Category Archives: Blog

Your blog category

ಬಾಗಲಕೋಟೆ ಉಪಚುನಾವಣೆ ಪ್ರಚಾರದ ವೇಳೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕರಿಗೆ ಸಂಕಷ್ಟ – Kannada News | Bagalkot By election: C.C. Patil’s Kuruba Remarks Spark Outrage, Pratap Simha Also Under Fire

ಬಾಗಲಕೋಟೆ, ಏಪ್ರಿಲ್​ 14: ಬಾಗಲಕೋಟೆ, ದಾವಣಗೆರೆ ಉಪಚುನಾವಣೆ (By-election) ಎಲ್ಲರ ಗಮನ ಸೆಳೆದಿವೆ. ಉಪಚುನಾವಣೆ ಪ್ರಯುಕ್ತ ಘಟಾನುಘಟಿ ನಾಯಕರು ಬಂದು ಮತಯಾಚನೆ ಮಾಡಿ ಹೋಗಿದ್ದಾರೆ. ಆದರೆ ಪ್ರಚಾರದ ಭರಾಟೆಯಲ್ಲಿ ನಾಯಕರು ಆಡಿದ ಮಾತುಗಳು ಇದೀಗ ವಿವಾದಕ್ಕೆ ಈಡಾಗಿವೆ. ಮಾಜಿ ಸಚಿವ ಸಿಸಿ ಪಾಟಿಲ್ ಕುರುಬ ಸಮಾಜದ ಬಗ್ಗೆ ಟುರ್ ಎಂದು ಬಳಸಿದ ಪದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಹೆಚ್​ವೈ ಮೇಟಿ ಅಕಾಲಿಕ ನಿಧನದಿಂದ ಬಾಗಲಕೋಟೆಗೆ ಉಪಚುನಾವಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರ ಎರಡು ಪ್ರಮುಖ ಪಕ್ಷದ ಘಟಾನುಘಟಿ ನಾಯಕರು ಪ್ರಚಾರ ಮಾಡಿ ಹೋಗಿದ್ದಾರೆ. ಆದರೆ ಪ್ರಚಾರದ ಭರಾಟೆಯಲ್ಲಿ ಕೆಲ ನಾಯಕರು ನಾಲಿಗೆ ಹರಿಬಿಟ್ಟು ಸುದ್ದಿಯಾಗಿದ್ದರು.

ಮಾಜಿ ಸಂಸದ ಪ್ರತಾಪ ಸಿಂಹ ವಿರುದ್ಧ ದೂರು 

ಮೈಸೂರು ಮಾಜಿ ಸಂಸದ ಪ್ರತಾಪ ಸಿಂಹ ಸಿಎಂ ಸಿದ್ದರಾಮಯ್ಯ ವಿರುದ್ದ ನಾಲಿಗೆ ಹರಿಬಿಟ್ಟಿದ್ದರು. ಮಾಂಸನಾದ್ರೂ ತಿನ್ನು, ಸುನ್ನತ್​​ ಆದರೂ ಮಾಡಿಕೋ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಕಾಂಗ್ರೆಸ್ ಮುಖಂ ವಕೀಲ ರಮೇಶ್ ಬದ್ನೂರು ನವನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಸಿಸಿ ಪಾಟೀಲ್ ಕ್ಷಮೆ ಕೇಳಬೇಕು: ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಆಗ್ರಹ

ಇದೊಂದು ಕಡೆ ಆದರೆ ಪಂಚಮಸಾಲಿ ಸಮಾಜದ ಪ್ರಚಾರ ಸಭೆ ವೇಳೆ ಮಾಜಿ ಸಚಿವ ಸಿಸಿ ಪಾಟೀಲ್​ ಆಡಿದ ಮಾತಿಗೆ ಕುರುಬ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಟುರ್‌ ಎಂಬ ಪದ ಬಳಕೆ ಮಾಡಿರುವುದು ಕುರುಬ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಡಿಬಿ ಸಿದ್ದಾಪುರ ಸಿಸಿ ಪಾಟೀಲ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ 

ಸಿಸಿ ಪಾಟೀಲ್​ ಆಡಿದ ಮಾತಿಗೆ ಬಿಜೆಪಿ ಕುರುಬ ಸಮಾಜದ‌ ನಾಯಕರೂ ಕಿಡಿ ಕಾರುತ್ತಿದ್ದಾರೆ. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ತಾಯಿ‌ ಮಗನ ರೀತಿ ಸಂಬಂಧ ಹೊಂದಿದವರು. ಆದರೆ ಸಿಸಿ ಪಾಟೀಲ್​ ಇಂತಹ ಮಾತುಗಳನ್ನಾಡಿ ಕುರುಬ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಕೂಡಲೇ ಒಂದು ವಾರದೊಳಗೆ ಸಿಸಿ ಪಾಟೀಲ್​ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ನರಗುಂದದಲ್ಲಿರುವ ಅವರ ಮನೆಗೆ ಕುರಿ ಸಮೇತ​ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ

ಇನ್ನು ಪ್ರಚಾರದ ವೇಳೆ ಮತದಾರರನ್ನು ಸೆಳೆಯೋದಕ್ಕೆ ನಾಯಕರು ವಿವಿಧ ಟ್ರಿಕ್ ಬಳಸಿದ್ದರು. ಸಮಾಜದ ಸಭೆಗಳ ಮೂಲಕ ಆಯಾ ಸಮಾಜದ ಮತ ಸೆಳೆಯುವಲ್ಲಿ ಪ್ರಯತ್ನಿಸಿದ್ದರು. ಆದರೆ ಮಾತಿನ ಭರದಲ್ಲಿ‌ ನಾಲಿಗೆ ಹಿಡಿತ‌ ಕಳೆದುಕೊಂಡು ಆಕ್ರೋಶಕ್ಕೆ‌ ಕಾರಣರಾಗಿದ್ದಾರೆ. ಒಟ್ಟಿನಲ್ಲಿ ಪ್ರಚಾರದ ವೇಳೆ ಆಡಿದ ಮಾತುಗಳು ನಾಯಕರಿಗೆ ಮುಳುವಾಗುತ್ತಿವೆ. ಆಡಿದ‌ ಮಾತಿಗೆ ಸ್ವಪಕ್ಷದಿಂದಲೇ ಇದೀಗ ವಿರೋಧ ಎದುರಿಸುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

CSK vs KKR Playing XI: ಕಿಂಗ್ಸ್ vs ರೈಡರ್ಸ್​: ಹೀಗಿದೆ ಪ್ಲೇಯಿಂಗ್ 11 – Kannada News | CSK vs KKR Playing XI Chennai Super Kings vs Kolkata Knight Riders Today IPL 2026 match Confirmed playing 11 details with name in Kannada

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 21ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಮ್ಯಾಚ್​ನಲ್ಲಿ ಟಾಸ್ ಗೆದ್ದಿರುವ ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಸಿಎಸ್​ಕೆ ಮೊದಲು ಬ್ಯಾಟ್ ಮಾಡಿದೆ.

ಇನ್ನು ಈ ಪಂದ್ಯಕ್ಕೂ ಮಹೇಂದ್ರ ಸಿಂಗ್ ಧೋನಿ ಅಲಭ್ಯರಾಗಿದ್ದು, ಅದರಂತೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಸರ್ಫರಾಝ್ ಖಾನ್, ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್, ಜೇಮಿ ಓವರ್ಟನ್, ನೂರ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಖಲೀಲ್ ಅಹ್ಮದ್.

ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ಅಜಿಂಕ್ಯ ರಹಾನೆ (ನಾಯಕ), ಕ್ಯಾಮರೋನ್ ಗ್ರೀನ್, ಆಂಗ್​ಕ್ರಿಶ್ ರಘುವಂಶಿ (ವಿಕೆಟ್ ಕೀಪರ್), ರೋವ್​ಮನ್ ಪೊವೆಲ್, ರಿಂಕು ಸಿಂಗ್, ಸುನಿಲ್ ನರೈನ್, ರಮಣ್​ದೀಪ್ ಸಿಂಗ್, ಅನುಕುಲ್ ರಾಯ್, ವರುಣ್ ಚಕ್ರವರ್ತಿ, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ.

ಉಭಯ ತಂಡಗಳ ಮುಖಾಮುಖಿ:

ಸಿಎಸ್​ಕೆ ಮತ್ತು ಕೆಕೆಆರ್ ತಂಡಗಳು ಐಪಿಎಲ್​ನಲ್ಲಿ ಈವರೆಗೆ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆದ್ದಿರುವುದು ಕೇವಲ 11 ಮ್ಯಾಚ್​ಗಳಲ್ಲಿ ಮಾತ್ರ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿದ್ದವು. ಇದೀಗ ಬಲಿಷ್ಠತೆಯಲ್ಲಿ ಸಮಬಲ ಹೊಂದಿರುವುದರಿಂದ ಇಂದಿನ ಮ್ಯಾಚ್​ನಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಅಜಿಂಕ್ಯ ರಹಾನೆ (ನಾಯಕ), ಅಂಗ್​ಕ್ರಿಶ್ ರಘುವಂಶಿ, ಅನುಕುಲ್ ರಾಯ್, ಮನೀಶ್ ಪಾಂಡೆ, ರಮಣದೀಪ್ ಸಿಂಗ್, ರಿಂಕು ಸಿಂಗ್, ರೋವ್​ಮನ್ ಪೊವೆಲ್, ಸುನಿಲ್ ನರೈನ್, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕ್ಯಾಮೆರೋನ್ ಗ್ರೀನ್, ಫಿನ್ ಅಲೆನ್, ಮಥೀಶ ಪತಿರಾಣ, ತೇಜಸ್ವಿ ಸಿಂಗ್, ಕಾರ್ತಿಕ್ ತ್ಯಾಗಿ, ಪ್ರಶಾಂತ್ ಸೋಲಂಕಿ, ರಾಹುಲ್ ತ್ರಿಪಾಠಿ, ಟಿಮ್ ಸೈಫರ್ಟ್, ಬ್ಲೆಸ್ಸಿಂಗ್ ಮುಝರಬಾನಿ, ಸಾರ್ಥಕ್ ರಂಜನ್, ದಕ್ಷ್ ಕಮ್ರಾ, ರಚಿನ್ ರವೀಂದ್ರ, ಆಕಾಶ್ ದೀಪ್.

ಇದನ್ನೂ ಓದಿ: CSK vs KKR IPL 2026 Live Score: ಕಿಂಗ್ಸ್ ಮತ್ತು ರೈಡರ್ಸ್ ನಡುವಣ ಕದನ

ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್‌ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮಿ ಓವರ್‌ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌಧರಿ, ನಾಥನ್ ಎಲ್ಲಿಸ್, ಅಕೇಲ್ ಹೊಸೈನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಝ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಹರ್, ಝಾಕ್ ಫೌಲ್ಕ್ಸ್.

Source link

ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು? – Kannada News | A Woman Commits Suicide after Killed Daughter In Bengaluru

ಬೆಂಗಳೂರು, (ಏಪ್ರಿಲ್ 14): ತನ್ನ 14 ವರ್ಷದ ಮಗಳನ್ನು (Daughter) ಕೊಂದು ಬಳಿಕ ತಾಯಿ (Mother)ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ವೈಟ್‌ಫೀಲ್ಡ್ (Whitefield) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯ ಕೋಣೆಯಲ್ಲಿ ಮಗಳು ಕಾರುಣ್ಯಳನ್ನ ಉಸಿರುಗಟ್ಟಿಸಿ ಕೊಂದು ನಂತರ ತಾಯಿ ಸುವರ್ಣಾ(40) ನೇಣುಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಇನ್ನು ಘಟನಾ ಸ್ಥಳಕ್ಕೆ ವೈಟ್​ಫೀಲ್ಡ್ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ಜೈ ಶ್ರೀರಾಮ್ ಹೇಳುವ ರೋಗಿಗಳಿಗೆ 500 ರೂ. ಶುಲ್ಕ ರಿಯಾಯಿತಿ; ವಿವಾದಕ್ಕೀಡಾದ ವೈದ್ಯ – Kannada News | Kolkata cardiologist doctor offers Rs 500 discount if patients say Jai Shree Ram at his clinic

ಕೊಲ್ಕತ್ತಾ, ಏಪ್ರಿಲ್ 14: ಕೊಲ್ಕತ್ತಾದ ಹೃದ್ರೋಗ ತಜ್ಞರೊಬ್ಬರು ತಮ್ಮ ಕ್ಲಿನಿಕ್​ನಲ್ಲಿ “ಜೈ ಶ್ರೀ ರಾಮ್” (Jai Shree Ram) ಎಂದು ಹೇಳುವ ರೋಗಿಗಳಿಗೆ ಶುಲ್ಕದಲ್ಲಿ 500 ರೂ. ರಿಯಾಯಿತಿ ನೀಡುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸದ್ಯದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ವೈದ್ಯರ ನಡೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕೊಲ್ಕತ್ತಾದ ಹೃದ್ರೋಗ ತಜ್ಞ ಡಾ. ಪಿ. ಕೆ. ಹಜ್ರಾ ತಮ್ಮ ಖಾಸಗಿ ಕ್ಲಿನಿಕ್​ನಲ್ಲಿ ಬಿಳಿ ಕೋಟ್ ಧರಿಸಿ, ಅದರ ಮೇಲೆ ಬಿಜೆಪಿಯ ಚಿಹ್ನೆ ಇರುವ ಶಾಲು ಹಾಕಿಕೊಂಡಿರುವ ಪೋಸ್ಟರ್ ಹಾಕಿಕೊಂಡಿದ್ದಾರೆ. ಆ ಪೋಸ್ಟರ್ ಮೇಲೆ ಜೈ ಶ್ರೀರಾಮ್ ಎಂದು ಹೇಳುವ ರೋಗಿಗಳಿಗೆ 500 ರೂ. ಡಿಸ್ಕೌಂಟ್ ನೀಡುವುದಾಗಿ ಘೋಷಿಸಿದ್ದಾರೆ. ಈ ಆಫರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿಯೂ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಪಿಟಿಐ ಜೊತೆ ಮಾತನಾಡಿದ ಡಾ. ಹಜ್ರಾ, “ಹಲವು ವರ್ಷಗಳಲ್ಲಿ ವೈದ್ಯನಾಗಿ ಕೆಲಸ ಮಾಡಿರುವ ನಾನು ಬಿಜೆಪಿಯ ಅನುಯಾಯಿ. ಜೈ ಶ್ರೀರಾಮ್ ಎಂಬುದು ರಾಜಕೀಯ ಘೋಷಣೆಯೇ ವಿನಃ ಧಾರ್ಮಿಕ ಘೋಷಣೆಯಲ್ಲ. ಹೀಗಾಗಿ, ಯಾವ ಧರ್ಮದವರು ಬೇಕಾದರೂ ಈ ಘೋಷಣೆ ಕೂಗಬಹುದು. ಬಂಗಾಳದ ರೋಗಿಗಳು ಅಸ್ಸಾಂ, ಒಡಿಶಾ ಅಥವಾ ದಕ್ಷಿಣ ಭಾರತಕ್ಕೆ ಹೋಗುವುದನ್ನು ನಾನು ನೋಡಿದಾಗಲೆಲ್ಲಾ ನನಗೆ ಬೇಸರವಾಗುತ್ತದೆ. ಹೀಗಾಗಿ, ನನ್ನ ರೋಗಿಗಳಿಗೂ ಸಹಾಯವಾಗಲೆಂದು 500 ರೂ. ರಿಯಾಯಿತಿ ಘೋಷಿಸಿದ್ದೇನೆ. ನನ್ನ ಕನ್ಸಲ್ಟೇಷನ್ ಫೀಸ್ 2000 ರೂ. ಆದರೆ, ಜೈ ಶ್ರೀರಾಮ್ ಹೇಳಿದವರಿಗೆ 1,500 ರೂ. ಶುಲ್ಕ ವಿಧಿಸುತ್ತೇನೆ. ಇದರಿಂದ ನನಗೂ ಲಾಭ, ಅವರಿಗೂ ಲಾಭ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಅಲ್ಲಾ..ಹೇಳಬೇಡ,’ಜೈ ಶ್ರೀ ರಾಮ್’ ಹೇಳಬೇಕು ಎಂದು 3 ಮಕ್ಕಳಿಗೆ ಚಪ್ಪಲಿಯಲ್ಲಿ ಹೊಡೆದ ಯುವಕ

ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ವಿಭಾಗದ ನಿರ್ದೇಶಕರೂ ಆಗಿರುವ ಡಾ. ಹಜ್ರಾ ಆ ಆಸ್ಪತ್ರೆಯಲ್ಲಿ ಈ ರೀತಿಯ ವಿನಾಯಿತಿ ಇಲ್ಲ. ಅದರ ಬದಲಾಗಿ ನನ್ನ ಖಾಸಗಿ ಕ್ಲಿನಿಕ್​ಗೆ ಬರುವ ರೋಗಿಗಳಿಗೆ ಮಾತ್ರ ಈ ರಿಯಾಯಿತಿ ಇರಲಿದೆ ಎಂದು ಹೇಳಿದ್ದಾರೆ. ಹೀಗಾಗಿ, ಅವರ ಕ್ಲಿನಿಕ್ ಹೊರಗೆ ‘ಜೈ ಶ್ರೀ ರಾಮ್’ ಘೋಷಣೆಯನ್ನು ಕೂಗುವ ರೋಗಿಗಳಿಗೆ ವೈದ್ಯರ ಸಮಾಲೋಚನಾ ಶುಲ್ಕದಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತದೆ ಎಂದು ಪೋಸ್ಟರ್ ಹಾಕಲಾಗಿದೆ.

ಇದನ್ನೂ ಓದಿ: ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!

“ನಾನು ಬಿಜೆಪಿಯೊಂದಿಗೆ ನೇರವಾಗಿ ಸಂಬಂಧ ಹೊಂದಿಲ್ಲ, ಆದರೆ ಅವರ ಆಡಳಿತದಲ್ಲಿರುವ ಇತರ ರಾಜ್ಯಗಳು ಪ್ರಗತಿ ಸಾಧಿಸಿದ ರೀತಿಯನ್ನು ನಾನು ಮೆಚ್ಚುತ್ತೇನೆ. ಅಲ್ಲದೆ, ಪ್ರಧಾನಿ ಮೋದಿಯವರೆಂದರೆ ನನಗೆ ಬಹಳ ಇಷ್ಟ. ನನ್ನ ಈ ಕಾರ್ಯದಿಂದ ಬಿಜೆಪಿಗೆ ಸಹಾಯವಾಗಲೆಂಬುದು ನನ್ನ ಉದ್ದೇಶ” ಎಂದು ಅವರು ಹೇಳಿದ್ದಾರೆ. ಹಾಗೇ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತಾವು ವಾಸಿಸುವ ಪಶ್ಚಿಮ ಮೇದಿನಿಪುರ ಜಿಲ್ಲೆಯ ಪಿಂಗ್ಲಾದಿಂದ ಬಿಜೆಪಿಯಿಂದ ಟಿಕೆಟ್ ಪಡೆಯುವ ನಿರೀಕ್ಷೆಯಿದೆ ಎಂದು ಕೂಡ ಡಾ. ಹಜ್ರಾ ಹೇಳಿಕೊಂಡಿದ್ದಾರೆ. ಹೀಗಾಗಿ, ಬಿಜೆಪಿ ಟಿಕೆಟ್ ಪಡೆಯಲು ತಮ್ಮ ವೃತ್ತಿಯನ್ನು ಬಳಸಿಕೊಳ್ಳುತ್ತಿರುವ ಅವರ ವಿರುದ್ಧ ಟಿಎಂಸಿ ಸೇರಿದಂತೆ ವಿಪಕ್ಷಗಳು ಟೀಕಾಪ್ರಹಾರ ನಡೆಸಿವೆ.

294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು 29ರಂದು ಚುನಾವಣೆ ನಡೆಯಲಿದೆ. ಮೇ 4ರಂದು ಮತ ಎಣಿಕೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:24 pm, Tue, 14 April 26

Source link

ಎನ್​ವಿಡಿಯಾದ ಭಾರತೀಯ ಉದ್ಯೋಗಿಗಳಿಗೆ ಭರ್ಜರಿ ಕೊಡಗೆ; ಒಂದು ಕೋಟಿ ರೂವರೆಗೆ ಸ್ಟಾಕ್ ಗ್ರಾಂಟ್ – Kannada News | Nvidia’s Rs 1 Cr Stock Grant for Indian Employees: AI Talent Retention Strategy

ಬೆಂಗಳೂರು, ಏಪ್ರಿಲ್ 14: ಕೃತಕ ಬುದ್ಧಿಮತ್ತೆ (AI) ಮತ್ತು ಚಿಪ್ ಡಿಸೈನಿಂಗ್ ಕ್ಷೇತ್ರದಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಎನ್​ವಿಡಿಯಾ (Nvidia) ಕಂಪನಿಯು ತನ್ನ ಭಾರತೀಯ ಉದ್ಯೋಗಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಭಾರತ ಮೂಲದ ಹೆಚ್ಚಿನ ಉದ್ಯೋಗಿಗಳಿಗೆ ಒನ್ ಟೈಮ್ ಸ್ಪೆಷಲ್ ‘ಸ್ಟಾಕ್ ಗ್ರಾಂಟ್’ (ಷೇರುಗಳ ಹಂಚಿಕೆ) ಘೋಷಿಸಲಾಗಿದೆ. ಇದರ ಮೌಲ್ಯ 5 ಲಕ್ಷ ರೂನಿಂದ 1 ಕೋಟಿ ರೂವರೆಗಿದೆ ಎನ್ನಲಾಗಿದೆ.

ಏನಿದು ‘ಜೆನ್ಸನ್ ಸ್ಪೆಷಲ್ ಗ್ರಾಂಟ್’?

ಎನ್​ವಿಡಿಯಾದ ಸಿಇಒ ಜೆನ್ಸನ್ ಹುವಾಂಗ್ ಅವರು 2024 ರಲ್ಲಿ ಈ ವಿಶೇಷ ಯೋಜನೆಯನ್ನು ಪರಿಚಯಿಸಿದ್ದಾರೆ. ಇದರ ಅಡಿಯಲ್ಲಿ ಉದ್ಯೋಗಿಗಳಿಗೆ ಅವರ ಮೂಲ ‘ರೆಸ್ಟ್ರಿಕ್ಟೆಡ್ ಸ್ಟಾಕ್ ಯೂನಿಟ್ಸ್’ (RSUs) ಮೇಲೆ ಹೆಚ್ಚುವರಿ 25% ರಷ್ಟು ಷೇರುಗಳನ್ನು ನೀಡಲಾಗುತ್ತಿದೆ. ಭಾರತದಲ್ಲಿರುವ ಸುಮಾರು 10,000 ಉದ್ಯೋಗಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಒತ್ತಡದ ನಡುವೆಯೂ ಏರದ ಪೆಟ್ರೋಲ್ ಬೆಲೆ; ಪೆಟ್ರೋಲಿಯಂ ಕಂಪನಿಗಳಿಗೆ ಒಂದು ಲೀಟರ್ ಪೆಟ್ರೋಲ್​ಗೆ ಆಗುತ್ತಿರುವ ನಷ್ಟವೆಷ್ಟು ಗೊತ್ತಾ?

ಷೇರು ಹಂಚಿಕೆಯ ಪ್ರಮುಖಾಂಶಗಳು

ಈ ಷೇರುಗಳು ಒಮ್ಮೆಗೆ ಕೈ ಸೇರುವುದಿಲ್ಲ. ಸೆಪ್ಟೆಂಬರ್ 2024 ರಿಂದ ಆರಂಭಗೊಂಡು 2028 ರವರೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಕಂತುಗಳಲ್ಲಿ ಉದ್ಯೋಗಿಗಳಿಗೆ ಹಸ್ತಾಂತರವಾಗಲಿವೆ. ಉದಾಹರಣೆಗೆ, ಮಧ್ಯಮ ಹಂತದ ಉದ್ಯೋಗಿಯೊಬ್ಬರು ವಾರ್ಷಿಕ ವೇತನದ ಹೊರತಾಗಿ ಸುಮಾರು 5.3 ಲಕ್ಷ ರೂ ಮೌಲ್ಯದ ಹೆಚ್ಚುವರಿ ಷೇರುಗಳನ್ನು ಪಡೆದಿದ್ದಾರೆ. ಅನುಭವೀ ಎಂಜಿನಿಯರ್‌ಗಳ ವಿಷಯದಲ್ಲಿ ಈ ಮೊತ್ತ 1 ಕೋಟಿ ರೂ ದಾಟಿದೆ.

ಈ ಹಂಚಿಕೆಯ ಒಟ್ಟು ಮೌಲ್ಯವು ಎನ್ವಿಡಿಯಾ ಕಂಪನಿಯ ಷೇರು ಮಾರುಕಟ್ಟೆ ಬೆಲೆ ಮತ್ತು ಡಾಲರ್ ವಿನಿಮಯ ದರದ ಮೇಲೆ ಆಧಾರಿತವಾಗಿರುತ್ತದೆ.

ಪ್ರತಿಭೆ ಉಳಿಸಿಕೊಳ್ಳಲು ಹೊಸ ತಂತ್ರ

ತಂತ್ರಜ್ಞಾನ ಕ್ಷೇತ್ರದಲ್ಲಿ, ವಿಶೇಷವಾಗಿ AI ಮತ್ತು ಸೆಮಿಕಂಡಕ್ಟರ್ ವಿಭಾಗದಲ್ಲಿ ನುರಿತ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಕಂಪನಿಗಳು ಈಗ ಕೇವಲ ಸಂಬಳವನ್ನಷ್ಟೇ ನಂಬಿಲ್ಲ. ಎನ್​ವಿಡಿಯಾದಲ್ಲಿ ಹಿರಿಯ ಎಂಜಿನಿಯರ್‌ಗಳ ಒಟ್ಟು ವೇತನದ ಶೇ 50 ರಿಂದ ಶೇ 75 ರಷ್ಟು ಭಾಗ ಈ ಷೇರುಗಳ ರೂಪದಲ್ಲೇ ಇರುತ್ತದೆ.

ಇದನ್ನೂ ಓದಿ: ಬ್ಯಾಟರಿ ಸ್ವಾವಲಂಬನೆಗೆ 3.5 ಲಕ್ಷ ಕೋಟಿ ರೂ ಯೋಜನೆ; ಬ್ಯಾಟರಿ ತಯಾರಕರ ಪಟ್ಟಿ ರೂಪಿಸಲು ಸರ್ಕಾರ

ಭಾರತವು AI ಮತ್ತು ಚಿಪ್ ವಿನ್ಯಾಸದ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿರುವುದರಿಂದ, ಉನ್ನತ ಮಟ್ಟದ ಎಂಜಿನಿಯರ್‌ಗಳಿಗೆ ವರ್ಷಕ್ಕೆ 2 ರಿಂದ 3 ಕೋಟಿ ರೂವರೆಗಿನ ಪ್ಯಾಕೇಜ್ ನೀಡುವುದು ಈಗ ಸಾಮಾನ್ಯವಾಗುತ್ತಿದೆ. ಇಷ್ಟು ದೊಡ್ಡ ಮೊತ್ತದ ವೇತನಕ್ಕೆ ಕಂಪನಿಗಳು ನೀಡುವ ಈ ಸ್ಟಾಕ್ ಇನ್ಸೆಂಟಿವ್‌ಗಳೇ ಪ್ರಮುಖ ಕಾರಣ.

ಒಟ್ಟಾರೆಯಾಗಿ, ಎನ್ವಿಡಿಯಾದ ಈ ನಡೆ ಭಾರತೀಯ ಟೆಕ್ ವಲಯದಲ್ಲಿ ಷೇರು ಆಧಾರಿತ ವೇತನ ಪದ್ಧತಿಯ ಮಹತ್ವವನ್ನು ಸಾರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 6:32 pm, Tue, 14 April 26

Source link

Chanakya Niti: ಈ ನಾಲ್ಕು ತಪ್ಪು ನಿರ್ಧಾರಗಳು ಜೀವವನ್ನು ಹಾಳು ಮಾಡಬಹುದು ಎನ್ನುತ್ತಾರೆ ಚಾಣಕ್ಯ – Kannada News | Chanakya Niti: These 4 wrong decisions can ruin your life

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯಗಳು ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿ ಅನೇಕಾರು ವಿಷಯಗಳ ಬಗ್ಗೆಯೂ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿ ಜೀವನದಲ್ಲಿ ತೆಗೆದುಕೊಳ್ಳುವ ತಪ್ಪು ನಿರ್ಧಾರಗಳು ಜೀವನವನ್ನೇ ಹಾಳು ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ. ಅವರ ಪ್ರಕಾರ, ನೀವು ಈ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರೆ, ನೀವು ನಿಮ್ಮ ಜೀವನದುದ್ದಕ್ಕೂ ವಿಷಾದಿಸಬೇಕಾಗುತ್ತದೆ, ಇದಲ್ಲದೆ ಆ ನಿರ್ಧಾರಗಳು ಭವಿಷ್ಯದಲ್ಲಿ ಸಮಸ್ಯೆಗಳನ್ನು ತಂದೊಡ್ಡಬಹುದು. ಆದ್ದರಿಂದ ಯಾವುದೇ ರೀತಿಯ ಹಾನಿಯನ್ನು ತಪ್ಪಿಸಲು ಈ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರ ವಹಿಸುವುದು ಒಳ್ಳೆಯದು. ಹಾಗಿದ್ದರೆ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸುವು ಅಗತ್ಯ ಎಂಬುದನ್ನು ನೋಡೋಣ ಬನ್ನಿ.

ಈ ತಪ್ಪು ನಿರ್ಧಾರಗಳಿಂದ ಜೀವನವೇ ಹಾಳಾಗಬಹುದು:

ಯೋಚಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು: ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ಆತುರದ ನಿರ್ಧಾರವು ಯಾವಾಗಲೂ ಹಾನಿಗೆ ಕಾರಣವಾಗುತ್ತದೆ. ಅನೇಕ ಜನರು ಭಾವನೆಗೆ ಒಳಗಾಗಿ ಅಥವಾ ಒತ್ತಡಕ್ಕೊಳಗಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದು ಉದ್ಯೋಗಗಳನ್ನು ಬದಲಾಯಿಸುವುದು, ಉಳಿತಾಯ ಮಾಡುವುದು ಅಥವಾ ಸಂಬಂಧಗಳನ್ನು ಕೊನೆಗೊಳಿಸುವುದು ಅಥವಾ ಹಣವನ್ನು ಹೂಡಿಕೆ ಮಾಡುವುದು ಹೀಗೆ ಯಾವುದೇ ವಿಚಾರದಲ್ಲಿ ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಭವಿಷ್ಯದಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆ ಇರುತ್ತದೆ.

ಕೆಟ್ಟವರ ಸಹವಾಸ ಮಾಡುವುದು: ನೀವು ಕೆಟ್ಟವರ ಸಹವಾಸ ಮಾಡಲು ಪ್ರಾರಂಭಿಸಿದಾಗ, ನಿಮ್ಮ ಜೀವನ ನಿಧಾನವಾಗಿ ಕುಸಿಯಲು ಪ್ರಾರಂಭಿಸುತ್ತದೆ ಎನ್ನುತ್ತಾರೆ ಚಾಣಕ್ಯ.  ಆಚಾರ್ಯ ಚಾಣಕ್ಯರ ಪ್ರಕಾರ, ಒಂದು ಕೆಟ್ಟ ಹಣ್ಣು ಇಡೀ ಬುಟ್ಟಿಯ ಹಣ್ಣುಗಳನ್ನು ಹಾಳು ಮಾಡುವಂತೆ, ಕೆಟ್ಟವರ ಸಹವಾಸವು ನಿಮ್ಮ ಆಲೋಚನೆ ಮತ್ತು ಅಭ್ಯಾಸಗಳನ್ನು ಸಹ ಹಾಳುಮಾಡುತ್ತದೆ. ಇದರಿಂದ ನಿಮ್ಮ ಖ್ಯಾತಿ, ಜೀವನ ಎರಡೂ ಹಾಳಾಗುತ್ತದೆ. ಹಾಗಾಗಿ ಜೀವನದಲ್ಲಿ ಮುಂದುವರಿಯಲು ಬಯಸಿದರೆ  ನಿಮ್ಮನ್ನು ಪ್ರೇರೇಪಿಸುವ ಬುದ್ಧಿವಂತ, ಸಕಾರಾತ್ಮಕ ಮನಸ್ಥಿತಿಯ  ಜನರ ಸಹವಾಸದಲ್ಲಿರಿ.

ಇದನ್ನೂ ಓದಿ: ಅಭ್ಯಾಸಗಳು ಪುರುಷರ ಬದುಕನ್ನೇ ಸರ್ವನಾಶ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ ಚಾಣಕ್ಯ

ಹಣದ ದುರುಪಯೋಗ: ನೀವು ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಬಳಸದಿದ್ದರೆ, ಮುಂದೊಂದು ದಿನ ವಿಷಾದಿಸಬೇಕಾಗುತ್ತದೆ. ಅನೇಕ ಜನರು, ಎಚ್ಚರಿಕೆಯನ್ನು ಪರಿಗಣಿಸದೆ, ತಮ್ಮ ಹಣವನ್ನು ತಪ್ಪು ಸ್ಥಳಗಳಲ್ಲಿ ಖರ್ಚು ಮಾಡಲು ಅಥವಾ ಹೂಡಿಕೆ ಮಾಡಲು ನಿರ್ಧರಿಸುತ್ತಾರೆ. ಚಾಣಕ್ಯ ನೀತಿಯ ಪ್ರಕಾರ, ನೀವು ಯಾವಾಗಲೂ ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಬೇಕು. ಅನಗತ್ಯ ಖರ್ಚು ಮತ್ತು ದುರಾಸೆಯು ಹಣಕಾಸಿನ ಸಂಕಷ್ಟ ಎದುರಾಗಲು ಕಾರಣವಾಗಬಹುದು.

ಶಿಕ್ಷಣ ಮತ್ತು ಸಮಯವನ್ನು ನಿರ್ಲಕ್ಷಿಸುವುದು: ಆಚಾರ್ಯ ಚಾಣಕ್ಯರ ಪ್ರಕಾರ, ತಮ್ಮ ಸಮಯ ಮತ್ತು ಶಿಕ್ಷಣಕ್ಕೆ ಬೆಲೆ ಕೊಡದ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ. ನಿಮ್ಮ ಸಮಯ ಮತ್ತು ಜ್ಞಾನವು ನಿಮ್ಮ ದೊಡ್ಡ ಆಸ್ತಿಯಾಗಿದೆ. ಅವುಗಳನ್ನು ವ್ಯರ್ಥ ಮಾಡುವುದರಿಂದ ಜೀವನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಪ್ರತಿದಿನ ಹೊಸದನ್ನು ಕಲಿಯಲು ಮತ್ತು ಸಮಯವನ್ನು ಸರಿಯಾಗಿ ವ್ಯಯಿಸಿದರೆ ಮಾತ್ರ ಜೀವನದಲ್ಲಿ ಮುಂದುವರೆಯಲು ಸಾಧ್ಯ ಎಂದಿದ್ದಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SSC Recruitment 2026: 3,000ರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪರೀಕ್ಷಾ ಮಾದರಿಯಲ್ಲಿ ಮಹತ್ವದ ಬದಲಾವಣೆ! – Kannada News | SSC Phase 14 Recruitment 2026: 3003 Vacancies, New Exam Pattern and Dates

ಸಿಬ್ಬಂದಿ ಆಯ್ಕೆ ಆಯೋಗವು (SSC) ತನ್ನ ಸೆಲೆಕ್ಷನ್ ಪೋಸ್ಟ್ ಹಂತ-14 ರ ಅಡಿಯಲ್ಲಿ ವಿವಿಧ ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 3,003 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯು 10ನೇ ತರಗತಿ, 12ನೇ ತರಗತಿ ಹಾಗೂ ಪದವಿ ಪಡೆದ ಅಭ್ಯರ್ಥಿಗಳಿಗೆ ಸಮಾನವಾದ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದು, ಅವರ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 4 ಕೊನೆಯ ದಿನಾಂಕವಾಗಿದ್ದು, ಅರ್ಜಿ ಶುಲ್ಕ ಪಾವತಿಸಲು ಮೇ 5 ರವರೆಗೆ ಕಾಲಾವಕಾಶ ನೀಡಲಾಗಿದೆ. ಅರ್ಜಿಯಲ್ಲಿ ತಪ್ಪುಗಳಿದ್ದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಲು ಮೇ 11 ರಿಂದ 13 ರವರೆಗೆ ತಿದ್ದುಪಡಿ ವಿಂಡೋ ತೆರೆದಿರುತ್ತದೆ.

ಒಟ್ಟು ಹುದ್ದೆಗಳಲ್ಲಿ ವಿವಿಧ ವರ್ಗಗಳಿಗೆ ಮೀಸಲಾತಿಯನ್ನು ಒದಗಿಸಲಾಗಿದ್ದು, ಸಾಮಾನ್ಯ ವರ್ಗಕ್ಕೆ 1,534, ಒಬಿಸಿ ವರ್ಗಕ್ಕೆ 667, ಎಸ್‌ಸಿ ವರ್ಗಕ್ಕೆ 346, ಇಡಬ್ಲ್ಯೂಎಸ್ ವರ್ಗಕ್ಕೆ 271 ಮತ್ತು ಎಸ್‌ಟಿ ವರ್ಗಕ್ಕೆ 185 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ವರ್ಷಗಳಾಗಿದ್ದು, ಹುದ್ದೆಗಳ ಸ್ವರೂಪಕ್ಕೆ ಅನುಗುಣವಾಗಿ ಗರಿಷ್ಠ ವಯೋಮಿತಿ 25 ರಿಂದ 30 ವರ್ಷಗಳವರೆಗೆ ಇರುತ್ತದೆ. ಕಂಪ್ಯೂಟರ್ ಆಧಾರಿತ ಈ ಪರೀಕ್ಷೆಯು ಜೂನ್ ತಿಂಗಳಿನಲ್ಲಿ ನಡೆಯುವ ನಿರೀಕ್ಷೆಯಿದೆ ಎಂದು ಆಯೋಗವು ತಿಳಿಸಿದೆ.

ಈ ಬಾರಿ ಪರೀಕ್ಷಾ ಮಾದರಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದ್ದು, ಪರೀಕ್ಷೆಯನ್ನು ಹೆಚ್ಚು ವ್ಯವಸ್ಥಿತಗೊಳಿಸಲು ‘ವಿಭಾಗೀಯ ಸಮಯ’ವನ್ನು (Sectional Timing) ಪರಿಚಯಿಸಲಾಗಿದೆ. ಒಟ್ಟು 200 ಅಂಕಗಳ ಪರೀಕ್ಷೆಯು 100 ಪ್ರಶ್ನೆಗಳನ್ನು ಒಳಗೊಂಡಿರಲಿದ್ದು, ಅಭ್ಯರ್ಥಿಗಳಿಗೆ 60 ನಿಮಿಷಗಳ ಕಾಲಾವಕಾಶವಿರುತ್ತದೆ. ಇದರಲ್ಲಿ ತಾರ್ಕಿಕತೆ, ಸಾಮಾನ್ಯ ಜ್ಞಾನ, ಗಣಿತ ಮತ್ತು ಇಂಗ್ಲಿಷ್ ಎಂಬ ನಾಲ್ಕು ವಿಭಾಗಗಳಿದ್ದು, ಪ್ರತಿ ವಿಭಾಗಕ್ಕೆ ತಲಾ 15 ನಿಮಿಷಗಳನ್ನು ಕಡ್ಡಾಯವಾಗಿ ಮೀಸಲಿಡಲಾಗಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ನೇಮಕಾತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಎಸ್‌ಎಸ್‌ಸಿ ‘ಸ್ಲೈಡಿಂಗ್ ವ್ಯವಸ್ಥೆ’ಯನ್ನು ಜಾರಿಗೆ ತಂದಿದೆ. ಇದು ಅಭ್ಯರ್ಥಿಗಳಿಗೆ ತಮ್ಮ ಮೆರಿಟ್ ಆಧಾರದ ಮೇಲೆ ಉತ್ತಮ ಆಯ್ಕೆಯನ್ನು ಆರಿಸಿಕೊಳ್ಳಲು ಪೂರಕವಾಗಿದೆ. ಇತ್ತೀಚಿನ ಗುರುತಿನ ಪರಿಶೀಲನಾ ಪ್ರಕ್ರಿಯೆಯ ಸಮಯದಲ್ಲಿ ಸುಮಾರು 300 ಅಭ್ಯರ್ಥಿಗಳ ಪೈಕಿ 220 ಮಂದಿ ತಮ್ಮ ಹುದ್ದೆಗಳನ್ನು ಅಂತಿಮಗೊಳಿಸಿದ್ದಾರೆ. ಉಳಿದ 80 ಅಭ್ಯರ್ಥಿಗಳು ಉತ್ತಮ ಅವಕಾಶಗಳಿಗಾಗಿ ಕಾಯುವ ಆಯ್ಕೆಯನ್ನು ಮಾಡಿಕೊಂಡಿದ್ದು, ಇಡೀ ಪ್ರಕ್ರಿಯೆಯು ಹೆಚ್ಚು ಪಾರದರ್ಶಕವಾಗಿ ನಡೆಯುತ್ತಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು – Kannada News | Calendar Kannada movie actress talks about movie

‘ಕ್ಯಾಲೆಂಡರ್’ (Calender) ಹೆಸರಿನ ಕನ್ನಡ ಸಿನಿಮಾ ಬರುತ್ತಿದೆ. ಸಿನಿಮಾದ ಹೆಸರಿನಂತೆಯೇ ಸಿನಿಮಾದ ಕತೆಯೂ ಸಹ ಬಹಳ ಭಿನ್ನವಾಗಿದೆ. ಸಿನಿಮಾನಲ್ಲಿ ಸುಷ್ಮಿತಾ ಮತ್ತು ನಿವಿಷ್ಕಾ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಟಿವಿ9 ಜೊತೆಗೆ ಮಾತನಾಡಿರುವ ಇಬ್ಬರೂ ನಟಿಯರು ಸಿನಿಮಾದ ಬಗ್ಗೆ, ತಮ್ಮ-ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದ್ದಾರೆ. ಸಿನಿಮಾದ ಕತೆಯ ಬಗ್ಗೆಯೂ ಸಣ್ಣ ಸುಳಿವುಗಳನ್ನು ಬಿಟ್ಟುಕೊಟ್ಟಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

CSK vs KKR IPL 2026 Live Score: ಸೂಪರ್ ಕಿಂಗ್ಸ್​ಗೆ ನೈಟ್ ರೈಡರ್ಸ್ ಸವಾಲು

ಇಂಡಿಯನ್ ಪ್ರೀಮಿಯರ್ ಲೀಗ್​ನ 21ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಉಭಯ ತಂಡಗಳು ಆರಂಭಿಕ ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿದೆ. ಇತ್ತ ಸಿಎಸ್​ಕೆ ತಂಡವು ಈವರೆಗೆ ಆಡಿದ 4 ಮ್ಯಾಚ್​ಗಳಲ್ಲಿ ಗೆದ್ದಿರುವುದು ಒಂದು ಪಂದ್ಯ ಮಾತ್ರ. ಅತ್ತ ಕೆಕೆಆರ್ ತಂಡವು ಇನ್ನೂ ಸಹ ಗೆಲುವಿನ ಖಾತೆ ತೆರೆದಿಲ್ಲ. ಹೀಗಾಗಿ ಸಿಎಸ್​ಕೆ ತಂಡವು ಗೆಲುವಿನ ಲಯ ಮುಂದುವರೆಸಬೇಕಿದ್ದರೆ ಇಂದಿನ ಪಂದ್ಯದಲ್ಲಿ ಜಯ ಸಾಧಿಸಬೇಕು. ಅತ್ತ ಕೆಕೆಆರ್​ ತಂಡವು ಈ ಪಂದ್ಯದ ಮೂಲಕ ಗೆಲುವಿನ ಖಾತೆ ತೆರೆಯುವ ಇರಾದೆಯಲ್ಲಿದೆ.

ಇನ್ನು ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆದ್ದಿರುವುದು ಕೇವಲ 11 ಮ್ಯಾಚ್​ಗಳಲ್ಲಿ ಮಾತ್ರ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿದ್ದವು. ಇದೀಗ ಬಲಿಷ್ಠತೆಯಲ್ಲಿ ಸಮಬಲ ಹೊಂದಿರುವುದರಿಂದ ಇಂದಿನ ಮ್ಯಾಚ್​ನಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಅಜಿಂಕ್ಯ ರಹಾನೆ (ನಾಯಕ), ಅಂಗ್​ಕ್ರಿಶ್ ರಘುವಂಶಿ, ಅನುಕುಲ್ ರಾಯ್, ಮನೀಶ್ ಪಾಂಡೆ, ರಮಣದೀಪ್ ಸಿಂಗ್, ರಿಂಕು ಸಿಂಗ್, ರೋವ್​ಮನ್ ಪೊವೆಲ್, ಸುನಿಲ್ ನರೈನ್, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕ್ಯಾಮೆರೋನ್ ಗ್ರೀನ್, ಫಿನ್ ಅಲೆನ್, ಮಥೀಶ ಪತಿರಾಣ, ತೇಜಸ್ವಿ ಸಿಂಗ್, ಕಾರ್ತಿಕ್ ತ್ಯಾಗಿ, ಪ್ರಶಾಂತ್ ಸೋಲಂಕಿ, ರಾಹುಲ್ ತ್ರಿಪಾಠಿ, ಟಿಮ್ ಸೈಫರ್ಟ್, ಬ್ಲೆಸ್ಸಿಂಗ್ ಮುಝರಬಾನಿ, ಸಾರ್ಥಕ್ ರಂಜನ್, ದಕ್ಷ್ ಕಮ್ರಾ, ರಚಿನ್ ರವೀಂದ್ರ, ಆಕಾಶ್ ದೀಪ್.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್‌ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮಿ ಓವರ್‌ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌಧರಿ, ನಾಥನ್ ಎಲ್ಲಿಸ್, ಅಕೇಲ್ ಹೊಸೈನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಝ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಹರ್, ಝಾಕ್ ಫೌಲ್ಕ್ಸ್.

 

Source link

ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು: 6 ಸುತ್ತು ಫೈರಿಂಗ್ ಮಾಡಿ ಗ್ರಾ.ಪಂ ಸದಸ್ಯನ ಹತ್ಯೆ – Kannada News | Vijayapura: Gram Panchayat Member Brutally Murdered with 6 Rounds Fired and Stones

ವಿಜಯಪುರ, ಏಪ್ರಿಲ್​ 14: ನಗರದಲ್ಲಿ ಮತ್ತೆ ಗುಂಡಿನ ಸದ್ದು (Gun Fire) ಕೇಳಿ ಬಂದಿದೆ. 6 ಸುತ್ತು ಗುಂಡು ಹಾರಿಸಿದ್ದಲ್ಲದೆ ಕಲ್ಲು ಎತ್ತಿಹಾಕಿ ಗ್ರಾಮ ಪಂಚಾಯಿತಿ ಸದಸ್ಯನನ್ನು ದುರುಳರು ಭೀಕರವಾಗಿ ಹತ್ಯೆ ಮಾಡಿರುವಂತಹ ಘಟನೆ ವಿಜಯಪುರದ ಹೊರಭಾಗದ ಅಲಿಯಾಬಾದ್ ಬಳಿ ನಡೆದಿದೆ. ತಾಂಗರುನ ದೊಡ್ಡಿ ನಿವಾಸಿ ರಾಜು ಹತ್ಯೆಗೊಳಗಾದ ವ್ಯಕ್ತಿ. ಸದ್ಯ ಸ್ಥಳಕ್ಕೆ ವಿಜಯಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Source link