಟಿಗೆ ಬುದ್ಧಿವಂತಿಕೆಯಿಂದ ಕೆಲಸ ಮಾಡುತ್ತಿದ್ದೇವೆ, ನಾವು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದೇವೆ!” ಎಂದು ಟ್ರಂಪ್ ಬರೆದಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ವಿಶ್ವದ ದೊಡ್ಡ ಆರ್ಥಿಕತೆ: 5ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದ ಭಾರತ; ಕಾರಣ ಏನು ಗೊತ್ತಾ? – Kannada News | India’s economy size lower than UK and Japan in 2025, as per IMF data, Know why India slipped on place

ನವದೆಹಲಿ, ಏಪ್ರಿಲ್ 15: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು (Indian economy) ಹೊಂದಿರುವ ದೇಶ. ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಬ್ರಿಟನ್ ಮತ್ತು ಜಪಾನ್ ಅನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ದೌಡಾಯಿಸಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಐಎಂಎಫ್ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಭಾರತ ಅತಿದೊಡ್ಡ ಆರ್ಥಿಕತೆಗಳ ಸಾಲಿನಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಪ್ರಕಾರ 2025ರಲ್ಲಿ ಭಾರತದ ಆರ್ಥಿಕತೆ 3.92 ಟ್ರಿಲಿಯನ್ ಡಾಲರ್ ಗಾತ್ರದ್ದಾಗಿರುತ್ತದೆ. ಆ ವರ್ಷ ಯುಕೆ ಅಥವಾ ಬ್ರಿಟನ್​ನದ್ದು 4 ಟ್ರಿಲಿಯನ್ ಡಾಲರ್ ಜಿಡಿಪಿ ಇದೆ. ಜಪಾನ್ 4.44 ಟ್ರಿಲಿಯನ್ ಡಾಲರ್ ಗಾತ್ರದ ಜಿಡಿಪಿ ಹೊಂದಿದೆ.

ಹಿಂದಿನ ವರ್ಷದಲ್ಲಿ (2024) ಭಾರತದ ಜಿಡಿಪಿಯು ಬ್ರಿಟನ್​ನದಕ್ಕಿಂತ ಹೆಚ್ಚಿತ್ತು. ಅತಿದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿತ್ತು. ಆದರೆ, 2025ರಲ್ಲಿ ಭಾರತ ಒಂದು ಸ್ಥಾನ ಕುಸಿದಿದ್ದು ಹೇಗೆ? ಈ ಒಂದು ವರ್ಷದಲ್ಲಿ ಭಾರತದ ಬೆಳವಣಿಗೆ ವೇಗವೇನೂ ಕಡಿಮೆ ಆಗಲಿಲ್ಲ. ಬ್ರಿಟನ್​ನ ವೇಗವೇನೂ ಭಾರತದ ಸಮಕ್ಕೂ ಇರಲಿಲ್ಲ. ಆದರೂ ಕೂಡ ಭಾರತ ಒಂದು ಸ್ಥಾನ ಕಡಿಮೆಗೊಂಡಿದೆ. ಅದಕ್ಕೆ ಸಕಾರಣಗಳೂ ಇವೆ.

ಇದನ್ನೂ ಓದಿ: ಕಳೆದ ವರ್ಷ ಭಾರತದಿಂದ 860 ಬಿಲಿಯನ್ ಡಾಲರ್ ರಫ್ತು; ಇದು ಹೊಸ ದಾಖಲೆ

2025ರ ವರ್ಷದಲ್ಲಿ ಭಾರತ ರುಪಾಯಿ ಲೆಕ್ಕದಲ್ಲಿ ಶೇ. 9ರಷ್ಟು ನಾಮಿನಲ್ ಗ್ರೋತ್ ದಾಖಲಿಸಿದೆ. ಆದರೆ, ಜಿಡಿಪಿ ಲೆಕ್ಕಾಚಾರಕ್ಕೆ ಹೊಸ ಸರಣಿಯನ್ನು ಆಧಾರವಾಗಿರಿಸಲಾಗಿದೆ. ಇದರಿಂದ ಜಿಡಿಜಿ ಲೆಕ್ಕಾಚಾರದಲ್ಲಿ ಬದಲಾವಣೆಗಳಾಗಿ, ಜಿಡಿಪಿ ಕಡಿಮೆಗೊಂಡಿದೆ. ಇದು ಒಂದು ಕಾರಣ. ಹಾಗೆಯೇ, ಡಾಲರ್ ಎದುರು ರುಪಾಯಿ ಮೌಲ್ಯ ಬಹಳಷ್ಟು ಕಡಿಮೆಗೊಂಡಿದ್ದೂ ಜಿಡಿಪಿಗೆ ಹಿನ್ನಡೆ ತಂದಿದೆ. 2024ರಲ್ಲಿ ಒಂದು ಡಾಲರ್​ಗೆ 84.6 ರುಪಾಯಿ ಇತ್ತು. 2025ರಲ್ಲಿ ಅದು 88.5ಕ್ಕೆ ಇಳಿಯಿತು. ಜಿಡಿಪಿಯು ಡಾಲರ್ ಲೆಕ್ಕದಲ್ಲಿ ಇರುವುದರಿಂದ ಒಟ್ಟಾರೆ ಜಿಡಿಪಿ ಗಾತ್ರ ಕುಸಿದಿದೆ.

2026ರಲ್ಲಿ ಭಾರತದ ಸ್ಥಾನ ಏರುತ್ತಾ?

ಐಎಂಎಫ್ ಅಂದಾಜು ಪ್ರಕಾರ 2026ರಲ್ಲೂ ಭಾರತದ ಸ್ಥಾನದಲ್ಲಿ ಬದಲಾವಣೆ ಆಗುವುದಿಲ್ಲ. ಅತಿದೊಡ್ಡ ಆರ್ಥಿಕತೆಯ ದೇಶಗಳ ಸಾಲಿನಲ್ಲಿ ಭಾರತ 6ನೇ ಸ್ಥಾನದಲ್ಲೇ ಮುಂದುವರಿಯಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ 2027ರಲ್ಲಿ ಭಾರತ ಐದನೇ ಸ್ಥಾಕ್ಕೆ ಏರಬಹುದು. 2028ಕ್ಕೆ ಜಪಾನ್ ಅನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಏರಬಹುದು.

ಇದನ್ನೂ ಓದಿ: ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಉತ್ತಮ ಆರ್ಥಿಕ ಬೆಳವಣಿಗೆ ಸಾಧ್ಯತೆ: ಐಎಂಎಫ್ ಅಂದಾಜು

2027ರಲ್ಲಿ ಬ್ರಿಟನ್​ನ ಜಿಡಿಪಿ 4.47 ಟ್ರಿಲಿಯನ್ ಡಾಲರ್ ಇರಲಿದ್ದು, ಭಾರತದ ಜಿಡಿಪಿ 4.58 ಟ್ರಿಲಿಯನ್ ಡಾಲರ್​ಗೆ ಏರಬಹುದು. 2028ರಲ್ಲಿ ಜಪಾನ್ ಜಿಡಿಪಿ 4.75 ಟ್ರಿಲಿಯನ್ ಡಾಲರ್ ಇದ್ದರೆ, ಭಾರತದ ಜಿಡಿಪಿ 5 ಟ್ರಿಲಿಯನ್ ಡಾಲರ್ ಗಡಿ ದಾಟಬಹುದು.

ಅಮೆರಿಕ, ಚೀನಾ ಮತ್ತು ಜರ್ಮನಿ ದೇಶಗಳು ಟಾಪ್-3ಯಲ್ಲಿ ಮುಂದುವರಿಯಲಿವೆ. 2030ಕ್ಕೆ ಭಾರತದ ಜಿಡಿಪಿ 6 ಟ್ರಿಲಿಯನ್ ಡಾಲರ್ ಗಡಿದಾಟಲಿದ್ದು, ಜರ್ಮನಿಯ ಆರ್ಥಿಕತೆಯ ಗಾತ್ರಕ್ಕೆ ಸಮೀಪ ಹೋಗಬಹುದು. 2030ರ ನಂತರ ಭಾರತ ಜರ್ಮನಿಯನ್ನು ಮೀರಿಸಿ ಬೆಳೆಯುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

RCB vs LSG Playing XI: ಲಕ್ನೋ ಮೊದಲು ಬ್ಯಾಟಿಂಗ್‌; ಆರ್​ಸಿಬಿ ಪ್ಲೇಯಿಂಗ್ 11 ನಲ್ಲಿ ಕೊಹ್ಲಿ ಇಲ್ಲ..! – Kannada News | RCB vs LSG Playing XI Royal Challengers Bengaluru vs Lucknow Super Giants Today IPL 2026 match Confirmed playing 11 details with name in Kannada

ಐಪಿಎಲ್​ 2026 ರ (IPL 2026) 20ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಅವರ ನೆಲದಲ್ಲಿ 18 ರನ್​ಗಳಿಂದ ಮಣಿಸಿದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಮತ್ತೆ ತನ್ನ ತವರು ನೆಲದಲ್ಲಿ ಕಣಕ್ಕಿಳಿದಿದೆ. ಮೊದಲ ಎರಡು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡಿದ್ದ ಆರ್​ಸಿಬಿ ಆ ಬಳಿಕ ಎದುರಾಳಿ ತಂಡಗಳ ತವರು ನೆಲದಲ್ಲಿ ಆಡಲು ಅಲ್ಲಿಗೆ ಪ್ರಯಾಣ ಬೆಳೆಸಿತ್ತು. ಇದೀಗ ಆರ್​ಸಿಬಿ (RCB) ತನ್ನ ಐದನೇ ಪಂದ್ಯವನ್ನು ತನ್ನ ತವರು ನೆಲದಲ್ಲಿ ಆಡುತ್ತಿದೆ. ಲೀಗ್​ನಲ್ಲಿ ಇದುವರೆಗೆ 4 ಪಂದ್ಯಗಳನ್ನಾಡಿರುವ ಆರ್​ಸಿಬಿ ಮೂರು ಪಂದ್ಯಗಳಲ್ಲಿ ಗೆದ್ದು, ಒಂದು ಪಂದ್ಯವನ್ನು ಸೋತಿದೆ. ಈ ಮೂಲಕ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಮೇಲೇರುವ ಇರಾದೆಯಲ್ಲಿ ರಜತ್ ಪಡೆ ಇದೆ.

ಟಾಸ್ ಗೆದ್ದ ಆರ್​ಸಿಬಿ

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಲಕ್ನೋ ಮೊದಲು ಬ್ಯಾಟಿಂಗ್‌ ಮಾಡಲಿದೆ. ಇನ್ನು ಕಳೆದ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲಿದ್ದಾರೆ. ಅಂದರೆ ಕೊಹ್ಲಿ ಬ್ಯಾಟಿಂಗ್‌ ಮಾತ್ರ ಮಾಡಲಿದ್ದಾರೆ. ಉಳಿದಂತೆ ಆರ್​ಸಿಬಿ ತಂಡದಲ್ಲಿ 1 ಬದಲಾವಣೆಯಾಗಿದ್ದು, ಜೆಕೋಬ್ ಡಫ್ಫಿ ಬದಲಿಗೆ ಜೋಸ್ ಹೇಜಲ್‌ವುಡ್ ತಂಡದಲ್ಲಿ ಆಡಲಿದ್ದಾರೆ. ಇತ್ತ ಲಕ್ನೋ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಮುಖಾಮುಖಿ ದಾಖಲೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಇದುವರೆಗೆ ಆರು ಪಂದ್ಯಗಳನ್ನು ಆಡಿವೆ. ಆರ್‌ಸಿಬಿ ಈ ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ಎರಡರಲ್ಲಿ ಗೆದ್ದಿದೆ. ಆದಾಗ್ಯೂ, ಎಂಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಎರಡೂ ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಗೆದ್ದಿದೆ. ಹೀಗಾಗಿ ಈ ಪಂದ್ಯ ಆರ್‌ಸಿಬಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

RCB vs LSG IPL 2026 Live Score: ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ

ಆಡುವ ಹನ್ನೊಂದರ ಬಳಗ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್​​ವುಡ್, ಮತ್ತು ಸುಯಾಶ್ ಶರ್ಮಾ.

ಲಕ್ನೋ ಪ್ಲೇಯಿಂಗ್ XI: ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್, ರಿಷಭ್ ಪಂತ್ (ನಾಯಕ), ಆಯುಷ್ ಬಡೋನಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ಅವೇಶ್ ಖಾನ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:09 pm, Wed, 15 April 26

Source link

ರಾತ್ರಿ ಸಮಯದಲ್ಲಿ ಪದೇಪದೇ ಹಸಿವಾಗುವುದಕ್ಕೆ ಕಾರಣವೇನು? ಇದು ಕಾಯಿಲೆಯ ಲಕ್ಷಣವೇ? – Kannada News | Late Night Cravings? Causes and Healthy Ways to Manage

Late Night Cravings? Causes and Healthy Ways to ManageImage Credit source: Getty Images

ಕೆಲವರಿಗೆ ದಿನಪೂರ್ತಿ ಸರಿಯಾಗಿ ಆಹಾರ ಸೇವನೆ ಮಾಡಿದರೂ ಕೂಡ, ರಾತ್ರಿ ಸಮಯದಲ್ಲಿ ಪದೇಪದೇ ಹಸಿವಾಗುತ್ತದೆ. ಮಧ್ಯರಾತ್ರಿ ಎದ್ದಾಗ ಏನಾದರೂ ತಿನ್ನಬೇಕೆನ್ನಿಸುವುದು ಸಾಮಾನ್ಯವೆನಿಸಬಹುದು. ಆದರೆ ಇದು ಪ್ರತಿದಿನ ನಡೆಯುತ್ತಿದ್ದರೆ, ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಈ ರೀತಿಯಾಗುವುದಕ್ಕೆ ಕಾರಣವೇನು, ಇದು ಕಾಯಿಲೆ ಬರುವ ಮುನ್ಸೂಚನೆಯೇ, ನಿದ್ರೆಗೂ ಮತ್ತು ಹಸಿವಿಗೂ (Hungry) ಇರುವ ಸಂಬಂಧವೇನು, ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಸಿವಿನ ಹಿಂದಿರುವ ಕಾರಣವೇನು?

ಡಾ. ದೀಪಕ್ ಕುಮಾರ್ ಹೇಳುವ ಪ್ರಕಾರ, ರಾತ್ರಿ ಸಮಯದಲ್ಲಿ ಹಸಿವು ಕಾಣಿಸಿಕೊಳ್ಳುವುದು ದೇಹಕ್ಕೆ ಇನ್ನೂ ಎನರ್ಜಿ ಬೇಕೆಂಬ ಸೂಚನೆಯಾಗಿದೆ. ಇದು ಸಾಮಾನ್ಯವಾಗಿ ಕಂಡುಬಂದರೂ ಕೂಡ ಈ ರೀತಿಯಾಗುವುದಕ್ಕೆ ಕಾರಣವಿದೆ. ಮೆದುಳು ದೇಹಕ್ಕೆ ಹಸಿವಿನ ಸಂದೇಶ ಕಳುಹಿಸುವುದರಿಂದ ರಾತ್ರಿ ಕೂಡ ಆಹಾರ ಸೇವಿಸಬೇಕು ಎಂದು ಅನಿಸುತ್ತದೆ.

ಇದು ಕಾಯಿಲೆಯ ಲಕ್ಷಣವೇ?

ಕೆಲವು ಸಂದರ್ಭಗಳಲ್ಲಿ ಇದು ‘ನೈಟ್ ಈಟಿಂಗ್ ಸಿಂಡ್ರೋಮ್’ (Night Eating Syndrome) ಎಂಬ ಸಮಸ್ಯೆಯಾಗಿರಬಹುದು. ಈ ಸ್ಥಿತಿಯಲ್ಲಿ ವ್ಯಕ್ತಿಗೆ ರಾತ್ರಿ ಸಮಯದಲ್ಲಿ ಹೆಚ್ಚು ಹಸಿವು ಕಾಣಿಸಿಕೊಳ್ಳುತ್ತದೆ ಮತ್ತು ಅವರು ಪದೇ ಪದೇ ಎದ್ದು ಏನಾದರೂ ತಿಂಡಿ ತಿನ್ನುತ್ತಾರೆ. ಆದರೆ ಪ್ರತಿದಿನವೂ ಇದೆ ರೀತಿಯಾಗುತ್ತಿದ್ದರೆ ಮಾತ್ರ ಸಮಸ್ಯೆಯಾಗಿ ಪರಿಗಣಿಸಬೇಕಾಗುತ್ತದೆ. ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಆಗುವುದು ಸಾಮಾನ್ಯ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಪ್ರತಿ ಇಬ್ಬರು ಉದ್ಯೋಗಿಗಳಲ್ಲಿ ಒಬ್ಬರಿಗೆ ಮಧುಮೇಹದ ಅಪಾಯ! ಸಮೀಕ್ಷೆಯಲ್ಲಿ ಆತಂಕಕಾರಿ ಅಂಶ ಬಹಿರಂ

ನಿದ್ರೆ ಮತ್ತು ಹಸಿವಿಗಿರುವ ಸಂಬಂಧ

ರಾತ್ರಿ ತಡವಾಗಿ ಮಲಗುವವರಿಗೆ ನಿದ್ರೆಯ ಕೊರತೆ ಉಂಟಾಗುತ್ತದೆ. ಇದರಿಂದ ‘ಘ್ರೆಲಿನ್’ ಎಂಬ ಹಾರ್ಮೋನ್ ಪ್ರಮಾಣ ಹೆಚ್ಚಾಗುತ್ತದೆ, ಇದು ಹಸಿವು ಹೆಚ್ಚಿಸಲು ಕಾರಣವಾಗುತ್ತದೆ. ಹೀಗಾಗಿ ರಾತ್ರಿ ಸಮಯದಲ್ಲಿ ಪದೇಪದೇ ಹಸಿವು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ದೀರ್ಘಕಾಲ ಮುಂದುವರಿದರೆ ಅತಿಯಾದ ತೂಕ, ಮೆಟಾಬಾಲಿಕ್ ಸಮಸ್ಯೆಗಳು ಮತ್ತು ಯಕೃತ್ತಿನ ಕಾಯಿಲೆಗಳಿಗೂ ಕಾರಣವಾಗಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ನಿಯಂತ್ರಿಸುವುದು ಬಹಳ ಮುಖ್ಯ.

ಹೇಗೆ ನಿಯಂತ್ರಿಸಬೇಕು?

  • ದಿನಕ್ಕೆ 3 ರಿಂದ 4 ಬಾರಿ ಸಮತೋಲನ ಆಹಾರ ಸೇವಿಸಿ
  • ರಾತ್ರಿ ಹಗುರವಾದ ಆಹಾರ ತೆಗೆದುಕೊಳ್ಳಿ
  • ತಡವಾಗಿ ಮಲಗುವ ಅಭ್ಯಾಸ ಬಿಡಿ
  • ಒತ್ತಡವನ್ನು ನಿಯಂತ್ರಿಸಿ
  • ಸಮಸ್ಯೆ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೂನ್ ತಿಂಗಳಿಗೆ ‘ಪೆದ್ದಿ’ ಸಿನಿಮಾ ರಿಲೀಸ್ ಮುಂದೂಡಿಕೆ: ‘ಟಾಕ್ಸಿಕ್’ ಎದುರು ಪೈಪೋಟಿ? – Kannada News | Ram Charan starrer Peddi movie release date again pushed to June

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅಭಿನಯದ ‘ಪೆದ್ದಿ’ ಸಿನಿಮಾ ಏಪ್ರಿಲ್ 30ರಂದು ಬಿಡುಗಡೆ ಆಗಬೇಕಿತ್ತು. ಆದರೆ, ಯಾವುದೇ ಪ್ರಚಾರ ಕಾರ್ಯಗಳು ನಡೆಯದ ಕಾರಣ ಸಿನಿಮಾ ಮುಂದೂಡಿಕೆ ಆಗಲಿದೆ ಎಂದು ಮೊದಲೇ ಊಹಿಸಲಾಗಿತ್ತು. ಈಗ ಆ ಊಹೆ ನಿಜವಾಗಿದೆ. ಚಿತ್ರತಂಡ ಅಧಿಕೃತವಾಗಿ ಇದನ್ನು ಘೋಷಿಸಿದೆ. ‘ಪೆದ್ದಿ’ (Peddi) ಚಿತ್ರವು ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಆದರೆ ನಿಖರವಾಗಿ ಹೊಸ ಬಿಡುಗಡೆ ದಿನಾಂಕವನ್ನು (Peddi Release Date) ತಿಳಿಸಿಲ್ಲ. ಹಾಗಾಗಿ ಈ ಸಿನಿಮಾದ ಬಿಡುಗಡೆಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹಾಗೆಯೇ ಮುಂದುವರಿದಿದೆ.

ಸೋಶಿಯಲ್ ಮೀಡಿಯಾದಲ್ಲಿ ‘ಪೆದ್ದಿ’ ಚಿತ್ರತಂಡದವರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ‘ನಮ್ಮ ಹಾಡುಗಳು ಮತ್ತು ಗ್ಲಿಂಪ್ಸ್‌ಗಳಿಗೆ ನೀವು ನೀಡಿದ ಅದ್ಭುತ ಪ್ರತಿಕ್ರಿಯೆಗೆ ಧನ್ಯವಾದಗಳು. ‘ಪೆದ್ದಿ’ ಚಿತ್ರದ ಮೇಲೆ ನೀವು ತೋರುತ್ತಿರುವ ಪ್ರೀತಿ ಮತ್ತು ಉತ್ಸಾಹವನ್ನು ಕಂಡು ನಮಗೆ ನಿಜಕ್ಕೂ ಸಂತೋಷವಾಗಿದೆ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಕೇವಲ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ನಾವು ಚಿತ್ರದ ಎಡಿಟಿಂಗ್ ನೋಡಿದ್ದು, ಬಂದಿರುವ ಔಟ್‌ಪುಟ್ ಬಗ್ಗೆ ನಮಗೆ ಅತ್ಯಂತ ತೃಪ್ತಿಯಿದೆ’ ಎಂದು ಚಿತ್ರತಂಡ ಹೇಳಿದೆ.

‘ನಮ್ಮ ಕೈಯಲ್ಲಿ ಇಂತಹ ಉತ್ತಮ ಕಂಟೆಂಟ್ ಇರುವುದರಿಂದ, ಅದನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಪ್ರೇಕ್ಷಕರ ಮುಂದೆ ತರಲು ನಾವು ಬಯಸುತ್ತೇವೆ. ಅದಕ್ಕಾಗಿ, ನಮ್ಮ ತಾಂತ್ರಿಕ ವರ್ಗ ಮತ್ತು ಪೋಸ್ಟ್-ಪ್ರೊಡಕ್ಷನ್ ತಂಡಕ್ಕೆ ಇನ್ನಷ್ಟು ಸಮಯ ನೀಡುವುದು ಅಗತ್ಯ ಎಂದು ನಮಗೆ ಅನಿಸಿದೆ. ಇದರಿಂದ ಅವರು ಚಿತ್ರವನ್ನು ಪರಿಪೂರ್ಣತೆಯೊಂದಿಗೆ ಹೊರತರಲು ಸಾಧ್ಯವಾಗುತ್ತದೆ. ನಿಮಗೆ ಅತ್ಯುತ್ತಮವಾದ ಥಿಯೇಟರ್ ಅನುಭವವನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ’ ಎಂದಿದೆ ‘ಪೆದ್ದಿ’ ತಂಡ.

‘ಚಿತ್ರದ ಬಿಡುಗಡೆಯನ್ನು ನಾವು ಜೂನ್ ತಿಂಗಳಿಗೆ ಮುಂದೂಡಲು ನಿರ್ಧರಿಸಿದ್ದೇವೆ. ನಿಖರವಾದ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ನಿಮ್ಮ ನಿರಂತರ ಬೆಂಬಲ ಮತ್ತು ತಾಳ್ಮೆಗೆ ಧನ್ಯವಾದಗಳು. ಇದು ನಮಗೆ ಬಹಳ ಮುಖ್ಯವಾದುದು’ ಎಂದು ಪೆದ್ದಿ ಚಿತ್ರತಂಡದವರು ಮಾಹಿತಿ ನೀಡಿದ್ದಾರೆ. ಹೊಸ ಬಿಡುಗಡೆ ದಿನಾಂಕವನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರಕ್ಕೆ ಜಾನ್ವಿ, ಮೃಣಾಲ್ ಮೆರುಗು: ಶೀಘ್ರವೇ ಸಾಂಗ್ ಶೂಟಿಂಗ್ ಶುರು

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಜೂನ್ 4ರಂದು ರಿಲೀಸ್ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಆ ಸಿನಿಮಾ ತೆರೆಕಾಣಲಿದೆ. ಭಾರಿ ನಿರೀಕ್ಷೆ ಇರುವುದರಿಂದ ಜೂನ್ ತಿಂಗಳು ಪೂರ್ತಿ ‘ಟಾಕ್ಸಿಕ್’ ಅಬ್ಬರ ಇರಲಿದೆ. ಅದೇ ತಿಂಗಳಲ್ಲಿ ‘ಪೆದ್ದಿ’ ಬಿಡುಗಡೆ ಆಗುತ್ತಿರುವುದರಿಂದ ಬಾಕ್ಸ್ ಆಫೀಸ್​ನಲ್ಲಿ ಕ್ಲ್ಯಾಶ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link