Headlines

ಈ ವಾರ ಒಟಿಟಿಗೆ ಬಂದಿವೆ ಕೆಲ ನೋಡಲೇಬೇಕಾದ ಸಿನಿಮಾಗಳು: ಪಟ್ಟಿ ಇಲ್ಲಿದೆ

ಯೂಟ್ಯೂಬ್​​​ನಲ್ಲಿ ‘ಅಮೃತಾಂಜನ್’ ಹೆಸರಿನಲ್ಲಿ ತಮಾಷೆಯ ವಿಡಿಯೋಗಳನ್ನು ಮಾಡುತ್ತಿದ್ದ ಯುವಕರ ತಂಡ, ‘ಅಮೃತ-ಅಂಜನ್’ ಹೆಸರಿನ ಹಾಸ್ಯಮಯ ಸಿನಿಮಾ ಮಾಡಿದ್ದು, ಸಿನಿಮಾಕ್ಕೆ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗ ದೊಡ್ಡ ಮಟ್ಟದ ಸದ್ದು, ಸುದ್ದಿ ಮಾಡಿದ್ದ ತಮಿಳು ಸಿನಿಮಾ ‘ತಾಯ್ ಕಳವಿ’, ಇತ್ತೀಚೆಗೆ ಬಿಡುಗಡೆ ಆದ ಒಳ್ಳೆಯ, ಯೋಚನೆಗೆ ಪ್ರೇರೇಪಿಸುವ ಸಿನಿಮಾ ಇದೆಂಬ ವಿಮರ್ಶೆ ಇದಕ್ಕೆ ಸಿಕ್ಕಿತ್ತು. ಇದೀಗ ಈ ಸಿನಿಮಾ ಜಿಯೋ ಹಾಟ್​​ಸ್ಟಾರ್​​ನಲ್ಲಿ ಬಿಡುಗಡೆ ಆಗಿದೆ….

Read More

Weekly Love Horoscope: ಪ್ರೇಮ – ಪ್ರೀತಿ ಭವಿಷ್ಯ; ಈ ವಾರ ಈ ರಾಶಿಯ ಅವಿವಾಹಿತರಿಗೆ ಹೊಸ ಸಂಬಂಧದ ಪ್ರಸ್ತಾಪ ಬರಲಿದೆ

ಏಪ್ರಿಲ್ 12ರಿಂದ ಏಪ್ರಿಲ್ 18ರವರೆಗಿನ ಎರಡನೇ ವಾರವಾಗಿದ್ದು ಈ ವಾರದಲ್ಲಿ ಪರಿಚಿತವು ಪ್ರೇಮವಾಗಬಹುದು, ವರ್ತನೆ ನೇರವಾಗಿರಲಿ, ಅನುಮಾನಕ್ಕೆ ಆಸ್ಪದ ಬೇಡ. ಪ್ರೀತಿಯ ಕೊರತೆ ಕೆಲವರಿಗೆ ಆಗಲಿದ್ದು, ಮನಸ್ಸಿನೊಳಗೇ ದುಃಖಿಸಬೇಕಾಗುವುದು. ​ಮೇಷ: ​ಜೀವನ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಪ್ರೀತಿ ಗಟ್ಟಿಯಾಗಿರುತ್ತದೆ. ಅವಿವಾಹಿತರಿಗೆ ಹೊಸ ಸಂಬಂಧದ ಪ್ರಸ್ತಾಪ ಬರಬಹುದು. ಮಾತಿನಲ್ಲಿ ಸಂಯಮವಿರಲಿ, ಆಪ್ತತೆಯು ಹೆಚ್ಚಾಗಲಿದೆ. ​ವೃಷಭ: ​ಪ್ರೇಮ ಜೀವನದಲ್ಲಿ ಮಧುರವಾದ ಕ್ಷಣಗಳನ್ನು ಕಳೆಯುವಿರಿ. ಹಳೆಯ ಸ್ನೇಹಿತರ ಭೇಟಿ ಮನಸ್ಸಿಗೆ ಸಂತೋಷ ನೀಡುತ್ತದೆ. ದಾಂಪತ್ಯದಲ್ಲಿ ಪರಸ್ಪರ ಗೌರವ ಮತ್ತು ನಂಬಿಕೆ ವೃದ್ಧಿಯಾಗುವ…

Read More

‘ಜನ ನಾಯಗನ್’ ಲೀಕ್ ವೀಷಯ; ಸುತ್ತಿ ಬಳಸಿ ವಿಜಯ್ ಮೇಲೆ ಬಂತು ಆರೋಪ

‘ಜನ ನಾಯಗನ್’ ಸಿನಿಮಾ (Jana Nayagan Movie) ರಿಲೀಸ್​​ಗೂ ಮೊದಲೇ ಲೀಕ್ ಆಗಿದೆ. ಇದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಜನರು ಈ ಬಗ್ಗೆ ಸಾಕಷ್ಟು ಪ್ರಶ್ನೆ ಮಾಡುತ್ತಿದ್ದಾರೆ. ಅನೇಕರು ಲೀಕ್ ಮಾಡಿದವರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಹೀಗಿರುವಾಗಲೇ ‘ಜನ ನಾಯಗನ್’ ಸಿನಿಮಾ ಕ್ಲಿಪ್ ಸೋರಿಕೆಗೆ ವಿಜಯ್ ಕೈವಾಡವೇ ಇದೆ ಎಂದು ಕೆಲವರು ಆರೋಪಿಸಿದ್ದಾರೆ. ಇದಕ್ಕೆ ವಿಜಯ್ ಅಭಿಮಾನಿಗಳು ಖಡಕ್ ಆಗಿ ಉತ್ತರಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಹೀರೋಗಳಿಗೆ ತಾವು ಮಾಡಿದ ಸಿನಿಮಾಗಳ ಮೇಲೆ ಪ್ರೀತಿ ಇರುತ್ತದೆ. ಅದು…

Read More

IPL 2026: ಓರ್ವ ಆಟಗಾರ ಹೊರಕ್ಕೆ… ಹೀಗಿರಲಿದೆ RCB ಪ್ಲೇಯಿಂಗ್ 11

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಾಳೆ (ಏ.12) ನಡೆಯಲಿರುವ ಈ ಪಂದ್ಯಕ್ಕಾಗಿ ಆರ್​ಸಿಬಿ ಒಂದು ಬದಲಾವಣೆ ಮಾಡುವುದು ಖಚಿತ. ಏಕೆಂದರೆ ಕಳೆದ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಆರ್​ಸಿಬಿ ವೇಗಿ ಅಭಿನಂದನ್ ಸಿಂಗ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆಡಿದ ಮೂರು ಮ್ಯಾಚ್​ಗಳಲ್ಲಿ ಒಟ್ಟು 58 ಎಸೆತಗಳನ್ನು ಎಸೆದಿರುವ ಅಭಿನಂದನ್ ನೀಡಿರುವುದು ಬರೋಬ್ಬರಿ 122 ರನ್​ಗಳು. ಅದರಲ್ಲೂ…

Read More

ಬೇಲೂರು: ದೇವಾಲಯದ ಆಸ್ತಿ ಕಂಡೋರ ಪಾಲು! ಕೋಟಿ ಬೆಲೆಯ ಭೂಮಿ ಹೊಡೆಯಲು ಅಧಿಕಾರಿಗಳ ಜತೆಗೂಡಿ ಸ್ಕೆಚ್?

ಹಾಸನ, ಏಪ್ರಿಲ್ 11: ಹಾಸನ (Hassan) ಜಿಲ್ಲೆಯ ವಿಶ್ವವಿಖ್ಯಾತ ಬೇಲೂರಿನಲ್ಲಿ (Belur) ಕಂದಾಯ ಮತ್ತು ಪುರಸಭೆ ಅಧಿಕಾರಿಗಳ ಕರಾಮತ್ತಿನಿಂದಾಗಿ ಐತಿಹಾಸಿಕ ದೇವಾಲಯಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ ಖಾಸಗಿ ವ್ಯಕ್ತಿಯ ಪಾಲಾಗಿದೆ. ವಿದ್ಯಾಗಣಪತಿ ಟ್ರಸ್ಟ್ ಹೆಸರಿನಲ್ಲಿದ್ದ ಜಮೀನನ್ನು ನಕಲಿ ದಾಖಲೆಗಳ ಮೂಲಕ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಹಗರಣ ನಡೆದಿದ್ದು ಹೇಗೆ? ಪುರಸಭೆಯ ಸರ್ವೆ ನಂಬರ್ 27ರಲ್ಲಿ ಸುಮಾರು 50 ವರ್ಷಗಳಿಂದ ವಿದ್ಯಾಗಣಪತಿ ಟ್ರಸ್ಟ್ ಹೆಸರಿನಲ್ಲಿ 20 ಗುಂಟೆ ಭೂಮಿ…

Read More

ಏಪ್ರಿಲ್ 15ರಂದು ಮಂಡ್ಯಕ್ಕೆ ಆಗಮಿಸಲಿರುವ ಮೋದಿ! ಆದಿಚುಂಚನಗಿರಿ ಮಠದಲ್ಲಿ ಗದ್ದಿಗೆ ಉದ್ಘಾಟನೆ

ಮಂಡ್ಯ, ಏಪ್ರಿಲ್ 11: ಪ್ರಧಾನಿ ನರೇಂದ್ರ ಮೋದಿ (Narendra Modi) ಏಪ್ರಿಲ್ 15ರಂದು ಮಂಡ್ಯ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ನಡೆಯುವ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ನೂತನ ಗದ್ದಿಗೆ ಉದ್ಘಾಟಿಸಲಿರುವ ಅವರು, ನಂತರ ಕೇರಳಕ್ಕೆ ಪ್ರಯಾಣಿಸಲಿದ್ದಾರೆ. ಮೋದಿಯ ಅಂದಿನ ದಿನಚರಿಯೇನು? ಬೆಳಿಗ್ಗೆ ದೆಹಲಿಯಿಂದ ಹೊರಟು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಆದಿಚುಂಚನಗಿರಿ ಹೆಲಿಪ್ಯಾಡ್‌ಗೆ ಸುಮಾರು 10:50ಕ್ಕೆ ತಲುಪಲಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ…

Read More

RCB ಪರ ಈವರೆಗೆ ಎಷ್ಟು ಆಟಗಾರರು ಆಡಿದ್ದಾರೆ ಗೊತ್ತಾ?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ವೆಂಕಟೇಶ್ ಅಯ್ಯರ್ ಪಾದಾರ್ಪಣೆ ಮಾಡಿದ್ದಾರೆ. ಗುವಾಹಟಿಯಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯುವ ಮೂಲಕ ವೆಂಕಿ ಐಪಿಎಲ್​ನಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಈ ಮೂಲಕ ಆರ್​ಸಿಬಿ ಪರ ಕಣಕ್ಕಿಳಿದ 179ನೇ ಆಟಗಾರ ಎನಿಸಿಕೊಂಡಿದ್ದಾರೆ. ಅಂದರೆ 19 ಸೀಸನ್‌ಗಳಲ್ಲಿ ಆರ್​ಸಿಬಿ ಪರ ಒಟ್ಟು 179 ಆಟಗಾರರು ಕೆಂಪು ಮತ್ತು ಕಪ್ಪು ಜರ್ಸಿಯನ್ನು ಧರಿಸಿ ಮೈದಾನಕ್ಕಿಳಿದಿದ್ದಾರೆ.  ಈ…

Read More

20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಟಿಬಿ ಜಯಚಂದ್ರ

ಬೆಂಗಳೂರು, ಏಪ್ರಿಲ್ 11: ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಪುನರಚನೆಯ ಕುರಿತು ಚರ್ಚೆಗಳು ತೀವ್ರಗೊಂಡಿವೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ನ ಹಿರಿಯ ಶಾಸಕರು ಈ ವಿಷಯವಾಗಿ ದೆಹಲಿಯ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಯಾವುದೇ ನಿರ್ದಿಷ್ಟ ನಾಯಕತ್ವ ಹೆಸರಿನಲ್ಲಲ್ಲದೆ, ಮೂರು, ನಾಲ್ಕು, ಐದು ಬಾರಿ ಶಾಸಕರಾಗಿರುವ ಅನುಭವಿಗಳು ಒಟ್ಟಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಶಾಸಕರ ದೆಹಲಿ ಪ್ರವಾಸದ ಬಗ್ಗೆ ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಸಚಿವ ಸಂಪುಟದ ಅವಧಿ ಮೂರು ವರ್ಷಗಳನ್ನು ಪೂರೈಸಿದ್ದು,…

Read More

ಗಾಯಕಿ ಮಂಗ್ಲಿಯಿಂದ 10 ಕೋಟಿ ವಂಚನೆ? ಹಣ ಕೇಳಿದ್ದಕ್ಕೆ ಕೊಲೆ ಬೆದರಿಕೆ ಆರೋಪ

ಗಾಯಕಿ ಮಂಗ್ಲಿ (Mangli) ಅವರು ತೆಲುಗಿನವರಾದರೂ ಕನ್ನಡದಲ್ಲೂ ಜನಪ್ರಿಯತೆ ಪಡೆದಿದ್ದಾರೆ. ಅವರು ಕನ್ನಡದಲ್ಲೂ ಹಾಡು ಹೇಳಿದ್ದಾರೆ. ಅವರು ತಮ್ಮ ಕಂಚಿನ ಕಂಠದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈಗ ಅವರ ಮೇಲೆ 10 ಕೋಟಿ ರೂಪಾಯಿ ಮೋಸದ ಕೇಸ್ ದಾಖಲಾಗಿದೆ. ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಮಂಗ್ಲಿ ಹಾಗೂ ಅವರ ಸಹೋದರನ ವಿರುದ್ಧ ಕೇಸ್ ದಾಖಲಾಗಿದೆ. ಮಂಗ್ಲಿ ತಮಗೆ ಮೋಸ ಮಾಡಿದ್ದಾರೆ ಮತ್ತು ಅವರಿಂದ ಅಪಾಯವಿದೆ ಎಂದು ವಕೀಲರೊಬ್ಬರು ಆರೋಪಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಪೊಲೀಸರು ಮಂಗ್ಲಿ,…

Read More

PSL 2026: ಪಿಎಸ್​ಎಲ್​ನಲ್ಲಿ ಹಿಂದೆಂದೂ ಕಂಡರಿಯದ ಗೆಲುವು

ಪಾಕಿಸ್ತಾನ ಸೂಪರ್ ಲೀಗ್ (PSL) 2026ರ ಆವೃತ್ತಿಯಲ್ಲಿ ಪೇಶಾವರ್ ಝಲ್ಮಿ ತಂಡವು ಕರಾಚಿ ಕಿಂಗ್ಸ್ ವಿರುದ್ಧ 159 ರನ್‌ಗಳ ಬೃಹತ್ ಅಂತರದಿಂದ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದೆ. ಇದು ರನ್‌ಗಳ ಅಂತರದ ಆಧಾರದ ಮೇಲೆ PSL ಇತಿಹಾಸದಲ್ಲೇ ದಾಖಲಾದ ಅತಿದೊಡ್ಡ ವಿಜಯವಾಗಿದೆ. ಈ ಪಂದ್ಯದಲ್ಲಿ ಪೇಶಾವರ್ ಝಲ್ಮಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪೇಶಾವರ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 246 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಕರಾಚಿ…

Read More