Headlines

‘ನನಗೆ ಒಂಟಿಯಾಗಿರೋದೇ ಇಷ್ಟ’; ಬ್ಯಾಚುಲರ್​ ಆಗೇ ಇರೋ ಸೂಚನೆ ಕೊಟ್ಟ ತೆಲುಗು ನಟ – Kannada News | Ram Pothineni on Being Single: ‘Happier Alone’ Says Tollywood Star

ತೆಲುಗು ಸ್ಟಾರ್ ರಾಮ್ ಪೋಥಿನೇನಿ ತಮ್ಮ ಸತತವಾಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರ ಕೊನೆಯ ಚಿತ್ರ ‘ಆಂಧ್ರ ಕಿಂಗ್ ತಾಲೂಕ’ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಆದಾಗ್ಯೂ, ಕೆಲವು ಕಾರಣಗಳಿಂದ, ಈ ಚಿತ್ರ ಬಿಸ್ನೆಸ್ ಮಾಡಿಲ್ಲ. ರಾಮ್ ಪ್ರಸ್ತುತ ತಮ್ಮ ಮುಂದಿನ ಪ್ರಾಜೆಕ್ಟ್ ನಿರತರಾಗಿದ್ದಾರೆ. ರಾಮ್ ತೆಲುಗು ಉದ್ಯಮದ ಬ್ಯಾಚುಲರ್‌ಗಳಲ್ಲಿ ಒಬ್ಬರು. ಅವರಿಗೆ ಪ್ರಸ್ತುತ 37 ವರ್ಷ. ಈ ಮಧ್ಯೆ, ಆಂಧ್ರ ಕಿಂಗ್ ತಾಲೂಕ ಚಿತ್ರದಲ್ಲಿ ತಮ್ಮೊಂದಿಗೆ ನಟಿಸಿದ್ದ ಭಾಗ್ಯಶ್ರೀ ಬೋರ್ಸೆ ಅವರೊಂದಿಗೆ ರಾಮ್ ರಿಲೇಶನ್​ಶಿಪ್​ನಲ್ಲಿದ್ದಾರೆ ಎಂಬ ವದಂತಿ ಇತ್ತು….

Read More

Video: ನಡುರಸ್ತೆಯಲ್ಲಿ ಗರ್ಭಿಣಿಯ ಮೈಮುಟ್ಟಿ ಕಿರುಕುಳ ಕೊಟ್ಟ ವ್ಯಕ್ತಿ – Kannada News | Outrage in Jaipur: Pregnant Woman Harassed in Public, Sparks Ange

ಜೈಪುರ, ಏಪ್ರಿಲ್ 14: ಗರ್ಭಿಣಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ಆಕೆಯ ಮೈಮುಟ್ಟಿ ಲೈಂಗಿಕ ಕಿರುಕುಳ ಕೊಟ್ಟಿರುವ ಘಟನೆ ಜೈಪುರದಲ್ಲಿ ನಡೆದಿದೆ. ಬೀಚ್ ಕಾಲೋನಿಯಲ್ಲಿ ಆಕೆ ನಡೆದುಕೊಂಡು ಹೋಗುತ್ತಿರುವಾಗ ಹಿಂಬಾಲಿಸಿ ಬಂದ ಆತ ಹಿಂದಿನಿಂದ ಆಕೆಯ ಮೈಮುಟ್ಟಿದ್ದಾನೆ. ಆಕೆ ಕಿರುಚಿದಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆಯ ಸಿಸಿಟಿವಿ ದೃಶ್ಯಗಳು ಪೊಲೀಸ್ ಆಡಳಿತದಲ್ಲಿ ಕೋಲಾಹಲಕ್ಕೆ ಕಾರಣವಾಗಿವೆ. ಮಾರ್ಚ್ 25 ರಂದು ಸಂಜೆ 6 ಗಂಟೆ ಸುಮಾರಿಗೆ ಗರ್ಭಿಣಿಯೊಬ್ಬರು ಫೋನ್‌ನಲ್ಲಿ ಮಾತನಾಡುತ್ತಾ ಕಾಲೋನಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ…

Read More

‘ಆಪರೇಷನ್ ಸಿಂಧೂರ್’ ಚಿತ್ರಕ್ಕೆ ಸಿಕ್ಕರು ಹೀರೋ; ಬಾಲಿವುಡ್ ನಟನಿಗೆ ಆಫರ್ – Kannada News | Vivek Agnihotri’s ‘Operation Sindoor’: Varun Dhawan in Lead? Based on Pahalgam Terror Attack

2022ರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಮತ್ತು 2025ರಲ್ಲಿ ‘ದಿ ಬೆಂಗಾಲ್ ಫೈಲ್ಸ್’ ಮೂಲಕ ಸುದ್ದಿ ಆದ ವಿವೇಕ್ ಅಗ್ನಿಹೋತ್ರಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಅದಕ್ಕೆ ‘ಆಪರೇಷನ್ ಸಿಂಧೂರ್’ ಎಂದು ಹೆಸರು ಇಟ್ಟಿದ್ದಾರೆ. ಈ ಚಿತ್ರವು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಆಧರಿಸಿದೆ. ವಿವೇಕ್ ಅವರು ಭೂಷಣ್ ಕುಮಾರ್ ಜೊತೆ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ವರುಣ್ ಧವನ್ (Varun Dhawan) ಹೀರೋ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇತ್ತೀಚೆಗೆ ರಿಲೀಸ್ ಆದ ‘ಬಾರ್ಡರ್ 2’…

Read More

ಬೆಂಗಳೂರಿಗರಿಗೆ ಪಾರ್ಕಿಂಗ್ ಶಾಕ್: ಈ ಪ್ರದೇಶದ 42 ರಸ್ತೆಗಳಲ್ಲಿ ಪೇ ಆ್ಯಂಡ್ ಪಾರ್ಕ್ ಜಾರಿಗೆ ಸಿದ್ಧತೆ, ವಾಹನ ಸವಾರರ ಆಕ್ರೋಶ! – Kannada News | Bengaluru Parking Row: Pay and Park System to be Introduced in 42 Roads of Jayanagar; Commuters Express Anger

ಬೆಂಗಳೂರು, ಏಪ್ರಿಲ್ 14: ಬೆಂಗಳೂರಿನಲ್ಲಿ ಟ್ರಾಫಿಕ್ (Bangalore Traffic) ಕಿರಿಕಿರಿ ನಡುವೆ ವಾಹನ ಸವಾರರಿಗೆ ಈಗ ಪಾರ್ಕಿಂಗ್ ಬಿಸಿ ತಟ್ಟಲಿದೆ. ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆಗೆ ಮುಕ್ತಿ ನೀಡಲು ಮತ್ತು ಅನಧಿಕೃತ ಪಾರ್ಕಿಂಗ್‌ಗೆ ಕಡಿವಾಣ ಹಾಕಲು ಮುಂದಾಗಿರುವ ಜಿಬಿಎ (GBA) ಅಧಿಕಾರಿಗಳು, ‘ಪೇ ಆ್ಯಂಡ್ ಪಾರ್ಕಿಂಗ್ (Pay and Parking)’ ವ್ಯವಸ್ಥೆಗೆ ಮತ್ತಷ್ಟು ರಸ್ತೆಗಳನ್ನು ಸೇರ್ಪಡೆ ಮಾಡುತ್ತಿದ್ದಾರೆ. ಈಗಾಗಲೇ ನಗರದ ಅನೇಕ ರಸ್ತೆಗಳಲ್ಲಿ ಪೇ ಆ್ಯಂಡ್ ಪಾರ್ಕಿಂಗ್ ಜಾರಿಯಲ್ಲಿದೆ. ಇದಕ್ಕೆ ಇನ್ನಷ್ಟು ರಸ್ತೆಗಳನ್ನು ಸೇರಿಸಲು ಸಿದ್ಧತೆ ಮಾಡಲಾಗುತ್ತಿದೆ….

Read More

ಮಧ್ಯಪ್ರದೇಶದಲ್ಲಿ ಭೀಕರ ಕೃತ್ಯ: ಹಾಸಿಗೆಯ ಬಾಕ್ಸ್‌ನೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಡ್ಯಾನ್ಸರ್ ಮೃತದೇಹ – Kannada News | MP Dancer Found Dead in Bed Box, Decomposed Body Sparks Murder Probe

ಸಾಗರ್, ಏಪ್ರಿಲ್ 14: ಮದುವೆ, ಜಾತ್ರೆಗಳಲ್ಲಿ ನೃತ್ಯ(Dance) ಮಾಡುತ್ತಾ ತನ್ನಿಬ್ಬರು ಮಕ್ಕಳ ಭವಿಷ್ಯಕ್ಕಾಗಿ ಹೋರಾಡುತ್ತಿದ್ದ ಒಬ್ಬ ತಾಯಿ, ಕೊನೆಗೆ ಮನೆಯಲ್ಲೇ ಹೆಣವಾಗಿ ಪತ್ತೆಯಾದ ಘೋರ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ. ಹತ್ತು ದಿನಗಳಿಂದ ನಾಪತ್ತೆಯಾಗಿದ್ದ 45 ವರ್ಷದ ಡ್ಯಾನ್ಸರ್ ಮಮತಾ ಅಹಿರ್ವಾರ್ ಅವರ ಮೃತದೇಹ ಹಾಸಿಗೆಯ ಪೆಟ್ಟಿಗೆಯೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಮತಾ ಅವರ ಮಕ್ಕಳು, ದೇವ್ ಮತ್ತು ಮುಸ್ಕಾನ್, ಕಳೆದ ಹತ್ತು ದಿನಗಳಿಂದ ವಿದಿಶಾದಲ್ಲಿರುವ ತಮ್ಮ ಅಕ್ಕನ ಮನೆಯಲ್ಲಿದ್ದರು. ತಾಯಿಯಂತೆ ತಾವೂ ಕಷ್ಟಪಟ್ಟು ದುಡಿದು…

Read More

ನಮ್ಮ ದಿಗ್ಬಂಧನ ಸನಿಹ ಬಂದರೆ ಇರಾನಿನ ಹಡಗುಗಳ ನಿರ್ನಾಮ ನಿಶ್ಚಿತ: ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ – Kannada News | Trump’s Stern Warning to Iran: Destroy Any Ship Nearing Blockade in Hormuz Strait

ಡೊನಾಲ್ಡ್​ ಟ್ರಂಪ್ -ಸಾಂದರ್ಭಿಕ ಚಿತ್ರ Image Credit source: Google Gemini ವಾಷಿಂಗ್ಟನ್, ಏಪ್ರಿಲ್ 14: ವಿಶ್ವದ ಅತಿ ದೊಡ್ಡ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿ(Hormuz Strait)ಯಲ್ಲಿ ಯುದ್ಧದ ಕಾರ್ಮೋಡಗಳು ಕವಿದಿವೆ. ಅಮೆರಿಕದ ನೌಕಾ ದಿಗ್ಬಂಧನವನ್ನು ಮೀರಿ ಬರುವ ಯಾವುದೇ ಇರಾನಿನ ಹಡಗುಗಳನ್ನು ತಕ್ಷಣವೇ ಧ್ವಂಸಗೊಳಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಎಚ್ಚರಿಕೆ ಈಗ ಜಾಗತಿಕ ಸಂಚಲನಕ್ಕೆ ಕಾರಣವಾಗಿದೆ. ತಮ್ಮ ‘ಟ್ರೂತ್ ಸೋಶಿಯಲ್’ ಪೋಸ್ಟ್‌ನಲ್ಲಿ ಇರಾನ್ ವಿರುದ್ಧ ಕಿಡಿಕಾರಿರುವ ಟ್ರಂಪ್, ಈಗಾಗಲೇ ಅಮೆರಿಕದ ದಾಳಿಗೆ ಇರಾನಿನ…

Read More

‘ಜನ ನಾಯಗನ್’ ಬೆನ್ನಲ್ಲೇ ‘ವಾರಣಾಸಿ’ ಚಿತ್ರಕ್ಕೂ ಲೀಕ್ ಕಾಟ; ಪ್ರಮುಖ ದೃಶ್ಯವೇ ಸೋರಿಕೆ – Kannada News | Rajamouli’s ‘Varanasi’ Faces Devastating Leak: Action Scenes Emerge Online

‘ಜನ ನಾಯಗನ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ನಿರೀಕ್ಷೆಗಳನ್ನು ಕೆಲ ಕಾಣದ ಕೈಗಳು ಹಾಳು ಮಾಡಿವೆ. ಸಿನಿಮಾ ರಿಲೀಸ್​​ಗೂ ಮೊದಲೇ ಪ್ರಮುಖ ದೃಶ್ಯಗಳನ್ನು ಲೀಕ್ ಮಾಡಲಾಯಿತು. ಈಗ ಎಸ್​​ಎಸ್​ ರಾಜಮೌಳಿ (SS Rajamouli) ನಿರ್ದೇಶನದ ‘ವಾರಣಾಸಿ’ ಚಿತ್ರಕ್ಕೂ ಇದೇ ರೀತಿಯ ತೊಂದರೆ ಎದುರಾಗಿದೆ. ಸಿನಿಮಾದ ಕೆಲ ಆ್ಯಕ್ಷನ್ ದೃಶ್ಯಗಳನ್ನು ಸೋರಿಕೆ ಮಾಡಲಾಗಿದೆ. ಇದು ಚಿತ್ರತಂಡದ ಚಿಂತೆ ಹೆಚ್ಚಿಸಿದೆ. ರಾಜಮೌಳಿ ಅವರು ತಮ್ಮ ಸಿನಿಮಾ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಲು ಬಯಸುತ್ತಾರೆ. ಯಾವುದೇ ಘೋಷಣೆ…

Read More

33 ಕೋಟಿ ದೇವತೆಗಳಿದ್ದರೂ ಒಬ್ಬನೇ ದೇವರನ್ನು ಹೃದಯದಲ್ಲಿ ಪ್ರತಿಷ್ಠಾಪಿಸುವುದು ಯಾಕೆ ಮುಖ್ಯ?: ಇಲ್ಲಿದೆ ಅಸಲಿ ಕಾರಣ

ಬೆಂಗಳೂರು, ಏ.14: ಏಕದೇವೋಪಾಸನೆಯ ಮಹತ್ವದ ಬಗ್ಗೆ ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಹೇಳಿದ್ದಾರೆ. ಹಿಂದೂ ಸನಾತನ ಸಂಸ್ಕೃತಿಯಲ್ಲಿ 33 ಕೋಟಿ ದೇವತೆಗಳಿದ್ದರೂ, ಜೀವನದಲ್ಲಿ ಏಕದೇವೋಪಾಸನೆಯನ್ನು ಅಳವಡಿಸಿಕೊಂಡರೆ ಅದು ಅತ್ಯಂತ ಸಾರ್ಥಕವಾಗುತ್ತದೆ ಎಂದು ತಿಳಿಸಲಾಗಿದೆ. “ಸರ್ವದೇವ ನಮಸ್ಕಾರಾಃ ಕೇಶವಂ ಪ್ರತಿಗಚ್ಛತಿ” ಎಂಬ ಮಾತಿನಂತೆ, ಎಲ್ಲಾ ದೇವರುಗಳಿಗೆ ನಮಸ್ಕಾರ ಸಲ್ಲಿಸಿದರೂ, ಒಬ್ಬ ದೇವರನ್ನು ಹೃದಯದಲ್ಲಿ ಸ್ಥಾಪಿಸಿಕೊಳ್ಳುವುದು ಮುಖ್ಯ. ಏಕದೇವೋಪಾಸನೆಯು ನಮ್ಮಲ್ಲಿ ಏಕಾಗ್ರತೆ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಇದು ನಮ್ಮ ಜೀವನದಲ್ಲಿ ಬರುವ ಕಂಟಕಗಳು, ಕರ್ಮಗಳು ಸರಿಯಾದ…

Read More

ಅಕ್ಷಯ ತೃತೀಯಕ್ಕೆ ಬಂಗಾರ ದುಬಾರಿ? ಚಿನ್ನದ ದರದಲ್ಲಿ ಹಾವು-ಏಣಿ ಆಟ: ಆಫರ್‌ಗಳ ಮೊರೆ ಹೋದ ಗ್ರಾಹಕ! – Kannada News | Akshaya Tritiya 2026: Gold Prices Fluctuate Amid Global Tensions; Jewelers Offer Massive Discounts to Attract Buyers

ಬೆಂಗಳೂರು, ಏಪ್ರಿಲ್ 14: ಶ್ರೇಷ್ಠ ದಿನವಾದ ಅಕ್ಷಯ ತೃತೀಯಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಆದರೆ, ಹಳದಿ ಲೋಹದ ಬೆಲೆ ಮಾತ್ರ ಸ್ಥಿರವಾಗಿಲ್ಲದೆ ಗ್ರಾಹಕರನ್ನು ಚಿಂತೆಗೆ ಈಡುಮಾಡಿದೆ. ಕಳೆದ ಒಂದು ತಿಂಗಳಿನಿಂದ ಗಲ್ಫ್ ರಾಷ್ಟ್ರಗಳ ಯುದ್ಧ ಮತ್ತು ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಚಿನ್ನದ ದರ (Gold Price) ಹಾವು-ಏಣಿ ಆಟದಂತೆ ಏರಿಕೆ ಮತ್ತು ಇಳಿಕೆ ಕಾಣುತ್ತಿದೆ. ಚಿನ್ನದ ದರ ಏರಿಕೆಯ ಆತಂಕ ಯುದ್ಧದ ಕದನ ವಿರಾಮದ ಸುದ್ದಿಗಳ ಬೆನ್ನಲ್ಲೇ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ…

Read More

Daily Horoscope: ಸೂರ್ಯನ ಸಂಚಾರ ಬದಲಾವಣೆ; ಈ ರಾಶಿಯವರಿಗೆ ಸಿಗಲಿದೆ ಬಲವಾದ ಯಶಸ್ಸು!

ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಟಿವಿ9 ಕನ್ನಡದ ಮೂಲಕ 14 ಏಪ್ರಿಲ್ 2026, ಮಂಗಳವಾರದ ದೈನಂದಿನ ರಾಶಿಫಲವನ್ನು ನೀಡಿದ್ದಾರೆ. ಈ ದಿನವು ಪರಾಭವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷ ದ್ವಾದಶಿ, ಶತಭಿಷ ನಕ್ಷತ್ರ, ಶುಕ್ಲ ಯೋಗ ಮತ್ತು ಕೌಲವಕರಣದೊಂದಿಗೆ ಕೂಡಿರುತ್ತದೆ. ದಿನದ ರಾಹುಕಾಲವು ಮಧ್ಯಾಹ್ನ 3:25 ರಿಂದ ಸಂಜೆ 4:58 ರವರೆಗೆ ಇರುತ್ತದೆ, ಆದರೆ ಸರ್ವಸಿದ್ಧಿ ಕಾಲ ಸಂಕಲ್ಪ ಕಾಲವು ಮಧ್ಯಾಹ್ನ 12:20 ರಿಂದ 1:53 ರವರೆಗೆ ಇರುತ್ತದೆ….

Read More