Category Archives: Blog

Your blog category

ಬೆಂಗಳೂರು: ಮಡಿವಾಳ ಸಂಧ್ಯಾ ಥಿಯೇಟರ್ ಮಹಿಳಾ ಶೌಚಾಲಯದಲ್ಲಿ ಕ್ಯಾಮರಾ ಇಟ್ಟ ಯುವಕ, ಯುವತಿಯರು ಶಾಕ್ – Kannada News | Hidden Camera Found in Women’s Washroom at Madiwala Sandhya Theatre, Bengaluru; Youth Detained

ಬೆಂಗಳೂರು, ಜನವರಿ 5: ಬೆಂಗಳೂರಿನ ಮಡಿವಾಳದ ಸಂಧ್ಯಾ ಥಿಯೇಟರ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿನ ಮಹಿಳಾ ಶೌಚಾಲಯದಲ್ಲಿ ಯುವಕನೊಬ್ಬ ರಹಸ್ಯ ಕ್ಯಾಮರಾ ಇಟ್ಟು ವಿಕೃತಿ ಮರೆದಿದ್ದಾನೆ. ಶೌಚಾಲಯಕ್ಕೆ ತೆರಳಿದ್ದ ಮಹಿಳೆಯರು ಮತ್ತು ಯುವತಿಯರು ಕ್ಯಾಮರಾ ಕಂಡು ಆಘಾತಕ್ಕೊಳಗಾಗಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಕ್ಯಾಮರಾ ಇಟ್ಟಿದ್ದ ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆಯನ್ನು ಪ್ರಾರಂಭಿಸಿದ್ದಾರೆ. ಯುವಕ ಯಾರು, ಈ ಕೃತ್ಯದ ಹಿಂದಿನ ಉದ್ದೇಶವೇನು, ಈ ಹಿಂದೆ ಇಂತಹ ಕೃತ್ಯಗಳನ್ನು ನಡೆಸಿದ್ದಾನೆಯೇ ಅಥವಾ ಇದು ಮೊದಲ ಬಾರಿಯೇ ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ: ಅಸಲಿಗೆ ಏನಾಯ್ತು? ಪೊಲೀಸರು ಹೇಳಿದ್ದೇನು? ಇಲ್ಲಿದೆ ಮಾಹಿತಿ – Kannada News | Stone Pelting on Om Shakti Mala Wearers in Bengaluru’s JJ Nagar: What Happened and What Police Say

ಬೆಂಗಳೂರು, ಜನವರಿ 5: ‘ಓಂ ಓಂ ಶಕ್ತಿಯೇ, ಆದಿಪರಾಶಕ್ತಿಯೇ, ಓಂ ಶಕ್ತಿ, ಜಯ ಶಕ್ತಿ’ ಎನ್ನುತ್ತಾ ಓಂ ಶಕ್ತಿ ಮಾಲಾಧಾರಿಗಳು ಶಕ್ತಿ ದೇವಿಯ ಜಪ ಮಾಡ್ತಾ ತಮಟೆಗೆ ಸದ್ದಿಗೆ ಹೆಜ್ಜೆ ಹಾಕುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿಯಲ್ಲಿ ಪರವಶರಾಗಿದ್ದರು. ಕ್ಷಣಾರ್ಧದಲ್ಲೇ ಇಡೀ ಪ್ರದೇಶದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಭಕ್ತರು ದಿಕ್ಕಾಪಾಲಾದರು. ಭಾನುವಾರ ರಾತ್ರಿ 8-30 ಗಂಟೆ ಸುಮಾರಿಗೆ ವಿಎಸ್ ಗಾರ್ಡನ್​ ಬಳಿ ಮಾಲಾಧಾರಿಗಳು ಬರುತ್ತಿದ್ದಂತೆಯೇ ಅವರ ಮೇಲೆ ಕಲ್ಲು ತೂರಾಟ ನಡೆದಿದೆ. ಕಲ್ಲೇಟು ಓಂ ಶಕ್ತಿ ಮಾಲಾಧಾರಿ ಯುವತಿಯರ ತಲೆಗೆ ಬಡಿದು ನೆತ್ತರು ಹರಿದಿದೆ.

ಕಲ್ಲು ತೂರಾಟದ ಬೆನ್ನಲ್ಲೇ, ಕೆರಳಿದ ಮಾಲಾಧಾರಿಗಳು ಜೆಜೆ ನಗರ ಪೊಲೀಸ್ ಸ್ಟೇಷನ್ ಬಳಿಯೇ ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ. ಅನ್ಯ ಕೋಮಿನವರು ಬೇಕಂದೇ ಕಲ್ಲೆಸೆದಿದ್ದಾರೆ. ಕಿಡಿಗೇಡಿಗಳನ್ನ ಬಂಧಿಸಿ. ಪ್ರತಿ ದಿನ ಭಯದಲ್ಲೇ ಜೀವನ ನಡೆಸುತ್ತಿದ್ದೇವೆ. ನಮ್ಮ ಏರಿಯಾಗೂ ಅವರ ಏರಿಯಾ ನಡುವೆ ಗೋಡೆ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಕತ್ತಲೆಯಲ್ಲಿ ಕಲ್ಲು ತೂರಿದ್ದಾರೆ’

ಓಂ ಶಕ್ತಿ ಮಾಲಾಧಾರಿಗಳು ಮೆರವಣಿಗೆ ಮಾಡುತ್ತಿದ್ದಾಗ, ರಾತ್ರಿ 8.10ರ ಸುಮಾರಿಗೆ ಕತ್ತಲೆಯಲ್ಲಿ ಕಲ್ಲು ತೂರಾಟ ನಡೆದಿದೆಎ ಎಂದು ಗಾಯಾಳು ಯುವತಿ ಸಂಬಂಧಿ ಹೇಳಿದ್ದಾರೆ. ‘ಟಿವಿ9’ ಜೊತೆ ಮಾತನಾಡಿದ ವರದರಾಜ್, ನಮ್ಮ ಮಗಳ ತಲೆ ಮೇಲೆ ಕಲ್ಲು ಬಿದ್ದಿದ್ದು ಗಾಯಗೊಂಡಿದ್ದಾಳೆ. ಅನ್ಯಕೋಮಿನವರ ಏರಿಯಾದಿಂದ ಕಲ್ಲುಗಳು ಬಂದು ನಮ್ಮ ಮೇಲೆ ಬಿದ್ದಿವೆ. ಕತ್ತಲೆಯಾದ್ದರಿಂದ ಯಾರು ಕಲ್ಲು ತೂರಿದ್ದಾರೆ ಎಂಬುದು ನಮಗೆ ಗೊತ್ತಾಗಿಲ್ಲ ಎಂದಿದ್ದಾರೆ.

ಎಫ್​ಐಆರ್ ದಾಖಲು, ಆರೋಪಿಗಳ ಬಂಧನಕ್ಕೆ ಬಲೆ

ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ, ಓಂ ಶಕ್ತಿ ಮಾಲಾಧಾರಿಗಳ ಅಧ್ಯಕ್ಷ ಶಶಿಕುಮಾರ್ ದೂರಿನನ್ವಯ ಎಫ್​ಐಆರ್ ದಾಖಲಾಗಿದೆ. ಪೊಲೀಸ್ ಸ್ಟೇಷನ್ ಬಳಿ ಪ್ರತಿಭಟನಾಕಾರರನ್ನು ಮನವೊಲಿಸಲು ಪೊಲೀಸರು ಹರಸಾಹಸ ಪಟ್ಟರು. ಆರೋಪಿಗಳನ್ನು ಬಂಧಿಸುವ ಭರವಸೆ ಕೊಟ್ಟು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಂದು ಸಂಸದ ಪಿಸಿ ಮೋಹನ್ ಭೇಟಿ ನೀಡಿದ್ದಾರೆ. ಈ ಕ್ಷೇತ್ರದಲ್ಲಿ ಭಯದಿಂದ ಬದುಕುವ ಪರಿಸ್ಥಿತಿ ಇದೆ. ತೇರು ತಗೊಂಡು ಹೋಗಬಾರದಾ? ಮಾಲೆ ಹಾಕಬಾರದಾ? ಎಂದು ಅವರು ಕಿಡಿಕಾರಿದ್ದಾರೆ.

ಪೊಲೀಸರು ಹೇಳಿದ್ದೇನು?

ಕಲ್ಲೆಸೆತದಲ್ಲಿ ಇಬ್ಬರು ಯುವತಿಯರ ತಲೆಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈಗಾಗಲೇ ವರದಿ ತರಿಸಿಕೊಳ್ಳಲಾಗಿದ್ದು, ಎಫ್​ಐಆರ್ ದಾಖಲಿಸಲಾಗಿದೆ. ಇಬ್ಬರು ಇನ್ಸ್​ಪೆಕ್ಟರ್​ಗಳ ತಂಡ ಪ್ರಕರಣದ ತನಿಖೆ ಮಾಡುತ್ತೆ. ಆರೋಪಿಗಳನ್ನು ಅರೆಸ್ಟ್ ಮಾಡುವ ಕೆಲಸ ಆಗುತ್ತದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಎರಡೂ ಏರಿಯಾ ಮಧ್ಯೆ ಗೋಡೆ ನಿರ್ಮಿಸಿ: ಅನ್ಯಕೋಮಿನವರ ಕಿರುಕುಳಕ್ಕೆ ರೋಸಿ ಹೋದ ಹಿಂದೂಗಳು

ಕಲ್ಲುತೂರಾಟದ ಬಳಿಕ ಜೆಜೆ ನಗರ ಬೂದಿ ಮುಚ್ಚಿದ ಕೆಂಡದಂತಿದೆ. ಏರಿಯಾದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು, ನಿನ್ನೆ ರಾತ್ರಿಯಿಂದಲೇ 2 ಕೆಎಸ್​ಆರ್​ಪಿ ತುಕಡಿ ನಿಯೋಜಿಸಿದ್ದು, ಹೆಜ್ಜೆ ಹೆಜ್ಜೆಗೂ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 05 January: ಇಂದು ಈ ರಾಶಿಯವರಿಗೆ ಹಳೆಯ ನೆನಪುಗಳು ಕಾಡುವುದು – Kannada News | Horoscope Today in Kannada on 05 January Monday; Dina Bhavishya Tithi Panchanga Details here

ಮೇಷ ರಾಶಿ:

ಇಂದು ನೀವು ಎಲ್ಲರ ಮಾತಿನಿಂದ ಗೆಲ್ಲುವಿರಿ. ನಿಮ್ಮನ್ನು ನೌಕರರು ಹೋಗಳುವರು. ಎದರುರಾಗು ಅಡ್ಡಿ, ಆತಂಕಗಳನ್ನು ನೀವು ಅನಾಯಾಸವಾಗಿ ದೂರ ಸರಿಸುವಿರಿ. ನಿಮ್ಮ ಇಂದಿನ‌ ಶ್ರಮಕ್ಕೆ ತಕ್ಕುದಾದ ಫಲವು ಸಿಗಬಹುದು. ಭೂಮಿಯ ವ್ಯಾಪಾರದಲ್ಲಿ ಜಯವಾಗಲಿದೆ. ಇಂದು ಸರ್ಕಾರಿ ಕೆಲಸಕ್ಕೆ ಓಡಾಟ ಮಾಡುವಿರಿ. ಕುಲದೇವರ ಆರಾಧನೆಯನ್ನು ನೀವು ಮಾಡುವಿರಿ. ನಿಮಗೆ ಕೆಲಸದಲ್ಲಿ ಅನೇಕ ಗೊಂದಲಗಳು ಇರಬಹುದು. ಕುಟುಂಬದ ಹೊಣೆಗಾರಿಕೆಯನ್ನು ನಿರ್ವಹಿಸುವುದು ಕಷ್ಟವಾಗಬಹುದು. ಅಕ್ರಮ ಕೆಲಸಗಳು ಎಲ್ಲರಿಗೂ ತಿಳಿಯಬಹುದು. ಹಳೆಯ ನೆನಪುಗಳು ನಿಮ್ಮನ್ನು ಕಾಡುವುದು. ಅದೃಷ್ಟವನ್ನು ಮಾತ್ರ ನಂಬಿ ಕೆಲಸವನ್ನು ಮಾಡಬೇಡಿ. ವಿಪತ್ತು ಬಂದಾಗ ಸ್ನೇಹಿತರು ದೂರಾಗಬಹುದು.

ವೃಷಭ ರಾಶಿ:

ನಿಮ್ಮ ಇಂದಿನ ವರ್ತನೆಯನ್ನು ಕುಟುಂಬವು ಸಹಿಸುವುದು ಕಷ್ಟವಾಗಬಹುದು. ಅಮೂಲ್ಯ ವಸ್ತುವಿನ ಲಾಭದಿಂದ ಸಂತಸವಾಗಲಿದೆ. ಅಪರಿಚಿತರ ಜೊತೆ ವೃಥಾ ಕಲಹವಾಗಬಹುದು. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಇರಲಿದೆ. ವಾಹನ‌ದ ಖರೀದಿಗೆ ಬೆಂಬಲವು ಸಿಗಬಹುದು. ‌ನಿಮ್ಮ‌ ಕೆಲಸಕ್ಕೆ ಅಧಿಕಾರಿಗಳು ಪ್ರಶಂಸಿಸುವರು. ಬಹಳ ದಿನಗಳಿಂದ ನಡೆಯುತ್ತಿದ್ದ ನ್ಯಾಯಾಲಯದ ವ್ಯವಹಾರವನ್ನು ಮುಕ್ತಾಯ ಮಾಡಿಕೊಳ್ಳುವಿರಿ. ಮಿತ್ರರೆಂದು ಹೇಳಿಕೊಂಡು ಯಾರಾದರೂ ಬರಬಹುದು. ನಿಮ್ಮ ಜಾಗರೂಕತೆಯಲ್ಲಿ ನೀವಿರಿ. ಕುಟುಂಬದ ಸ್ಥಿರಾಸ್ತಿಯನ್ನು ಪಡೆಯಲು ಪ್ರೇರಣೆ ಪಡೆಯುವಿರಿ. ಪರೋಪಕಾರಕ್ಕೆ ಸಮಯವನ್ನು ಕೊಡುವಿರಿ. ಅತಿಯಾದ ವೇಗದಲ್ಲಿ ವಾಹನ ಚಾಲನೆ ಬೇಡ.

ಮಿಥುನ ರಾಶಿ:

ಇಂದಿನ ಕಾರ್ಯಗಳಲ್ಲಿ ತೊಂದರೆಗಳು ಎದ್ದು ಕಾಣಿಸುವುದು. ಜಾಣ್ಮೆಯನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ತೀರ್ಥಕ್ಷೇತ್ರಗಳ ದರ್ಶನವನ್ನು ಮಾಡುವಿರಿ. ನಿಮ್ಮ ಅಭಿಪ್ರಾಯವನ್ನು ಹೇಳಬೇಕಾದಲ್ಲಿ ಹೇಳುವ ರೀತಿಯಲ್ಲಿ ಹೇಳಿ. ಸಾಹಸ ಕಾರ್ಯಗಳನ್ನು ಮಾಡಲು ನಿಮಗೆ ಉತ್ಸಾಹವು ಬರಬಹುದು. ನೀವು ಮಾಡಲು ಹೊರಟ ಕೆಲಸಕ್ಕೆ ಶುಭಸೂಚನೆಯು ಸಿಗುವುದು. ನಿಮ್ಮ ಆಲೋಚನೆಯ ದಿಕ್ಕು ಬದಲಾಗಬಹುದು. ದ್ವೇಷವನ್ನು ಮುಂದುವರಿಸಿ ಮನಸ್ಸನ್ನು ಹಾಳು ಮಾಡಿಕೊಳ್ಳಬೇಕಾದೀತು. ಅಪರೂಪದ ಬಂಧುಗಳ ಆಗಮನವು ನಿಮಗೆ ಕಷ್ಟವಾದೀತು. ಆದ್ಯತೆಗಳು ಬದಲಾಗಬಹುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ.

ಕರ್ಕಾಟಕ ರಾಶಿ:

ನಿಮ್ಮವರು ನೀವಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವರು. ಕುಟುಂಬದಲ್ಲಿ ನಿಮ್ಮ ಪ್ರಾಮುಖ್ಯವು ಅರಿವಿಗೆ ಬರಬಹುದು. ಬೇಡದ ಆಲೋಚನೆಯನ್ನು ದೂರಮಾಡಿಕೊಳ್ಳಿ. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು. ಹಿತಶತ್ರುಗಳ ಬಗ್ಗೆ ನಿಮ್ಮ ಊಹೆಯು ಸುಳ್ಳಾಗಬಹುದು. ಆರೋಗ್ಯವು ಬಡವಾದಂತೆ ತೋರುವುದು. ಉದ್ಯೋಗವನ್ನು ಬಿಡುವ ಸಂದರ್ಭವೂ ಬರಬಹುದು. ಮನೋ ವ್ಯಥೆಯನ್ನು ಯಾರ ಬಳಿಯಾದರೂ ಹೇಳಿಕೊಳ್ಳುವಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋಲಬೇಕಾಗುವುದು. ಸೋಲನ್ನು ಒಪ್ಪಿಕೊಳ್ಳುವ ಮಾನಸಿಕ ಸ್ಥಿತಿಯು ಇಂದು ಇಲ್ಲವಾಗುವುದು. ಇಂದು ನಿಮಗೆ ಭಯವು ಕಾಡಬಹುದು.

ಸಿಂಹ ರಾಶಿ:

ಇಂದಿನ ನಿಮ್ಮ ಕೆಲಸಗಳು ಬಹಳ ವಿಳಂಬವಾಗದು. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ಸ್ನೇಹಿತರಿಗೆ ಬೇಸರವಾಗಬಾರದೆಂದು ಅವರ ಜೊತೆ ಸಮಸ್ಯೆ ಕಳೆಯುವಿರಿ. ನಿಮ್ಮ ಪಕ್ಷಪಾತವು ನೌಕರರ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡೀತು. ದಾಂಪತ್ಯದಲ್ಲಿನ ವೈಮನಸ್ಯವು ನಿಮ್ಮ ಮಾತಿನಿಂದ ಸಡಿಲವಾದೀತು. ಅಧಿಕಾರಿಗಳು ನಿಮಗೆ ತೊಂದರೆ ಕೊಡಬಹುದು. ನಿಮ್ಮ ಬಳಿ ಇರುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಕಾರ್ಯವನ್ನು ಪೂರೈಸಿಕೊಳ್ಳಿ. ಹೊಸ ವಸ್ತುವಿಗೆ ಧನವನ್ನು ವ್ಯಯಮಾಡುವುದು ಬೇಡ. ಸ್ನೇಹಸಂಧಾನವು ವಿಫಲವಾಗಬಹುದು. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು.

ಕನ್ಯಾ ರಾಶಿ:

ಬೇಡದ ವಸ್ತುಗಳನ್ನು ನೀವು ಇನ್ನೊಬ್ಬರಿಗೆ ದಾನವಾಗಿ ಕೊಡುವಿರಿ. ರಾಜಕೀಯ ಮುಖಂಡರ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ದುರ್ಜನರ ಸಹವಾಸದಿಂದ ನಿಮಗೆ ಅಪವಾದವು ಬರಬಹುದು. ಕೆಲಸಗಳಲ್ಲಿ‌ ನೀವು ಜಯವನ್ನು ಸಾಧಿಸಬಹುದು. ಸಂಗಾತಿಯ ಮೇಲೆ ಯಾರದೋ ಕಾರಣಕ್ಕೆ ಮುನಿಸಿಕೊಳ್ಳುವಿರಿ. ಪೋಷಕರ ಜೊತೆ ನಿಮ್ಮ ವರ್ತನೆಯು ಆಪ್ತವಾಗಿ ಇರಲಿದೆ. ಅರಂಭಗಳಿಗೆ ಸ್ನೇಹಿತರ ಜೊತೆ ಭೇಟಿ ಕೊಡುವಿರಿ. ವಿರೋಧಿಗಳಿಗೆ ನಿಮ್ಮ ಬಲವನ್ನು ತೋರಿಸುವಿರಿ. ನಿಮ್ಮದಲ್ಲದ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟಪಡುವಿರಿ. ಸ್ನೇಹಿತರಿಂದ‌ ಉದ್ಯೋಗವನ್ನು ನೀವು ನಿರೀಕ್ಷಿಸುವಿರಿ. ಸ್ತ್ರೀಯರ ಮಾತಿನ ಮೇಲೆ ನಿಮಗೆ ನಂಬಿಕರ ಹೋಗಬಹುದು. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆ ಸಿಗುವುದು.

ತುಲಾ ರಾಶಿ:

ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉತ್ತಮಸ್ಥಾನವು ಸಿಗಲಿದೆ. ನಿಮ್ಮ ಬಗ್ಗೆ ಪ್ರೀತಿಯುಳ್ಳವರು ನಿಮ್ಮನ್ನು ಹರಸುವರು. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ಸಂಗಾತಿಯ ಮಾತಿಗೆ ನೀವು ಉತ್ತರಿಸಲಾರಿರಿ. ನಿಮ್ಮ ಲಾಭಾಂಶದ ಕೆಲವು ಭಾಗವನ್ನು ನೀವು ದಾನ ಮಾಡುವಿರಿ. ನಿಮ್ಮ ಒಳಗುಟ್ಟನ್ನು ಯಾರ ಮುಂದೂ ಬಿಚ್ಚಿಡುವುದು ಬೇಡ. ಆರ್ಥಿಕತೆಯು ನಿಮಗೆ ನೆಮ್ಮದಿಯನ್ನು ಕೊಟ್ಟೀತು. ನಿಮ್ಮ ಒಳಗುಟ್ಟನ್ನು ಯಾರ ಮುಂದೂ ಬಿಚ್ಚಿಡುವುದು ಬೇಡ. ನಿಮ್ಮ ಮಾತಿನಿಂದ ನೀವು ಹಗುರಾಗುವಿರಿ. ದಿನದ ಕೆಲವು ಸಮಯದಲ್ಲಿ ನಿಮಗೆ ಉತ್ತಮ ಜೀವನದ ಸೂಚನೆ ಸಿಗಲಿದೆ.

ವೃಶ್ಚಿಕ ರಾಶಿ:

ನಿಮಗೆ ಗೌರವಕ್ಕೆ ತೊಂದರೆ ಆಗಬಹುದು. ಇದರಿಂದ ಸಿಟ್ಟುಗೊಳ್ಳುವಿರಿ. ಆರೋಗ್ಯವು ಕೆಡಲಿದ್ದು ಹತ್ತಾರು ಆಲೋಚನೆಗಳು ಬರಬಹುದು. ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿಹಾಕಬಹುದು. ದೂರದಲ್ಲಿರುವ ನಿಮ್ಮ ಮಕ್ಕಳ ಬಗ್ಗೆ ಚಿಂತೆಯಾಗುವುದು. ನೀವು‌ ಇಂದು ವಿದ್ಯುತ್ ಉಪಕರಣದ ಮಾರಟಗಾರರಾಇದ್ದರೆ ಅಧಿಕ ಲಾಭವು ಸಿಗುವುದು. ಸಾರ್ವಜನಿಕವಾಗಿ ಹೆಚ್ಚು ಪ್ರಭಾವ ಉಳ್ಳವರಾಗಿದ್ದು ಗೌರವವು ಸಿಗಲಿದೆ. ಸಹೋದ್ಯೋಗಿಗಳು ನಿಮ್ಮ ಮೇಲೆ ಒತ್ತಡವನ್ನು ಹೇಳಬಹುದು. ಬೇಡವೆಂದ ಕಾರ್ಯವನ್ನು ಹಠದಿಂದ ಮಾಡುವಿರಿ. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ನಾಯಕರಾಗುವ ಸಾಧ್ಯತೆ ಇದೆ.

ಧನು ರಾಶಿ:

ಗೆಳತಿಯ ಜೊತೆ ಆತ್ಮೀಯ ಒಡನಾಡವನ್ನು ಇಟ್ಟುಕೊಳ್ಳುವಿರಿ. ಮನೆಯಲ್ಲಿ ಆಸ್ತಿಯ ವಿಚಾರವಾಗಿ ಸಣ್ಣ ಬಿರುಸಿನ ಮಾತುಗಳು ಕೇಳಿಬರಬಹುದು. ಮೇಲಧಿಕಾರಿಗಳು ನಿಮ್ಮ ಮೇಲೆ‌ ಒತ್ತಡ ಹೇರಬಹುದು. ನಿಮ್ಮ ಮೇಲೆ ಪಿತೂರಿ ಮಾಡಿದ ಅನುಮಾನ ಇರಲಿದೆ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ನಿಮ್ಮ ವಿಚಾರವನ್ನು ನೀವು ಗುಪ್ತವಾಗಿ ತಿಳಿದುಕೊಳ್ಳುವಿರಿ. ನಿಮ್ಮ ಕಾರ್ಯದಲ್ಲಿ ಉದ್ದೇಶವು ಸ್ಪಷ್ಟವಾಗಿ ಇರಲಿ. ಕೆಲಸವು ಪೂರ್ಣವಾಗದೇ ಒದ್ದಾಡಿಕೊಂಡು ಇಂದಿನ ಕೆಲಸವನ್ನು ಮಾಡುವಿರಿ. ಸಂಗಾತಿಯ ಕೋಪವನ್ನು ನೀವು ಕಡಿಮೆ ಮಾಡುವಿರಿ. ಉಪಕರಿಸಿದವರ ಮೇಲೆ ನಿಮಗೆ ಸ್ಮರಣೆ ಇರಲಿ. ಮನೆಯ ಕೆಲಸವನ್ನು ಮಾಡಲು ಉತ್ಸಾಹವೇ ಇರದು. ಸಣ್ಣ ಪಾಲು ಕೈತಪ್ಪಬಹುದು. ಬೆಲೆಬಾಳುವ ವಸ್ತುಗಳನ್ನು ಖರೀದಿ ಮಾಡುವಿರಿ.

ಮಕರ ರಾಶಿ:

ಆಕಸ್ಮಿಕ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ಬೇಕಾದಷ್ಟು ಮಾತ್ರ ಮಾತುಗಳನ್ನಾಡಿ. ಅತಿಥಿಗಳ ಆಗಮನದಿಂದ‌ ಸಂತೋಷವಾಗುವುದು. ಸಂಗಾತಿಯ ಜೊತೆ ಆರ್ಥಿಕ ವಿಚಾರಕ್ಕೆ ಕಲಹ ಮಾಡಿಕೊಳ್ಳುವಿರಿ. ನಿಮ್ಮ‌ ಚಂಚಲವಾದ ಸ್ವಭಾವವನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಕಷ್ಟವಾದೀತು.‌ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ದೂರ ಹೋಗುವ ಮನಸ್ಸು ಮಾಡುವಿರಿ. ತಪ್ಪು ಮಾಡದಿರುವ ವಿಚಾರಕ್ಕೆ ಕ್ಷಮೆ ಕೇಳಬೇಕಾದೀತು. ಹಿರಿಯರ ಮಾತಿಗೆ ಬೆಲೆ ಇರಲಿ. ಸ್ನೇಹದಿಂದ ಪ್ರೇಮವು ಉಂಟಾಗಲಿದೆ. ಆದಾಯಕ್ಕೆ ಹೊಸ ಯೋಜನೆಯನ್ನು ರೂಪಿಸುವಿರಿ. ಕಷ್ಟವೆಂದುಕೊಂಡ ಕಾರ್ಯವು ಗೊತ್ತಾಗದೇ ಮುಗಿದುಹೋದೀತು. ಬೇಕಾದಷ್ಟು ಕೆಲಸಗಳಿದ್ದರೂ ನೀವು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ.

ಕುಂಭ ರಾಶಿ:

ಕಾಸು ಇದ್ದಷ್ಟು ಕಾಲು ಚಾಚು. ಇಂದು ಕುಟುಂಬದಲ್ಲಿ ಆತಂಕವು ಇರಲಿದ್ದು ದೈವದ ಮೊರೆ ಹೋಗುವಿರಿ. ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ಸಿಗುವುದು. ನೀವು ಇಂದು ಮಾನಸಿಕವಾಗಿ ಕುಗ್ಗುವಿರಿ. ಯಾರ ಸಮಾಧಾನವೂ ನಿಮಗೆ ಸಾಂತ್ವನ‌ವನ್ನು ನೀಡದು. ನಿಮ್ಮ ಇಂದಿನ‌ ಕಾರ್ಯದಲ್ಲಿ ಸಾವಧಾನತೆ ಇರಲಿದೆ. ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವಿರಿ. ನಿಜವಾದ ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಿ ಪ್ರಯೋಜನವಾಗದು. ಹಣಕಾಸಿನ ವಿಚಾರದಲ್ಲಿ ಬಹಳ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ವಿನಾಕಾರಣ ಕಾಲಹರಣ ಮಾಡಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರದು. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು.

ಮೀನ ರಾಶಿ:

ಕೃಷಿಗೆ ಸಂಬಂಧಿಸಿದ ಚಟುವಟಿಕೆ ಬಹಳ ವೇಗದ ರೂಪದಲ್ಲಿ ನಡೆಯಬಹುದು. ನಿಮ್ಮ‌ ಮಾತುಗಳಿಗೆ ತೂಕವು ಕಡಿಮೆ‌ ಆಗಬಹುದು. ಸ್ಥಾನಕ್ಕಾಗಿ ನೀವು ಎದುರುನೋಡುತ್ತಿದ್ದರೆ ನಿಮಗೆ ಅದು ಸಿಗಬಹುದು. ಇಂದು ನಿಮ್ಮಲ್ಲಿ ಕ್ರೀಡಾ ಮನೋಭಾವವು ಇಲಿದೆ. ವಾಹನ ಚಾಲನೆಯನ್ನು ಎಚ್ಚರಿಕೆಯಿಂದ ಮಾಡಿ. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ನಿಮ್ಮನ್ನು ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ನಿರ್ಧಾರವನ್ನು ಮಕ್ಕಳು ಒಪ್ಪದೇ ಇರುವುದು ನಿಮಗೆ ಕೋಪಬರಬಹುದು. ಸೌಂದರ್ಯದ ವಿಚಾರದಲ್ಲಿ ಹೆಚ್ಚು ಆಸಕ್ತಿ ಇರಲಿದೆ. ನೀವು ಇಂದು‌ ಪ್ರೀತಿಯನ್ನು ಹೇಳಿಕೊಳ್ಳುವಿರಿ. ಯಾವುದನ್ನಾದರೂ ಪೂರ್ಣ ಮನಸ್ಸಿನಿಂದ ಮಾಡಿ. ಬಹಳ ದಿನಗಳ ಅನಂತರ ಕುಟುಂಬದ ಜೊತೆ ದೂರ ಪ್ರಯಾಣ.

ಜನವರಿ 05,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಶ್ರವಣಾ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಪ್ರತಿಪತ್ ನಿತ್ಯನಕ್ಷತ್ರ : ಪುನರ್ವಸು ಯೋಗ : ಸೌಭಾಗ್ಯ, ಕರಣ : ಕೌಲವ, ಸೂರ್ಯೋದಯ – 06 – 51 am, ಸೂರ್ಯಾಸ್ತ – 06 – 08 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 08-16 – 09:41, ಯಮಗಂಡ ಕಾಲ 11:05 – 12:30, ಗುಳಿಕ ಕಾಲ 13:54 – 15:19

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಎರಡೂ ಏರಿಯಾ ಮಧ್ಯೆ ಗೋಡೆ ನಿರ್ಮಿಸಿ: ಅನ್ಯಕೋಮಿನವರ ಕಿರುಕುಳಕ್ಕೆ ರೋಸಿ ಹೋದ ಹಿಂದೂಗಳು – Kannada News | A Muslims Stone Pelting on Hindu Om Shakthi Devotees In JJ Nagar Bengaluru

ಬೆಂಗಳೂರು, (ಜನವರಿ 04): ಹಿಂದೂ ದೇವರ ಮೆರವಣಿಗೆ ವೇಳೆ ಕಲ್ಲು ತೂರಾಟ ನಡದ ಘಟನೆ ಬೆಂಗಳೂರಿನ ಜೆ ಜೆ ಆರ್ ನಗರದ ವಿಎಸ್ ಗಾರ್ಡನ್ ನ ಓಂ ಶಕ್ತಿ ದೇವಸ್ಥಾನದ ಬಳಿ ನಡೆದಿದೆ. ಓಂ ಶಕ್ತಿ ಮಾಲಾಧಾರಿಗಳು ದೇವಿಯ ತೇರು ಎಳೆಯತ್ತಿರುವ ವೇಳೆ ಕಲ್ಲೆಸತ ನಡೆದಿದೆ. ತೇರಿಗೆ ಅನ್ಯಕೋಮಿನವರು ಕಲ್ಲು ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಲ್ಲೇಟಿಗೆ ಓಂ ಶಕ್ತಿ ಮಾಲಾಧಾರಿ ಮಗು ಗಾಯಗೊಂಡಿದ್ದಾರೆ. ಹಿಂದೂ ದೇವರ ಉತ್ಸವ ವೇಳೆ ಕಲ್ಲೆಸೆತಕ್ಕೆ ಹಿಂದೂ ಸಂಘಟನೆಗಳು ಕೆರಳಿದ್ದು, ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿವೆ. ಈ ಸಂಬಂಧ ಸ್ಥಳೀಯರು ಪ್ರತಿಕ್ರಿಯಿಸಿದ್ದು, ಸ್ಥಳೀಯ ಅನ್ಯಕೋಮಿನ ಜನರ ಕಾಟಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಬೆನ್ನಲ್ಲೇ ಬೆಂಗಳೂರಿನಲ್ಲೂ ಗಲಭೆ: ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ

ನಮ್ಮ ಏರಿಯಾದಲ್ಲಿ ಪ್ರತಿದಿನವೂ ಇಂತಹ ಸಮಸ್ಯೆ ಎದುರಿಸ್ತಿದ್ದೇವೆ. ಪ್ರತಿ ದಿನ ಭಯದಲ್ಲೇ ಜೀವನ ನಡೆಸುತ್ತಿದ್ದೇವೆ. ನಮ್ಮ ಏರಿಯಾಗೂ ಅವರ ಏರಿಯಾ ನಡುವೆ ಗೋಡೆ ನಿರ್ಮಿಸಬೇಕು. ನಮ್ಮ ಹೆಣ್ಣುಮಕ್ಕಳು ರಸ್ತೆಯಲ್ಲಿ ಓಡಾಡುವುದೇ ಕಷ್ಟಕರವಾಗಿದ್ದು, ರಸ್ತೆಯಲ್ಲಿ ಮಹಿಳೆಯರು, ಮಕ್ಕಳ ಮೈಮೇಲೆಯೇ ಬೀಳುತ್ತಾರೆ. ಪ್ರತಿರೋಧ ವ್ಯಕ್ತಪಡಿಸಿದವರನ್ನು ಗುರಿಯಾಗಿಸಿ ತೊಂದರೆ ಕೊಡುತ್ತಾರೆ. ನಾವು ಇಲ್ಲಿ ನೆಮ್ಮದಿಯಾಗಿ ಇರಲು ಸರ್ಕಾರ ರಕ್ಷಣೆ ನೀಡಲಿ ಎಂದು ಜೆ.ಜೆ.ನಗರ ಪೊಲೀಸ್ ಠಾಣೆ ಎದುರು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಳ್ಳಾರಿ ಬೆನ್ನಲ್ಲೇ ಬೆಂಗಳೂರಿನಲ್ಲೂ ಗಲಭೆ: ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ – Kannada News | Violence In Bengaluru: miscreants Stone Pelting On Om Shakti Maldhari at JJ Nagar

ಬೆಂಗಳೂರು, (ಜನವರಿ 04): ಮೊನ್ನೆ ಹೊಸ ವರ್ಷದ ದಿನ ಬಳ್ಳಾರಿಲ್ಲಿ ಬ್ಯಾನರ್ ವಿಚಾರಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ದೊಡ್ಡ ಗಲಾಟೆಯಾಗಿದ್ದು, ಈ ಗಲಭೆಯಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾಗಿದ್ದಾನೆ. ಈ ಪ್ರಕರಣ ಬೆನ್ನಲ್ಲೇ ಬೆಂಗಳೂರಿನಲ್ಲೂ ಸಹ ಗಲಭೆಯಾಗಿದ್ದು, ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ಮಾಡಿರುವ ಘಟನೆ ಜೆ.ಜೆ.ನಗರದ ವಿ.ಎಸ್.ಗಾರ್ಡನ್​ನ ಓಂ ಶಕ್ತಿ ದೇಗುಲ ಬಳಿ ನಡೆದಿದೆ.  ಕಲ್ಲೇಟಿಗೆ ಓಂ ಶಕ್ತಿ ಮಾಲಾಧಾರಿ ಮಗು ಗಾಯಗೊಂಡಿದೆ. ಹಿಂದೂ ದೇವರ ಉತ್ಸವವೇಳೆ ಕಲ್ಲೆಸೆತಕ್ಕೆ ಹಿಂದೂ ಸಂಘಟನೆಗಳು ಕೆರಳಿದ್ದು, ಹಿಂದೂಗಳು ಜೆಜೆನಗರ ಪೊಲೀಸ್ ಠಾಣೆ ಮಂದೆ ಜಮಾಯಿಸಿದ್ದಾರೆ.

ಈ ಸಂಬಂಧ ಜೆ.ಜೆ.ನಗರ ಪೊಲೀಸ್ ಠಾಣೆ ಎದುರು ನೂರಾರು ಜನ ಜಮಾವಣೆಯಾಗಿದ್ದು, ಕಲ್ಲು ತೂರಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಓಂ ಶಕ್ತಿ ದೇವಿಯ ಉತ್ಸವ ನಡೆಯುತ್ತಿದ್ದು, ಇಂದು ದೇವಿಯ ತೇರು ಎಳೆಯುವಾಗ ಅನ್ಯಕೋಮಿನ ಏರಿಯಾದಿಂದ ಕಲ್ಲು ತೂರಾಟವಾಗಿದೆ ಎಂದು ಓಂ ಶಕ್ತಿ ಮಾಲಾಧಾರಿಗಳ ಆರೋಪವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ನೋಡಿ: ಬಳ್ಳಾರಿ ಗಲಭೆ: ಪೊಲೀಸ್ ವಶದಲ್ಲಿದ್ದ 9 ಗನ್​​ಮ್ಯಾನ್​​ ಪೈಕಿ ಓರ್ವ ಅರೆಸ್ಟ್

ಘಟನೆ ವಿಕೋಪಕ್ಕೆ ತಿರುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ಜಗಜೀವನ್ ರಾಮ್​ನಗರ ಪೊಲೀಸ್ ಠಾಣೆಗೆ ಎಸಿಪಿ ಭರತ್ ರೆಡ್ಡಿ ಭೇಟಿ ನೀಡಿ ಕಲ್ಲು ತೂರಾಟದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇದರಿಂದ ಬೂದಿ ಮುಚ್ಚಿದ ಕೆಂಡದಂತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:16 pm, Sun, 4 January 26

Source link

ಅದೃಷ್ಟದ ಸ್ಪರ್ಧಿಯ ಅದೃಷ್ಟ ಖೋತಾ: ಅಚ್ಚರಿಯ ಎವಿಕ್ಷನ್ ಏನಲ್ಲ – Kannada News | Bigg Boss Kannada 12: Spandana evicted from the house

ಬಿಗ್​​ಬಾಸ್ (Bigg Boss) ಮನೆಯಿಂದ ಮತ್ತೊಬ್ಬರು ಸ್ಪರ್ಧಿ ಹೊರಗೆ ಹೋಗಿದ್ದಾರೆ. ಕಳೆದ ವಾರ ಇಬ್ಬರು ಪ್ರಮುಖ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿದ್ದರು. ಮಾಳು ಮತ್ತು ಸೂರಜ್ ಅವರು ಎವಿಕ್ಟ್ ಆಗಿದ್ದರು. ಅದು ನಿಜಕ್ಕೂ ಅಚ್ಚರಿಯ ಎವಿಕ್ಷನ್ ಎನಿಸಿಕೊಂಡಿತ್ತು. ಆದರೆ ಈ ವಾರ ತೀರ ಅಚ್ಚರಿಯ ಎವಿಕ್ಷನ್ ಎನಿಸಲಿಲ್ಲ, ಬದಲಿಗೆ ನಿರೀಕ್ಷಿತ ಎಂದೇ ಎನಿಸಿತು. ಮನೆಯ ಇತರೆ ಸ್ಪರ್ಧಿಗಳಿಂದ ಅದೃಷ್ಟದ ಸ್ಪರ್ಧಿ ಎಂದೇ ಕರೆಸಿಕೊಳ್ಳುತ್ತಿದ್ದ ಸ್ಪಂದನಾ ಅವರು ಈ ವಾರ ಎವಿಕ್ಟ್ ಆಗಿ ಮನೆಯಿಂದ ಹೊರಗೆ ಹೋಗಿದ್ದಾರೆ.

ಸ್ಪಂದನಾ ಅವರು ಅಸಲಿಗೆ ಕಳೆದ ವಾರವೇ ಎವಿಕ್ಷನ್​​ ಆಗುವ ಹಂತಕ್ಕೆ ಹೋಗಿ ವಾಪಸ್ಸಾಗಿದ್ದರು. ಮಾಳು ಮತ್ತು ಸ್ಪಂದನಾ ಅವರು ಕೊನೆಯ ಸ್ಪರ್ಧಿಗಳಾಗಿ ಉಳಿದುಕೊಂಡಿದ್ದರು. ಇಬ್ಬರಲ್ಲಿ ಮಾಳು ಮನೆಯಿಂದ ಹೊರಗೆ ಹೋಗಿ ಸ್ಪಂದನಾ ಉಳಿದುಕೊಂಡಿದ್ದರು. ಆಗಲೂ ಸಹ ಕೆಲವರು ಸ್ಪಂದನಾರ ಅದೃಷ್ಟದ ಬಗ್ಗೆ ಮಾತನಾಡಿದ್ದರು. ಆದರೆ ಈ ವಾರ ಸ್ಪಂದನಾ ಅವರಿಗೆ ಅದೃಷ್ಟ ಕೈ ಹಿಡಿಯಲಿಲ್ಲ. ಈ ವಾರ ಸ್ಪಂದನಾ ಅವರು ಮನೆಯಿಂದ ಹೊರಗೆ ಬಂದಿದ್ದಾರೆ.

ಸುದೀಪ್ ಅವರು ಸಹ ಈ ವಾರದ ಎಲಿಮಿನೇಷನ್ ಅನ್ನು ಸರಳವಾಗಿಯೇ ಮುಗಿಸಿದರು. ಈ ಹಿಂದಿನ ಕೆಲ ವಾರ ಬೇರೆ ಬೇರೆ ರೀತಿಯಲ್ಲಿ ಎವಿಕ್ಷನ್ ಅನ್ನು ಕೆಲ ಆಕ್ಟಿವಿಟಿಗಳ ಮೂಲಕ ಮಾಡಲಾಗಿತ್ತು. ನಾಮಿನೇಷನ್​​ನಿಂದ ಸೇಫ್ ಆಗುವುದಕ್ಕೂ ಆಕ್ಟಿವಿಟಿ ನೀಡಲಾಗಿತ್ತು. ಆದರೆ ಈ ವಾರ ಅದೇನೂ ಇಲ್ಲದೆ, ಬಹಳ ಸರಳವಾಗಿ ಸ್ಪಂದನಾರ ಹೆಸರು ಹೇಳುವ ಮೂಲಕ ಎವಿಕ್ಷನ್ ಪ್ರಕ್ರಿಯೆ ಪೂರ್ಣ ಮಾಡಲಾಯ್ತು. ಅಂದಹಾಗೆ ಎವಿಕ್ಷನ್​​ನ ಕೊನೆಯಲ್ಲಿ ರಾಶಿಕಾ ಮತ್ತು ಸ್ಪಂದನಾ ಉಳಿದಿದ್ದರು. ಇಬ್ಬರಲ್ಲಿ ಸ್ಪಂದನಾ ಹೊರಗೆ ಬಂದರು.

ಇದನ್ನೂ ಓದಿ:ಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ: ಗಿಲ್ಲಿಯ ಬಿಗ್​ಬಾಸ್ ರ್ಯಾಪ್ ಸಾಂಗ್

ಸ್ಪಂದನಾ ಅವರು ಇಷ್ಟ ದಿನ ಚೆನ್ನಾಗಿಯೇ ಆಡಿದರು. ಯಾರೊಟ್ಟಿಗೂ ವೈರತ್ವ ಕಟ್ಟಿಕೊಳ್ಳದೆ ಎಲ್ಲರೊಟ್ಟಿಗೂ ಬಾಂಧವ್ಯ ಇರಿಸಿಕೊಂಡು, ಸ್ನೇಹದೊಂದಿಗೆ ಆಟ ಆಡಿದರು. ಧನುಶ್, ಕಾವ್ಯಾ ಜೊತೆಗೆ ವಿಶೇಷ ಬಂಧ ಇರಿಸಿಕೊಂಡಿದ್ದ ಸ್ಪಂದನಾ, ರಘು, ಗಿಲ್ಲಿ ಅವರಿಗೂ ಗೆಳೆಯರಾಗಿದ್ದರು. ಆದರೆ ರಕ್ಷಿತಾ ಜೊತೆಗೆ ಕಳೆದ ಕೆಲ ವಾರಗಳಿಂದಲೂ ವೈರತ್ವ ಬೆಳೆಸಿಕೊಂಡಿದ್ದರು. ಮನೆಯಿಂದ ಹೊರ ಹೋದ ಬಳಿಕ ‘ಈಗಷ್ಟೆ ಮನೆಯಿಂದ ಹೊರ ಬಂದಿದ್ದೀನಿ ಆದರೆ ಈಗಲೆ ನಾನು ಬಿಗ್​​ಬಾಸ್ ಮನೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೀನಿ’ ಎಂದರು ಸ್ಪಂದನಾ. ಸುದೀಪ್ ಅವರು ಸ್ಪಂದನಾ ಅವರಿಗೆ ಒಳ್ಳೆಯ ಭವಿಷ್ಯವನ್ನು ಹಾರೈಸಿ ಬೀಳ್ಕೊಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಸೆಹ್ವಾಗ್, ಪಾಂಟಿಂಗ್ ದಾಖಲೆ ಪುಡಿಗಟ್ಟಲು ಕಿಂಗ್ ಕೊಹ್ಲಿ ತಯಾರಿ – Kannada News | IND vs NZ: Virat Kohli Eyes Historic ODI Century Record vs New Zealand

ಪ್ರಸ್ತುತ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಶ್ವ ದಾಖಲೆಯನ್ನು ಈ ಮೂವರು ಆಟಗಾರರು (ವಿರಾಟ್ ಕೊಹ್ಲಿ, ರಿಕಿ ಪಾಂಟಿಂಗ್ ಮತ್ತು ವೀರೇಂದ್ರ ಸೆಹ್ವಾಗ್) ಜಂಟಿಯಾಗಿ ಹೊಂದಿದ್ದಾರೆ. ಈ ಮೂವರು ತಲಾ ಆರು ಬಾರಿ ಈ ಸಾಧನೆ ಮಾಡಿದ್ದಾರೆ. ಇದೀಬ ಕೊಹ್ಲಿ ಶತಕ ಸಿಡಿಸಿದರೆ, ಸೆಹ್ವಾಗ್ ಅವರ ದಾಖಲೆಯನ್ನು ಮುರಿಯುವುದಲ್ಲದೆ, ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ ವಿಶ್ವದ ನಂಬರ್ 1 ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.

Source link

ಬಿಗ್​​ಬಾಸ್ ಮನೆಯಲ್ಲಿ ನಡೆಯಿತು ಅದ್ಭುತ, ಗಿಲ್ಲಿ-ಅಶ್ವಿನಿ ಆಡಿದ ಮಾತು ಕೇಳಿದ್ರಾ? – Kannada News | Bigg Boss Kannada: Ashwini praised Gilli, and Gilli praised back

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಇನ್ನೇನು ಮುಗಿಯಲು ಬಂದಿದೆ. ಫಿನಾಲೆಗೆ ಕೆಲವೇ ದಿನಗಳಷ್ಟೆ ಬಾಕಿ ಇದೆ. ಈ ಸೀಸನ್ ಶುರು ಆದಾಗಿನಿಂದ ಮುಗಿಯುವ ವರೆಗೂ ಬಿಗ್​​ಬಾಸ್ ಮನೆಯಲ್ಲಿ ಅಶ್ವಿನಿ ಮತ್ತು ಗಿಲ್ಲಿ ಪರಸ್ಪರ ಕಿತ್ತಾಡುತ್ತಲೇ ಬಂದಿದ್ದಾರೆ. ಇಬ್ಬರ ನಡುವೆ ಜಗಳ ಇಲ್ಲದ, ಪರಸ್ಪರರ ಬಗ್ಗೆ ಟೀಕೆ, ವಿಮರ್ಶೆ ಮಾಡದ ದಿನವೇ ಇಲ್ಲ ಎನ್ನಬಹುದು. ಬಿಗ್​​ಬಾಸ್ ಮನೆಯಲ್ಲಿ ಅತಿಹೆಚ್ಚು ಕಿತ್ತಾಡಿರುವವರೆಂದರೆ ಅದು ಗಿಲ್ಲಿ ಮತ್ತು ಅಶ್ವಿನಿಯೇ ಆಗಿದ್ದಾರೆ. ಆದರೆ ಇನ್ನೇನು ಫಿನಾಲೆ ಹತ್ತಿರ ಬಂದಾಗ ಬಿಗ್​​ಬಾಸ್ ಮನೆಯಲ್ಲಿ ಅದ್ಭುತ ನಡೆದಿದ್ದು, ಗಿಲ್ಲಿ, ಅಶ್ವಿನಿ ಅವರನ್ನು ಒಳ್ಳೆಯವರು ಎಂದರೆ, ಅಶ್ವಿನಿ, ಗಿಲ್ಲಿಯನ್ನು ನನಗೆ ಇಷ್ಟದ ಸ್ಪರ್ಧಿ ಎಂದಿದ್ದಾರೆ. ಇದು ನಡೆದಿದ್ದು ಹೇಗೆ?

ಸುದೀಪ್ ನಡೆಸಿಕೊಡುವ ವೀಕೆಂಡ್ ಎಪಿಸೋಡ್​ನಲ್ಲಿ ಶನಿವಾರದ ಎಪಿಸೋಡ್ ಗಂಭೀರವಾಗಿದ್ದರೆ ಭಾನುವಾರದ ಎಪಿಸೋಡ್ ತುಸು ಲೈಟ್ ಆಗಿರುತ್ತದೆ. ಹಾಸ್ಯ ತುಂಬಿರುತ್ತದೆ. ಅಂತೆಯೇ ಸುದೀಪ್ ಅವರು, ಹೊಸ ವರ್ಷದ ಮೊದಲ ವೀಕೆಂಡ್ ಎಪಿಸೋಡ್​​ನಲ್ಲಿ ಒಳ್ಳೆಯ ಮಾತುಗಳನ್ನಾಡೋಣ ಎಂದು ಹೇಳಿದ ಸುದೀಪ್, ಸ್ಪರ್ಧಿಗಳು ಇತರೆ ಸ್ಪರ್ಧಿಗಳ ಬಗ್ಗೆ ಮೂರು ಒಳ್ಳೆಯ ವಿಷಯಗಳನ್ನು ಹೇಳಿ ಎಂದರು.

ಮೊದಲು ಗಿಲ್ಲಿ, ಅಶ್ವಿನಿ ಅವರ ಬಗ್ಗೆ ಮೂರು ಒಳ್ಳೆಯ ಮಾತುಗಳನ್ನು ಹೇಳಬೇಕಿತ್ತು, ಆಗ ಮಾತನಾಡಿದ ಗಿಲ್ಲಿ, ‘ಅಶ್ವಿನಿ ಅವರು ಯಾರೊಂದಿಗೆ ಏನೇ ಜಗಳ ಮಾಡಿರಲಿ ಆದರೆ ಊಟದ ವಿಷಯ ಬಂದಾಗ ಎಂದಿಗೂ ಎಲ್ಲರನ್ನೂ ಸಮಾನವಾಗಿ ನೋಡಿದ್ದಾರೆ. ಏನೇ ಜಗಳ ಮಾಡಿದ್ದರೂ ಅಡುಗೆ ಮಾಡಿ, ಎಲ್ಲರೂ ಊಟ ಮಾಡುವಂತೆ ನೋಡಿಕೊಳ್ಳುತ್ತಾರೆ’ ಎಂದರು. ಬಳಿಕ, ‘ಅಶ್ವಿನಿ ಅವರು ಟಾಸ್ಕ್ ವಿಷಯದಲ್ಲಿ ಗೇಮ್ ವಿಷಯದಲ್ಲಿ ಜಗಳ ಮಾಡುತ್ತಾರೆ ಆದರೆ ಅವರು ಜಗಳ ಬಿಟ್ಟು ಬೇರೆ ಸಂದರ್ಭದಲ್ಲಿ ಬಹಳ ಒಳ್ಳೆಯವರು, ಪಾಸಿಟಿವ್ ವ್ಯಕ್ತಿ ಎನಿಸುತ್ತಾರೆ’ ಎಂದರು ಗಿಲ್ಲಿ.

ಇದನ್ನೂ ಓದಿ:ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಫೀಲಿಂಗ್ಸ್: ಓಪನ್ ಆಗಿ ಹೇಳಿದ ಕಿಚ್ಚ ಸುದೀಪ್

ಕೊನೆಗೆ, ‘ಅಶ್ವಿನಿ ಅವರು ಬಹಳ ಟಫ್ ಸ್ಪರ್ಧಿ, ನಾನು ಅವರನ್ನು ಬಹಳ ಗೋಳು ಹೊಯ್ದಿಕೊಂಡಿದ್ದೀನಿ, ಅವರ ವಯಸ್ಸಿನ ಬಗ್ಗೆ ತಮಾಷೆ ಮಾಡಿದ್ದೀನಿ ಆದರೆ ಅವರು ಎಲ್ಲವನ್ನೂ ಎದುರಿಸಿ ಕಾಂಪಿಟೇಶನ್ ಕೊಟ್ಟಿದ್ದಾರೆ. ಟಫ್ ಆಟ ಆಗಿದ್ದಾರೆ. ಫಿಸಿಕಲ್ ಟಾಸ್ಟ್​​ನಲ್ಲಿಯೂ ಸಹ ಅವರನ್ನು ಎದುರಿಸುವವರು ಇಲ್ಲ. ಅವರು ಬಹಳ ಗಟ್ಟಿ ಸ್ಪರ್ಧಿ’ ಎಂದಿದ್ದಾರೆ ಗಿಲ್ಲಿ.

ಇನ್ನು ಅಶ್ವಿನಿ ಸಹ ಗಿಲ್ಲಿ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ‘ನನಗೆ ಗಿಲ್ಲಿ ಬಹಳ ಇಷ್ಟವಾಗುವ ಸ್ಪರ್ಧಿ. ಅವರು ತಮ್ಮ ಪ್ರೀತಿಯನ್ನು ಮೌನವಾಗಿ ತೋರಿಸುತ್ತಾನೆ. ಅನ್ನುವುದು ಅಂದುಬಿಡುತ್ತಾನೆ ಆ ಮೇಲೆ ಅವರಿಗೆ ಹರ್ಟ್ ಆಗಿದೆಯಾ ಎಂದು ಮರೆಯಲ್ಲಿ ನಿಂತು ನೋಡುತ್ತಾನೆ. ಅವನು ಯಾರನ್ನಾದರೂ ಇಷ್ಟ ಪಟ್ಟರೆ ಅವರನ್ನು ಬಹಳ ಪ್ರೊಟೆಕ್ಟ್ ಮಾಡುತ್ತಾನೆ. ಅವರಿಗಾಗಿ ರಿಸ್ಕ್ ತೆಗೆದುಕೊಳ್ಳುತ್ತಾನೆ. ಮತ್ತು ಅವನ ಇಲ್ಲಿಯವರೆಗಿನ ಜರ್ನಿ ಸಹ ಬಹಳ ಕಷ್ಟವಾದುದು ಎಂಬುದು ನನಗೆ ಗೊತ್ತಿದೆ. ಅವನು ಅದನ್ನು ಹೇಳಿಕೊಂಡು ಕಣ್ಣೀರು ಹಾಕಿದವನಲ್ಲ, ವೀಕ್ನೆಸ್ ತೋರಿಸಿಕೊಳ್ಳುವುದು ಅವನಿಗೆ ಇಷ್ಟ ಇಲ್ಲ ಅವನ ಆ ಗುಣ ನನಗೆ ಇಷ್ಟ’ ಎಂದಿದ್ದಾರೆ ಅಶ್ವಿನಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಳ್ಳಾರಿ ಗಲಭೆ: ಪೊಲೀಸ್ ವಶದಲ್ಲಿದ್ದ 9 ಗನ್​​ಮ್ಯಾನ್​​ ಪೈಕಿ ಓರ್ವ ಅರೆಸ್ಟ್

ಬಳ್ಳಾರಿ, (ಜನವರಿ 04): ಬಳ್ಳಾರಿ ಬ್ಯಾನರ್ ಗಲಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವು ಪ್ರಕರಣದ ತನಿಖೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಒಟ್ಟು 26 ಜನರನ್ನು ಬಂಧಿಸಲಾಗಿದೆ. ಪ್ರಮುಖವಾಗಿ ಘಟನೆ ನಡೆದಾಗ ಸ್ಥಳದಲ್ಲಿದ್ದ 9 ಗನ್​ಮ್ಯಾನ್​ಗಳ ಪೈಕಿ ಓರ್ವನ ಬಂಧನವಾಗಿದೆ. ಹೌದು..ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್​ಮ್ಯಾನ್​​ ನನ್ನು ಪೊಲೀಸರು ಬಂಧಿಸಿದ್ದಾರೆ. ಗಲಾಟೆ ವೇಳೆ ಸತೀಶ್​​​ ರೆಡ್ಡಿ ಖಾಸಗಿ ಗನ್ ಮ್ಯಾನ್​​ ಗುರುಚರಣ್​​ ಸಿಂಗ್ ಹಾರಿಸಿದ ಗುಂಡಿಗೆ ರಾಜಶೇಖರ್ ಸಾವನ್ನಪ್ಪಿರುವುದು ದೃಢಪಟ್ಟಿದೆ. ಹೀಗಾಗಿ ಗುರುಚರಣ್​​ ಸಿಂಗ್ ನನ್ನು ಬಂಧಿಸಿದ್ದಾರೆ.

ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿಯ ನಾಲ್ವರು ಗನ್​ಮ್ಯಾನ್, ಶಾಸಕ ಭರತ್ ರೆಡ್ಡಿ ಸರ್ಕಾರಿ ಗನ್​ಮ್ಯಾನ್​​ ಬಸವರಾಜ್,​​ ಶಾಸಕ ಜನಾರ್ದನ ರೆಡ್ಡಿಯ ನಾಲ್ವರು ಸರ್ಕಾರಿ ಗನ್​ಮ್ಯಾನ್ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಅಂಗರಕ್ಷ ಸೇರಿದಂತೆ ಒಟ್ಟು 9 ಗನ್​ಮ್ಯಾನ್​​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದ್ರೆ, ಈ ಪೈಕಿ ಇದೀಗ ಸತೀಶ್ ರೆಡ್ಡಿಯ ಅಂಗರಕ್ಷಕ ಗುರುಚರಣ್​​ ಸಿಂಗ್ ಬಂಧನವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಏಷ್ಯಾಕಪ್ ಟ್ರೋಫಿ ಎಲ್ಲಿ? ಪಾಕ್ ಪತ್ರಕರ್ತರ ಪ್ರಶ್ನೆಗೆ ತಬ್ಬಿಬ್ಬಾದ ಮೊಹ್ಸಿನ್ ನಖ್ವಿ – Kannada News | India’s Asia Cup 2025 Win: Still No Trophy! Mohsin Naqvi’s Silence

2025 ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಏಷ್ಯಾಕಪ್‌ (Asia Cup) ಫೈನಲ್​ನಲ್ಲಿ ಪಾಕಿಸ್ತಾನವನ್ನು ಮಣಿಸಿದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಭಾರತ ಏಷ್ಯಾಕಪ್ ಗೆದ್ದಿದ್ದರೂ ಇದುವರೆಗೆ ಟ್ರೋಫಿಯನ್ನು ಎತ್ತಿಹಿಡಿಯಲು ಸಾಧ್ಯವಾಗಿಲ್ಲ. ವಾಸ್ತವವಾಗಿ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಅವರ ಕೈಯಿಂದ ಟ್ರೋಫಿಯನ್ನು ಪಡೆಯಲು ಭಾರತ ತಂಡ ನಿರಾಕರಿಸಿತ್ತು. ಅಂದಿನಿಂದ, ಈ ಟ್ರೋಫಿ ಮೊಹ್ಸಿನ್ ನಖ್ವಿ ಅವರ ಬಳಿಯೇ ಇದೆ. ಈ ಘಟನೆ ನಡೆದು ಈಗ ಮೂರು ತಿಂಗಳುಗಳು ಕಳೆದಿವೆ. ಆದಾಗ್ಯೂ ಭಾರತ ತಂಡಕ್ಕೆ ಟ್ರೋಫಿ ಸಿಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ನಖ್ವಿ ಬಳಿಯಲ್ಲೇ ಇದೆ ಏಷ್ಯಾಕಪ್ ಟ್ರೋಫಿ

ಮೊಹ್ಸಿನ್ ನಖ್ವಿ ಎಸಿಸಿ ಅಧ್ಯಕ್ಷರಾಗಿ ಇರುವ ತನಕ ಭಾರತ ತಂಡದ ಕೈಗೆ ಏಷ್ಯಾಕಪ್ ಟ್ರೋಫಿ ಸಿಗುವ ಸಾಧ್ಯತೆಗಳಿಲ್ಲ. ಆರಂಭದಲ್ಲಿ ಏಷ್ಯಾಕಪ್ ಟ್ರೋಫಿಯನ್ನು ಎಸಿಸಿ ಪ್ರಧಾನ ಕಚೇರಿಯಲ್ಲಿ ಇರಿಸಲಾಗಿದೆ ಎಂದು ವರದಿಯಾಗಿತ್ತು. ಆ ಬಳಿಕ ಮೊಹ್ಸಿನ್ ನಖ್ವಿ ಅವರೇ ಈ ಟ್ರೋಫಿಯನ್ನು ಬೇರೆಯವರಿಗೆ ತಿಳಿಯದಂತೆ ಬಚ್ಚಿಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದುವರೆಗೂ ಏಷ್ಯಾಕಪ್‌ ಟ್ರೋಫಿ ಎಲ್ಲಿದೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಈ ಬಗ್ಗೆ ನಖ್ವಿ ಅವರನ್ನು ಪ್ರಶ್ನೆ ಮಾಡಿದಾಗಲೂ ಅವರು ಯಾವುದೇ ಸ್ಪಷ್ಟ ಉತ್ತರವನ್ನು ನೀಡಿಲ್ಲ.

ಟ್ರೋಫಿ ಎಲ್ಲಿದ್ದರೂ ಅದು ಸುರಕ್ಷಿತವಾಗಿದೆ

ಆದರೆ ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಖ್ವಿ ಅವರ ಬಳಿ ಏಷ್ಯಾಕಪ್ ಟ್ರೋಫಿಯ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿದೆ. ವಾಸ್ತವವಾಗಿ ಕರಾಚಿಯಲ್ಲಿ ನಡೆದ ಚಾನೆಲ್‌ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ನಖ್ವಿಗೆ ಈ ಪ್ರಶ್ನೆಯನ್ನು ಕೇಳಲಾಯಿತು. ಪತ್ರಕರ್ತರು ಮೊಹ್ಸಿನ್ ನಖ್ವಿ ಅವರ ಬಳಿ ಏಷ್ಯಾಕಪ್ ಟ್ರೋಫಿಯನ್ನು ಎಲ್ಲಿ ಇರಿಸಲಾಗಿದೆ? ಅದನ್ನು ಭಾರತ ತಂಡಕ್ಕೆ ನೀಡಲಾಗುತ್ತದೆಯೇ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಯಿಂದ ನಖ್ವಿ ಸ್ವಲ್ಪ ಗೊಂದಲಕ್ಕೊಳಗಾದರು. ಆದರೆ ಆ ನಂತರ ನೇರ ಉತ್ತರ ನೀಡಿದ ನಖ್ವಿ, ‘ಟ್ರೋಫಿ ಎಲ್ಲಿದ್ದರೂ ಅದು ಸುರಕ್ಷಿತವಾಗಿದೆ’ ಎಂದು ಉತ್ತರಿಸಿದ್ದಾರೆ. ಆದರೆ ಟ್ರೋಫಿಯನ್ನು ಭಾರತಕ್ಕೆ ಯಾವಾಗ ನೀಡಲಾಗುತ್ತದೆ ಎಂಬ ಪ್ರಶ್ನೆಗೆ ಮಾತ್ರ ಅವರ ಉತ್ತರ ಮೌನವಾಗಿತ್ತು.

ಇನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿಯೂ ಏಷ್ಯಾಕಪ್ ಟ್ರೋಫಿಯ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿದುಬಂದಿದೆ. ಈ ಸಭೆಯಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ, ಬಿಸಿಸಿಐ, ಏಷ್ಯಾಕಪ್ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ ಎಂತಲೂ ವರದಿಯಾಗಿದೆ. ಸುದ್ದಿಯ ಪ್ರಕಾರ, ಐಸಿಸಿ ಮಂಡಳಿ ಸಭೆಯಲ್ಲಿ ಏಷ್ಯಾಕಪ್ ಟ್ರೋಫಿಯ ಬಗ್ಗೆ ಯಾವುದೇ ಪ್ರಸ್ತಾಪ ನಡೆದಿಲ್ಲ. ಆದ್ದರಿಂದ, ಅದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆದಾಗ್ಯೂ ಈ ಟ್ರೋಫಿಯನ್ನು ಭಾರತ ತಂಡಕ್ಕೆ ಯಾವಾಗ ನೀಡಲಾಗುತ್ತದೆ ಎಂಬುದಕ್ಕೆ ಮೊಹ್ಸಿನ್ ನಖ್ವಿ ಮಾತ್ರ ಉತ್ತರಿಸಬಹುದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link