Category Archives: Blog

Your blog category

ಕಾಂಗ್ರೆಸ್‌ನಲ್ಲಿ ದಾವಣಗೆರೆ ಉಪಕದನ ಕಿಚ್ಚು: ಅಬ್ದುಲ್ ಜಬ್ಬಾರ್ ಬೆನ್ನಲ್ಲೇ ಆಪ್ತರಿಂದಲೂ ಸಾಮೂಹಿಕ ರಾಜೀನಾಮೆ!

ಕಾಂಗ್ರೆಸ್‌ನಲ್ಲಿ ದಾವಣಗೆರೆ ಉಪಕದನ ಕಿಚ್ಚು: ಅಬ್ದುಲ್ ಜಬ್ಬಾರ್ ಬೆನ್ನಲ್ಲೇ ಆಪ್ತರಿಂದಲೂ ಸಾಮೂಹಿಕ ರಾಜೀನಾಮೆ!

ದಾವಣಗೆರೆ/ಬೆಂಗಳೂರು, ಏಪ್ರಿಲ್ 13: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ (Davanagere By Election) ಟಿಕೆಟ್ ಹಂಚಿಕೆ ವಿಚಾರ ಈಗ ಕಾಂಗ್ರೆಸ್ (Congress) ಮನೆಯಲ್ಲಿ ಬೆಂಕಿ ಹೊತ್ತಿಸಿದೆ. ಅಲ್ಪಸಂಖ್ಯಾತ ನಾಯಕರ ನಡುವಿನ ಗುದ್ದಾಟ ಬೀದಿಗೆ ಬಂದಿದ್ದು, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ನೀಡಿದ್ದ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಂಗೀಕರಿಸಿದ್ದಾರೆ. ಇದರ ಬೆನ್ನಲ್ಲೇ ಘಟಕದ 10ಕ್ಕೂ ಹೆಚ್ಚು ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಪ್ರತಿಭಟಿಸಿದ್ದಾರೆ.

ರಾಜೀನಾಮೆ ಪರ್ವ ಮತ್ತು ಆಕ್ರೋಶ

ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕಾರವಾಗುತ್ತಿದ್ದಂತೆಯೇ ಅವರ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸಮಸ್ಯೆಯನ್ನು ಈ ಹಂತಕ್ಕೆ ತಲುಪಲು ಬಿಟ್ಟಿದ್ದೇಕೆ?’ ಎಂದು ಹೈಕಮಾಂಡ್ ವಿರುದ್ಧ ಕಿಡಿಕಾರಿದ್ದಾರೆ. ಮತ್ತೊಂದೆಡೆ, ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಡಿಕೆ ಶಿವಕುಮಾರ್ ಅವರು ಸಂಪೂರ್ಣ ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜನೆ ಮಾಡಿದ್ದು, ಶೀಘ್ರದಲ್ಲೇ ಹೊಸ ಘಟಕ ರಚನೆಯಾಗಲಿದೆ ಎಂದು ತಿಳಿಸಿದ್ದಾರೆ.

ಶಾಸಕ ರಿಜ್ವಾನ್ ಅರ್ಷದ್ ಸ್ಫೋಟಕ ಹೇಳಿಕೆ

ಸಚಿವ ಜಮೀರ್ ಅಹ್ಮದ್ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಶಾಸಕ ರಿಜ್ವಾನ್ ಅರ್ಷದ್, ‘ಸಿಎಂ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಒಬ್ಬ ಹಿರಿಯ ನಾಯಕರು, ಟಿಕೆಟ್ ಕೊಟ್ಟರೆ ಜಬ್ಬಾರ್ ಅವರಿಗೆ ಕೊಡಿ ಇಲ್ಲದಿದ್ದರೆ ಯಾರಿಗಾದರೂ ಕೊಡಿ ಎಂದು ಹೇಳಿದ್ದರು. ಇದಕ್ಕೆ ನನ್ನ ಬಳಿ ಸಾಕ್ಷಿಯಿದೆ,’ ಎಂದು ತಿವಿದಿದ್ದಾರೆ. ವ್ಯಕ್ತಿ ಪರವಾಗಿ ಟಿಕೆಟ್ ಕೇಳಿದ್ದರಿಂದಲೇ ಇಂದು ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕಾರ: ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ಡಿಕೆಶಿ ಬಿಗ್ ಶಾಕ್

ಕಾಂಗ್ರೆಸ್ ಆರೋಪಕ್ಕೆ ಎಸ್‌ಡಿಪಿಐ ತಿರುಗೇಟು

ಇದೇ ವೇಳೆ, ಚುನಾವಣೆ ಸೋಲಿನ ಭೀತಿಯಿಂದ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ ಎಂದು ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಪೇಟೆ ತಿರುಗೇಟು ನೀಡಿದ್ದಾರೆ. ‘ನಮಗೆ ಯಾರೂ ಫಂಡಿಂಗ್ ಮಾಡಿಲ್ಲ. ಕಾಂಗ್ರೆಸ್ ತನ್ನ ಆಂತರಿಕ ಕಿತ್ತಾಟವನ್ನು ಮುಚ್ಚಿ ಹಾಕಲು ಇಂತಹ ಆರೋಪಗಳನ್ನು ಮಾಡುತ್ತಿದೆ,’ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಬೆಂಬಲಕ್ಕೆ ನಿಲ್ಲುವವರು ಕಡಿಮೆಯಾಬಹುದು

ಮೇಷ ರಾಶಿ:

ಯಾವುದಾದರೂ ದುರ್ವ್ಯಸನಕ್ಕೆ ತುತ್ತಾಗಿ ಹಣವನ್ನೂ ಆರೋಗ್ಯವನ್ನೂ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಮಾಡದೇ ಉಳಿದ ಕೆಲಸ ಕಾರ್ಯಗಳತ್ತ ಗಮನಹರಿಸಿ. ವ್ಯಾಪರದಲ್ಲಿ ಲಾಭವಾಗಲಿದೆ. ವಿದ್ಯಾರ್ಥಿಗಳು ಪರಿಶ್ರಮದ ಓದಿಗೆ ಫಲಸಿಗಬಹುದು. ನಿಮ್ಮ ಅಧಿಕಾರದ ಆಸೆಗೆ ನೀರೆರೆಯಬಹುದು. ದೌರ್ಬಲ್ಯವನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ.ಯಾರನ್ನೂ ಸರಿಯಾಗಿ ಊಹಿಸಲಾರಿರಿ. ವಿಳಂಬವಾಗಿ ಬರುತ್ತದೆ ಎಂದುಕೊಂಡ ಹಣವು ಬೇಗ ನಿಮಗೆ ಬೇಗ ಸಿಗಬಹುದು.

ವೃಷಭ ರಾಶಿ:

ಇಂದು ನಿಮಗೆ ಹಣಕಾಸಿನ ಹರಿವು ಹೆಚ್ಚಾಗುವುದರ ಜೊತೆಗೆ ಆತಂಕವೂ ಇರುವುದು. ಅತಿಯಾದ ಖರ್ಚುಗಳಿಂದ ಚಿಂತೆಯಿದ್ದು, ಬಹುಕಾಲದಿಂದ ಸಿಕ್ಕಿಹಾಕಿಕೊಂಡಿದ್ದ ಹಣ ಇಂದು ಮರಳಿ ಸಿಕ್ಕಿ ಸಮಾಧಾನವಾಗುವುದು. ನಕಾರಾತ್ಮಕ ವಿಚಾರಗಳ ನಡೆಯೂ ನೀವು ಬಲವಾಗಿದ್ದರೆ ಅದು ವಿದ್ಯೆಯ ಕಾರಣದಿಂದ. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು. ಸಮಯದ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು.

ಮಿಥುನ ರಾಶಿ:

ಸೃಜನಾತ್ಮಕವಾಗಿ ಬದುಕುವ ಸ್ವಭಾವಕ್ಕೆ ಫಲಸಿಗಬಹುದು. ಉತ್ತಮವಾದ ಯೋಜನೆಗಳನ್ನು ರೂಪಿಸಿ. ಶೈಕ್ಷಣಿಕ ಕಾರ್ಯದಲ್ಲಿ ನೀವು ಅಡೆತಡೆಗಳನ್ನು ಎದುರಿಸಬಹುದು. ಭರವಸೆ ಮತ್ತು ಹತಾಶೆಯ ಭಾವನೆ ಇರುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ. ಅತಿಯಾಗಿ ಯಾವುದನ್ನು ಮಾಡಲು ಹೋಗುವುದು ಬೇಡ. ಹೊಸ ಕಲಿಕೆಗೆ ಉತ್ಸಾಹ ಇರಲಿದ್ದು ಶ್ರದ್ಧೆಯಿಂದ ಅದನ್ನು ಅಭ್ಯಾಸ ಮಾಡುವಿರಿ. ನಿಮ್ಮ ತಮಾಷೆಯು ಇಷ್ಟವಾಗದೇ ಇರಬಹುದು.

ಕರ್ಕಾಟಕ ರಾಶಿ:

ನಿಮ್ಮ ವೇತನವನ್ನು ಪ್ರಯತ್ನಪೂರ್ವಕವಾಗಿ ಯಾರಾದರೂ ತಿಳಿದುಕೊಳ್ಳಲು ಯತ್ನಿಸುವರು. ನಿಮ್ಮನ್ನು ನೀವು ಪರಿಚಯ ಮಾಡಿಕೊಳ್ಳುವಿರಿ. ಸಿಕ್ಕ ಸಮಯವನ್ನು ಧಾರ್ಮಿಕ ಆಚರಣೆಗೆ ಮೀಸಲಿಡುವಿರಿ. ಕಛೇರಿಯ ಕಾರ್ಯಗಳನ್ನು ಮುಂದುವರಿಸಲು ನಿಮಗೆ ಆಗದು. ಯಾವುದೋ ಗಾಢವಾದ ಆಲೋಚನೆಯಲ್ಲಿ ಮುಳುಗಿರುವಿರಿ. ಸರ್ಕಾರದ ಸೌಲಭ್ಯ ಪಡೆಯಲು ಚಿಂತನೆ. ಮಕ್ಕಳಿಂದ ನಿಮಗೆ ಸಂತೃಪ್ತಿಯು ಸಿಗಲಿದೆ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು. ಸರಳವಾದ ಕೆಲಸವನ್ನು ಮನಶ್ಚಾಂಚಲ್ಯದಿಂದ ಸಂಕೀರ್ಣ ಮಾಡಿಕೊಳ್ಳುವಿರಿ.

ಸಿಂಹ ರಾಶಿ:

ಹಿತಶತ್ರುಗಳಿಂದ ಬೇಕಾದ ಮಾಹಿತಿಯು ಸಿಗಲಿದೆ. ಸಂಗಾತಿಯ ಬಗ್ಗೆ ಪ್ರೀತಿಯನ್ನು ಅನುಭವಿಸುವಿರಿ. ನಿಮಗೆ ಇಂದು ಪ್ರಭಾವೀ ವ್ಯಕ್ತಿಗಳ ಭೇಟಿ ನಿಮ್ಮ ಮನೋಬಲವನ್ನು ಹೆಚ್ಚಿಸುತ್ತದೆ. ಕುಟುಂಬದೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಿ. ಚಿಂತೆಯಿಂದ ಆರೋಗ್ಯಕ್ಕೆ ತೊಂದರೆ. ನಿಮ್ಮ ಅಂತರಂಗವನ್ನು ವ್ಯಕ್ತಪಡಿಸಲು ನಿಮಗೆ ಸೂಕ್ತ ಸಮಯವು ಲಭ್ಯವಾಗದೇ ಇರಬಹುದು. ಅಪರಿಚಿತರ ಬಗ್ಗೆ ಜಾಗರೂಕತೆ ಇರಲಿ. ನಿಮ್ಮ ತಪ್ಪಿನ ನಿರ್ಧಾರದಿಂದ ಪಶ್ಚಾತ್ತಾಪ ಪಡಬೇಕಾಗುವುದು.

ಕನ್ಯಾ ರಾಶಿ:

ನೀವೇ ಇಂದು ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ನಿಮ್ಮ ದುಃಸ್ಥಿಯನ್ನು ಬಳಸಿಕೊಳ್ಳುವರು. ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ಪ್ರಣಯದ ಸಂಬಂಧಿಸಿದಂತೆ ಹೆಚ್ಚು ಬೇಡಿಕೆಗಳು ಬರಬಹುದು. ಪರರನ್ನೂ ನಿಮ್ಮಂತೆ ಕಾಣುವಿರಿ. ಅಧಿಕಾರ ಹಸಿವನ್ನು ನೀಗಿಸಿಕೊಳ್ಳಲು ಅಶಕ್ತರನ್ನು ಕಳಸಿಕೊಳ್ಳುವಿರಿ. ಪ್ರೀತಿಪಾತ್ರರ ಜೊತೆ ಇಂದು ಸಲುಗೆಯಿಂದ ಇರುವಿರಿ. ಮನಸ್ಸಿಗೆ ಇಷ್ಟವಾಗದ ಕಾರ್ಯವನ್ನು ನೀವು ಮಾಡಬೇಕಾದೀತು.

ತುಲಾ ರಾಶಿ:

ಇಂದು ಏನಾದರೂ ಅಪ್ರಯೋಜನ ಎಂದನಿಸಿದ್ದನ್ನು ಮಾಡುವ ಮೊದಲು ಅದರ ಪರಿಣಾಮದ ಬಗ್ಗೆಯೂ ಆಲೋಚಿಸಿ. ನಿದ್ರಾಹೀನತೆಯಿಂದ ಕಿರಿಕಿರಿ ಉಂಟಾಗುವುದು. ಎಲೆಕ್ಟ್ರಾನಿಕ್ ವಿಚಾರದಲ್ಲಿ ನೀವು ಚಾಣಾಕ್ಷರು. ಹಿರಿಯರ ಸಲಹೆಯನ್ನು ಪಡೆಯುವುದು ನಿಮಗೆ ಅಪಮಾನದಂತೆ ಕಂಡೀತು. ಉಗುರಿನಿಂದ ಆಗುವ ಕಾರ್ಯಕ್ಕೆ ಕೊಡಲಿ ಏಟು ತರುವುದು ಉಚಿತವಲ್ಲ. ವಿಷಯ, ಸಮಯ ಎಲ್ಲವನ್ನೂ ನೋಡಿ ವ್ಯವಹರಿಸಿ. ಅಶಕ್ತರ ಸೇವೆಯಲ್ಲಿ ತೊಡಗಿಕೊಳ್ಳುವಿರಿ.

ವೃಶ್ಚಿಕ ರಾಶಿ:

ಯಾರದ್ದಾದರೂ ಮೂಲಕ ತೊಂದರೆಯ ಮುನ್ಸೂಚನೆ ಇರುವುದು. ಸಂಗಾತಿಯನ್ನು ಹೊರಗೆ ಕರೆದುಕೊಂಡುಹೋಗುವ ಸಂದರ್ಭ ಬರುವುದು. ನಿಮ್ಮ ವೃತ್ತಿಯನ್ನು ಯಾರಾದರೂ ಅವಮಾನಿಸುವ ಸಾಧ್ಯತೆ ಇದೆ. ನಿಮ್ಮ ದುರಭ್ಯಾಸವು ಮಿತಿಮೀರಬಹುದು. ಕಛೇರಿಯಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ಕುಟುಂಬಕ್ಕೆ ಸಮಯವನ್ನು ಕೊಡುವಿರಿ. ಹಿಂದೆ ಕೊಟ್ಟ ಸಾಲವು ಮರಳಿ ಬರುವ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಬಗ್ಗೆ ಊಹಾಪೋಹಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ.

ಧನು ರಾಶಿ:

ಇಂದು ಹೆಚ್ಚು ಸಮಯವು ಸಿಗುವ ಕಾರಣ ಇನ್ನೊಬ್ಬರ ಕುರಿತು ಹರಟೆ ಮಾಡುವಿರಿ. ನಿಮಗೆ ಇಂದು ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರವು ಗಟ್ಟಿತನ ಕೊಡಲಿದೆ. ಸಾಹಿತ್ಯ ಕ್ಷೇತ್ರದ ಕಡೆಗೆ ನಿಮ್ಮ ಗಮನ ಹೆಚ್ಚಾಗುವುದು. ಹಳೆಯ ವಸ್ತುಗಳು ನಿಮಗೆ ಸಾಕೆನಿಸಬಹುದು. ಮಕ್ಕಳ ಭವಿಷ್ಯಕ್ಕೆ ಹಣವನ್ನು ಕೂಡಿಡಬೇಕಾಗುವುದು. ಸಾಲ ಕೊಟ್ಟವರು ನಿಮ್ಮನ್ನು ಇಂದು ಏನೂ ಕೇಳುವುದಿಲ್ಲ. ಮಕ್ಕಳು ನಿಮಗೆ ಬೇಕಾದ ಆರ್ಥಿಕ ನೆರವನ್ನು ಕೊಡುವರು.

ಮಕರ ರಾಶಿ:

ಇಂದು‌ ನೀವು ದೈಹಿಕ ಸೌಕರ್ಯವನ್ನು ಇಷ್ಟಪಡುವಿರಿ. ಯಾರಮೇಲಾದೂ ಶಂಕೆ ಇದ್ದರೆ, ಸುಮ್ಮನೇ ಕುಳಿತಿರಬೇಡಿ. ಹೊಸ ಯೋಜನೆಯನ್ನು ನಿರ್ವಹಿಸುವ ಅವಕಾಶವು ಸಿಗಲಿದೆ. ಎಲ್ಲ ಕಡೆಗಳಲ್ಲಿ ನೀವು ಆತ್ಮರಕ್ಷಣೆಯನ್ನು ಮಾಡಿಕೊಳ್ಳುವಿರಿ. ದಿನವನ್ನು ಜಾಗರೂಕತೆಯಿಂದ ಆಯೋಜಿಸಿ. ನಿಮ್ಮ ಬಗ್ಗೆ ಕುಟುಂಬದಲ್ಲಿ ಒಳ್ಳೆಯ ಅಭಿಪ್ರಾಯವು ಇರುವುದು. ವೈವಾಹಿಕ ಜೀವನದಲ್ಲಿ ಏರಿಳಿತವು ಆರಂಭವಾಗಬಹದು.

ಕುಂಭ ರಾಶಿ :

ನಿಮಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಬಗ್ಗೆ ಖುಷಿ ಇರಲಿದೆ. ಕೆಲವು ಸಂದರ್ಭದಲ್ಲಿ ನೀವು ತಾಳ್ಮೆಯನ್ನು ಕಳೆದುಕೊಳ್ಳಬಹುದು. ಹಣಕ್ಕಾಗಿ ತಾಯಿಯನ್ನು ಪೀಡಿಸುವುದು ಬೇಡ. ನಿಮ್ಮದೇ ಸರಿ ಇದ್ದರೂ ಅದನ್ನು ಪ್ರತಿಪಾದಿಸುವ ಕ್ರಮವು ವ್ಯತ್ಯಾಸವಾಗುವುದು. ಜೀವನದ ತೊಂದರೆಗಳನ್ನು ಸಂಗಾತಿಯ ಜೊತೆಗೆ ಹಂಚಿಕೊಳ್ಳಲು ಬಯಸುವಿರಿ. ಸಂಬಂಧಿಕರ ಜೊತೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಆತುರಾತುರವಾಗಿ ಯಾವುದನ್ನೂ ಮಾಡಲು ಹೋಗುವುದು ಬೇಡ.

ಮೀನ ರಾಶಿ:

ಅಲ್ಪ ಭೂಮಿಯ ಕೃಷಿಯಲ್ಲಿ ಒಳ್ಳೆಯ ಲಾಭವನ್ನು ಯೋಜನೆ ಹಾಕುವಿರಿ. ಪ್ರಭಾವಿ ವ್ಯಕ್ತಿಗಳ ಭೇಟಿಗೆ ಇಂದು ಅವಕಾಶ ಸಿಗದೇ ಹೋಗದೆ ಇರಬಹುದು. ಆರ್ಥಿಕ ವ್ಯವಹಾರದಲ್ಲಿ ದಾಖಲೆ ನಷ್ಟ. ಇಂದು ಬಂಧುಗಳ ಆಗಮನವಾದ ಕಾರಣ ಕುಟುಂಬ ಜೊತೆ ಹೆಚ್ವು ಕಾಲ ಕಳೆಯಿರಿ. ಇಂದು ನೀವಾಡುವ ಮಾತಿನ ಮೇಲೆ ನಿಮ್ಮ ಕಾರ್ಯಗಳು ನಿಂತಿರುವುದು. ಓಡಾಟಕ್ಕೆ ನಿಮಗೆ ವಾಹನದ ಅನುಕೂಲತೆಯೂ ಆಗುವುದು. ಸ್ವಂತ ಉದ್ಯಮದಲ್ಲಿ ನಿರೀಕ್ಷಿತ ಲಾಭವನ್ನು ಕಾಣುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ರೇವತೀ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಸಾಧ್ಯ, ಕರಣ : ಗರಜ, ಸೂರ್ಯೋದಯ – 06 – 13 am, ಸೂರ್ಯಾಸ್ತ – 06 – 36 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:46 – 09:19, ಯಮಗಂಡ ಕಾಲ 10:52 – 12:25, ಗುಳಿಕ ಕಾಲ 13:58 – 15:31

-ಲೋಹಿತ ಹೆಬ್ಬಾರ್ – 8762924271 (what’s app only)

Source link

MI vs RCB: ವಾಂಖೆಡೆಯಲ್ಲಿ ಮುಂಬೈಗೆ ಮಣ್ಣು ಮುಕ್ಕಿಸಿದ ಆರ್​ಸಿಬಿ

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 2026 ರ 20ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಿತ್ತು. ಈ ಲೀಗ್​ನಲ್ಲಿ ಉಭಯ ತಂಡಗಳಿಗೆ ಇದು ನಾಲ್ಕನೇ ಪಂದ್ಯವಾಗಿತ್ತು. ಅದರಂತೆ ತವರು ಮೈದಾನದಲ್ಲಿ ಆರ್​ಸಿಬಿಯನ್ನು ಮಣಿಸುವ ಇರಾದೆಯಲ್ಲಿದ್ದ ಮುಂಬೈಗೆ ಮತ್ತೆ ನಿರಾಸೆ ಎದುರಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ಮೂವರ ಅರ್ಧಶತಕದ ನೆರವಿನಿಂದ 241 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ 222 ರನ್ ಕಲೆಹಾಕಲಷ್ಟೇ ಶಕ್ತವಾಗಿ 19 ರನ್​ಗಳಿಂದ ಸೋಲೊಪ್ಪಿಕೊಂಡಿತು. ಇದು ಮುಂಬೈಗೆ ಸತತ ಎರಡನೇ ಸೋಲಾದರೆ, ಇತ್ತ ಕಳೆದ ಪಂದ್ಯದಲ್ಲಿ ಸೋಲುಕಂಡಿದ್ದ ಆರ್​ಸಿಬಿ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ.

Source link

MI vs RCB: ಒಂದೇ ಒಂದು ವಿಕೆಟ್ ಇಲ್ಲದೆ 5ನೇ ಪಂದ್ಯ ಮುಗಿಸಿದ ಜಸ್ಪ್ರೀತ್ ಬುಮ್ರಾ

ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಅತ್ಯಂತ ಅಪಾಯಕಾರಿ ಬೌಲರ್ ಯಾರಾದರೂ ಇದ್ದರೆ, ಅದು ಭಾರತದ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah). ನಿರಂತರವಾಗಿ ಬ್ಯಾಟ್ಸ್‌ಮನ್‌ಗಳನ್ನು ತೊಂದರೆಗೊಳಿಸುವುದು ಮತ್ತು ವಿಕೆಟ್ ಪಡೆಯುವುದು ಬುಮ್ರಾಗೆ ಅಭ್ಯಾಸವಾಗಿದೆ. ಬ್ಯಾಟ್ಸ್‌ಮನ್‌ಗಳು ಅವರ ವಿರುದ್ಧ ರನ್ ಗಳಿಸಲು ಹೆಣಗಾಡುತ್ತಾರೆ. ಆದರೆ ಈ ಬಾರಿಯ ಐಪಿಎಲ್​ನಲ್ಲಿ (IPL 2026) ಮಾತ್ರ ಬುಮ್ರಾಗೆ ವಿಕೆಟ್ ಬರ ಎದುರಾಗಿದೆ. ಈ ಐಪಿಎಲ್‌ನಲ್ಲಿ ಇದುವರೆಗೆ 4 ಪಂದ್ಯಗಳನ್ನಾಡಿರುವ ಬುಮ್ರಾಗೆ ಖಾತೆಯಲ್ಲಿ ಒಂದೇ ಒಂದು ವಿಕೆಟ್ ಇಲ್ಲ. ಇದನ್ನು ಕೇಳಿದವರಿಗೆ ಅಚ್ಚರಿಯಾಗಬಹುದು. ಆದರೆ ಇದು ನಿಜ. ಮುಂಬೈ ಇಂಡಿಯನ್ಸ್‌ನ ಅನುಭವಿ ವೇಗಿ ಬುಮ್ರಾ ಸತತ ಐದು ಪಂದ್ಯಗಳಲ್ಲಿ ಬರಿಗೈಯಲ್ಲಿ ಮರಳಿದ್ದಾರೆ.

ಆರ್​ಸಿಬಿ ವಿರುದ್ಧವೂ ವಿಕೆಟ್ ಇಲ್ಲ

ಐಪಿಎಲ್ 2026 ರ 20ನೇ ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ಈ ಪಂದ್ಯದಲ್ಲಿ ಬೆಂಗಳೂರು ತಂಡ ಮೊದಲು ಬ್ಯಾಟ್ ಮಾಡಿ 240 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಬೆಂಗಳೂರಿನ ಬ್ಯಾಟ್ಸ್‌ಮನ್‌ಗಳು ಪಂದ್ಯದಲ್ಲಿ ಬಹುತೇಕ ಎಲ್ಲಾ ಮುಂಬೈ ಬೌಲರ್‌ಗಳ ವಿರುದ್ಧ ಸರಾಗವಾಗಿ ರನ್ ಕಲೆಹಾಕಿದರು. ಆದಾಗ್ಯೂ, ಎಂದಿನಂತೆ ರನ್​ಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದ ಬುಮ್ರಾ ತಮ್ಮ ನಾಲ್ಕು ಓವರ್‌ಗಳಲ್ಲಿ 35 ರನ್‌ಗಳನ್ನು ಬಿಟ್ಟುಕೊಟ್ಟರು.

ಅತ್ಯಂತ ಅಚ್ಚರಿಯ ಅಂಶವೆಂದರೆ ಈ ಪಂದ್ಯದಲ್ಲಿಯೂ ಬುಮ್ರಾ ವಿಕೆಟ್ ಪಡೆಯಲಿಲ್ಲ ಎಂಬುದು. ಮೇಲೆ ಹೇಳಿದಂತೆ ಬುಮ್ರಾ ಅವರು ಈ ಆವೃತ್ತಿಯಲ್ಲಿ ವಿಕೆಟ್ ಪಡೆಯದೆ ಇರುವುದು ಇದೇ ಮೊದಲಲ್ಲ. ಮುಂಬೈನ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾದ ಜಸ್ಪ್ರೀತ್ ಬುಮ್ರಾ, ಐಪಿಎಲ್ 2026 ರ ನಾಲ್ಕು ಪಂದ್ಯಗಳಲ್ಲಿಯೂ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ.

IND vs SA: ಟಿ20 ವಿಶ್ವಕಪ್​ನಲ್ಲಿ ಹೊಸ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ

ಸತತ 5 ಪಂದ್ಯಗಳಿಂದ ವಿಕೆಟ್ ಇಲ್ಲ

ಈ ನಾಲ್ಕು ಪಂದ್ಯಗಳ ಜೊತೆಗೆ ಕಳೆದ ಆವೃತ್ತಿಯ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿಯೂ ಬುಮ್ರಾಗೆ ಒಂದೇ ಒಂದು ವಿಕೆಟ್ ಸಿಕ್ಕಿರಲಿಲ್ಲ. ಪಂಜಾಬ್ ವಿರುದ್ಧದ ಆ ಪಂದ್ಯದಲ್ಲಿ ಬುಮ್ರಾ ನಾಲ್ಕು ಓವರ್‌ಗಳಲ್ಲಿ 40 ರನ್‌ಗಳನ್ನು ಬಿಟ್ಟುಕೊಟ್ಟರು ಆದರೆ ವಿಕೆಟ್ ಪಡೆಯಲಿಲ್ಲ. ಇನ್ನು ಈ ಆವೃತ್ತಿಯಲ್ಲಿ, ಬುಮ್ರಾ ಕೋಲ್ಕತ್ತಾ, ದೆಹಲಿ, ರಾಜಸ್ಥಾನ ಮತ್ತು ಬೆಂಗಳೂರು ವಿರುದ್ಧ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸತತ ಐದು ಪಂದ್ಯಗಳಲ್ಲಿ, ಅವರು ಒಟ್ಟು 19 ಓವರ್‌ಗಳನ್ನು ಬೌಲಿಂಗ್ ಮಾಡಿ 163 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅಂದರೆ ಬುಮ್ರಾ 8.5 ರ ಎಕಾನಮಿ ದರದಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟಿದ್ದು, ಇದರಲ್ಲಿ ಒಂದೇ ಒಂದು ವಿಕೆಟ್ ಪಡೆದಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಕಸ ನಿರ್ವಹಣೆಗೆ ಬಂತು ಟೆಕ್ನಾಲಜಿ, ಏನಿದು ‘ನಮ್ಮ ಕಸ’ ತಂತ್ರಜ್ಞಾನ?

ಬೆಂಗಳೂರು, ಏಪ್ರಿಲ್​ 12: ಸಿಲಿಕಾನ್ ಸಿಟಿಯಲ್ಲಿ ಕಸ ನಿರ್ವಹಣೆ ಮಾಡುವುದೇ ದೊಡ್ಡ ಸವಾಲು. ಇದೀಗ ಬೆಂಗಳೂರು ಮತ್ತೆ ಗಾರ್ಬೇಜ್ ಸಿಟಿಯಾಗುತ್ತಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಏಕೆಂದರೆ ಕಳೆದ ಒಂದು ತಿಂಗಳಿಂದ ರಸ್ತೆಯಲ್ಲಿಯೇ ಬೃಹತ್ ಕಸದ ರಾಶಿ ಬಿದ್ದು ನಾರುತ್ತಿದ್ದರು ಸ್ಚಚ್ಛ ಮಾಡಿದೆ ಕಸ ನಿರ್ವಹಣೆಯಲ್ಲಿ GBA ಸಂಪೂರ್ಣ ವಿಫಲವಾಗಿದೆ. ಈ ಮಧ್ಯೆ ಬೆಂಗಳೂರಿನ ವ್ಯಕ್ತಿಯೊಬ್ಬರು ಇದಕ್ಕಾಗಿ ‘ನಮ್ಮ ಕಸ’ (NammaKasa) ಎಂಬ ವೇದಿಕೆಯನ್ನೇ ಸೃಷ್ಟಿಸಿದ್ದಾರೆ. ಆ ಮೂಲಕ ಕಸ ನಿರ್ವಹಣೆಗೂ ಟೆಕ್ನಾಲಜಿ ಬಂದಿದೆ.

ಕಸದ ರಾಶಿ ಕಂಡು ಮೂಗು ಮುಚ್ಚಿಕೊಂಡು ಹೋಗುವ ಬದಲು, ಆ ಕಸವನ್ನು ಹಾಕಿದವರನ್ನು ಮತ್ತು ಅದನ್ನು ಎತ್ತದವರನ್ನು ಹೊಣೆಗಾರರನ್ನಾಗಿ ಮಾಡಲು ‘ನಮ್ಮ ಕಸ’ ಎಂಬ ಹೊಸ ವೇದಿಕೆ ಸೃಷ್ಟಿಯಾಗಿದೆ. ಫಿನ್‌ಟೆಕ್ ಸಂಸ್ಥೆಯ ಪ್ರಾಡಕ್ಟ್ ಡಿಸೈನರ್ ಜ್ಯೋತಿಶ್ ವಿ.ಎಂ. ಅವರು ಕೇವಲ ಮೂರು ಸಾವಿರ ರೂ ವೆಚ್ಚದಲ್ಲಿ ಈ ಅದ್ಭುತ ಪ್ಲಾಟ್‌ಫಾರ್ಮ್ ಸಿದ್ಧಪಡಿಸಿದ್ದಾರೆ.

Indian Tech & Infra Tweet

‘ನಮ್ಮ ಕಸ’ ವೇದಿಕೆಯ ಕಾರ್ಯ ಹೇಗೆ?

ಇದು ಕೇವಲ ದೂರು ನೀಡುವ ಅಪ್ಲಿಕೇಶನ್ ಅಲ್ಲ, ಬದಲಿಗೆ ಇದೊಂದು ಅಕೌಂಟೆಬಿಲಿಟಿ ಲೀಡರ್‌ಬೋರ್ಡ್. ರಸ್ತೆಬದಿಯಲ್ಲಿ ಕಸ ಕಂಡರೆ ಅದರ ಫೋಟೋ ತೆಗೆದು ಲೊಕೇಶನ್ ಸಮೇತ ಅಪ್‌ಲೋಡ್ ಮಾಡಬಹುದು. ಇಲ್ಲಿ ದೂರು ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ.

ಇದನ್ನೂ ಓದಿ: ಕಸದ ರಾಶಿಗೆ ರಸ್ತೆ, ಫುಟ್​ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ

ಈ ಪ್ಲಾಟ್‌ಫಾರ್ಮ್‌ನಲ್ಲಿ ನಗರದ 243 ವಾರ್ಡ್‌ಗಳು, 28 ಶಾಸಕರು ಮತ್ತು 4 ಸಂಸದರ ಪಟ್ಟಿ ಇದೆ. ಯಾವ ಕ್ಷೇತ್ರದಲ್ಲಿ ಅತಿ ಹೆಚ್ಚು ಕಸದ ದೂರುಗಳಿವೆಯೋ ಆ ನಾಯಕರು ಲೀಡರ್‌ಬೋರ್ಡ್​​ ಪಟ್ಟಿಯಲ್ಲಿ ಕೆಳಗೆ  ಹೋಗುತ್ತಾರೆ. ಇನ್ನು ದೂರು ದಾಖಲಾದ ಕೂಡಲೇ ಸಂಬಂಧಪಟ್ಟ ಶಾಸಕರ ಎಕ್ಸ್​​ ಖಾತೆಗೆ ಟ್ಯಾಗ್ ಮಾಡುವ ಮೂಲಕ ಎಚ್ಚರಿಸುವ ವ್ಯವಸ್ಥೆ ಕೂಡ ಇದೆ.

230ಕ್ಕೂ ಹೆಚ್ಚು ದೂರುಗಳು

ನಮ್ಮ ಕಸ ವೇದಿಕೆ ಸಿದ್ಧಪಡಿಸಲು ಜಾಸ್ತಿ ಹಣ ಖರ್ಚು ಮಾಡಲಾಗಿಲ್ಲ. ಮುಕ್ತವಾಗಿರುವ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೆಲವೇ ದಿನಗಳಲ್ಲಿ ಜ್ಯೋತಿಶ್ ಇದನ್ನು ರೂಪಿಸಿದ್ದಾರೆ. ಏಪ್ರಿಲ್ 4 ರಂದು ಪ್ರಾರಂಭವಾಗಿರುವ ಈ ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ 230ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಮಹದೇವಪುರ ಭಾಗದಲ್ಲಿ ಕಸದ ರಾಶಿ ಅತಿ ಹೆಚ್ಚಾಗಿರುವುದು ಸದ್ಯಕ್ಕೆ ಕಂಡುಬಂದಿದೆ.

ಇದನ್ನೂ ಓದಿ: Video: ಬೀದಿ ಬದಿ ಕಸ ಹಾಕುವವರಿಗೆ ವಿಶಿಷ್ಟ ಬ್ಯಾನರ್ ಹಾಕಿ ವಾರ್ನಿಂಗ್ ಕೊಟ್ಟ ವ್ಯಕ್ತಿ

ಇನ್ನು ಸರ್ಕಾರದ ಜೊತೆಗೆ ಪಾಲುದಾರಿಕೆಯಲ್ಲಿ ಕೆಲಸ ಮಾಡುವ ಉದ್ದೇಶ ಹೊಂದಿರು ಜ್ಯೋತಿಶ್, ಬೆಂಗಳೂರಿನಿಂದ ಆರಂಭವಾಗಿರುವ ಈ ಕಸದ ಕ್ರಾಂತಿಯನ್ನು ದೇಶಾದ್ಯಂತ ವಿಸ್ತರಿಸುವ ಗುರಿ ಹೊಂದಿದ್ದಾರೆ. ಹೀಗಾಗಿ ನಾಗರಿಕರು ಮತ್ತು ಸರ್ಕಾರ ಕೈಜೋಡಿಸಿದರೆ ಮಾತ್ರ ಬದಲಾವಣೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮತ್ತೊಬ್ಬನ ಜತೆ ಲವ್ವಿಡವ್ವಿ: ಪ್ರೀತಿಸಿ ಮದ್ವೆಯಾಗಿದ್ದ ಗಂಡನ ಕತೆ ಮುಗಿಸಿ ನೌಟಂಕಿ

ಬೆಳಗಾವಿ, (ಏಪ್ರಿಲ್ 12): ಅವರಿಬ್ರು ಪ್ರೀತಿಸಿ ಮದುವೆ ಆಗಿದ್ರು. 14 ವರ್ಷದ ಅವರ ಸುಖ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಹೀಗಿರುವಾಗ್ಲೇ ಆ ಸಂಸಾರಕ್ಕೆ ಅದೊಬ್ಬ ಎಂಟ್ರಿ ಆಗಿದ್ದ. ನೋಡ ನೋಡ್ತಿದ್ದಂತೆ ಆ ಸಂಸಾರವನ್ನೇ ಆ ಪಾಪಿ ಛಿದ್ರ ಮಾಡಿದ್ದಾನೆ. ಪ್ರಿಯಕರನಿಗಾಗಿ ಗಂಡನನ್ನೇ ಕೊಲ್ಲಿಸಿದ ಪಾಪಿ ಪತ್ನಿ ಅರೆಸ್ಟ್‌ ಆಗಿದ್ದೇ ರೋಚಕವಾಗಿದೆ. ಹೌದು… ಬೆಳಗಾವಿಯಲ್ಲಿ (Belagavi) ಪತ್ನಿಯಿಂದಲೇ ಪತಿ ಕೊಲೆ ಆಗಿದ್ದು, ನೌಟಂಕಿ ಆಟ ಆಡ್ತಿದ್ದ ಈ ಡೌವ್‌ರಾಣಿ ಪ್ರಿಯಕರನ ಜತೆ ಹಿಂಡಲಗಾ ಜೈಲುಪಾಲಾಗಿದ್ದಾಳೆ.

ಅವಿನಾಶ್- ಲಕ್ಷ್ಮೀ ಅನ್ನೋ ಈ ಜೋಡಿ 14 ವರ್ಷಗಳ ಹಿಂದೆಯೇ ಪ್ರೀತಿಸಿ ಮದುವೆ ಆಗಿದ್ರು. ಇಬ್ಬರ ಜಾತಿ ಬೇರೆಯಾದ್ರೂ ಇವರ ಪ್ರೀತಿಗೆ ಅದು ಅಡ್ಡಿ ಆಗಿರಲಿಲ್ಲ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬೆಳಗಾವಿಯ ಅನಗೋಳದಲ್ಲಿ ಆಯುರ್ವೇದಿಕ್ ಕ್ಲಿನಿಕ್ ಇಟ್ಟುಕೊಂಡು ಅವಿನಾಶ್ ಬದುಕು ಕಟ್ಟಿಕೊಂಡಿದ್ರು. ಆದ್ರೆ ಏಪ್ರಿಲ್‌ 6 ರಂದು ಇದೇ ಕ್ಲಿನಿಕ್‌ನಲ್ಲೇ ಅವಿನಾಶ್ ಶವವಾಗಿದ್ರು. ನನ್ನ ಗಂಡನಿಗೆ ಶುಗರ್ ಹೆಚ್ಚಾಗಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ತಲೆಗೆ ಪೆಟ್ಟಾಗಿ ಗಂಡ ಮೃತಪಟ್ಟಿದ್ದಾನೆ ಅಂತಾ ಕತೆ ಹೇಳಿದ ಲಕ್ಷ್ಮೀ, ಗಂಡನ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ಳು. ಆದ್ರೆ ಪೋಸ್ಟ್‌ ಮಾರ್ಟಂ ರಿಪೋರ್ಟ್‌ ಬರ್ತಿದ್ದಂತೆ ಈ ಸಾವಿನ ಅಸಲಿಯತ್ತು ಬಯಲಾಗಿದೆ.

ಇದನ್ನೂ ಓದಿ: ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜೊತೆ ಸೇರಿ ಪತಿಗೇ ಚಟ್ಟ ಕಟ್ಟಿದ ಪತ್ನಿ; ಕೊಲೆ ಬಳಿಕ ಅಮಾಯಕಳಂತೆ ನಾಟಕ

Source link

ಟರ್ಕಿ ದೇಶದಿಂದ 9,300 ಕೋಟಿ ರೂ, ಅತ್ಯಂತ ಸುಂದರ ಮಹಿಳೆ ಬೇಕು: ಉಗಾಂಡ ಸೇನಾ ಮುಖ್ಯಸ್ಥನ ವಿಚಿತ್ರ ಡಿಮ್ಯಾಂಡ್

ನವದೆಹಲಿ, ಏಪ್ರಿಲ್ 12: ಆಫ್ರಿಕಾದ ಉಗಾಂಡ ಮಿಲಿಟರಿ ಮುಖ್ಯಸ್ಥ ಮುಹೂಝಿ ಕೈನೇರುಗಬ (Muhoozi Kainerugaba) ಅವರು ಟರ್ಕಿ ದೇಶದಿಂದ 1 ಬಿಲಿಯನ್ ಡಾಲರ್ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಂದರೆ, 9,300 ಕೋಟಿ ರೂ ಅನ್ನು ಉಗಾಂಡಕ್ಕೆ ಟರ್ಕಿ ಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ, ಟರ್ಕಿ ದೇಶದ ಅತ್ಯಂತ ಸುಂದರ ಮಹಿಳೆಯನ್ನು ತನಗೆ ಮದುವೆಯಾಗಲು ಒಪ್ಪಿಸಬೇಕು ಎಂದೂ ಕೇಳಿದ್ದಾರೆ.

ಟರ್ಕಿಯಿಂದ ಮುಹೂಝಿ ಹಣ ಕೇಳುತ್ತಿರುವುದು ಯಾಕೆ?

ಟರ್ಕಿ ದೇಶವು ಸೊಮಾಲಿಯಾದಲ್ಲಿ ಸಮುದ್ರ ಬಂದರುಗಳು, ವಿಮಾನ ನಿಲ್ದಾಣಗಳು, ಮೂಲಸೌಕರ್ಯ ಯೋಜನೆಗಳ ನಿರ್ಮಾಣ ಇತ್ಯಾದಿ ಸಾಕಷ್ಟು ವ್ಯವಹಾರಗಳನ್ನು ನಡೆಸುತ್ತಿದೆ. ಆದರೆ, ಸೊಮಾಲಿಯಾದಲ್ಲಿ ಎರಡು ದಶಕಗಳಿಂದ ಉಗಾಂಡದಿಂದ ಭದ್ರತೆ ಒದಗಿಸಲಾಗುತ್ತಿದೆ. ಅಲ್ ಖೈದಾ ಸಂಬಂಧ ಇರುವ ಅಲ್ ಶಬಾದ್ ಉಗ್ರ ಸಂಘಟನೆಯ ಉಪಟಳವನ್ನು ನಿಯಂತ್ರಿಸಲು ಉಗಾಂಡ ನೆರವಾಗಿದೆ. ಪ್ರಾದೇಶಿಕ ಭದ್ರತೆಗೆ ಉಗಾಂಡ ಮಾಡಿರುವ ಪ್ರಯತ್ನಕ್ಕೆ ಟರ್ಕಿ ಋಣಿಯಾಗಿರಬೇಕು. ಉಗಾಂಡಕ್ಕೆ 1 ಬಿಲಿಯನ್ ಡಾಲರ್ ಕೊಡಬೇಕು ಎಂದು ಟರ್ಕಿಯನ್ನು ಕೈನೇರುಗಬ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಗೆ ಅಮೆರಿಕದಿಂದಲೂ ತಡೆ; ಸಂಧಾನಕ್ಕಾಗಿ ರಷ್ಯಾ ಕೂಡ ಸಿದ್ಧ

‘ಟರ್ಕಿಗೆ ಇದು ಸಿಂಪಲ್ ಡೀಲ್. ನೀವು ನಮಗೆ ಹಣ ಕೊಡಿ. ಇಲ್ಲದಿದ್ದರೆ ಅವರ ರಾಯಭಾರ ಕಚೇರಿಯನ್ನು ಮುಚ್ಚುತ್ತೇನೆ. ಅವರು ಬೇಕಾದಲ್ಲಿ ಟರ್ಕಿಯಲ್ಲಿರುವ ನಮ್ಮ ರಾಯಭಾರ ಕಚೇರಿಯನ್ನು ಮುಚ್ಚಲಿ, ಪರವಾಗಿಲ್ಲ’ ಎಂದು ಇವರು ಎಕ್ಸ್​ನಲ್ಲಿ ಹಾಕಿರುವ ಪೋಸ್ಟ್​ನಲ್ಲಿ ತಿಳಿಸಿದ್ದಾರೆ. ಮುಹೂಝಿ ಕೈನೇರುಗಬ ಅವರು ಉಗಾಂಡದ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದಾರೆ. ಉಗಾಂಡ ಅಧ್ಯಕ್ಷ ಯೊವೇರಿ ಮುಸೆವೇನಿ ಅವರ ಮಗನೂ ಆಗಿರುವ ಅವರು ಉಗಾಂಡದ ಭವಿಷ್ಯದ ಅಧ್ಯಕ್ಷ ಎಂದೂ ಗುರುತಾಗಿದ್ದಾರೆ.

ಟರ್ಕಿಯ ಸುಂದರ ಮಹಿಳೆಯನ್ನು ವರಿಸುತ್ತೇನೆ ಎನ್ನುವ ಮುಹೂಝಿ

ಟರ್ಕಿ ದೇಶದ ಅತ್ಯಂತ ಸುಂದರ ಮಹಿಳೆಯನ್ನು ತನಗೆ ಒಪ್ಪಿಸಬೇಕು. ತಾನು ಆಕೆಯನ್ನು ಮದುವೆಯಾಗುತ್ತೇನೆ ಎಂದೂ ಉಗಾಂಡದ ಮಿಲಿಟರಿ ಮುಖ್ಯಸ್ಥ ಆಗ್ರಹಿಸಿದ್ದಾರೆ. ಇದೇ ವ್ಯಕ್ತಿ ಹಿಂದೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಮದುವೆಯಾಗುವುದಾಗಿ ಹೇಳಿದ್ದರು.

ಇದನ್ನೂ ಓದಿ: ಪಾಕಿಸ್ತಾನದ ಮಧ್ಯಸ್ತಿಕೆ ಇಲ್ಲದೇ ಇದ್ದಿದ್ದರೆ ಇಸ್ರೇಲ್​ಗೆ ತಕ್ಕ ಶಾಸ್ತಿಯಾಗುತ್ತಿತ್ತು: ಟರ್ಕಿ ಅಧ್ಯಕ್ಷ ಎರ್ಡೋಗನ್ ಗುಡುಗು

ಇಸ್ರೇಲ್​ಗೆ ಬೆಂಬಲ ಕೊಡುತ್ತೇನೆಂದ ಮುಹೂಝಿ

ಇರಾನ್ ಜೊತೆ ಯುದ್ಧದಲ್ಲಿರುವ ಇಸ್ರೇಲ್​ಗೆ ನೆರವು ಕೊಡಲು ಒಂದು ಲಕ್ಷ ಸೈನಿಕರನ್ನು ಉಗಾಂಡದಿಂದ ಕಳುಹಿಸಿಕೊಡುವುದಾಗಿ ಮುಹೂಜಿ ಕೈನೆರುಗಬ ಹೇಳಿದ್ದಾರೆ. ನಮ್ಮ ದೇವರಾದ ಯೇಸು ಕ್ರಿಸ್ತನ ಪವಿತ್ರ ಜಾಗವನ್ನು ರಕ್ಷಿಸಲು ನನ್ನ ಅಣತಿ ಮೇರೆಗೆ ಉಗಾಂಡ ಸೈನಿಕರು ಇಸ್ರೇಲ್​ಗೆ ಹೋಗಲು ಸಿದ್ಧ ಎಂದಿದ್ದಾರೆ.

ಉಗಾಂಡದ ಮೇಲೆ ಟರ್ಕಿ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿರುವ ಮುಹೂಝಿ, ‘ನಿಮ್ಮ ಬೆನ್ನಿಗೆ ಸದಾ ಚೂರಿ ಹಾಕುತ್ತಲೇ ಇರುವ ಸ್ನೇಹಿತ ಯಾವನಿಗೆ ಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೈ ಎಲೆಕ್ಷನ್: ಬಾಗಲ’ಕೋಟೆ’ ಯಾರಿಗೆ? ಹೇಗಿದೆ ಕಾಂಗ್ರೆಸ್-ಬಿಜೆಪಿ ನಾಯಕರ ಗೆಲುವಿನ ಲೆಕ್ಕಾಚಾರ?

ಬಾಗಲಕೋಟೆ, (ಏಪ್ರಿಲ್ 12): ಕಾಂಗ್ರೆಸ್ ಶಾಸಕರಾಗಿದ್ದ ಹೆಚ್ ವೈ ಮೇಟಿ ಅಕಾಲಿಕ ನಿಧನದಿಂದ ನಡೆದ ಬಾಗಲಕೋಟೆ ಉಪಚುನಾವಣೆ (Bagalkot By Election) ಅಂತ್ಯವಾಗಿದ್ದು. ಇದೀಗ ಎಲ್ಲರ ಚಿತ್ತ ಮೇ 4ರ ಫಲಿತಾಂಶದತ್ತ ನೆಟ್ಟಿದೆ. ಉಪಚುನಾವಣೆಯಲ್ಲಿ ಶೇ.68.74ರಷ್ಟು ಮತದಾನವಾಗಿದೆ.  ಆದ್ರೆ, ಕಳೆದ ಬಾರಿ ಅಂದರೆ 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಶೇ. 69.40ರಷ್ಟು ವೋಟಿಂಗ್ ಆಗಿದ್ದು,  ಈ ಬಾರಿ ಕಳೆದ ಬಾರಿಗಿಂತ‌ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ  ಮತದಾನದ ಪ್ರತಿಶತ ಆಧಾರದ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.

ಮತದಾನದ ಆಧಾರದಲ್ಲಿ ಲೆಕ್ಕಾಚಾರ

ನಗರ ಪ್ರದೇಶದಲ್ಲಿ ಶೇ 61.24ರಷ್ಟು ಮತದಾನ ಆಗಿದ್ದರೆ, ಗ್ರಾಮೀಣ ಭಾಗದಲ್ಲಿ 74ರಷ್ಟು ಮತದಾನವಾಗಿದೆ. ನಗರದಲ್ಲಿ 70% ದಾಟಿದರೆ ಬಿಜೆಪಿಗೆ ಪ್ಲಸ್ ಎಂಬ ಲೆಕ್ಕಾಚಾರವಿದೆ. ಆದರೆ ನಗರದ ಪ್ರದೇಶದಲ್ಲಿ ಶೇ.61.24ರಷ್ಟು ಮತದಾನವಾಗಿದೆ. ಹೀಗಾಗಿ ಬಿಜೆಪಿಗರಿಗೆ ಫಲಿತಾಂಶ ಏನಾಗಲಿದೆ ಎನ್ನುವ ಟೆನ್ಷನ್ ಶುರುವಾಗಿದೆ. ಇನ್ನೊಂದೆಡೆ ಮಹಿಳೆಯರ ಮತದಾನವೂ ಸಹ ಕಡಿಮೆಯಾಗಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಮತ ಸೆಳೆಯಬಹುದು ಎನ್ನುವ ಕಾಂಗ್ರೆಸ್ ನ ಲೆಕ್ಕಾಚಾರ ಹುಸಿಯಾಗಿದೆ. ಹೀಗಾಗಿ ಬಾಗಲಕೋಟೆ ಉಪಚುನಾವಣೆ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ದಾವಣಗೆರೆ ಉಪಚುನಾವಣೆ: ಎಷ್ಟು ಮತದಾನ? ಬಿಜೆಪಿ-ಕಾಂಗ್ರೆಸ್​​ ನಾಯಕರ ಗೆಲುವಿನ ಲೆಕ್ಕಾಚಾರ ಏನು?

ಇನ್ನು ಕಾಂಗ್ರೆಸ್​​​ಗೆ ಮೊದಲಿನಿಂದಲೂ ಗ್ರಾಮೀಣ ಮತಗಳು ಆಸರೆಯಾಗಿವೆ. ಹೀಗಾಗಿ ಕಾಂಗ್ರೆಸ್ ನಗರಕ್ಕಿಂತ ಹೆಚ್ಚಾಗಿ ಗ್ರಾಮೀಣ ಭಾಗದ ಮತಗಳನ್ನೇ ನಂಬಿಕೊಂಡು ಬಂದಿದೆ. ಅದರಂತೆ ಈ ಬಾರಿ ಉಪಚುನಾವಣೆಯಲ್ಲೂ ಸಹಗ್ರಾಮೀಣ ಭಾಗದಲ್ಲಿ ಈ ಬಾರಿ ಶೇ.74.61ರಷ್ಟು ಮತದಾನವಾಗಿದ್ದು, ಕಾಂಗ್ರೆಸ್​​ ನಾಯಕರಲ್ಲಿ ಗೆಲುವಿನ ವಿಶ್ವಾಸ ಹೆಚ್ಚಾಗಿದೆ. ಆದ್ರೆ, ಮಹಿಳೆಯರ ಮತಗಳನ್ನ ಸೆಳೆಯಲು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಪ್ರಮುಖ ಅಸ್ತ್ರವಾಗಿ ಬಳಿಸಿಕೊಂಡಿತ್ತು. ಆದ್ರೆ, ಬೈ ಎಲೆಕ್ಷನ್​​ನಲ್ಲಿ ಮಹಿಳೆ ಮತದಾನದಿಂದ ದೂರು ಉಳಿದುಕೊಂಡಿದ್ದಾರೆ.

ಹೌದು.. ಮಹಿಳೆಯರು ಮತಗಳು ಅಷ್ಟಾಗಿ ಚಲಾವಣೆಯಾಗಿಲ್ಲ.ಕ್ಷೇತ್ರದಲ್ಲಿರೋ ಒಟ್ಟು 2,59,797 ಮತದಾರರ ಪೈಕಿ ಮಹಿಳೆಯರು ಮತದಾನದಲ್ಲಿ ಶೇ.67.80 ರಷ್ಟು ಮತದಾನ ಮಾಡಿದ್ದರೆ, ಪುರುಷರು ಶೇ.69.48ರಷ್ಟು ಮತದಾನ ಮಾಡಿದ್ದಾರೆ. ಪ್ರತಿಶತ ಮತದಾನದಲ್ಲಿ ಪುರುಷರ ಮತದಾನವೇ ಹೆಚ್ಚಾಗಿದೆ. ಗ್ಯಾರಂಟಿಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಮತ ಹಾಕಬಹುದೆಂಬ ಕಾಂಗ್ರೆಸ್​​ನ ಲೆಕ್ಕಾಚಾರ ಹುಸಿಯಾಗಿದೆ. ಹೀಗಾಗಿ ಸಹಜವಾಗಿ ಫಲಿತಾಂಶ ಕಾಂಗ್ರೆಸ್​​​ ನಾಯಕರ ಆತಂಕಕ್ಕೆ ಕಾರಣವಾಗಿದೆ.

ಪ್ರಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಸಚಿವರಾದಿಯಾಗಿ ಎಲ್ಲರೂ ಅಕ್ಕ, ಅವ್ಚ, ತಂಗಿ ಅಂತ ಎಲ್ಲರಿಗೂ ಪ್ರತಿ ತಿಂಗಳು 2 ಸಾವಿರ ಗೃಹಲಕ್ಷ್ಮೀ ಹಣ, ಬಸ್ ಫ್ರೀ, ಕರೆಂಟ್ ಫ್ರೀ ಅಂತ ಪ್ರಚಾರ ಮಾಡಿದ್ರು.ಆದ್ರೆ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬಹುದಿತ್ತು. ಆದ್ರೆ ಹಾಗೆ ಆಗಿಲ್ಲ. ಗ್ಯಾರಂಟಿ ಯೋಜನೆಗಳು, ಅನುಕಂಪ, ಸರ್ಕಾರದ ಅಭಿವೃದ್ಧಿ ಕಾರ್ಯಗಳೊಂದಿಗೆ ಬೈ ಎಲೆಕ್ಷನ್ ಅಖಾಡಕ್ಕೆ ಇಳಿದಿದ್ದ ಕಾಂಗ್ರೆಸ್ ನಾಯಕರಿಗೆ ಮಹಿಳೆಯರ ಮತ ಕಡಿಮೆ ಆಗಿದ್ದು ತಲೆ‌ನೋವಾಗಿದೆ.

ಒಟ್ಟಿನಲ್ಲಿ ಮತದಾನದ‌ ನಂತರ ಬಿಜೆಪಿ ಕಾಂಗ್ರೆಸ್ ತಮ್ಮದೇ ಆದ ಲೆಕ್ಕಾಚಾರ ಹೇಳುತ್ತಾ ತಮ್ಮ ತಮ್ಮ ಗೆಲುವು ನಿಶ್ಚಿತ ಅಂತಿದ್ದಾರೆ. ಆದರೆ ಮೇ 4ರ ಫಲಿತಾಂಶ ಇದೆಲ್ಲದಕ್ಕೂ ಉತ್ತರ ನೀಡಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

MI vs RCB: ಸಾವಿರ ರನ್​​ಗಳ ಸರದಾರ ಕಿಂಗ್ ಕೊಹ್ಲಿ

Source link

ಅಲ್ಲು ಅರವಿಂದ್ ಆಶೀರ್ವಾದಕ್ಕೆ ನಾಚಿ ನೀರಾದ ಮೃಣಾಲ್ ಠಾಕೂರ್

ನಟಿ ಮೃಣಾಲ್ ಠಾಕೂರ್ (Mrunal Thakur) ಬಹು ಬೇಡಿಕೆಯ ಪ್ಯಾನ್ ಇಂಡಿಯಾ ನಟಿ. ಮೂಲ ಮರಾಠಿ ಆದರೂ ಸಹ ತೆಲುಗು ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ವರ್ಗ ಹೊಂದಿದ್ದಾರೆ. ಮರಾಠಿ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಟಿಸುವ ಮೃಣಾಲ್ ಠಾಕೂರ್, ತೆಲುಗು ಪ್ರೇಕ್ಷಕರೊಟ್ಟಿಗೆ ವಿಶೇಷ ಬಾಂಧವ್ಯ ಹೊಂದಿದ್ದಾರೆ. ತೆಲುಗಿನಲ್ಲಿ ಕೆಲ ಅದ್ಭುತವಾದ ಪಾತ್ರಗಳು ಅವರಿಗೆ ಸಿಕ್ಕಿದ್ದು, ಹಾಗೆಯೇ ಅದ್ಭುತ ಪ್ರೀತಿ ಸಹ ತೆಲುಗು ಪ್ರೇಕ್ಷಕರಿಂದ ಸಿಕ್ಕಿದೆ. ಇದೀಗ ಮೃಣಾಲ್ ಠಾಕೂರ್ ನಟಿಸಿರುವ ‘ಡಕೈತ್’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಆಡಿರುವ ಮಾತಿಗೆ ನಾಚಿ ನೀರಾಗಿದ್ದಾರೆ ನಟಿ.

ಮೃಣಾಲ್ ಠಾಕೂರ್ ನಾಯಕಿಯಾಗಿ, ಅಡಿವಿ ಶೇಷ್ ನಾಯಕನಾಗಿ ನಟಿಸಿರುವ ‘ಡಕೈತ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಗಳಿಸಿಕೊಂಡಿದೆ. ಇದೇ ಕಾರಣಕ್ಕೆ ಸಿನಿಮಾದ ಸಕ್ಸಸ್ ಮೀಟ್ ಅನ್ನು ಚಿತ್ರತಂಡ ಇತ್ತೀಚೆಗೆ ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ತಂದೆ, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರು ಅತಿಥಿಯಾಗಿ ಆಗಮಿಸಿದ್ದರು. ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ ಅಲ್ಲು ಅರವಿಂದ್, ಮೃಣಾಲ್ ಠಾಕೂರ್ ಅವರಿಗೆ ಆಶೀರ್ವಾದ ಮಾಡಿದರು. ಅಲ್ಲು ಅರವಿಂದ್ ಅವರ ಆಶೀರ್ವಾದ ಕೇಳಿ ನಾಚಿ ನೀರಾದರು ಮೃಣಾಲ್.

ವೇದಿಕೆ ಮೇಲೆ ಮಾತನಾಡಿದ ಅಲ್ಲು ಅರವಿಂದ್, ಮೃಣಾಲ್ ಠಾಕೂರ್ ಅವರನ್ನುದ್ದೇಶಿಸಿ, ‘ನೀವು ಇಲ್ಲೇ (ಆಂಧ್ರ-ತೆಲಂಗಾಣ) ಒಬ್ಬ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಆಗಿ ಇಲ್ಲಿಯೇ ಸೆಟಲ್ ಆಗಬೇಕು, ಇದು ನನ್ನ ಹಾರೈಕೆ’ ಎಂದಿದ್ದಾರೆ. ಮುಂದುವರೆದು ಮಾತನಾಡಿ, ‘ಹಿಂದೆ ಒಬ್ಬ ನಟಿಗೆ ಹೀಗೆಯೇ ಆಶೀರ್ವಾದ ಮಾಡಿದ್ದೆ. ಆ ನಟಿ ಈಗ ತೆಲುಗು ಸೊಸೆ ಆಗಿದ್ದಾರೆ’ ಎಂದರು.

ಇದನ್ನೂ ಓದಿ:ಸಹೋದರನಿಗಾಗಿ ತ್ಯಾಗ ಮಾಡಿದ್ದಾರೆ ನಟಿ ಮೃಣಾಲ್ ಠಾಕೂರ್

ಉತ್ತರ ಭಾರತದ ನಟಿ ಲಾವಣ್ಯಾ ತ್ರಿಪಾಠಿ ಅವರಿಗೂ ಸಹ ಅಲ್ಲು ಅರವಿಂದ್ ಅವರು ಹೀಗೆಯೇ ಆಶೀರ್ವಾದ ಮಾಡಿದ್ದರು. ಬಳಿಕ ಲಾವಣ್ಯಾ ತ್ರಿಪಾಠಿ ಮೆಗಾ ಫ್ಯಾಮಿಲಿ ನಟ ವರುಣ್ ತೇಜ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದು, ಈಗ ಮೆಗಾಸ್ಟಾರ್ ಫ್ಯಾಮಿಲಿಯ ಸೊಸೆ ಆಗಿದ್ದಾರೆ. ಈಗ ಮೃಣಾಲ್ ಠಾಕೂರ್ ಅವರಿಗೂ ಅದೇ ಆಶೀರ್ವಾದ ಮಾಡಿದ್ದಾರೆ ಅಲ್ಲು ಅರವಿಂದ್. ‘ನಿಮ್ಮ ನಟನೆ, ನಿಮ್ಮ ಅಂದ ಎಲ್ಲವೂ ತೆಲುಗು ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದೆ. ನಮ್ಮ ಚಿತ್ರರಂಗಕ್ಕೆ ನೀವು ಬೇಕಿದೆ. ನೀವು ಇಲ್ಲಿಯೇ ಯಾರಾದರೂ ಒಳ್ಳೆಯ ವರನನ್ನು ನೋಡಿ ಮದುವೆ ಆದರೆ, ನಿಮ್ಮನ್ನು ಇಲ್ಲಿಯೇ ಕಟ್ಟಿ ಹಾಕಬಹುದು’ ಎಂದಿದ್ದಾರೆ ಅಲ್ಲು ಅರವಿಂದ್.

ನಿರ್ಮಾಪಕ ಅಲ್ಲು ಅರವಿಂದ್ ಅವರ ಮಾತು ಕೇಳಿ ನಟಿ ಮೃಣಾಲ್ ಠಾಕೂರ್ ನಾಚಿ ನೀರಾಗಿದ್ದಾರೆ. ಅಂದಹಾಗೆ ಕೆಲ ತಿಂಗಳುಗಳ ಹಿಂದಷ್ಟೆ ಧನುಶ್ ಹಾಗೂ ಮೃಣಾಲ್ ಠಾಕೂರ್ ಪರಸ್ಪರ ಪ್ರೀತಿಸುತ್ತಿದ್ದು, ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದು ಸುಳ್ಳೆಂದು ಬಳಿಕ ಸ್ಪಷ್ಟನೆ ನೀಡಲಾಯ್ತು. ಸದ್ಯಕ್ಕೆ ಮೃಣಾಲ್ ಠಾಕೂರ್ ಹೆಸರು ಯಾರೊಟ್ಟಿಗೂ ಥಳುಕು ಹಾಕಿಕೊಂಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link