Category Archives: Blog

Your blog category

ಕೋಗಿಲು ಲೇಔಟ್:​ ಒತ್ತುವರಿ ಮಾಡಿಕೊಂಡಿದ್ದವರಲ್ಲಿ ಮುಸ್ಲಿಂ ಕುಟುಂಗಳೇ ಹೆಚ್ಚು, ಜಿಬಿಎ ಕೈಸೇರಿತು ಅಂತಿಮ ವರದಿ – Kannada News | Kogilu Layout Encroachment Report Submitted: Final Findings Handed Over to GBA, Triggers Political Debate

ಬೆಂಗಳೂರು, ಜನವರಿ 3: ಕೋಗಿಲು ಲೇಔಟ್​​ನಲ್ಲಿ (Kogilu Layout) ಒತ್ತುವರಿ ತೆರವು ಸಂಬಂಧ ಮನೆ ಕಳೆದುಕೊಂಡವರಿಗೆ ಸರ್ಕಾರ ಫ್ಲಾಟ್ ನೀಡಲು ಮುಂದಾಗಿದೆ. ಈಗಾಗಲೇ ಲೇಔಟ್​​ಗೆ ತೆರಳಿ ಮನೆ ಕಳೆದುಕೊಂಡವರ ಮಾಹಿತಿ ಸಂಗ್ರಹಿಸಲಾಗಿದ್ದು, ಕಂದಾಯ ಇಲಾಖೆ ಮತ್ತು ಉತ್ತರ ಪಾಲಿಕೆ ಇಲಾಖೆ ಅಧಿಕಾರಿಗಳೂ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಅಂತಿಮ ವರದಿ ಸಲ್ಲಿಸಿದ್ದಾರೆ. ಕೋಗಿಲು ಲೇಔಟ್​ನ ಒಟ್ಟು ಮೂರು ಕಾಲೋನಿಗಳಲ್ಲಿ ಮನೆ ತೆರವಿಯಿಂದ ಎಷ್ಟು ಜನ ನಿರಾಶ್ರಿತರಾಗಿದ್ದಾರೆ ಅನ್ನೋ ಕುರಿತು ವರದಿ ನೀಡಲಾಗಿದೆ.

ಜಿಬಿಎಗೆ ಸಲ್ಲಿಕೆಯಾಗಿರುವ ವರದಿಯಂತೆ, ಫಕೀರ್ ಕಾಲೋನಿಯ 40 ಮನೆ ತೆರವು ಮಾಡಲಾಗಿದ್ದು, 56 ಮಂದಿ ಮನೆಯ ಮುಖ್ಯಸ್ಥರಿದ್ದು, 96 ವಯಸ್ಕರಿದ್ದಾರೆ. 140 ಮಕ್ಕಳಿದ್ದು, ಒಟ್ಟು 292 ಜನರಿದ್ದಾರೆ. ಇನ್ನು ನ್ಯೂ ಫಕೀರ್ ಲೇಔಟ್​ನಲ್ಲಿ ಒಟ್ಟು 45 ಮನೆ ತೆರವು ಮಾಡಲಾಗಿದ್ದು, 50 ಮಂದಿ ಮನೆಯ ಮುಖ್ಯಸ್ಥರಿದ್ದು, ವಯಸ್ಕರು 128, 116 ಮಕ್ಕಳಿದ್ದು, ಒಟ್ಟು 294 ಮಂದಿ ಇದ್ದಾರೆ. ಇನ್ನು ವಸೀಂ ಲೇಔಟ್​ನಲ್ಲಿ, 82 ಮನೆ ತೆರವು ಮಾಡಲಾಗಿದ್ದು, ಮನೆ ಮುಖ್ಯಸ್ಥರು 82 ಜನರಿದ್ದಾರೆ. 201 ವಯಸ್ಕರು, 394 ಮಕ್ಕಳಿದ್ದು, ಒಟ್ಟು 394 ಜನರಿದ್ದಾರೆ. ಹೀಗೆ ಮೂರು ಕಾಲೋನಿಯ ಒಟ್ಟು ಒಂದು ಸಾವಿರ ಏಳು ಮಂದಿ ನಿರಾಶ್ರಿತರಾಗಿದ್ದಾರೆ. ಈ ಮೂರು ಲೇಔಟ್​ಗಳಲ್ಲಿ 156 ಮುಸ್ಲಿಂ ಸಮುದಾಯದ ಕುಟುಂಬದವರಿದ್ದಾರೆ. 31 ಹಿಂದೂ ಕುಟುಂಬಗಳಿವೆ. ಒಂದು ಕುಟುಂಬ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದೆ.

ಸದ್ಯ ಈ ಕುರಿತು ಮತ್ತೊಂದು ಸುತ್ತಿನ ಪರಿಶೀಲನೆ ನಡೆಯಲಿದ್ದು, ಬಳಿಕ ಜಿಬಿಎ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ. ಈ ಮಧ್ಯೆ ಇಂದು ಕೋಗಿಲು ಲೇಔಟ್​ಗೆ ಬಿಜೆಪಿಯ ಸತ್ಯಶೋಧನಾ ಸಮಿತಿ ಭೇಟಿ ನೀಡುತ್ತಿದೆ.

ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಅರ್ಜಿ ಸಲ್ಲಿಸಿ, ಮನೆ ಸಿಗದೇ ರೋಸಿ ಹೋಗಿದ್ದವರು ಈಗಾಗಲೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅವರು ಶನಿವಾರ ಕೂಡಾ ರಾಜೀವ್ ಗಾಂಧಿ ವಸತಿ ಕಚೇರಿಗೆ ಬಂದಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏತನ್ಮಧ್ಯೆ, ಕನ್ನಡ ಸಂಘಟನೆಗಳು ಒತ್ತುವರಿದಾರರಿಗೆ ಮನೆ ಹಂಚಿಕೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿವೆ. ಈ ಸಂಬಂಧ ರಾಜ್ಯಪಾಲರನ್ನು ಭೇಟಿಯಾಗಿ ಮನವಿಯನ್ನೂ ಸಲ್ಲಿಸಿವೆ. ಸರ್ಕಾರ ನಿರ್ಧಾರ ಬದಲಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿವೆ. ಈ ಮಧ್ಯೆ ಶಾಸಕ ಎಸ್​.ಟಿ.ಸೋಮಶೇಖರ್ ಸಹ ವಸತಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಒಬ್ಬರಿಗೊಂದು ನ್ಯಾಯ, ಮತ್ತೊಬ್ಬರಿಗೊಂದ ನ್ಯಾಯ ಕೊಡಬೇಡಿ ಎಂದಿದ್ದಾರೆ.

ಇದನ್ನೂ ಓದಿ: ಕೋಗಿಲು ನಿರಾಶ್ರಿತರ ಮೇಲೆ ಬಹುದೊಡ್ಡ ಅನುಮಾನ: ಒತ್ತುವರಿದಾರರ ಜನ್ಮಜಾಲಾಡಲು ಮುಂದಾದ ಜಿಲ್ಲಾಡಳಿತ, ಪೊಲೀಸ್

ಇನ್ನು ಕೋಗಿಲು ಲೇಔಟ್ ಕಂದಾಯ ಸಚಿವ ಕೃಷ್ಣ ಭೈರೇಗೌಡ ಪ್ರತಿನಿಧಿಸುವ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಅಕ್ರಮ ಮನೆಗಳ ತೆರವು ಪ್ರಕರಣ ಇಷ್ಟೊಂದು ಗಂಭೀರ ಸ್ವರೂಪ ಪಡೆದಿದ್ದರೂ, ಕಂದಾಯ ಸಚಿವರು ಮಾತ್ರ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಹೀಗೆಂದು ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ‘ಸಚಿವ ಕೃಷ್ಣ ಭೈರೇಗೌಡ ಕಾಣೆಯಾಗಿದ್ದಾರೆ’ ಎಂದು ಪೋಸ್ಟರ್ ಅಭಿಯಾನ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದು ಬುದ್ಧನ ಉದಾತ್ತ ಚಿಂತನೆಗೆ ಸಾಕ್ಷಿ: ಪವಿತ್ರ ಪಿಪ್ರಹ್ವಾ ಅವಶೇಷಗಳ ಪ್ರದರ್ಶನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ – Kannada News | Buddha Piprahwa Relics Display: PM Modi Inaugurates Historic Exhibition in Delhi

ದೆಹಲಿ, ಜ.3: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ದೆಹಲಿಯ ರಾಯ್ ಪಿಥೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ‘ದಿ ಲೈಟ್ & ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್’ ಎಂಬ ಪಿಪ್ರಹ್ವಾ ರೆಲಿಕ್ಸ್‌ ಅಂತರರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಿದ್ದಾರೆ. 127 ವರ್ಷಗಳ ನಂತರ ಭಾರತಕ್ಕೆ ತರಲಾದ ಭಗವಾನ್ ಬುದ್ಧನ ಪಿಪ್ರಹ್ವಾ ರತ್ನದ ಅವಶೇಷಗಳ ಬಗ್ಗೆ ದೇಶಕ್ಕೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡಲಾಗಿದೆ. ಈ ಪ್ರದರ್ಶನದಲ್ಲಿ 1898 ರ ಉತ್ಖನನ ಮತ್ತು 1971-1975 ರ ಪಿಪ್ರಹ್ವಾ ಸ್ಥಳದಲ್ಲಿ ಉತ್ಖನನದ ಸಮಯದಲ್ಲಿ ಪತ್ತೆಯಾದ ಅವಶೇಷಗಳು, ರತ್ನದ ಅವಶೇಷಗಳನ್ನು ಇಡಲಾಗಿದೆ. ಪ್ರಧಾನಿ ಮೋದಿ ಅವರು ಈ ಬಗ್ಗೆ ತಮ್ಮ ಎಕ್ಸ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಪ್ರದರ್ಶನ ದೇಶದ ಐತಿಹಾಸಿಕ ಸಾಂಸ್ಕೃತಿಯ ಪರಂಪರೆಯನ್ನು ಪ್ರತಿನಿಧಿಸುತ್ತದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ. ಒಂದು ಶತಮಾನಕ್ಕೂ ಹೆಚ್ಚು ಕಾಲದ ನಂತರ ಪಿಪ್ರಾಹ್ವಾ ಅವಶೇಷಗಳನ್ನು ಮರಳಿ ತರಲಾಗಿದೆ. ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಸಂಗ್ರಹ ಮಾಡಲಾಗಿದೆ. ಈ ಪ್ರದರ್ಶನವು ಭಗವಾನ್ ಬುದ್ಧನ ಉದಾತ್ತ ಚಿಂತನೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ನಮ್ಮ ಯುವಜನರು ಮತ್ತು ನಮ್ಮ ಶ್ರೀಮಂತ ಸಂಸ್ಕೃತಿಯ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಾಢವಾಗಿಸುವ ಪ್ರಯತ್ನದಲ್ಲಿ ಒಂದಾಗಿದೆ. ಈ ಅವಶೇಷಗಳ ವಾಪಸಾತಿಗೆ ಶ್ರಮಿಸಿದ ಪ್ರತಿಯೊಬ್ಬರನ್ನು ನಾನು ಕೃತಜ್ಞತೆಯಿಂದ ಶ್ಲಾಘಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭದ್ರತಾ ಪಡೆ ನಡೆಸಿದ ಬಹುದೊಡ್ಡ ಕಾರ್ಯಚರಣೆ: ಗುಂಡಿನ ಚಕಮಕಿಯಲ್ಲಿ 14 ಮಾವೋವಾದಿಗಳು ಸಾವು

ಇಲ್ಲಿದೆ ನೋಡಿ ವಿಡಿಯೋ

ಈ ಕಾರ್ಯಕ್ರಮದಲ್ಲಿ ಇಡಲಾಗಿದ್ದ ಪ್ರದರ್ಶನಗಳು ದೇಶ ಮತ್ತು ವಿದೇಶಿದಿಂದ ಇತಿಹಾಸಕಾರರು, ಸಾಂಸ್ಕೃತಿಕ ಉತ್ಸಾಹಿಗಳು ಮತ್ತು ಬೌದ್ಧ ಅನುಯಾಯಿಗಳ ಗಮನ ಸೆಳೆದಿದ್ದು, ಭಾರತದ ಪ್ರಾಚೀನ ಪರಂಪರೆಯನ್ನು ಸಂರಕ್ಷಿಸುವ ಮತ್ತು ಆಚರಿಸುವ ಪ್ರಯತ್ನಗಳನ್ನು ಪ್ರದರ್ಶಿಸುತ್ತದೆ ಎಂದು ಹೇಳಲಾಗಿದೆ. ಇನ್ನು ಪ್ರಧಾನಿ ಮೋದಿ ಅವರು ಇದಕ್ಕೂ ಮೊದಲು ಸಾವಿತ್ರಿಬಾಯಿ ಫುಲೆ ಮತ್ತು ರಾಣಿ ವೇಲು ನಾಚಿಯಾರ್ ಅವರ ಜನ್ಮ ವಾರ್ಷಿಕೋತ್ಸವ ಪ್ರಯುಕ್ತ ಅವರಿಗೆ ಗೌರವ ಸಲ್ಲಿಸಿದ್ದಾರೆ. ಸೇವೆ ಮತ್ತು ಶಿಕ್ಷಣದ ಮೂಲಕ ಭಾರತೀಯ ಸಮಾಜವನ್ನು ಪರಿವರ್ತಿಸುವಲ್ಲಿ ಸಾವಿತ್ರಿಬಾಯಿ ಫುಲೆ ಪಾತ್ರ ದೊಡ್ಡದ್ದು ಎಂದು ಹೇಳಿದ್ದಾರೆ. ಈ ಬಗ್ಗೆ ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Zodiac Career Predictions: ನಿಮ್ಮ ರಾಶಿಗನುಗುಣವಾಗಿ ಜನವರಿ 4ರಿಂದ 10ರ ವರೆಗಿನ ಉದ್ಯೋಗ ಭವಿಷ್ಯ ತಿಳಿಯಿರಿ – Kannada News | Zodiac Career Predictions: Jan 4 10 Job Prospects for All 12 Signs

ಹೊಸ ವರ್ಷ ಆರಂಭವಾಗಿದೆ. ಜನವರಿ 4ರಿಂದ 10ರ ವರೆಗೆ 12 ರಾಶಿಗನುಗುಣವಾಗಿ ನಿಮ್ಮ ಉದ್ಯೋಗ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಅಸ್ಥಿರತೆಯ ಉದ್ಯೋಗದಿಂದ ಭಯ, ಭ್ರಮ ನಿರಸನ, ಎಲ್ಲವೂ ಆಗಲಿದೆ. ನಿಮಗೆ ನೀವೇ ಪ್ರೇರಣೆ ಕೊಟ್ಟುಕೊಂಡು ಎಲ್ಲವನ್ನೂ ಎದುರಿಸಬೇಕಾಗುವುದು. ಈ ವಾರ ಶುಭವಾಗಲಿ.

ಮೇಷ ರಾಶಿ:

ಈ ವಾರದ ಕೆಲವು ದಿನದಲ್ಲಿ ಉದ್ಯೋಗ ಬದಲಾವಣೆ ಯೋಚನೆ ಗಟ್ಟಿಯಾಗುತ್ತದೆ. ಸಂದರ್ಶನದ ಮೂಲಕ ಅವಕಾಶ ಬರುತ್ತದೆ. ಹೊಸ ಕೆಲಸ ಆರಂಭದಲ್ಲಿ ಒತ್ತಡದಾಯಕವಾದರೂ ಮುಂದೆ ಸ್ಥಾನಮಾನ ಹೆಚ್ಚುತ್ತದೆ. ಆತುರದ ನಿರ್ಧಾರದಿಂದ ತಪ್ಪು ಆಯ್ಕೆ ಸಂಭವ. ಸ್ವಂತ ಸಾಮರ್ಥ್ಯವನ್ನು ತೋರಿಸಿದರೆ ಹಿರಿಯರ ಗಮನ ಸೆಳೆಯುತ್ತೀರಿ. ಖಾಸಗಿ ಕ್ಷೇತ್ರ ಲಾಭದಾಯಕ. ಕೋಪದ ನಿಯಂತ್ರಣ ಅವಶ್ಯಕ.

ವೃಷಭ ರಾಶಿ:

ಮೊದಲ ವಾರದಲ್ಲಿ ಉದ್ಯೋಗದಲ್ಲಿ ಸ್ಥಿರತೆ ಹುಡುಕುವ ಮನಸ್ಸು ಹೆಚ್ಚಾಗುತ್ತದೆ. ಹೊಸ ಕೆಲಸ ಸಿಗುವ ಸಾಧ್ಯತೆ ನಿಧಾನವಾದರೂ ಭದ್ರತೆ ಇರಲಿದೆ. ವೇತನ ಹೆಚ್ಚಳ ಅಥವಾ ಜವಾಬ್ದಾರಿ ಬದಲಾವಣೆ ಯೋಗ. ಹಣಕಾಸಿನ ಲಾಭ ಮಧ್ಯಮ. ಕೌಶಲ್ಯ ವೃದ್ಧಿಗೆ ಸಮಯ ಕೊಟ್ಟರೆ ಮುಂದಿನ ಉದ್ಯೋಗ ಉತ್ತಮವಾಗುತ್ತದೆ. ಸಹನೆ ಇಲ್ಲದಿದ್ದರೆ ಅವಕಾಶ ಕೈ ತಪ್ಪಬಹುದು.

ಮಿಥುನ ರಾಶಿ:

ಚಟುವಟಿಕೆಯಿಂದ ಇರುವ ನಿಮಗೆ ಈ ವಾರ ಒಂದಕ್ಕಿಂತ ಹೆಚ್ಚು ಉದ್ಯೋಗ ಅವಕಾಶಗಳು ಎದುರಾಗುತ್ತವೆ. ಸಂವಹನ, ಬರವಣಿಗೆ, ಮಾರಾಟ, ಐಟಿ ಕ್ಷೇತ್ರದಲ್ಲಿ ಯಶಸ್ಸು. ಸರಿಯಾದ ಆಯ್ಕೆ ಮಾಡದಿದ್ದರೆ ಗೊಂದಲ ಹೆಚ್ಚಾಗುತ್ತದೆ. ಕೆಲಸದಲ್ಲಿ ಪ್ರಯಾಣ ಅಥವಾ ಸ್ಥಳಾಂತರ ಯೋಗ. ಒಪ್ಪಂದ ಮತ್ತು ಷರತ್ತುಗಳನ್ನು ಗಮನವಿಟ್ಟು ನೋಡಿಕೊಳ್ಳಿ. ಸ್ನೇಹಿತರ ಸಲಹೆ ಸಹಾಯಕ.

ಕರ್ಕಾಟಕ ರಾಶಿ:

ನಾಲ್ಕ‌ನೇ ರಾಶಿಯವರಿಗೆ ಕುಟುಂಬದ ಅಭಿಪ್ರಾಯವು ಉದ್ಯೋಗ ನಿರ್ಧಾರಕ್ಕೆ ಪ್ರಭಾವ ಬೀರುತ್ತದೆ. ಹೊಸ ಕೆಲಸ ಸಿಕ್ಕರೂ ಮನಸ್ಸಿಗೆ ಸಂಪೂರ್ಣ ತೃಪ್ತಿ ಸಿಗದೆ ಇರಬಹುದು. ಸರ್ಕಾರಿ, ಶಿಕ್ಷಣ ಅಥವಾ ಸಂಸ್ಥಾತ್ಮಕ ಕ್ಷೇತ್ರದಲ್ಲಿ ಅವಕಾಶ. ಈ ವಾರ ಕೆಲಸದ ಸ್ಥಳದಲ್ಲಿ ಭಾವನಾತ್ಮಕತೆ ಕಡಿಮೆ ಮಾಡಿದರೆ ಪ್ರಗತಿ ವೇಗವಾಗುತ್ತದೆ. ಸ್ಥಳ ಬದಲಾವಣೆ ಸಾಧ್ಯತೆ ದೃಢವಾಗಲಿದೆ.

ಸಿಂಹ ರಾಶಿ:

ಈ ವಾರ ನಿಮ್ಮ ಉದ್ಯೋಗದಲ್ಲಿ ಅಧಿಕಾರ ಮತ್ತು ಗೌರವ ಹೆಚ್ಚಾಗುತ್ತದೆ. ನಾಯಕತ್ವ ಗುಣದಿಂದ ಹೊಸ ಹುದ್ದೆ ಸಿಗುವ ಸೂಚನೆ. ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ಆದರೆ ಅಹಂಕಾರದಿಂದ ಸಹೋದ್ಯೋಗಿಗಳ ವಿರೋಧ ಉಂಟಾಗಬಹುದು. ಈ ವಾರ ಖಾಸಗಿ ಸಂಸ್ಥೆ, ಉದ್ಯೋಗದಲ್ಲಿ ವೇಗವಾಗಿ ಬೆಳವಣಿಗೆ ಕಾಣಿಸುವುದು. ಹಣಕಾಸು ಲಾಭ ಉತ್ತಮ.

ಕನ್ಯಾ ರಾಶಿ:

ಆರನೇ ರಾಶಿಯವರಿಗೆ ಈ ವಾರ ಶ್ರಮ, ಶಿಸ್ತು ಮತ್ತು ಕೌಶಲ್ಯಕ್ಕೆ ತಕ್ಕ ಉದ್ಯೋಗ ಸಿಗುತ್ತದೆ. ತಾಂತ್ರಿಕ, ಲೆಕ್ಕಪತ್ರ, ವಿಶ್ಲೇಷಣಾ ಕೆಲಸದಲ್ಲಿ ಯಶಸ್ಸು. ಸಣ್ಣ ಸಂಸ್ಥೆಯಿಂದ ದೊಡ್ಡ ಸಂಸ್ಥೆಗೆ ಹೋಗುವ ಯೋಗ. ಕೆಲಸದ ಒತ್ತಡದಿಂದ ಆರೋಗ್ಯ ಕಡೆ ನಿರ್ಲಕ್ಷ್ಯ ಬೇಡ. ಈ ವಾರ ಉದ್ಯೋಗ ಸ್ಥಿರತೆಯ ಜೊತೆಗೆ ಕಲಿಕೆಗೂ ಅವಕಾಶ ನೀಡುತ್ತದೆ. ಆತ್ಮವಿಶ್ವಾಸದಿಂದ ಮುಂದುವರಿಯಿರಿ.

ತುಲಾ ರಾಶಿ:

ಈ ವಾರ ನೀವು ಪಾಲುದಾರಿಕೆ, ಒಪ್ಪಂದ ಉದ್ಯೋಗಕ್ಕೆ ಸೇರಿಕೊಳ್ಳುವ ಸಾಧ್ಯತೆ. ಕಾನೂನು, ಕಲೆ, ವಿನ್ಯಾಸ ಕ್ಷೇತ್ರ ಅನುಕೂಲ. ನಿರ್ಧಾರ ತೆಗೆದುಕೊಳ್ಳುವಲ್ಲಿ ತಡವಾದರೆ ಅವಕಾಶ ತಪ್ಪಬಹುದು. ಕೆಲಸದ ಸ್ಥಳದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಹಣಕಾಸು ಲಾಭ ಮಧ್ಯಮ. ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ ಸಾಧಿಸಿದರೆ ವೃತ್ತಿ ಜೀವನ ಸುಗಮ.

ವೃಶ್ಚಿಕ ರಾಶಿ:

ಎಂಟನೇ ರಾಶಿಯವರಿಗೆ ಮೊದಲ ವಾರ ರಹಸ್ಯವಾಗಿ ಬಂದ ಉದ್ಯೋಗ ಅವಕಾಶ ನಿಮ್ಮ ಜೀವನದ ದಿಕ್ಕು ಬದಲಾಯಿಸುತ್ತದೆ. ಸ್ಪರ್ಧೆ, ರಾಜಕೀಯ ಹಚ್ಚಿದ್ದರೂ ಗೆಲುವು ನಿಮ್ಮದೇ. ಸಂಶೋಧನೆ, ಭದ್ರತೆ, ತಾಂತ್ರಿಕ ಕ್ಷೇತ್ರದಲ್ಲಿ ಯಶಸ್ಸು. ಕೆಲಸದ ಒತ್ತಡ ಹೆಚ್ಚಾಗಬಹುದು. ಧೈರ್ಯ ಮತ್ತು ಸಹನೆ ಅಗತ್ಯ. ಹಣಕಾಸು ಲಾಭ ಕ್ರಮೇಣ ಹೆಚ್ಚುತ್ತದೆ.

ಧನು ರಾಶಿ:

ದೂರದ ಊರು ಅಥವಾ ವಿದೇಶ ಸಂಪರ್ಕಿತ ಉದ್ಯೋಗ ಯೋಗ. ಶಿಕ್ಷಣ, ತರಬೇತಿ, ಸಲಹೆ ನೀಡುವ ಕ್ಷೇತ್ರದಲ್ಲಿ ಹೊಸ ಅವಕಾಶ. ಉನ್ನತ ವಿದ್ಯಾಭ್ಯಾಸದ ನಂತರ ಉತ್ತಮ ಕೆಲಸ ಸಿಗುತ್ತದೆ. ಅತಿಯಾದ ನಿರೀಕ್ಷೆ ನಿರಾಶೆ ತರಬಹುದು. ವೆಚ್ಚ ಹೆಚ್ಚಾಗುವ ಸಾಧ್ಯತೆ. ಈ ವಾರ ಉದ್ಯೋಗದಲ್ಲಿ ಗೌರವವಿದ್ದರೂ ಶ್ರಮ ಹೆಚ್ಚು. ಕಾಲು ಸಂಬಂಧಿತ ಆರೋಗ್ಯ ಗಮನಿಸಿ.

ಮಕರ ರಾಶಿ:

ಶನಿಯು ಅಧಿಪತಿಯಾದ ಈ ರಾಶಿಯವರಿಗೆ ನಿಧಾನವಾದರೂ ಖಚಿತ ಉದ್ಯೋಗ ಬದಲಾವಣೆ ಸಂಭವಿಸುತ್ತದೆ. ಆಡಳಿತ, ಸರ್ಕಾರಿ, ನಿರ್ವಹಣಾ ಕ್ಷೇತ್ರದಲ್ಲಿ ಅವಕಾಶ. ಹಿರಿಯರ ಶಿಫಾರಸು ಕೆಲಸಕ್ಕೆ ದಾರಿ ಮಾಡಿಕೊಡುತ್ತದೆ. ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಹಣಕಾಸು ಸ್ಥಿರತೆ ಹೆಚ್ಚಾಗುತ್ತದೆ. ಕೆಲಸದ ಹೊಣೆಗಾರಿಕೆ ಜಾಸ್ತಿ.

ಕುಂಭ ರಾಶಿ:

ಹೊಸ ವರ್ಷದ ಮೊದಲನೇ ವಾರ ನವೀನ ಆಲೋಚನೆ ಮತ್ತು ತಂತ್ರಜ್ಞಾನ ಆಧಾರಿತ ಉದ್ಯೋಗ ಸಿಗುತ್ತದೆ. ಸ್ಟಾರ್ಟ್‌ಅಪ್ ಅಥವಾ ಹೊಸ ಪ್ರಾಜೆಕ್ಟ್ ಮೂಲಕ ಕೆಲಸಕ್ಕೆ ಪ್ರವೇಶ ಪಡೆಯುವಿರಿ. ಸ್ಥಿರತೆ ಕಡಿಮೆ ಆದರೆ ಅನುಭವ ಹೆಚ್ಚು. ಸ್ವಾತಂತ್ರ್ಯ ಇದ್ದರೂ ಜವಾಬ್ದಾರಿ ಹೆಚ್ಚಾಗುತ್ತದೆ. ಸ್ನೇಹಿತರ ಸಂಪರ್ಕ ಲಾಭದಾಯಕ. ಹಣಕಾಸು ಏರಿಳಿತ. ನರ ಮತ್ತು ಕಣ್ಣುಗಳ ಆರೋಗ್ಯ ಗಮನಿಸಿ.

ಮೀನ ರಾಶಿ:

ಗುರುವಿನ ಆಧಿಪತ್ಯದ ಕೊನೆಯ ರಾಶಿಗೆ ಈ ವಾರ ಸೇವಾ, ಆರೋಗ್ಯ, ಸೃಜನಶೀಲ ಕ್ಷೇತ್ರದಲ್ಲಿ ಮುಂದಿನ ಉದ್ಯೋಗ ಅವಕಾಶ. ಭರವಸೆ ಮಾತುಗಳಿಗೆ ಮೋಸ ಹೋಗದಂತೆ ಎಚ್ಚರ. ದಾಖಲೆ ಮತ್ತು ನೇಮಕ ಪತ್ರ ಪರಿಶೀಲನೆ ಮಾಡಿಸಿಕೊಳ್ಳಿ. ಕೆಲಸದಲ್ಲಿ ತೃಪ್ತಿ ಇದ್ದರೂ ಹಣಕಾಸು ಮಧ್ಯಮ. ಧ್ಯಾನ ಮತ್ತು ಆತ್ಮವಿಶ್ವಾಸದಿಂದ ಮುಂದುವರಿದರೆ ಯಶಸ್ಸು. ನೀರಿನ ಸಂಪರ್ಕದ ಕೆಲಸ ಅಥವಾ ಪ್ರಯಾಣ ಸಾಧ್ಯ.

– ಲೋಹಿತ ಹೆಬ್ಬಾರ್ – 8762924271 (what’s app only)

Published On – 12:11 pm, Sat, 3 January 26

Source link

‘ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​’ ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು! – Kannada News | Bagalkots Heartfelt Goodbye: Students Cry for Beloved Transferring Teachers

ಬಾಗಲಕೋಟೆ, ಜನವರಿ 03: ಬಾಗಲಕೋಟೆ ಜಿಲ್ಲೆಯ ಬುದ್ನಿ ಪಿಎಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಅಚ್ಚುಮೆಚ್ಚಿನ ಶಿಕ್ಷಕರ ವರ್ಗಾವಣೆಯನ್ನು ಸಹಿಸಲಾಗದೆ ಶಾಲಾ ಮಕ್ಕಳು ಗೊಳೋ ಎಂದು ಕಣ್ಣೀರಿಟ್ಟಿದ್ದಾರೆ. ಶಿಕ್ಷಕರಾದ ವೆಂಕಟೇಶ್ ಪಾಟೀಲ್ ಹಾಗೂ ಬಿಜಿ ರಾಮನಗೌಡ ಪಾಟೀಲ್ ಅವರು ಬೇರೆಡೆಗೆ ವರ್ಗಾವಣೆಯಾಗಿದ್ದು, ಇದರ ಹಿನ್ನೆಲೆಯಲ್ಲಿ ಮಕ್ಕಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಆಳವಾದ ಬಾಂಧವ್ಯವನ್ನು ಇದು ಎತ್ತಿ ತೋರಿಸುತ್ತದೆ. ಮಕ್ಕಳಷ್ಟೇ ಅಲ್ಲದೆ, ಗ್ರಾಮಸ್ಥರು ಕೂಡ ವರ್ಗಾವಣೆಗೊಂಡ ಶಿಕ್ಷಕರನ್ನು ಗೌರವದಿಂದ ಬೀಳ್ಕೊಟ್ಟಿದ್ದು, ಶಿಕ್ಷಕರಿಗೆ ಪುಷ್ಪವೃಷ್ಟಿಗೈದು ಸನ್ಮಾನಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಡಿಕೆ ಶಿವಕುಮಾರ್ ನಿವಾಸಕ್ಕೆ ದಿಢೀರ್ ದೌಡಾಯಿಸಿದ ರೇಣುಕಾಚಾರ್ಯ: 20 ನಿಮಿಷ ಮಾತುತೆ ಬಳಿಕ ಹೇಳಿದ್ದೇನು ನೋಡಿ – Kannada News | BJP Leader MP Renukacharya Makes Sudden Visit to DK Shivakumar’s Residence, Sparks Political Buzz in Karnataka

ಬೆಂಗಳೂರು, ಜನವರಿ 3: ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಬೆಂಗಳೂರಿನಲ್ಲಿ ಶನಿವಾರ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ತೆರಳಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಬಳಿಕ ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಿದ ಅವರು, ಭೇಟಿ ವೇಳೆ ನಡೆದ ಮಾತುಕತೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್​ನಿಂದ ಬಾಂಗ್ಲಾದೇಶ್ ಆಟಗಾರನಿಗೆ ಗೇಟ್ ಪಾಸ್..!

Source link

‘ಸಾರಿ, ಸಾರಿ, ಸಾರಿ’; ಸುದೀಪ್ ಹಾಗೂ ಫ್ಯಾನ್ಸ್ ಬಳಿ ಆರ್ಯವರ್ಧನ್ ಗುರೂಜಿ ಬಹಿರಂಗ ಕ್ಷಮೆ – Kannada News | Aryavardhan Guruji Apologizes to Sudeep: His Statement Triggers Fans

‘ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು’ ಎಂದು ಫೇಮಸ್ ಆದವರು ಆರ್ಯವರ್ಧನ್ ಗುರೂಜಿ (Aryavardhan Guruji). ತಾವು ಸಂಖ್ಯಾ ಶಾಸ್ತ್ರಜ್ಞ ಎಂದು ಅವರು ಘೋಷಿಸಿಕೊಂಡಿದ್ದಾರೆ. ಅವರು ಅನೇಕ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ಮೊದಲು ಬಿಗ್ ಬಾಸ್​​ಗೂ ಬಂದಿದ್ದರು. ಈಗ ಅವರು ಸುದೀಪ್ ಬಳಿ ಕ್ಷಮೆ ಕೇಳಿದ್ದಾರೆ. ಸುದೀಪ್ ವಿರುದ್ಧ ಆಡಿದ ಮಾತಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈಗ ತಪ್ಪನ್ನು ತಿದ್ದುಕೊಳ್ಳಲು ಚಾನ್ಸ್ ಕೇಳಿದ್ದಾರೆ.

ಆರ್ಯವರ್ಧನ್ ಯಾವ ಕ್ಷಣದಲ್ಲಿ ಹೇಗಿರುತ್ತಾರೆ ಎಂದು ಊಹಿಸೋದು ನಿಜಕ್ಕೂ ಕಷ್ಟ. ಬಿಗ್ ಬಾಸ್​ ಅಲ್ಲಿ ಸ್ಪರ್ಧಿ ಆಗಿದ್ದಾಗ ಆ ಶೋ ವಿರುದ್ಧವೇ ಗಂಭೀರ ಆರೋಪ ಮಾಡಿದ್ದರು. ‘ಅನುಪಮಾ ಗೌಡ ಅವರನ್ನು ಉಳಿಸಲು ನೀವು ಪ್ರಯತ್ನಿಸುತ್ತಿದ್ದೀರಿ’ ಎಂದು ಸುದೀಪ್ ಎದುರೇ ಹೇಳಿದ್ದರು. ಇದರಿಂದ ಸಿಟ್ಟಾಗಿದ್ದ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು.

ಬಿಗ್ ಬಾಸ್​ನಿಂದ ಹೊರ ಬಂದ ಅವರು ಅನೇಕ ಬಾರಿ ಶೋ ವಿರುದ್ಧ ಹಾಗು ಸುದೀಪ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು ಇದೆ. ಇದಕ್ಕೆ ಸುದೀಪ್ ವೇದಿಕೆ ಮೇಲೆ ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದರು. ಈಗ ಆರ್ಯವರ್ಧನ್ ಮಾತು ಮತ್ತೂ ಕೆಳಹಂತಕ್ಕೆ ಹೋಗಿತ್ತು. ‘ದರ್ಶನ್ ಹೋದ್ಮೇಲೆ ಸುದೀಪ್ ಎಗರಾಡುತ್ತಿದ್ದಾರೆ’ ಎಂದು ಹೇಳಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಆರ್ಯವರ್ಧನ್​​ಗೆ ಸುದೀಪ್ ಅಭಿಮಾನಿಗಳಿಗೆ ಸ್ಟ್ರಾಂಗ್ ಆಗಿಯೇ ಎಚ್ಚರಿಕೆ ಬಂದಿತ್ತು. ದುನಿಯಾ ವಿಜಯ್ ಅವರ ವಾರ್ನಿಂಗ್ ವಿಡಿಯೋ ಎಡಿಟ್ ಮಾಡಿ ಹರಿಬಿಡಲಾಗಿತ್ತು.

ಫ್ಯಾನ್ಸ್ ಆಕ್ರೋಶದ ಬಳಿಕ ಆರ್ಯವರ್ಧನ್ ಕ್ಷಮೆ ಕೇಳಿದ್ದಾರೆ. ‘ಸುದೀಪ್ ಅವರಿಗೆ ನಮಸ್ಕಾರ. ಅವರ ಜೊತೆ ಕೆಲಸ ಮಾಡಿದ್ದೇನೆ. ಹೊಸ ವರ್ಷ ಅವರಿಗೆ ಹಾಗೂ ಅಭಿಮಾನಿಗಳಿಗೆ ಒಳ್ಳೆದು ಮಾಡಲಿ’ ಎಂದು ಮಾತು ಆರಂಭಿಸಿದ್ದಾರೆ.

ಇದನ್ನೂ ಓದಿ: ‘ಹೊರಗೆ ಹೋದ್ಮೇಲೆ ನಮಗೆ ಇಡ್ತಾರೆ’; ವೇದಿಕೆ ಮೇಲೆ ಆರ್ಯವರ್ಧನ್​​ಗೆ ಸುದೀಪ್ ತಿರುಗೇಟು

‘ಮಾತನಾಡುವ ಭರದಲ್ಲಿ ಏನೋ ಹೇಳಿದ್ದೇನೆ. ನೋವಾಗಿದ್ದರೆ ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಕ್ಷಮೆ ಕೇಳುತ್ತೇನೆ. ಅವರ ಮೇಲೆ ಅಪಾರ ನಂಬಿಕೆ ಇದೆ. ಸಾರಿ ಸಾರಿ ಸಾರಿ.. ದೇವರು ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಚೆನ್ನಾಗಿ ಇಟ್ಟಿರಲಿ. ಅವರ ಅಭಿಮಾನಿಗಳಿಗೂ ಒಳ್ಳೆಯದಾಗಲಿ’ ಎಂದು ಆರ್ಯವರ್ಧನ್ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್

ಸೀಸನ್ ಪೂರ್ಣಗೊಳ್ಳುವಾಗ ಬಿಗ್ ಬಾಸ್ ಮನೆ ಆನಂದ ಸಾಗರ ಆಗುತ್ತದೆ. ಆದರೆ, ಗಿಲ್ಲಿ ನಟ ಹಾಗೂ ಅಶ್ವಿನಿ ವಿಷಯದಲ್ಲಿ ಆ ರೀತಿ ಇಲ್ಲ. ಇಬ್ಬರೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಈ ವಿಷಯ ಸುದೀಪ್ ಅಸಮಾಧಾನಕ್ಕೆ ಕಾರಣ ಆಗಿದೆ. ವೀಕೆಂಡ್​​​ನಲ್ಲಿ ಈ ವಿಷಯ ಪ್ರಮುಖ ಚರ್ಚೆಯ ವಿಷಯದಂತೆ ತೋರುತ್ತಿದೆ. ಆ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭದ್ರತಾ ಪಡೆ ನಡೆಸಿದ ಬಹುದೊಡ್ಡ ಕಾರ್ಯಚರಣೆ: ಗುಂಡಿನ ಚಕಮಕಿಯಲ್ಲಿ 14 ಮಾವೋವಾದಿಗಳು ಸಾವು – Kannada News | Sukma Bijapur Encounter: 14 Maoists Neutralized by Security Forces in Chhattisgarh

ರಾಯ್‌ಪುರ, ಜ.3: ದಕ್ಷಿಣ ಛತ್ತೀಸ್‌ಗಢದ (Chhattisgarh Maoist) ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗೆ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 14 ಸಶಸ್ತ್ರ ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಇದು 2026 ರ ಮೊದಲ ಪ್ರಮುಖ ಮಾವೋವಾದಿ ವಿರೋಧಿ ಕಾರ್ಯಾಚರಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಜಾಪುರದ ಬಸಗುಡ-ಟಾರೆಮ್ ಅರಣ್ಯ ಪ್ರದೇಶ ಮತ್ತು ಸುಕ್ಮಾದ ಕೊಂಟಾ-ಕಿಸ್ತಾರಾಮ್ ಕಾಡುಗಳಲ್ಲಿ ಮಾವೋವಾದಿಗಳ ಓಡಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಗುಪ್ತಚರ ಮಾಹಿತಿಯ ನಂತರ ರಾಯ್‌ಪುರದ ದಕ್ಷಿಣಕ್ಕೆ 450 ಕಿ.ಮೀ ದೂರದಲ್ಲಿ ಈ ಎನ್‌ಕೌಂಟರ್‌ಗಳು ನಡೆದಿದೆ.

ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ)ನ ಪ್ರತ್ಯೇಕ ತಂಡಗಳು ಆಯಾ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಶನಿವಾರ (ಜ.3) ಬೆಳಿಗ್ಗೆಯಿಂದ ನಿರಂತರ ಗುಂಡಿನ ಚಕಮಕಿ ನಡೆದಿದೆ. ಇದುವರೆಗೆ, ಸುಕ್ಮಾ ಎನ್‌ಕೌಂಟರ್ ಸ್ಥಳದಿಂದ 12 ಮಾವೋವಾದಿಗಳ ಮೃತದೇಹಗಳು ಮತ್ತು ಬಿಜಾಪುರದಿಂದ ಎರಡು ಮೃತದೇಹಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಬಸ್ತಾರ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಟ್ಟಿಲಿಂಗಂ ಹೇಳಿದ್ದಾರೆ.ಎನ್‌ಕೌಂಟರ್ ಸ್ಥಳಗಳಿಂದ ಎಕೆ -47, ಐಎನ್‌ಎಸ್‌ಎಎಸ್ ಅಸಾಲ್ಟ್ ರೈಫಲ್, ಸೆಲ್ಫ್-ಲೋಡಿಂಗ್ ರೈಫಲ್ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ರಾಷ್ಟ್ರಪತಿ, ಪ್ರಧಾನ ಮಂತ್ರಿಯ AI ಡೀಪ್‌ಫೇಕ್ ವಿಡಿಯೋ ಸೃಷ್ಟಿಸಿದ ವ್ಯಕ್ತಿಯ ಬಂಧನ

ಎರಡೂ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ. ಈ ಕಾರ್ಯಚರಣೆಗಳಲ್ಲಿ ಭದ್ರತಾ ಪಡೆಗಳು ತೊಡಗಿಸಿಕೊಂಡಿರುವ ಕಾರಣ ಅವರ ಸುರಕ್ಷತೆಗಾಗಿ ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ ಎಂದು ಹೇಳಲಾಗಿದೆ. ಇನ್ನು ಈ ಗುಂಡಿನ ಚಕಮಕಿಯಲ್ಲಿ ಯಾವುದೇ ಭದ್ರತಾ ಸಿಬ್ಬಂದಿಗೆ ಗಾಯಗಳಾದ ಬಗ್ಗೆ ಯಾವುದೇ ವರದಿಯಾಗಿಲ್ಲ. ಬಸ್ತಾರ್ ವಿಭಾಗದಲ್ಲಿ ಸುಕ್ಮಾ ಮತ್ತು ಬಿಜಾಪುರಗಳು ಹೆಚ್ಚು ಮಾವೋವಾದಿ ಪೀಡಿತ ಜಿಲ್ಲೆಗಳಾಗಿವೆ. ಈ ಹಿಂದೆ ದಕ್ಷಿಣ ಛತ್ತೀಸ್‌ಗಢದಲ್ಲಿ ಎಡಪಂಥೀಯ ಉಗ್ರವಾದದ ಕೇಂದ್ರಬಿಂದುಗಳೆಂದು ಪರಿಗಣಿಸಲಾಗಿತ್ತು. ಈಗಾಗಲೇ 256 ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಮಾರ್ಚ್ 31, 2026 ರ ವೇಳೆಗೆ ಭಾರತ ಮಾವೋವಾದಿ ಹಿಂಸಾಚಾರದಿಂದ ಮುಕ್ತವಾಗಲಿದೆ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್ – Kannada News | Devdutt Padikkal Smashed Century in VHT 2026

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ ಹಝಾರೆ ಟೂರ್ನಿಯ ಗ್ರೂಪ್-ಎ ಪಂದ್ಯದಲ್ಲಿ ಕರ್ನಾಟಕ ಪರ ದೇವದತ್ ಪಡಿಕ್ಕಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ತ್ರಿಪುರ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ಆರಂಭಿಕನಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಮೂಲಕ ಕೇವಲ 49 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಹಾಫ್ ಸೆಂಚುರಿ ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ದೇವದತ್ ಪಡಿಕ್ಕಲ್ 105 ಎಸೆತಗಳಲ್ಲಿ ಸೆಂಚುರಿ ಪೂರ್ಣಗೊಳಿಸಿದರು.

ವಿಶೇಷ ಎಂದರೆ ಇದು ಈ ಬಾರಿಯ ವಿಜಯ ಹಝಾರೆ ಟೂರ್ನಿಯಲ್ಲಿ ದೇವದತ್ ಪಡಿಕ್ಕಲ್ ಅವರ 4ನೇ ಶತಕ. ಇದಕ್ಕೂ ಮುನ್ನ ಜಾರ್ಖಂಡ್ ವಿರುದ್ಧ 147 ರನ್ ಬಾರಿಸಿದ್ದರು. ಆ ಬಳಿಕ ಕೇರಳ ವಿರುದ್ಧ 124 ರನ್​ ಗಳಿಸಿದ್ದರು. ಇನ್ನು ಪುದುಚೇರಿ ವಿರುದ್ಧ 113 ರನ್​ಗಳ ಇನಿಂಗ್ಸ್ ಆಡಿದ್ದರು. ಇದೀಗ ತ್ರಿಪುರ ವಿರುದ್ಧ 120 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 108 ರನ್ ಬಾರಿಸಿದ್ದಾರೆ.

ದೇವದತ್ ಪಡಿಕ್ಕಲ್ ಅವರ ಈ ಶತಕದ ನೆರವಿನೊಂದಿಗೆ ಕರ್ನಾಟಕ ತಂಡವು 45 ಓವರ್​ಗಳ ಮುಕ್ತಾಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 269 ರನ್ ಕಲೆಹಾಕಿದೆ.

Source link