ಸಿದ್ದರಾಮಯ್ಯ ಹೆಸರಿನ ಸೇತುವೆ ಉದ್ಘಾಟನೆ: 6 ದಶಕಗಳ ಕನಸು ನನಸು, 30 ಕಿಮೀ ಸುತ್ತಾಟ ಈಗ 3 ಕಿಮೀಗೆ ಇಳಿಕೆ
ಚಿಕ್ಕಮಗಳೂರು, (ಏಪ್ರಿಲ್ 13): ಎನ್‌ಆರ್‌ಪುರ (NR Pura) ಪಟ್ಟಣದ ಹೊರಹೊಲಯದಲ್ಲಿ ನಿರ್ಮಾಣಗೊಂಡಿರುವ ತಮ್ಮದೇ ಹೆಸರಿನ ಸೇತುವೆಯನ್ನು (Siddaramaiah Bridge) ಸಿಎಂ ಸಿದ್ದರಾಮಯ್ಯ (Siddaramaiah) ಇಂದು (ಏಪ್ರಿಲ್ 13) ಉದ್ಘಾಟಿಸಿದ್ದಾರೆ. ಭದ್ರಾ ಹಿನ್ನೀರಿನ ಹಂದೂರು ಬಳಿ 38 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಅರ್ಧ ಕಿಲೋ ಮೀಟರ್ ಉದ್ದದ ಸೇತುವೆ ಇದಾಗಿದ್ದು, ಹತ್ತಾರು ಹಳ್ಳಿ ಗ್ರಾಮಸ್ಥರ 6 ದಶಕಗಳ ಕನಸು ನನಸಾಗಿದೆ. ಈ ಸೇತುವೆ ನಿರ್ಮಾಣದಿಂದ 10ಕ್ಕೂ ಹೆಚ್ಚು ಹಳ್ಳಿಗಳಿಗೆ ವರದಾನವಾಗಿದ್ದು, ಗ್ರಾಮಸ್ಥರು ಪಟ್ಟಣಕ್ಕೆ ಬರಲು ಮೊದಲು 30…