Category Archives: Blog

Your blog category

ಸಹೋದರರ ನಡುವಿನ ಶೀತಲ ಸಮರಕ್ಕೆ ಅಂತ್ಯ ಹಾಡುತ್ತಾ ಆರ್​ಸಿಬಿ- ಮುಂಬೈ ಪಂದ್ಯ?

ಸಹೋದರರ ನಡುವಿನ ಶೀತಲ ಸಮರಕ್ಕೆ ಅಂತ್ಯ ಹಾಡುತ್ತಾ ಆರ್​ಸಿಬಿ- ಮುಂಬೈ ಪಂದ್ಯ?

ಏಪ್ರಿಲ್ 12 ರ ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026 (IPL 2026) ರ 20 ನೇ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಪಂದ್ಯದಲ್ಲಿ ಎರಡು ಚಾಂಪಿಯನ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐದು ಬಾರಿ ಐಪಿಎಲ್ ಟ್ರೋಫಿ ವಿಜೇತ ಮುಂಬೈ ಇಂಡಿಯನ್ಸ್ (RCB vsMI) ವಿರುದ್ಧ ಸೆಣಸಲಿದೆ. ಪಂದ್ಯವು ಸಂಜೆ 7:30 ಕ್ಕೆ ಆರಂಭವಾಗಲಿದೆ. ಈ ಪಂದ್ಯದಲ್ಲಿ ಇಬ್ಬರು ಸಹೋದರರು ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಅದರಲ್ಲೂ ಈ ಇಬ್ಬರು ಸಹೋದರರ ನಡುವೆ ಕಳೆದ ಕೆಲವು ತಿಂಗಳುಗಳಿಂದ ಶೀತಲ ಸಮರ ನಡೆಯುತ್ತಿರುವುದು ಈ ಪಂದ್ಯದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಹಾರ್ದಿಕ್ vs ಕೃನಾಲ್

ಪಾಂಡ್ಯ ಸಹೋದರರಾದ ಹಾರ್ದಿಕ್ ಮತ್ತು ಕೃನಾಲ್ ಮುಂಬೈ vs ಬೆಂಗಳೂರು ಪಂದ್ಯದಲ್ಲಿ ಪರಸ್ಪರ ವಿರುದ್ಧವಾಗಿ ಆಡಲಿದ್ದಾರೆ. ಹಾರ್ದಿಕ್ ಮತ್ತು ಕೃನಾಲ್ ಇಬ್ಬರೂ ಆಲ್ರೌಂಡರ್‌ಗಳಾಗಿದ್ದು ಕೃನಾಲ್ ಆರ್‌ಸಿಬಿಯನ್ನು ಪ್ರತಿನಿಧಿಸಿದರೆ, ಪಾಂಡ್ಯ ಮುಂಬೈ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

ಮುಂಬೈ vs ಆರ್‌ಸಿಬಿ ಈ ಪಂದ್ಯಾವಳಿಯ ಹೈ-ವೋಲ್ಟೇಜ್ ಪಂದ್ಯಗಳಲ್ಲಿ ಒಂದಾಗಿದೆ. ಇಲ್ಲಿಯವರೆಗೆ, ಇಬ್ಬರು ಸಹೋದರರು ಕ್ರಿಕೆಟ್‌ನಲ್ಲಿ ಹಲವು ಬಾರಿ ಒಟ್ಟಿಗೆ ಮತ್ತು ಪರಸ್ಪರ ವಿರುದ್ಧವಾಗಿ ಆಡಿದ್ದಾರೆ. ಆದರೆ ಮುಂಬೈ-ಆರ್‌ಸಿಬಿ ಪಂದ್ಯವು ಸ್ವಲ್ಪ ಮಟ್ಟಿಗೆ ವಿಶೇಷವಾಗಲಿದೆ. ಏಕೆಂದರೆ ಕಳೆದ ಕೆಲವು ತಿಂಗಳುಗಳಿಂದ ಪಾಂಡ್ಯ ಸಹೋದರರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂದು ಹೇಳಲಾಗುತ್ತದೆ. ಪರಸ್ಪರರ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ ಎಂತಲೂ ವರದಿಯಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಈ ಸಹೋದರರಿಬ್ಬರು ಮುಖಾಮುಖಿಯಾದಾಗ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಮನಸ್ತಾಪಕ್ಕೆ ಪುಷ್ಠಿ ನೀಡುತ್ತಿದೆ ಇಬ್ಬರ ನಡೆ

ವಾಸ್ತವವಾಗಿ ಮಾರ್ಚ್ 8 ರಂದು ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಟೀಂ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತು. ಚಾಂಪಿಯನ್ ಟೀಂ ಇಂಡಿಯಾಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದಿತ್ತು. ಆದರೆ ಭಾರತ ತಂಡದ ಭಾಗವಾಗಿದ್ದ ಹಾರ್ದಿಕ್ ಪಾಂಡ್ಯಗೆ ಅವರ ಸಹೋದರ ಕೃನಾಲ್ ಪಾಂಡ್ಯ ಕಡೆಯಿಂದ ಯಾವುದೇ ಅಭಿನಂದನೆಯಾಗಲಿ, ಶುಭಾಶಯವಾಗಲಿ ವ್ಯಕ್ತವಾಗಿರಲಿಲ್ಲ.

PBKS vs SRH: ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಪ್ರಿಯಾಂಶ್ ಆರ್ಯ

ಇದಾದ ಬಳಿಕವೇ ಇವರಿಬ್ಬರ ನಡುವೆ ಏನೂ ಸರಿ ಇಲ್ಲ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಆರಂಭವಾಯಿತು. ಆದರೆ ಈ ವದಂತಿಯ ಬಗ್ಗೆ ಇಬ್ಬರು ಸಹೋದರರು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಈ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಹೀಗಾಗಿ ಇಂದಿನ ಮುಂಬೈ ಮತ್ತು ಬೆಂಗಳೂರು ನಡುವಿನ ಪಂದ್ಯದಲ್ಲಿ ಹಾರ್ದಿಕ್-ಕೃನಾಲ್ ಸಹೋದರರು ಈ ವದಂತಿಗೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಶಾ ಭೋಸ್ಲೆ ನಿಧನ, ನಟ ರಾಘವೇಂದ್ರ ರಾಜ್​​ಕುಮಾರ್ ಸಂತಾಪ

ಖ್ಯಾತ ಗಾಯಕಿ ಆಶಾ ಭೊಸ್ಲೆ (Asha Bhosle) ಇಂದು ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಆಶಾ ಭೋಸ್ಲೆ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಮಂದಿ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯ ನಟ, ನಿರ್ಮಾಪಕ ರಾಘವೇಂದ್ರ ರಾಜ್​​ಕುಮಾರ್ ಸಹ ಆಶಾ ಭೊಸ್ಲೆ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಅಪ್ಪಾಜಿ‌ ನಿಧನರಾದ ದಿನವೇ ಅವರನ್ನ ಕಳೆದುಕೊಂಡಿದ್ದೀವಿ, ನಮ್ಮ ತಂದೆಯವರು ಆಶಾ ಬೋಸ್ಲೆ ಅವರ ದೊಡ್ಡ ಅಭಿಮಾನಿ ಆಗಿದ್ದರು. ನಮ್ಮ ತಂದೆಗೆ ಅವರ ಹಾಡುಗಳು ಎಂದರೇ ಬಹಳ ಇಷ್ಟ, ಅಪ್ಪಾಜಿ ಆಶಾ ಬೋಸ್ಲೆ ಅವರನ್ನ ಭೇಟಿ ಆಗಿದ್ದಾರೆ, ಮಹಾನ್ ವ್ಯಕ್ತಿಗಳನ್ನ‌ ಒಂದೇ ದಿನ ಕಳೆದುಕೊಂಡಿದ್ದೀವಿ, ಅವರು ಎಲ್ಲಾ ರೀತಿಯ ಹಾಡುಗಳನ್ನು ಹಾಡಿದ್ದಾರೆ, ನಾನು‌ ಅವರನ್ನ ಭೇಟಿ‌ ಮಾಡಿಲ್ಲ. ಆದರೆ ಅವರ ಹಾಡುಗಳನ್ನ ಸದಾ ಕೇಳುತ್ತಿರ್ತಿನಿ, ಆಶಾ ಬೋಸ್ಲೆ ಅವರ ನಿಧನದಿಂದ ಚಿತ್ರರಂಗಕ್ಕೆ ತುಂಬಾ ನಷ್ಟ ಆಗಿದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Chanakya Niti: ಈ ಅಭ್ಯಾಸಗಳು ಪುರುಷರ ಬದುಕನ್ನೇ ಸರ್ವನಾಶ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿ ಶಾಸ್ತ್ರದಲ್ಲಿ ಯಶಸ್ಸು ಮತ್ತು ಶ್ರೀಮಂತಿಕೆ ಗಳಿಕೆಯ ಬಗ್ಗೆ ಮಾತ್ರವಲ್ಲದೆ ಜೀವನವನ್ನು ಯಾವ ರೀತಿ ನಡೆಸಬೇಕು, ಜೀವನವನ್ನು ಯಾವ ರೀತಿ ಜೀವಿಸಬೇಕು, ಸಮಾಜದಲ್ಲಿ ಗೌರವಯುತವಾಗಿ ಬಾಳಲು ಏನು ಮಾಡಬೇಕು ಎಂಬುದರ ಬಗ್ಗೆಯೂ ಸಾಕಷ್ಟು ಹೇಳಿದ್ದಾರೆ. ಅದೇ ರೀತಿ ಪುರುಷ ಜೀವನಕ್ಕೆ ಸಂಬಂಧಿಸಿದ ಒಂದಷ್ಟು ರಹಸ್ಯಗಳ ಬಗ್ಗೆಯೂ ಹೇಳಿದ್ದು, ಒಬ್ಬ ವ್ಯಕ್ತಿಯ ಯಶಸ್ಸಿಗೆ ಬುದ್ದಿವಂತಿಕೆ ಮಾತ್ರ ಸಾಕಾಗುವುದಿಲ್ಲ, ಶಿಸ್ತಿನ ನಡವಳಿಕೆಯೂ ಅಗತ್ಯ. ಅದರಲ್ಲೂ ಒಂದು ವೇಳೆ ಈ ಕೆಲವು ಅಭ್ಯಾಸ ಪುರುಷನಿಗಿದ್ದರೆ ಮತ್ತು ಆತ ಮಾಡುವ ಕೆಲವೊಂದು ತಪ್ಪುಗಳು ಆತನ ವೃತ್ತಿ ಜೀವನ, ಖ್ಯಾತಿ ಎರಡೂ ಹಾಳಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹಾಗಿದ್ದರೆ ಪುರುಷರ ಜೀವನ ಹಾಳು ಮಾಡುವ ಆ  ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಈ ಅಭ್ಯಾಸಗಳು ಪುರುಷರ ಬದುಕನ್ನೇ ನಾಶ ಮಾಡುತ್ತದೆ:

ಸೋಮಾರಿತನ: ಸೋಮಾರಿತನ ಯಶಸ್ಸಿನ ದೊಡ್ಡ ಶತ್ರು ಎನ್ನುತ್ತಾರೆ ಚಾಣಕ್ಯ. ಸೋಮಾರಿ ವ್ಯಕ್ತಿಗೆ ಯಾವುದೇ ಭವಿಷ್ಯ ಇಲ್ಲ. ಇಂದಿನ ಕೆಲಸವನ್ನು ಇಂದೇ ಮಾಡಿ ಮುಗಿಸದೆ ನಾಳೆಗೆ  ಮುಂದೂಡುವವನು ವೃತ್ತಿಪರ ಸ್ಪರ್ಧೆಯಲ್ಲಿ ಯಾವಾಗಲೂ ಹಿಂದುಳಿಯುತ್ತಾನೆ. ಅವನು ಜೀವನದಲ್ಲಿಮುಂದುವರಿಯಲು ಸಾಧ್ಯವಾಗದು, ಆತ ಖಂಡಿತವಾಗಿಯೂ ಪತನಗೊಳ್ಳುತ್ತಾರೆ ಎನ್ನುತ್ತಾರೆ ಚಾಣಕ್ಯ. ಹಾಗಾಗಿ ಸೋಮಾರಿತನವನ್ನು ಇಂದೇ ಬಿಟ್ಟುಬಿಡಿ.

ಅಹಂಕಾರ: ತನ್ನ ಅಧಿಕಾರ, ಸ್ಥಾನಮಾನ ಅಥವಾ ಸಂಪತ್ತಿನ ಬಗ್ಗೆ ಅಹಂಕಾರ ಪಡುವ ವ್ಯಕ್ತಿಯು ಇತರರನ್ನು ಕೀಳಾಗಿ ಕಾಣಲು ಪ್ರಾರಂಭಿಸಿದಾಗ ಅದು ಆತನ ವಿನಾಶದ ಆರಂಭ ಎನ್ನುತ್ತಾರೆ ಚಾಣಕ್ಯ. ಅಹಂಕಾರ ಎಲ್ಲಿ ಬೆಳೆಯುತ್ತದೆಯೋ ಅಲ್ಲಿ ಕಲಿಯುವ ಬಯಕೆ ಸಾಯುತ್ತದೆ. ಹೊಸ ವಿಷಯಗಳನ್ನು ಕಲಿಯುವುದನ್ನು ನಿಲ್ಲಿಸಿದಾಗ, ಆ ವ್ಯಕ್ತಿಯ ಅವನತಿ ಪ್ರಾರಂಭವಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.

ನೋವುಂಟುಮಾಡುವ ಮಾತುಗಳು: ಕಠಿಣ ಮಾತುಗಳನ್ನಾಗಿಡಿದರೆ ಸಂಬಂಧವೇ ಹಾಳಾಗುತ್ತದೆ ಎನ್ನುತ್ತಾರೆ ಚಾಣಕ್ಯ.  ಒಬ್ಬ ವ್ಯಕ್ತಿಯ ಕೆಟ್ಟ ಮಾತು ಅಥವಾ ನೋವುಂಟುಮಾಡುವ ಮಾತುಗಳು ಆತನ ಖ್ಯಾತಿಯನ್ನೇ ಹಾಳು ಮಾಡುತ್ತದೆ. ಕಟುವಾಗಿ ಮಾತನಾಡುವ ಪುರುಷರು ಕಚೇರಿಯಲ್ಲಿ ತಮ್ಮ ಸಹೋದ್ಯೋಗಿಗಳ ಗೌರವವನ್ನು ಗಳಿಸುವುದಿಲ್ಲ ಮತ್ತು ಮನೆಯಲ್ಲಿ ಶಾಂತಿಯನ್ನು ಕಳೆದುಕೊಳ್ಳುತ್ತಾರೆ. ಅಲ್ಲದೆ ಇದು ಸಂಬಂಧವನ್ನು ಸಹ ಹಾಳು ಮಾಡುತ್ತದೆ. ಆದ್ದರಿಂದ ಮಾತಿನ ಮೇಲೆ ಹಿಡಿತವನ್ನು ಹೊಂದಿರಬೇಕು.

ಕೆಟ್ಟವರ  ಸ್ನೇಹ: ಕೆಟ್ಟವರ ಸಹವಾಸದಿಂದ ವ್ಯಕ್ತಿತ್ವದ ಮೇಲೆ ಕಳಂಕ ಉಂಟಾಗುತ್ತದೆ ಎನ್ನುತ್ತಾರೆ ಚಾಣಕ್ಯ. ಹೌದು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಆತನ ಸ್ನೇಹಿತರಿಂದಲೂ ನಿರ್ಣಯಿಸಬಹುದು. ಕೆಟ್ಟ ಅಭ್ಯಾಸಗಳನ್ನು ಹೊಂದಿರುವ ಜನರೊಂದಿಗೆ ನೀವು ಸ್ನೇಹ ಬೆಳೆಸಿದರೆ, ಅದು ನಿಮ್ಮ ಕೆಲಸ ಮತ್ತು ಖ್ಯಾತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಯಶಸ್ಸನ್ನು ಸಾಧಿಸಲು ಬಯಸುವವರು ಯಾವಾಗಲೂ ಅವರಿಗಿಂತ ಹೆಚ್ಚು ಸಮರ್ಥರು ಮತ್ತು ಉತ್ತಮ ಆಲೋಚನೆಗಳನ್ನು ಹೊಂದಿರುವ ಜನರ ಸಹವಾಸ ಮಾಡಬೇಕು ಎಂದಿದ್ದಾರೆ ಚಾಣಕ್ಯ.

ಇದನ್ನೂ ಓದಿ: ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಾರದೆಂದರೆ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ

ದುಂದು ವೆಚ್ಚ: ಇದು ಬಡತನಕ್ಕೆ ಆಹ್ವಾನ ನೀಡುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡಿ ಕೇವಲ ಆಡಂಬರಕ್ಕಾಗಿ ಬದುಕುವುದು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಅಲ್ಲದೆ ಸಂಪಾದನೆಯ ಒಂದು ಭಾಗ ಉಳಿತಾಯ ಮಾಡದವರು ಬಡವರಾಗಿಯೇ ಉಳಿಯುತ್ತಾರೆ, ಅವರು ಎಂದಿಗೂ ಶ್ರೀಮಂತಿಕೆ ಗಳಿಸಲು ಸಾಧ್ಯವಿಲ್ಲ. ಹಾಗಾಗಿ ಎಂದಿಗೂ ದುಂದುವೆಚ್ಚ ಮಾಡಬೇಡಿ, ಯೋಚಿಸಿ ಹಣವನ್ನು ಖರ್ಚು ಮಾಡಿ.

ಕೆಟ್ಟ ಚಟ: ಮದ್ಯ, ಧೂಮಪಾನ ಸೇರಿದಂತೆ ಯಾವುದೇ ರೀತಿಯ ವ್ಯಸನವು ವ್ಯಕ್ತಿಯನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ದುರ್ಬಲಗೊಳಿಸುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ. ಕೆಟ್ಟ ಚಟಗಳಿಗೆ ದಾಸನಾದ ವ್ಯಕ್ತಿಯು ತನ್ನ ಜವಾಬ್ದಾರಿಗಳನ್ನು ಮರೆತುಬಿಡುತ್ತಾನೆ ಅಂತಹ ವ್ಯಕ್ತಿಯು ತನ್ನ ವ್ಯವಹಾರ ಅಥವಾ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ ಮತ್ತು ಅವನ ಕುಟುಂಬವನ್ನು ಸಹ ತೊಂದರೆಗೆ ಸಿಲುಕಿಸುತ್ತಾನೆ ಎನ್ನುತ್ತಾರೆ ಚಾಣಕ್ಯ.

ನೀವು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಲು ಬಯಸಿದರೆ, ಚಾಣಕ್ಯರು ಹೇಳಿರುವ ಈ ಆರು ಅಭ್ಯಾಸಗಳನ್ನು ತಕ್ಷಣವೇ ತ್ಯಜಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರವಾಸಿಗರ ಮೇಲೆ ಎರಗಲು ಯತ್ನಿಸಿದ ಹುಲಿ, ಇಲ್ಲಿದೆ ಭಯಾನಕ ವಿಡಿಯೋ

ಶಿವಮೊಗ್ಗ, (ಏಪ್ರಿಲ್ 12): ಹುಲಿ (Tiger) ಪ್ರವಾಸಿಗರ (Tourists) ಮೇಲೆ ಎರಗಲು ಯತ್ನಿಸಿದ ವಿಡಿಯೋವೊಂದು ವೈರಲ್ ಆಗಿದೆ. ಘರ್ಜಿಸುತ್ತಲೇ ಪ್ರವಾಸಿಗರ ಬಳಿಕ ಬಂದ ಹುಲಿ, ಏಕಾಏಕಿ ಜಾಲರಿ ಮೇಲೆ ಜಿಗಿದು ದಾಳಿಗೆ ಯತ್ನಿಸಿದೆ. ಇದರಿಂದ ಪ್ರವಾಸಿಗರು ಒಂದು ಕ್ಷಣ ಗಾಬರಿಗೊಂಡು ಚೀರಿದ್ದಾರೆ. ಶಿವಮೊಗ್ಗದ (Shivamogga) ಹುಲಿ ಮತ್ತು ಸಿಂಹಧಾಮದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.  ಅಕಸ್ಮಾತ್ ಕೈ ಬೆರಳು ಏನಾದರೂ ಇಟ್ಟಿದ್ದರೆ ಅನಾಹುತ ಆಗಿರೋದು.

ಕರ್ನಾಟಕದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

LSG vs GT: W,W,W,W.. ಕನ್ನಡಿಗ ಪ್ರಸಿದ್ಧ್ ದಾಳಿಗೆ ತತ್ತರಿಸಿದ ಲಕ್ನೋ

ಐಪಿಎಲ್ 2026 ರ 19 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಏಕಾನಾ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ 20 ಓವರ್​ಗಳಲ್ಲಿ ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಗುಜರಾತ್ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿದ ಲಕ್ನೋ ಬ್ಯಾಟಿಂಗ್‌ ವಿಭಾಗಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅದರಲ್ಲೂ ಕನ್ನಡಿಗ ಪ್ರಸಿದ್ಧ್ ಕೃಷ್ಣ, ಲಕ್ನೋ ಟಾಪ್ ಆರ್ಡರ್ ಬ್ಯಾಟರ್​ಗಳನ್ನು ಬಹುಬೇಗನೇ ಪೆವಿಲಿಯನ್​ಗಟ್ಟುವ ಕೆಲಸ ಮಾಡಿದರು.

ಈ ಪಂದ್ಯದಲ್ಲಿ 4 ಓವರ್​ಗಳನ್ನು ಬೌಲ್ ಮಾಡಿದ ಪ್ರಸಿದ್ಧ್ ಕೃಷ್ಣ ಕೇವಲ 28 ರನ್ ಬಿಟ್ಟುಕೊಟ್ಟು ಪ್ರಮುಖ 4 ವಿಕೆಟ್​ಗಳನ್ನು ಕಬಳಿಸಿದರು. ಈ 28 ರನ್​ಗಳಲ್ಲಿ 15 ರನ್​​ಗಳಲ್ಲಿ ಅವರ 4ನೇ ಓವರ್​ನಲ್ಲಿ ಬಂದವು. ಉಳಿದಂತೆ ಮೊದಲ ಮೂರು ಓವರ್​ಗಳಲ್ಲಿ ಪ್ರಸಿದ್ಧ್ ಕೇವಲ 13 ರನ್​ಗಳನ್ನು ಬಿಟ್ಟುಕೊಟ್ಟಿದ್ದರು. ಪ್ರಸಿದ್ಧ್ ಉರುಳಿಸಿದ 4 ವಿಕೆಟ್​ಗಳಲ್ಲಿ ಐಡೆನ್ ಮಾರ್ಕ್ರಾಮ್, ಆಯುಷ್ ಬಡೋನಿ, ನಿಕೋಲಸ್ ಪೂರನ್ ಹಾಗೂ ಕಳೆದ ಪಂದ್ಯದ ಹೀರೋ ಮುಕುಲ್ ಚೌಧರಿ ಸೇರಿದ್ದರು.

Source link

ವಯೋವೃದ್ದರು, ಮಹಿಳೆಯರ ಪಾಲಿಗೆ ‘ಆಸರೆ’: ಒಂಟಿ ಬದುಕಿಗೆ ಬೆನ್ನೆಲುಬಾದ ಪೊಲೀಸ್ ಭರವಸೆ

ಹುಬ್ಬಳ್ಳಿ, ಏಪ್ರಿಲ್​ 12: ಹುಬ್ಬಳ್ಳಿಯಂತಹ (hubballi) ಮಹಾನಗರಗಳಲ್ಲಿ ಅಥವಾ ಜನನಿಬಿಡ ಪ್ರದೇಶಗಳಲ್ಲಿ ವಯೋವೃದ್ಧರು, ಮಹಿಳೆಯರು ಸೇರಿದಂತೆ ಒಬ್ಬಂಟಿಯಾಗಿ ವಾಸಿಸುವುದು ಒಂದು ಸವಾಲೇ ಸರಿ. ಯಾವಾಗ ಏನಾಗಿ ಬಿಡುತ್ತದೆಯೋ ಎಂಬ ಭಯ ಕಾಡುತ್ತದೆ. ಹೀಗಾಗಿ ಹುಬ್ಬಳ್ಳಿ ಪೊಲೀಸರು ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ. ಅದೇನೆಂದರೆ ‘ಆಸರೆ’ (Asare). ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರ ಮತ್ತು ವಯೋವೃದ್ಧರಿಗೆ ಅಸುರಕ್ಷತೆ, ಅಭದ್ರತೆ ಕಾಡದಂತೆ ಕಾಳಜಿ ವಹಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಈ ಯೋಜನೆ ಜಾರಿ ಮಾಡಿದೆ.

ದೊಡ್ಡದೊಡ್ಡ ನಗರಗಳಲ್ಲಿ ಮಕ್ಕಳು ಇದ್ದು, ಹೆತ್ತವರು ಬೇರೆಡೆ ವಾಸವಾಗಿರುತ್ತಾರೆ. ಕೆಲವರು ಮದುವೆ ಆಗದೆ ಒಬ್ಬಂಟಿಯಾಗಿರುತ್ತಾರೆ. ಹೀಗೆ ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರು ಮತ್ತು ವಯೋವೃದ್ಧರಿಗೆ ಅಸುರಕ್ಷತೆ, ಅಭದ್ರತೆ ಕಾಡುತ್ತದೆ. ಅಂತವರಿಗೆ ಕಾಳಜಿ ವಹಿಸುವ ಉದ್ದೇಶದಿಂದ ರಾಜ್ಯ ಪೊಲೀಸ್ ಇಲಾಖೆಯಿಂದ ಆಸರೆ ಯೋಜನೆ ಜಾರಿಗೊಳಿಸಿದೆ.

ಇದನ್ನೂ ಓದಿ: ಕ್ಷೇತ್ರದ ಜನರ ಸಮಸ್ಯೆ ಆಲಿಸಲು ಶಾಸಕ ವಿನೂತನ ಪ್ರಯತ್ನ: ರಾಜ್ಯದಲ್ಲೇ ಮೊದಲು

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 7500ಕ್ಕೂ ಹೆಚ್ಚು ಜನರನ್ನು ಗುರುತಿಸಿ ಅವರಿಗೆ ಸುರಕ್ಷತೆ, ಅಗತ್ಯ ಸಹಕಾರ ನೀಡಲಾಗುತ್ತಿದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ಹಾಗೂ ಹಿರಿಯ ನಾಗರಿಕರ ಕಾಳಜಿಯ ದೃಷ್ಟಿಯಿಂದ ರಾಜ್ಯ ಪೊಲೀಸ್ ಇಲಾಖೆ ಈ ಯೋಜನೆ ಜಾರಿಗೆ ತಂದಿದೆ. ಇದರನ್ವಯ ಆಯಾ ವ್ಯಾಪ್ತಿಯಲ್ಲಿ ಒಂಟಿಯಾಗಿ ವಾಸವಾಗಿರುವ ವೃದ್ಧರ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು ಅವರಿಗೆ ಬೇಕಾದ ಅಗತ್ಯ ಕಾನೂನು ನೆರವು ನೀಡುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ 2 ತಿಂಗಳಿಂದ ಮನೆ-ಮನೆ ಸಮೀಕ್ಷೆ ನಡೆಸಿ 7500ಕ್ಕೂ ಹೆಚ್ಚು ಜನರನ್ನು ಗುರುತಿಸಲಾಗಿದೆ.

ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ

ವೃದ್ದರು, ಒಂಟಿಯಾಗಿ ವಾಸಿಸುವವರನು ಭೇಟಿಯಾಗುತ್ತಿರುವ ಪೊಲೀಸರು, ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಕಳ್ಳತನ, ದರೋಡೆ ಕೃತ್ಯ ನಡೆದಾಗ ತುರ್ತು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ನೀಡಲಾಗುತ್ತಿದೆ. ಸಿಸಿ ಕ್ಯಾಮೆರಾ. ಅಪಾಯದ ಸೈರನ್ ಅಳವಡಿಕೆ ಸಹಿತ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆಯೂ ವಿವರಿಸುತ್ತಿದ್ದಾರೆ.

ತುರ್ತು ವೈದ್ಯಕೀಯ ಸೇವೆ ನೆರವು

ತುರ್ತು ವೈದ್ಯಕೀಯ ಅಗತ್ಯತೆ ಇದ್ದಲ್ಲಿ, ಔಷಧೋಪಚಾರದ ನೆರವು ಬೇಕಿದ್ದರೂ ಆಯಾ ಬೀಟ್ ಪೊಲೀಸರಿಗೆ ಕರೆ ಮಾಡಿದರೆ ಅವರು ಬಂದು ಸಹಾಯ ಮಾಡಲಿದ್ದಾರೆ. ಇದರೊಂದಿಗೆ ವೃದ್ಧಾಪ್ಯ ವೇತನ, ಪಡಿತರ ಚೀಟಿ, ಪಿಂಚಣಿ ಸೇರಿ ಸರ್ಕಾರದ ವಿವಿಧ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ.

ಇದನ್ನೂ ಓದಿ: Viral Post: ಪರ ಭಾಷಿಕರಿಗೆ ಕನ್ನಡ ಕಲಿಸಲು ಬೆಂಗಳೂರು ಆಟೋ ಚಾಲಕನ ವಿನೂತನ ಪ್ರಯತ್ನ

ನಿಗದಿಗೊಳಿಸಿದ ಬೀಟ್ ಸಿಬ್ಬಂದಿಯ ಕರ್ತವ್ಯದ ಮೇಲೂ ನಿಗಾ ಇರಿಸಲಾಗಿದೆ. ಅವರು ಮನೆಗಳಿಗೆ ಭೇಟಿ ನೀಡಿ ನಿರ್ದಿಷ್ಟ ಕಡೆ ಇರಿಸಿದ್ದ ಲಾಗ್ ಬುಕ್‌ನಲ್ಲಿ ಸಹಿ ಮಾಡಬೇಕು. ಹಿರಿಯರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವ ಜತೆಗೆ ಅವರ ಸಮಸ್ಯೆ ಆಲಿಸಿ ಪರಿಹರಿಸಬೇಕೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ.

Source link

ಆಶಾ ಭೋಸ್ಲೆ ಗಳಿಸಿದ ಆಸ್ತಿಗಳೇನು? ಅವರ ಹಾಡು, ಬ್ಯುಸಿನೆಸ್, ರಿಯಲ್ ಎಸ್ಟೇಟ್ ಆದಾಯ ಎಷ್ಟಿತ್ತು ಗೊತ್ತಾ?

ಭಾರತ ಕಂಡ ಅತ್ಯದ್ಭುತ ಗಾಯನ ಪ್ರತಿಭೆಗಳಲ್ಲಿ ಒಬ್ಬರೆನಿಸಿರುವ ಆಶಾ ಭೋಸ್ಲೆ (Asha Bhosle) ಭಾನುವಾರ ಕೊನೆಯುಸಿರೆಳೆದಿದ್ದಾರೆ. ಭಾರತೀಯ ಸಂಗೀತ ಕ್ಷೇತ್ರದಲ್ಲಿ ಒಂದು ಯುಗದ ಅಂತ್ಯವಾಗಿದೆ. 92 ವರ್ಷ ವಯಸ್ಸಾಗಿದ್ದ ಅವರು ಅಪಾರ ಮತ್ತು ಅವಿಸ್ಮರಣೀಯ ಹಾಡುಗಳನ್ನು ನೀಡಿದ್ದಾರೆ. ಅವರಿಗೆ ಸಂಗೀತವೇ ಉಸಿರು ಮತ್ತು ಜೀವನವಾಗಿತ್ತು. ಲತಾ ಮಂಗೇಶ್ಕರ್, ಉಷಾ ಮಂಗೇಶ್ಕರ್, ಮೀನಾ ಮಂಗೇಶ್ಕರ್, ಹೃದಯನಾಥ್ ಮಂಗೇಶ್ಕರ್ ಅವರುಗಳ ಸೋದರಿಯಾದ ಆಶಾ ಭೋಸ್ಲೆ ಬಹಳ ಸುದೀರ್ಘ ಕಾಲ ಗಾಯನ ಕ್ಷೇತ್ರದಲ್ಲಿ ಮಿಂಚಿದವರು. ದಶಕಗಳ ಕಾಲ ಅವರ ಗಾಯನ ಇದೆ. ವಿವಿಧ ತಲೆಮಾರುಗಳ ಹಾಡುಗಳು ಅವರ ಕಂಠಸಿರಿಯಲ್ಲಿ ಬಂದಿವೆ.

ಆಶಾ ಭೋಸ್ಲೆ ಅವರು ಗಾಯನದ ಜೊತೆಗೆ ಬ್ಯುಸಿನೆಸ್, ಹೂಡಿಕೆ ವ್ಯವಹಾರಗಳನ್ನೂ ಮಾಡಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಆಶಾ ಭೋಸ್ಲೆ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಎಂಟು ದಶಕಗಳ ಕಾಲ ಗಾಯಕಿಯಾಗಿದ್ದ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ್ದು 12,000ಕ್ಕೂ ಹೆಚ್ಚು ಹಾಡುಗಳು. ಶಾಸ್ತ್ರೀಯ ಸಂಗೀತ, ಘಜಲ್, ಕ್ಯಾಬರೆ, ಪಾಪ್ ಹೀಗೆ ವಿವಿಧ ಪ್ರಾಕಾರಗಳ ಹಾಡುಗಳು ಅವರ ಕಂಠದಿಂದ ಬಂದಿವೆ. 2011ರಲ್ಲಿ ಅವರಿಗೆ ಗಿನ್ನೆಸ್ ದಾಖಲೆಯ ಗೌರವವೂ ಸಿಕ್ಕಿತು.

ಇದನ್ನೂ ಓದಿ: ಚೆಲ್ಲಾ ಪಿಲ್ಲಿಯಾದ ಜೀವನ, ಕೈಹಿಡಿದ ಸಂಗೀತ: ಆಶಾ ಭೋಸ್ಲೆ ಎಂಬ ಫೀನಿಕ್ಸ್ ಹಕ್ಕಿ

250 ಕೋಟಿ ರೂ ಮೌಲ್ಯದ ಆಸ್ತಿವಂತೆಯಾಗಿದ್ದ ಆಶಾ

ಆಶಾ ಭೋಸ್ಲೆ ಅವರು ಹಾಡಿನಿಂದ ಸಾಕಷ್ಟು ಆದಾಯ ಗಳಿಸಿದ್ದಾರೆ. ಇತರ ವ್ಯವಹಾರಗಳನ್ನೂ ಸೇರಿಸಿದರೆ ಅವರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 200-250 ಕೋಟಿ ರೂ ಎನ್ನಲಾಗಿದೆ.

ರೆಸ್ಟೋರೆಂಟ್ ಬ್ಯುಸಿನೆಸ್

ಆಶಾ ಭೋಸ್ಲೆ ಅವರು ಹಾಡು ಮಾತ್ರವಲ್ಲದೆ ಬ್ಯುಸಿನೆಸ್ಗೂ ಕೈಹಾಕಿದ್ದರು. ಆಶಾಸ್ ಎನ್ನುವ ಅಂತಾರಾಷ್ಟ್ರೀಯ ರೆಸ್ಟೋರೆಂಟ್ ಚೈನ್ ಅನ್ನು 2002ರಲ್ಲಿ ದುಬೈನಲ್ಲಿ ಆರಂಭಿಸಿದ್ದರು. ಯುಎಇ, ಕುವೇತ್, ಬಹರೇನ್ ಹಾಗೂ ಬ್ರಿಟನ್ ಮೊದಲಾದ ದೇಶಗಳಲ್ಲಿ ಅವರ ರೆಸ್ಟೋರೆಂಟ್​ಗಳಿವೆ.

ಇದನ್ನೂ ಓದಿ: ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ: ಪ್ರಧಾನಿ ನರೇಂದ್ರ ಮೋದಿ ಸಂತಾಪ

ರಿಯಲ್ ಎಸ್ಟೇಟ್ ಆಸ್ತಿಗಳು

ಆಶಾ ಭೋಸ್ಲೆ ಅವರು ಮುಂಬೈ, ಪುಣೆ ನಗರಗಳಲ್ಲಿ ಮನೆ ಇತ್ಯಾದಿ ಆಸ್ತಿಗಳನ್ನು ಹೊಂದಿದ್ದಾರೆ. ಅವರುಗಳ ಮೌಲ್ಯ ಸುಮಾರು 80-100 ಕೋಟಿ ರೂ ಎಂದು ಹೇಳಲಾಗುತ್ತಿದೆ.

ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟ ಆಶಾ ಭೋಸ್ಲೆ ಅವರ ಅಂತ್ಯಸಂಸ್ಕಾರ ಏಪ್ರಿಲ್ 13, ಸೋಮವರ ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್​ನಲ್ಲಿ ನಡೆಯಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಕರ್ನಾಟಕದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ!

ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಯುವಕ-ಯುವತಿಯರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆಯು (CRPF) ಭರ್ಜರಿ ಸಿಹಿ ಸುದ್ದಿ ನೀಡಿದೆ. 2026ನೇ ಸಾಲಿನ ತಾಂತ್ರಿಕ ಮತ್ತು ಟ್ರೇಡ್ಸ್‌ಮನ್ ವಿಭಾಗದ ಒಟ್ಟು 9,175 ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.

ಹುದ್ದೆಗಳ ವಿವರ ಮತ್ತು ವೇತನ:

ಈ ಬೃಹತ್ ನೇಮಕಾತಿ ಪ್ರಕ್ರಿಯೆಯಲ್ಲಿ 9,096 ಪುರುಷ ಮತ್ತು 79 ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ-ಲೆವೆಲ್ 3ರ ಅಡಿಯಲ್ಲಿ 21,700 ರಿಂದ 69,100 ರೂ. ವರೆಗೆ ಮಾಸಿಕ ವೇತನ ಹಾಗೂ ಕೇಂದ್ರ ಸರ್ಕಾರದ ಇತರೆ ಭತ್ಯೆಗಳು ದೊರೆಯಲಿವೆ.

ಕರ್ನಾಟಕದಲ್ಲಿ 466 ಹುದ್ದೆಗಳು ಲಭ್ಯ:

ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಈ ಬಾರಿ ಉತ್ತಮ ಅವಕಾಶವಿದ್ದು, ಪುರುಷರ ವಿಭಾಗದಲ್ಲಿ ಮಾತ್ರ 466 ಹುದ್ದೆಗಳನ್ನು ಮೀಸಲಿಡಲಾಗಿದೆ. ಇದರಲ್ಲಿ ಡ್ರೈವರ್, ಕುಕ್, ವಾಟರ್ ಕ್ಯಾರಿಯರ್, ಸಫಾಯಿ ಕರ್ಮಚಾರಿ ಸೇರಿದಂತೆ ವಿವಿಧ ವೃತ್ತಿಪರ ಹುದ್ದೆಗಳು ಸೇರಿವೆ. ಅರ್ಜಿ ಸಲ್ಲಿಕೆ ಆರಂಭ ಏಪ್ರಿಲ್ 20 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 19 ಎಂದು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಯಾವ ಯಾವ ಹುದ್ದೆಗಳಿವೆ? (Trades):

ನೇಮಕಾತಿಯಲ್ಲಿ ಚಾಲಕ (Driver) ಹುದ್ದೆಗೆ ಅತಿ ಹೆಚ್ಚು ಅಂದರೆ 3,176 ಸ್ಥಾನಗಳನ್ನು ನೀಡಲಾಗಿದೆ. ಉಳಿದಂತೆ ಅಡುಗೆಯವರು (Cook-1426), ಬಗ್ಲರ್ (1263), ಸಫಾಯಿ ಕರ್ಮಚಾರಿ (547), ವಾಟರ್ ಕ್ಯಾರಿಯರ್ (502) ಹಾಗೂ ಬಾರ್ಬರ್, ಟೈಲರ್, ಕಾರ್ಪೆಂಟರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತರು CRPF ನ ಅಧಿಕೃತ ನೇಮಕಾತಿ ಜಾಲತಾಣವಾದ www.rect.crpf.gov.in ಗೆ ಭೇಟಿ ನೀಡಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ 011-26160255 ಅನ್ನು ಸಂಪರ್ಕಿಸಲು ಕೋರಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವಾರ ಗ್ರಹಗಳ ಬದಲಾವಣೆಯಿಂದ ಆಗುವ ರಾಜಕೀಯ ಲಾಭ, ನಷ್ಟಗಳು

​ಪ್ರಸ್ತುತ ಆಕಾಶಮಂಡಲದಲ್ಲಿ ಗುರುವು ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವುದು ಮತ್ತು ಶನಿಯು ಮೀನ ರಾಶಿಯಲ್ಲಿ ಇರುವುದು ರಾಜ್ಯದ ಆಡಳಿತಾರೂಢರಿಗೆ ಸವಾಲು ಮತ್ತು ಅವಕಾಶ ಎರಡನ್ನೂ ಒಟ್ಟಿಗೆ ತರುತ್ತಿದೆ. ಗುರುವಿನ ಪ್ರಭಾವದಿಂದಾಗಿ ಹೊಸ ಯೋಜನೆಗಳ ಘೋಷಣೆಯಾಗಬಹುದು, ಆದರೆ ಶನಿಯ ಪ್ರಭಾವದಿಂದಾಗಿ ಆ ಯೋಜನೆಗಳ ಅನುಷ್ಠಾನದಲ್ಲಿ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಲಿದೆ.

​ಗೆಲುವು ಪಡೆಯುವ ರಾಶಿಗಳು:

​ಮೇಷ :

ಸೂರ್ಯನು ನಿಮ್ಮ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿರುವುದರಿಂದ, ಈ ರಾಶಿಯ ನಾಯಕರಿಗೆ ಸಿಂಹ ಬಲ ಬರಲಿದೆ. ಅನಿರೀಕ್ಷಿತವಾಗಿ ದೊಡ್ಡ ಜವಾಬ್ದಾರಿಗಳು ಹುಡುಕಿಕೊಂಡು ಬರಬಹುದು. ಸರ್ಕಾರಿ ಮಟ್ಟದ ಮಾತುಕತೆಗಳಲ್ಲಿ ನಿಮ್ಮದೇ ಮೇಲುಗೈ ಆಗಲಿದೆ.

​ಕುಂಭ:

ನಿಮ್ಮ ರಾಶ್ಯಾಧಿಪತಿ ಶನಿಯು ಎರಡನೇ ಮನೆಯಲ್ಲಿರುವುದರಿಂದ ಆರ್ಥಿಕ ಮತ್ತು ಸಂಪನ್ಮೂಲ ಕ್ರೋಢೀಕರಣದಲ್ಲಿ ಯಶಸ್ಸು ಸಿಗಲಿದೆ. ಗುಪ್ತವಾಗಿ ನಡೆಸುವ ರಾಜಕೀಯ ತಂತ್ರಗಳು ಫಲಪ್ರದವಾಗಲಿವೆ.

​ಮಿಶ್ರ ಫಲದ ರಾಶಿಗಳು:

​ಕರ್ಕಾಟಕ:

ಚಂದ್ರನ ಚಲನೆಯಿಂದಾಗಿ ವಾರದ ಆರಂಭದಲ್ಲಿ ಅಸ್ಥಿರತೆ ಇರಲಿದ್ದರೂ, ವಾರಾಂತ್ಯಕ್ಕೆ ಪರಿಸ್ಥಿತಿ ಸುಧಾರಿಸಲಿದೆ. ಸಾರ್ವಜನಿಕ ಭಾಷಣ ಮಾಡುವಾಗ ಎಚ್ಚರವಿರಲಿ; ಮಾತು ತಪ್ಪಾಗಿ ಅರ್ಥೈಸಲ್ಪಡಬಹುದು.

​ಮಕರ:

ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ, ಆದರೆ ವಿರೋಧಿಗಳ ಕುತಂತ್ರದಿಂದಾಗಿ ಗೆಲುವು ಸ್ವಲ್ಪ ವಿಳಂಬವಾಗಬಹುದು. ತಾಳ್ಮೆಯೇ ನಿಮ್ಮ ಯಶಸ್ಸಿನ ಮಂತ್ರ.

​ಸೋಲುವ ರಾಶಿಗಳು:

​ಕನ್ಯಾ:

ಸಪ್ತಮ ಸ್ಥಾನದಲ್ಲಿ ರಾಹುವಿನ ಸಂಚಾರವಿರುವುದರಿಂದ ಮಿತ್ರ ಪಕ್ಷಗಳಿಂದ ಅಥವಾ ಆಪ್ತರಿಂದಲೇ ನಂಬಿಕೆ ದ್ರೋಹವಾಗುವ ಸಾಧ್ಯತೆಯಿದೆ. ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಎಚ್ಚರಿಕೆ ಅಗತ್ಯ.

​ಮಿಥುನ:

ಹತ್ತನೇ ಮನೆಯಲ್ಲಿ ರಾಹು-ಬುಧರ ಯುತಿಯಿಂದಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ತಪ್ಪು ಮಾಹಿತಿಯ ಆಧಾರದ ಮೇಲೆ ನೀವು ಇಡುವ ಹೆಜ್ಜೆ ರಾಜಕೀಯವಾಗಿ ದೊಡ್ಡ ಬೆಲೆ ತೆರುವಂತೆ ಮಾಡಬಹುದು.

ವಿಶೇಷ ಸೂಚನೆ ಎಂದರೆ ಮಂಗಳನು ಶನಿಯೊಂದಿಗೆ ಯುತಿಯಲ್ಲಿರುವುದರಿಂದ ರಾಜಕೀಯ ವಲಯದಲ್ಲಿ ತೀವ್ರ ಸ್ವರೂಪದ ವಾಕ್ಸಮರ ಅಥವಾ ಆಂತರಿಕ ಬಂಡಾಯ ಏಳುವ ಸಾಧ್ಯತೆಯಿದೆ. ಹಳೆಯ ನಾಯಕರ ಪ್ರಭಾವ ಕಡಿಮೆಯಾಗಿ, ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ಸಿಗುವಂತಹ ಬೆಳವಣಿಗೆಗಳು ತೆರೆಮರೆಯಲ್ಲಿ ನಡೆಯಲಿವೆ. ಈ ಬದಲಾವಣೆಗಳು ವಿಶೇಷವಾಗಿ ಏಪ್ರಿಲ್ ೧೪ರ ಸೌರಮಾನ ಯುಗಾದಿ ಅನಂತರ ವೇಗ ಪಡೆಯಲಿವೆ.

– ಲೋಹಿತ ಹೆಬ್ಬಾರ್

Source link

ಆಶಾ ಭೋಸ್ಲೆ ಬಗ್ಗೆ ಹಲವರಿಗೆ ತಿಳಿಯದ ವಿಷಯಗಳು ಇಲ್ಲಿವೆ…

ಭಾರತ ಚಿತ್ರರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ (Asha Bhosle) ಇಂದು (ಏಪ್ರಿಲ್ 12) ನಿಧನ ಹೊಂದಿದ್ದಾರೆ. ಆಶಾ ಭೋಸ್ಲೆ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಿಂದಿ, ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಆಶಾ ಭೋಸ್ಲೆ ಹಾಡಿದ್ದರು. ಸುಮಾರು 80ಕ್ಕೂ ಹೆಚ್ಚು ವರ್ಷ ಅವರು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಇದೀಗ ಆಶಾ ಭೋಸ್ಲೆ ನಿಧನ ಹೊಂದಿದ್ದು, ಅವರ ಬಗ್ಗೆ ಹೆಚ್ಚು ಮಂದಿಗೆ ತಿಳಿಯದ ಕೆಲ ಅಪರೂಪದ ಸಂಗತಿಗಳು ಇಲ್ಲಿವೆ…

  • ಆಶಾ ಭೋಸ್ಲೆ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಆಶಾ ಅವರು ರಷ್ಯಾ ಮತ್ತು ಮಲಯ ಭಾಷೆಯಲ್ಲಿಯೂ ಹಾಡು ಹಾಡಿರುವುದು ವಿಶೇಷ.
  • ಆಶಾ ಭೋಸ್ಲೆ ಅವರು ಬಹಳ ಕಡಿಮೆ ವಯಸ್ಸಿನಲ್ಲೇ ಹಾಡಲು ಆರಂಭಿಸಿದರು. ಅವರು ಕೇವಲ 3 ವರ್ಷದವರಿರುವಾಗಲೇ ಸಂಗೀತ ಅಭ್ಯಾಸ ಆರಂಭಿಸಿದ್ದರು. ಮೊದಲ ಹಾಡು ಹಾಡಿದಾಗ ಅವರಿಗೆ ಕೇವಲ 10 ವರ್ಷ.
  • ಆಶಾ ಭೋಸ್ಲೆ ಅವರಿಗೆ ಗೌರವಪೂರ್ವಕವಾಗಿ ಬ್ರಿಟೀಷ್​​ ಬ್ಯಾಂಡ್ ಒಂದು ಆಶಾ ಅವರಗಾಗಿಯೇ ಆಲ್ಬಂ ಒಂದನ್ನು ಹೊರತಂದಿದೆ. ‘ಬ್ರಿಮ್​​ಫುಲ್ ಆಫ್ ಆಶಾ’ ಹೆಸರಿನ ಈ ಆಲ್ಬಂ 1997 ರಲ್ಲಿ ಬಿಡುಗಡೆ ಆಗಿತ್ತು.
  • ಆಶಾ ಭೋಸ್ಲೆ 16ರ ವಯಸ್ಸಿನಲ್ಲೇ ಓಡಿ ಹೋಗಿ 31 ವರ್ಷದ ಗಣಪತ್ ರಾವ್ ಭೋಸ್ಲೆ ಎಂಬಾತನ ವಿವಾಹವಾದರು. ಆ ವಿವಾಹದಿಂದ ತೀವ್ರ ಕಷ್ಟಗಳನ್ನು ಅವರು ಅನುಭವಿಸಿದರು.
  • ಆಶಾ ಭೊಸ್ಲೆ ಅವರು ತಮ್ಮ 20ನೇ ವಯಸ್ಸಿನಲ್ಲಿ ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಗ ಅವರು ನಾಲ್ಕು ತಿಂಗಳ ಗರ್ಭಿಣಿ.
  • ಒಂದು ಸಮಯದಲ್ಲಿ ಅಕ್ಕ ಲತಾ ಮಂಗೇಶ್ಕರ್ ಅವರಿಗಿಂತಲೂ ಹೆಚ್ಚು ಹಾಡುಗಳನ್ನು ಆಶಾ ಭೊಸ್ಲೆ ಹಾಡಿದ್ದರು. ಆದರೆ ‘ನನ್ನ ಅಕ್ಕ ನನಗಿಂತ ಹೆಚ್ಚು ಪ್ರತಿಭಾವಂತೆ’ ಎಂದಿದ್ದರು ಆಶಾ.
  • ಆಶಾ ಭೊಸ್ಲೆ ಮತ್ತು ಲತಾ ಮಂಗೇಶ್ಕರ್ ಹಲವು ವರ್ಷ ಪರಸ್ಪರ ಮಾತನಾಡಿರಲಿಲ್ಲ. ಪ್ರೀತಿಸಿದವನೊಟ್ಟಿಗೆ ಓಡಿ ಹೋಗಿದ್ದ ಆಶಾ ಮೇಲೆ ವಿಪರೀತ ಸಿಟ್ಟಿತ್ತು ಲತಾ ಅವರಿಗೆ. ವಯಸ್ಸಾದಂತೆ ಅದು ಕರಗಿತು.
  • ಪಾಪ್ ಮತ್ತು ಹಿಪ್ ಹಾಪ್ ರೀತಿಯ ಹಾಡುಗಳ ಟ್ರೆಂಡ್ ಆರಂಭಕ್ಕೂ ಮುಂಚೆಯೇ ಅವುಗಳನ್ನು ಹಾಡಿದ್ದರು ಆಶಾ ಭೋಸ್ಲೆ. ಭಾರತದ ಮೊದಲ ಪಾಪ್, ಹಿಪ್-ಹಾಪ್ ಹಾಡುಗಾರ್ತಿ ಆಶಾ ಭೋಸ್ಲೆ.
  • 2011 ರಲ್ಲಿ ಆಶಾ ಭೋಸ್ಲೆ ಹೆಸರು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಸೇರಿಕೊಂಡಿತು. ಅತ್ಯಧಿಕ ಹಾಡುಗಳನ್ನು ರೆಕಾರ್ಡ್ ಮಾಡಿದ ದಾಖಲೆ ಅವರ ಹೆಸರಲ್ಲಿದೆ. ಆಗಲೇ ಅವರು 11 ಸಾವಿರಕ್ಕೂ ಹೆಚ್ಚು ಹಾಡುಗಳ ರೆಕಾರ್ಡ್ ಮಾಡಿದ್ದರು.
  • ಸಂಗೀತಕ್ಕೆ ನೀಡಲಾಗುವ ವಿಶ್ವದ ಅತ್ಯುನ್ನತ ಪ್ರಶಸ್ತಿ ಎಂದೆನಿಸಿಕೊಂಡಿರುವ ಗ್ರಾಮಿಗೆ ನಾಮಿನೇಟ್ ಆದ ಮೊದಲ ಭಾರತೀಯರು ಆಶಾ ಭೋಸ್ಲೆ. ಎರಡು ಬಾರಿ ಅವರು ನಾಮಿನೇಟ್ ಆಗಿದ್ದಾರೆ.
  • ಹಲವಾರು ವಿದೇಶಿ ಗಾಯಕರುಗಳೊಟ್ಟಿಗೆ ಆಶಾ ಭೋಸ್ಲೆ ಕೊಲ್ಯಾಬ್ ಆಗಿ ಕೆಲಸ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಅವರೊಟ್ಟಿಗೆ ಸಹ ಒಂದು ಹಾಡು ಮಾಡಿದ್ದಾರೆ ಆಶಾ ಭೋಸ್ಲೆ.
  • ಆಶಾ ಭೋಸ್ಲೆ ಅದ್ಭುತವಾಗಿ ಅಡುಗೆ ಮಾಡುತ್ತಿದ್ದರು. ಕಪೂರ್ ಕುಟುಂಬಕ್ಕೆ ಆಶಾ ಭೋಸ್ಲೆ ಅವರ ಕೈಯಡುಗೆ ಬಹಳ ರುಚಿಸುತ್ತಿತ್ತು. ಇದೇ ಕಾರಣಕ್ಕೆ ಕಪೂರ್ ಕುಟುಂಬಕ್ಕೆ ಆಶಾ ಬಲು ಹತ್ತಿರವಾಗಿದ್ದರು.
  • ಆಶಾ ಭೋಸ್ಲೆ ಉದ್ಯಮಿ ಸಹ ಹೌದು. ‘ಆಶಾಸ್ ಕಿಚನ್’ ಹೆಸರಿನ ರೆಸ್ಟೊರೆಂಟ್ ಸಹ ಸ್ಥಾಪಿಸಿದರು. ದುಬೈ, ಕುವೈತ್, ಲಂಡನ್ ಹಲವೆಡೆ ಅವರ ರೆಸ್ಟೊರೆಂಟ್​​ಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link