ಬೆಳಗ್ಗೆ ಉರಿ ಬಿಸಿಲು: ರಾತ್ರಿಯಾದ್ರೆ ಸಾಕು ಸೆಕೆ; ಬೆಂಗಳೂರಿಗರ ಸುಖ ನಿದ್ರೆಗೆ ಭಂಗ!
ಬೆಂಗಳೂರು, ಏಪ್ರಿಲ್ 12: ಈ ಬಾರಿ ಬೇಸಿಗೆಯ ಬಿರುಬಿಸಿಲು ಸಿಲಿಕಾನ್ ಸಿಟಿ ಜನರನ್ನ ಬಿಡದೆ ಕಾಡುತ್ತಿದೆ. ಮನೆಯಲ್ಲಿದ್ದರೆ ಬಿಸಿಲ ಧಗೆ (heatwave). ಇನ್ನು ಹೊರಗೆ ಬಂದರೆ ಸುಡೋ ಬಿಸಿಲು. ಹೀಗಾಗಿ ಜನರು ಕೂಲ್ ಡ್ರಿಂಕ್ಸ್, ಎಳನೀರು ಮೊರೆ ಹೋಗುತ್ತಿದ್ದಾರೆ. ಆದರೆ ರಾತ್ರಿ ನಿದ್ದೆ ಮಾಡುವುದಕ್ಕೆ ಸಂಕಷ್ಟ ಶುರುವಾಗಿದೆ. ಮತ್ತೊಂದೆಡೆ ಏರ್ ಕೂಲರ್ ಹಾಗೂ ಎಸಿಗೆ ಡಿಮ್ಯಾಂಡ್ ಕೂಡ ಶುರುವಾಗಿದೆ. ರಾತ್ರಿ ನಿದ್ದೆಗೆ ಬಿಸಿಲು ಅಡ್ಡಿ ಸದ್ಯ ಬೆಂಗಳೂರಿನಲ್ಲಿ 35 ರಿಂದ 36 ಡಿಗ್ರಿ ತಾಪಮಾನ ದಾಖಲಾಗುತ್ತಿದೆ. ಏಪ್ರಿಲ್…