ಒಟ್ಟಿಗೆ ಓಡಾಡಿಕೊಂಡಿದ್ದವರು ಜತೆಯಲ್ಲೇ ಹೆಣವಾದರು; ಸ್ನೇಹಿತರ ಸಾವಿನ ಹತ್ತಾರು ಅನುಮಾನ
ಕೊಪ್ಪಳ, (ಏಪ್ರಿಲ್ 13): ಜಿಲ್ಲೆಯಲ್ಲಿ ಕುಕನೂರು ತಾಲೂಕಿನ ಮಸಬ ಹಂಚಿನಾಳ ಗ್ರಾಮದ ಹೊರವಲಯದಲ್ಲಿ ಪೈಪ್‌ಲೈನ್ ಕಾಮಗಾರಿಗಾಗಿ ಅಗೆದ ಗುಂಡಿಯಲ್ಲಿ ಇಬ್ಬರು ಯುವಕರ (Youths) ಮೃತದೇಹಗಳು ಪತ್ತೆಯಾಗಿದ್ದು, ಪ್ರಕರಣವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತರನ್ನು ರುದ್ರೇಶ್ ಗಂಗಾವತಿ ಮತ್ತು ರವಿ ರಾಮಣ್ಣ ತಟ್ಟಿ ಎಂದು ಗುರುತಿಸಲಾಗಿದ್ದು, ಪೊಲೀಸರು ಇದು ಕೊಲೆ ಎಂದು ಶಂಕಿಸಿ ತನಿಖೆ ನಡೆಸುತ್ತಿದ್ದಾರೆ. ಇವರಿಬ್ಬರು ಸ್ನೇಹಿತರಾಗಿದ್ದು (Friends), ಒಟ್ಟಿಗೆ ಕೆಲಸ ಮಾಡಿಕೊಂಡಿದ್ದರು. ಆದ್ರೆ, ಇಂದು (ಏಪ್ರಿಲ್ 13) ಏಕಾಏಕಿ ಶವವಾಗಿ ಪತ್ತೆಯಾಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. 23…